All posts by nagaraj11081993

4 ಸೀಸನ್​ಗಳಲ್ಲಿ 3 ಬಾರಿ ‘ಸನ್​ರೈಸರ್ಸ್’​ ಚಾಂಪಿಯನ್ಸ್ – Kannada News | SA20 Final 2026: Sunrisers Eastern Cape seal third title in four years

ಸೌತ್ ಆಫ್ರಿಕಾ ಟಿ20 ಲೀಗ್​ನ 4ನೇ ಸೀಸನ್​ನಲ್ಲೂ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೇಪ್​ ಟೌನ್​ನ ನ್ಯೂಲ್ಯಾಂಡ್ಸ್​ ಸ್ಟೇಡಿಯಂನಲ್ಲಿ ನಡೆದ ಈ ಬಾರಿಯ ಫೈನಲ್​ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಹಾಗೂ ಸನ್​ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡದ ನಾಯಕ ಟ್ರಿಸ್ಟನ್ ಸ್ಟಬ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿದ್ದರು.

ಈ ಗುರಿಯನ್ನು 19.2 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್  ತಂಡವು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರನೇ ಬಾರಿ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇದಕ್ಕೂ ಮುನ್ನ 2023 ಮತ್ತು 2024 ರಲ್ಲಿ ಸನ್​ರೈಸರ್ಸ್ ಈಸ್ಟರ್ಸ್​ ಕೇಪ್ ತಂಡ ಚಾಂಪಿಯನ್ ಪಟ್ಟಕ್ಕೇರಿದ್ದರು. ಇನ್ನು 2025 ರಲ್ಲಿ ರನ್ನರ್​ ಅಪ್ ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Source link

ತುಮಕೂರು: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; ಸ್ಥಳದಲ್ಲೇ ಮೂವರ ದುರ್ಮರಣ! – Kannada News | Tumakuru Fatal Accident: 3 Dead in NH 48 Car Lorry Crash Near Nelahal

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; ಸ್ಥಳದಲ್ಲೇ ಮೂವರ ದುರ್ಮರಣ!

ತುಮಕೂರು, ಜನವರಿ 26: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ತುಮಕೂರು (Tumakuru) ತಾಲೂಕಿನ ನೆಲಹಾಳ್ ಸಮೀಪ ಇಂದು ಬೆಳಗ್ಗೆ ನಡೆದಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತರೆಲ್ಲರೂ ಬೆಂಗಳೂರು ಮೂಲದ ನಿವಾಸಿಗಳು ಎಂದು ಹೇಳಲಾಗಿದೆ.

ಮೃತರು ಬೆಂಗಳೂರಿನ ನಿವಾಸಿಗಳು

ಅಪಘಾತದಲ್ಲಿ ಮಾರುತಿ ಎರ್ಟಿಗಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಇನ್ನಿಬ್ಬರು ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರೆಲ್ಲರೂ ಬೆಂಗಳೂರು ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ.

ಪ್ರವಾಸಕ್ಕೆ ತೆರಳಿ ವಾಪಸ್ ಬರುವಾಗ ದುರಂತ

ಮೃತರು ಗೋಕರ್ಣ, ಮುರುಡೇಶ್ವರ ಹಾಗೂ ಉಡುಪಿ ಕಡೆ ಪ್ರವಾಸಕ್ಕೆ ತೆರಳಿದ್ದು, ಪ್ರವಾಸ ಮುಗಿಸಿ ಇಂದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆವಿ ಹಾಗೂ ಕೋರಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

Source link

Republic Day 2026 Parade Live: ದೆಹಲಿಯ ಕರ್ತವ್ಯಪಥದಿಂದ ಗಣರಾಜ್ಯೋತ್ಸವ ಸಂಭ್ರಮದ ನೇರ ಪ್ರಸಾರ – Kannada News | Republic Day 2026 Live Updates watch online 77th parade Prime Minister Narendra Modi, President Droupadi Murmu, Chief Guests Speech in Kannada

ನವದೆಹಲಿ, ಜನವರಿ 26: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 77ನೇ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರ್ತವ್ಯ ಪಥದಲ್ಲಿ ಪರೇಡ್, ಪ್ರಧಾನಿ ಮೋದಿ ಭಾಷಣ ಸೇರಿ ಇತರ ಕಾರ್ಯಕ್ರಮಗಳು ಸಂಭ್ರಮದಿಂದ ಇಂದು ಜರಗುತ್ತಿವೆ. ಈ ಬಾರಿ ಪಥಸಂಚಲನದಲ್ಲಿ ಆಪರೇಷನ್‌ ಸಿಂಧೂರ್‌ ಅನ್ನು ವಾಯುಪಡೆ ಪ್ರದರ್ಶಿಸಲಿದೆ. ‘ಆಪರೇಷನ್ ಸಿಂಧೂರ್’ನಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ವಾಯುಪಡೆಯ ಶಕ್ತಿ ತೋರಿಸಲಿವೆ. ಯೂರೋಪಿಯನ್‌ ಕೌನ್ಸಿಲ್ ಅಧ್ಯ ಆಂಟೋನಿಯಾ ಕೋಸ್ಟಾ ಹಾಗೂ ಯೂರೋಪಿಯನ್‌ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್‌ ಡೆರ್‌ ಅತಿಥಿಗಳಾಗಿ ಈ ಎಲ್ಲ ಸಂಭ್ರಮವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Republic Day 2026: 77ನೇ ಗಣರಾಜ್ಯೋತ್ಸವಕ್ಕೆ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ – Kannada News | PM Modi, President Draupati murmu and State CM’s Wishes on Republic Day 2026

77ನೇ ಗಣರಾಜ್ಯೋತ್ಸವಕ್ಕೆ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ

ಬೆಂಗಳೂರು, ಜನವರಿ 26: ಇಂದು ದೇಶಾದ್ಯಂತ 77ನೇ ಗಣರಾಜ್ಯೋತ್ಸವವನ್ನು (Republic Day 2026) ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ (Narendra Modi) ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಜನತೆಗೆ ಶುಭ ಕೋರಿದ್ದಾರೆ. ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಭವ್ಯ ಗಣರಾಜ್ಯೋತ್ಸವ ಪರೇಡ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧ್ಯಕ್ಷತೆ ವಹಿಸಿದ್ದಾರೆ. ಈ ವರ್ಷದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಭಾಗವಹಿಸಿರುವುದು ವಿಶೇಷ.

ಶುಭ ಕೋರಿದ ಪ್ರಧಾನಿ ಮೋದಿ

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ X ಖಾತೆಯ ಮೂಲಕ ದೇಶದ ಜನತೆಗೆ ಹೃತ್ಪೂರ್ವಕವಾಗಿ ಶುಭಾಶಯ ಕೋರಿದ್ದಾರೆ. ಭಾರತದ ಗೌರವ, ಹೆಮ್ಮೆ ಮತ್ತು ವೈಭವದ ಸಂಕೇತವಾದ ಗಣರಾಜ್ಯೋತ್ಸವವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿ ಹಾಗೂ ಉತ್ಸಾಹವನ್ನು ತುಂಬಲಿ ಎಂದು ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿರುವ ಪ್ರಧಾನಿ, ನಮ್ಮ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸೋಣ ಎಂದು ಸಂದೇಶ ನೀಡಿದ್ದಾರೆ.

ಗಣರಾಜ್ಯೋತ್ಸವಕ್ಕೆ ಶುಭಕೋರಿದ ರಾಷ್ಟ್ರಪತಿ

ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ತಮ್ಮ X ಖಾತೆಯ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿ, ಎಲ್ಲರ ಜೀವನವು ಸಂತೋಷ, ಶಾಂತಿ, ಭದ್ರತೆ ಮತ್ತು ಸಾಮರಸ್ಯದಿಂದ ತುಂಬಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರವನ್ನುದ್ದೇಶಿಸಿ ಪ್ರೇರಣಾದಾಯಕ ಭಾಷಣ ಮಾಡಿದ್ದರು. ಸಂವಿಧಾನದ ಅನನ್ಯತೆ, ಸಾಮೂಹಿಕ ಮನೋಭಾವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬ ನಾಗರಿಕರು ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತು ಭಾರತವನ್ನು ಅಭಿವೃದ್ಧಿಗೊಳಿಸಬೇಕೆಂದು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಜಾತಿ, ಧರ್ಮ ಮುಖ್ಯವಲ್ಲ’; ರೆಹಮಾನ್​ಗೆ ತಿರುಗೇಟು ಕೊಟ್ಟ ರಾಮ್ ಗೋಪಾಲ್ ವರ್ಮ – Kannada News | A.R. Rahman’s Bollywood Controversy: RGV Rejects Communal Discrimination Claims

‘ಆಸ್ಕರ್’ ಮತ್ತು ‘ಗೋಲ್ಡನ್ ಗ್ಲೋಬ್’ ನಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದ ಸಂಗೀತ ಸಂಯೋಜಕ ಮತ್ತು ಗಾಯಕ ಎ.ಆರ್. ರೆಹಮಾನ್ ಕಳೆದ ಕೆಲವು ದಿನಗಳಿಂದ ವಿವಾದದಲ್ಲಿ ಸಿಲುಕಿದ್ದಾರೆ. ಸಂದರ್ಶನವೊಂದರಲ್ಲಿ ಬಾಲಿವುಡ್ ಉದ್ಯಮದ ಬಗ್ಗೆ ಅವರು ನೀಡಿದ ಹೇಳಿಕೆಯಿಂದಾಗಿ ಈ ವಿವಾದ ಉಂಟಾಗಿದೆ. ಈ ಸಂದರ್ಶನದಲ್ಲಿಕಳೆದ ಎಂಟು ವರ್ಷಗಳಿಂದ ಬಾಲಿವುಡ್‌ನಲ್ಲಿ ತಮಗೆ ಕೆಲಸ ಸಿಕ್ಕಿಲ್ಲ ಎಂದು ರೆಹಮಾನ್ ಹೇಳಿದ್ದರು. ಬಾಲಿವುಡ್ ಉದ್ಯಮದಲ್ಲಿನ ಕೋಮು ತಾರತಮ್ಯ ಇದಕ್ಕೆ ಕಾರಣ ಎಂದು ಅವರು ಹೇಳಿದ್ದರು. ಆರ್​​ಜಿವಿ (ಆರ್​​ಜಿವಿ) ಇದಕ್ಕೆ ಪ್ರತಿಕ್ರಿಯಿಸಿದ್ದರು.

ಇತ್ತೀಚಿನ ಸಂದರ್ಶನವೊಂದರಲ್ಲಿ, ರಾಮ್ ಗೋಪಾಲ್ ವರ್ಮ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ರೆಹಮಾನ್ ನೀಡಿದ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಏಕೆಂದರೆ ಅದರಲ್ಲಿ ನನಗೆ ಯಾವುದೇ ಸತ್ಯ ಕಾಣುತ್ತಿಲ್ಲ. ಚಲನಚಿತ್ರೋದ್ಯಮವು ಹಣ ಗಳಿಸುವುದರ ಬಗ್ಗೆ ಮಾತ್ರ ಆಗಿರುತ್ತದೆ. ಜಾತಿ, ಧರ್ಮ ಅಥವಾ ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಇಲ್ಲಿ ಮುಖ್ಯವಲ್ಲ. ದಕ್ಷಿಣ ಭಾರತದ ನಿರ್ದೇಶಕರು ಬ್ಲಾಕ್‌ಬಸ್ಟರ್‌ಗಳನ್ನು ನೀಡುತ್ತಿದ್ದಾರೆ. ಜನರು ಅವರ ಬಳಿಗೆ ಹೋಗುತ್ತಾರೆ’ ಎಂದರು ಅವರು.

‘ನಿರ್ದೇಶಕ ಸೂರಜ್ ಬರ್ಜತ್ಯ ‘ಮೈನೆ ಪ್ಯಾರ್ ಕಿಯಾ’ ಮತ್ತು ‘ಹಮ್ ಆಪ್ಕೆ ಹೈ ಕೌನ್’ ಚಿತ್ರಗಳಿಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಸಹಿ ಹಾಕಿದಾಗ, ಆ ಚಿತ್ರಗಳಲ್ಲಿನ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಅದಕ್ಕಾಗಿಯೇ ಅವರು ಅವುಗಳನ್ನು ಆಯ್ಕೆ ಮಾಡಿಕೊಂಡರು. ಅದರ ನಂತರ, ಇತರ ಹಾಡುಗಳು ಚೆನ್ನಾಗಿ ಬರಲಿಲ್ಲ. ಹೀಗಾಗಿ ಅವರ ಕೈ ಬಿಟ್ಟರು. ಗಾಯಕ ಹಿಂದಿ, ತೆಲುಗು ಅಥವಾ ತಮಿಳು ಆಗಿರಲಿ. ಅದು ಅಪ್ರಸ್ತುತವಾಗುತ್ತದೆ’ ಎಂದು ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಚಿರಂಜೀವಿಗೆ ಕ್ಷಮಾಪಣೆ ಕೇಳಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ವೈಯಕ್ತಿಕ ಅನುಭವಗಳ ಆಧಾರದ ಮೇಲೆ ರೆಹಮಾನ್ ಆ ಹೇಳಿಕೆಯನ್ನು ನೀಡಿರಬಹುದು ಎಂದು ಅವರು ಹೇಳಿದರು. ರೆಹಮಾನ್ ಪರವಾಗಿ ನಾನು ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಏನಾಯಿತು ಎಂದು ನನಗೆ ತಿಳಿದಿಲ್ಲ. ನಮ್ಮಲ್ಲಿ ಯಾರಾದರೂ ಸಾಮಾನ್ಯ ವಿಷಯಗಳ ಬಗ್ಗೆ ಮಾತ್ರ ಮಾತನಾಡಬಹುದು. ಆದರೆ ಯಾರಾದರೂ ಈ ರೀತಿ ಮಾತನಾಡಲು ಕಾರಣವಾದ ನಿರ್ದಿಷ್ಟ ಘಟನೆಯನ್ನು ಅನುಭವಿಸಿರಬೇಕು. ಅವರಿಗೆ ನಿಜವಾಗಿಯೂ ಇಂತಹದ್ದೇನಾದರೂ ಸಂಭವಿಸಿದೆಯೇ ಎಂದು ನನಗೆ ತಿಳಿದಿಲ್ಲ. ಆದ್ದರಿಂದ ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದು ವರ್ಮಾ ಸ್ಪಷ್ಟಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Happy Republic Day 2026: ಇಲ್ಲಿವೆ ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಗಣರಾಜ್ಯೋತ್ಸವದ ಅರ್ಥಪೂರ್ಣ ಸಂದೇಶಗಳು – Kannada News | Happy Republic Day 2026: Here are meaningful Republic Day messages to send to your loved ones

ಗಣರಾಜ್ಯೋತ್ಸವದ ಶುಭಾಶಯಗಳುImage Credit source: vecteezy

ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಹೇಗೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆಯೋ ಅದೇ ರೀತಿ ಗಣರಾಜ್ಯೋತ್ಸವ ದಿನವನ್ನು (Republic Day) ಸಹ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜನರ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಜೊತೆಗೆ ಗಣರಾಜ್ಯೋತ್ಸವವು ಅಧಿಕಾರವು ಯಾವುದೇ ವ್ಯಕ್ತಿ, ರಾಜ ಅಥವಾ ಸರ್ಕಾರಕ್ಕೆ ಸೇರಿಲ್ಲ, ಬದಲಾಗಿ ಸಂವಿಧಾನ ಮತ್ತು ಜನರಿಗೆ ಸೇರಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಹೀಗೆ ಪ್ರತಿಯೊಬ್ಬ ಭಾರತೀಯನ ಮಹತ್ವದ ದಿನದ ಈ ಸುಸಂದರ್ಭದಲ್ಲಿ ನಿಮ್ಮ ಸ್ನೇಹಿತರು, ಆಪ್ತರೊಂದಿಗೆ ಹಂಚಿಕೊಳ್ಳಲು ಇಲ್ಲಿವೆ ಶುಭ ಸಂದೇಶಗಳು.

ಗಣರಾಜ್ಯೋತ್ಸವದ ಶುಭ ಸಂದೇಶಗಳು:

  • ನಾವೆಲ್ಲರೂ ಒಂದೇ. ಜಗಳ, ದ್ವೇಷ ಬಿಟ್ಟು ಒಗ್ಗಟ್ಟಾಗಿ ಮುನ್ನಡೆಯೋಣ, ಗಣರಾಜ್ಯೋತ್ಸವದ ಶುಭಾಶಯಗಳು.
  • ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡೋಣ, ಪ್ರಜಾಪ್ರಭುತ್ವದ ಹಬ್ಬವನ್ನು ಒಟ್ಟಾಗಿ ಆಚರಿಸೋಣ. ಹ್ಯಾಪಿ ರಿಪಬ್ಲಿಕ್‌ ಡೇ.
  • ಗಣರಾಜ್ಯೋತ್ಸವದ ಶುಭಾಶಯಗಳು, ಪ್ರಜಾಪ್ರಭುತ್ವದ ದೇಶ ಸಮೃದ್ಧಿಯಾಗಲು ನಾವೆಲ್ಲಾ ಶ್ರಮಿಸೋಣ.
  • ಈ ಗಣರಾಜ್ಯೋತ್ಸವದಂದು, ನಾವು ಸಂವಿಧಾನವನ್ನು ಗೌರವಿಸುತ್ತೇವೆ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡುತ್ತೇವೆ ಎಂದು ಪ್ರತಿಜ್ಞೆ ಮಾಡೋಣ.
  • ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ನಾವು ಇಂದು ನಮ್ಮ ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ಈ ಸ್ವಾತಂತ್ರ್ಯಕ್ಕೆ ನಮ್ಮ ಹೆಮ್ಮೆಯ ಸಂವಿಧಾನ ಇನ್ನಷ್ಟು ಬಲ ತಂದಿದೆ. ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
  • ಜೀವನದ ಪ್ರತಿಕ್ಷಣದಲ್ಲೂ ದೇಶವನ್ನು ರಕ್ಷಿಸುವ, ದೇಶದ ಪರ ನಿಂತು ಇನ್ನೂ ಸದೃಢ ಭಾರತವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
  • ಮಹಾನ್‌ ನಾಯಕರೆಲ್ಲಾ ಜನಿಸಿದ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯ. ನಾವು ಭಾರತೀಯರೆಂಬ ಹೆಮ್ಮೆ ಮನಸ್ಸಿಗೆ ಸದಾ ಖುಷಿ ಕೊಡುತ್ತದೆ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
  • ನಮ್ಮ ರಾಷ್ಟ್ರ ವಿಶ್ವದಲ್ಲೇ ಶ್ರೇಷ್ಠವಾದುದು. ಈ ರಾಷ್ಟ್ರವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸೋಣ. ಹಿರಿಯರು ಹಾಕಿಕೊಟ್ಟ ದೇಶಪ್ರೇಮದ ಹಾದಿಯಲ್ಲಿ ಒಟ್ಟಾಗಿ ಸಾಗೋಣ. ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
  • ತ್ರಿವರ್ಣ ಧ್ವಜವು ಕೇವಲ ಧ್ವಜವಲ್ಲ, ಅದು ಪ್ರತಿಯೊಬ್ಬ ಭಾರತೀಯನ ಗೌರವ ಮತ್ತು ಸ್ವಾಭಿಮಾನದ ಸಂಕೇತವಾಗಿದೆ.
  • ನಾವು ಜವಾಬ್ದಾರಿಯುತ ಮತ್ತು ಜಾಗೃತ ನಾಗರಿಕರಾದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಾಧ್ಯ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
  • ಇಂದು ದೇಶಕ್ಕಾಗಿ ಏನಾದರೂ ಮಾಡುವ ಪ್ರತಿಜ್ಞೆ ಮಾಡುವ ದಿನ. ಗಣರಾಜ್ಯೋತ್ಸವದ ಶುಭಾಶಯಗಳು.
  • ತ್ರಿವರ್ಣ ಧ್ವಜವು ಎತ್ತರದಲ್ಲಿ ಹಾರಲಿ, ನಮ್ಮ ಭಾರತವು ಬಲಿಷ್ಠವಾಗಿರಲಿ, ಗಣರಾಜ್ಯೋತ್ಸವದ ಶುಭಾಶಯಗಳು.
  • ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡೋಣ, ಗಣರಾಜ್ಯೋತ್ಸವದ ಶುಭಾಶಯಗಳು.
  • ಈ ದಿನ ನಾವು ಉತ್ತಮ ನಾಗರಿಕರಾಗಲು ನೆನಪಿಸುತ್ತದೆ, ಗಣರಾಜ್ಯೋತ್ಸವದ ಶುಭಾಶಯಗಳು.
  • ತ್ರಿವರ್ಣ ಧ್ವಜ ನಮ್ಮ ಗೌರವದ ಸಂಕೇತ. ಗಣರಾಜ್ಯೋತ್ಸವದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ಣನ ಟಾರ್ಚರ್​​ಗೆ ಬೇಸತ್ತ ತಂದೆ ರಮೇಶ್; ಮುಂದಿದೆ ಮಾರಿ ಹಬ್ಬ – Kannada News | Karna’s Bold Twist: Zee Kannada Serial Sees Silent Karna Confront Father Ramesh

ಜೀ ಕ್ನಡದ ‘ಕರ್ಣ’ ಧಾರಾವಾಹಿಯಲ್ಲಿ (Karna Serial) ಕರ್ಣ ಇಷ್ಟು ದಿನ ಸೈಲೆಂಟ್ ಆಗಿ ಇರುತ್ತಿದ್ದ. ತಂದೆ ಏನೇ ಹೇಳಿದರೂ ಅದನ್ನು ಸಹಿಸಿಕೊಳ್ಳುತ್ತಿದ್ದ. ಆದರೆ, ಈಗ ಎಲ್ಲವೂ ಬದಲಾಗಿ ಹೋಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಹೌದು, ಕರ್ಣನು ಈಗ ತಂದೆ ರಮೇಶ್​​ಗೆ ಟಾರ್ಚರ್ ಕೊಡುವ ನಿರ್ಧಾರಕ್ಕೆ ಬಂದಿದ್ದಾನೆ. ಈ ಟಾರ್ಚರ್​​ನಿಂದ ತಂದೆ ಬೇಸತ್ತು ಹೋಗುವ ಎಲ್ಲಾ ಲಕ್ಷಣ ಇದೆ.

ಕರ್ಣ ಇಷ್ಟು ದಿನ ತಂದೆಯನ್ನು ಅಪಾರವಾಗಿ ಗೌರವಿಸುತ್ತಿದ್ದ. ಈ ಗೌರವ ಅತಿಯಾಗಿತ್ತು. ತಂದೆಯನ್ನು ಸಾಕಷ್ಟು ಪ್ರೀತಿ ಮಾಡುತ್ತಿದ್ದ. ತಂದೆ ಏನೇ ಹೇಳಿದರೂ ಅದನ್ನು ಸಹಿಸಿಕೊಳ್ಳುತ್ತಿದ್ದ. ಇದನ್ನು ಕರ್ಣನ ತಂದೆ ಅಡ್ವಾಂಟೇಜ್ ಆಗಿ ತೆಗೆದುಕೊಂಡ. ಒಂದು ಮಾಸ್ಟರ್ ಪ್ಲ್ಯಾನ್ ಕೂಡ ಮಾಡಿದ ಎಂದೇ ಹೇಳಬಹುದು.

ತಾನು ಬದಲಾದಂತೆ ತೋರಿಸಿಕೊಂಡ. ಒಳ್ಳೆಯವನ ರೀತಿ ವರ್ತಿಸಿದ. ತೇಜಸ್ ಹಾಗೂ ನಿತ್ಯಾಳ ಮದುವೆ ಸಂದರ್ಭದಲ್ಲಿ ತೇಜಸ್​​ನ ಕಿಡ್ನ್ಯಾಪ್ ಮಾಡಿಸಿದ. ಕಿಡ್ನ್ಯಾಪ್ ಮಾಡಿದ ಬಳಿಕ ಅನಿವಾರ್ಯವಾಗಿ ಕರ್ಣ ಹಾಗೂ ನಿತ್ಯಾ ಮದುವೆ ಮಾಡಿಸಿದ. ಕರ್ಣ ಹಾಗೂ ನಿಧಿ ಪ್ರೀತಿ ಮುರಿದು ಬೀಳುವಂತೆ ಮಾಡಿದ. ಈಗ ಎಲ್ಲವೂ ಬದಲಾಗುವ ಸಮಯ.

ರಮೇಶ್ ತಾನು ಏನೇನು ಪ್ಲ್ಯಾನ್ ಮಾಡಿದ್ದೆ ಎಂಬುದನ್ನು ಹೇಳಿಕೊಳ್ಳುತ್ತಿದ್ದ. ಆ ಸಮಯಕ್ಕೆ ಸರಿಯಾಗಿ ಕರ್ಣ ಅಲ್ಲಿಗೆ ಬಂದು ಕೇಳಿಕೊಂಡ. ಇದನ್ನು ಕೇಳಿ ಕರ್ಣ ‘ದಂಡಂ ದಶಗುಣಂ’ ಎಂದು ಹೇಳಿದ್ದಾನೆ. ಇದರ ನಂತರ ಕರ್ಣನು ಸಂಪೂರ್ಣವಾಗಿ ಬದಲಾಗುವ ಸೂಚನೆ ಕೊಟ್ಟಿದ್ದಾನೆ.

ಕರ್ಣನ ಏಟಿಗೆ ರಮೇಶ್ ತತ್ತಿರಿಸುವ ಸೂಚನೆ ಸಿಕ್ಕಿದೆ. ಇಡೀ ಮನೆಯವರಿಗೆ ಅಡುಗೆ ಮಾಡೋಣ ಎಂದು ಹೇಳಿ ಅಡುಗೆ ಮಾಡಿಸಿದ್ದಾನೆ. ಆ ಬಳಿಕ ರಮೇಶ್ ಬಳಿ ಪಾತ್ರೆ ತೊಳೆಯುವಂತೆ ಹೇಳಿದ್ದಾನೆ.

ಇದನ್ನೂ ಓದಿ: ಹೊಟ್ಟೆಯಲ್ಲಿರೋ ಮಗು ವಿಚಾರ ಹೇಳೇಬಿಟ್ಟ ಕರ್ಣ; ಶಾಕ್ ಆದ ನಿತ್ಯಾ

ಇದೆಲ್ಲವನ್ನೂ ನೋಡಿ ರಮೇಶ್ ಕಂಗಾಲಾಗಿದ್ದಾನೆ. ಕರ್ಣ ಇಷ್ಟು ದಿನ ಸೈಲೆಂಟ್ ಆಗಿ ಇರುತ್ತಿದ್ದರು. ಆದರೆ, ಈಗ ಎಲ್ಲವನ್ನೂ ಸಹಿಸಿಕೊಳ್ಳುವ ಸಮಯ ಅಲ್ಲವೇ ಅಲ್ಲ. ಈ ಬದಲಾವಣೆಯನ್ನು ಸಾಕಷ್ಟು ಇಷ್ಟಪಡುತ್ತಾ ಇದ್ದಾರೆ. ಇದರಿಂದ ಟಿಆರ್​ಪಿ ಏರುವ ಎಲ್ಲಾ ಲಕ್ಷಣ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಿಲ್ಲಿನ ಕಳ್ಳನ ರೀತಿ ಕರೆತಂದ ಪೊಲೀಸರು; ನಟನ ಡೈಲಾಗ್ ಕೇಳಿ ನಕ್ಕ ಆರಕ್ಷಕರು – Kannada News | Gilli’s Humorous Police Escort: Bigg Boss Winner’s Viral ‘Am I a Thief?’ Moment

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ (Gilli Nata) ಅವರು ನಾನಾ ಕಡೆಗಳಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ. ಪ್ರತಿ ವೇದಿಕೆಯಲ್ಲೂ ಅವರಿಗೆ ರಾಜ ಮರ್ಯಾದೆ ಸಿಗುತ್ತಿದೆ. ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆಯುತ್ತಿದ್ದಾರೆ. ಈ ವಿಷಯ ಅವರ ಖುಷಿಗೆ ಕಾರಣ ಆಗಿದೆ. ಬಿಗ್ ಬಾಸ್ ವೀಕ್ಷಕರು ಕೂಡ ಗಿಲ್ಲಿ ಜನಪ್ರಿಯತೆ ಕಂಡು ನಿಬ್ಬರಗಾಗುತ್ತಿದ್ದಾರೆ. ಈಗ ಗಿಲ್ಲಿ ಹೋದಲ್ಲಿ ಬಂದಲ್ಲಿ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಈಗ ಗಿಲ್ಲಿ ಅವರ ಫನ್ ವಿಡಿಯೋ ವೈರಲ್ ಆಗಿದೆ.

ಗಿಲ್ಲಿ ನಟ ಅವರು ಹಲವು ರಿಯಾಲಿಟಿ ಶೋಗಳನ್ನು ನೀಡಿದವರು. ಇದರಿಂದ ಸ್ವಲ್ಪ ಜನಪ್ರಿಯತೆ ಅವರಿಗೆ ಸಿಕ್ಕಿತ್ತು. ಆದರೆ, ಬಿಗ್ ಬಾಸ್ ತಂದುಕೊಟ್ಟಷ್ಟು ಜನಪ್ರಿಯತೆ ಅವರಿಗೆ ಯಾವ ಶೋ ಕೂಡ ನೀಡಿಲ್ಲ. ಈ ಕಾರಣದಿಂದ ಬಿಗ್ ಬಾಸ್ ಶೋಗೆ ಅವರು ಚಿರಋಣಿ ಆಗಿದ್ದಾರೆ. ಇತ್ತೀಚೆಗೆ ಅವರು ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಒಂದು ಫನ್ ಘಟನೆ ನಡೆದಿದೆ.

