‘ಸಿಟಿ ಲೈಟ್ಸ್’ ಚಿತ್ರದ ‘ಕಂದಮ್ಮ ಕಂದಮ್ಮ..’ ಹಾಡು ರಿಲೀಸ್ ಆಗಿದೆ. ಈ ಹಾಡು ಗಮನ ಸೆಳೆಯುತ್ತಿದೆ. ಸಂಜಿತ್ ಹೆಗಡೆ ಧ್ವನಿ ಹಾಡಿನ ಹೈಲೈಟ್. ಈಗ ವಿನಯ್ ರಾಜ್ಕುಮಾರ್ ಅವರು ಹಾಡಿನ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಸಿನಿಮಾಗೆ ಸಂಜಿತ್ ಹೆಗಡೆ ಯಾವಾಗ ಹಾಡ್ತಾರೆ ಅಂತ ಕಾಯ್ತಾ ಇದ್ದೆ. ಕೊನೆಗೂ ಅವರು ನನ್ನ ಸಿನಿಮಾಗೆ ಹಾಡಿದ್ದಾರೆ’ ಎಂದು ಖುಷಿ ಹೊರಹಾಕಿದ್ದಾರೆ. ‘ಸಿಟಿ ಲೈಟ್ಸ್’ ಚಿತ್ರಕ್ಕೆ ದುನಿಯಾ ವಿಜಯ್ ಅವರ ನಿರ್ದೇಶನ ಇದೆ. ಈ ಸಿನಿಮಾದಲ್ಲಿ ಅವರ ಮಗಳು ಮೋನಿಷಾ ನಟಿಸಿದ್ದಾರೆ ಅನ್ನೋದು ವಿಶೇಷ. ಈ ಚಿತ್ರಕ್ಕೆ ಅವರು ನಾಯಕಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
