All posts by nagaraj11081993

IPL 2026: ಲೀಗ್ ಹಂತದ ಅರ್ಧದಷ್ಟು ಪಂದ್ಯಗಳಿಗೆ ಧೋನಿ ಅಲಭ್ಯ

Source link

Vastu Broom Placement: ಮನೆಯಲ್ಲಿ ಪೊರಕೆಯನ್ನು ಈ ದಿಕ್ಕಿನಲ್ಲಿ ಇಡಲೇಬೇಡಿ; ಅಪಾಯ ತಪ್ಪಿದ್ದಲ್ಲ!

ಭಾರತೀಯ ಸಂಪ್ರದಾಯದಲ್ಲಿ ಪೊರಕೆಯನ್ನು ಕೇವಲ ಕಸ ಗುಡಿಸುವ ಸಾಮಾನ್ಯ ಸಾಧನವಾಗಿ ನೋಡದೆ, ಅದನ್ನು ಲಕ್ಷ್ಮಿ ದೇವಿಯ ಸಾಕಾರ ರೂಪವೆಂದು ಗೌರವಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆಯು ಮನೆಯಲ್ಲಿರುವ ಬಡತನ ಮತ್ತು ಅಶುಭವನ್ನು ‘ಕಸ’ದ ರೂಪದಲ್ಲಿ ಹೊರಹಾಕಿ, ಸ್ವಚ್ಛತೆಯ ಮೂಲಕ ದೈವಿಕ ಅನುಗ್ರಹವನ್ನು ತರುತ್ತದೆ. ಆದರೆ, ಈ ಪವಿತ್ರ ವಸ್ತುವನ್ನು ಮನೆಯಲ್ಲಿ ಎಲ್ಲಿ ಇಡಬೇಕು ಮತ್ತು ಹೇಗೆ ಬಳಸಬೇಕು ಎಂಬುದರ ಕುರಿತು ಅನೇಕ ಧಾರ್ಮಿಕ ನಂಬಿಕೆಗಳಿವೆ. ಈ ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಸಂಪತ್ತು ಮತ್ತು ಶುಭ ಫಲಗಳು ಲಭಿಸುತ್ತವೆ ಎಂಬುದು ಹಿರಿಯರ ನಂಬಿಕೆ.

ಪೊರಕೆಯನ್ನು ಇಡುವ ವಿಧಾನದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ಸಾಮಾನ್ಯವಾಗಿ ಅನೇಕರು ಪೊರಕೆಯನ್ನು ಬಳಸಿದ ನಂತರ ಅದರ ಗುಡಿಸುವ ಭಾಗ ಕೆಳಗೆ ಇರುವಂತೆ ಇಡುತ್ತಾರೆ, ಆದರೆ ಇದು ತಪ್ಪು ವಿಧಾನ. ಇದರಿಂದ ಪೊರಕೆಗೆ ಹಾನಿಯಾಗುವುದಲ್ಲದೆ ವಾಸ್ತು ದೋಷವೂ ಉಂಟಾಗುತ್ತದೆ. ಬದಲಾಗಿ, ಪೊರಕೆಯನ್ನು ಯಾವಾಗಲೂ ಲಂಬವಾಗಿ ಅಥವಾ ಮಲಗಿಸಿ ಇಡಬೇಕು, ಅಂದರೆ ಅದರ ಗುಡಿಸುವ ಭಾಗವು ಮೇಲ್ಮುಖವಾಗಿರಬೇಕು. ಇನ್ನು ಮುಖ್ಯವಾದ ವಿಷಯವೆಂದರೆ, ಮನೆಯಲ್ಲಿ ಎಂದಿಗೂ ಎರಡು ಪೊರಕೆಗಳನ್ನು ಒಟ್ಟಿಗೆ ಇಡಬಾರದು; ಇದು ಅಶುಭದ ಸಂಕೇತವೆಂದು ಪರಿಗಣಿಸಲಾಗಿದೆ.

ವಾಸ್ತು ಪ್ರಕಾರ ದಿಕ್ಕುಗಳಿಗೆ ಹೆಚ್ಚಿನ ಮಹತ್ವವಿದ್ದು, ಪೊರಕೆಯನ್ನು ಈಶಾನ್ಯ ಮೂಲೆಯಲ್ಲಿ ಎಂದಿಗೂ ಇಡಬಾರದು. ಈಶಾನ್ಯವು ದೈವಿಕ ಶಕ್ತಿಯ ಮೂಲವಾಗಿದ್ದು, ಅಲ್ಲಿ ಕಸ ಗುಡಿಸುವ ವಸ್ತುವನ್ನು ಇಡುವುದು ಸರಿಯಲ್ಲ. ಬದಲಾಗಿ, ನೈಋತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದು ಅತ್ಯಂತ ಶುಭ. ಇದು ಆರ್ಥಿಕ ಸಂಕಷ್ಟಗಳನ್ನು ದೂರಮಾಡಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ. ಅಲ್ಲದೆ, ಮನೆಯೊಳಗೆ ಬರುವ ಅತಿಥಿಗಳ ಕಣ್ಣಿಗೆ ಪೊರಕೆ ನೇರವಾಗಿ ಬೀಳಬಾರದು; ಅದನ್ನು ಯಾರೂ ಗಮನಿಸದ ಶಾಂತವಾದ ಮೂಲೆಯಲ್ಲಿ ಅಡಗಿಸಿ ಇಡುವುದು ಸೂಕ್ತ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಮನೆಯನ್ನು ಗುಡಿಸುವಾಗಲೂ ಕೆಲವು ಶಿಸ್ತುಬದ್ಧ ಕ್ರಮಗಳಿವೆ. ಕಸವನ್ನು ಎಂದಿಗೂ ಈಶಾನ್ಯದ ಕಡೆಗೆ ಗುಡಿಸಬಾರದು, ಬದಲಾಗಿ ದಕ್ಷಿಣದ ಕಡೆಗೆ ಗುಡಿಸಬೇಕು. ಒಂದು ಕೋಣೆಯ ಕಸವನ್ನು ಗುಡಿಸಿ ಆ ಕೋಣೆಯಲ್ಲಿಯೇ ಅದನ್ನು ಎತ್ತಿ ಹೊರಹಾಕಬೇಕು. ಕಸವನ್ನು ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ದೂಡುವುದು ಅಥವಾ ಹೊಸ್ತಿಲ ಮೇಲೆ ಗುಡಿಸುವುದು ಅತ್ಯಂತ ಅಶುಭ. ಏಕೆಂದರೆ, ಮನೆಯ ದ್ವಾರವನ್ನು ಮಹಾಲಕ್ಷ್ಮಿಯ ರೂಪವೆಂದು ನಂಬಲಾಗುತ್ತದೆ. ಅರಿಶಿನ-ಕುಂಕುಮದಿಂದ ಪೂಜಿಸಬೇಕಾದ ಹೊಸ್ತಿಲ ಮೇಲೆ ಕಸವನ್ನು ಹಾಕುವುದು ಮನೆಗೆ ದಾರಿದ್ರ್ಯವನ್ನು ತರುತ್ತದೆ ಎಂಬ ನಂಬಿಕೆಯಿದೆ.

ಪೊರಕೆಯನ್ನು ಅತ್ಯಂತ ಪವಿತ್ರವಾಗಿ ಕಾಣಬೇಕು ಮತ್ತು ಅದನ್ನು ಎಂದಿಗೂ ಕಾಲಿನಿಂದ ತುಳಿಯಬಾರದು. ದೇವತೆಗಳ ವರಪ್ರಸಾದವೆಂದು ನಂಬಲಾದ ಈ ವಸ್ತುವನ್ನು ಪಾದಗಳಿಂದ ಸ್ಪರ್ಶಿಸುವುದು ಅಗೌರವದ ಸಂಕೇತವಾಗಿದೆ. ಇನ್ನು ಪೊರಕೆ ಖರೀದಿಸುವ ವಿಷಯಕ್ಕೆ ಬಂದರೆ, ಎಣ್ಣೆ ಅಥವಾ ಉಪ್ಪಿನಂತೆ ಇದಕ್ಕೆ ನಿರ್ದಿಷ್ಟ ದಿನಗಳ ನಿರ್ಬಂಧವಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಗತ್ಯವಿದ್ದಾಗ ಹೊಸ ಪೊರಕೆಯನ್ನು ಖರೀದಿಸಬಹುದು. ಈ ಸರಳ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಆರ್ಥಿಕ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗ ಸತ್ತಿದ್ದಾನೆ, ಸೊಸೆಯಿಂದ ಜೀವನಾಂಶ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ; ನ್ಯಾಯಾಲಯ ಹೇಳಿದ್ದೇನು?

ಲಕ್ನೋ, ಮಾರ್ಚ್ 29: ತಮ್ಮ ಮಗ ಸತ್ತಿದ್ದಾನೆ. ಸೊಸೆಯಿಂದ ತಮಗೆ ಜೀವನಾಂಶ (ಮೈಂಟೆನೆನ್ಸ್) ಕೊಡಿಸಿ ಎಂದು ವೃದ್ಧ ದಂಪತಿಯೊಂದು ಕೋರ್ಟ್ ಮೆಟ್ಟಿಲೇರಿದ ಘಟನೆ ಬೆಳಕಿಗೆ ಬಂದಿದೆ. ಈ ವೃದ್ಧರ ಪರವಾಗಿ ತೀರ್ಪು ಕೊಡಲು ಕೋರ್ಟ್ ನಿರಾಕರಿಸಿತು. ಇದರೊಂದಿಗೆ ಎರಡು ಕೋರ್ಟ್​ಗಳಲ್ಲಿ ವೃದ್ಧರ ಪರವಾಗಿ ತೀರ್ಪು ಬರಲಿಲ್ಲ. ಫ್ಯಾಮಿಲಿ ಕೋರ್ಟ್​ನಲ್ಲಿ ತಮ್ಮ ಮನವಿ ತಿರಸ್ಕೃತಗೊಂಡ ಬಳಿಕ ಈ ವೃದ್ಧರು ಉತ್ತರಪ್ರದೇಶದ ಅಲಾಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಅವರ ಪರವಾಗಿ ತೀರ್ಪು ಬರಲಿಲ್ಲ. ನೈತಿಕ ಬದ್ಧತೆಯನ್ನು ಕಾನೂನು ಬದ್ಧತೆ ಎಂದು ಪರಿಗಣಿಸಲು ಆಗುವುದಿಲ್ಲ. ಸೊಸೆಯಿಂದ ಜೀವನಾಂಶ ಕೊಡಿಸುವ ಅವಕಾಶ ಇಲ್ಲ ಎಂದು ಹೈಕೋರ್ಟ್ ಪೀಠ (Allahabad High Court) ತನ್ನ ತೀರ್ಪಿನಲ್ಲಿ ತಿಳಿಸಿತು.

ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್ಟೆಬಲ್​ವೊಬ್ಬರು 2021ರಲ್ಲಿ ಮೃತಪಡುತ್ತಾರೆ. 2016ರಲ್ಲಿ ಆತನ ವಿವಾಹವಾಗಿರುತ್ತದೆ. ಆತನ ಹೆಂಡತಿ ಕೂಡ ಯುಪಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್​ಟೆಬಲ್ ಆಗಿರುತ್ತಾರೆ. ತಮ್ಮ ಸೊಸೆಗೆ ಸಾಕಷ್ಟು ಸ್ವತಂತ್ರ ಆದಾಯ ಇದೆ. ತಮ್ಮ ಮಗನ ನಿಧನದ ನಂತರ ಆಕೆಗೆ ಸರ್ವಿಸ್ ಬೆನಿಫಿಟ್ಸ್ ಕೂಡ ಸಿಕ್ಕಿದೆ. ಹೀಗಾಗಿ, ತಮಗೆ ಆಕೆಯಿಂದ ಜೀವನಾಂಶ ಕೊಡಿಸುವಂತೆ ಕೌಟುಂಬಿಕ ನ್ಯಾಯಾಲಯವೊಂದರಲ್ಲಿ ಮನವಿ ಮಾಡಿದ್ದರು. ಆದರೆ, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಇವರ ಅರ್ಜಿಯನ್ನು ಈ ಕೆಳಗಿನ ಕೋರ್ಟ್ ತಿರಸ್ಕರಿಸಿತ್ತು.

ಇದನ್ನೂ ಓದಿ: ಚಾಕೊಲೇಟ್ ಕದ್ದಿದ್ದಾಳೆಂದು 12 ವರ್ಷದ ಮಗಳನ್ನು ದೊಣ್ಣೆಯಿಂದ ಹೊಡೆದು ಕೊಂದ ತಂದೆ

ಇದಾದ ಬಳಿಕ ಈ ವೃದ್ಧ ದಂಪತಿಯು ಅಲಹಾಬಾದ್ ಹೈಕೋರ್ಟ್​ನಲ್ಲಿ ಮೇಲ್ಮನವಿ ಮಾಡಿತು. ಅರ್ಜಿದಾರರು ವೃದ್ಧರು ಮತ್ತು ಅನಕ್ಷರಸ್ಥರಾಗಿದ್ದಾರೆ. ಮಗನ ಮೇಲೆ ಅವಲಂಬಿತರಾಗಿದ್ದರು. ಅವರ ನಿಧನದಿಂದ ಅವರ ಬದುಕು ನಿರ್ವಹಣೆ ಕಷ್ಟವಾಗಿದೆ. ಅಸಹಾಯಕ ಅತ್ತೆ ಮಾವನವರನ್ನು ಪಾಲನೆ ಮಾಡುವ ನೈತಿಕ ಹೊಣೆ ಸೊಸೆಗೆ ಇರುತ್ತದೆ. ಇದನ್ನು ಕಾನೂನು ಬದ್ಧತೆಯಾಗಿ ಪರಿಗಣಿಸಬೇಕು ಎಂದು ವೃದ್ಧ ದಂಪತಿ ಪರ ವಕೀಲರು ಕೋರ್ಟ್​ನಲ್ಲಿ ವಾದಿಸದ್ದರು.

ಮಗನ ಸಾವಿನಿಂದಾಗಿ ಸೊಸೆಗೆ ಕೆಲಸ ಸಿಕ್ಕಿತು ಎಂದು ಹೇಳುವ ಯಾವ ದಾಖಲೆಯೂ ಇಲ್ಲ. ನೈತಿಕ ಬದ್ಧತೆಯನ್ನು ಕಾನೂನು ಬದ್ಧತೆ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಪೀಠದಿಂದ ತೀರ್ಪು ಬಂದಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್ ವಿಶೇಷತೆ ಏನು?

ವಾಷಿಂಗ್ಟನ್, (ಮಾರ್ಚ್​ 29): ಅಮೆರಿಕ (America)  , ಇಸ್ರೆಲ್  (Israel) ಮತ್ತು ಇರಾನ್ (Iran) ನಡುವಿನ ಯುದ್ಧ 30ನೇ ದಿನಕ್ಕೆ ಕಾಲಿಟ್ಟಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚು ಅಪಾಯಕಾರಿಯಾಗುತ್ತಿದೆ. ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ನಡುವೆ ಅಮೆರಿಕದ ಎಚ್ಚರಿಕೆಗೂ ಇರಾನ್ ಬಗ್ಗುತ್ತಿಲ್ಲ. ಬದಲಾಗಿ ಪ್ರತಿದಾಳಿ ಮುಂದುವರೆಸಿದೆ. ಇದರಿಂದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ತಮ್ಮ ವಾಯುಸೇನೆಯ ಶಕ್ತಿಶಾಲಿ ಬಾಂಬರ್ B-52 ವಿಮಾನ (US B-52 Bomber) ಮೂಲಕ ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿದ್ದಾರೆ. ಹೌದು.. ಅಮೆರಿಕ ಇರಾನ್‌ ವಿರುದ್ಧದ ಯುದ್ದಕ್ಕಾಗಿ ಈಗ ಮತ್ತಷ್ಟು ಯುದ್ದ ವಿಮಾನಗಳನ್ನ ಮಧ್ಯಪ್ರಾಚ್ಯಕ್ಕೆ ಕಳಿಸುತ್ತಿದೆ. ಅದರಲ್ಲೂ ಬಿ-52 ಬಾಂಬರ್‌ ಯುದ್ದ ವಿಮಾನಗಳನ್ನ ಹೆಚ್ಚು ಕಳಿಸುತ್ತಿದ್ದು, ಇಂದು (ಮಾರ್ಚ್ 29) ಮತ್ತೆ ಎರಡು ಬಿ-52 ಯುದ್ದ ವಿಮಾನಗಳು ಬ್ರಿಟನ್‌ನ ವಾಯು ನೆಲೆಗೆ ಆಗಮಿಸಿವೆ. ಇದರೊಂದಿಗೆ ಇರಾನ್‌ ವಿರುದ್ಧದ್ದ ಯುದ್ದಕ್ಕಾಗಿ ಅಮೆರಿಕ ಕಳಿಸಿರುವ ಬಿ-52 ಯುದ್ದ ವಿಮಾನಗಳ ಸಂಖ್ಯೆ ಈಗ 23ಕ್ಕೇರಿದೆ.

ಇನ್ನು ಟ್ರಂಪ್ ಬಳಸಲು ಮುಂದಾದ ಅಮೆರಿಕ ವಾಯುಸೇನೆಯ ಶಕ್ತಿಶಾಲಿ ಬಾಂಬರ್ B-52 ವಿಮಾನ ಸಾಮರ್ಥ್ಯ ಎಷ್ಟು ಎನ್ನುವುದನ್ನು ನೋಡುವುದಾದರೆ, 1950ರಲ್ಲಿ ಅಮೆರಿಕ ವಾಯುಸೇನೆಯ ಶಕ್ತಿಶಾಲಿ ಬಾಂಬರ್ B-52 ವಿಮಾನವನ್ನು ಪರಿಚಯಿಸಲಾಗಿದೆ. ಅಣ್ವಸ್ತ್ರ, ಭಾರಿ ತೂಕದ ಬಾಂಬ್​ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಪರಮಾಣು ಕ್ರೂಸ್ ಮಿಸೈಲ್ ಹೊತ್ತೊಯ್ಯಲಿದೆ. ಹಾಗೇ ಈ B-52 ವಿಮಾನ 32,000 ಕೆಜಿಗೂ ಹೆಚ್ಚು ತೂಕದ ವಸ್ತುಗಳ ಜೊತೆಗೆ 14,000 ಕಿ.ಮೀಟರ್​ ಗಿಂತ ಹೆಚ್ಚು ದೂರ ಹಾರಬಲ್ಲದು.

ಇದನ್ನೂ ಓದಿ:  ಹಾರ್ಮುಜ್ ಜಲಸಂಧಿ, ಖಾರ್ಗ್​ ದ್ವೀಪದ ಮೇಲೆ ದಾಳಿ ಮಾಡುತ್ತಾ ಅಮೆರಿಕ, 3,500 ಸೈನಿಕರನ್ನು ನಿಯೋಜಿಸಿರುವುದೇಕೆ?

Source link

IPL 2026: ಹೀನಾಯ ಸೋಲಿನ ನಡುವೆಯೂ ದಾಖಲೆ ಬರೆದ ಇಶಾನ್ ಕಿಶನ್

Source link

ಬೆಂಗಳೂರು ಬಿಟ್ಟು 40 ಕಿಮೀ ಹೋದ್ರೆ ಸೌದೆ ಸಿಗುತ್ತೆ: ಕಟ್ಟಿಗೆ ಬಳಸುವಂತೆ ಸಚಿವ ಮುನಿಯಪ್ಪ ಕರೆ

ಬೆಂಗಳೂರು, ಮಾರ್ಚ್​ 29: ಗಲ್ಫ್ ಯುದ್ಧವೂ 30ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಕರುನಾಡಲ್ಲಿ ಸಮರದ ಎಫೆಕ್ಟ್ ಬೀರಿದ್ದು, ಅಡುಗೆ ಅನಿಲ ಅಭಾವ (Gas Cylinder Crisis) ಮುಂದುವರಿದಿದೆ. ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್, ಕೈಗಾರಿಕೆಗಳು ಥಂಡಾ ಹೊಡೆದಿವೆ. ಜನರು ಖಾಲಿ ಗ್ಯಾಸ್​ ಸಿಲಿಂಡರ್​ ಹಿಡಿದು ಏಜೆನ್ಸಿಗಳತ್ತ ಧಾವಿಸುತ್ತಿದ್ದಾರೆ. ಈ ಮಧ್ಯೆ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ ಸಿಲಿಂಡರ್​ ಅಭಾವ ಇರುವುದರಿಂದ ಸೌದೆ ಒಲೆ ಬಳಸುವಂತೆ ಕರೆ ನೀಡಿದ್ದಾರೆ.

ಸೌದೆ ಒಲೆಗಳನ್ನು ಬಳಸುವಂತೆ ಸಚಿವ ಕೆ.ಹೆಚ್ ಮುನಿಯಪ್ಪ ಮನವಿ

ಬೆಂಗಳೂರಿನಲ್ಲಿರುವ ಅವರ ಖಾಸಗಿ ನಿವಾಸದಲ್ಲಿ ಸುದ್ದಿಗೋಷ್ಠಿ ಮಾಡಿದ ಸಚಿವ ಕೆ.ಹೆಚ್ ಮುನಿಯಪ್ಪ, ಸಿಲಿಂಡರ್​ ಅಭಾವ ಇರುವುದರಿಂದ ಹಳ್ಳಿ ಭಾಗದ ಜನರು ಸೌದೆ ಒಲೆಗಳನ್ನು ಬಳಸಿ. ಬೆಂಗಳೂರು ಬಿಟ್ಟು 40 ಕಿಲೋಮೀಟರ್ ಹೋದರೆ ಸೌದೆ ಸಿಗುತ್ತೆ. ಅರಣ್ಯ ಪ್ರದೇಶದ ಹಸಿ ಮರ ಬಿಟ್ಟು ಒಣ ಕಟ್ಟಿಗೆ ಬಳಸುವಂತೆ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೊವಿಡ್ ರೀತಿ ಹೋರಾಟ: ಪ್ರಧಾನಿ ಮೋದಿ ಸಭೆ ಬಳಕ ಸಚಿವ ಮುನಿಯಪ್ಪ ಶಾಕಿಂಗ್​ ಹೇಳಿಕೆ

ರಾಜ್ಯದಲ್ಲಿ ಸಿಲಿಂಡರ್​ ಕೊರತೆಗೆ ಕೇಂದ್ರ ಸರ್ಕಾರವೇ ಕಾರಣ. ಡಿಸ್ಟ್ರಿಬ್ಯೂಟರ್​ಗಳ ಮೇಲೆ ದೂರು ಬರುತ್ತಿವೆ. ಡೊಮೆಸ್ಟಿಕ್ ಸಿಲಿಂಡರ್ ಈ ಹಿಂದಿನಂತೆ ಮುಂದುವರಿಯುತ್ತೆ. ಆಯಿಲ್ ಕಂಪನಿಗಳಿಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಸಕಾಲಕ್ಕೆ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸಬೇಕು. ಸಿಲಿಂಡರ್​ಗಾಗಿ ಯಾರು ಕೂಡ ಕ್ಯೂ ನಿಲ್ಲಬಾರದು. ನೀವು ಬುಕ್ಕಿಂಗ್ ಮಾಡಿದ್ದರೆ ನಿಮ್ಮ ಮನೆಗೆ ಸಿಲಿಂಡರ್ ಬರುತ್ತೆ. ಕೇಂದ್ರ ಸರ್ಕಾರ ಗ್ಯಾಸ್​ ಪೂರೈಸಲು ಪ್ರಯತ್ನ ಮಾಡುತ್ತಿದೆ. ಈಗ 40% ಸಿಲಿಂಡರ್ ಪೂರೈಕೆ ಆಗುತ್ತಿದೆ ಎಂದು ಹೇಳಿದ್ದಾರೆ.

ಇಂದಿನಿಂದಲೇ ವಾಣಿಜ್ಯ ಎಲ್​​ಪಿಜಿ ಸಿಲಿಂಡರ್‌ಗಳ ವಿತರಣೆ

ರಾಜ್ಯಕ್ಕೆ ವಾಣಿಜ್ಯ ಎಲ್​​ಪಿಜಿ ಸಿಲಿಂಡರ್ ಪೂರೈಕೆಯನ್ನು ಶೇ. 68 ಗೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಇಂದಿನಿಂದಲೇ ಹೆಚ್ಚುವರಿ ವಾಣಿಜ್ಯ ಎಲ್​​ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು, ಆಸ್ಪತ್ರೆ ಮತ್ತು ಇತರೆ ಅವಶ್ಯಕ ಸಂಸ್ಥೆಗಳಿಗೆ 4200 ಸಿಲಿಂಡರ್ ಹಂಚಿಕೆ ಮಾಡಲಾಗಿದೆ. ಸರ್ಕಾರಿ, ಪಿಎಸ್​​ಯು ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು, ಬಸ್ ನಿಲ್ದಾಣಗಳ ಕ್ಯಾಂಟೀನ್‌ಗಳಿಗೆ 1200 ಸಿಲಿಂಡರ್ ಹಂಚಲಾಗಿದೆ ಎಂದರು.

ಇದನ್ನೂ ಓದಿ: ಗ್ಯಾಸ್​​​ ಅಭಾವದ ಮಧ್ಯೆ ಮಂಗಳೂರಿನ ಹೋಟೆಲ್​​​ವೊಂದರಿಂದ ಭರ್ಜರಿ ಆಫರ್​​: ಷರತ್ತು ಅನ್ವಯ

ಹೋಟೆಲ್, ಡಾಬಾ, ರೆಸ್ಟೋರೆಂಟ್, ಕ್ಯಾಂಟೀನ್, ಕ್ಯಾಫೆ, ಬೇಕರಿ, ಸಮುದಾಯ ಅಡುಗೆ ಕೇಂದ್ರಗಳು, ಪಿ.ಜಿ, ಫುಡ್ ವಸ್ತು ನಿಲಯಗಳಿಗೆ 17500 ಸಿಲಿಂಡರ್, ಬೀಜ ಸಂಸ್ಕರಣೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ಜೈವೋದ್ಯಮ, ಮೀನುಗಾರಿಕೆ, ಕೋಳಿ ಸಾಕಣೆ, ರೇಷ್ಮೆ ಹುಳು ಸಾಕಣೆ ಕೇಂದ್ರಗಳಿಗೆ 6000, ಇತರ ಅವಶ್ಯಕತೆ ಆಧಾರದ ಮೇಲೆ 563 ಸಿಲಿಂಡರ್‌ ಸೇರಿದಂತೆ ಒಟ್ಟು 29463 ಕಮರ್ಷಿಯಲ್ ಸಿಲಿಂಡರ್ ನಿತ್ಯ ವಿತರಿಸಲಾಗುತ್ತಿದೆ.

ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ: ಪರವಾನಗಿ ರದ್ದು ಎಂದ ಸಚಿವ ಮುನಿಯಪ್ಪ 

ಕೆಲವು ಅನಿಲ ವಿತರಕರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರುಗಳು ಬಂದಿವೆ. ಎಲ್ಲಾ LPG ವಿತರಕರು ಕಡ್ಡಾಯವಾಗಿ ಸರ್ಕಾರ ನಿಗದಿಪಡಿಸಿದ ದರದಲ್ಲೇ ಸಿಲಿಂಡರ್ ವಿತರಿಸಬೇಕು. ಹೆಚ್ಚುವರಿ ದರ ವಸೂಲಿ ಮಾಡಿದರೆ ಕಾನೂನು ಕ್ರಮಕೈಗೊಳ್ಳುವುದರ ಮೂಲಕ ಪರವಾನಗಿ ರದ್ದು ಮಾಡಲಾಗುವುದು. LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಕೇಸ್ ದಾಖಲಾಗಿವೆ. ವಾಣಿಜ್ಯ ಉದ್ದೇಶಕ್ಕೆ ಬಳಸ್ತಿದ್ದ 1603 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?

ಬೆಂಗಳೂರು,(ಮಾರ್ಚ್ 29): ತಾಯಿ, ಅಕ್ಕ ಹಾಗೂ ಅಕ್ಕನ ಮಗನ ಕತ್ತು ಕೊಯ್ದು ಬಳಿಕ ಆರೋಪಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲ್ಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ಮೋಹನ್ ಗೌಡ ಎನ್ನುವಾತ ತಾಯಿ ಆಶಾ(55), ಅಕ್ಕ ವರ್ಷಿತಾ(34) ಮತ್ತು ಅಕ್ಕನ ಮಗ ಮಯಾಂಕನ ಕತ್ತು ಕೊಯ್ದು ಕೊಯ್ದಿದ್ದಾನೆ. ಬಳಿಕ ಮೋಹನ್ ಗೌಡ ಸಹ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ತಾಯಿ ಆಶಾ ಹಾಗೂ ಅಕ್ಕ ವರ್ಷಿತಾ ಸಾವನ್ನಪ್ಪಿದ್ದು, ಅಕ್ಕನ ಮಗ ಮಯಾಂಕ ಹಾಗೂ ಆರೋಪಿ ಮೋಹನ್ ಗೌಡ ಸ್ಥಿತಿ ಗಂಭೀರವಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೋಹನ್ ವಿಡಿಯೋ ಒಂದನ್ನು ಚಿತ್ರೀಕರಿಸಿದ್ದ. ಸಾಲಗಾರರ ಕಾಟ ತಾಳಲಾರದೆ ನಾವು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿ ಅದನ್ನು ತನ್ನ ಸಂಬಂಧಿಕರಿಗೆ ಕಳುಹಿಸಿದ್ದ. ವಿಡಿಯೋ ನೋಡಿ ಗಾಬರಿಗೊಂಡ ಸಂಬಂಧಿಕರು ತಕ್ಷಣ ಮನೆಗೆ ಧಾವಿಸಿದ್ದಾರೆ. ಸಂಬಂಧಿಕರು ಸ್ಥಳಕ್ಕೆ ಬಂದಾಗ ಮನೆಯ ಮುಂಭಾಗದ ಬಾಗಿಲು ಲಾಕ್ ಆಗಿತ್ತು. ಒಳಗೆ ಕಿರುಚಾಟದ ಶಬ್ದ ಕೇಳಿ ಬಂದಿದೆ. ಕೂಡಲೇ ಹಿಂಬಾಗಿಲಿನ ಮೂಲಕ ಒಳಗೆ ಹೋದಾಗ ರಕ್ತದ ಮಡುವಿನಲ್ಲಿ ನಾಲ್ವರು ಬಿದ್ದಿರುವುದು ಕಂಡುಬಂದಿದೆ.

ಇದನ್ನೂ ಓದಿ: ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಇಬ್ಬರು ಬಲಿ: ಮತ್ತೆರಡು ಮಂದಿ ಸ್ಥಿತಿ ಗಂಭೀರ

Source link

‘ಪೆದ್ದಿ’ ಸಿನಿಮಾಕ್ಕಾಗಿ ಜಾಗ ಬಿಟ್ಟುಕೊಟ್ಟ ‘ಲೆನಿನ್’: ಎಲ್ಲ ‘ಟಾಕ್ಸಿಕ್’ ಮಹಿಮೆ

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಬೇಕಿತ್ತು. ಆದರೆ ಯುದ್ಧ ಪರಿಸ್ಥಿತಿಯ ಕಾರಣದಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಯ್ತು. ಆದರೆ ಅದೊಂದು ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಗಿದ್ದು, ಆ ನಂತರದ ಹಲವು ಸಿನಿಮಾಗಳ ಬಿಡುಗಡೆ ಮೇಲೆ ಪರಿಣಾಮ ಬೀರಿದೆ. ಸುಮಾರು ಆಗಸ್ಟ್ ತಿಂಗಳ ವರೆಗೆ ಅದರ ನಂತರದ ಕೆಲವು ಸಿನಿಮಾಗಳ ಬಿಡುಗಡೆ ದಿನಾಂಕಗಳು ಸಹ ಬದಲಾಗಿವೆ. ಇದೀಗ ತೆಲುಗಿನ ‘ಲೆನಿನ್’ ಸಿನಿಮಾದ ಬಿಡುಗಡೆ ಸಹ ಮುಂದೂಡಲಾಗಿದೆ. ಅದಕ್ಕೂ ಸಹ ಪರೋಕ್ಷವಾಗಿ ‘ಟಾಕ್ಸಿಕ್’ ಕಾರಣ ಇದ್ದಂತಿದೆ.

‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದ ಕಾರಣ, ಪವನ್ ಕಲ್ಯಾಣ್ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಮಾರ್ಚ್ 26ಕ್ಕೆ ಘೋಷಿಸಲಾಗಿತ್ತು. ‘ಟಾಕ್ಸಿಕ್’ ರಿಲೀಸ್ ಮುಂದೂಡಿಕೆ ಆಗುತ್ತಲೇ ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 19ಕ್ಕೆ ಬಿಡುಗಡೆ ಆಯ್ತು. ಇದೇ ಕಾರಣದಿಂದಾಗಿ ರಾಮ್ ಚರಣ್ ಅವರ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕದಲ್ಲಿಯೂ ಬದಲಾವಣೆ ಆಗಿ, ಏಪ್ರಿಲ್ 30ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಯ್ತು.

ಆದರೆ ಅದೇ ಸಮಯದಲ್ಲಿ ಬಿಡುಗಡೆ ಯೋಜನೆ ಹಾಕಿಕೊಂಡಿದ್ದ ಅಖಿಲ್ ಅಕ್ಕಿನೇನಿ ನಟನೆಯ ‘ಲೆನಿನ್’ ಸಿನಿಮಾಕ್ಕೆ ಇದು ಸಮಸ್ಯೆ ಆಗಿದ್ದು, ಇದೀಗ ‘ಲೆನಿನ್’ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಅಖಿಲ್ ಅಕ್ಕಿನೇನಿ ನಟನೆಯ ‘ಲೆನಿನ್’ ಇದೀಗ ಜೂನ್ 26ಕ್ಕೆ ಬಿಡುಗಡೆ ಆಗಲಿದೆ. ‘ಪೆದ್ದಿ’ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗುತ್ತಿರುವ ಕಾರಣ ತಮ್ಮ ಸಿನಿಮಾದ ಬಿಡುಗಡೆಯನ್ನು ಮುಂದೂಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ:‘ಜನ ನಾಯಗನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ

ಮೇ1ಕ್ಕೆ ಲೆನಿನ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಪೆದ್ದಿ ಸಿನಿಮಾ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿರುವ ಕಾರಣ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ‘ನಮ್ಮ ಪ್ರೀತಿಯ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ‘ಪೆದ್ದಿ’ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗುತ್ತಿದ್ದು, ಇದು ಎಲ್ಲರೂ ಒಟ್ಟಿಗೆ ಸೇರಿ ಸಿನಿಮಾಗಳನ್ನು ಸಂಭ್ರಮಿಸಲು ಇದು ಸಕಾಲ ಎನಿಸಿದ್ದರಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ರಾಮ್ ಚರಣ್ ಮತ್ತು ಅಖಿಲ್ ಇಬ್ಬರು ಬಲು ಆಪ್ತರು ಮತ್ತು ಪರಸ್ಪರರ ಯಶಸ್ಸು ಬಯಸುವವರು ಹಾಗಾಗಿ ಇಬ್ಬರ ಗೆಲುವು, ಯಶಸ್ಸು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಪ್ರಕಟಿಸಲಾಗಿದೆ’ ಎಂದಿದೆ ಚಿತ್ರತಂಡ.

‘ಲೆನಿನ್’ ಸಿನಿಮಾವನ್ನು ಜೂನ್ 26ಕ್ಕೆ ಬಿಡುಗಡೆ ಮಾಡುತ್ತಿದ್ದು, ಪ್ರೇಕ್ಷಕರು ಸಿನಿಮಾವನ್ನು ಅದ್ಧೂರಿಯಾಗಿ ಎಂಜಾಯ್ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಚಿತ್ರತಂಡ ಹೇಳಿದೆ. ‘ಲೆನಿನ್’ ಸಿನಿಮಾನಲ್ಲಿ ಅಖಿಲ್ ಅಕ್ಕಿನೇನಿ ನಟಿಸಿದ್ದಾರೆ. ಅದರ ಜೊತೆಗೆ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ನಿರ್ದೇಶನ ಮಾಡಿರುವುದು ಮುರಳಿ ಕಿಶೋರ್ ಅಬ್ಬೂರು. ನಿರ್ಮಾಣ ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಸಿತಾರಾ ಎಂಟರ್ಟೈನ್​​ಮೆಂಟ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಪ್ರಿಲ್ 1ರಿಂದ ಪೆಟ್ರೋಲ್ ರಫ್ತು ನಿಷೇಧಿಸಿದ ರಷ್ಯಾ; ಭಾರತಕ್ಕೇನು ಪರಿಣಾಮ?

ನವದೆಹಲಿ, ಮಾರ್ಚ್ 29: ಗ್ಯಾಸೊಲಿನ್ ರಫ್ತನ್ನು ಏಪ್ರಿಲ್ 1ರಿಂದ ನಿಷೇಧಿಸುತ್ತಿರುವುದಾಗಿ ರಷ್ಯಾ (Russia) ತಿಳಿಸಿದೆ. ದೇಶೀಯವಾಗಿ ಪೆಟ್ರೋಲಿಯಂ ಉತ್ಪನ್ನಗಳ (Petroleum products) ಸರಬರಾಜು ಸಾವಶ್ಯ ಇರುವುದನ್ನು ಖಚಿತಪಡಿಸಿಕೊಳ್ಳಲು ರಷ್ಯಾ ತನ್ನ ಪೆಟ್ರೋಲ್ ರಫ್ತನ್ನು ನಿಲ್ಲಿಸಲು ಪ್ಲಾನ್ ಮಾಡಿದೆ. ಅಂದರೆ, ಯಾವುದೇ ರಷ್ಯನ್ ತೈಲ ಸಂಸ್ಕರಣೆ ಸಂಸ್ಥೆಗಳು (oil refineries) ಪೆಟ್ರೋಲ್ ಮತ್ತು ಡೀಸಲ್ ಅನ್ನು ಹೊರ ದೇಶಗಳಿಗೆ ರಫ್ತು ಮಾಡುವಂತಿಲ್ಲ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ರಷ್ಯಾ ದೇಶವು ಪೆಟ್ರೋಲ್, ಡೀಸಲ್ ರಫ್ತನ್ನು ಮಾತ್ರ ನಿಲ್ಲಿಸಲು ಯೋಜಿಸಿದೆ. ಸಾಕಷ್ಟು ಬಾರಿ ರಷ್ಯಾ ಈ ನಿರ್ಧಾರ ತೆಗೆದುಕೊಂಡಿರುವುದಿದೆ. ಆದರೆ, ಕಚ್ಛಾ ತೈಲದ ಸರಬರಾಜುವನ್ನು ನಿಲ್ಲಿಸುತ್ತಿಲ್ಲ. ತೈಲ ಪೂರೈಕೆ ಎಂದಿನಂತೆ ನಡೆಯಲಿದೆ.

ಇದನ್ನೂ ಓದಿ: ಅಬಕಾರಿ ಸುಂಕ ಕಡಿತದಿಂದ ಸರ್ಕಾರಕ್ಕೆ ಎರಡೇ ವಾರದಲ್ಲಿ 7,000 ಕೋಟಿ ರೂ ಆದಾಯನಷ್ಟದ ಅಂದಾಜು

ಕಚ್ಛಾ ತೈಲವನ್ನು ಸಂಸ್ಕರಿಸಿ ಪೆಟ್ರೋಲ್, ಡೀಸಲ್, ಪೆಟ್ರೋಲಿಯಂ ಗ್ಯಾಸ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಭಾರತದ ಕೆಲ ದೊಡ್ಡ ಕಂಪನಿಗಳು ಕಚ್ಛಾ ತೈಲ ಆಮದು ಮಾಡಿಕೊಂಡು ಅದರಿಂದ ಪೆಟ್ರೋಲ್, ಡೀಸಲ್ ಇತ್ಯಾದಿ ವಿವಿಧ ರೀಫೈನ್ಡ್ ಉತ್ಪನ್ನಗಳನ್ನು ತಯಾರಿಸುತ್ತವೆ. ಬೇರೆ ದೇಶಗಳಿಂದ ನೇರವಾಗಿ ಪೆಟ್ರೋಲ್ ಆಮದು ಮಾಡಿಕೊಳ್ಳುವುದು ಕಡಿಮೆ.

ಭಾರತೀಯ ರಿಫೈನರಿ ಸಂಸ್ಥೆಗಳು ದಿನಕ್ಕೆ 56 ಲಕ್ಷ ಬ್ಯಾರಲ್​ಗಳ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿವೆ. ಇವುಗಳಿಂದ ತಯಾರಿಸಲಾಗುವ ಪೆಟ್ರೋಲ್ ಮತ್ತು ಡೀಸಲ್​ಗಳು ಭಾರತೀಯ ಮಾರುಕಟ್ಟೆಗೆ ಸಾಕಾಗುವುದಷ್ಟೇ ಅಲ್ಲ, ಹೊರ ದೇಶಗಳಿಗೂ ರಫ್ತು ಮಾಡುವಷ್ಟಿರುತ್ತದೆ. ಅತಿಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಮಾಡುವ ದೇಶಗಳಲ್ಲಿ ಭಾರತ ಐದನೇ ಸ್ಥಾನ ಪಡೆಯುತ್ತದೆ.

ಇದನ್ನೂ ಓದಿ: ರಷ್ಯನ್ ಎಲ್​ಎನ್​ಜಿಯನ್ನು ಖರೀದಿಸಲಿರುವ ಭಾರತ; ಎಲ್​ಪಿಜಿ, ಪಿಎನ್​ಜಿ, ಎಲ್​ಎನ್​ಜಿಗಿರುವ ವ್ಯತ್ಯಾಸಗಳೇನು?

ಆದರೆ, ಇರಾನ್ ಯುದ್ಧ ಶುರುವಾಗಿ ತೈಲ ಬಿಕ್ಕಟ್ಟು ಉದ್ಭವವಾದ ಬಳಿಕ ಭಾರತವು ಪೆಟ್ರೋಲಿಯಂ ಉತ್ಪನ್ನಗಳ ರಫ್ತನ್ನು ಬಹುತೇಕ ನಿಲ್ಲಿಸಿದ್ದು, ದೇಶೀಯ ಮಾರುಕಟ್ಟೆಗೆ ಪೂರೈಕೆಗೆ ಅದನ್ನು ಬಳಸಿಕೊಳ್ಳುತ್ತಿದೆ. ರಷ್ಯಾ ದೇಶವು ಪೆಟ್​ರೋಲ್ ರಫ್ತು ನಿಷೇಧಿಸುವುದರಿಂದ ಭಾರತದ ಮೇಲೆ ನೇರ ಪರಿಣಾಮ ಬೀರುವುದಿಲ್ಲವಾದರೂ, ಕಚ್ಛಾ ತೈಲ ಬೆಲೆ ಏರಿಕೆಗೆ ಕಾರಣವಾಗಬಹುದು. ಇದರಿಂದ ಪೆಟ್ರೋಲ್, ಡೀಸಲ್ ಬೆಲೆಗಳ ಮೇಲೆ ಇನ್ನಷ್ಟು ಒತ್ತಡ ಬೀಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಚ್ಚುಕಟ್ಟು ವ್ಯವಸ್ಥೆ: ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಬೆಂಗಳೂರು, (ಮಾರ್ಚ್ 29): ಚಿನ್ನಸ್ವಾಮಿ ಸ್ಪೇಡಿಯಂ ( Chinnaswamy stadium )ಬಳಿಕ ಕಾಲ್ತುಳಿ ಸಂಭವಿಸಿ 11 ಆರ್​​ಸಿಬಿ ಅಭಿಮಾನಿಗಳು ದುರಂತ ಸಾವು ಕಂಡಿದ್ದರು. ಈ ಕರಾಳ ಘಟನೆ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳು ಸುಸೂತ್ರವಾಗಿ ನಡೆಲು ಎಲ್ಲಾ ವ್ಯವಸ್ಥೆ ಮಾಡಿದೆ. ಹೌದು… ನಿನ್ನೆ (ಮಾರ್ಚ್ 28) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​​​ಸಬಿ ಹಾಗೂ ಸನ್​ ರೈಸರ್ಸ್ ಹೈದರಾಬಾದ್ ನಡುವಿನ ಉದ್ಘಾಟನಾ ಪಂದ್ಯ ಯಾವುದೇ ಅಹಿತಕ, ಗೊಂದಲ ಆಗದಂತೆ ಸುಸೂತ್ರವಾಗಿ ನಡೆದಿದೆ. ಪ್ರೇಕ್ಷಕರು ಸ್ಟೇಡಿಯಂ ಪ್ರವೇಶ ಹಾಗೂ ನಿರ್ಗಮನದ ವೇಳೆ ನೂಕು ನುಗ್ಗಲು, ಗೊಂದಲ ಆಗದ ರೀತಿಯಲ್ಲಿ ನಿರ್ವಹಣೆ ಮಾಡಿದೆ. ಸ್ಟೇಡಿಯಂ ಬಳಿ ಟೀ ಶರ್ಟ್ ಕೂಡ ಮಾರಲು ಅವಕಾಶ ಕೊಟ್ಟಿರಲಿಲ್ಲ. ಇನ್ನು ಟ್ರಾಫಿಕ್ ಸಮಸ್ಯೆ ತಡೆಯಲು ಪಂದ್ಯ ವೀಕ್ಷಣೆಗೆ ಬರುವವರಿಗೆ ರಸ್ತೆ ಬದಲಿಗೆ ಮೈದಾನದೊಳಗೆ ಸರದಿ ಸಾಲು ವ್ಯವಸ್ಥೆ ಮಾಡಲಾಗಿತ್ತು. ಹೀಗೆ KSCA ಜತೆ ಸಮನ್ವಯದೊಂದಿಗೆ ಪೊಲೀಸ್ ಇಲಾಖೆ ಕಳೆದ ಒಂದು ತಿಂಗಳಿಂದ ನಡೆದಿದ್ದ ಭದ್ರತೆ ತಯಾರಿ ಯಶಸ್ವಿಯಾಗಿದ್ದು, ಪೊಲೀಸರ ಅಚ್ಚಕಟ್ಟು ನಿರ್ವಹಣೆಗೆ ಸಾರ್ವಜನಿಕರಿಂದ ಮೆಚ್ಚುಗೆಗಳು ವ್ಯಕ್ತವಾಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ.

Source link