‘ಕೆಜಿಎಫ್’ (KGF) ಮತ್ತು ‘ಕೆಜಿಎಫ್ 2’ ಸಿನಿಮಾಗಳು ಕನ್ನಡದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು. ಈ ಸಿನಿಮಾಗಳಿಗೆ ಗ್ಲೋಬಲ್ ಲೆವೆಲ್ನಲ್ಲಿ ಅಭಿಮಾನಿಗಳಿದ್ದಾರೆ. ಈ ಸಿನಿಮಾಗಳ ತಾಂತ್ರಿಕ ನಿಪುಣತೆ, ನಿರೂಪಣೆ ಶೈಲಿ ಹೊಸದಾಗಿಯೂ, ಭಿನ್ನವಾಗಿಯೂ ಇತ್ತು. ಈಗ ಹಲವು ಕಮರ್ಶಿಯಲ್ ಸಿನಿಮಾಗಳು ‘ಕೆಜಿಎಫ್’ ಸಿನಿಮಾಗಳ ನಿರೂಪಣಾ ಮಾದರಿಯನ್ನು ಬಳಸುತ್ತಿವೆ. ಆದರೆ ಈ ಸಿನಿಮಾ ಬಿಡುಗಡೆ ಆದಾಗಿಂದಲೂ ಒಂದು ವರ್ಗದ ಜನರಿಂದ ಸಿನಿಮಾದ ಬಗ್ಗೆ ವಿಮರ್ಶೆ, ಟೀಕೆಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗೆ ಆನ್ಲೈನ್ನಲ್ಲಿ ಆಯೋಜಿಸಿದ್ದ ಸೆನ್ಸಾರ್ ಕುರಿತ ಚರ್ಚೆಯೊಂದರಲ್ಲಿ ‘ಕೆಜಿಎಫ್’ ಸಿನಿಮಾದ ಬಗ್ಗೆ ಟೀಕೆ ಕೇಳಿ ಬಂದಿದೆ. ಜೊತೆಗೆ ‘ಅನಿಮಲ್’ ಸಿನಿಮಾ ಬಗ್ಗೆಯೂ ಸಹ.
ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಅತಿಥಿಯಾಗಿ ಪಾಲ್ಗೊಂಡಿದ್ದ ಈ ಯೂಟ್ಯೂಬ್ ಚರ್ಚೆಯನ್ನು ಖ್ಯಾತ ಕಮಿಡಿಯನ್ ಕುನಾಲ್ ಕಾಮ್ರಾ ಆಯೋಜಿಸಿದ್ದರು. ಅವರದ್ದೇ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ದಿಲ್ಜೀತ್ ದೊಸ್ಸಾಂಜ್ ಅವರ ‘ಸಟ್ಲೆಜ್’ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರಾಕರಿಸಿರುವುದು, ಸಿನಿಮಾ ಅನ್ನು ಒಟಿಟಿಯಿಂದ ತೆಗೆದಿರುವ ಬಗ್ಗೆ ಚರ್ಚೆಯನ್ನು ಆಯೋಜಿಸಲಾಗಿತ್ತು. ಅನುರಾಗ್ ಕಶ್ಯಪ್ ಅವರು ದಶಕಗಳಿಂದಲೂ ಸೆನ್ಸಾರ್ ಮಂಡಳಿ ಜೊತೆಗೆ ಜಗಳ ಮಾಡುತ್ತಲೇ ಬಂದಿದ್ದರಿಂದ, ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಉದಾಹರಣೆಗಳೊಂದಿಗೆ ವಿವರಿಸಿದರು.
ಅದೇ ಚರ್ಚೆಯಲ್ಲಿ ಹಾಜರಿದ್ದ ಸಾಮಾಜಿಕ ಕಾರ್ಯಕರ್ತೆ ಮತ್ತು ಯೂನಿವರ್ಸಿಟಿ ಪ್ರೊಫೆಸರ್ ಸಹ ಆಗಿರುವ ಮಾದ್ರಿ ಕಟೋಕಿ ಅಲಿಯಾಸ್ ಡಾ ಮೆಡ್ಯೂಸಾ ಅವರು ಸಿನಿಮಾಗಳಲ್ಲಿ ಹಿಂಸಾತ್ಮಕತೆ ಹೆಚ್ಚಾಗಿರುವ ಬಗ್ಗೆ ಮಾತನಾಡಿ, ‘ಅನಿಮಲ್’ ಮತ್ತು ‘ಕೆಜಿಎಫ್’ ಸಿನಿಮಾಗಳನ್ನು ಟೀಕೆ ಮಾಡಿದರು. ಇತ್ತೀಚೆಗೆ ಸಿನಿಮಾಗಳಲ್ಲಿ ಹೀರೋ ವರ್ಷಿಪ್ ಹೆಚ್ಚಾಗಿರುವ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್, ಇತ್ತೀಚೆಗೆ ತಾವು ನಟಿಸಿದ ಸಿನಿಮಾನಲ್ಲಿ ತಮ್ಮದೇ ಎಂಟ್ರಿ ಸೀನ್ ಅನ್ನು ಎರಡು ಮೂರು ಬಾರಿ ಬೇರೆ ಬೇರೆ ದೃಶ್ಯಗಳಿಗಾಗಿ ಶೂಟ್ ಮಾಡಿಕೊಂಡರು ಎಂದರು.
ಇದನ್ನೂ ಓದಿ:ಈ ಪ್ಯಾನ್ ಇಂಡಿಯಾ ಸ್ಟಾರ್ ನಟನಿಗೆ ಶಿವಣ್ಣನ ಆ ಸಿನಿಮಾ ಬಲು ಇಷ್ಟ
ಅವರ ಮಾತಿಗೆ ಮಾತು ಜೋಡಿಸಿದ ಪ್ರೊಫೆಸರ್ ಮಾದ್ರಿ ಕಟೋಕಿ, ‘ಕೆಜಿಎಫ್’ ಸಿನಿಮಾ ಅಂತೂ ಬರೀ ಎಂಟ್ರಿ ಸೀನ್ಗಳ ಮೇಲೆಯೇ ಸಿನಿಮಾ ಮಾಡಿದ್ದಾರೆ. ಅದರದ್ದು ಒಂದರ ಹಿಂದೆ ಒಂದು ಎಂಟ್ರಿ ಸೀನ್ಗಳು ಮಾತ್ರ, ಇನ್ನೇನೂ ಇಲ್ಲ’ ಎಂದರು. ಅವರ ಮಾತಿಗೆ ಅನುರಾಗ್ ಒಪ್ಪಿಗೆ ನೀಡಲಿಲ್ಲ, ಆದರೆ ವಿರೋಧಿಸಲೂ ಸಹ ಇಲ್ಲ. ಮಾದ್ರಿ ಅವರು ‘ಅನಿಮಲ್’ ಅಂಥಹಾ ಪೀಡಕ ಸಿನಿಮಾಗಳು ಹೆಚ್ಚಾಗುತ್ತಿರುವ ಬಗ್ಗೆ ಅನುರಾಗ್ ಅವರನ್ನು ಪ್ರಶ್ನೆ ಮಾಡಿದಾಗ, ‘ಸೆನ್ಸಾರ್ ದೃಷ್ಟಿಕೋನದಿಂದ ಹೇಳುವುದಾದರೆ ಎಲ್ಲ ಸಿನಿಮಾಗಳಿಗೂ ಅವಕಾಶ ಸಿಗಲೇ ಬೇಕು, ಅನಿಮಲ್ ಆಗಲಿ, ‘ಕಶ್ಮೀರ್ ಫೈಲ್ಸ್’ ಆಗಲಿ ಈಗ ನಿಷೇಧವಾಗಿರುವ ‘ಸಟ್ಲೆಜ್’ ಆಗಲಿ ಎಲ್ಲದಕ್ಕೂ ಅವಕಾಶ ಸಿಗಬೇಕು, ಸಿನಿಮಾ ನೋಡುವ ನೋಡದೆ ಇರದೇ ಇರುವ ಆಯ್ಕೆ ಪ್ರೇಕ್ಷಕನ ಕೈಯಲ್ಲಿರುತ್ತದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
