ಸತತ ಸೋಲುಗಳ ನಂತರ ಅಕ್ಷಯ್ ಕುಮಾರ್‌ಗೆ ಬಿಗ್ ರಿಲೀಫ್; ಬಾಕ್ಸ್ ಆಫೀಸ್‌ನಲ್ಲಿ ‘ವೆಲ್ಕಮ್ ಟು ದಿ ಜಂಗಲ್’ ಅಬ್ಬರ – Kannada News | Akshay Kumar’s Grand Comeback: Welcome To The Jungle Earns 29 Cr Worldwide

ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಳೆದ ಕೆಲವು ವರ್ಷಗಳಿಂದ ಕಂಗಾಲಾಗಿದ್ದರು. ಅವರು ನಟಿಸಿದ ಸಿನಿಮಾಗಳು ಬ್ಯಾಕ್-ಟು-ಬ್ಯಾಕ್ ಬಾಕ್ಸ್ ಆಫೀಸ್‌ನಲ್ಲಿ ಧೂಳೀಪಟವಾಗಿದ್ದವು. ಈ ನಿರಂತರ ಸೋಲುಗಳಿಂದ ಕಂಗೆಟ್ಟಿದ್ದ ಅಕ್ಷಯ್ ಕುಮಾರ್‌ಗೆ ಈಗ ಬಿಡುಗಡೆಯಾಗಿರುವ ‘ವೆಲ್ಕಮ್ ಟು ದಿ ಜಂಗಲ್’ (ವೆಲ್ಕಮ್ 3) ಸಿನಿಮಾ ದೊಡ್ಡ ಮಟ್ಟದ ಗೆಲುವನ್ನು ತಂದುಕೊಟ್ಟಿದೆ. ಈ ಭರ್ಜರಿ ಓಪನಿಂಗ್ ನೋಡಿದರೆ ಅಕ್ಷಯ್ ಕುಮಾರ್ ಕೊನೆಗೂ ಸಕ್ಸಸ್ ಟ್ರ್ಯಾಕ್‌ಗೆ ಮರಳಿದ್ದಾರೆ ಎನ್ನಲಾಗುತ್ತಿದೆ.

ಚಿತ್ರದ ಮೊದಲ ದಿನದ ಕಲೆಕ್ಷನ್ ವಿವರಗಳು ಹೊರಬಿದ್ದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ ಈ ಚಿತ್ರ ಬರೋಬ್ಬರಿ 10,892 ಶೋಗಳಿಂದ 15.00 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ 22.50 ಕೋಟಿ ರೂಪಾಯಿ ದಾಟಿದ್ದು, ಒಟ್ಟು ನೆಟ್ ಕಲೆಕ್ಷನ್ ಸದ್ಯಕ್ಕೆ 18.75 ಕೋಟಿ ರೂಪಾಯಿ ಆಗಿದೆ.

ವಿದೇಶದಲ್ಲೂ ‘ವೆಲ್​ಕಮ್ ಟು ದಿ ಜಂಗಲ್’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಒಟ್ಟು 6.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇವೆಲ್ಲವನ್ನೂ ಸೇರಿಸಿ ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದ ವಿಶ್ವಾದ್ಯಂತ ಮೊದಲ ದಿನದ ಒಟ್ಟು ಗಳಿಕೆ 29.00 ಕೋಟಿ ರೂಪಾಯಿ ತಲುಪಿದೆ.

ಇದನ್ನೂ ಓದಿ: ಅಜಯ್ ದೇವಗನ್​ಗಿಂತ ಅಕ್ಷಯ್ ಕುಮಾರ್ ಸಂಬಳ ಹೆಚ್ಚು? ಸ್ಪಷ್ಟನೆ ನೀಡಿದ ಚಿತ್ರತಂಡ

ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಬಾಲಿವುಡ್‌ನ ದೊಡ್ಡ ಸ್ಟಾರ್ ದಂಡೇ ನಟಿಸಿದೆ. ಚಿತ್ರದ ಮಲ್ಟಿಸ್ಟಾರರ್ ಪಾತ್ರವರ್ಗವೇ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ. ಚಿತ್ರದಲ್ಲಿ ಸಂಜಯ್ ದತ್, ಸುನೀಲ್ ಶೆಟ್ಟಿ, ಅರ್ಷದ್ ವಾರ್ಸಿ, ರವೀನಾ ಟಂಡನ್, ಜ್ಯಾಕ್ವೆಲಿನ್ ಫರ್ನಾಂಡಿಸ್ ಮತ್ತು ದಿಶಾ ಪಟಾನಿ ಸೇರಿದಂತೆ ಹಲವು ಪ್ರಮುಖ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಪಕ್ಕಾ ಕಾಮಿಡಿ ಹಾಗೂ ಎಂಟರ್‌ಟೈನ್‌ಮೆಂಟ್ ಉಣಬಡಿಸುತ್ತಿದ್ದಾರೆ. ಹೀಗಾಗಿ ಈ ಗೆಲುವು ಕೇವಲ ಅಕ್ಷಯ್​ ಕುಮಾರ್ ಅವರದ್ದು ಮಾತ್ರವಲ್ಲ ಎಂಬುದು ಅನೇಕರ ವಾದ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *