ವಾರ ಭವಿಷ್ಯ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಲಿದ್ದಾರೆ ಗ್ರಹಗಳ ರಾಜರು; ನಿಮ್ಮ ರಾಶಿ ಭವಿಷ್ಯ ಇಲ್ಲಿದೆ – Kannada News | Rashiphala 2026: May 17 24 Weekly Astrological Forecast for All Signs

2026ರ ಮೇ 17ರಿಂದ 24ರವರೆಗೆ ಮೂರನೇ ವಾರದಲ್ಲಿ ಎಲ್ಲ ಫಲಗಳನ್ನು ಬೇಗ ನಿರೀಕ್ಷಿಸಿ, ದುಃಖ ತಂದುಕೊಳ್ಳಬೇಕಾಗುವುದು. ನಿಮ್ಮ ಶ್ರಮವನ್ನು ಲೋಪವಿಲ್ಲದಂತೆ ಮಾಡಿ. ಶುಭವಾಗಲಿ.

​ಮೇಷ ರಾಶಿ :

​ರಾಶಿಯಲ್ಲಿ ಕುಜ ಹಾಗೂ ಪಂಚಮದಲ್ಲಿ ಚಂದ್ರ-ಕೇತು ಇದ್ದಾರೆ. ದ್ವಿತೀಯದ ರವಿ-ಬುಧರಿಂದ ಆರ್ಥಿಕ ಲಾಭವಿದ್ದರೂ, ಮಾತಿನಲ್ಲಿ ತಾಳ್ಮೆ ಇರಲಿ. ಮಕ್ಕಳ ವಿಷಯದಲ್ಲಿ ಸಣ್ಣ ಆತಂಕ ಎದುರಾಗಬಹುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ.

ವೃಷಭ ರಾಶಿ :

​ನಿಮ್ಮ ರಾಶಿಯಲ್ಲಿ ರವಿ, ಬುಧ ಮತ್ತು ಮಾಂದಿ ಇರುವುದರಿಂದ ದೈಹಿಕ ಆಲಸ್ಯ ಅಥವಾ ತಲೆನೋವು ಕಾಡಬಹುದು. ಚತುರ್ಥ ಚಂದ್ರನಿಂದಾಗಿ ತಾಯಿಯ ಆರೋಗ್ಯದ ಕಡೆ ಗಮನವಿರಲಿ. ದ್ವಿತೀಯದ ಗುರು-ಶುಕ್ರರಿಂದ ಧನ ಲಾಭವಾಗಲಿದೆ.

ಮಿಥುನ ರಾಶಿ :

​ನಿಮ್ಮ ರಾಶಿಯಲ್ಲಿ ಗುರು ಮತ್ತು ಶುಕ್ರ ಇರುವುದರಿಂದ ಅತ್ಯಂತ ಶುಭ ವಾರವಿದು. ಕೀರ್ತಿ, ಗೌರವ ಹೆಚ್ಚಾಗಲಿದೆ. ತೃತೀಯದಲ್ಲಿ ಚಂದ್ರನಿರುವುದರಿಂದ ಧೈರ್ಯ ಮತ್ತು ಸೋದರರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ಕಂಡುಬರಲಿದೆ.

ಕರ್ಕಾಟಕ ರಾಶಿ :

​ರಾಶ್ಯಾಧಿಪತಿ ಚಂದ್ರನು ದ್ವಿತೀಯದಲ್ಲಿ ಕೇತುವಿನೊಂದಿಗಿದ್ದಾನೆ. ಧನ ಹರಿವು ಚೆನ್ನಾಗಿದ್ದರೂ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ವ್ಯಯಸ್ಥಾನದ ಗುರು-ಶುಕ್ರರಿಂದ ಧಾರ್ಮಿಕ ಕಾರ್ಯಗಳಿಗಾಗಿ ಹಣ ವಿನಿಯೋಗವಾಗಲಿದೆ. ಆರೋಗ್ಯ ಸಾಧಾರಣವಾಗಿರುತ್ತದೆ.

ಸಿಂಹ ರಾಶಿ :

​ನಿಮ್ಮ ರಾಶಿಯಲ್ಲೇ ಚಂದ್ರ ಮತ್ತು ಕೇತು ಇರುವುದರಿಂದ ಮಾನಸಿಕವಾಗಿ ಸಣ್ಣಪುಟ್ಟ ಗೊಂದಲಗಳಿರಬಹುದು. ಆದರೆ ಲಾಭಸ್ಥಾನದ ಗುರು-ಶುಕ್ರ ಹಾಗೂ ಭಾಗ್ಯದ ಕುಜನ ಬಲದಿಂದ ಎಲ್ಲ ಸವಾಲುಗಳನ್ನು ಜಯಿಸಿ ಆರ್ಥಿಕವಾಗಿ ಪ್ರಗತಿ ಹೊಂದುವಿರಿ.

