ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 15ರ ದಿನಭವಿಷ್ಯ

ಈ ದಿನ ರುದ್ರ- ಚಮಕದ ಶ್ರವಣವನ್ನು ಮಾಡಿ. ಈಶ್ವರನಿಗೆ ಕ್ಷೀರಾಭಿಷೇಕ ಮಾಡಿಸುವುದರಿಂದ ನಿಮ್ಮನ್ನು ಕಾಡುತ್ತಿರುವ ಹಲವು ರೀತಿಯ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಇನ್ ಟ್ಯೂಷನ್ ಜಾಗ್ರತೆ ಆಗುವುದರಿಂದ ಹಲವು ರೀತಿಯ ಅನುಕೂಲಗಳಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಇತರರ ಕಣ್ಣಿಗೆ ಅಥವಾ ದೃಷ್ಟಿ- ಆಲೋಚನೆಗೆ ದಕ್ಕದ ಕೆಲವು ಸಂಗತಿ-ವಸ್ತು, ವಿಷಯಗಳು ನಿಮ್ಮ ಗಮನಕ್ಕೆ ಬರಲಿವೆ. ಎಷ್ಟು ಬೇಗ ಇದರ ಲಾಭವನ್ನು ಪಡೆದುಕೊಳ್ಳುವುದಕ್ಕೆ ಪ್ರತಿಕ್ರಿಯೆ ನೀಡುತ್ತೀರೋ ಅಷ್ಟು ಒಳ್ಳೆಯದು. ಇಷ್ಟು ಸಮಯ ನೀವು ಯಾವುದನ್ನು ವ್ಯರ್ಥ ಹೂಡಿಕೆ ಅಂದುಕೊಂಡಿದ್ದಿರೋ ಅದರಲ್ಲಿ ನಿಮ್ಮ ಅಸಲು ದೊರೆಯಬಹುದು ಅಥವಾ ಹಾಕಿದ್ದ ಅಸಲಿನ ಮೊತ್ತಕ್ಕಿಂತ ಸ್ವಲ್ಪ ಹೆಚ್ಚು ಕೈ ಸೇರುವ ಸಾಧ್ಯತೆ ಗೋಚರಿಸಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನನಗೆ ಯಾರ ಸಹಾಯವೂ ಬೇಡ ಎಂದು ನಿಮ್ಮೆದುರು ಮಾತನಾಡಿದ್ದ ವ್ಯಕ್ತಿ ಈಗ ತಾನು ಬಹಳ ಕಷ್ಟದಲ್ಲಿ ಇರುವುದಾಗಿಯೂ ಈ ಹಿಂದೆ ತಾನಾಡಿದ ಮಾತುಗಳನ್ನು ಮರೆತು ಸಹಾಯ ಮಾಡುವಂತೆಯೂ ಕೇಳಿಕೊಂಡು ಬರಲಿದ್ದಾರೆ. ಇನ್ನು ನಿಮ್ಮ ಉಳಿತಾಯದ ಹಣವನ್ನು ತೆಗೆದುಕೊಂಡು, ಅದನ್ನು ಷೇರು ಮಾರುಕಟ್ಟೆಯಲ್ಲಿನ ಷೇರುಗಳ ಮೇಲೆಯೋ ಅಥವಾ ಮ್ಯೂಚುವಲ್ ಫಂಡ್ ಮೇಲೋ ಹೂಡಿಕೆ ಮಾಡಬೇಕು ಎಂದು ಗಂಭೀರವಾಗಿ ಆಲೋಚನೆಯನ್ನು ಆರಂಭಿಸಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಲೈಬ್ರರಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಜವಾಬ್ದಾರಿಗಳನ್ನು ವಹಿಸಬಹುದು. ಬಾಡಿಗೆ ಮನೆಯಲ್ಲಿ ವಾಸ ಇರುವಂಥವರು ಈಗ ಇರುವ ಮನೆಯನ್ನು ಬಿಟ್ಟು ಬೇರೆ ಕಡೆ ಹೋಗಬೇಕು ಎಂದುಕೊಳ್ಳಲಿದ್ದೀರಿ. ಮಕ್ಕಳ ಶಿಕ್ಷಣ ಹಾಗೂ ಶಾಲೆ ಸಲುವಾಗಿ ಹಣ- ಸಮಯವನ್ನು ಮೀಸಲಿಟ್ಟು ಕೆಲವು ಹೊಸ ಕೆಲಸಗಳನ್ನು ಶುರು ಮಾಡಲಿದ್ದೀರಿ. ದಿನದ ಕೊನೆಗೆ ಸಮಾಧಾನ ಆಗುವ ಕೆಲವು ಬೆಳವಣಿಗೆಗಳು ಆಗಲಿವೆ.

ಲೇಖನ- ಸ್ವಾತಿ ಎನ್.ಕೆ.

Source link

Leave a Reply

Your email address will not be published. Required fields are marked *