ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆ ಪುನರಾರಂಭಕ್ಕೆ ಆಗ್ರಹಿಸಿ ಕೇಂದ್ರಕ್ಕೆ ಸಚಿವ ಎಂ.ಬಿ. ಪಾಟೀಲ್​​ ಪತ್ರ – Kannada News | Resuming Shivamogga Bengaluru Flights: Minister MB Patil Writes to Centre Requesting Inclusion in UDAN Scheme

ಶಿವಮೊಗ್ಗ ವಿಮಾನ ನಿಲ್ದಾಣImage Credit source: BS Yediyurappa X Account

ಬೆಂಗಳೂರು, ಜೂನ್​​ 12: ಶಿವಮೊಗ್ಗ ಮತ್ತು ಬೆಂಗಳೂರಿನ (Bengaluru) ನಡುವಿನ ವಿಮಾನ ಸೇವೆಯನ್ನು ಪುನರಾರಂಭಿಸುವಂತೆ ಹಾಗೂ ಈ ಮಾರ್ಗವನ್ನು ಮುಂದಿನ ಉಡಾನ್ (UDAN) ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಸಚಿವ ಎಂ.ಬಿ. ಪಾಟೀಲ್ ಮನವಿ ಮಾಡಿದ್ದಾರೆ. ಮಲೆನಾಡು ಪ್ರದೇಶ ಹಾಗೂ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಈ ವಿಮಾನ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರಿಗೆ ಬರೆದ ಪತ್ರದಲ್ಲಿ ಎಂ.ಬಿ. ಪಾಟೀಲ್ ಮನವರಿಕೆ ಮಾಡಿದ್ದಾರೆ.

ಸಂಚಾರ ನಿಲ್ಲಿಸಿರುವ ಇಂಡಿಗೋ

ಬೆಂಗಳೂರು–ಶಿವಮೊಗ್ಗ ಮಾರ್ಗವನ್ನು ಉಡಾನ್ ಯೋಜನೆಯಡಿ ಸೇರಿಸಿ, ಅಗತ್ಯವಿದ್ದರೆ ವೈಬಿಲಿಟಿ ಗ್ಯಾಪ್ ಫಂಡಿಂಗ್ (VGF) ನೆರವು ನೀಡುವ ಮೂಲಕ ಸೇವೆ ಪುನರಾರಂಭಿಸಲು ಕ್ರಮ ಕೈಗೊಳ್ಳುವಂತೆ ಅವರು ಕೋರಿದ್ದಾರೆ. ಶಿವಮೊಗ್ಗ ಏರ್​​ಪೋರ್ಟ್​​ನಲ್ಲಿ 2023ರ ಫೆಬ್ರವರಿಯಲ್ಲಿ ವಾಣಿಜ್ಯ ವಿಮಾನ ಸಂಚಾರ ಆರಂಭವಾಗಿದ್ದು, ಇಂಡಿಗೋ ಸಂಸ್ಥೆ ಬೆಂಗಳೂರು ಮತ್ತು ಶಿವಮೊಗ್ಗ ನಡುವಿನ ವಿಮಾನ ಸೇವೆ ನೀಡುತ್ತಿತ್ತು. ಆದರೆ ಆರ್ಥಿಕ ನಷ್ಟದ ಕಾರಣದಿಂದ ಕಳೆದ ಕೆಲವು ತಿಂಗಳುಗಳಿಂದ ಈ ಸೇವೆ ಸ್ಥಗಿತಗೊಂಡಿದೆ. ಕೃಷಿ, ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ಈ ಮಾರ್ಗ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪಾಟೀಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ; ಜೂನ್ 15 ರಿಂದಲೇ ಆದೇಶ ಜಾರಿ, ಪರ್ಯಾಯ ಮಾರ್ಗ ಇಲ್ಲಿದೆ

ಇದಲ್ಲದೆ, ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಗಳಿಗೆ ಬೆಂಗಳೂರನ್ನು ಪ್ರಮುಖ ಸಂಪರ್ಕ ಕೇಂದ್ರವಾಗಿ ಬಳಸುವ ಪ್ರಯಾಣಿಕರಿಗೂ ಸೇವೆ ಸ್ಥಗಿತದಿಂದ ತೊಂದರೆಯಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಇಳಿಯುವ ಸೌಲಭ್ಯ ಕಲ್ಪಿಸುವ ಕಾಮಗಾರಿ ಕೂಡ ವೇಗವಾಗಿ ಸಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *