ಇಂದಿನ ಯುವಜನತೆ ತಮ್ಮ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಸೇವಿಸುವ ಆಹಾರ, ಉಡುಗೆ ತೊಡುಗೆ ಸೇರಿದಂತೆ ಎಲ್ಲದರಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಶಿಕ್ಷಣದ ಜತೆಗೆ ವಿವಿಧ ಕೌಶಲ್ಯಗಳತ್ತ ಗಮನ ಹರಿಸುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಉದ್ಯೋಗ ಅನುಭವದ ಜತೆಗೆ ಕೌಶಲ್ಯಗಳು ಬಹಳ ಮುಖ್ಯ. ಹೀಗಾಗಿ ಯುವ ಜನತೆಯಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ವಿಶ್ವ ಯುವ ಕೌಶಲ್ಯ ದಿನ (World Youth Skills Day) ಮೀಸಲಿಡಲಾಗಿದೆ. ಪ್ರತಿ ವರ್ಷ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನದ ಆಚರಣೆ ಚಾಲ್ತಿಯಲ್ಲಿದೆ.
ವಿಶ್ವ ಯುವ ಕೌಶಲ್ಯ ದಿನದ ಇತಿಹಾಸವೇನು?
ಶ್ರೀಲಂಕಾದ ಉಪಕ್ರಮದ ಮೇರೆಗೆ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 2014 ರಂದು ವಿಶ್ವ ಯುವ ಕೌಶಲ್ಯ ದಿನದ ಆಚರಣೆಯನ್ನು ಅಂಗೀಕರಿಸಿತು. ಹೀಗಾಗಿ 2015 ರ ಜುಲೈ 15 ರಂದು ಮೊದಲ ಬಾರಿಗೆ ವಿಶ್ವ ಕೌಶಲ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಜುಲೈ 15 ರಂದು ಈ ದಿನದ ಆಚರಣೆ ಚಾಲ್ತಿಯಲ್ಲಿದೆ.
ಇದನ್ನೂ ಓದಿ: ವಿಶ್ವ ಪೇಪರ್ ಬ್ಯಾಗ್ ದಿನದ ಆಚರಣೆಯ ಇತಿಹಾಸ, ಮಹತ್ವದ ಸಂಪೂರ್ಣ ವಿವರ ಇಲ್ಲಿದೆ
ವಿಶ್ವ ಯುವ ಕೌಶಲ್ಯ ದಿನದ ಮಹತ್ವ, ಆಚರಣೆ ಹೇಗೆ?
ಯುವಕರಿಗೆ ಕೆಲಸ, ಉದ್ಯಮಶೀಲತೆ ಹಾಗೂ ಅಗತ್ಯವಾದ ಅಗತ್ಯವಾದ ಕೌಶಲ್ಯವನ್ನು ಒದಗಿಸಲು ಹಾಗೂ ಯುವಕರನ್ನು ಪ್ರೇರೆಪಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಯುವಕರಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸಲು ಜಾಗೃತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
