ಸಮಂತಾ ತಾಯಿ ಆಗೋ ವಿಷಯವನ್ನು ಖಚಿಪಡಿಸಿದ ಚಿರಂಜೀವಿ; ಸಿನಿಮಾ ಹಿಟ್ ಆಗಿದ್ದಕ್ಕೆ ವಿಶ್ – Kannada News | Chiranjeevi Confirms Samantha’s Pregnancy Amidst Maa Inti Bangaram Success

‘ಮಾ ಇಂಟಿ ಬಂಗಾರಂ’ ಸಿನಿಮಾ (Maa Inti Bangaram) ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಬಗ್ಗೆ ಎಲ್ಲ ಕಡೆಗಳಲ್ಲಿ ಪಾಸಿಟಿವ್ ಟಾಕ್ ಶುರುವಾಗಿದೆ. ಈ ಸಿನಿಮಾ ನಾಲ್ಕೇ ದಿನಕ್ಕೆ 50 ಕೋಟಿ ರೂಪಾಯಿ ಗಳಿಕೆ ಮಾಡಿರೋದು ವಿಶೇಷ. ಈ ಸಿನಿಮಾ ನೋಡಿದ ಚಿರಂಜೀವಿ ಅವರು ಖುಷಿಪಟ್ಟಿದ್ದಾರೆ. ಹೀಗಾಗಿ, ಸಮಂತಾ ಅವರನ್ನು ಮನೆಗೆ ಕರೆದು ವಿಶೇಷವಾಗಿ ಸತ್ಕಾರ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಮಾ ಇಂಟಿ ಬಂಗಾರಂ ಸಿನಿಮಾ ತುಂಬಾ ಆಸಕ್ತಿದಾಯಕವಾಗಿದೆ. ನಿರ್ದೇಶಕಿ ನಂದಿನಿ ರೆಡ್ಡಿ ಅವರು ಅವಿಭಕ್ತ ಕುಟುಂಬದ ಹಿನ್ನೆಲೆಯಲ್ಲಿ ಆಕ್ಷನ್ ಮತ್ತು ಎಮೋಷನ್ಸ್‌ಗಳನ್ನು ಅದ್ಭುತವಾಗಿ ಬೆರೆಸಿ, ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಈ ಚಿತ್ರವನ್ನು ಅತ್ಯಂತ ಮನರಂಜನಾತ್ಮಕವಾಗಿ ಮಾಡಿದ್ದಾರೆ. ಸೀರೆಯುಟ್ಟು ನಟಿ ಸಮಂತಾ ಮಾಡಿರುವ ಆಕ್ಷನ್ ದೃಶ್ಯಗಳು ಮತ್ತು ಅವರ ನಟನೆ ಈ ಸಿನಿಮಾದಲ್ಲಿ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯುತ್ತವೆ’ ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ‘ಮಾ ಇಂಟಿ ಬಂಗಾರಂ’ ಹಾಗೂ ‘ಕಾಕ್‌ಟೇಲ್ 2’ ಚಿತ್ರಗಳ ಗಳಿಕೆ ಎಷ್ಟು?

‘ತೆಲುಗು ಚಿತ್ರರಂಗಕ್ಕೆ ಇಂತಹ ವೈವಿಧ್ಯಮಯ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳ ಅಗತ್ಯ ತುಂಬಾ ಇದೆ. ಈ ದೊಡ್ಡ ಯಶಸ್ಸಿಗಾಗಿ ಸಮಂತಾ, ನಂದಿನಿ ರೆಡ್ಡಿ, ರಾಜ್ ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು’ ಎಂದಿದ್ದಾರೆ.

ಸಮಂತಾ ಶೀಘ್ರವೇ ತಾಯಿ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈಗ ಚಿರಂಜೀವಿ ಅವರು ವಿಶೇಷವಾಗಿ ಈ ವಿಷಯವನ್ನು ಪರೋಕ್ಷವಾಗಿ ಖಚಿತಪಡಿಸಿದ್ದಾರೆ. ‘ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಡುತ್ತಿರುವ ಸಮಂತಾ ಮತ್ತು ರಾಜ್ ದಂಪತಿಗೆ ನನ್ನ ವಿಶೇಷ ಶುಭಾಶಯಗಳು’ ಎಂದು ಹೇಳಿದ್ದಾರೆ. ಈ ಮೂಲಕ ಸಮಂತಾ ತಾಯಿ ಆಗುತ್ತಿರುವ ವಿಷಯ ಖಚಿತಪಡಿಸದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *