ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ: ಕ್ಯಾಮರಾಗಳಿಗೆ ಬೆರಳು ತೋರಿಸಿ ಧಿಮಾಕು – Kannada News | Suspected Terror Accused Suhail Acts Defiantly During Medical Examination, Gestures at Cameras

ದಾವಣಗೆರೆ, ಜುಲೈ 01: ಜಿಲ್ಲೆಯ ಹರಿಹರದಲ್ಲಿ ಬಂಧಿಸಲಾದ ಶಂಕಿತ ಉಗ್ರ ಸುಹೇಲ್, ವೈದ್ಯಕೀಯ ಪರೀಕ್ಷೆಗೆ ಕರೆತಂದಾಗ ಮಾಧ್ಯಮಗಳ ಕ್ಯಾಮರಾಗಳ ಮುಂದೆ ಅಹಂಕಾರದಿಂದ ವರ್ತಿಸಿರುವುದು ಬೆಳಕಿಗೆ ಬಂದಿದೆ. ಜೂನ್ 23ರಂದು ಹರಿಹರ ತಾಲೂಕಿನ ಬನ್ನಿಕೋಡ ಗ್ರಾಮದಲ್ಲಿ ಎನ್ಐಎ ಅಧಿಕಾರಿಗಳು ಸುಹೇಲ್‌ನನ್ನು ಬಂಧಿಸಿದ್ದರು. ಬಂಧನದ ನಂತರ ವೈದ್ಯಕೀಯ ಪರೀಕ್ಷೆಗಾಗಿ ಹರಿಹರ ಆಸ್ಪತ್ರೆ ಆವರಣಕ್ಕೆ ಕರೆತಂದ ಸಂದರ್ಭದಲ್ಲಿ, ಪೊಲೀಸ್ ವಾಹನದಲ್ಲಿ ಕುಳಿತಿದ್ದ ಸುಹೇಲ್ ಕ್ಯಾಮರಾಗಳತ್ತ ಬೆರಳು ತೋರಿಸುವ ಮೂಲಕ ತನ್ನ ಉದ್ದಟತನವನ್ನು ಪ್ರದರ್ಶಿಸಿದ್ದಾನೆ. ಶಂಕಿತ ಉಗ್ರನ ಈ ವರ್ತನೆಯು ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಈತನ ವಿಚಾರಣೆ ನಡೆಸಿದರೂ, ಸುಹೇಲ್‌ನ ಧಿಮಾಕು ಮಾತ್ರ ಕಡಿಮೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದನಾ ಚಟುವಟಿಕೆಗಳ ಶಂಕೆಯ ಮೇಲೆ ಬಂಧಿತನಾಗಿ, ಪೊಲೀಸ್ ವಶದಲ್ಲಿರುವಾಗಲೇ ಇಂತಹ ವರ್ತನೆ ತೋರಿರುವುದು ಗಂಭೀರ ಪ್ರಶ್ನೆಗಳಿಗೂ ಎಡೆಮಾಡಿಕೊಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *