ಹಿಂದಿ ಸಿನಿಮಾ ವೀಕ್ಷಿಸಿ ಕೊಂಡಾಡಿದ ‘ಟಾಕ್ಸಿಕ್’ ನಿರ್ದೇಶಕಿ, ಹೇಳಿದ್ದೇನು? – Kannada News | Toxic director Geethu Mohandas praised Huma Qureshi’s new movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ತಿಂಗಳಷ್ಟೆ ಬಾಕಿ ಇದೆ. ಸಿನಿಮಾ ತಂಡ ಟೀಸರ್ಗಳನ್ನಷ್ಟೆ ಬಿಡುಗಡೆ ಮಾಡಿದೆ. ಫೀಲ್ಡಿಗಿಳಿದು ಪ್ರಚಾರ ಆರಂಭಿಸಿಲ್ಲ. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್, ಹಿಂದಿ ಸಿನಿಮಾ ಒಂದನ್ನು ವೀಕ್ಷಿಸಿ ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ. ತಮ್ಮ ಸಿನಿಮಾ ಬಿಡುಗಡೆಗೆ ಸಿದ್ಧವಾಗಿರುವ ಹೊಸ್ತಿಲಲ್ಲಿ, ನಿರ್ದೇಶಕಿ ಮತ್ತೊಂದು ಸಿನಿಮಾವನ್ನು ಕೊಂಡಾಡಿರುವುದು ಕೆಲವರಿಗೆ ಆಶ್ಚರ್ಯ ತಂದಿದೆ. ಆದರೆ ಸಿನಿಮಾ ವೀಕ್ಷಿಸಿ ಒಳ್ಳೆಯ ಮಾತನಾಡಿರುವುದಕ್ಕೂ ಕಾರಣವಿದೆ.

ಬಾಲಿವುಡ್ ನಟಿ ಹುಮಾ ಖುರೇಷಿ ನಟನೆಯ ‘ಬೇಬಿ ಡು ಡೈ ಡು’ ಜುಲೈ 3 ರಂದು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​​ದಾಸ್ ವೀಕ್ಷಿಸಿ, ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಹುಮಾ ಖುರೇಷಿ, ‘ಟಾಕ್ಸಿಕ್’ ಸಿನಿಮಾದ ಐವರು ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಅವರು ಎಲಿಜಬೆತ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಕಾರಣಕ್ಕೆ ಗೀತು ಮೋಹನ್​​ದಾಸ್ ಅವರು ಸಿನಿಮಾ ವೀಕ್ಷಿಸಿದ್ದು, ತಮ್ಮ ನಟಿಯ ಬಗ್ಗೆ, ನಟಿಯ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹುಮಾ ಅವರೊಂದಿಗಿನ ಸೆಲ್ಫಿಯೊಂದಿಗೆ ‘ಬೇಬಿ ಡು ಡೈ ಡು’ ಸಿನಿಮಾದ ಬಗ್ಗೆ ಗೀತು ಅಭಿಪ್ರಾಯ ಬರೆದುಕೊಂಡಿದ್ದಾರೆ, ‘ನಾನು ಇದೀಗ ‘ಬೇಬಿ ಡು ಡೈ ಡು’ ನೋಡಿದೆ. ಇದು ಕೇವಲ ವಿಮರ್ಶೆಯಲ್ಲ, ನನಗೆ ಪರಿಚಯವಿರುವವರು ನಿರ್ಮಿಸಿದ ಕಥೆಯನ್ನು ನೋಡಿದ ಅನುಭವ ಹೇಗಿತ್ತು ಎಂಬ ಅನುಭವವಷ್ಟೆ. ಒಬ್ಬ ಸಹೋದರ ಮತ್ತು ಸಹೋದರಿ ತಮ್ಮ ಮೇಲೆ ತಾವು ನಂಬಿಕೆ ಇಟ್ಟು ನಿರ್ಮಿಸಿದ ಚಿತ್ರವಿದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ನಟ ಯಶ್ ಗುಣಗಾನ ಮಾಡಿದ ಕಾಜಲ್, ನಟಿ ಹೇಳಿದ್ದೇನು?

