ಹೀಟ್ ವೇವ್​ಗೆ ತತ್ತರಿಸಿದ ರಾಯಚೂರು: ಹೈ ಅಲರ್ಟ್ ಘೋಷಣೆ, ರಿಮ್ಸ್‌ನಲ್ಲಿ ಹೈಟೆಕ್ ವಾರ್ಡ್ ಸಿದ್ಧ – Kannada News | Heatwave: 42°C High Alert for Heat Stroke and Health Risks

ರಾಯಚೂರು, ಏಪ್ರಿಲ್​ 20: ಬಿಸಿಲುನಾಡು ರಾಯಚೂರಿನಲ್ಲಿ (raichur) ಸೂರ್ಯನ ಪ್ರತಾಪ ದಿನೇದಿನೇ ಮಿತಿಮೀರುತ್ತಿದೆ. ತಾಪಮಾನ 42 ಡಿಗ್ರಿ ದಾಟುತ್ತಿರುವುದರ ನಡುವೆಯೇ ಈಗ ಬಿಸಿಗಾಳಿ ಅಂದರೆ ಹೀಟ್ ವೇವ್ (Heat Wave) ಜನರ ಜೀವಕ್ಕೆ ಆಪತ್ತನ್ನು ತಂದೊಡ್ಡುತ್ತಿದೆ. ಬಿಸಿಗಾಳಿಯ ಹೊಡೆತಕ್ಕೆ ಜನರು ‘ಹೀಟ್ ಸ್ಟ್ರೋಕ್’ಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವುದರಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಪರಿಸ್ಥಿತಿಯನ್ನು ಎದುರಿಸಲು ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಕೂಡ ತೆರೆಯಲಾಗಿದೆ.

42 ಡಿಗ್ರಿಯಷ್ಟು ತಾಪಮಾನ ದಾಖಲು: ಹೈ ಅಲರ್ಟ್

ಗಡಿ ಜಿಲ್ಲೆ ರಾಯಚೂರನ್ನು ಬಿಸಿಲು ನಾಡು ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ರಾಯಚೂರಿನಲ್ಲಿ ತಾಪಮಾನ ಹೆಚ್ಚಾಗಿ, ಜನರನ್ನ ಕುಗ್ಗಿಸುತ್ತಿದೆ. ಪ್ರತಿ ಏಪ್ರಿಲ್, ಮೇ ತಿಂಗಳಲ್ಲಿ ರಾಯಚೂರಿನ ಜನ ಅಕ್ಷರಶಃ ಬಿಸಿಲ ಬೇಗೆಗೆ ನಲುಗಿ ಹೋಗುತ್ತಾರೆ. ಅದೇ ರೀತಿ ಈ ಬಾರಿಯೂ ಜಿಲ್ಲೆಯಲ್ಲಿ ತಾಪಮಾನ 42 ಡಿಗ್ರಿಯಷ್ಟು ದಾಖಲಾಗುತ್ತಿದೆ. ಆದರೆ ಈ ಬಾರೀ ಅತೀ ಹೆಚ್ಚು ಬಿಸಿಗಾಳಿ ಕೂಡ ಅಬ್ಬರಿಸುತ್ತಿದೆ. ಇದು ತಾಪಮಾನದ ಹೊಡೆತಕ್ಕಿಂತ ಹೆಚ್ಚು ಭಯಾನಕವಾಗಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ಸೂಚಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿ, ರಾಯಚೂರಲ್ಲಿ ಕುಡಿಯುವ ನೀರಿಗೂ ಪರದಾಟ: ರಸ್ತೆ ತಡೆದು ಪ್ರತಿಭಟನೆ

ಹೀಟ್ ವೇವ್ ಹೆಚ್ಚಾಗುತ್ತಿರುವುದರಿಂದ ಜನರು ಹೈರಾಣಾಗುವಂತೆ ಮಾಡುತ್ತಿದೆ. ಬಿಸಿಲ ಬೇಗೆಗಿಂತಲೂ ಬಿಸಿಗಾಳಿ ಜನರನ್ನ ಕುಗ್ಗಿಸುತ್ತಿದೆ. ಮಧ್ಯಾಹ್ನದ ವೇಳೆ ಹೊರಗಡೆ ಓಡಾಡದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಬಿಸಿಗಾಳಿಯಿಂದ ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಇರತ್ತೆ. ಓರ್ವ ವ್ಯಕ್ತಿಗೆ ಬಿಸಿಲಿನಿಂದ ಹೀಟ್ ಸ್ಟ್ರೋಕ್ ಆದರೆ ಪ್ರಾಣಾಪಾಯ ಸಾಧ್ಯತೆ ಕೂಡ ಇರತ್ತೆ.

ಹೀಟ್ ಸ್ಟ್ರೋಕ್ ವಾರ್ಡ್ ಸಿದ್ಧ

ಮೆದುಳಿನ ಮೇಲೆ ತೀರಾ ಗಂಭೀರ ಸಮಸ್ಯೆಯನ್ನು ಉಂಟುಮಾಡತ್ತೆ. ಹೀಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ಸಿದ್ಧಪಡಿಸಲಾಗಿದೆ. ಹೀಟ್ ಸ್ಟ್ರೋಕ್ ವಾರ್ಡ್ ಅನ್ನ ಪ್ರತ್ಯೇಕವಾಗಿರಿಸಿ, ಬಿಸಿಲಿನ ಹೊಡೆತದ ಪರಿಣಾಮದಿಂದಾಗಿ ತೀರಾ ಆರೋಗ್ಯ ಸಮಸ್ಯೆ ಎದುರಿಸುವವರು ಹಾಗೂ ಹೀಟ್ ಸ್ಟ್ರೋಕ್​ಗೆ ಒಳಗಾಗಿರುವವರಿಗಾಗಿಯೇ ಹೀಟ್ ಸ್ಟ್ರೋಕ್ ವಾರ್ಡ್ ಸಿದ್ಧಡಿಸಲಾಗಿದೆ. ಐದು ಹೈಟೆಕ್ ಬೆಡ್​ಗಳನ್ನೊಳಗೊಂಡ ಹೀಟ್ ಸ್ಟ್ರೋಕ್ ವಾರ್ಡ್​ನಲ್ಲಿ ವೆಂಟಿಲೇಟರ್ ಸೇರಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರಗಳನ್ನ ಸಿದ್ಧಪಡಿಸಲಾಗಿದೆ.

ತಜ್ಞ ವೈದ್ಯ ಡಾ.ಅರುಣ್ ಮಸ್ಕಿ ಹೇಳಿದ್ದಿಷ್ಟು 

ಹೀಟ್ ಸ್ಟ್ರೋಕ್​​ನಿಂದಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞ ವೈದ್ಯ ಡಾ.ಅರುಣ್ ಮಸ್ಕಿ ಕಳವಳ ವ್ಯಕ್ತಪಡಿಸಿದ್ದಾರೆ. ಬಿಸಿಗಾಳಿ ಹೊಡೆತಕ್ಕೆ ಮನುಷ್ಯರ ಮೇಲೆ ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಇರತ್ತೆ. ಇದು ತೀರಾ ಗಂಭೀರ ಸಮಸ್ಯೆಯನ್ನುಂಟು ಮಾಡತ್ತೆ. ಕೆಲವೊಮ್ಮೆ ಜೀವಕ್ಕೆ ಕುತ್ತುತರುವ ಸಾಧ್ಯತೆಯೂ ಇರತ್ತೆ. ಬಿಸಿಲಿನಿಂದ ನಿರ್ಜಲೀಕರಣದ ಜೊತೆಗೆ ಹೀಟ್ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರದಿಂದಿರಬೇಕು ಅಂತ ತಜ್ಞರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *