Headlines

ಗೂಗಲ್ ಅಕೌಂಟ್​ಗೆ ಸೈನ್ ಇನ್ ಆಗಲು, ರಿಕವರಿ ಮಾಡಲು ಸೆಲ್ಫಿ ವಿಡಿಯೊ – Kannada News | Selfie video option to sign in and recovery of Google account

ಬೆಂಗಳೂರು, ಜುಲೈ 24: ಗೂಗಲ್ ತನ್ನ ಬಳಕೆದಾರರಿಗಾಗಿ ‘ಸೆಲ್ಫಿ ವೀಡಿಯೊ’ (Selfie Video) ಮೂಲಕ ಖಾತೆಗೆ ಸೈನ್-ಇನ್ (Sign-in) ಹಾಗೂ ಖಾತೆ ಮರುಪಡೆಯುವ (Account Recovery) ಹೊಸ ಫೀಚರ್ ಅನ್ನು ಪರಿಚಯಿಸಿದೆ. ಪಾಸ್‌ವರ್ಡ್ ಮರೆತಾಗ ಅಥವಾ ರಿಕವರಿ ಫೋನ್ ಸಂಖ್ಯೆ/ಇಮೇಲ್ ಲಭ್ಯವಿಲ್ಲದಿದ್ದಾಗ ಬಳಕೆದಾರರು ತಮ್ಮ ಖಾತೆಯನ್ನು ಸುಲಭವಾಗಿ ಮರಳಿ ಪಡೆಯಲು ಇದು ನೆರವಾಗುತ್ತದೆ. ಇದು ಕೇವಲ ಐಚ್ಛಿಕವಾಗಿರುತ್ತದೆ. ಅಕೌಂಟ್ ರಿಕವರಿಗೆ ಈಗಿರುವ ಪಾಸ್​ಕೀ, ಒಟಿಪಿ ವಿಧಾನಗಳೂ ಇರುತ್ತವೆ. ಈಗ ಹೆಚ್ಚುವರಿ ಆಯ್ಕೆಯಾಗಿ ಸೆಲ್ಫಿ ವಿಡಿಯೋ ಫೀಚರ್ ಬಿಡುಗಡೆ ಮಾಡಲಾಗಿದೆ.

ಸೆಲ್ಫಿ ವಿಡಿಯೋ ಸೆಟಪ್ ಮಾಡುವ ಕ್ರಮ

  • ನಿಮ್ಮ ಗೂಗಲ್ ಖಾತೆಯ Security & Sign-in ವಿಭಾಗಕ್ಕೆ ಹೋಗಿ ‘Selfie Video’ ಆಯ್ಕೆಯನ್ನು ಆರಿಸಿಕೊಳ್ಳಿ.
  • ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಕ್ಯಾಮೆರಾವನ್ನು ನೋಡಿ, ಪರದೆಯ ಮೇಲಿನ ಸೂಚನೆಯಂತೆ ತಲೆಯನ್ನು ಬೇರೆ ಬೇರೆ ಕೋನಗಳಲ್ಲಿ ತಿರುಗಿಸಿ (Guided Head Movements).
  • ಇದು ನಿಮ್ಮ ಮುಖದ ವಿವರಗಳನ್ನು ಸುರಕ್ಷಿತವಾಗಿ ದಾಖಲಿಸಿ ‘ರೆಫರೆನ್ಸ್ ವೀಡಿಯೊ’ ಆಗಿ ಸಂಗ್ರಹಿಸಿಟ್ಟುಕೊಳ್ಳುತ್ತದೆ.

ಇದನ್ನೂ ಓದಿ: ಯುಪಿಐ ಬಳಕೆದಾರರ ಆ್ಯಪ್ ಆಯ್ಕೆಗಳ ಮೇಲೆ ಪ್ರಭಾವ ಬೀರುತ್ತಿವೆಯಾ ರಿವಾರ್ಡ್ಸ್, ಕ್ಯಾಷ್​​ಬ್ಯಾಕ್ ಆಫರ್​ಗಳು?

ಖಾತೆಗೆ ಲಾಗಿನ್ ಅಥವಾ ರಿಕವರಿಗೆ ಸೆಲ್ಫಿ ವಿಡಿಯೋ ಬಳಸುವ ಕ್ರಮ

  • ಲಾಗಿನ್ ಆಗಲು ತೊಂದರೆಯಾದಾಗ “Sign in with Selfie Video” ಆಯ್ಕೆಯನ್ನು ಬಳಸಿ.
  • ಗೂಗಲ್ ಸೂಚಿಸಿದಂತೆ ಕ್ಯಾಮೆರಾ ಮುಂದೆ ಲೈವ್ ಆಗಿ ಮುಖ ತೋರಿಸಿ ತಲೆ ತಿರುಗಿಸಬೇಕು.
  • ಗೂಗಲ್ ತನ್ನ ಸಿಸ್ಟಮ್‌ನಲ್ಲಿ ಸಂಗ್ರಹವಾಗಿರುವ ಹಳೆಯ ವೀಡಿಯೊಗೆ ಹೊಸ ವೀಡಿಯೊವನ್ನು ಹೋಲಿಸಿ, ನೀವೇ ನಿಜವಾದ ಬಳಕೆದಾರರೆಂದು ಖಚಿತಪಡಿಸಿಕೊಂಡು ಲಾಗಿನ್ ಮಾಡಲು ಅನುಮತಿ ನೀಡುತ್ತದೆ.

ಇದನ್ನೂ ಓದಿ: ಇಸ್ರೇಲ್​ಗೆ ಶೇ 12.5, ಭಾರತಕ್ಕೆ ಶೇ. 10 ಸುಂಕ; ಅಮೆರಿಕದ ಪರಮಮಿತ್ರ ದೇಶಕ್ಕೆ ಹೆಚ್ಚಿನ ಟ್ಯಾರಿಫ್ ಯಾಕೆ?

ಸುರಕ್ಷತೆ ಮತ್ತು ಗೌಪ್ಯತೆ (Privacy & Security)

  • ಈ ವೀಡಿಯೊವನ್ನು ಎನ್‌ಕ್ರಿಪ್ಟ್ ಮಾಡಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ.
  • ಬಳಕೆದಾರರು ಬಯಸಿದಾಗ ತಮ್ಮ ಗೂಗಲ್ ಸೆಟ್ಟಿಂಗ್ಸ್‌ನಿಂದ ಈ ವೀಡಿಯೊವನ್ನು ಸಂಪೂರ್ಣವಾಗಿ ಅಳಿಸಿಹಾಕಬಹುದು.
  • ಎಐ (AI) ಫೋಟೋಗಳು ಅಥವಾ ನಕಲಿ ವೀಡಿಯೊಗಳನ್ನು (Deepfake) ಬಳಸಿ ಖಾತೆ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ‘ಲೈವ್ ಮೂವ್‌ಮೆಂಟ್ಸ್’ (ಚಲನೆಗಳು) ಕಡ್ಡಾಯಗೊಳಿಸಲಾಗಿದೆ.

ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, Workspace ಖಾತೆಗಳು, ಮಕ್ಕಳ ಖಾತೆಗಳು (Child Accounts) ಮತ್ತು ಅಡ್ವಾನ್ಸ್ಡ್ ಪ್ರೊಟೆಕ್ಷನ್ ಪ್ರೋಗ್ರಾಂನಲ್ಲಿರುವ ಖಾತೆಗಳಿಗೆ ಈ ಸೌಲಭ್ಯ ಲಭ್ಯವಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *