All posts by nagaraj11081993

Video: ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ಪರಸ್ಪರ ದಾಳಿ, 11 ಮಂದಿಗೆ ಗಾಯ – Kannada News | Violence Erupts Inside Germany Gurdwara, Multiple Injured

ಬರ್ಲಿನ್, ಏಪ್ರಿಲ್ 21: ಜರ್ಮನಿಯ ಮೋರ್ಸ್​ ನಗರದ ಡ್ಯೂಸ್ಬರ್ಗ್​​ನಲ್ಲಿರುವ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ ನಡೆದಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಗುರುದ್ವಾರವು ಭಕ್ತರ ಪ್ರಾರ್ಥನೆಯಿಂದ ಸದಾ ಶಾಂತವಾಗಿರುತ್ತದೆ. ಆದರೆ ಸೋಮವಾರ ಮಾತ್ರ ಅಲ್ಲಿ ಶಾಂತಿಯ ಬದಲು ಶಸ್ತ್ರಾಸ್ತ್ರಗಳ ಸದ್ದು ಕೇಳಿಸಿತು. ಎರಡು ಗುಂಪುಗಳ ನಡುವಿನ ಅಧಿಕಾರದ ಹಪಾಹಪಿ ಪವಿತ್ರ ಆವರಣವನ್ನು ರಕ್ತಸಿಕ್ತಗೊಳಿಸಿತು.
ಧಾರ್ಮಿಕ ಸಭೆ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಈ ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇದು ಆಕಸ್ಮಿಕವಾಗಿ ನಡೆದ ಜಗಳವಲ್ಲ, ಬದಲಾಗಿ ಒಂದು ವ್ಯವಸ್ಥಿತ ಸಂಚು. ಸುಮಾರು 40 ಜನರು ಈ ಭೀಕರ ಘರ್ಷಣೆಯಲ್ಲಿ ಭಾಗಿಯಾಗಿದ್ದರು.

ದಾಳಿಕೋರರು ಇದ್ದಕ್ಕಿದ್ದಂತೆ ಪೆಪ್ಪರ್ ಸ್ಪ್ರೇ ಬಳಸಿ ಎದುರಾಳಿಗಳ ಕಣ್ಣು ಕಾಣಿಸದಂತೆ ಮಾಡಿದರು. ಆ ಕ್ಷಣದಲ್ಲೇ ಬಂದೂಕಿನ ಗುಂಡು ಹಾರುವ ಸದ್ದು ಕೇಳಿಸಿತು. ಚಾಕುಗಳಿಂದ ಹತ್ತಿರದಲ್ಲಿದ್ದವರ ಮೇಲೆ ದಾಳಿ ಮಾಡಲು ಬಳಕೆಯಾದವು. ಇದು ಭೀಕರವಾಗಿತ್ತು. ದಾಳಿ ನಡೆಯುತ್ತಿದ್ದಂತೆ ಜನ ಭಯಭೀತರಾಗಿ ಹೊರಕ್ಕೆ ಓಡತೊಡಗಿದರು ಎಂದು ಸಭೆಯ ಸದಸ್ಯರೊಬ್ಬರು ಆ ಕರಾಳ ಕ್ಷಣವನ್ನು ನೆನೆಯುತ್ತಾರೆ.

ಈ ರಕ್ತಸಿಕ್ತ ಘರ್ಷಣೆಗೆ ಮೂಲ ಕಾರಣವೆಂದರೆ ಗುರುದ್ವಾರದ ಹೊಸ ನಿರ್ದೇಶಕ ಮಂಡಳಿಯ ಚುನಾವಣೆ. ಹಿಂದಿನ ಮಂಡಳಿ ಮತ್ತು ಪ್ರಸ್ತುತ ಸದಸ್ಯರ ನಡುವೆ ಗುರುದ್ವಾರದ ನಿಧಿ ಹಾಗೂ ಆಡಳಿತದ ಮೇಲಿನ ಹಿಡಿತಕ್ಕಾಗಿ ದೀರ್ಘಕಾಲದಿಂದ ಸಂಘರ್ಷ ನಡೆಯುತ್ತಿತ್ತು. ಅಧಿಕಾರದ ಆಸೆ ಹೇಗೆ ಧಾರ್ಮಿಕ ಚೌಕಟ್ಟನ್ನು ಮೀರಿ ಮನುಷ್ಯರನ್ನು ಹಿಂಸೆಯತ್ತ ತಳ್ಳುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉತ್ತಮ ಆರೋಗ್ಯಕ್ಕೆ ವಿಷ್ಣುವರ್ಧನ್ ನೀಡಿದ್ದರು ಟಿಪ್ಸ್

ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಇದ್ದರು. ಅವರು ಸಿನಿಮಾಗಳನ್ನು ಮಾಡಿ ಗಮನ ಸೆಳೆದರು. ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಅವರು ಅನೇಕ ಬಾರಿ ಆರೋಗ್ಯ ಕಾಪಾಡಿಕೊಳ್ಳಲು ಟಿಪ್ಸ್ ನೀಡುತ್ತಿದ್ದರು. ಈಗ ಅವರ ಒಂದು ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದರಲ್ಲಿ ಅವರು ಆರೋಗ್ಯದ ಬಗ್ಗೆ ಟಿಪ್ಸ್ ನೀಡಿದ್ದರು ಅನ್ನೋದು ವಿಶೇಷ. ಆ ಸಂದರ್ಭದ ವಿವರ ಇಲ್ಲಿದೆ.

‘ಆರೋಗ್ಯಕ್ಕೆ ಹಿಂದಿನದವರು ಪ್ರಾಮುಖ್ಯತೆ ಕೊಡುತ್ತಿದ್ದರು. ಹೊರಗೆ ಚೆನ್ನಾಗಿ ಇಟ್ಟುಕೊಂಡಷ್ಟೇ ಒಳಗೂ ಚೆನ್ನಾಗಿಟ್ಟುಕೊಳ್ಳಬೇಕು. ಅಜ್ಞಾನದಿಂದ ದುಃಖ, ದುಃಖದಿಂದ ರೋಗ, ರೋಗದಿಂದ ಭಯ. ಭಯ ಬಂದಾಗ ಇಡೀ ದೇಹ ವಿಷ ಆಗುತ್ತದೆ’ ಎಂದು ವಿಷ್ಣುವರ್ಧನ್ ಹೇಳಿದ್ದರು.

‘ನಿಸರ್ಗವನ್ನು ನಾವು ನಾಶ ಮಾಡಿದ್ದೇವೆ. ನಾವು ನಮ್ಮ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಿದೆ. ನಾವು ತಿನ್ನುವ ಆಹಾರ, ಆಡುವ ಮಾತು ಎಲ್ಲವೂ ಚೆನ್ನಾಗಿರಬೇಕು. ಆಯುರ್ವೇದವನ್ನು ವಿದೇಶದವರು ಫಾಲೋ ಮಾಡುತ್ತಿದ್ದಾರೆ. ಧ್ಯಾನ, ಪ್ರಾಣಾಯಾಮ ಎಲ್ಲವೂ ಮನಸ್ಸಿಗೆ ವ್ಯಾಯಾಮ ನೀಡುತ್ತದೆ’ ಎಂದು ಅವರು ಹೇಳಿದ್ದರು.

‘ಒಳ್ಳೆಯವರ ಸಹವಾಸ ಮಾಡಬೇಕು. ಎಲ್ಲರೂ ಒತ್ತಡದಲ್ಲೇ ಇರುತ್ತಾರೆ. ಅವರು ಓಡುತ್ತಿದ್ದಾರೆ ಎಂದು ನಾವು ಓಡುತ್ತಿದ್ದೇವೆ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಆದರೆ, ಅದು ಯಾರಿಗೂ ಇಲ್ಲ. ಎಲ್ಲರೂ ನಿತ್ಯ ಮಂತ್ರ-ಶ್ಲೋಕ ಹೇಳಬೇಕು. ಆಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ವಿಜ್ಞಾನ-ಜ್ಞಾನ ಎಲ್ಲವೂ ಇಲ್ಲಿಂದಲೇ ಹೋಗಿದ್ದು’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: 10 ಸಾವಿರ ಜನರಿಗೆ ವಿಷ್ಣುವರ್ಧನ್ ಅಭಿಮಾನಿಗಳಿಂದ ವೆಜ್, ನಾನ್-ವೆಜ್ ಊಟ

‘ದೇಹದ ಬಗ್ಗೆ ಜ್ಞಾನ ಬೇಕು. ನಡೆ-ನುಡಿ ಎಲ್ಲವೂ ಚೆನ್ನಾಗಿರಬೇಕು. ಪ್ರಾಣಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಮನುಷ್ಯರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ರಾಜಸ್ಥಾನದ ಆಹಾರ ಇಲ್ಲಿ ಸೆಟ್ ಆಗಲ್ಲ. ಆದರೆ, ಆಹಾರ ಕ್ರಮದಲ್ಲಿ ಬದಲಾಗಿದೆ’ ಎಂದು ವಿಷ್ಣುವರ್ಶನ್ ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

 

Source link

ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಅಬ್ಬರ, ಸಿಡಿಲಿಗೆ ವೃದ್ಧೆ ಬಲಿ, ಬಿರುಗಾಳಿಗೆ ಹಾರಿಹೋದ ಮನೆಗಳ ಮೇಲ್ಚಾವಣಿ! – Kannada News | Unseasonal Rain in Karnataka: One Dead Due to Lightning in Hassan; Houses Damaged by Heavy Winds in Chikkamagaluru

ಚಿಕ್ಕಮಗಳೂರಿನಲ್ಲಿ ಸುರಿದ ಮಳೆImage Credit source: tv9

ಬೆಂಗಳೂರು, ಏಪ್ರಿಲ್ 21: ಕರ್ನಾಟಕದಲ್ಲಿ ಉಷ್ಣ (Heat Wave) ಅಲೆಯ ಆಘಾತದ ನಡುವೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ (Karnataka Rains) ರೌದ್ರಾವತಾರ ತಾಳಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ಮನೆಗಳು ಜಖಂಗೊಂಡಿದ್ದು, ಹಾಸನದಲ್ಲಿ ಸಿಡಿಲು ಬಡಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡೆದಿದೆ.

ಹಾಸನ: ಸಿಡಿಲಿಗೆ ಬಲಿಯಾದ ವೃದ್ಧೆ

ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹುಲಕುಂದ ಗ್ರಾಮದ ಎಸ್ಟೇಟ್ ಬಳಿ ಸಿಡಿಲು ಬಡಿದು ನೀಲಮ್ಮ ಎಂಬ ವೃದ್ಧೆ ಸಾವನ್ನಪ್ಪಿದ್ದಾರೆ. ಮಳೆ ಬರುತ್ತಿದ್ದ ಕಾರಣ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಬಿರುಗಾಳಿಗೆ ಕಾಲೇಜು ಮತ್ತು ಅಂಗಡಿಗಳ ಶೀಟ್​ಗಳು ಹಾರಿ ಹೋಗಿವೆ. ಮರದ ಕೊಂಬೆಗಳು ಬಿದ್ದು ಎರಡು ಕಾರುಗಳು ಜಖಂಗೊಂಡಿವೆ.

ಮನೆಯ ಮೇಲ್ಚಾವಣಿ ಹಾರಿರುವುದು

ಚಿಕ್ಕಮಗಳೂರು: ಮರ ಬಿದ್ದು ಮನೆಗಳಿಗೆ ಹಾನಿ

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಜಿಲ್ಲೆಯ ಗಾಳಿಗುಂಡಿಯಲ್ಲಿ ಬೃಹತ್ ಮರ ಬಿದ್ದು ಐದು ಮನೆಗಳ ಮೇಲ್ಚಾವಣಿ ಪುಡಿಪುಡಿಯಾಗಿದೆ. ಕಳಸ ಪಟ್ಟಣದಲ್ಲಿ ಲಾಡ್ಜ್‌ ಒಂದರ ಮೇಲ್ಭಾಗದ ತಗಡಿನ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಮೂಡಿಗೆರೆ ತಾಲೂಕಿನ ಅಮ್ತಿ ಗ್ರಾಮದಲ್ಲಿ ಮರ ಬಿದ್ದು ಬಾಳೂರು-ಕಳಸ ಸಂಪರ್ಕ ಕಡಿತಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕೊಪ್ಪ ಮತ್ತು ಎನ್.ಆರ್.ಪುರ ಭಾಗದಲ್ಲಿಯೂ ಆಲಿಕಲ್ಲು ಮಳೆ ಆರ್ಭಟಿಸಿದೆ.

ಹಾವೇರಿ: ಕೆರೆಯಂತಾದ ರಸ್ತೆಗಳು

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ನಗರದ ದುರ್ಗಾ ಸರ್ಕಲ್ ಬಳಿ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಯಿತು.

ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ಭಾರಿ ಅವಾಂತರ, ವಿಡಿಯೋ ನೋಡಿ

ಒಟ್ಟಾರೆಯಾಗಿ, ಸುಡುವ ಬಿಸಿಲಿನ ನಡುವೆ ಬಂದ ಅಕಾಲಿಕ ಮಳೆ ತಂಪು ನೀಡುವ ಬದಲು ಆಸ್ತಿ-ಪಾಸ್ತಿ ಹಾನಿ ಮಾಡುವ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಲಿಯಾಗೆ ನೀತಾ ಅಂಬಾನಿಯಿಂದ ಅವಮಾನ ಆಗಿದ್ದು ನಿಜವೇ? ಇಲ್ಲಿದೆ ಅಸಲಿ ವಿಡಿಯೋ – Kannada News | Neeta Ambani Alia Bhatt Viral Video: The Truth Behind the ‘Insult’ Claims

ಅಂಬಾನಿ ಕುಟುಂಬ ಭಾರತದ ಶ್ರೀಮಂತ ಮನೆತನಗಳಲ್ಲಿ ಒಂದು. ಅವರ ಮನೆಯ ಮದುವೆಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಬ್ಯಾಕ್ ಡ್ಯಾನ್ಸರ್​​ಗಳಾಗಿ ನೃತ್ಯ ಮಾಡುತ್ತಾರೆ. ಇನ್ನು, ಅವರ ಮನೆಯಲ್ಲಿ ಊಟ ಬಡಿಸೋಕೂ ಸೆಲೆಬ್ರಿಟಿಗಳು ರೆಡಿ ಇರುತ್ತಾರೆ. ಇತ್ತೀಚಿಗಿನ ಅವಾರ್ಡ್ ಫಂಕ್ಷನ್ ಅಲ್ಲಿ ನೀತಾ ಅಂಬಾನಿ ಅವರು ಆಲಿಯಾಗೆ ಅವಮಾನ ಮಾಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿತ್ತು. ಆದರೆ, ಇದು ಎಡಿಟ್ ಮಾಡಿದ ವಿಡಿಯೋ ಅನ್ನೋದು ಸ್ಪಷ್ಟವಾಗಿದೆ.

ಆಲಿಯಾ ಭಟ್ ಅವರು ಇತ್ತೀಚೆಗೆ ‘ಸ್​ಕ್ರೀನ್ ಅವಾರ್ಡ್’ ಫಂಕ್ಷನ್ ಅನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ನೀತಾ ಅಂಬಾನಿ ಅವರನ್ನು ವೇದಿಕೆಯ ಮೇಲೆ ಕರೆಯಬೇಕಿತ್ತು. ಆ ಸಂದರ್ಭದಲ್ಲಿ ಆಲಿಯಾ ಭಟ್ ಅವರು ಭಾಭಿ (ಅತ್ತಿಗೆ) ವೇದಿಕೆ ಮೇಲೆ ಬನ್ನಿ ಎಂದರು. ಆಗ ನೀತಾ, ‘ಹೆಲ್ಲೋ ಆಲಿಯಾ’ ಎಂದರು. ಆಗ ಆಲಿಯಾ ಭಟ್ ಅವರು ‘ಥ್ಯಾಂಕ್​ ಯೂ ನೀತಾ ಮ್ಯಾಮ್’ ಎಂದರು. ನೀತಾ ಅಂಬಾನಿ ಹೆಲ್ಲೋ ಎಂದು ಹೇಳುವ ಧಾಟಿ ಆಲಿಯಾನ ಭಯ ಬೀಳಿಸಿತು ಎಂಬ ರೀತಿಯಲ್ಲಿ ವಿಡಿಯೋ ವೈರಲ್ ಆಗಿದೆ. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ.

ಇದನ್ನೂ ಓದಿ: ಮತ್ತೆ ತೆಲುಗು ಸಿನಿಮಾನಲ್ಲಿ ನಟಿಸಲಿರುವ ಆಲಿಯಾ ಭಟ್, ನಾಯಕ ಯಾರು?

ಅಸಲಿಗೆ ಅಲ್ಲಿ ನಡೆದಿದ್ದೇ ಬೇರೆ. ಆಲಿಯಾ ಭಟ್ ಅವರು ಆರಂಭದಲ್ಲಿ ನೀತಾ ಮುಕೇಶ್ ಅಂಬಾನಿ ಎಂದೇ ಕರೆದರು ಮತ್ತು ಅವರು ಯಾರು ಎಂಬುದನ್ನು ವಿವರಿಸಿದರು. ನಂತರ ನೀತಾ ಅವರನ್ನು ವೇದಿಕೆ ಮೇಲೆ ಕರೆಯುವಾಗ, ‘ಬಾಭಿ ವೇದಿಕೆಯ ಮೇಲೆ ಬನ್ನಿ’ ಎಂದರು. ವೇದಿಕೆ ಮೇಲೆ ಬಂದ ನೀತಾ, ‘ಹೆಲ್ಲೋ ಆಲಿಯಾ’ ಎಂದರು. ಇದಕ್ಕೆ ಪ್ರತಿಯಾಗಿ ಆಲಿಯಾ ಮುದ್ದಾಗಿ ನಕ್ಕರು. ಇಲ್ಲಿಗೆ ಇವರ ಸಂಭಾಷಣೆ ಕೊನೆಯಾಗಿದೆ. ನಂತರ ಅವಾರ್ಡ್ ನೀಡುವ ಕೆಲಸ ಆಗಿದೆ. ಕೊನೆಯಲ್ಲಿ ಆಲಿಯಾ ಭಟ್ ಅವರು ‘ಥ್ಯಾಂಕ್​ ಯೂ ಸೋ ಮಚ್ ನೀತಾ ಮ್ಯಾಮ್’ ಎಂದಿದ್ದಾರೆ. ಇದೆಲ್ಲವನ್ನೂ ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಆಲಿಯಾಗೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ಮಾಡಲಾಗಿದೆ.

ನೀತಾ ಹಾಗೂ ಆಲಿಯಾ ಮಧ್ಯೆ ಒಳ್ಳೆಯ ಸಂಬಂಧ ಇದೆ. ಆಲಿಯಾ ಹಿರಿಯ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಮಗಳು. ಹೀಗಾಗಿ, ಆಲಿಯಾ ಅವರನ್ನು ನೀತಾ ಅವರು ಸಣ್ಣ ವಯಸ್ಸಿನಿಂದ ನೋಡುತ್ತಾ ಬರುತ್ತಿದ್ದಾರೆ. ಹೀಗಾಗಿ, ಆಲಿಯಾ ಪ್ರೀತಿಯಿಂದ ಭಾಭಿ ಎಂದು ಕರೆದಿದ್ದಕ್ಕೆ ಅವರಿಗೆ ಯಾವುದೇ ವಿರೋಧ ಇಲ್ಲ. ಸದ್ಯ ಎಡಿಟ್ ಮಾಡಲಾದ ವಿಡಿಯೋ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:46 am, Tue, 21 April 26

Source link

Manipur Earthquake: ಮಣಿಪುರದಲ್ಲಿ 5.9 ತೀವ್ರತೆಯ ಭೂಕಂಪ – Kannada News | Manipur Earthquake: Tremors Felt in Manipur’s Kamjong, No Damage Reported

ಮಣಿಪುರ, ಏಪ್ರಿಲ್ 21: ಮಣಿಪುರ(Manipur)ದಲ್ಲಿ ಇಂದು ಬೆಳಗಿನ ಜಾವ ಭೂಮಿ ಕಂಪಿಸಿದೆ, ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲಾಗಿದೆ. ಸೋಮವಾರ ಮತ್ತು ಮಂಗಳವಾರದ ಅವಧಿಯಲ್ಲಿ ಭೂಮಿಯ ಅಂತರಾಳದಲ್ಲಿ ಉಂಟಾದ ಚಲನವಲನಗಳು ಏಷ್ಯಾದ ಎರಡು ಪ್ರಮುಖ ಭಾಗಗಳಲ್ಲಿ ಆತಂಕ ಮೂಡಿಸಿವೆ. ಮಣಿಪುರದ ಬೆಟ್ಟಗುಡ್ಡಗಳಲ್ಲಿ ಭೂಮಿ ನಡುಗಿದರೆ, ಜಪಾನ್‌ನ ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಸಮುದ್ರ ಅಲೆಗಳು ಸುನಾಮಿಯ ಮುನ್ನೆಚ್ಚರಿಕೆ ನೀಡಿವೆ.

ಮಂಗಳವಾರ ಬೆಳಗ್ಗೆ 5.59 ರ ಸುಮಾರಿಗೆ, ಮಣಿಪುರದ ಕಾಮ್ಜಾಂಗ್ ಜಿಲ್ಲೆಯ ನಿವಾಸಿಗಳು ಗಾಢ ನಿದ್ರೆಯಲ್ಲಿದ್ದಾಗ ಭೂಮಿ ಜೋರಾಗಿ ಕಂಪಿಸಿತು. ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲಾದ ಈ ಭೂಕಂಪವು ಜನರನ್ನು ಬೆಚ್ಚಿಬೀಳಿಸಿತು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಪ್ರಕಾರ, ಭೂಮಿಯ 62 ಕಿಲೋಮೀಟರ್ ಆಳದಲ್ಲಿ ಈ ಕಂಪನ ಉಂಟಾಗಿದೆ. ಅದೃಷ್ಟವಶಾತ್, ಸದ್ಯಕ್ಕೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ವರದಿಯಾಗಿಲ್ಲ. ಆದರೂ, ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಜಪಾನ್: 7.5 ತೀವ್ರತೆಯ ಭೂಕಂಪ ಮತ್ತು ಸುನಾಮಿ ಅಬ್ಬರ
ಮತ್ತೊಂದೆಡೆ, ಜಪಾನ್‌ನ ಉತ್ತರ ಕರಾವಳಿಯು ಸೋಮವಾರ ಸಂಜೆ ಭೀಕರ ಅನುಭವಕ್ಕೆ ಸಾಕ್ಷಿಯಾಯಿತು. ಸ್ಯಾನ್ರಿಕು ಕರಾವಳಿಯ ಸಮುದ್ರತಳದಲ್ಲಿ ಸಂಭವಿಸಿದ 7.5 ತೀವ್ರತೆಯ ಪ್ರಬಲ ಭೂಕಂಪವು ಸುನಾಮಿ ಎಚ್ಚರಿಕೆಗೆ ಕಾರಣವಾಯಿತು.

ಮತ್ತಷ್ಟು ಓದಿ: Japan Earthquake: ಜಪಾನ್​ನಲ್ಲಿ 7.4 ತೀವ್ರತೆಯ ಭೂಕಂಪ; ಅಧಿಕಾರಿಗಳಿಂದ ಸುನಾಮಿಯ ಎಚ್ಚರಿಕೆ

ಇವಾಟೆ ಪ್ರಾಂತ್ಯದ ಕುಜಿ ಬಂದರಿನಲ್ಲಿ ಈಗಾಗಲೇ 80 ಸೆಂಟಿಮೀಟರ್ ಎತ್ತರದ ಅಲೆಗಳು ಅಪ್ಪಳಿಸಿವೆ. ಅಧಿಕಾರಿಗಳು 3 ಮೀಟರ್‌ವರೆಗೂ ಅಲೆಗಳು ಏಳಬಹುದು ಎಂದು ಎಚ್ಚರಿಸಿದ್ದು, ಸಮುದ್ರ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಜಪಾನ್ ಪಾಲಿಗೆ ಇದು ಸಾಮಾನ್ಯ ಘಟನೆಯಲ್ಲ. 2011ರ ಟೊಹೊಕು ವಿನಾಶಕಾರಿ ಸುನಾಮಿ ಸುಮಾರು 22,000 ಜನರನ್ನು ಬಲಿಪಡೆದ ನೆನಪು ಇಂದಿಗೂ ಹಸಿರಾಗಿದೆ. ಆ ಕರಾಳ ಇತಿಹಾಸ ಮರುಕಳಿಸದಿರಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.

ಮುನ್ನೆಚ್ಚರಿಕೆ ಮತ್ತು ಸಿದ್ಧತೆ
ಜಪಾನ್ ಹವಾಮಾನ ಸಂಸ್ಥೆಯು ಮುಂದಿನ ಒಂದು ವಾರದವರೆಗೆ ಇಂತಹ ಕಂಪನಗಳು ಮರುಕಳಿಸಬಹುದು ಎಂದು ಎಚ್ಚರಿಸಿದೆ. ಇವಾಟೆ ಪ್ರಾಂತ್ಯದ 11 ಪಟ್ಟಣಗಳಿಗೆ ಸ್ಥಳಾಂತರದ ಸಲಹೆ ನೀಡಲಾಗಿದೆ. ಮಿಯಾಗಿ ಮತ್ತು ಫುಕುಶಿಮಾ ಭಾಗಗಳಲ್ಲೂ ಜಾಗರೂಕರಾಗಿರಲು ಸೂಚಿಸಲಾಗಿದೆ.

ಪ್ರಕೃತಿಯ ಈ ಮುನಿಸು ಮಾನವಕುಲಕ್ಕೆ ಸನ್ನದ್ಧತೆಯ ಪಾಠವನ್ನು ಮತ್ತೊಮ್ಮೆ ನೆನಪಿಸಿದೆ. ಮಣಿಪುರದ ಶಾಂತತೆ ಮತ್ತು ಜಪಾನ್‌ನ ಸುರಕ್ಷತೆಗಾಗಿ ಇಡೀ ವಿಶ್ವವೇ ಪ್ರಾರ್ಥಿಸುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ಉಡುಪಿ, ಮಂಗಳೂರಿನಲ್ಲಿ ಹೆಚ್ಚಾಯ್ತು ಬಿಸಿಲಿನ ಝಳ! ಕಲ್ಯಾಣ ಕರ್ನಾಟದಲ್ಲಿ ಮಳೆಯಾಗುವ ಸಾಧ್ಯತೆ – Kannada News | Karnataka Weather Forecast: Heat wave alert in coastal area, Thunderstorm elsewhere

ಬೆಂಗಳೂರು, ಏಪ್ರಿಲ್ 21: ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ (Karnataka Weather)  ಹೆಚ್ಚಾಗಿದ್ದು, ಮುಂದಿನ 2 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹೀಟ್ ವೇವ್ ಜೊತೆಗೆ ಗುಡುಗು ಸಹಿತ ಮಳೆ

ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದೂ ಉಷ್ಣ ಅಲೆ ಇರಲಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದ್ದು, ಜೊತೆಗೆ ಗುಡುಗು ಸಹಿತ ಮಳೆಯೂ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ವಿಜಯಪುರ, ಕಲಬುರ್ಗಿ, ಯಾದಗಿರಿ, ಬೆಳಗಾವಿ ಮತ್ತು ಧಾರವಾಡ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಇನ್ನೂ 5 ದಿನ ಇದೇ ವಾತಾವರಣ

ಏಪ್ರಿಲ್ 22 ರವರೆಗೆ ಕರ್ನಾಟಕದ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಅಂತೆಯೇ ದಕ್ಷಿಣ ಒಳನಾಡಿನಲ್ಲಿಯೂ ಗುಡುಗು ಸಹಿತ ಮಳೆಯೊಂದಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನಗಳವರೆಗೆ ಕರಾವಳಿ ಪ್ರದೇಶಗಳಲ್ಲಿ ಉಷ್ಣ ಅಲೆ ಇರಲಿದ್ದು, ಮುನ್ನೆಚ್ಚರಿಕಾ ಕ್ರಮವಹಿಸುವಂತೆ ಇಲಾಖೆ ತಿಳಿಸಿದೆ. ಜೊತೆಗೆ ಏಪ್ರಿಲ್ 21ರ ವರೆಗೆ ಉತ್ತರ ಒಳನಾಡಿನಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಘರ್ಷದ ಹಾದಿಯಲ್ಲಿ ಬಲಿಷ್ಠ ರಾಷ್ಟ್ರಗಳು: ಇರಾನ್ ಹಠಕ್ಕೆ ಅಮೆರಿಕ ಕೆಂಡಾಮಂಡಲ, ಟ್ರಂಪ್‌ನಿಂದ ಖಡಕ್ ವಾರ್ನಿಂಗ್ – Kannada News | US Iran Conflict Escalates: Trump’s Nuclear Warning Amid Failed Peace Talks

ವಾಷಿಂಗ್ಟನ್, ಏಪ್ರಿಲ್ 21: ವಿಶ್ವದ ಎರಡು ಪ್ರಬಲ ರಾಷ್ಟ್ರಗಳಾದ ಅಮೆರಿಕ ಹಾಗೂ ಇರಾನ್(Iran) ನಡುವಿನ ಬಿಕ್ಕಟ್ಟು ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಇಸ್ಲಾಬಾದ್​ನಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆಗಳ ಮೇಲೆ ಕಾರ್ಮೋಡ ಕವಿದಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧ ಭೀತಿ ಎದುರಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲೇ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಸಂಘರ್ಷ ಕೊನೆಗೊಳಿಸಲು ನಮಗೇನು ಅವಸರವಿಲ್ಲ ಎಂದು ಹೇಳುವ ಮೂಲಕ ಅವರು ಇರಾನ್ ಮೇಲೆ ಒತ್ತಡ ಹೇರಿದ್ದಾರೆ. ಬುಧವಾರಕ್ಕೆ 14 ದಿನಗಳ ಕದನ ವಿರಾಮ ಅಂತ್ಯಗೊಳ್ಳಲಿದ್ದು, ಅದನ್ನು ವಿಸ್ತರಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಟ್ರಂಪ್ ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ.

ಒಂದು ವೇಳೆ ಇರಾನ್ ಮಾತುಕತೆಗೆ ಬರದಿದ್ದರೆ ಮಿಲಿಟರಿ ಶಕ್ತಿ ಬಳಕೆಯೂ ಸೇರಿದಂತೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಟ್ರಂಪ್ ಅವರ ಖಡಕ್ ಸಂದೇಶ. ವಿಶೇಷವೆಂದರೆ, ಕೇವಲ ತಾತ್ಕಾಲಿಕ ಕದನ ವಿರಾಮ ತಮ್ಮ ಗುರಿಯಲ್ಲ, ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕಿತ್ತುಹಾಕುವುದೇ ತಮ್ಮ ಉದ್ದೇಶ ಎಂದು ಅವರು ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ಅಮೆರಿಕದಿಂದಾಗಿ ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್

ವಾಷಿಂಗ್ಟನ್‌ನ ಈ ಬೆದರಿಕೆ ತಂತ್ರಗಳಿಗೆ ಇರಾನ್ ಬಗ್ಗುವಂತೆ ಕಾಣುತ್ತಿಲ್ಲ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್ ಅವರು ಅಮೆರಿಕದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ನಮ್ಮನ್ನು ಶರಣಾಗುವಂತೆ ಮಾಡಲು ಅಮೆರಿಕ ಪ್ರಯತ್ನಿಸುತ್ತಿದೆ. ಆದರೆ ಒತ್ತಡ ಮತ್ತು ಬೆದರಿಕೆಯ ನೆರಳಿನಲ್ಲಿ ನಾವು ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಅವರು ಗುಡುಗಿದ್ದಾರೆ. ಅಗತ್ಯವಿದ್ದರೆ ಹೊಸ ಯುದ್ಧತಂತ್ರಗಳೊಂದಿಗೆ ಪ್ರತಿಕ್ರಿಯಿಸಲು ಸಿದ್ಧ ಎಂದು ಇರಾನ್ ಎಚ್ಚರಿಸಿದೆ.

ಏಪ್ರಿಲ್ 11 ಮತ್ತು 12 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಗಳು ಯಾವುದೇ ಫಲ ನೀಡದೆ ಅಂತ್ಯಗೊಂಡಿದ್ದವು. ಈಗ ಎರಡನೇ ಸುತ್ತಿಗೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗವನ್ನು ಕಳುಹಿಸಲು ಟ್ರಂಪ್ ಸಿದ್ಧತೆ ನಡೆಸುತ್ತಿದ್ದಾರೆ. ಇತ್ತ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಒಪ್ಪಂದಕ್ಕೆ ಬರುವವರೆಗೆ ಇರಾನ್ ಬಂದರುಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ, ಬುಧವಾರದ ಗಡುವು ಮುಗಿದ ನಂತರ ಪರಿಸ್ಥಿತಿ ಯಾವ ದಿಕ್ಕಿಗೆ ತಿರುಗಲಿದೆ ಎಂಬುದು ನಿಗೂಢ, ಇರಾನ್‌ನ ಪರಮಾಣು ಸ್ಥಾವರಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವುದು ಟ್ರಂಪ್‌ರ ಪ್ರಮುಖ ಅಜೆಂಡಾ. ಒಟ್ಟಾರೆಯಾಗಿ, ಇಸ್ಲಾಮಾಬಾದ್‌ನ ಶಾಂತಿ ಮಾತುಕತೆಗಳು ಈಗ ಜಾಗತಿಕ ಮಟ್ಟದ ಹಗ್ಗಜಗ್ಗಾಟವಾಗಿ ಮಾರ್ಪಟ್ಟಿವೆ. ಟ್ರಂಪ್‌ರ ಕಠಿಣ ನಿಲುವು ಮತ್ತು ಇರಾನ್‌ನ ಪ್ರತಿರೋಧದ ನಡುವೆ ಶಾಂತಿ ಮರೀಚಿಕೆಯಾಗುತ್ತಿದೆಯೇ ಎಂಬ ಆತಂಕ ಜಗತ್ತನ್ನು ಕಾಡುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಶಾಸಕ ಹ್ಯಾರಿಸ್‌ ಕುಟುಂಬಕ್ಕೆ ಇ.ಡಿ ಶಾಕ್: ನಲಪಾಡ್​ಗೆ ಉರುಳಾಯ್ತಾ ಬಿಟ್ ಕಾಯಿನ್ ಹಗರಣ! – Kannada News | Bitcoin Scam: ED Conducts 15 Hour Raid on MLA NA Haris and Mohammed Nalapad’s Residence; Digital Evidence Seized

ಬಿಗಿ ಭದ್ರತೆಯೊಂದಿಗೆ ನಡೆದಿದ್ದ ಇ.ಡಿ ದಾಳಿImage Credit source: tv9

ಬೆಂಗಳೂರು, ಏಪ್ರಿಲ್ 21: ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣದ ತನಿಖೆ ಈಗ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ (NA Haris) ಕುಟುಂಬದ ಹೊಸ್ತಿಲಿಗೆ ಬಂದು ನಿಂತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED Raid) ಅಧಿಕಾರಿಗಳು ಶಾಸಕ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸದಗಳಲ್ಲಿ ಸತತ 15 ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಶೋಧ ನಡೆಸಿದ್ದಾರೆ.

12 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ

ಏಪ್ರಿಲ್ 20 ರ ಮುಂಜಾನೆ 6:30ಕ್ಕೆ ಏಕಕಾಲಕ್ಕೆ ಕಾರ್ಯಾಚರಣೆ ಆರಂಭಿಸಿದ ಇಡಿ ಅಧಿಕಾರಿಗಳು, ಬೆಂಗಳೂರಿನ ಒಟ್ಟು 12 ಆಯಕಟ್ಟಿನ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

  • ಅಶೋಕನಗರದಲ್ಲಿರುವ ಶಾಸಕ ಹ್ಯಾರಿಸ್ ನಿವಾಸ.
  • ಮೊಹಮ್ಮದ್ ನಲಪಾಡ್ ನಿವಾಸ.
  • ಬೆಳ್ಳಂದೂರಿನಲ್ಲಿರುವ ಉಮರ್ ನಲಪಾಡ್ ಕಚೇರಿ.
  • ನಲಪಾಡ್‌ಗೆ ಸೇರಿದ ಬೆಂಗಳೂರಿನ 4 ಪ್ರತ್ಯೇಕ ಕಚೇರಿಗಳು.
  • ವೈಟ್‌ಫೀಲ್ಡ್‌ನ ಏವಿಯೇಷನ್ ಕಂಪನಿ ಮತ್ತು ಎಲೆಕ್ಟ್ರಾನಿಕ್ ಸಿಟಿಯ ಐಟಿ ಸೆಲ್ಯುಲೋಸ್ ಸಂಸ್ಥೆಗಳು.
  • ಹಗರಣದ ಕಿಂಗ್‌ಪಿನ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಮನೆ.
  • ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಮೊಮ್ಮಗ ಹಕೀಬ್ ಖಾನ್ ನಿವಾಸ.

ಇ.ಡಿ ದಾಳಿಗೆ ಅಸಲಿ ಕಾರಣವೇನು?

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಬಿಟ್‌ಕಾಯಿನ್ ಕಳವು ಮಾಡಿರುವ ಆರೋಪ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ತಂಡದ ಮೇಲಿದೆ. ಕಳುವಾದ ಡಿಜಿಟಲ್ ಆಸ್ತಿಗಳನ್ನು ಕ್ರಿಪ್ಟೋ ಮೂಲಕ ಮಾರಾಟ ಮಾಡಿ, ಆ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ (Layering) ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಈ ಹಣವನ್ನು ಡ್ರಗ್ಸ್ ಖರೀದಿ ಮತ್ತು ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂಬುದು ಇಡಿ ಅಧಿಕಾರಿಗಳ ಪ್ರಮುಖ ಆರೋಪ.

10 ಲಕ್ಷ ರೂ. ಮತ್ತು ಶ್ರೀಕಿ-ನಲಪಾಡ್ ಲಿಂಕ್

2020ರಲ್ಲಿ ಯಶೋಧಾ ದೇವಿ ಎಂಬುವವರು ನೀಡಿದ ವಂಚನೆ ದೂರಿನ ತನಿಖೆ ವೇಳೆ ಈ ಲಿಂಕ್ ಬಯಲಾಗಿದೆ. ಹ್ಯಾಕರ್ ಶ್ರೀಕಿ, ಹ್ಯಾರಿಸ್ ಕಿರಿಯ ಪುತ್ರ ಉಮರ್ ನಲಪಾಡ್‌ನ ಕ್ಲಾಸ್‌ಮೇಟ್ ಆಗಿದ್ದ. ಇದೇ ಸ್ನೇಹದ ಮೂಲಕ ಶ್ರೀಕಿ ಮೊಹಮ್ಮದ್ ನಲಪಾಡ್‌ಗೂ ಹತ್ತಿರವಾಗಿದ್ದ. ಶ್ರೀಕಿ ಬಿಟ್‌ಕಾಯಿನ್ ಹ್ಯಾಕ್ ಮಾಡಿ ಮುಂಬೈ ಮೂಲದ ವ್ಯಕ್ತಿಯೊಬ್ಬನಿಗೆ ಕಳುಹಿಸಿದ್ದ. ಆ ವ್ಯಕ್ತಿ ನಲಪಾಡ್ ಖಾತೆಗೆ 10 ಲಕ್ಷ ರೂ. ವರ್ಗಾಯಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ಗುಂಪಿನ ನಡುವೆ ಒಟ್ಟು 4.5 ಕೋಟಿ ರೂ. ಅಕ್ರಮ ವಹಿವಾಟು ನಡೆದಿದೆ ಎಂಬ ಶಂಕೆಯಿದೆ.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣಕ್ಕೂ ಶಾಸಕ ಹ್ಯಾರಿಸ್​ಗೂ ಏನು ಸಂಬಂಧ? ಕಾಂಗ್ರೆಸ್ ಶಾಸಕರ, ನಲಪಾಡ್ ಮನೆ ಮೇಲೆ ಇಡಿ ದಾಳಿ ಮಾಡಿದ್ದೇಕೆ?

15 ಗಂಟೆಗಳ ಕಾಲ ನಡೆದ ಶೋಧದ ನಂತರ ಇಡಿ ಅಧಿಕಾರಿಗಳು ಮಹತ್ವದ ಡಿಜಿಟಲ್ ದಾಖಲೆಗಳು, ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಮತ್ತು ವಿದೇಶಿ ಬ್ಯಾಂಕ್ ವಹಿವಾಟಿನ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಹ್ಯಾರಿಸ್ ಕುಟುಂಬಕ್ಕೆ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ? – Kannada News | What Happens when you envy someone’s success

ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯ ಪ್ರಗತಿಯು ಆತನ ಪರಿಶ್ರಮ, ಮನಸ್ಸತ್ವ ಮತ್ತು ಸಾಧನೆಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ, ಮತ್ತೊಬ್ಬರ ಅಭಿವೃದ್ಧಿ, ಕೀರ್ತಿ, ಅಥವಾ ಹೆಸರನ್ನು ಕಂಡಾಗ ಅಸೂಯೆ ಪಡುವ ಭಾವನೆ ಹೆಚ್ಚಾಗುತ್ತಿದೆ.

ಮತ್ತೊಬ್ಬರ ಏಳಿಗೆ ನೋಡಿ ಅಸೂಯೆ ಪಟ್ಟರೆ ನಮ್ಮ ಸಮಯ ವ್ಯರ್ಥವಾಗುತ್ತದೆ, ದೇಹದ ಧನಾತ್ಮಕ ಶಕ್ತಿಗಳು ಹೊರಟುಹೋಗುತ್ತವೆ ಮತ್ತು ದೈವಬಲ ಕುಂದುತ್ತದೆ. ಇಂತಹ ನಕಾರಾತ್ಮಕ ಭಾವನೆಗಳು ನಮ್ಮ ದೇಹದಲ್ಲಿ ವಿಷ ತುಂಬಿದಂತೆ. ದುರ್ಯೋಧನನ ಕಥೆಯು ಇದಕ್ಕೆ ಉತ್ತಮ ಉದಾಹರಣೆ. ಪಾಂಡವರ ಬಗ್ಗೆ ಅಸೂಯೆ ಪಟ್ಟ ದುರ್ಯೋಧನ ತನ್ನ ಇಡೀ ಸಾಮ್ರಾಜ್ಯವನ್ನೇ ನಾಶ ಮಾಡಿಕೊಂಡ. ಬದಲಿಗೆ, ನಾವು ಮೆಚ್ಚುಗೆ ವ್ಯಕ್ತಪಡಿಸಿದಾಗ, ಶುಭಾಶಯ ಕೋರಿದಾಗ ಅಥವಾ ಸಕಾರಾತ್ಮಕವಾಗಿ ಯೋಚಿಸಿದಾಗ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿಗಳು ಆವರಿಸಿಕೊಳ್ಳುತ್ತವೆ. ಇದು ನಮ್ಮ ಪ್ರಗತಿಗೆ ಸಹಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

 

 

 

Source link

ಪ್ರಶಾಂತ್ ಗೌಡ ಮದುವೆ ಆಗುತ್ತಿರುವ ಕೃತಿ ಗೌಡ ಯಾರು? ಇಲ್ಲಿದೆ ಅವರ ಹಿನ್ನೆಲೆ – Kannada News | Prashanth Gowda Engagement Who is Kriti Gowda Prashanth Gowda Fiance

ಪ್ರಶಾಂತ್ ಗೌಡ ಅವರು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾದರೆ, ಅವರು ಮದುವೆ ಆಗುತ್ತಿರುವ ಹುಡುಗಿ ಯಾರು? ಆ ಬಗ್ಗೆ ಇಲ್ಲಿದೆ ವಿವರ.

Source link