All posts by nagaraj11081993

Weekly Horoscope: ವಾರ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ತಿಳಿಯಿರಿ

Weekly Horoscope: ವಾರ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ತಿಳಿಯಿರಿ

ಇದು 2026ರ ಮಾರ್ಚ್ ನ ಕೊನೆಯ ವಾರ ಹಾಗೂ ಏಪ್ರಿಲ್ ನ ಮೊದಲ ವಾರವಾಗಿದ್ದು ಎಲ್ಲದಕ್ಕೂ ಆರುರಾತುರ ಪಡುವ ಬದಲು ಸಮಯಕ್ಕೆ ಕಾಯಬೇಕು. ಆಗ ಮಾತ್ರ ಬೆಲೆ, ನಿಮಗೂ ವಸ್ತುವಿಗೂ. ಅಡ್ಡದಾರಿ ನಿಮ್ಮನ್ನು ಕೈಬೀಸಿ ಕರೆಯುವುದು. ದುರಭ್ಯಾಸವನ್ನು ಮುಚ್ಚಿಡುವ ಪ್ರಯತ್ನ ಪ್ರಗತಿಯಲ್ಲಿ ಇರಲಿದೆ. ಆದರೂ ಪ್ರಕಟವಾಗುವುದು. ವಿರುದ್ಧ ಸೆಣಸಾಟ ಬರಬಹುದು ಜಾಗರೂಕತೆಯಿಂದ ವಾರವನ್ನು ಕಳೆಯಿರಿ. ಶುಭವಾಗಲಿ.

ಮೇಷ ರಾಶಿ :

ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಲಿವೆ. ಆರ್ಥಿಕ ಲಾಭ ಉತ್ತಮವಾಗಿದ್ದರೂ ಖರ್ಚಿನ ಮೇಲೆ ನಿಯಂತ್ರಣವಿರಲಿ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನಹರಿಸಿ.

ವೃಷಭ ರಾಶಿ :

ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ದೂರ ಪ್ರಯಾಣದ ಯೋಗವಿದ್ದು, ಹಿರಿಯರ ಮಾರ್ಗದರ್ಶನದಿಂದ ಸಂಕಷ್ಟಗಳು ದೂರಾಗುತ್ತವೆ. ವ್ಯಾಪಾರದಲ್ಲಿ ಲಾಭದಾಯಕ ವಾರವಿದು. ಸಂಗಾತಿಯೊಂದಿಗೆ ಸುಖದ ಸಮಯ ಕಳೆಯುವಿರಿ.

ಮಿಥುನ ರಾಶಿ :

ಮಿಶ್ರ ಫಲಗಳು ಕಂಡುಬರಲಿವೆ. ಅನಗತ್ಯ ಚರ್ಚೆಗಳಿಂದ ದೂರವಿರುವುದು ಒಳಿತು. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ವಾರದ ಅಂತ್ಯಕ್ಕೆ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಮಾನಸಿಕ ಶಾಂತಿಗಾಗಿ ದೈವದತ್ತ ಗಮನ ನೀಡಿ.

ಕರ್ಕಾಟಕ ರಾಶಿ:

ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆಯಿದೆ. ಸಾಮಾಜಿಕ ಗೌರವ ಹೆಚ್ಚಾಗಲಿದೆ. ಆಸ್ತಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಗೆ ಇದು ಸೂಕ್ತ ಸಮಯ. ಮಕ್ಕಳ ಶಿಕ್ಷಣದ ವಿಚಾರದಲ್ಲಿ ಪ್ರಗತಿ ಕಂಡುಬರಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಸಿಂಹ ರಾಶಿ:

ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಶತ್ರುಗಳ ಮೇಲೆ ಜಯ ಸಾಧಿಸುವಿರಿ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹೊಸ ಹೂಡಿಕೆಗೆ ಅವಕಾಶಗಳಿವೆ. ಉದ್ಯೋಗಿಗಳಿಗೆ ಅಧಿಕಾರಿಗಳ ಬೆಂಬಲ ದೊರೆಯುತ್ತದೆ.

ಕನ್ಯಾ ರಾಶಿ:

ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಕಂಡುಬರುತ್ತದೆ. ಸೃಜನಾತ್ಮಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಸಾಲದ ಹೊರೆ ಕಡಿಮೆಯಾಗುವ ಸಂಭವವಿದೆ. ಆರೋಗ್ಯ ಸ್ಥಿರವಾಗಿರಲಿದೆ.

ತುಲಾ ರಾಶಿ :

ಮನೆ ಅಥವಾ ವಾಹನ ಖರೀದಿ ಯೋಗವಿದೆ. ತಾಯಿಯ ಕಡೆಯಿಂದ ಸಹಕಾರ ಸಿಗಲಿದೆ. ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವಿರಲಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ವೃಶ್ಚಿಕ ರಾಶಿ:

ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಲಿದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಲಿದೆ. ಸಹೋದರರೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ. ವೃತ್ತಿಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಇದು ಸಕಾಲ.

ಧನು ರಾಶಿ:

ಆರ್ಥಿಕವಾಗಿ ಲಾಭದಾಯಕ ವಾರ. ಮಾತಿನ ಮೇಲೆ ಸಂಯಮವಿರಲಿ, ಇದರಿಂದ ಕೌಟುಂಬಿಕ ಕಲಹ ತಪ್ಪಿಸಬಹುದು. ಕಣ್ಣಿನ ಸಮಸ್ಯೆ ಅಥವಾ ಹಲ್ಲು ನೋವು ಕಾಣಿಸಿಕೊಳ್ಳಬಹುದು, ಜಾಗ್ರತೆ ವಹಿಸಿ. ನೆಮ್ಮದಿಯ ವಾರವಿದು.

ಮಕರ ರಾಶಿ :

ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮಾನ್ಯತೆ ಸಿಗಲಿದೆ. ಸ್ಥಗಿತಗೊಂಡ ಕೆಲಸಗಳು ಪುನಾರಂಭಗೊಳ್ಳಲಿವೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಲಿದೆ.

ಕುಂಭ ರಾಶಿ:

ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ, ಬಜೆಟ್ ಬಗ್ಗೆ ಗಮನವಿರಲಿ. ವಿದೇಶಿ ಸಂಬಂಧಿತ ವ್ಯವಹಾರಗಳಲ್ಲಿ ಲಾಭ ದೊರೆಯಲಿದೆ. ನಿದ್ದೆಯ ಕೊರತೆಯಾಗದಂತೆ ನೋಡಿಕೊಳ್ಳಿ. ದಾನ ಧರ್ಮ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.

ಮೀನ ರಾಶಿ:

ಆದಾಯದ ಮೂಲಗಳು ಹೆಚ್ಚಾಗಲಿವೆ. ಹಳೆಯ ಬಾಕಿ ಹಣ ವಾಪಸ್ ಬರಲಿದೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದ್ದು, ಗೆಳೆಯರೊಂದಿಗೆ ಮೋಜಿನ ಸಮಯ ಕಳೆಯುವಿರಿ. ಎಲ್ಲ ಕೆಲಸಗಳಲ್ಲೂ ಅದೃಷ್ಟ ನಿಮ್ಮ ಪರವಾಗಿರಲಿದೆ.

-ಲೋಹಿತ ಹೆಬ್ಬಾರ್

Source link

ರೇಮಂಡ್ ಗ್ರೂಪ್ ಮಾಜಿ ಛೇರ್ಮನ್ ವಿಜಯಪತ್ ಸಿಂಘಾನಿಯಾ ನಿಧನ; ಅಪರೂಪದ ಉದ್ಯಮಿ ಮತ್ತು ಸಾಹಸಿ

ನವದೆಹಲಿ, ಮಾರ್ಚ್ 29: ರೇಮಂಡ್ ಗ್ರೂಪ್ ಕಟ್ಟಿ ಬೆಳೆಸಿದ್ದ ಮತ್ತು ಅದರ ಮಾಜಿ ಛೇರ್ಮನ್ ಆದ ವಿಜಯಪತ್ ಸಿಂಘಾನಿಯಾ ನಿನ್ನೆ ಶನಿವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ರೇಮಂಡ್ ಗ್ರೂಪ್​ನ ಈಗಿನ ಮುಖ್ಯಸ್ಥ ಗೌತಮ್ ಸಿಂಘಾನಿಯಾ ಅವರ ತಂದೆಯಾದ ವಿಜಯಪತ್ ಸಿಂಘಾನಿಯಾ ಅವರ ಅಂತ್ಯಸಂಸ್ಕಾರ ಮುಂಬೈನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ

ತಮ್ಮ ತಂದೆ ಮೃತಪಟ್ಟಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಗೌತಮ್ ಸಿಂಘಾನಿಯಾ ಘೋಷಿಸಿದ್ದಾರೆ. ಮುಂಬೈನ ಚಂದನವಾಡಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಬಕಾರಿ ಸುಂಕ ಕಡಿತದಿಂದ ಸರ್ಕಾರಕ್ಕೆ ಎರಡೇ ವಾರದಲ್ಲಿ 7,000 ಕೋಟಿ ರೂ ಆದಾಯನಷ್ಟದ ಅಂದಾಜು

ರೇಮಂಡ್ ಅನ್ನು ಹೊಸ ಸ್ತರಕ್ಕೆ ಕೊಂಡೊಯ್ದಿದ್ದ ವಿಜಯಪತ್

ವಿಜಯಪತ್ ಸಿಂಘಾನಿಯಾ ಅವರು 1980ರಲ್ಲಿ ರೇಮೆಂಡ್ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದರು. ಅವರ ನೇತೃತ್ವದಲ್ಲಿ ಸಂಸ್ಥೆ ಹೊಸ ಎತ್ತರ ಮತ್ತು ವಿಸ್ತಾರ ಪಡೆಯಿತು. ರೇಮಂಡ್ಸ್ ಬ್ರ್ಯಾಂಡ್ ಬಹಳ ಖ್ಯಾತವಾಯಿತು. ಆದರೆ, ಸಿಂಘಾನಿಯಾ ಅವರು ರೇಮೆಂಡ್ಸ್ ಅನ್ನು ಟೆಕ್ಸ್​ಟೈಲ್ ಕ್ಷೇತ್ರಕ್ಕೆ ಸೀಮಿತಗೊಳಿಸಲಿಲ್ಲ. ಹಲವು ಸೆಕ್ಟರ್​ಗಳಲ್ಲಿ ಅದರ ಬ್ಯುಸಿನೆಸ್ ಹರಡಿತು.

ಸಿಂಥೆಟಿಕ್ ಫ್ಯಾಬ್ರಿಕ್ಸ್, ಡೆನಿಮ್, ಉಕ್ಕು, ಸಿಮೆಂಟ್, ಕೈಗಾರಿಕಾ ಉತ್ಪನ್ನ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಇವತ್ತು ರೇಮಂಡ್ ಬ್ಯುಸಿನೆಸ್​ಗಳಿವೆ.

ಎರಡು ದಶಕಗಳ ಕಾಲ ರೇಮೆಂಡ್ ಛೇರ್ಮನ್ ಆಗಿ ಕೆಲಸ ಮಾಡಿದ ವಿಜಯಪತ್ ಸಿಂಘಾನಿಯಾ ಅವರು 2000ರಲ್ಲಿ ತಮ್ಮ ಮಗ ಗೌತಮ್ ಸಿಂಘಾನಿಯಾ ಅವರಿಗೆ ಆಡಳಿತ ಚುಕ್ಕಾಣಿ ನೀಡಿದರು. ಸಂಸ್ಥೆಯಲ್ಲಿ ತಾವು ಹೊಂದಿದ್ದ ಎಲ್ಲಾ ಶೇ. 37ರಷ್ಟು ಪಾಲನ್ನು ಮಗನಿಗೆ ನೀಡಿದರು.

ಇದನ್ನೂ ಓದಿ: ರಷ್ಯನ್ ಎಲ್​ಎನ್​ಜಿಯನ್ನು ಖರೀದಿಸಲಿರುವ ಭಾರತ; ಎಲ್​ಪಿಜಿ, ಪಿಎನ್​ಜಿ, ಎಲ್​ಎನ್​ಜಿಗಿರುವ ವ್ಯತ್ಯಾಸಗಳೇನು?

ವಿಜಯ್​ಪತ್ ಸಿಂಘಾನಿಯಾ ಅವರು ಬ್ಯುಸಿನೆಸ್ ಅಲ್ಲದೇ ವೈಯಕ್ತಿಕ ಸಾಹಸಗಳಿಗೂ ಹೆಸರುವಾಸಿಯಾದವರು. ವಿಮಾನ ಚಲಾಯಿಸುವುದರಲ್ಲಿ ಬಹಳ ಆಸಕ್ತಿ ಹೊಂದಿದ್ದ ಅವರು 5,000ಕ್ಕೂ ಅಧಿಕ ಗಂಟೆಗಳ ಫ್ಲೈಯಿಂಗ್ ಮಾಡಿದ್ದಾರೆ. 67ರ ವಯಸ್ಸಿನಲ್ಲಿ ಹಾಟ್ ಏರ್ ಬಲೂನ್​ನಲ್ಲಿ 69,000 ಅಡಿ ಎತ್ತರಕ್ಕೆ ಹೋಗಿ ವಿಶ್ವದಾಖಲೆ ಬರೆದಿದ್ದಾರೆ. 1988ರಲ್ಲಿ ಲಂಡನ್​ನಿಂದ ದೆಹಲಿವರೆಗೆ ಒಬ್ಬರೇ ಮೈಕ್ರೋಲೈಟ್ ಫ್ಲೈಟ್​ನಲ್ಲಿ 23 ದಿನದಲ್ಲಿ ಪ್ರಯಾಣಿಸಿದ್ದಾರೆ. ಅವರ ಸಾಹಸ ಗುರುತಿಸಿ ಭಾರತೀಯ ವಾಯುಪಡೆಯು ಗೌರವ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ವಾರ ಭವಿಷ್ಯ; ಮಾರ್ಚ್ 30 ರಿಂದ ಏಪ್ರಿಲ್ 5 ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿಯಿರಿ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯವರು ಮಾರ್ಚ್ 30 ರಿಂದ ಏಪ್ರಿಲ್ 5 ರವರೆಗಿನ ವಾರ ಭವಿಷ್ಯವನ್ನು ತಿಳಿಸಿದ್ದಾರೆ. ಈ ವಾರವು ಪರಾಭವನಾಂ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಮತ್ತು ಕೃಷ್ಣ ಪಕ್ಷಗಳನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಸೋಮ ಪ್ರದೋಷ, ನಂಜನಗೂಡು ಜಾತ್ರಾ ಮಹೋತ್ಸವ, ಮಹಾವೀರ ಜಯಂತಿ, ಚೈತ್ರ ಪೌರ್ಣಿಮೆ, ಸಂಕಷ್ಟ ಚತುರ್ಥಿ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗ್ರಹಗಳ ಸ್ಥಿತಿಯಲ್ಲಿ ಮಹತ್ವದ ಬದಲಾವಣೆಗಳಿದ್ದು, ಏಪ್ರಿಲ್ 2 ರಂದು ಕುಜ ಮೀನ ರಾಶಿಗೆ ಪ್ರವೇಶಿಸಲಿದ್ದಾರೆ. ಶುಕ್ರ ಮೇಷದಲ್ಲಿ, ಗುರು ಮಿಥುನದಲ್ಲಿ, ಕೇತು ಸಿಂಹದಲ್ಲಿ, ಬುಧ ಮತ್ತು ರಾಹು ಕುಂಭ ರಾಶಿಯಲ್ಲಿ ಸಂಚರಿಸಲಿದ್ದಾರೆ.

ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನ ರಾಶಿಯವರೆಗಿನ ಎಲ್ಲಾ ದ್ವಾದಶ ರಾಶಿಗಳ ಫಲಾಫಲಗಳನ್ನು ವಿಸ್ತಾರವಾಗಿ ವಿವರಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಕುಟುಂಬ ಸಂಬಂಧಗಳು, ಪ್ರೀತಿ ಮತ್ತು ಅದೃಷ್ಟದ ಬಣ್ಣ ಹಾಗೂ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಜೊತೆಗೆ, ಶುಭ ಫಲಗಳಿಗಾಗಿ ಮಾಡಬೇಕಾದ ದಾನಗಳು ಮತ್ತು ಮಂತ್ರ ಜಪಗಳನ್ನು ಸಹ ಸೂಚಿಸಲಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ತಾಯಿ, ಅಕ್ಕನ ಕೊಂದು ಆತ್ಮಹತ್ಯೆಗೆ ಯುವಕ ಯತ್ನ: ಪೊಲೀಸ್​​ ವರಿಷ್ಠಾಧಿಕಾರಿ ಹೇಳಿದ್ದೇನು?

ಆನೇಕಲ್​​, ಮಾರ್ಚ್​​ 29: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಳೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಾಲದ ಹೊರೆ ತಾಳಲಾರದೆ ಯುವಕನೊಬ್ಬ ತಾಯಿ ಮತ್ತು ಅಕ್ಕನ ಹತ್ಯೆಗೈದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮೋಹನ್ ಗೌಡ ದೊಡ್ಡ ಮಟ್ಟದಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ. 10 ಲಕ್ಷ, 50 ಲಕ್ಷ, ಒಂದು ಕೋಟಿ ರೂಪಾಯಿಗಳವರೆಗಿನ ಚಿಟ್ ಫಂಡ್‌ಗಳನ್ನು ನಡೆಸಿದ್ದಲ್ಲದೆ, ಹಬ್ಬಗಳಿಗಾಗಿ ಮಟನ್, ಪಟಾಕಿ, ಯುಗಾದಿ ಹಬ್ಬ ಸೇರಿದಂತೆ ಸಾಕಷ್ಟು ಚಿಟ್‌ಗಳನ್ನು ನಡೆಸಿದ್ದಾನೆ. ಈ ವ್ಯವಹಾರಗಳಲ್ಲಿ ಭಾರಿ ನಷ್ಟ ಅನುಭವಿಸಿದ್ದರಿಂದ, ಸಾಲಗಾರರ ಕಾಟ ವಿಪರೀತವಾಗಿತ್ತು. ಈ ದುರಂತಕ್ಕೆ ಇದೇ ಮೂಲ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೊಹ್ಲಿಯ ಕಿಸ್​​ಗೆ ನಾಚಿ ನೀರಾದ ಅನುಷ್ಕಾ ಶರ್ಮಾ

ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 201 ರನ್​ ಕಲೆಹಾಕಿದರೆ, ಈ ಗುರಿಯನ್ನು ಆರ್​ಸಿಬಿ ಕೇವಲ 15.4 ಓವರ್​ಗಳಲ್ಲಿ ಚೇಸ್ ಮಾಡಿದೆ.

ಈ ಚೇಸಿಂಗ್​ನಲ್ಲಿ ವಿರಾಟ್ ಕೊಹ್ಲಿಯ ಕೊಡುಗೆ ಅಜೇಯ 69 ರನ್​ಗಳು. ಅದು ಸಹ ಕೇವಲ 38 ಎಸೆತಗಳಲ್ಲಿ. ಈ ಭರ್ಜರಿ ಬ್ಯಾಟಿಂಗ್ ಮೂಲಕ ಆರ್​ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದ ಬಳಿಕ ವಿರಾಟ್ ಕೊಹ್ಲಿ ಮೈದಾನದಿಂದಲೇ ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ (flying kiss) ನೀಡಿ ಗಮನ ಸೆಳೆದರು.

ಅತ್ತ ಅನುಷ್ಕಾ ಶರ್ಮಾ ಕೂಡ ಫ್ಲೈಯಿಂಗ್ ಕಿಸ್​ ನೀಡುತ್ತಿದ್ದಂತೆ ಇತ್ತ ಕಡೆಯಿಂದ ವಿರಾಟ್ ಕೊಹ್ಲಿ ತಮ್ಮ ‘ತುಂಟಾಟ’ ಪ್ರದರ್ಶಿಸಿದರು. ಇದನ್ನು ನೋಡಿ ನಾಚಿಕೆಯೊಂದಿಗೆ ಅನುಷ್ಕಾ ಶರ್ಮಾ ನಗುತ್ತಿರುವ ವಿಡಿಯೋ ವೈರಲ್ ಆಗಿದೆ.

 

Source link

ಸಾಲವಾಗಿ ಕೊಟ್ಟಿರುವ ಹಣ, ಒಡವೆ ವಾಪಸ್ ಕೇಳಿದ್ದಕ್ಕೆ ಮನೆ ಮಾಲೀಕರನ್ನೇ ಕೊಂದ ಕೆಲಸದಾಕೆ

ಗುಜರಾತ್, ಮಾರ್ಚ್​ 29: ಸಾಲವಾಗಿ ಕೊಟ್ಟಿರುವ ಒಡವೆ ಹಾಗೂ ಹಣವನ್ನು ವಾಪಸ್ ಕೇಳಿದ್ದಕ್ಕೆ, ಕೆಲಸದಾಕೆ ಮನೆ ಮಾಲೀಕರನ್ನೇ ಕೊಲೆ(Murder)  ಮಾಡಿರುವ ಘಟನೆ ಗುಜರಾತ್​ನ ಪಾಲನ್​ಪುರದಲ್ಲಿ ನಡೆದಿದೆ. ಶಾಂತಿ ಬೆನ್ ಅಕೇಡಿವಾಲಾ ಮಾರ್ಚ್ 22 ರಿಂದ ಕಾಣೆಯಾಗಿದ್ದರು, ಆದರೆ ಆಕೆಯ ಶವವನ್ನು ಸ್ಥಳೀಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ರೇಖಾ ರಾಥೋಡ್​ಗೆ ಶಾಂತಿ ಬೆನ್ ಕುಟುಂಬವು ಕಳೆದ 15 ವರ್ಷಗಳಿಂದ ಪರಿಚಯವಿತ್ತು. ರೇಖಾ ಮೊದಲು ಮನೆ ಸಹಾಯಕಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು, ಮತ್ತು ನಂತರ ಅವರು ಸ್ನೇಹಿತರಾದರು, ನಂತರ ಅವರು ತಮ್ಮ ಪೀಠೋಪಕರಣ ವ್ಯವಹಾರವನ್ನು ಪ್ರಾರಂಭಿಸಿದರು.

ಪೊಲೀಸ್ ವರದಿಗಳ ಪ್ರಕಾರ, ಶಾಂತಿ ಬೆನ್ ಸುಮಾರು ಒಂದು ವರ್ಷದ ಹಿಂದೆ ರೇಖಾ ಅವರ ವ್ಯವಹಾರಕ್ಕೆ ಸಹಾಯ ಮಾಡಲು ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ಹಣವನ್ನು ಸಾಲವಾಗಿ ನೀಡಿದ್ದರು. ಶಾಂತಿ ಬೆನ್ ತನ್ನ ವಸ್ತುಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದಾಗ ರೇಖಾ ಅವರ ಕೊಲೆಗೆ ಸಂಚು ರೂಪಿಸಿದ್ದಳು ಎಂಬುದು ತಿಳಿದುಬಂದಿದೆ.

ಮಾರ್ಚ್ 22 ರ ರಾತ್ರಿ, ಶಾಂತಿ ಬೆನ್ ಅವರನ್ನು ಭೇಟಿಯ ನೆಪದಲ್ಲಿ ರೇಖಾ ಅವರ ಪೀಠೋಪಕರಣ ಅಂಗಡಿಗೆ ಕರೆದುಕೊಂಡು ಬರಲಾಗಿತ್ತು. ರೇಖಾ ಮತ್ತು ಆಕೆಯ ನಾಲ್ವರು ಸಹಾಯಕರು ಆಕೆಯನ್ನು ಕ್ರೂರವಾಗಿ ಕೊಲೆ ಮಾಡುವ ಮೊದಲು ಮಾದಕ ದ್ರವ್ಯ ಸೇವಿಸಿದ್ದರು ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: ಚಿಕ್ಕಬಳ್ಳಾಪುರ: ಗಂಡನ ಕೈ-ಕಾಲು ಮುರಿದು ವಿಕೃತವಾಗಿ ಕೊಲೆ; ನೌಟಂಕಿ ಪತ್ನಿ ಅರೆಸ್ಟ್​

