ಸಲ್ಮಾನ್​ ಖಾನ್​ ಮದುವೆ ಆಗಿಲ್ಲ ಯಾಕೆ? ಕಾರಣ ಬಿಚ್ಚಿಟ್ಟಿದ್ದ ತಂದೆ ಸಲೀಂ – Kannada News | Why Salman Khan not married father Salim Khan explained once

ಸಲ್ಮಾನ್ ಖಾನ್ (Salman Khan) ಬಾಲಿವುಡ್​ನ ಸ್ಟಾರ್ ನಟ, ಅವರನ್ನು ಭಾಯ್​ ಜಾನ್ ಎಂದು ಸಹ ಕರೆಯಲಾಗುತ್ತದೆ. ಹಲವು ದಶಕಗಳ ಕಾಲ ಬಾಲಿವುಡ್​ ಸ್ಟಾರ್ ನಟನಾಗಿ ಉಳಿದಿರುವ ಸಲ್ಮಾನ್ ಖಾನ್ ಒಂದು ಸಮಯದಲ್ಲಿ ಯುವತಿಯರ ಫೇವರೇಟ್ ನಟರಾಗಿದ್ದರು. ಸಲ್ಮಾನ್ ಖಾನ್ ಅವರ ಹೆಸರು ಹಲವಾರು ನಟಿಯರೊಟ್ಟಿಗೆ ಕೇಳಿ ಬಂದಿದೆ. ಐಶ್ವರ್ಯಾ ರೈ, ಕತ್ರಿನಾ ಕೈಫ್, ಸೋಮಿ ಅಲಿ, ಸಂಗೀತಾ ಬಿಜಲಾನಿ ಒಬ್ಬಿಬ್ಬರಲ್ಲ. ಆದರೆ ಯಾರನ್ನೂ ಅವರು ಮದುವೆ ಆಗಿಲ್ಲ. ಈಗಲೂ ಸಹ ಸಲ್ಮಾನ್ ಖಾನ್ ಸಿಂಗಲ್. ಆದರೆ ಸಲ್ಮಾನ್ ಖಾನ್ ಏಕೆ ಮದುವೆ ಆಗಲಿಲ್ಲ, ಅವರ ಪ್ರೇಮಪ್ರಸಂಗಗಳು ಅರ್ಧದಲ್ಲೇ ಏಕೆ ನಿಂತು ಹೋದವು ಎಂಬ ಬಗ್ಗೆ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಹಿಂದೊಮ್ಮೆ ಹೇಳಿಕೊಂಡಿದ್ದರು.

ಸಲ್ಮಾನ್ ಖಾನ್​ ಭಿನ್ನ ಮನಸ್ಥಿತಿಯ ಬಗ್ಗೆ ಮಾತನಾಡಿದ್ದ ಸಲೀಂ ಖಾನ್, ‘ಸಲ್ಮಾನ್ ಖಾನ್​ ಮನಸ್ಥಿತಿ ತುಸು ಭಿನ್ನವಾದುದು, ಆತನಿಗೆ ತನ್ನ ತಾಯಿಯ ಮೇಲೆ ವಿಪರೀಪ ಪ್ರೀತಿ. ತಾನು ಪ್ರೀತಿಸುವ ಯುವತಿಯರಲ್ಲಿ ತನ್ನ ತಾಯಿಯನ್ನು ಕಾಣಲು ತವಕಿಸುತ್ತಿದ್ದ. ಸಲ್ಮಾನ್ ಖಾನ್ ಪ್ರೀತಿಸಿದ ಯುವತಿಯರು ಸಿನಿಮಾ ರಂಗದವರೇ ಆಗಿರುತ್ತಿದ್ದರು. ಅವರನ್ನು ಮದುವೆಯಾಗಿ ಆತ ತಮ್ಮ ತಾಯಿಯಂತೆ ಮನೆಯಲ್ಲಿ ಇರಿಸಲು ಬಯಸುತ್ತಿದ್ದ ಎನಿಸುತ್ತದೆ. ಆದರೆ ಸಿನಿಮಾ ರಂಗದ ಯುವತಿಯರು ಸಾಕಷ್ಟು ಆಸೆ, ವೃತ್ತಿಯಲ್ಲಿ ನಿರೀಕ್ಷೆಗಳನ್ನು ಇರಿಸಿಕೊಂಡವರಾಗಿರುತ್ತಾರೆ, ಅವರಿಗೆ ಮನೆಯಲ್ಲಿ ಕೂರುವುದು ಇಷ್ಟವಾಗಲ್ಲ, ಹಾಗಾಗಿ ಸಲ್ಮಾನ್ ಖಾನ್​ರ ಬಹುತೇಕ ಪ್ರೇಮಪ್ರಸಂಗಗಳು ಮದುವೆಯ ವರೆಗೂ ಬರಲೇ ಇಲ್ಲ’ ಎಂದಿದ್ದರು ಸಲೀಂ.

‘ತಾನು ಮದುವೆ ಆಗುವ ಯುವತಿ, ತನ್ನ ಮನೆಯಲ್ಲಿರಬೇಕು, ತಂದೆ-ತಾಯಿಗಳನ್ನು ನೋಡಿಕೊಳ್ಳಬೇಕು, ಮಕ್ಕಳ ಹೋಮ್​​ವರ್ಕ್ ಮಾಡಿಸಬೇಕು, ಮಕ್ಕಳನ್ನು ಶಾಲೆಗೆ ಬಿಡಲು ಹೋಗಬೇಕು, ಹೀಗೆ ತನ್ನ ತಾಯಿ ತನಗೆ ಮಾಡಿದ್ದೆಲ್ಲವನ್ನೂ ನನ್ನ ಪತ್ನಿ ಮಾಡಬೇಕು ಎಂಬ ನಿರೀಕ್ಷೆ ಸಲ್ಮಾನ್ ಖಾನ್​ನದ್ದಾಗಿತ್ತು ಆದರೆ ಅದು ಸಾಧ್ಯವಿರಲಿಲ್ಲ. ನಟಿಯರಿಗೆ ನಿರೀಕ್ಷೆಗಳಿರುತ್ತವೆ, ಆಕಾಂಕ್ಷೆಗಳಿರುತ್ತವೆ, ವೃತ್ತಿಯಲ್ಲಿ ಸಾಧನೆ ಮಾಡುವ ಹಂಬಲ ಇರುತ್ತದೆ, ಅವರಿಗೆ ಇದೆಲ್ಲ ಮಾಡಲು ಸಾಧ್ಯವಾಗುವುದಿಲ್ಲ, ಅದು ತಪ್ಪು ಸಹ ಅಲ್ಲ. ಹಾಗಾಗಿ ಸಲ್ಮಾನ್ ಖಾನ್​ ಮದುವೆ ಆಗಲಿಲ್ಲ’ ಎಂದಿದ್ದರು ಸಲೀಂ ಖಾನ್.

ಇದನ್ನೂ ಓದಿ:ಏಕಾಏಕಿ ಆಸ್ಪತ್ರೆಗೆ ದಾಖಲಾದ ಸಲೀಮ್ ಖಾನ್; ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಸಹ ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿ, ‘ನನಗೆ ನನ್ನ ತಾಯಿಯೆಂದರೆ ಬಹಳ ಪ್ರೀತಿ, ನನ್ನ ಜೀವನದಲ್ಲಿ ನನಗೆ ಏನಾದರೂ ಅದ್ಭುತ ಉಡುಗೊರೆ ಸಿಕ್ಕಿದ್ದರೆ ಅದು ನನ್ನ ತಾಯಿಯೇ. ನನ್ನ ತಂದೆ ಬೇರೊಂದು ಮದುವೆ ಆದಾಗ ನನಗೆ ಅತೀವ ಸಿಟ್ಟು ಬಂದಿತ್ತು. ನನ್ನ ತಾಯಿಯ ದುಃಖವನ್ನು ನನಗೆ ನೋಡಲು ಆಗಿರಲಿಲ್ಲ. ನನ್ನ ತಂದೆ ಯಾವಾಗ ಮನೆಗೆ ಬರುವರೋ ಎಂದು ನನ್ನ ತಾಯಿ ಕಾಯುತ್ತಿದ್ದಾಗ ಅದನ್ನು ನೋಡಿ ನನಗೆ ಬಹಳ ದುಃಖವಾಗುತ್ತಿತ್ತು’ ಎಂದು ಸಲ್ಮಾನ್ ಖಾನ್ ಹೇಳಿದ್ದರು. ಸಲ್ಮಾನ್ ಖಾನ್ ತಾಯಿಯ ಹೆಸರು ಸುಶೀಲ ಆದರೆ ಸಲೀಂ ಖಾನ್, ಸುಶೀಲಾ ಅವರಿಗೆ ವಿಚ್ಛೇದನ ನೀಡಿ ಹೆಲೆನ್ ಅವರನ್ನು ವಿವಾಹವಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:23 pm, Wed, 18 February 26

Source link

Leave a Reply

Your email address will not be published. Required fields are marked *