​ಕನ್ಯಾ ರಾಶಿ :

​ನಿಮ್ಮ ರಾಶಿಗೆ ವ್ಯಯಸ್ಥಾನದಲ್ಲಿ ಚಂದ್ರನಿದ್ದಾನೆ. ಅನಗತ್ಯ ಪ್ರಯಾಣ ಮತ್ತು ಖರ್ಚುಗಳು ಹೆಚ್ಚಾಗಬಹುದು. ದಶಮದ ಗುರು-ಶುಕ್ರರಿಂದ ಉದ್ಯೋಗದಲ್ಲಿ ಉತ್ತಮ ಬದಲಾವಣೆ ಹಾಗೂ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಜಾಗ್ರತೆ ಇರಲಿ.

ತುಲಾ ರಾಶಿ :

​ನಿಮ್ಮ ರಾಶಿಗೆ ಲಾಭಸ್ಥಾನದಲ್ಲಿ ಚಂದ್ರ-ಕೇತು ಹಾಗೂ ಭಾಗ್ಯದಲ್ಲಿ ಗುರು-ಶುಕ್ರರಿದ್ದಾರೆ. ಅದೃಷ್ಟ ಒಲಿದು ಬರುವ ವಾರವಿದು. ದೀರ್ಘಕಾಲದ ಆಸೆಗಳು ಈಡೇರಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರುತ್ತದೆ.

ವೃಶ್ಚಿಕ ರಾಶಿ :

​ನಿಮ್ಮ ರಾಶ್ಯಾಧಿಪತಿ ಕುಜನು ಷಷ್ಠದಲ್ಲಿದ್ದಾನೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕರ್ಮಸ್ಥಾನದಲ್ಲಿ ಚಂದ್ರನಿರುವುದರಿಂದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಅಷ್ಟಮದ ರವಿ-ಬುಧರಿಂದ ಆರೋಗ್ಯದ ಕಡೆ ಗಮನವಿರಲಿ.

ಧನು ರಾಶಿ :

​ನಿಮ್ಮ ರಾಶಿಗೆ ಭಾಗ್ಯಸ್ಥಾನದಲ್ಲಿ ಚಂದ್ರನಿದ್ದಾನೆ. ಹಿರಿಯರ ಮತ್ತು ಗುರುಗಳ ಆಶೀರ್ವಾದದಿಂದ ನಿಂತುಹೋದ ಕೆಲಸಗಳು ಪುನಃ ಆರಂಭವಾಗಲಿವೆ. ಸಪ್ತಮದ ಗುರು-ಶುಕ್ರರ ಪ್ರಭಾವದಿಂದ ಸಂಗಾತಿಯೊಂದಿಗೆ ಸುಂದರ ಸಮಯ ಕಳೆಯುವಿರಿ.


ಮಕರ ರಾಶಿ :

​ನಿಮ್ಮ ರಾಶಿಗೆ ಅಷ್ಟಮದಲ್ಲಿ ಚಂದ್ರ-ಕೇತು ಇರುವುದರಿಂದ ವಾಹನ ಚಾಲನೆಯಲ್ಲಿ ತೀವ್ರ ಎಚ್ಚರಿಕೆ ಅಗತ್ಯ. ಕಚೇರಿಯಲ್ಲಿ ವಾದ-ವಿವಾದಗಳಿಂದ ದೂರವಿರಿ. ಷಷ್ಠದ ಗುರು-ಶುಕ್ರರಿಂದಾಗಿ ಸಾಲದ ಬಾಧೆಗಳು ಸದ್ಯಕ್ಕೆ ನಿವಾರಣೆಯಾಗಲಿವೆ.

ಕುಂಭ ರಾಶಿ :

​ನಿಮ್ಮ ರಾಶಿಯಲ್ಲಿ ರಾಹು ಇದ್ದು, ಸಪ್ತಮದಲ್ಲಿ ಚಂದ್ರನಿದ್ದಾನೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿದೆ. ಪಂಚಮದ ಗುರು-ಶುಕ್ರರಿಂದಾಗಿ ಬುದ್ಧಿವಂತಿಕೆಯ ನಿರ್ಧಾರಗಳು ಕೈಗೂಡಲಿವೆ. ಮಕ್ಕಳ ಕಡೆಯಿಂದ ಶುಭ ವಾರ್ತೆ ಕೇಳುವಿರಿ.

ಮೀನ ರಾಶಿ :

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ: ಈ ರಾಶಿಯವರಿಗೆ ಒದಗಿಬರಲಿದೆ ಕಂಕಣ ಭಾಗ್ಯ, ಯಾರಿಗೆ ಕಾಯ್ದಿದೆ ಗುಪ್ತ ಸಂಬಂಧದ ಗಂಡಾಂತರ?

ನಿಮ್ಮ ರಾಶಿಯಲ್ಲಿ ಶನಿ ಇದ್ದು, ಷಷ್ಠದಲ್ಲಿ ಚಂದ್ರನಿದ್ದಾನೆ. ಏಳನೇ ಶನಿಯ ಪ್ರಭಾವದಿಂದ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾದರೂ, ಷಷ್ಠ ಚಂದ್ರನ ಬಲದಿಂದ ಶತ್ರು ಬಾಧೆ ನಿವಾರಣೆಯಾಗಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *