All posts by nagaraj11081993

ಏ 1ರಂದು ಶಿವಕುಮಾರ ಸ್ವಾಮೀಜಿ ಜನ್ಮದಿನ: SSLC ಪರೀಕ್ಷೆ ಹಿನ್ನಲೆ ಕಾರ್ಯಕ್ರದಲ್ಲಿ ಬದಲಾವಣೆ

ಏ 1ರಂದು ಶಿವಕುಮಾರ ಸ್ವಾಮೀಜಿ ಜನ್ಮದಿನ: SSLC ಪರೀಕ್ಷೆ ಹಿನ್ನಲೆ ಕಾರ್ಯಕ್ರದಲ್ಲಿ ಬದಲಾವಣೆ

ತುಮಕೂರು, ಮಾರ್ಚ್​ 29: ಏಪ್ರಿಲ್​​ 1ರಂದು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದ್ಯ ಕಾರ್ಯಕ್ರಮದ ಕೆಲಸಗಳು ಭರದಿಂದ ಸಾಗಿದೆ. ಏಪ್ರಿಲ್​ 1ರಂದು ತುಮಕೂರಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಭಾಗವಹಿಸಲಿದ್ದಾರೆ. ಎಸ್ಎಸ್ಎಲ್​ಸಿ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಈ ಬಾರಿ ಕಾರ್ಯಕ್ರಮಗಳನ್ನು ಖಡಿತ ಮಾಡಿರುವುದು ವಿಶೇಷ.

ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಇಂದು ಕ್ಯಾತಸಂದ್ರದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದಲಿಂಗ ಮಹಾಸ್ವಾಮೀಜಿ, ಏಪ್ರಿಲ್​​ 1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬರುತ್ತಿದ್ದಾರೆ. ದ್ವೀತಿಯ ಮಹಿಳಾ ರಾಷ್ಟಪತಿ ನಮ್ಮ‌ ಮಠಕ್ಕೆ ಬರುತ್ತಿದ್ದಾರೆ. ಬಡಕುಟುಂಬ ಹಾಗೂ ಆದಿವಾಸಿ ಸಮುದಾಯದಿಂದ ಬಂದಿದ್ದಾರೆ ಎಂಬುದು ನಾವೆಲ್ಲಾ ತುಂಬಾ ಹೆಮ್ಮೆ ಪಡುವ ವಿಚಾರ. ಇದು ನಮ್ಮ ತುಮಕೂರಿಗೆ ಹೆಮ್ಮೆಯ ವಿಚಾರ. ನಾವೆಲ್ಲರು ಅವರ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ತುಮಕೂರು: ಏ 1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಇನ್ನು ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್​, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಸಚಿವ ವಿ. ಸೋಮಣ್ಣ, ಗೃಹ ಸಚಿವ ಜಿ.ಪರಮೇಶ್ವರ್, ಉನ್ನತ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಟಿ.ಬಿ ಜಯಚಂದ್ರ, ಶಾಸಕರಾದ ಕೆ.ಎನ್ ರಾಜಣ್ಣ, ಜ್ಯೋತಿ ಗಣೇಶ್ ಸುರೇಶ್ ಗೌಡ ಆಗಮಿಸುತ್ತಿದ್ದಾರೆ.

ಕಾರ್ಯಕ್ರಮದ ಸ್ವರೂಪ ಹೀಗಿದೆ

ಏಪ್ರಿಲ್ 1ರಂದು ಒಂದುವರೆ ಗಂಟೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 12:30
ವರೆಗೂ ನಡೆಯಲಿದೆ. ಕಾರ್ಯಕ್ರಮದ ಜೊತೆಗೆ ಪ್ರತಿ ವರ್ಷದಂತೆ ಈ ಬಾರಿ ಕೂಡ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ನಂತರ ಹೆಚ್ಚು ಕಾರ್ಯಕ್ರಮವಿರಲ್ಲ. ಏಕೆಂದರೆ  ಎಸ್ಎಸ್ಎಲ್​ಸಿ ಮಕ್ಕಳಿಗೆ ಪರೀಕ್ಷೆ ಇರುವುದರಿಂದ ಈ ಬಾರಿ ಕಾರ್ಯಕ್ರಮಗಳನ್ನು ಖಡಿತ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಇಂದಿನಿಂದ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ: 15 ದಿನದ ಜಾತ್ರೆಯಲ್ಲಿ ಏನೆಲ್ಲಾ ವಿಶೇಷ ಗೊತ್ತಾ?

ಬೆಳಿಗ್ಗೆ ಗದ್ದುಗೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಆಯೋಜನೆ ಮಾಡಲಾಗಿದೆ. ನಂತರ ಬೆಳಿಗ್ಗೆ 7:30ಕ್ಕೆ ಉತ್ಸವದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆಯೇ ವೇದಿಕೆ ಕಾರ್ಯಕ್ರಮ ಮುಗಿದ ತಕ್ಷಣ ವೀಣಾ ವಾದನ ಕಾರ್ಯಕ್ರಮ ಇರಲಿದೆ. ಅದಾದ ನಂತರ 119 ಮಹಿಳೆಯರಿಂದ ವಚನ ಗಾಯನ ಮಾಡುತ್ತಾರೆ. ಬಳಿಕ ಮಧ್ಯಾಹ್ನ ಹಾಗೂ ಸಂಜೆ ಯಾವುದೇ ಕಾರ್ಯಕ್ರಮವಿಲ್ಲ. ಕಾರ್ಯಕ್ರಮದ ವೇಳೆ ಒಂದಷ್ಟು ನಿಬಂಧನೆ ಪಾಲನೆ ಮಾಡಬೇಕಾಗಿದೆ. ಕೊಡೆ, ನೀರಿನ ಬಾಟಲ್ ತರಬಾರದು ಎಂದು ತಿಳಿಸಿದ್ದಾರೆ.

ಯಾವುದನ್ನು ಕೇಳಿ ಪಡೆಯಬಾರದು

ಇನ್ನು ಶಿವಕುಮಾರ್ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ವಿಚಾರವಾಗಿ ಮಾತನಾಡಿದ ಅವರು, ಆ ಬಗ್ಗೆ ದಯವಿಟ್ಟು ಯಾರು ಪ್ರಚಾರ ಮಾಡಬೇಡಿ. ಯಾವುದನ್ನು ಕೇಳಿ ಪಡೆಯಬಾರದು ಎಂದು ಸಿದ್ದಲಿಂಗ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Black Pepper Remedies: ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯಲು ಕರಿಮೆಣಸು ಬಳಸಿ ಈ ಪರಿಹಾರ ಮಾಡಿ

ಭಾರತೀಯ ಸಾಂಪ್ರದಾಯಿಕ ಪರಿಹಾರ ಶಾಸ್ತ್ರದಲ್ಲಿ ಕರಿಮೆಣಸಿಗೆ ಕೇವಲ ಅಡುಗೆಯ ಮಸಾಲೆಯಾಗಿ ಮಾತ್ರವಲ್ಲದೆ, ನಕಾರಾತ್ಮಕ ಶಕ್ತಿಗಳನ್ನು ದೂರಮಾಡುವ ಶಕ್ತಿಯುತ ದ್ರವ್ಯವಾಗಿಯೂ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಮನೆಯಲ್ಲಿ ಅಶಾಂತಿ, ದೃಷ್ಟಿದೋಷ ಅಥವಾ ಶತ್ರುಗಳ ಕಾಟವಿದ್ದಾಗ ಮೆಣಸಿನ ಈ ಸರಳ ತಂತ್ರಗಳು ರಕ್ಷಣಾತ್ಮಕ ಗುರಾಣಿಯಂತೆ ಕೆಲಸ ಮಾಡುತ್ತವೆ ಎಂದು ನಂಬಲಾಗಿದೆ.

ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಪರೀಕ್ಷಿಸಲು ಮತ್ತು ದೂರಮಾಡಲು ಮಂಗಳವಾರದಂದು ಒಂದು ವಿಶೇಷ ಪ್ರಯೋಗವನ್ನು ಮಾಡಬಹುದು. ಒಂದು ಕರಿ ಮೆಣಸಿನ ಕಾಳನ್ನು ಸೂಜಿಯಿಂದ ಚುಚ್ಚಿ ಮೇಣದಬತ್ತಿಯ ಜ್ಯೋತಿಯಲ್ಲಿ ಸುಟ್ಟು, ಅದರಿಂದ ಬರುವ ಹೊಗೆಯನ್ನು ಆಘ್ರಾಣಿಸುವುದರಿಂದ ವ್ಯಕ್ತಿಯ ಮೇಲಿರುವ ಅಥವಾ ಮನೆಯಲ್ಲಿರುವ ದುಷ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ಈ ಪ್ರಕ್ರಿಯೆಯ ನಂತರ ಆ ಕಾಳನ್ನು ಮನೆಯಿಂದ ಹೊರಗೆ ಎಸೆಯುವುದು ಸೂಕ್ತ. ಇದು ಮನಸ್ಸಿಗೆ ಮತ್ತು ಮನೆಗೆ ಒಂದು ರೀತಿಯ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂಬುದು ಶಾಸ್ತ್ರದ ಆಂಬೋಣ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಪಡೆಯಲು ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳಲು ಭಾನುವಾರ ಅಥವಾ ಅಮಾವಾಸ್ಯೆಯ ಸಂಜೆ 6:30 ರಿಂದ 9:30 ರ ನಡುವೆ ಮಾಡುವ ಒಂದು ವಿಶಿಷ್ಟ ಪರಿಹಾರ ಬಹಳ ಪ್ರಸಿದ್ಧವಾಗಿದೆ. ಈ ಸಮಯದಲ್ಲಿ ಶುಚಿಯಾಗಿ ಸ್ನಾನ ಮಾಡಿ, ಕೈಯಲ್ಲಿ ಒಂಬತ್ತು ಕರಿಮೆಣಸಿನ ಕಾಳುಗಳನ್ನು ಹಿಡಿದು ಮನೆಯಿಂದ ಹೊರಗೆ ಬರಬೇಕು. ನಂತರ ಆ ಕಾಳುಗಳನ್ನು ಒಂಬತ್ತು ಬಾರಿ ಅಪ್ರದಕ್ಷಿಣಾಕಾರವಾಗಿ ನಿಮ್ಮ ಸುತ್ತಲೂ ತಿರುಗಿಸಿ, “ಓಂ” ಮಂತ್ರವನ್ನು ಜಪಿಸುತ್ತಾ ಎಂಟು ದಿಕ್ಕುಗಳಿಗೆ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ನಾಲ್ಕು ಮೂಲೆಗಳು) ಒಂದೊಂದರಂತೆ ಎಸೆಯಬೇಕು. ಕೊನೆಯ ಒಂಬತ್ತನೇ ಕಾಳನ್ನು ಆಕಾಶದ ಕಡೆಗೆ ಎಸೆದು, ಕೈಕಾಲು ತೊಳೆದುಕೊಂಡು ಮನೆ ಪ್ರವೇಶಿಸಬೇಕು. ಈ ತಂತ್ರವು ಪ್ರಕೃತಿಯ ಸಕಾರಾತ್ಮಕ ಶಕ್ತಿಯನ್ನು ನಿಮ್ಮತ್ತ ಆಕರ್ಷಿಸಿ, ಆರ್ಥಿಕ ಸಮೃದ್ಧಿ ಮತ್ತು ಮನಃಶಾಂತಿಯನ್ನು ತರಲು ಸಹಕಾರಿಯಾಗುತ್ತದೆ ಎಂದು ಪರಿಹಾರ ವಿಜ್ಞಾನ ಸೂಚಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏ 1ರಂದು ಶಿವಕುಮಾರ ಸ್ವಾಮೀಜಿ ಜನ್ಮದಿನ: SSLC ಪರೀಕ್ಷೆ ಹಿನ್ನಲೆ ಕಾರ್ಯಕ್ರದಲ್ಲಿ ಬದಲಾವಣೆ

ತುಮಕೂರು, ಮಾರ್ಚ್​ 29: ಏಪ್ರಿಲ್​​ 1ರಂದು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದ್ಯ ಕಾರ್ಯಕ್ರಮದ ಕೆಲಸಗಳು ಭರದಿಂದ ಸಾಗಿದೆ. ಏಪ್ರಿಲ್​ 1ರಂದು ತುಮಕೂರಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಭಾಗವಹಿಸಲಿದ್ದಾರೆ. ಎಸ್ಎಸ್ಎಲ್​ಸಿ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಈ ಬಾರಿ ಕಾರ್ಯಕ್ರಮಗಳನ್ನು ಖಡಿತ ಮಾಡಿರುವುದು ವಿಶೇಷ.

ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಇಂದು ಕ್ಯಾತಸಂದ್ರದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದಲಿಂಗ ಮಹಾಸ್ವಾಮೀಜಿ, ಏಪ್ರಿಲ್​​ 1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬರುತ್ತಿದ್ದಾರೆ. ದ್ವೀತಿಯ ಮಹಿಳಾ ರಾಷ್ಟಪತಿ ನಮ್ಮ‌ ಮಠಕ್ಕೆ ಬರುತ್ತಿದ್ದಾರೆ. ಬಡಕುಟುಂಬ ಹಾಗೂ ಆದಿವಾಸಿ ಸಮುದಾಯದಿಂದ ಬಂದಿದ್ದಾರೆ ಎಂಬುದು ನಾವೆಲ್ಲಾ ತುಂಬಾ ಹೆಮ್ಮೆ ಪಡುವ ವಿಚಾರ. ಇದು ನಮ್ಮ ತುಮಕೂರಿಗೆ ಹೆಮ್ಮೆಯ ವಿಚಾರ. ನಾವೆಲ್ಲರು ಅವರ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ತುಮಕೂರು: ಏ 1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಇನ್ನು ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್​, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಸಚಿವ ವಿ. ಸೋಮಣ್ಣ, ಗೃಹ ಸಚಿವ ಜಿ.ಪರಮೇಶ್ವರ್, ಉನ್ನತ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಟಿ.ಬಿ ಜಯಚಂದ್ರ, ಶಾಸಕರಾದ ಕೆ.ಎನ್ ರಾಜಣ್ಣ, ಜ್ಯೋತಿ ಗಣೇಶ್ ಸುರೇಶ್ ಗೌಡ ಆಗಮಿಸುತ್ತಿದ್ದಾರೆ.

ಕಾರ್ಯಕ್ರಮದ ಸ್ವರೂಪ ಹೀಗಿದೆ

ಏಪ್ರಿಲ್ 1ರಂದು ಒಂದುವರೆ ಗಂಟೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 12:30
ವರೆಗೂ ನಡೆಯಲಿದೆ. ಕಾರ್ಯಕ್ರಮದ ಜೊತೆಗೆ ಪ್ರತಿ ವರ್ಷದಂತೆ ಈ ಬಾರಿ ಕೂಡ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ನಂತರ ಹೆಚ್ಚು ಕಾರ್ಯಕ್ರಮವಿರಲ್ಲ. ಏಕೆಂದರೆ  ಎಸ್ಎಸ್ಎಲ್​ಸಿ ಮಕ್ಕಳಿಗೆ ಪರೀಕ್ಷೆ ಇರುವುದರಿಂದ ಈ ಬಾರಿ ಕಾರ್ಯಕ್ರಮಗಳನ್ನು ಖಡಿತ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಇಂದಿನಿಂದ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ: 15 ದಿನದ ಜಾತ್ರೆಯಲ್ಲಿ ಏನೆಲ್ಲಾ ವಿಶೇಷ ಗೊತ್ತಾ?

ಬೆಳಿಗ್ಗೆ ಗದ್ದುಗೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಆಯೋಜನೆ ಮಾಡಲಾಗಿದೆ. ನಂತರ ಬೆಳಿಗ್ಗೆ 7:30ಕ್ಕೆ ಉತ್ಸವದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆಯೇ ವೇದಿಕೆ ಕಾರ್ಯಕ್ರಮ ಮುಗಿದ ತಕ್ಷಣ ವೀಣಾ ವಾದನ ಕಾರ್ಯಕ್ರಮ ಇರಲಿದೆ. ಅದಾದ ನಂತರ 119 ಮಹಿಳೆಯರಿಂದ ವಚನ ಗಾಯನ ಮಾಡುತ್ತಾರೆ. ಬಳಿಕ ಮಧ್ಯಾಹ್ನ ಹಾಗೂ ಸಂಜೆ ಯಾವುದೇ ಕಾರ್ಯಕ್ರಮವಿಲ್ಲ. ಕಾರ್ಯಕ್ರಮದ ವೇಳೆ ಒಂದಷ್ಟು ನಿಬಂಧನೆ ಪಾಲನೆ ಮಾಡಬೇಕಾಗಿದೆ. ಕೊಡೆ, ನೀರಿನ ಬಾಟಲ್ ತರಬಾರದು ಎಂದು ತಿಳಿಸಿದ್ದಾರೆ.

ಯಾವುದನ್ನು ಕೇಳಿ ಪಡೆಯಬಾರದು

ಇನ್ನು ಶಿವಕುಮಾರ್ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ವಿಚಾರವಾಗಿ ಮಾತನಾಡಿದ ಅವರು, ಆ ಬಗ್ಗೆ ದಯವಿಟ್ಟು ಯಾರು ಪ್ರಚಾರ ಮಾಡಬೇಡಿ. ಯಾವುದನ್ನು ಕೇಳಿ ಪಡೆಯಬಾರದು ಎಂದು ಸಿದ್ದಲಿಂಗ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ, ಎಲ್ಡಿಎಫ್​, ಯುಡಿಎಫ್ ಹಗರಣಗಳನ್ನು ಬಯಲು ಮಾಡುತ್ತೆ: ಪ್ರಧಾನಿ ಮೋದಿ

ಪಾಲಕ್ಕಾಡ್, ಮಾರ್ಚ್​ 29: ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ, ಎಲ್​ಡಿಎಫ್​, ಯುಡಿಎಫ್ ಹಗರಣಗಳನ್ನು ಬಯಲು ಮಾಡುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪಾಲಕ್ಕಾಡ್‌ಗೆ ಆಗಮಿಸಿದ್ದರು.ಎನ್‌ಡಿಎಯ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಬಿಜೆಪಿಯ ಮೇಲಿನ ಜನರ ನಂಬಿಕೆ ಇಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಹಾಜರಿದ್ದ ಜನರ ಉತ್ಸಾಹವನ್ನು ಗಮನಿಸಿದ ಅವರು, ಪಾಲಕ್ಕಾಡ್‌ನ ಈ ಮನೋಭಾವವು ಈಗ ಒಂದು ಚಳವಳಿಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಕೇರಳದ ಯುವಕರು, ಮಹಿಳೆಯರು ಮತ್ತು ರೈತರು ಈಗ ಬಿಜೆಪಿ ಮತ್ತು ಎನ್‌ಡಿಎಯಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದಾರೆ ಮತ್ತು ಅವರಿಗೆ ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು

ಜನಸಾಮಾನ್ಯರಿಗೆ ಅನುಕೂಲವಾಗುವ ಉದ್ದೇಶದಿಂದ ಸಾಲ ನಿಯಮಗಳಲ್ಲಿ ಆರ್​ಬಿಐ (RBI) ಕೆಲ ಬದಲಾವಣೆ ಮಾಡಿದೆ. ಬ್ಯಾಂಕ್ ಅಕೌಂಟ್ ಮತ್ತು ಲಾಕರ್​ಗಳಿಗೆ ಹೆಚ್ಚು ಜನರನ್ನು ಹೆಸರಿಸಲು ಅವಕಾಶ ನೀಡಿರುವುದು; ಕ್ರೆಡಿಟ್ ಸ್ಕೋರ್ ಬೇಗ ಅಪ್​ಡೇಟ್ ಆಗುವುದು, ಸಾಲಗಳ ಮರುಪಾವತಿಗೆ ಪ್ರೀಪೇಮೆಂಟ್ ಚಾರ್ಜ್ ಇಲ್ಲದಿರುವುದು ಇತ್ಯಾದಿ ಹೊಸ ನಿಯಮಗಳು ಜಾರಿಗೆ ಬಂದಿವೆ. ಬ್ಯಾಂಕ್ ಗ್ರಾಹಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಈ ವರ್ಷದಿಂದ ಜಾರಿಗೆ ಬರಲಿರುವ ಕೆಲ ಬ್ಯಾಂಕಿಂಗ್ ಮತ್ತು ಹಣಕಾಸು ನಿಯಮಗಳು ಈ ಕೆಳಕಂಡಂತಿವೆ:

ನಾಲ್ಕು ನಾಮಿನಿಗಳಿಗೆ ಅವಕಾಶ

ಬ್ಯಾಂಕ್ ಖಾತೆ ಹೊಂದಿರುವವರು ನಾಲ್ಕು ನಾಮಿನಿಗಳನ್ನು ಸೇರಿಸುವ ಅವಕಾಶ ಇರುತ್ತದೆ. ಬ್ಯಾಂಕ್ ಲಾಕರ್​ಗಳಿಗೂ ನಾಲ್ಕು ನಾಮಿನಿಗಳನ್ನು ಹೆಸರಿಸಬಹುದು. ಆದರೆ, ಇದು ಕಡ್ಡಾಯವಲ್ಲ, ಕೇವಲ ಮಿತಿ. ಒಂದು ಬ್ಯಾಂಕ್ ಖಾತೆಗೆ ಕನಿಷ್ಠ ಒಬ್ಬರಾದರೂ ನಾಮಿನಿ ಇರಬೇಕು. ಗರಿಷ್ಠ ನಾಲ್ಕು ಮಂದಿಯ ಹೆಸರನ್ನು ಸೇರಿಸಬಹುದು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?

ಬೇಗ ಅಪ್​ಡೇಟ್ ಆಗುತ್ತೆ ಕ್ರೆಡಿಟ್ ಸ್ಕೋರ್

ಸಿಬಿಲ್ ಇತ್ಯಾದಿ ಏಜೆನ್ಸಿಗಳು ನೀಡುವ ಕ್ರೆಡಿಟ್ ಸ್ಕೋರ್ ಈಗ ವೇಗವಾಗಿ ಅಪ್​ಡೇಟ್ ಆಗಲಿದೆ. ಸದ್ಯ ತಿಂಗಳಿಗೆ ಒಮ್ಮೆ ಸ್ಕೋರ್ ಅಪ್​ಡೇಟ್ ಆಗುತ್ತದೆ. ಇನ್ಮುಂದೆ ಅದು ಪ್ರತೀ ಏಳು ದಿನಗಳಿಗೊಮ್ಮೆ ಅಪ್​ಡೇಟ್ ಆಗುತ್ತದೆ.

ಪ್ರತೀ ತಿಂಗಳ 7, 14, 21 ಮತ್ತು 28ನೇ ತಾರೀಖಿನಲ್ಲಿ ಸ್ಕೋರ್ ಪರಿಷ್ಕರಣೆ ಆಗುತ್ತದೆ. ನೀವು ಇಎಂಐ ಕಟ್ಟಿದಾಗೆಲ್ಲಾ ಅದರ ದತ್ತಾಂಶವು ಕ್ರೆಡಿಟ್ ಏಜೆನ್ಸಿಗೆ ವಾರಕ್ಕೊಮ್ಮೆ ರವಾನೆಯಾಗುತ್ತದೆ. ಇಎಂಐ ಪಾವತಿ ತಪ್ಪಿದರೂ ಅದು ನಿಮ್ಮ ಸ್ಕೋರ್​ನಲ್ಲಿ ಬೇಗ ಪ್ರತಿಫಲಿಸಬಹುದು.

ಸಾಲಗಳ ಮೇಲೆ ಪ್ರೀಪೇಮೆಂಟ್ ಚಾರ್ಜಸ್ ಇರುವುದಿಲ್ಲ

ಫ್ಲೋಟಿಂಗ್ ರೇಟ್​ನಲ್ಲಿ ಸಾಲ ಪಡೆದು ಒಂದಷ್ಟನ್ನು ಮುಂಗಡವಾಗಿ ಪಾವತಿಸಿದರೆ ಅದಕ್ಕೆ ಪ್ರೀಪೆಮೆಂಟ್ ಚಾರ್ಜಸ್ ಹಾಕಲಾಗುತ್ತದೆ. ಮುಂಗಡವಾಗಿ ಸಾಲವನ್ನು ಪೂರ್ತಿಯಾಗಿ ಕಟ್ಟಿದರೂ ಫೋರ್​ಕ್ಲೋಶರ್ ಚಾರ್ಜಸ್ ಹಾಕಲಾಗುತ್ತದೆ. ಆದರೆ, 2026ರ ಜನವರಿ 1ರಿಂದ ಹೋಮ್​ಲೋನ್, ಕಾರ್ ಲೋನ್, ಎಜುಕೇಶನ್ ಲೋನ್, ಪರ್ಸನಲ್ ಲೋನ್​ಗಳಿಗೆ ಯಾವುದೇ ಪ್ರೀಪೇಮೆಂಟ್ ಚಾರ್ಜಸ್ ಅಥವಾ ಫೋರ್​ಕ್ಲೋಶರ್ ಚಾರ್ಜಸ್ ಹಾಕಲಾಗುವುದಿಲ್ಲ.

ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು

ಆಭರಣ ವ್ಯಾಪಾರಿಗಳಿಗೆ ರೀಪೇಮೆಂಟ್ ಅವಧಿ ವಿಸ್ತರಣೆ

ಜ್ಯೂವೆಲರಿ ಬ್ಯುಸಿನೆಸ್​ನಲ್ಲಿ ತೊಡಗಿರುವವರು ಗೋಲ್ಡ್ ಮೆಟಲ್ ಲೋನ್​ಗಳನ್ನು ಪಡೆಯಲು ಅವಕಾಶ ಇರುತ್ತದೆ. ಇಂಥ ಸಾಲಗಳಿಗೆ ಮರುಪಾವತಿಗೆ ಇರುವ ಅವಧಿ ಮಿತಿ 180 ದಿನಗಳಿದೆ. ಇದನ್ನು 270 ದಿನಗಳಿಗೆ ವಿಸ್ತರಣೆ ಮಾಡಲಾಗಿದೆ. ಇದರಿಂದ ಆಭರಣ ವ್ಯಾಪಾರಿಗಳಿಗೆ ಹಣ ನಿರ್ವಹಣೆ ಸ್ವಲ್ಪ ಸುಗಮವಾಗಲಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video Viral: ರಾಮ ಮಂದಿರದಲ್ಲಿ ಹನುಮನ ಭಕ್ತಿ; ಮಂಗಳಾರತಿವರೆಗೂ ಕಾದು ಪ್ರಾರ್ಥನೆ ಸಲ್ಲಿಸಿದ ಕೋತಿ!

ತೆಲಂಗಾಣದ ಕೊಮಾರಂಭಿಮ್ ಆಸಿಫಾಬಾದ್ ಜಿಲ್ಲೆಯ ರಾಮ ದೇವಾಲಯದಲ್ಲಿ ನಡೆದ ಅಪರೂಪದ ದೃಶ್ಯವೊಂದು ವೈರಲ್​ ಆಗಿದೆ. ದೇವಾಲಯದ ಅರ್ಚಕರು ಹನುಮಂತನ ವಿಗ್ರಹಕ್ಕೆ ಮಂಗಳಾರತಿ ಬೆಳಗುತ್ತಿದ್ದ ಕ್ಷಣದಲ್ಲಿ, ಎಲ್ಲಿಂದಲೋ ಬಂದ ಕೋತಿಯೊಂದು ಶಾಂತವಾಗಿ ನಿಂತು ಪೂಜೆಯನ್ನು ಕಣ್ತುಂಬಿಸಿಕೊಂಡಿದೆ. ಮಂಗಳಾರತಿ ಪೂರ್ಣಗೊಂಡ ನಂತರ, ಸಾಕ್ಷಾತ್ ಹನುಮಂತನ ಪ್ರತಿರೂಪದಂತಿದ್ದ ಆ ಕೋತಿ ನೇರವಾಗಿ ವಿಗ್ರಹದ ಬಳಿಗೆ ತೆರಳಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದೆ. ಅಷ್ಟೇ ಅಲ್ಲದೆ, ಅರ್ಚಕರು ನೀಡಿದ ತೀರ್ಥ ಮತ್ತು ಪ್ರಸಾದವನ್ನು ಸ್ವೀಕರಿಸಿ, ನೆರೆದಿದ್ದ ಭಕ್ತರನ್ನು ಆಶ್ಚರ್ಯಚಕಿತಗೊಳಿಸಿ ಅಲ್ಲಿಂದ ನಿರ್ಗಮಿಸಿದೆ. ಈ ಅದ್ಭುತ ಘಟನೆಯನ್ನು ಕಂಡ ಅರ್ಚಕರು ಮತ್ತು ಭಕ್ತರು, ಹನುಮಂತನೇ ಸ್ವತಃ ಕೋತಿಯ ರೂಪದಲ್ಲಿ ಬಂದು ನಮಗೆ ದರ್ಶನ ನೀಡಿದ್ದಾನೆ ಎಂದು ಭಾವಿಸಿ ಪುಳಕಿತರಾಗಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ನಮ್ಮ ಮೆಟ್ರೋ ಸ್ಟೇಷನ್​​ಗೆ ಮತ್ತೊಂದು ಖಾಸಗಿ ಕಂಪನಿ ಹೆಸರು: 40 ಕೋಟಿ ರೂ.ಗೆ ಡೀಲ್

ಬೆಂಗಳೂರು, (ಮಾರ್ಚ್ 29): ಬಯೋಕಾನ್ ಹೆಬ್ಬಗೋಡಿ, ಡೆಲ್ಟಾ ಎಲೆಕ್ಟ್ರಾನಿಕ್ ಸಿಟಿ, ಪ್ರೆಸ್ಟಿಜ್ ಗ್ರೂಪ್ ಬೆಳ್ಳಂದೂರು (90cr) ನಂತರ ಇದೀಗ ಬೆಂಗಳೂರು ನಮ್ಮ ಮೆಟ್ರೋ  (Bengaluru Namma Metro) ನಿಲ್ದಾಣಕ್ಕೆ ಮತ್ತೊಂದು ನಿಲ್ದಾಣಕ್ಕೆ ಖಾಸಗಿ ಕಂಪನಿ ಹೆಸರಿಡಲು ಒಪ್ಪಂದವಾಗಿದೆ. ಹೌದು.. ಹೊರವರ್ತುಲ ರಸ್ತೆಯ (ಔಟರ್ ರಿಂಗ್ ರೋಡ್) ಪ್ರಮುಖ ಮೆಟ್ರೋ ನಿಲ್ದಾಣವೊಂದಕ್ಕೆ ‘ಬಾಗ್ ಮಾನೆ’ (Bag mane) ಹೆಸರಿಡಲು ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಅಧಿಕೃತವಾಗಿ ಬರೋಬ್ಬರಿ 40 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ.

40 ಕೋಟಿ ರೂ., 0 ವರ್ಷಕ್ಕೆ ಒಪ್ಪಂದ

ಔಟರ್ ರಿಂಗ್ ರೋಡ್ ನ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ಗೆ (DRDO Sports Complex Metro Station) ಭಾಗ್ ಮನೆ ಹೆಸರಿಡಲು 40 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ. ಬಾಗ್ ಮಾನೆ ಡೆವಲಪರ್ಸ್‌ ಪ್ರೈವೆಟ್‌ ಲಿಮಿಟೆಡ್ ಜೊತೆಗೆ ಬಿಎಂಆರ್‌ಸಿಎಲ್‌ 20 ವರ್ಷಗಳ ಅವಧಿಗೆ ಈ ಒಪ್ಪಂದ ಮಾಡಿಕೊಂಡಿದೆ. ಈ ಹೆಸರಿಡುವ ಹಕ್ಕಿಗಾಗಿ ಕಂಪನಿಯು ಒಟ್ಟು 40 ಕೋಟಿ ರೂಪಾಯಿಗಳನ್ನು ಪಾವತಿಸಲಿದ್ದು, ವಿಶೇಷವೆಂದರೆ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಕಂಪನಿಯು ಈಗಾಗಲೇ 20 ಕೋಟಿ ರೂಪಾಯಿಗಳನ್ನು ಬಿಎಂಆರ್‌ಸಿಎಲ್‌ಗೆ ಮುಂಗಡವಾಗಿ ಪಾವತಿಸಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ 3ನೇ ಹಂತಕ್ಕಾಗಿ 6,775 ಕೋಟಿ ಸಾಲ: ಜಪಾನ್ ಸಂಸ್ಥೆಯೊಂದಿಗೆ ಬಿಎಂಆರ್​ಸಿಎಲ್​ ಒಪ್ಪಂದ

ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂ ಮಾರ್ಗದಲ್ಲಿ (ಔಟರ್ ರಿಂಗ್ ರೋಡ್) ಬರುವ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ (DRDO Sports Complex Metro Station) ಇನ್ನು ಮುಂದೆ ಬಾಗ್ ಮಾನೆ ಹೆಸರನ್ನು ಹೊಂದಲಿದೆ. ಇದು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 19.75 ಕಿಮೀ ಉದ್ದದ ಪ್ರಮುಖ ಮಾರ್ಗದಲ್ಲಿ ಬರುತ್ತದೆ. ಈ ಮಹತ್ವದ ಒಪ್ಪಂದಕ್ಕೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್‌ ಹಾಗೂ ಬಾಗ್ಮನೆ ಡೆವಲಪರ್ಸ್‌ ಪರವಾಗಿ ಆದಿತ್ಯ ಬಾಗ್​ ಮಾನೆ ಅವರು ಸಹಿ ಹಾಕಿದರು.

ಖಾಸಗಿ ಕಂಪನಿ ಹೆಸರಿರುವ ಇತರೆ ಸ್ಪೇಷನ್​ಗಳು

ನಮ್ಮ ಮೆಟ್ರೋ ನಿಲ್ದಾಣಗಳಿಗೆ ಈಗಾಗಲೇ ಹಲವು ಖಾಸಗಿ ಸಂಸ್ಥೆಗಳ ಹೆಸರನ್ನು ನಾಮಕರಣ ಮಾಡಲಾಗಿದೆ.
ಬಯೋಕಾನ್ ಹೆಬ್ಬಗೋಡಿ ನಿಲ್ದಾಣ, ಡೆಲ್ಟಾ ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣ, ಪ್ರೆಸ್ಟಿಜ್ ಗ್ರೂಪ್ ಬೆಳ್ಳಂದೂರು ನಿಲ್ದಾಣ (ಈ ಒಪ್ಪಂದವು ಸುಮಾರು 90 ಕೋಟಿ ರೂ.ಗೆ ನಡೆದಿತ್ತು) ಹೀಗೆ ಮೆಟ್ರೋ ಸ್ಟೇಷನ್ ನಿಲ್ದಾಣಗಳಿಗೆ ಖಾಸಗಿ ಕಂಪನಿಗಳ ಹೆಸರು ಇಡಲಾಗಿದ್ದು, ಇದೀಗ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ಗೆ ಬಾಗ್ ಮಾನೆ ಎಂದು ನಾಮಕರಣ ಮಾಡಲಾಗುತ್ತದೆ.

ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರದವರೆಗಿನ ಈ ಮೆಟ್ರೋ ಮಾರ್ಗವು ವೇಗವಾಗಿ ಸಿದ್ಧಗೊಳ್ಳುತ್ತಿದ್ದು, ಈ ವರ್ಷದ ಡಿಸೆಂಬರ್ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ. ಇದೇ ಮಾರ್ಗದಲ್ಲಿ ಇನ್ನೂ ಎರಡು ನಿಲ್ದಾಣಗಳಿಗೆ ಖಾಸಗಿ ಕಂಪನಿಗಳ ಹೆಸರಿಡುವ ಕುರಿತು ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಆ ಒಪ್ಪಂದಗಳೂ ಅಂತಿಮಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕ್ರಿಯೆಯಿಂದ ಬಿಎಂಆರ್‌ಸಿಎಲ್‌ಗೆ ಹೆಚ್ಚುವರಿ ಆದಾಯ ಲಭ್ಯವಾಗಲಿದ್ದು, ಮೆಟ್ರೋ ನಿರ್ವಹಣೆಗೆ ಇದು ಸಹಕಾರಿಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಭೇದಿ!

ದೇವನಹಳ್ಳಿ, ಮಾರ್ಚ್​ 29: ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದಲ್ಲಿ ಶ್ರೀರಾಮನವಮಿ ಅಂಗವಾಗಿ ವಿತರಿಸಿದ ಅನ್ನಪ್ರಸಾದ ಸೇವಿಸಿದ ಭಕ್ತರಲ್ಲಿ ಫುಡ್ ಪಾಯಿಸನ್ ಆಗಿರುವುದು ಕಂಡುಬಂದಿದೆ. ನಿನ್ನೆ (ಮಾರ್ಚ್​ 28) ದೇವಸ್ಥಾನದಲ್ಲಿ ನೀಡಿದ ಪ್ರಸಾದ ಸೇವಿಸಿದ ಬಳಿಕ ಹಲವರಿಗೆ ವಾಂತಿ, ಬೇಧಿ ಸಮಸ್ಯೆ ಕಾಣಿಸಿಕೊಂಡು ಬಹುತೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿವರ್ಷ ನಡೆಯುವಂತೆ ಈ ವರ್ಷವೂ ಅನ್ನಪ್ರಸಾದ ವಿತರಣೆ ಮಾಡಲಾಗಿತ್ತು. ಆದರೆ ಈ ಬಾರಿ ಪ್ರಸಾದ ಸೇವಿಸಿದ ಅನೇಕ ಭಕ್ತರು ಅಸ್ವಸ್ಥಗೊಂಡಿರುವುದು ಆತಂಕ ಮೂಡಿಸಿದೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ತೀವ್ರ ಅಸ್ವಸ್ಥರಾದವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಲಾಗಿದೆ. ಉಳಿದವರಿಗೆ ಬೆಟ್ಟೇನಹಳ್ಳಿಯಲ್ಲೇ ವೈದ್ಯಕೀಯ ಸೇವೆ ಒದಗಿಸಲಾಗಿದೆ.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಆನ್​ಲೈನ್​ ಟ್ರೇಡಿಂಗ್​ ಇನ್ವೆಸ್ಟ್​ಮೆಂಟ್​ ಹೆಸರಲ್ಲಿ ಕೋಟ್ಯಂತರ ರೂ ವಂಚನೆ: ಹೆಚ್ಚಿನ‌‌ ಲಾಭದ ಆಸೆಗೆ ಮೋಸ ಹೋದ ವ್ಯಕ್ತಿ

ಚಿಕ್ಕಮಗಳೂರು, ಮಾರ್ಚ್​ 29: ಜಗತ್ತಿನಲ್ಲಿ ಮೋಸ ಹೋಗುವವರು ಇರುವವರೆಗೆ ಮೋಸ (Fraud)  ಮಾಡುವವರು  ಇರುತ್ತಾರೆ ಎಂಬ ಮಾತಿಗೆ ಈ ಸ್ಟೋರಿ ಒಂದು ಉದಾಹರಣೆ ಎನ್ನಬಹುದು. ಫೇಸ್​ಬುಕ್ ಜಾಹೀರಾತು ನಂಬಿ ಓರ್ವ ವ್ಯಕ್ತಿ ಬರೋಬ್ಬರಿ 1.28 ಕೋಟಿ ರೂ ಕಳೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಚಿಕ್ಕಮಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ‌ ಶಿವಪುರ ಗ್ರಾಮದ ನಿವಾಸಿ ಕಲ್ಲೇಗೌಡ ಎಂಬುವರಿಗೆ ಖದೀಮರು ಆನ್​ಲೈನ್​ ಟ್ರೇಡಿಂಗ್​ ಇನ್ವೆಸ್ಟ್​ಮೆಂಟ್​ ಹೆಸರಲ್ಲಿ ಕೋಟ್ಯಂತರ ರೂ ಹಣ ವಂಚಿಸಿದ್ದಾರೆ. ‘FYERS’ ಎಂಬ‌ ಟ್ರೇಡಿಂಗ್ ಜಾಹೀರಾತನ್ನು ಫೇಸ್​ಬುಕ್​ನಲ್ಲಿ ನೋಡಿದ ಕಲ್ಲೇಗೌಡರು F8-FYERS ಸೆಕ್ಯೂರಿಟೀಸ್ ವಾಟ್ಸಾಪ್​ ಗ್ರೂಪ್​ ಸೇರಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್‌ ಮೂಲಕ ಕಾರು ಖರೀದಿಸುವ ಮುನ್ನ ಹುಷಾರ್:​ ಅಂತಾರಾಜ್ಯ ಜಾಲ ಪತ್ತೆ

ಆನ್​ಲೈನ್​ ಟ್ರೇಡಿಂಗ್​ ಇನ್ವೆಸ್ಟ್​ಮೆಂಟ್​ ಹೆಸರಲ್ಲಿ ಕಲ್ಲೇಗೌಡಗೆ ವಂಚಕರು ಹೆಚ್ಚಿನ‌‌ ಲಾಭ ಗಳಿಸುವ ಆಸೆ ತೋರಿಸಿದ್ದಾರೆ. ಹಂತ ಹಂತವಾಗಿ 1 ಕೋಟಿ 28 ಲಕ್ಷದ 10 ಸಾವಿರ ರೂ.‌ ಪಡೆದುಕೊಂಡಿದ್ದಾರೆ. ಆದರೆ  ಯಾವುದೇ ರೀತಿಯ ಲಾಭಾಂಶ ನೀಡಿಲ್ಲ. ಹೀಗಾಗಿ ಕಲ್ಲೇಗೌಡರು ಹಣ ವಿತ್​ಡ್ರಾ ಮಾಡಲು ಹೋದಾಗ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಕಲ್ಲೇಗೌಡರಿಂದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಎರಡೆರಡು ಮನೆಗಳಿಗೆ ಕನ್ನಾ ಹಾಕಿದ ಖದೀಮರು

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ತಡರಾತ್ರಿ ಎರಡು ಕಡೆ ಮನೆಗಳ್ಳತನ ನಡೆದಿದ್ದು, ಖದೀಮರು ಬೆಳ್ಳಿ, ಚಿನ್ನಾಭರಣ ಮತ್ತು ಹಣವನ್ನು ಕಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದಲ್ಲಿ ವೃತ್ತಿಯಲ್ಲಿ ವಕೀಲರಾಗಿರುವ ಪ್ರವೀಣ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, 240 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಮತ್ತು 20 ಲಕ್ಷ ರೂ ಹಣ ಎಗರಿಸಿದ್ದಾರೆ. ಬೈಕ್​ನಲ್ಲಿ ಬಂದಿದ್ದ ಇಬ್ಬರು ಕಿರಾತಕರಿಂದ ಕೃತ್ಯವೆಸಗಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಹಣದ ಮಳೆ ಸುರಿಸ್ತೀವಿ ಅಂದೋರು ಮಾಡಿದ್ರು ಚೀಟಿಂಗ್; ಲಕ್ಷ ಲಕ್ಷ ಪಂಗನಾಮ

ಮೊದಲಿಗೆ ರಾಮನಗರದ ಭುನೇಶ್ವರಿನಗರದಲ್ಲಿ ನಂಜುಂಡಯ್ಯ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. 68 ಗ್ರಾಂ ಚಿನ್ನಾಭರಣ ದೋಚಿ ಪರಾರಿ ಆಗಿದ್ದಾರೆ. ನಂತರ ಮುಖಕ್ಕೆ ಮಾಸ್ಕ್, ಕೈಗೆ ಗ್ಲೋಸ್ ಹಾಕಿಕೊಂಡು ಬಂದು ಚನ್ನಪಟ್ಟಣದಲ್ಲಿ ಕಳ್ಳತನ ಮಾಡಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಹಾಗೂ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಡುಗಡೆಗೆ ಸಜ್ಜಾಗಿದೆ ರಾಯರ ಕುರಿತ ಹೊಸ ಕನ್ನಡ ಸಿನಿಮಾ ‘ಅಮಲಾಮೃತ’

ರಾಘವೇಂದ್ರ ಸ್ವಾಮಿಗಳ ಕುರಿತಾದ ಭಕ್ತಿ ಪ್ರಧಾನ ಕಥೆ ಹೊಂದಿರುವ ‘ಅಮಲಾಮೃತ’ (Amalamrutha) ಸಿನಿಮಾದ ಎಲ್ಲ ಕೆಲಸಗಳು ಮುಗಿದಿವೆ. ‘ಸಿರಿ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ಸಿದ್ಧವಾಗಿದೆ. ಮೈಸೂರು ಮೂಲದ ಗುರುರಾಜ ರಾವ್ ಎಂ.ಎಸ್. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೇ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಯತಿಗಳು, ಸರ್ಕಾರಿ ಅಧಿಕಾರಿಗಳಿಗೆ ಈ ಸಿನಿಮಾ ವೀಕ್ಷಿಸಿದರು. ಸಿನಿಮಾ ನೋಡಿದ ಜನರ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ಖುಷಿ ಆಗಿದೆ.

ಕೆ.ಎಸ್. ಗೋವಿಂದರಾಮ ರಾವ್ ಅವರು ‘ಅಮಲಾಮೃತ’ ಸಿನಿಮಾದಲ್ಲಿ ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಬಾಹ್ಲೀಕರಾಜ, ವ್ಯಾಸರಾಜ ಹಾಗೂ ರಾಘವೇಂದ್ರ ಸ್ವಾಮಿಗಳಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ವೀರೇಂದ್ರ ಆಚಾರ್ಯ, ಸುಬ್ಬರಾವ್, ಚೈತ್ರಾ ಭಾರದ್ವಾಜ್, ಮಾಸ್ಟರ್ ಸುಚೇಂದ್ರ, ಯಶಸ್, ಸುಮನ್, ಶ್ರೀಕಾಂತ್, ದೀಪಕ್ ಮುಂತಾದವರು ನಟಿಸಿದ್ದಾರೆ.

‘ಅಮಲಾಮೃತ’ ಚಿತ್ರಕ್ಕಾಗಿ ಹರಿದಾಸರ 8 ಸಾಹಿತ್ಯಕ್ಕೆ ವಿದೂಷಿ ರತ್ನಪ್ರಸಾದ್ ಅವರು ಸಂಗೀತ ಸಂಯೋಜಿಸಿದ್ದಾರೆ. ಪ್ರದೀಪ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸ್ವಾಮಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಮೊದಲು ಪುರಂದರದಾಸರು ಮತ್ತು ಶ್ರೀ ಪಾದರಾಜರ ಸಾಕ್ಷಚಿತ್ರ ಸಿದ್ದಪಡಿಸಿದ್ದ ಅನುಭವದ ಮೇಲೆ ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ.

‘ಆ ಅನುಭವದಿಂದಲೇ ನಿರ್ದೇಶನ ಹಾಗೂ ಬಂಡವಾಳ ಹೂಡಿದ್ದೇನೆ. ಅಮಲಾ ಮತ್ತು ಅಮೃತ ಇವರೆಡು ಅ ಅಕ್ಷರದಿಂದ ಕೂಡಿದೆ. ನವ ಭಕುತಿಯ ಜ್ಙಾನಯಘ್ನದ ಫಲಕ್ಕೆ ಅಮಲ ಅಂತಲೂ, ಸಾರಕ್ಕೆ ಅಮೃತ ಎಂದು ಕರೆಯುತ್ತಾರೆ. ನವಭಕುತಿ ಅಂದರೆ ಸಾಕ್ಷಾತ್ ಭಗವಂತನು ವೈಷ್ಣವ ತತ್ವದಲ್ಲಿ ನೀಡಿದ ಆದೇಶ. ಭಕ್ತಿಯಿಂದ 64 ವಿದ್ಯೆಗಳನ್ನು ಕಲಿತವರು ಶ್ರೀ ರಾಘವೇಂದ್ರ ಸ್ವಾಮಿಗಳು. ಅವರು ಪೂರ್ವಪರದಲ್ಲಿ ಐದು ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ಕರ್ಮಜದೇವತೆ, ಭಕ್ತ ಪ್ರಹ್ಲಾದ, ಬಾಹ್ಲೀಕರಾಜ, ವ್ಯಾಸರಾಜ ಕೊನೆಯದಾಗಿ ಗುರುಸಾರ್ವಭೌಮ’ ಎಂದು ಗುರುರಾಜ ರಾವ್ ಎಂ.ಎಸ್. ಹೇಳಿದರು.

ಇದನ್ನೂ ಓದಿ: ಬೆಂಗಳೂರಿನ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಜನಿಕಾಂತ್

‘ಇವೆಲ್ಲವು ಹುಟ್ಟಿಕೊಂಡ ಬಗೆ ಹೇಗೆ ಎಂಬುದರ ವಿವರವನ್ನು ತೋರಿಸಲಾಗಿದೆ. ರಾಯರಲ್ಲಿ ಇರುವ ನಿಷ್ಠೆ ಬೇರೆ ಯಾರಲ್ಲೂ ಕಾಣುವುದಿಲ್ಲ. ಸ್ವಾಮಿಗಳ ತಪಸ್ಸಿನ ಫಲ ಎಲ್ಲ ಜನಾಂಗಕ್ಕೂ ಪುಣ್ಯದ ಫಲ ಸಿಕ್ಕಿದೆ. ಯಾವುದೇ ರೀತಿಯಲ್ಲಿ ಶ್ರದ್ದೆಯಿಂದ ಬೃಂದಾವನಕ್ಕೆ ನಮಸ್ಕಾರ ಮಾಡಿದಾಗ ಮಾತ್ರ ಒಳ್ಳೆಯದಾಗುತ್ತದೆ ಎಂಬ ಸಂದೇಶ ಇರಲಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link