ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಜೂನ್ 22ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಅವರ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾದಿಂದ ಏನಾದರೂ ಒಂದು ಅಪ್‌ಡೇಟ್ ಬರಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಚಿತ್ರತಂಡದಿಂದ ಯಾವುದೇ ಅಪ್‌ಡೇಟ್ ಬಂದಿಲ್ಲ. ವಿಜಯ್ ಅವರಿಗೆ ಕೆವಿಎನ್ ಕಡೆಯಿಂದ ಕೇವಲ ಒಂದು ವಿಶ್ ಸಿಕ್ಕಿದೆ ಅಷ್ಟೇ. ಹೀಗಾಗಿ ಈ ಸಿನಿಮಾದ ಮೇಲಿನ ಆಸೆಯನ್ನು ಚಿತ್ರತಂಡದವರು ಸಂಪೂರ್ಣವಾಗಿ ಬಿಟ್ಟರೇ ಎಂಬ ಅನುಮಾನ ಈಗ ಮೂಡಿದೆ.
‘ಜನ ನಾಯಗನ್’ ಸಿನಿಮಾ ಜನವರಿ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ತಂಡದವರು ಸೆನ್ಸಾರ್ಗೆ ಅಪ್ಲೈ ಮಾಡಿದ್ದು ಕಳೆದ ವರ್ಷ ಡಿಸೆಂಬರ್ನಲ್ಲಿ. ಆದರೆ ಸೆನ್ಸಾರ್ ಪ್ರಮಾಣ ಪತ್ರ ಸಿಗದ ಕಾರಣಗಳಿಂದ ಸಿನಿಮಾ ಮುಂದೂಡಲ್ಪಟ್ಟಿತು. ವಿಜಯ್ ಮುಖ್ಯಮಂತ್ರಿಯಾದ ಮೇಲಾದರೂ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರದ ಬಿಡುಗಡೆ ಆಗಬಹುದು ಎಂದುಕೊಂಡಿದ್ದರು. ಅದೂ ಆಗಿಲ್ಲ. ಕೊನೆಪಕ್ಷ ವಿಜಯ್ ಜನ್ಮದಿನಕ್ಕೆ ಚಿತ್ರದ ರಿಲೀಸ್ ದಿನಾಂಕ ಪ್ರಕಟಿಸಬಹುದು ಎಂದು ಅಭಿಮಾನಿಗಳು ನಂಬಿದ್ದರು. ಆದರೆ ಪ್ರೊಡಕ್ಷನ್ ಹೌಸ್‌ನಿಂದ ಈ ಬಗ್ಗೆ ಪೋಸ್ಟ್ ಬಂದಿಲ್ಲ.
ಸಿನಿಮಾದಿಂದ ದೂರ ಸರಿದ ಸಿಎಂ ವಿಜಯ್:
ಚುನಾವಣೆ ಮುಗಿದ ಮೇಲೂ ವಿಜಯ್ ಅವರು ‘ಜನ ನಾಯಗನ್’ ಚಿತ್ರದ ನಿರ್ಮಾಪಕರ ಜೊತೆ ಉತ್ತಮ ಒಡನಾಟದಲ್ಲೇ ಇದ್ದಾರೆ. ಆದರೂ ಸಿನಿಮಾ ಬಗ್ಗೆ aವರು ಮಾತನಾಡುತ್ತಿಲ್ಲ. ಜನರು ತಮ್ಮನ್ನು ಒಬ್ಬ ಗಂಭೀರ ಮತ್ತು ಪೂರ್ಣಾವಧಿ ರಾಜಕಾರಣಿಯಾಗಿ ಮಾತ್ರ ನೋಡಬೇಕು ಎಂದು ಅವರು ಬಯಸುತ್ತಿದ್ದಾರೆ ಎನ್ನಲಾಗಿದೆ. ಇನ್ನು, ಸೆನ್ಸಾರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿಲ್ಲ. ಇದು ಕೂಡ ಸಿನಿಮಾ ವಿಳಂಬಕ್ಕೆ ಕಾರಣ.
ಇದನ್ನೂ ಓದಿ: ವಿಜಯ್ ನಗುವನ್ನು ಕಿತ್ತುಕೊಂಡಿತು ಆ ಸಾವು; ಸಂಪೂರ್ಣವಾಗಿ ಬದಲಾದ ದಳಪತಿ
ಬಿಡುಗಡೆ ಮತ್ತಷ್ಟು ವಿಳಂಬ
ವಿಜಯ್ ಅವರು ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಸಿನಿಮಾ ಕಾರ್ಯಕ್ರಮಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ತಮ್ಮ ಉಪಸ್ಥಿತಿಯಿಂದಾಗಿ ರಾಜಕೀಯಕ್ಕೆ ಯಾವುದೇ ಧಕ್ಕೆ ಬರಬಾರದು ಎಂಬುದು ಅವರ ಉದ್ದೇಶವಾಗಿದೆ. ‘ಜನ ನಾಯಗನ್’ ಸಿನಿಮಾ ಭವಿಷ್ಯದಲ್ಲಿ ಚಿತ್ರಮಂದಿರಗಳಿಗೆ ಬರುವುದು ಖಚಿತವಾದರೂ, ಅದು ತೆರೆಗೆ ಬರಲು ಇನ್ನು ಸಾಕಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಚಿತ್ರತಂಡದವರು ಸಿನಿಮಾ ಮೇಲಿನ ಆಸೆಯನ್ನು ಸಂಪೂರ್ಣವಾಗಿ ಕೈ ಬಿಟ್ಟಂತೆಯೂ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
