All posts by nagaraj11081993

‘ಕೆಡಿ’ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್ ಅರವಿಂದ್ – Kannada News | Actor Ramesh Aravind speech in KD movie trailer launch event

ನಟ ರಮೇಶ್ ಅರವಿಂದ್ (Ramesh Aravind) ಅವರು ‘ಕೆಡಿ’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದರ ಝಲಕ್ ಈಗಾಗಲೇ ಟ್ರೇಲರ್​ನಲ್ಲಿ ಕಾಣಿಸಿದೆ. ಏಪ್ರಿಲ್ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಕಾಳಿದಾಸ ಎಂಬ ಪಾತ್ರ ಮಾಡಿದ್ದಾರೆ. ಅದರ ಸಂಕ್ಷಿಪ್ತ ರೂಪವೇ ಕೆಡಿ. ಆದರೆ ಈ ಸಿನಿಮಾದಲ್ಲಿ ಕೇವಲ ಅವರು ಮಾತ್ರ ಕೆಡಿ ಅಲ್ಲ. ಇನ್ನೂ ಅನೇಕರು ಕೆಡಿಗಳು ಇದ್ದಾರೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ. ‘ಕೆಡಿ’ ಸಿನಿಮಾದ ಟ್ರೇಲರ್ (KD Movie Trailer) ಬಿಡುಗಡೆಯ ವೇದಿಕೆಯಲ್ಲಿ ಅವರು ಆ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಮನೆಯೊಂದರಲ್ಲಿ ದಂಪತಿ ಶವ ಪತ್ತೆ: ಗಂಡ-ಹೆಂಡ್ತಿ ಸಾವಿನ ರಹಸ್ಯ ನಿಗೂಢ – Kannada News | Couple Dead Body Found In gangenahalli Home at Bengaluru

ಬೆಂಗಳೂರು, (ಏಪ್ರಿಲ್ 22): ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಆರ್.ಟಿ.ನಗರದ ಗಂಗೇನಹಳ್ಳಿಯ ಮನೆಯೊಂದರಲ್ಲಿ ದಂಪತಿ (Couple) ಶವ ಪತ್ತೆಯಾಗಿದೆ. 10 ವರ್ಷಗಳ ಹಿಂದೆ ವಿವಾಹವಾಗಿದ್ದ ಸುಮಿತ್ರಾ ಹಾಗೂ ಡೇವಿಡ್ ಇದೀಗ ಏಕಾಏಕಿ ಸಾವನ್ನಪ್ಪಿದ್ದಾರೆ. ಆದ್ರೆ, ಇಬ್ಬರ ಸಾವಿಗೆ ನಿಖರ ಕಾರಣ ತಿಳಿದುಬಂದಿದ್ದಲ್ಲ. ಇನ್ನು ಸ್ಥಳಕ್ಕೆ ಆರ್​​ಟಿ ನಗರ ಪೊಲೀಸರು ಮತ್ತು ಸೊಕೊ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಡೇವಿಡ್, ಸುಮಿತ್ರಾಳನ್ನ ಉಸಿರುಗಟ್ಟಿಸಿ ಕೊಂದು ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಪತಿ ಡೇವಿಡ್, ಉಸಿರುಗಟ್ಟಿಸಿ ಕೊಂದು ಬಳಿಕ ಸೀರೆಯಿಂದ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಪತಿ ಡೇವಿಡ್ ಕೈಗಳ ಮೇಲೆ ಪ್ರತಿರೋಧವೊಡ್ಡಿ ತರಚಿರುವ ಗುರುತು ಸಹ ಕಂಡುಬಂದಿದೆ.  ಹೀಗಾಗಿ ಡೇವಿಡನೇ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಮಹಿಳಾ ಶೌಚಾಲಯದಲ್ಲಿ ಭ್ರೂಣ ಪತ್ತೆ; ಬೆಚ್ಚಿಬಿದ್ದ ಸಿಬ್ಬಂದಿ!

ಇನ್ನು ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ಬಳಿಕ ಪ್ರತಿಕ್ರಿಯಿಸಿರುವ ಅವರು, ಸಂಬಂಧಿಕರ ಮಾಹಿತಿ ಪ್ರಕಾರ ಕೌಟುಂಬಿಕ ಕಲಹ ಇತ್ತು. ಜಗಳವಾಡಿದ್ದರಿಂದ ಮಕ್ಕಳನ್ನು ಸೋದರ ಸಂಬಂಧಿ ಕರೆದೊಯ್ದಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಇಬ್ಬರ ಶವ ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ಮೇಲ್ನೋಟಕ್ಕೆ ಕೌಟುಂಬಿಕ ಕಲಹ ಎನ್ನಲಾಗುತ್ತಿದೆಯಾರೂ ಮರಣೋತ್ತರ ಪರೀಕ್ಷೆ ವರದಿ ಹಾಗೂ ಪೊಲೀಸರ ತನಿಖೆ ಬಳಿಕ ಸಾವಿನ ರಹಸ್ಯ ಬಯಲಿಗೆ ಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ಅಪಾಯ: ಈ ರೀತಿಯಾಗುವ ಮುನ್ನ ಕಾಣಿಸಿಕೊಳ್ಳುತ್ತೆ 3 ಲಕ್ಷಣಗಳು – Kannada News | Heat Stroke Warning Signs: Spot These 3 Symptoms Early

ದೇಶದ ಹಲವೆಡೆ ಉಷ್ಣಾಂಶ ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೀಟ್ ಸ್ಟ್ರೋಕ್ (Heat Stroke) ಪ್ರಕರಣಗಳು ಹೆಚ್ಚಾಗುತ್ತಿದೆ. ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆದರೆ ದೇಹದ ತಾಪಮಾನ ನಿಯಂತ್ರಣ ತಪ್ಪಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಹೊರಗಡೆ ಕೆಲಸ ಮಾಡುವವರು ಹೆಚ್ಚಿನ ಅಪಾಯದಲ್ಲಿದ್ದಾರೆ. ಹಾಗಾಗಿ ಆರೋಗ್ಯ ತಜ್ಞರು ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಹೇಳುತ್ತಿದ್ದಾರೆ. ಮಾತ್ರವಲ್ಲ, ಈ ರೀತಿಯಾಗುವ ಮುನ್ನ ಕಾಣಿಸಿಕೊಳ್ಳುವ 3 ಪ್ರಮುಖ ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ. ಇದನ್ನು ಸರಿಯಾಗಿ ತಿಳಿದುಕೊಂಡು ಈ ರೀತಿಯಾದಾಗ ತಕ್ಷಣ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗಾದರೆ ಈ ಲಕ್ಷಣಗಳು ಯಾವವು, ಈ ಸಮಸ್ಯೆ ತಡೆಗಟ್ಟುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೀಟ್ ಸ್ಟ್ರೋಕ್ ಕಂಡುಬರುವ ಮುನ್ನ ಕಾಸಿಕೊಳ್ಳುವ ಲಕ್ಷಣಗಳು:

ವೈದ್ಯಕೀಯ ಮಾಹಿತಿಯ ಪ್ರಕಾರ, ಹೀಟ್ ಸ್ಟ್ರೋಕ್ ಮೊದಲು ದೇಹವು ಕೆಲವು ಸ್ಪಷ್ಟ ಸೂಚನೆಗಳನ್ನು ನೀಡುತ್ತದೆ. ಮೊದಲನೆಯದಾಗಿ, ತೀವ್ರ ತಲೆನೋವು ಮತ್ತು ತಲೆ ಸುತ್ತುವಿಕೆ ಕಾಣಿಸಿಕೊಳ್ಳುತ್ತದೆ. ಇದು ದೇಹದ ತಾಪಮಾನ ಹೆಚ್ಚುತ್ತಿರುವ ಸೂಚನೆ ಆಗಿರಬಹುದು. ಎರಡನೇ ಲಕ್ಷಣ, ಅತಿಯಾದ ದುರ್ಬಲತೆ ಮತ್ತು ಆಯಾಸ ಕಾಣಿಸುತ್ತದೆ. ವ್ಯಕ್ತಿಗೆ ಸಣ್ಣ ಕೆಲಸ ಮಾಡುವುದು ಕೂಡ ಕಷ್ಟವಾಗುತ್ತದೆ ಮತ್ತು ದೇಹದಲ್ಲಿ ಶಕ್ತಿ ಕಡಿಮೆಯಾಗಿರುವಂತೆ ಅನಿಸುತ್ತದೆ. ಮೂರನೇ ಲಕ್ಷಣವೆಂದರೆ ಹೆಚ್ಚು ಬೆವರು ಬರುವುದು ಅಥವಾ ಕೆಲವೊಮ್ಮೆ ಏಕಾಏಕಿ ಬೆವರು ಬರುವುದು ನಿಲ್ಲುವುದು. ಇದು ದೇಹವು ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬ ಸೂಚನೆಯಾಗಿದೆ. ಜೊತೆಗೆ ಅಶಾಂತಿ, ಬಾಯಾರಿಕೆ, ಗಮನ ಕೊಡಲು ಸಾಧ್ಯವಾಗದಿರುವುದು ಹಾಗೂ ಸ್ವಲ್ಪ ಜ್ವರದ ಅನುಭವವೂ ಆಗಬಹುದು.

ಇದನ್ನೂ ಓದಿ: ಹೀಟ್ ಸ್ಟ್ರೋಕ್ ಅಪಾಯ ಹೆಚ್ಚಳ: ತಡೆಗಟ್ಟಲು ಇಲ್ಲಿದೆ ಸಿಂಪಲ್ ಟಿಪ್ಸ್

ಹೇಗೆ ತಡೆಯಬೇಕು?

ಹೀಟ್ ಸ್ಟ್ರೋಕ್ ನಿಂದ ತಪ್ಪಿಸಿಕೊಳ್ಳಲು ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ತಲೆಗೆ ಮುಚ್ಚಿಕೊಳ್ಳುವುದು ಮತ್ತು ಹಗುರ, ಸಡಿಲ, ಹತ್ತಿ ಬಟ್ಟೆಗಳನ್ನು ಧರಿಸುವುದು ಒಳಿತು. ದಿನಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹ ಹೈಡ್ರೇಟೆಡ್ ಆಗಿರುತ್ತದೆ. ಎಳನೀರು ನೀರು, ಮಜ್ಜಿಗೆ ಮತ್ತು ನಿಂಬೆ ನೀರು ದೇಹವನ್ನು ತಂಪಾಗಿಡಲು ಸಹಕಾರಿ. ಹೊರಗಡೆ ಕೆಲಸ ಮಾಡುವವರು ಸ್ವಲ್ಪ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯ. ಬೇಸಿಗೆಯಲ್ಲಿ ಪೋಷಕಾಂಶಯುಕ್ತ ಆಹಾರ ಸೇವನೆ ಮುಖ್ಯ. ಹೆಚ್ಚು ಎಣ್ಣೆ ಮತ್ತು ಮಸಾಲೆಯುಕ್ತ ಆಹಾರ ತಪ್ಪಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ವಿಡಿಯೋ ತೆಗೆಯುತ್ತಿದ್ದಾಗ ವೇಗವಾಗಿ ಬಂದ ಕಾರು, 25 ಅಡಿ ಮೇಲಕ್ಕೆ ಹಾರಿ ಬಿದ್ದ ಕ್ಯಾಮೆರಾಮನ್​! – Kannada News | Haryana wedding Cameraman Flung In Air After Car Hits Him During Brides Farewell

ಸಿರ್ಸಾ, ಏಪ್ರಿಲ್ 22: ಹರಿಯಾಣದ ಸಿರ್ಸಾದಲ್ಲಿ ವಧುವಿನ ಬೀಳ್ಕೊಡುಗೆಯ ಸಮಯದಲ್ಲಿ ಕ್ಯಾಮೆರಾಮನ್ ವಿಡಿಯೋ ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕ್ಯಾಮೆರಾಮನ್ 25 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾರೆ. ವಧುವಿಗೆ ವಿದಾಯ ಹೇಳುವ ಸಮಾರಂಭದ ಸಮಯದಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕ್ಯಾಮೆರಾಮನ್ ಸುಮಾರು 25 ಮೀಟರ್ ಎತ್ತರಕ್ಕೆ ಹಾರಿದ್ದಾರೆ. ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಬೆಂಗಳೂರು, ಏಪ್ರಿಲ್​ 22: ಕರ್ನಾಟಕ ಎಸ್ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಇನ್ನು ತೃತೀಯ ಭಾಷೆಯ ವಿಷಯಕ್ಕೆ ಅಂಕನೋ ಇಲ್ಲಾ ಗ್ರೇಡೋ ಎಂಬ ಗೊಂದಲ ಉಂಟಾಗಿತ್ತು. ಸದ್ಯ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಗ್ರೇಡ್ ಬದಲು ಅಂಕ ನೀಡಲು ನಿರ್ಧರಿಸಲಾಗಿದೆ. ಆ ಮೂಲಕ ಈ ವರ್ಷ ಕೋರ್ಟ್ ಆದೇಶ ಪಾಲಿಸುವ ಬಗ್ಗೆ ನಿರ್ಧರಿಸಲಾಗಿದೆ. ಈಗಾಗಲೇ ಎಲ್ಲ ವಿಷಯಗಳಿಗೆ ಅಂಕಗಳನ್ನ ನೀಡಿ ಮೌಲ್ಯಮಾಪನ ಮಾಡಲಾಗಿದೆ. ಹೀಗಾಗಿ ನಾಳೆ ಅಂಕಗಳನ್ನೇ ನೀಡಲು ಇಲಾಖೆ ಮುಂದಾಗಿದೆ ಎಂದು ಅವರು ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

12 ವರ್ಷದ ಬಳಿಕ ಕನ್ನಡಕ್ಕೆ ಮರಳಿದ ‘ಅಧ್ಯಕ್ಷ’ ನಟಿ ಹೆಬಾ ಪಟೇಲ್; ದಿಗಂತ್ ಜೊತೆ ಸಿನಿಮಾ – Kannada News | Adyaksha actress Hebah Patel new movie Rudra Kala in Kannada with Diganth Manchale

ನಟಿ ಹೆಬಾ ಪಟೇಲ್ (Hebah Patel) ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಕನ್ನಡದ ‘ಅಧ್ಯಕ್ಷ’ ಸಿನಿಮಾ ಮೂಲಕ. ಆ ಚಿತ್ರದಲ್ಲಿ ಅವರು ಶರಣ್​ ಜೊತೆ ನಟಿಸಿದ್ದರು. ಬಳಿಕ ಅವರಿಗೆ ಪರಭಾಷೆಯಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕವು. ತಮಿಳು, ತೆಲುಗು ಚಿತ್ರರಂಗದಲ್ಲೇ ಅವರು ಬ್ಯುಸಿ ಆದರು. ಈಗ ಬರೋಬ್ಬರಿ 12 ವರ್ಷಗಳ ಬಳಿಕ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ದಿಗಂತ್ ಮಂಚಾಲೆ (Diganth Manchale) ಅಭಿನಯದ ‘ರುದ್ರ ಕಾಲ’ ಸಿನಿಮಾಗೆ ಹೆಬಾ ಪಟೇಲ್ ಅವರು ನಾಯಕಿ ಆಗಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು.

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ‘ರುದ್ರ ಕಾಲ’ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು. ನಿರ್ದೇಶಕ ರಾಜ್ ಗುರು ಅವರು ಕ್ಯಾಮೆರಾ ಚಾಲನೆ ಮಾಡಿದರು. ಗೋಪಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹೆಬಾ ಪಟೇಲ್ ಮಾತನಾಡಿದರು.

‘ನನ್ನ ವೃತ್ತಿ ಜೀವನ ಆರಂಭ ಆಗಿದ್ದೇ ಕನ್ನಡ ಚಿತ್ರರಂಗದಿಂದ. ಇಷ್ಟು ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾ ಮಾಡುತ್ತಿದ್ದೇನೆ. ಮನೆಗೆ ವಾಪಸ್ ಬಂದಂತೆ ಫೀಲ್ ಆಗುತ್ತಿದೆ. ಅಧ್ಯಕ್ಷ ನನ್ನ ಮೊದಲ ಸಿನಿಮಾ. ಆ ಸಿನಿಮಾದಿಂದ ಜನರು ಈಗಲೂ ನನಗೆ ಪ್ರೀತಿ ತೋರಿಸುತ್ತಿದ್ದಾರೆ. ಕಮ್​ಬ್ಯಾಕ್ ಮಾಡಲು ರುದ್ರ ಕಾಲ ನಿಜಕ್ಕೂ ಉತ್ತಮ ಸಿನಿಮಾ. ಈ ಅವಕಾಶ ನೀಡಿದ ನಿರ್ದೇಶಕ ಗೋಪಿ ಅವರಿಗೆ ಧನ್ಯವಾದಗಳು. ದಿಗಂತ್ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಮೊದಲಿಂದ ಇತ್ತು. ಈಗ ಅವಕಾಶ ಸಿಕ್ಕಿದೆ’ ಎಂದು ಹೆಬಾ ಪಟೇಲ್ ಹೇಳಿದರು.

ನಟ ದಿಗಂತ್ ಮಂಚಾಲೆ ಮಾತನಾಡಿ, ‘ಇದು ಕ್ರೈಮ್ ಥ್ರಿಲ್ಲರ್ ಜೊತೆಗೆ ಕೌಟುಂಬಿಕ ಕಥಾಹಂದರ ಇರುವ ಸಿನಿಮಾ‌. ರಮೇಶ್ ಅವರು ಒಳ್ಳೆಯ ಕಥೆ ಬರೆದಿದ್ದಾರೆ. ನಿರ್ದೇಶಕ ಗೋಪಿ ಅವರು ಕಥೆ ಹೇಳುವಾಗಲೇ ನನಗೆ ಕಥೆ ಬಹಳ ಇಷ್ಟವಾಯಿತು‌. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು. ಅವರ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಕೌತುಕ ಮೂಡಿದೆ.

ಇದನ್ನೂ ಓದಿ: ಹೆಬಾ ಪಟೇಲ್​ ಬಣ್ಣದ ಬದುಕಿಗೆ ಮೈಲೇಜ್​ ಕೊಟ್ಟಿದ್ದು ಕನ್ನಡದ ‘ಅಧ್ಯಕ್ಷ’ ಸಿನಿಮಾ

ರಮೇಶ್ ನಾಯ್ಕ್ ಅವರು ‘ರುದ್ರ ಕಾಲ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಈ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣ ಆಗಲಿದೆ. ಕ್ರಿಸ್ಟೋಫರ್ ಜೋಸೆಫ್ ಅವರು ಛಾಯಾಗ್ರಹಣ ಮಾಡಲಿದ್ದಾರೆ. ರುದ್ರ ಮಾಸ್ಟರ್ ಅವರ ನೃತ್ಯ ನಿರ್ದೇಶನ, ಚನ್ನಯ್ಯ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ. ರಂಜಿತಾ ನವೀನ್ ಅವರು ಸಹ-ನಿರ್ಮಾಪಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

VIDEO: ಅದ್ಭುತ… ಅತ್ಯದ್ಭುತ: ರಿಷಭ್ ಪಂತ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು – Kannada News | Rishabh Pant’s ‘Spider Man’ Catch Stuns Yashasvi Jaiswal

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಇದೀಗ ವೈರಲ್ ಆಗಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸಿದ್ದರು.

ಆದರೆ ಮೊಹಮ್ಮದ್ ಶಮಿ ಎಸೆದ ಮೂರನೇ ಓವರ್​ನ 5ನೇ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಯಶಸ್ವಿ ಜೈಸ್ವಾಲ್ ಎಡವಿದರು. ಪರಿಣಾಮ ಚೆಂಡು ಜೈಸ್ವಾಲ್ ಅವರ ಗ್ಲೌಸ್‌ಗೆ ಬಡಿದು ಕೀಪರ್‌ನ ಮೇಲ್ಭಾಗದಲ್ಲಿ ಹಾರಿ ಹೋಗುತ್ತಿತ್ತು. ಈ ವೇಳೆ ಹದ್ದಿನ ಕಣ್ಣಿಟ್ಟಿದ್ದ ನಾಯಕ ರಿಷಭ್ ಪಂತ್, ಗಾಳಿಯಲ್ಲಿ ಜಿಗಿದು ಕೇವಲ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದರು.

ಈ ಮೂಲಕ ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ಧ್ರುವ್ ಜುರೆಲ್ (0) ವಿಕೆಟ್ ಕೂಡ ಪಡೆದರು.

ಇದೀಗ ರಿಷಭ್ ಪಂತ್ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಪೈಡಿ ಕ್ಯಾಚ್​ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 159 ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ 160 ರನ್​ಗಳ ಗುರಿ ನೀಡಿದೆ.

 

Source link

ಗುಜರಾತ್​​ನ ವಲ್ಸಾದ್​​ನಲ್ಲಿ ಭೀಕರ ಅಪಘಾತ; ಪಿಕಪ್ ವ್ಯಾನ್ ಪಲ್ಟಿಯಾಗಿ 7 ಜನ ಸಾವು, ಪ್ರಧಾನಿ ಮೋದಿ ಸಂತಾಪ – Kannada News | 7 killed, several injured as pickup van overturns in Gujarat Valsads Kaprada accident news

ವಲ್ಸಾದ್, ಏಪ್ರಿಲ್ 22: ಇಂದು ಸಂಜೆ ಗುಜರಾತ್‌ನ (Gujarat) ವಲ್ಸಾದ್ ಜಿಲ್ಲೆಯ ಕಪ್ರಡಾ ತಾಲೂಕಿನಲ್ಲಿ ಪಿಕಪ್ ವ್ಯಾನ್ ಪಲ್ಟಿಯಾಗಿ ಮೂವರು ಮಕ್ಕಳು ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಿರ್ನಾರಾ ಗ್ರಾಮದ ಸುಮಾರು 30 ಜನರನ್ನು ಪಿಕಪ್​ನಲ್ಲಿ ಮದುವೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವ್ಯಾನ್ ಪಲ್ಟಿಯಾಗಿದೆ.

ಮೂವರು ಮಕ್ಕಳು ಸೇರಿದಂತೆ 7 ಜನ ಮೃತಪಟ್ಟಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ಸಮಯದಲ್ಲಿ ವಾಹನದಲ್ಲಿ 34 ಜನರು ಪ್ರಯಾಣಿಸುತ್ತಿದ್ದರು.

ಇದನ್ನೂ ಓದಿ: ಆದಾಯ ತೆರಿಗೆ​ ಅಧಿಕಾರಿ ಜಿಮ್​ನಲ್ಲಿದ್ದಾಗ ಮನೆಯಲ್ಲಿ ಮಗಳ ಬರ್ಬರ ಹತ್ಯೆ

ಪಿಕಪ್ ವ್ಯಾನ್ ಒಂದು ಕುಟುಂಬದ ಸದಸ್ಯರನ್ನು ಕರೆದೊಯ್ಯುತ್ತಿತ್ತು. ವರದಿಗಳ ಪ್ರಕಾರ, ಮದುವೆಗೆ ಸಂಬಂಧಿಸಿದ ಸಮಾರಂಭಕ್ಕಾಗಿ ಪ್ರಯಾಣಿಸುತ್ತಿದ್ದ ಕುಟುಂಬದ ಸದಸ್ಯರನ್ನು ಕರೆದೊಯ್ಯುತ್ತಿದ್ದ ವಾಹನವು ಇಳಿಜಾರಿನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿದೆ. ಪೊಲೀಸ್ ಮತ್ತು 108 ಆಂಬ್ಯುಲೆನ್ಸ್ ಸೇವೆಯ ತಂಡಗಳು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿವೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ

ಈ ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಅಪಘಾತದಲ್ಲಿ ಆದ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನ ವಲ್ಸಾದ್‌ನಲ್ಲಿ ಸಂಭವಿಸಿದ ಅಪಘಾತದಿಂದ ಸಂಭವಿಸಿದ ಜೀವಹಾನಿ ದುಃಖಕರವಾಗಿದೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಎಕ್ಸ್​ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ SSLC ಫಲಿತಾಂಶ: ಕುಳಿತಲ್ಲೇ SSLC ರಿಸಲ್ಟ್ ಚೆಕ್​ ಮಾಡುವುದ್ಹೇಗೆ? ಇಲ್ಲಿದೆ ವಿಧಾನ – Kannada News | How To Check Karnataka SSLC Result 2026 In Online And Digilocker on April 23, here Is Steps

ಬೆಂಗಳೂರು, ( ಏಪ್ರಿಲ್ 22): ಕರ್ನಾಟಕ ಎಸ್​ಎಸ್​ಎಲ್​ಸಿ ಪರೀಕ್ಷೆ 1ರ ಫಲಿತಾಂಶ-2026 ನಾಳೆ (ಏಪ್ರಿಲ್ 23) ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧುಬಂಗಾರಪ್ಪನವರು ಗುರುವಾರ ಮಧ್ಯಾಹ್ನ 12ಗಂಟೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಇನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ವಿದ್ಯಾರ್ಥಿಗಳು ವೆಬ್‌ಸೈಟ್, ಮೊಬೈಲ್ ಆಪ್, SMS/WhatsApp ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.

ಅಧಿಕೃತ ವೆಬ್‌ಸೈಟ್

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕ ಫಲಿತಾಂಶ ವೀಕ್ಷಿಸಬಹುದು. ಹಾಗೇ  : ‘KarnatakaOne’ ಎನ್ನುವ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದು. ಇನ್ನು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಮಂಡಲಿಯ ವತಿಯಿಂದಲೇ ನೇರವಾಗಿ ಫಲಿತಾಂಶದ ವಿವರಗಳನ್ನು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ರವಾನೆಯಾಗಲಿದೆ.

ಇದನ್ನೂ ಓದಿ: SSLC Results 2026: ಹಲವು ಗೊಂದಲಗಳ ಮಧ್ಯೆ SSLC ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ಮುಹೂರ್ತ ಫಿಕ್ಸ್

SSLC ಫಲಿತಾಂಶ ಚೆಕ್ ಮಾಡುವ ವಿಧಾನ

  • ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಅಥವಾ https://karresults.nic.in/ ಗೆ ಭೇಟಿ ನೀಡಿ.
  • ಓಪನ್‌ ಆದ ಪೇಜ್‌ನಲ್ಲಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ತಮ್ಮ ಎಸ್‌ಎಸ್‌ಎಲ್‌ಸಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ಟೈಪ್‌ ಮಾಡಿ.
  • ನಂತರ ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
  • ಫಲಿತಾಂಶದ ಪೇಜ್‌ ಓಪನ್‌ ಆಗುತ್ತದೆ.
  • ಡೌನ್‌ಲೋಡ್‌ ಮಾಡಿ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

ಡಿಜಿಲಾಕರ್ ನಲ್ಲೂ ಲಭ್ಯ

ಈ ವರ್ಷ ಮಂಡಳಿಯು ಪ್ರಥಮ ಬಾರಿಗೆ ವಿಶೇಷ ಹೆಜ್ಜೆಯೊಂದನ್ನು ಇಟ್ಟಿದ್ದು, ದ್ವಿತೀಯ ಪಿಯುಸಿಯಂತೆ ಎಸ್​ಎಸ್​ಎಲ್​ಸಿ ಅಂಕಪಟ್ಟಿಯನ್ನು(Marks Card) ಫಲಿತಾಂಶ ಪ್ರಕಟವಾದ ತಕ್ಷಣವೇ ‘ಡಿಜಿಲಾಕರ್’ನಲ್ಲಿ ಲಭ್ಯವಾಗುವಂತೆ ಮಾಡಿದೆ. ಹೀಗಾಗಿ ಅಧಿಕೃತ ವೆಬ್‌ಸೈಟ್ ಮಾತ್ರವಲ್ಲದೆ, ವಿದ್ಯಾರ್ಥಿಗಳು DigiLocker ಮೂಲಕವೂ ತಮ್ಮ ಅಂಕಪಟ್ಟಿಯನ್ನು ಪಡೆಯಬಹುದು. ಆನ್​​ಲೈನ್​​ನಲ್ಲಿ ಚೆಕ್ ಮಾಡಲು ನೆಟ್ ಸ್ಲೋ, ಸರ್ವರ್ ಬ್ಯುಸಿ ಇದ್ದರೆ ಈ ಡಿಜಿಲಾಕರ್ ನಲ್ಲಿ ಅಂಕಪಟ್ಟಿ ಪಡೆದುಕೊಳ್ಳಬಹುದು.

ಡಿಜಿಲಾಕರ್​​ ನಲ್ಲಿ ಮಾರ್ಕ್​​ ಕಾರ್ಡ್​ ಪಡೆಯುವುದ್ಹೇಗೆ?

ಹಂತ 1: ವೆಬ್‌ಸೈಟ್‌ಗಿಂತಲೂ ವೇಗವಾಗಿ ಮತ್ತು ಸುಲಭವಾಗಿ ನಿಮ್ಮ ಅಂಕಪಟ್ಟಿ ಪಡೆಯಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು ಅಷ್ಟೇ. ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ‘DigiLocker’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ಇಲ್ಲದಿದ್ದರೆ ನೇರವಾಗಿ digilocker.gov.in ವೆಬ್‌ಸೈಟ್‌ಗೂ ಭೇಟಿ ನೀಡಬಹುದು.

ಹಂತ 2: ಅಪ್ಲಿಕೇಶನ್ ತೆರೆದ ನಂತರ ಮುಖಪುಟದಲ್ಲಿ ಕಾಣುವ ‘ಡಾಕ್ಯುಮೆಂಟ್ ವರ್ಗಗಳ’ (Document Categories) ಅಡಿಯಲ್ಲಿ ‘ಶಿಕ್ಷಣ ಮತ್ತು ಕಲಿಕೆ’ (Education and Learning) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಹಲವಾರು ಶಿಕ್ಷಣ ಮಂಡಳಿಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಮ್ಮ ರಾಜ್ಯದ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ (KSEAB) ಅನ್ನು ಹುಡುಕಿ ಆಯ್ಕೆ ಮಾಡಿ.

ಹಂತ 3: ನಂತರದ ಸ್ಕ್ರೀನ್‌ನಲ್ಲಿ ನಿಮಗೆ ‘Class X Marksheet’ ಅಥವಾ SSLC Marksheet’ ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ SSLC ನೋಂದಣಿ ಸಂಖ್ಯೆ (Roll Number/Registration Number) ಮತ್ತು ಪರೀಕ್ಷೆ ಬರೆದ ವರ್ಷವನ್ನು (2026) ನಮೂದಿಸಿ. ಆಧಾರ್ ಕಾರ್ಡ್‌ನಲ್ಲಿರುವಂತೆ ನಿಮ್ಮ ವಿವರಗಳನ್ನು ಗಮನಿಸಿ ನೋಡಿ ಸಬ್‌ಮಿಟ್ ಮಾಡಿ.

ಹಂತ 4: ಬಳಿಕ ಕರ್ನಾಟಕ SSLC ಫಲಿತಾಂಶ ಪರದೆಯ ಮೇಲೆ ಮೂಡುತ್ತದೆ. ಇದರಲ್ಲಿ ನಿಮ್ಮ ವಿಷಯವಾರು ಅಂಕಗಳು ಲಭ್ಯವಿರುತ್ತವೆ. ಅಲ್ಲಿರುವ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ (PDF) ರೂಪದಲ್ಲಿ ನಿಮ್ಮ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದಾಗಿದೆ.

ಗ್ರೇಡ್​ ಬದಲಿಗೆ ಅಂಕ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆ ವಿಷಯಗಳಿಗೆ ಅಂಕ ಬದಲಿಗೆ ಗ್ರೇಡ್‌ ನೀಡಲು ಸರ್ಕಾರ ಮುಂದಾಗಿತ್ತು. ಏಕಾಏಕಿ ಈ ನಿರ್ಧಾರದಿಂದ ವಿದ್ಯಾರ್ಥಿಗಳಲ್ಲಿ ಕೊಂಚ ಗೊಂದಲ, ಅಸಮಾಧಾನ ಉಂಟಾಗಿತ್ತು. ಆದ್ರೆ, ಇದೀಗ ಹೈಕೋರ್ಟ್, ಗ್ರೇಡ ಬದಲಿಗೆ ಅಂಕ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ಆದೇಶಿಸಿದೆ. ಹೀಗಾಗಿ ಇದೀಗ ಅಂತಿಮವಾಗಿ ಕೋರ್ಟ್ ಆದೇಶದಂತೆ ಗ್ರೇಡ್ ಕೈಬಿಟ್ಟು ಅಂಕ ನೀಡಲು ತೀರ್ಮಾನಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Source link

ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಮಹಿಳಾ ಶೌಚಾಲಯದಲ್ಲಿ ಭ್ರೂಣ ಪತ್ತೆ; ಬೆಚ್ಚಿಬಿದ್ದ ಸಿಬ್ಬಂದಿ! – Kannada News | Devanahalli: Fetus Found in Women’s Toilet at Prestigious Company; Staff Shocked

ಫಾಕ್ಸ್​ಕಾನ್ ಕಂಪನಿImage Credit source: tv9 kannada

ದೇವನಹಳ್ಳಿ, ಏಪ್ರಿಲ್​ 22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೀರಸಂದ್ರ ಬಳಿ ಇರುವ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪನಿಯಲ್ಲಿ (Foxconn Factory) ಇಂದು ಆತಂಕದ ವಾತಾವರಣ ನಿರ್ಮಾಣವಾಗಿತ್ತು.  ಮೊಬೈಲ್ ತಯಾರಿಕಾ ಲೋಕದ ದೈತ್ಯ ಕಂಪನಿಯ ಮಹಿಳಾ ಶೌಚಾಲಯದಲ್ಲಿ ಭ್ರೂಣವೊಂದು ಪತ್ತೆಯಾಗಿದ್ದು, ಇಡೀ ಆಡಳಿತ ಮಂಡಳಿಯನ್ನು ಬೆಚ್ಚಿಬೀಳಿಸಿದೆ. ಸದ್ಯ ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸುಮಾರು 25 ಸಾವಿರಕ್ಕೂ ಅಧಿಕ ಸಿಬ್ಬಂದಿ ಕೆಲಸ ನಿರ್ವಹಿಸುವ ಈ ಬೃಹತ್ ಘಟಕದಲ್ಲಿ, ಮಹಿಳಾ ಶೌಚಾಲಯದಲ್ಲಿ ಭ್ರೂಣ ಪತ್ತೆಯಾದ ತಕ್ಷಣ ಕಂಪನಿಯ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿಶ್ವನಾಥಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಪತ್ತೆಯಾದ ಭ್ರೂಣವು ಗಂಡೋ ಅಥವಾ ಹೆಣ್ಣೋ ಎಂಬುದು ಇನ್ನು ದೃಢಪಟ್ಟಿಲ್ಲ.

ಇದನ್ನೂ ಓದಿ: ಅಮ್ಮನ ಮಡಿಲು ಸೇರಲು ಒದ್ದಾಡಿದ ಕಂದಮ್ಮ: ಕಾಫಿ ತೋಟದಲ್ಲಿ ನವಜಾತ ಶಿಶು ಪತ್ತೆ!

ಕಂಪನಿಯ ಆವರಣದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳಲ್ಲಿ ಇದು ತೀವ್ರ ಆತಂಕ ಮೂಡಿಸಿದೆ. ಸದ್ಯ ಪೊಲೀಸರು ಎಲ್ಲಾ ಆಯಾಮಗಳಿಂದ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ನಾಪತ್ತೆಯಾಗಿದ್ದ ಕುರಿಗಾಹಿ ಮಹಿಳೆ ಶವವಾಗಿ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಿಕ್ಕನಹಳ್ಳಿ ಕೆರೆ ಬಳಿ ನಡೆದಿದೆ. ವಿಜಯಪುರ ಮಾರ್ಕೆಟ್ ರಸ್ತೆ ನಿವಾಸಿ ಸರ್ವಮಂಗಳ(55) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್​ ಸಾಧನೆ: ಶಸ್ತ್ರಚಿಕಿತ್ಸೆ ಮಾಡಿ ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣ ಹೊರಕ್ಕೆ

ಕಳೆದ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಕುರಿಗಾಹಿ ಮಹಿಳೆ ಸರ್ವಮಂಗಳ, ಇಂದು ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಆಗಿದೆ. ಇನ್ನು ಮಹಿಳೆ ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ವಿಜಯಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link