ಶ್ರೀರಾಮನ ಪಾತ್ರದಲ್ಲಿ ಮಹೇಶ್ ಬಾಬು, ಲೀಕ್ ಆಯ್ತೆ ‘ವಾರಣಾಸಿ’ ಲುಕ್ – Kannada News | Mahesh Babu as SriRam, Did Varanasi movie look leaked

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ರಣ್​​ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಕೆಲವರು ರಣ್​​ಬೀರ್ ಅವರು ರಾಮನ ಪಾತ್ರಕ್ಕೆ ಸೂಟ್ ಆಗುವುದಿಲ್ಲ, ಮಹೇಶ್ ಬಾಬು ಅವರನ್ನು ಹಾಕಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ನಡುವೆ ಮಹೇಶ್ ಬಾಬು, ರಾಮನ ಪಾತ್ರದಲ್ಲಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾಮನ ಲುಕ್​​ನಲ್ಲಿ ಮಹೇಶ್ ಬಾಬು ಅದ್ಭುತವಾಗಿ ಕಾಣುತ್ತಿದ್ದಾರೆ. ಲೀಕ್ ಆಗಿರುವ ಈ ಫೋಟೊ ‘ವಾರಣಾಸಿ’ ಸಿನಿಮಾದ್ದು ಎನ್ನಲಾಗುತ್ತಿದೆ.

ಮಹೇಶ್ ಬಾಬು, ಕಾವಿ ವಸ್ತ್ರ ಧರಿಸಿ, ಬಿಲ್ಲು-ಬಾಣ ಹಿಡಿದು ನಿಂತಿರುವ ಚಿತ್ರ ಇದೀಗ ವೈರಲ್ ಆಗಿದೆ. ಶೂಟಿಂಗ್ ನಡೆಯುತ್ತಿರುವ ಸ್ಥಳದಲ್ಲಿ ಕ್ಯಾಮೆರಾ ಮುಂದೆ ಮಹೇಶ್ ಬಾಬು ನಿಂತಿರುವ ಚಿತ್ರ ಅದಾಗಿದೆ. ಚಿತ್ರ ನೋಡಿದವರೆಲ್ಲ, ಇದು ‘ವಾರಣಾಸಿ’ ಸಿನಿಮಾದ ಲೀಕ್ಡ್ ಫೋಟೊ ಎನ್ನುತ್ತಿದ್ದಾರೆ. ಇನ್ನು ಕೆಲವರಂತೂ ರಾಮಾಯಣ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ಅವರ ರಾಮನ ಲುಕ್​​ಗಿಂತಲೂ ಮಹೇಶ್ ಬಾಬು ಅವರ ರಾಮನ ಲುಕ್ ಚೆನ್ನಾಗಿದೆ ಎಂಬ ಅಭಿಪ್ರಾಯ ಸಹ ವ್ಯಕ್ತಪಡಿಸಿದ್ದಾರೆ.

ನಿಜಾಂಶವೆಂದರೆ, ಅಸಲಿಗೆ ಲೀಕ್ ಆಗಿದ್ದು ಎನ್ನಲಾಗುತ್ತಿರುವ ಫೋಟೊ ನಿಜವಾದ ಫೋಟೊ ಅಲ್ಲ, ಬದಲಿಗೆ ಅಭಿಮಾನಿಗಳು ಕ್ರಿಯೇಟ್ ಮಾಡಿರುವ ನಕಲಿ ಫೋಟೊ. ಎಐ ಹಾಗೂ ಗ್ರಾಫಿಕ್ಸ್ ಬಳಸಿ ಯಾರೋ ಈ ಫೋಟೊ ಸೃಷ್ಟಿಸಿದ್ದು, ಅದನ್ನೇ ಹಲವರು ‘ವಾರಣಾಸಿ’ ಸೆಟ್​​ನ ಲೀಕ್ಡ್ ಫೋಟೊ ಎಂಬ ಒಕ್ಕಣೆಯೊಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ. ಆದರೆ ಕೆಲವು ಅಧಿಕೃತ ಫ್ಯಾನ್ ಫೇಜ್​​​ಗಳು, ಇದು ಫೇಕ್ ಫೋಟೊ ಎಂಬುದನ್ನು ಖಾತ್ರಿ ಪಡಿಸಿವೆ.

ಇದನ್ನೂ ಓದಿ:ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಸ್ಟಾರ್ ನಟ ರಣ್​​ಬೀರ್ ಕಪೂರ್: ಸಿನಿಮಾ ಯಾವುದು?

ಅಸಲಿಗೆ ‘ವಾರಣಾಸಿ’ ಸಿನಿಮಾನಲ್ಲಿ ಸಹ ರಾಮಾಯಣದ ಕೆಲವು ದೃಶ್ಯಗಳಿವೆಯಂತೆ. ‘ವಾರಣಾಸಿ’ ಕತೆ ಬರೆದಿರುವ ರಾಜಮೌಳಿ ಅವರ ತಂದೆ ವಿಜಯೇಂದ್ರ ಅವರು ಖುದ್ದು ಈ ಬಗ್ಗೆ ಮಾತನಾಡಿ, ಖಾತ್ರಿಪಡಿಸಿದ್ದಾರೆ. ಸಿನಿಮಾದ ಪೋಸ್ಟರ್, ಟೀಸರ್​ನಲ್ಲಿಯೂ ಸಹ ಆಂಜನೇಯ, ಶ್ರೀರಾಮನ ದೃಶ್ಯಗಳು ಇವೆ. ಮಹೇಶ್ ಬಾಬು ಅವರು ಸಿನಿಮಾದ ಕೆಲವು ದೃಶ್ಯಗಳಲ್ಲಿ ಶ್ರೀರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಅಭಿಮಾನಿಗಳು ಈ ಫೋಟೊವನ್ನು ಸೃಷ್ಟಿಸಿ ಹರಿಬಿಟ್ಟಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:19 pm, Wed, 8 July 26

Source link

Leave a Reply

Your email address will not be published. Required fields are marked *