Headlines

4000 ಕೋಟಿ ಗಳಿಸಿದ ‘ದಿ ಆಡಸ್ಸಿ’, ಭಾರತದಲ್ಲಿ ಗಳಿಸಿದ್ದೆಷ್ಟು? – Kannada News | The Odyssey movie world box office collection and Indian box office collection

ಕ್ರಿಸ್ಟೋಫರ್ ನೊಲನ್ ‘ದಿ ಆಡಸ್ಸಿ’ (The Odyssey) ಸಿನಿಮಾ ಬಿಡುಗಡೆ ಆಗಿ ಒಂದು ವಾರವಾಗಿದೆಯಷ್ಟೆ. ಜುಲೈ 17ಕ್ಕೆ ಈ ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಸಂಪೂರ್ಣ ಐಮ್ಯಾಕ್ಸ್​​​ನಲ್ಲೇ ಚಿತ್ರೀಕರಣಗೊಂಡಿದ್ದ ಈ ಸಿನಿಮಾ, ವಿಶ್ವದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿತ್ತು. ಇದೀಗ ‘ದಿ ಆಡಸ್ಸಿ’ ಸಿನಿಮಾ ಕೇವಲ ಒಂದು ವಾರದಲ್ಲಿ ವಿಶ್ವದಾದ್ಯಂತ ಸುಮಾರು 4000 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲೂ ಈ ಸಿನಿಮಾಕ್ಕೆ ಭಾರಿ ಬೇಡಿಕೆ ಇತ್ತು. ಅಷ್ಟಕ್ಕೂ ಭಾರತದಲ್ಲಿ ಈ ಸಿನಿಮಾ ಮೊದಲ ವಾರ ಎಷ್ಟು ಮೊತ್ತ ಗಳಿಕೆ ಮಾಡಿದೆ?

ಹಾಲಿವುಡ್​​ನ ಸೂಪರ್ ಸ್ಟಾರ್ ನಟರುಗಳಾಗಿರುವ ಮ್ಯಾಟ್ ಡೇಮನ್, ಸ್ಪೈಡರ್​ಮ್ಯಾನ್ ಖ್ಯಾತಿಯ ಟಾಮ್ ಹಾಲಂಡ್, ಅನ್ನಾ ಹಾಥ್​​ವೇ, ಜೆಂಡೆಯಾ, ಪ್ಯಾಟ್ರಿಕ್ ಇನ್ನೂ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಭಾರತದಲ್ಲಿ ದಾಖಲೆಯನ್ನೇ ಬರೆದಿದೆ. ಸಿನಿಮಾ ಬಿಡುಗಡೆ ಆದ ಕೇವಲ ಒಂದು ವಾರದಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮಾಡಿದ ಅತ್ಯಂತ ವಿರಳ ಹಾಲಿವುಡ್ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ ‘ದಿ ಆಡಸ್ಸಿ’.

‘ದಿ ಆಡಸ್ಸಿ’ ಸಿನಿಮಾ ಬಿಡುಗಡೆ ಆದ ಮೊದಲ ವಾರಾಂತ್ಯಕ್ಕೆ ಅಂದರೆ ಮೊದಲ ಮೂರೇ ದಿನದಲ್ಲಿ ಸುಮಾರು 60 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿತ್ತು. ಆ ಬಳಿಕವೂ ಸಹ ಸಿನಿಮಾದ ಕಲೆಕ್ಷನ್ ತಗ್ಗಿಲ್ಲ, ವಾರದ ದಿನಗಳಲ್ಲಿಯೂ ಸಹ ಸಿನಿಮಾ ಅನ್ನು ಪ್ರೇಕ್ಷಕರು ನಿಯಮಿತವಾಗಿ ವೀಕ್ಷಿಸಿದ್ದು, ಇದೇ ಕಾರಣಕ್ಕೆ ಸಿನಿಮಾ ಈಗ ಕೇವಲ ಒಂದು ವಾರದಲ್ಲೇ 100 ಕೋಟಿ ಗಳಿಕೆ ಮಾಡಿದೆ. ಆದರೆ ಸಿನಿಮಾದ ಗಳಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇನ್ನೊಂದು ವಾರದ ಒಳಗೆ ಈ ಸಿನಿಮಾ ಭಾರತದಲ್ಲಿ ತನ್ನ ಬಾಕ್ಸ್ ಆಫೀಸ್ ಪಯಣ ಮುಗಿಸಬಹುದಾಗಿದೆ.

ಇದನ್ನೂ ಓದಿ:‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್​​ಗಳು ಸೋಲ್ಡ್ ಔಟ್

‘ದಿ ಆಡಸ್ಸಿ’ ಸಿನಿಮಾ ವಿಶ್ವದಾದ್ಯಂತ ನಾಲ್ಕು ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಅದರಲ್ಲಿ ಅಮೆರಿಕ ಮತ್ತು ಕೆನಡಾನಲ್ಲಿ ಅತಿ ಹೆಚ್ಚು ಮೊತ್ತ ಗಳಿಕೆ ಮಾಡಿದೆ ಸಿನಿಮಾ. ಈ ಎರಡು ದೇಶಗಳಲ್ಲಿ ಸುಮಾರು 1800 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಮುಂದಿನ ವಾರ ಅಂದರೆ ಜುಲೈ 30ರಂದು ‘ಸ್ಪೈಡರ್​​ಮ್ಯಾನ್’ ಸರಣಿಯ ಹೊಸ ಸಿನಿಮಾ ಆಗಿರುವ ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾಕ್ಕೆ ‘ದಿ ಆಡಸ್ಸಿ’ಗಿಂತಲೂ ಹೆಚ್ಚಿನ ಪ್ರೇಕ್ಷಕರು, ಅಭಿಮಾನಿಗಳು ಭಾರತದಲ್ಲಿದ್ದಾರೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಭಾರತದಲ್ಲಿ ಬಲು ಜೋರಾಗಿ ನಡೆಯುತ್ತಿದೆ. ‘ಸ್ಪೈಡರ್​​ಮ್ಯಾನ್’ ಸಿನಿಮಾ ಬಿಡುಗಡೆ ಆದರೆ ‘ದಿ ಆಡಸ್ಸಿ’ ಸಿನಿಮಾ ಅದಕ್ಕಾಗಿ ಜಾಗ ಬಿಟ್ಟುಕೊಡಬೇಕಾಗಿದೆ. ಹಾಗಾಗಿ ‘ದಿ ಆಡಸ್ಸಿ’ ಸಿನಿಮಾದ ಮೇಲೆ ‘ಸ್ಪೈಡರ್​​ಮ್ಯಾನ್’ ದೊಡ್ಡ ಪರಿಣಾಮವನ್ನೇ ಬೀರಲಿದೆ.

‘ದಿ ಆಡಸ್ಸಿ’ ಸಿನಿಮಾವನ್ನು ಕ್ರಿಸ್ಟೊಫರ್ ನೋಲನ್ ನಿರ್ದೇಶಿಸಿದ್ದು, 8ನೇ ಶತಮಾನದಲ್ಲಿ ಕುರುಡು ಕವಿ ಹೋಮರ್ ಎಂಬಾತ ಬರೆದಿದ್ದಾನೆ ಎನ್ನಲಾದ ಸಾಹಿತ್ಯವನ್ನು ಆಧರಿಸಿದ ಕತೆಯನ್ನು ಸಿನಿಮಾ ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *