ವಯನಾಡ್, ಜುಲೈ 8: ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ. ಎನ್ಡಿಆರ್ಎಫ್ ತಂಡವು ಕಳೆದ 25 ಗಂಟೆಗಳಿಂದ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ದುರಂತದ ಸಂದರ್ಭ ಸ್ಥಳದಲ್ಲಿ ಕಾಣಿಸಿದ, ವೈರಲ್ ಆದ ವಿಡಿಯೋಗಳಲ್ಲಿದ್ದ ಟ್ಯಾಂಕರ್ ಕರ್ನಾಟಕ ನೋಂದಣಿಯದ್ದು ಎಂಬುದು ಗೊತ್ತಾಗಿದೆ. ರಾಮನಗರ ಜಿಲ್ಲೆಯ ಆರ್ಟಿಒ (KA 42, B 9671) ನೋಂದಣಿಯ ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್‌ಗೆ ಸೇರಿದ ಈ ನೀರಿನ ಟ್ಯಾಂಕರ್, ಸುರಂಗ ಕಾಮಗಾರಿ ಸ್ಥಳಕ್ಕೆ ನೀರು ಪೂರೈಸಲು ಹೋಗುತ್ತಿತ್ತು. ಚಾಲಕ ಪರಿಸ್ಥಿತಿಯ ಬಗ್ಗೆ ಗೊಂದಲದಲ್ಲಿದ್ದಾಗ, ರಭಸವಾಗಿ ಬಂದ ಮಳೆ ನೀರು ಮತ್ತು ಭೂಕುಸಿತದ ಕೆಸರು ಮಿಶ್ರಿತ ಪ್ರವಾಹಕ್ಕೆ ಟ್ಯಾಂಕರ್ ಕೊಚ್ಚಿಕೊಂಡು ಬಂದು, ಅದೃಷ್ಟವಶಾತ್ ಅಪಾಯದಿಂದ ಬಚಾವಾಗಿದೆ. ಟ್ಯಾಂಕರ್‌ನಲ್ಲಿದ್ದ ಚಾಲಕ ಸುರಕ್ಷಿತವಾಗಿದ್ದು, ಘಟನೆಗೆ ಮುನ್ನ ಟ್ಯಾಂಕರ್ ಮುಂಭಾಗದಲ್ಲಿ ಸಿಲುಕಿದ್ದ ದಂಪತಿಗಳು ಸಹ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆಯಲ್ಲಿ ನಾಪತ್ತೆಯಾದವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