ಹುಮಾ ಅವರನ್ನು ಉದ್ದೇಶಿಸಿ, ‘ನಾನು ಹುಮಾ ಅಭಿನಯವನ್ನು ನೋಡಿ ಆಶ್ಚರ್ಯಪಡಲಿಲ್ಲ. ಅವಳಿಗೆ ಏನು ಮಾಡಲು ಸಾಧ್ಯ ಮತ್ತು ಭವಿಷ್ಯದಲ್ಲಿ ಅವಳು ಏನು ಮಾಡಬಲ್ಲಳು ಎಂಬುದು ನನಗೆ ತಿಳಿದಿದೆ. ‘ಬ್ರಾವೋ ಮೈ ಎಲಿಜಬೆತ್’ (ಟಾಕ್ಸಿಕ್ ಚಿತ್ರದಲ್ಲಿ ಹುಮಾ ಪಾತ್ರದ ಹೆಸರು ಎಲಿಜಬೆತ್) ಅಲ್ಲದೆ, ಇದು ಕೇವಲ ಹುಮಾ ಒಬ್ಬರ ಸಿನಿಮಾ ಮಾತ್ರವಲ್ಲ, ಇದು ಒಂದು ಕುಟುಂಬದ ಸಾಹಸ ಮತ್ತು ಪರಸ್ಪರ ನಂಬಿಕೆಯ ಸಂಕೇತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಂತರ ಗೀತು ಅವರು ನಟನೆಯ ತರಬೇತುದಾರ ಮತ್ತು ಹುಮಾ ಅವರ ಗೆಳೆಯ ರಾಚಿತ್ ಸಿಂಗ್ ಅವರನ್ನು ಹೊಗಳಿದ್ದಾರೆ. ‘ಅವರಲ್ಲಿರುವ ಪ್ರತಿಭೆ ಬಹಳ ಅಪರೂಪ. ಇದು ನಿಮಗೆ ಅದ್ಭುತ ಭವಿಷ್ಯದ ಆರಂಭವಾಗಿದೆ. ಚಿತ್ರದ ಸಂಪೂರ್ಣ ತಂಡಕ್ಕೆ ಈ ಯಶಸ್ಸಿಗೆ ಅಭಿನಂದನೆಗಳು’ ಎಂದು ಅವರು ಹೇಳಿದ್ದಾರೆ. ಗೀತು ಮೋಹನ್​​ದಾಸ್ ಅವರ ಪೋಸ್ಟ್​​ಗೆ ಹುಮಾ ಭಾವುಕರಾಗಿ ಪ್ರತಿಕ್ರಿಯಿಸಿದ್ದು, ‘ಇದನ್ನು ಓದಿ ನಾನು ಭಾವುಕಳಾಗಿ, ಕಣ್ಣೀರು ಹಾಕಿದೆ ಧನ್ಯವಾದ ಗೀತು’ ಎಂದು ಹೇಳಿದ್ದಾರೆ. ಅವರ ಸಹೋದರ ಸಾಕಿಬ್ ಮತ್ತು ರಾಚಿತ್ ಕೂಡ ಗೀತು ಅವರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ.

‘ಬೇಬಿ ಡು ಡೈ ಡು’ ಚಿತ್ರವನ್ನು ನಾಚಿಕೇತ್ ಸಮಂತ್ ನಿರ್ದೇಶಿಸಿದ್ದಾರೆ. ಹುಮಾ ಖುರೇಷಿ ಹಾಗೂ ಅವರ ಸಹೋದರರಾದ ಸಾಕಿಬ್ ಸಲೀಂ ಮತ್ತು ನಾಚಿಕೇತ್ ಸಮಂತ್ ಅವರು ‘ಸಲೀಂ ಸಿಬ್ಲಿಂಗ್ಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿಖಂಧರ್ ಖೇರ್ ಮತ್ತು ಚಂಕಿ ಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಕಿವುಡು ಮತ್ತು ಮೂಕ ಯುವತಿಯೊಬ್ಬಳ ಕಥೆಯನ್ನು ಒಳಗೊಂಡಿದೆ. ಸಿನಿಮಾ ಕುರಿತಂತೆ ಭರ್ಜರಿ ಪ್ರಚಾರದಲ್ಲಿ ಪಾಲ್ಗೊಂಡಿದ್ದು, ಜುಲೈ 7 ರಂದು ಅವರು ಬೆಂಗಳೂರಿಗೆ ಸಹ ಬಂದಿದ್ದು, ಪ್ರಚಾರ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *