ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 15ರ ದಿನಭವಿಷ್ಯ

ನಿಮಗೆ ಹತ್ತಿರದಲ್ಲಿ ಇರುವಂಥ ದಕ್ಷಿಣಾಮೂರ್ತಿ ದೇವಾಲಯಕ್ಕೆ ಹೋಗಿಬನ್ನಿ. ತಪ್ಪು ತಿಳಿವಳಿಕೆಯಿಂದ ದೂರವಾಗಿರುವಂಥ ಸ್ನೇಹ- ಸಂಬಂಧಗಳು ಮತ್ತೆ ಸರಿಹೋಗುವಂಥ ಅವಕಾಶಗಳು ಉದ್ಭವ ಆಗುತ್ತವೆ. ಆರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ದಲ್ಲಿ ಅದು ಕೂಡ ನಿವಾರಣೆ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಸಾಮರ್ಥ್ಯವೇ ಕುಂದಿದೆಯಾ ಅಥವಾ ಆಲೋಚನೆ ಮಾಡುವ ವಿಧಾನದಲ್ಲಿ ಹಿಂದುಳಿಯುತ್ತಿದ್ದೀರಾ ಎಂದೆಲ್ಲ ಯೋಚನೆ ಮೂಡುವುದಕ್ಕೆ ಶುರುವಾಗಲಿದೆ. ಬಹಳ ದಿವಸದ ಹಿಂದೆ ನಿಮಗೆ ಮಾಡಿ ಮುಗಿಸಲು ಹೇಳಿದಂಥ ಮುಖ್ಯವಾದ ಕೆಲಸವೊಂದನ್ನು ಮರೆತ ಕಾರಣಕ್ಕೆ ಮುಜುಗರ ಎದುರಿಸುವಂಥ ಪರಿಸ್ಥಿತಿ ಬರಲಿದೆ. ಯಾರು ವೈದ್ಯಕೀಯ ವೃತ್ತಿಯಲ್ಲಿ ಇರುತ್ತೀರೋ ಅಂಥವರು ಸ್ವಂತ ಕ್ಲಿನಿಕ್ ಅಥವಾ ಆಸ್ಪತ್ರೆ ಶುರು ಮಾಡುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಉದ್ಯೋಗಕ್ಕಾಗಿ ಬಹಳ ಸಮಯದಿಂದ ಪ್ರಯತ್ನವನ್ನು ಪಡುತ್ತಿರುವವರು ತಮ್ಮ ತೀರ್ಮಾನವನ್ನು ಬದಲಾಯಿಸಿಕೊಂಡು ಸ್ವಂತ ಉದ್ಯಮ- ವ್ಯವಹಾರವನ್ನು ಶುರು ಮಾಡುವ ಬಗ್ಗೆಯೋ ಅಥವಾ ಕಮಿಷನ್ ಆಧಾರದಲ್ಲಿ ಆದಾಯ ತರುವಂಥದ್ದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳಿವೆ. ಕೃಷಿಕರಿಗೆ ಈಗ ಇರುವುದರ ಜೊತೆಗೆ ಹೆಚ್ಚುವರಿಯಾಗಿ ಭೂಮಿಯನ್ನು ಭೋಗ್ಯಕ್ಕೋ ಸ್ವಂತಕ್ಕೋ ಖರೀದಿಸಿ ಹೊಸ ಬೆಳೆಗಳನ್ನು ಬೆಳೆಯಬೇಕು ಎಂಬ ಆಲೋಚನೆ ಮೂಡಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಕಾರಣವೇ ಇಲ್ಲದೆ ತುಂಬ ಸಂತೋಷವಾಗಿ ಇರುವಂತೆ ನಿಮಗೆ ಎನಿಸಲಿದೆ. ಧಾರ್ಮಿಕ ಪ್ರವಚನಕಾರರು, ಜ್ಯೋತಿಷಿಗಳು, ದೇವಾಲಯದ ಪಾರುಪತ್ತೇದಾರರು ಆಗಿರುವಂಥವರಿಗೆ ಸನ್ಮಾನ, ಗೌರವಗಳು ದೊರೆಯುವ ದಿನ ಇದಾಗಿರಲಿದೆ. ಈ ಹಿಂದೆ ನೀವು ಶ್ರಮಪಟ್ಟು ಉಳಿಸಿಕೊಂಡಂಥ ಸ್ಥಳವೋ ಇತರರ ಜೊತೆಗೆ ವಾದ ಹೂಡಿಯಾದರೂ ಗಳಿಸಿಕೊಂಡಂಥ ಸ್ಥಾನ-ಮಾನದ ಹೆಚ್ಚುಗಾರಿಕೆ ಏನು ಎಂಬ ಬಗ್ಗೆ ಇತರರಿಗೆ ಗೌರವ ಮೂಡಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Leave a Reply

Your email address will not be published. Required fields are marked *