ಇಂಗ್ಲೆಂಡ್‌ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂಲಕ ನ್ಯೂಝಿಲೆಂಡ್ನ ಟಾಮ್ ಲ್ಯಾಥಮ್ ಮತ್ತು ಡೆವೊನ್ ಕಾನ್ವೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಮೊದಲ ವಿಕೆಟ್‌ಗೆ ತ್ರಿಶತಕದ ಜೊತೆಯಾಟವಾಡುವ ಮೂಲಕ ಎಂಬುದು ವಿಶೇಷ. (PC: getty images)
ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡಕ್ಕೆ ಟಾಮ್ ಲ್ಯಾಥಮ್ ಹಾಗೂ ಡೆವೊನ್ ಕಾನ್ವೆ ಭರ್ಜರಿ ಆರಂಭ ಒದಗಿಸಿದ್ದರು. ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ಇನಿಂಗ್ಸ್ ಕಟ್ಟಿದ ಈ ಜೋಡಿಯು ಮೊದಲ ವಿಕೆಟ್‌ಗೆ ಪೇರಿಸಿದ್ದು ಬರೋಬ್ಬರಿ 317 ರನ್ಗಳು. (PC: getty images)
214 ಎಸೆತಗಳನ್ನು ಎದುರಿಸಿದ ಟಾಮ್ ಲ್ಯಾಥಮ್ 15 ಬೌಂಡರಿಗಳೊಂದಿಗೆ 151 ರನ್ ಗಳಿಸಿದರೆ, ಡೆವೊನ್ ಕಾನ್ವೆ 224 ಎಸೆತಗಳಲ್ಲಿ 22 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 157 ರನ್ ಚಚ್ಚಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನ್ಯೂಝಿಲೆಂಡ್ ಪರ ಮೊದಲ ವಿಕೆಟ್‌ಗೆ ಗರಿಷ್ಠ ರನ್‌ಗಳ ಜೊತೆಯಾಟವಾಡಿದ ಜೋಡಿ ಎನಿಸಿಕೊಂಡರು. (PC: getty images)
ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧ ನ್ಯೂಝಿಲೆಂಡ್ ಪರ ಯಾವುದೇ ವಿಕೆಟ್‌ಗೆ ಗರಿಷ್ಠ ರನ್‌ಗಳ ಜೊತೆಯಾಟದ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡರು. ಇದಕ್ಕೂ ಈ ದಾಖಲೆ ಸ್ಟೀವ್ ಡೆಂಪ್ಸ್ಟರ್ ಮತ್ತು ಜಾಕಿ ಮಿಲ್ಸ್ ಹೆಸರಿನಲ್ಲಿತ್ತು. ಈ ಜೋಡಿಯು 1930ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 276 ರನ್ ಕಲೆಹಾಕಿದ್ದರು. (PC: getty images)
ಇದೀಗ ಬರೋಬ್ಬರಿ 96 ವರ್ಷಗಳ ಬಳಿಕ ಟಾಮ್ ಲ್ಯಾಥಮ್ ಮತ್ತು ಡೆವೊನ್ ಕಾನ್ವೆ ಜೋಡಿಯು ನ್ಯೂಝಿಲೆಂಡ್ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ 317 ರನ್‌ಗಳ ಮೊದಲ ವಿಕೆಟ್ ಜೊತೆಯಾಟದೊಂದಿಗೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಹರ್ಷಲ್ ಗಿಬ್ಸ್ ನಂತರ 2 ಬಾರಿ 300ಕ್ಕೂ ಹೆಚ್ಚು ರನ್‌ಗಳ ಆರಂಭಿಕ ಜೊತೆಯಾಟವಾಡಿದ ವಿಶ್ವದ 2ನೇ ಜೋಡಿ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. (PC: getty images)
Published On – 11:33 am, Sat, 27 June 26