ಕಾರ್ಯಕ್ರಮ ಮುಗಿದ ಬಳಿಕ ಗಿಲ್ಲಿನ ಭೇಟಿ ಮಾಡಬೇಕು, ಗಿಲ್ಲಿ ಜೊತೆ ಮಾತನಾಡಬೇಕು, ಗಿಲ್ಲಿ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕು ಎಂದು ಅನೇಕರು ಮುತ್ತಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಗಿಲ್ಲಿಗೆ ತೊಂದರೆ ಆಗುತ್ತದೆ. ಆ ರೀತಿ ಆಗಬಾರದು ಎಂದೇ ಗಿಲ್ಲಿ ನಟ ಅವರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ.

ಗಿಲ್ಲಿನ ತೆಗೆದುಕೊಂಡು ಹೋಗುತ್ತಿದ್ದನ್ನು ನೋಡಿದ ಅನೇಕರಿಗೆ, ಪೊಲೀಸರು ಆರೋಪಿಯನ್ನು ಕರೆದುಕೊಂಡು ಹೋದಂತೆ ಕಾಣಿಸಿದೆ. ಗಿಲ್ಲಿ ಯಾರು ಎಂಬ ಗೊತ್ತಿಲ್ಲದ ವ್ಯಕ್ತಿ ಯಾರಾದರೂ ಇದ್ದಲ್ಲಿ ಅವರಿಗೆ ಈ ವಿಡಿಯೋ ಅದೇ ರೀತಿ ಕಾಣಿಸಲಿದೆ. ಗಿಲ್ಲಿ ಕೂಡ ‘ಸರ್, ನಾನೇನು ಕಳ್ಳನಾ?’ ಎಂದು ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೊಲೀಸರು ನಕ್ಕಿದ್ದಾರೆ.

ಇದನ್ನೂ ಓದಿ: ಗಿಲ್ಲಿ ನಟನಿಗೆ ಬಿಗ್ ಬಾಸ್​ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ

ಗಿಲ್ಲಿ ಅವಕಾಶ ಸಿಕ್ಕಾಗಲೆಲ್ಲ ಹಾಸ್ಯದ ಹೊಳೆ ಹರಿಸುತ್ತಾರೆ. ಪೊಲೀಸರು ಜೊತೆಯೂ ಅವರು ನಗೆ ಚಟಾಕಿ ಹಾರಿಸಿದ್ದಾರೆ. ಈ ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:41 am, Mon, 26 January 26

Source link

ಗಣರಾಜ್ಯೋತ್ಸವ: ಬೆಂಗಳೂರಿನಲ್ಲಿ ಟ್ರಾಫಿಕ್‌ ಅಲರ್ಟ್, ವಾಹನ ಸವಾರರೇ ಹೊರಡೋದಕ್ಕೂ ಮುನ್ನ ಈ ಮಾಹಿತಿ ತಿಳಿದಿರಿ – Kannada News | Republic Day 2026: Bengaluru Traffic Alert Issued Ahead of 77th Republic Day Parade

ಬೆಂಗಳೂರು, ಜನವರಿ 26: ಗಣರಾಜ್ಯೋತ್ಸವ (Republic Day 2026) ಪರೇಡ್‌ಗೆ ಕರ್ನಾಟಕ ಕೂಡ ಸಿದ್ಧವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್‌ ಪಡೆಗಳ ಪಥಸಂಚಲನಕ್ಕೆ ಮಾಣೆಕ್‌ ಶಾ ಪರೇಡ್‌ ಮೈದಾನ ಸಿದ್ಧವಾಗಿದೆ. ಬೆಳಗ್ಗೆ 8.30ರಿಂದ 10.30 ರವರೆಗೆ ಮಾಣೆಕ್‌ ಶಾ ಮೈದಾನದ ಸುತ್ತ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗಗಳನ್ನ ಕಲ್ಪಿಸಲಾಗಿದೆ.

ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಬೆಳಗ್ಗೆ 8.30ರಿಂದ 10.30ರವರೆಗೆ ಮಾಣೆಕ್ ಶಾ ಮೈದಾನದ ಸುತ್ತ ಸಂಚಾರ ನಿರ್ಬಂಧಿಸಲಾಗಿದೆ. ಕಬ್ಬನ್‌ ರಸ್ತೆ, ಕಾಮರಾಜ ರಸ್ತೆ, ಬಿಆರ್‌ವಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ನಗರ ಸಂಚಾರಿ ಪೊಲೀಸರಿಂದ ಸೂಚಿಸಿದ್ದಾರೆ.

ಪರ್ಯಾಯ ಮಾರ್ಗಗಳು ಯಾವುವು?

ಇನ್ಫೆಂಟ್ರಿ ರಸ್ತೆಯಿಂದ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು, ಸಫೀನಾ ಪ್ಲಾಜಾದಲ್ಲಿ ಎಡತಿರುವು ಪಡೆದು, ಮೈನ್‌ಗಾರ್ಡ್‌ ರಸ್ತೆ, ಆಲೀಸ್‌ ಸರ್ಕಲ್, ಡಿಸ್ಸೆನ್ಸರಿ ರಸ್ತೆ, ಕಾಮರಾಜ ರಸ್ತೆ, ಡಿಕನ್ಸನ್‌ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು, ಕಬ್ಬನ್‌ ರಸ್ತೆಯ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬೇಕು.

ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ?

ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಶಿವಾಜಿನಗರ ಬಸ್ ನಿಲ್ದಾಣ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ, ಕಬ್ಬನ್ ಜಂಕ್ಷನ್​​ವರೆಗೆ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಪರೇಡ್‌ ಮೈದಾನದಲ್ಲಿ ಬಿಗಿ ಭದ್ರತೆ

ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಲರ್‌ ಕೋಡ್‌ಗಳ ಮೂಲಕ ಪಾಸ್‌ ವಿತರಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಗೇಟ್‌ ನಂಬರ್ 2ರಲ್ಲಿ ತುರ್ತು ಸೇವಾ ವಾಹನಗಳಿಗೆ ಮತ್ತು ಗೇಟ್‌ 4ರ ಬಳಿ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ ನಡೆಯಲಿದೆ. ಬೆಳಗ್ಗೆ 9ಗಂಟೆಗೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್‌ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಾರೋಹಣ ಮಾಡಿದ ಬಳಿಕ ರಾಜ್ಯಪಾಲರು ಗೌರವ ವಂದನೆ ಸ್ವೀಕರಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. 1 ಸಾವಿರದ 400 ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಬಾರಿಯ ಪರೇಡ್‌ನಲ್ಲಿ ತಮಿಳುನಾಡು ಪೊಲೀಸರು ಕೂಡ ಭಾಗಿ ಆಗ್ತಿರುವುದು ವಿಶೇಷ. ಇದರ ಜೊತೆಗೆ ಪಥಸಂಚಲನದಲ್ಲಿ ಸೇನೆ, ಏರ್‌ಫೋರ್ಸ್, ಸಿಆರ್‌ಪಿಎಫ್‌ ಮಹಿಳಾ ಸಿಬ್ಬಂದಿ, ಸ್ಕೌಟ್ಸ್‌ ಮತ್ತು ಗೈಡ್ಸ್, ಎನ್‌ಸಿಸಿ, ಸೇವಾದಳ, ಶಾಲಾ ಮಕ್ಕಳು ಭಾಗಿಯಾಗಲಿದ್ದಾರೆ. ರಿಪಬ್ಲಿಕ್‌ ಡೇ ಪರೇಡ್‌ನಲ್ಲಿ ಒಟ್ಟು 1,100 ಜನ ಭಾಗವಹಿಸಲಿದ್ದಾರೆ.

ರಾಜ್ಯಪಾಲರ ಭಾಷಣದ ಬಗ್ಗೆ ಭಾರಿ ಕುತೂಹಲ

ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸುವ ರಾಜ್ಯಪಾಲರು ಭಾಷಣ ಮಾಡಬೇಕಿದೆ. ಇತ್ತೀಚೆಗೆ ಜಂಟಿ ಅಧಿವೇಶನ ಭಾಷಣದ ವಿವಾದದ ಬಳಿಕ ಸರ್ಕಾರ ರಾಜ್ಯಪಾಲರಿಗೆ ಭಾಷಣ ಸಿದ್ಧಪಡಿಸಿ ನೀಡಿದೆ. ಭಾಷಣದಲ್ಲಿ ಯಾವ ಅಂಶಗಳನ್ನ ಉಲ್ಲೇಖಿಸಲಾಗಿದೆ ಎಂಬ ಕುತೂಹಲವಿದೆ. ಸಿಎಂ ಸಿದ್ದರಾಮಯ್ಯ, ನಾವು ಬರೆದುಕೊಟ್ಟ ಭಾಷಣ ಓದುತ್ತಾರಾ ಇಲ್ವಾ ನಮಗೆ ಗೊತ್ತಿಲ್ಲ ಅಂತಾ ಹೇಳಿದ್ದಾರೆ.

ರಾಜ್ಯಪಾಲರ ಭಾಷಣ ಒಂದೆಡೆಯಾದರೆ, ಇನ್ನುಳಿದ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಗಣರಾಜ್ಯೋತ್ಸವ ಸಂಭ್ರಮ ನೆರವೇರಿಸಲಿದ್ದಾರೆ. ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ಬರಿಸಿ ಬೊಬ್ಬಿರಿದರೂ ಅಭಿಷೇಕ್​ ಶರ್ಮಾಗೆ ಸಿಕ್ಕಿಲ್ಲ ಪಂದ್ಯ ಶ್ರೇಷ್ಠ ಪ್ರಶಸ್ತಿ..! – Kannada News | Instead of Abhishek Sharma, Jasprit Bumrah won the Player of the Match award

ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ (Abhishek Sharma) ಅಕ್ಷರಶಃ ಅಬ್ಬರಿಸಿದ್ದರು. ಈ ಅಬ್ಬರದೊಂದಿಗೆ ಅಭಿಷೇಕ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದರು.

Source link