ಅಪರಾಧದ ಸಾಕ್ಷ್ಯವನ್ನು ಅಳಿಸಲು, ಆರೋಪಿಗಳು ಶಾಂತಿ ಬೆನ್ ಅವರ ದೇಹವನ್ನು ಒಂದು ಚೀಲದಲ್ಲಿ ತುಂಬಿದ್ದರು, ನಂತರ ಅವಶೇಷಗಳನ್ನು ಸಾಗಿಸಿ ಪಾಲನ್‌ಪುರದಲ್ಲಿರುವ ಶೋ ರೂಂನ ನೆಲಮಾಳಿಗೆಯಲ್ಲಿ ಎಸೆಯಲಾಯಿತು. ಆಕೆಯ ಕುಟುಂಬವು ಕಾಣೆಯಾಗಿದೆ ಎಂದು ದೂರು ನೀಡಿದ ನಂತರ ಪೊಲೀಸರು ಹುಡುಕಾಟ ಆರಂಭಿಸಿದರು. ಶಾಂತಿ ಬೆನ್ ಅವರ ಮಗಳು ನ್ಯಾನ್ಸಿ ಮತ್ತು ಸಹೋದರಿ ಕೈಲಾಶ್ ಬೆನ್ ಸೇರಿದಂತೆ ಅವರ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ಸಾಧ್ಯವಾದಷ್ಟು ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಆರಂಭದಲ್ಲಿ ಅವರು ಆಕೆಯ ದೇಹವನ್ನು ಪಡೆಯಲು ನಿರಾಕರಿಸಿದರು, ದ್ರೋಹಕ್ಕೆ ಉತ್ತರವಾಗಿ ಆರೋಪಿಯನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಬೇಕೆಂದು ಒತ್ತಾಯಿಸಿದರು. ರೇಖಾ ರಾಥೋಡ್ ಮತ್ತು ಅವರ ಒಬ್ಬ ಸಹಾಯಕ ಪ್ರಸ್ತುತ ಪೊಲೀಸ್ ವಶದಲ್ಲಿದ್ದಾರೆ. ಈ ಪಿತೂರಿಯಲ್ಲಿ ಭಾಗಿಯಾಗಿರುವ ಇತರ ಮೂವರು ವ್ಯಕ್ತಿಗಳನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇರಾನ್-ಇಸ್ರೇಲ್- ಅಮೆರಿಕ ನಡುವಿನ ಯುದ್ಧವು ಜಾಗತಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತಿವೆ: ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್​ 29: ಪ್ರಸ್ತುತ ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧವು ಜಾಗತಿಕ ಬಿಕ್ಕಟ್ಟು ಸೃಷ್ಟಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಇಂದು ಮನ್​ ಕಿ ಬಾತ್​ನ 132ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ಯುದ್ಧವನ್ನು ಎದುರಿಸುತ್ತಿರುವ ಈ ದೇಶ ನಮ್ಮ ಇಂಧನ ಅಗತ್ಯಗಳಿಗೆ ಪ್ರಮುಖ ಕೇಂದ್ರವಾಗಿದೆ ಎಂದು ಪ್ರಧಾನಿ ಹೇಳಿದರು. ಇದು ಪೆಟ್ರೋಲ್ ಮತ್ತು ಡೀಸೆಲ್‌ಗೆ ಸಂಬಂಧಿಸಿದಂತೆ ಜಾಗತಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ.

ನಮ್ಮ ಜಾಗತಿಕ ಸಂಬಂಧಗಳು, ವಿವಿಧ ದೇಶಗಳಿಂದ ನಾವು ಪಡೆಯುವ ಸಹಕಾರ ಮತ್ತು ಕಳೆದ ದಶಕದಲ್ಲಿ ನಮ್ಮ ರಾಷ್ಟ್ರವು ನಿರ್ಮಿಸಿರುವ ಸಾಮರ್ಥ್ಯಗಳು ಭಾರತವು ಈ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಅನುವು ಮಾಡಿಕೊಟ್ಟಿವೆ ಎಂದರು.

ಇದು ಖಂಡಿತವಾಗಿಯೂ ಸವಾಲಿನ ಸಮಯಗಳು ಎಂದು ಅವರು ಹೇಳಿದರು. ಇಂದು, “ಮನ್ ಕಿ ಬಾತ್” ಮೂಲಕ, ಅವರು ಮತ್ತೊಮ್ಮೆ ಎಲ್ಲಾ ನಾಗರಿಕರನ್ನು ಒಗ್ಗೂಡಿ ಈ ಸವಾಲನ್ನು ಜಯಿಸುವಂತೆ ಒತ್ತಾಯಿಸುತ್ತಾರೆ. ಈ ವಿಷಯವನ್ನು ರಾಜಕೀಯಗೊಳಿಸಬಾರದು. ಇದು 140 ಕೋಟಿ ನಾಗರಿಕರ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಇರಾನ್ ಯುದ್ಧದ ನಡುವೆ ಸೌದಿ ಕ್ರೌನ್ ಪ್ರಿನ್ಸ್ ಜೊತೆ ಪ್ರಧಾನಿ ಮೋದಿ ಮಾತುಕತೆ

ದೇಶದ ಜನತೆಗೆ ಜಾಗರೂಕರಾಗಿರಿ ಮತ್ತು ವದಂತಿಗಳನ್ನು ಎಂದು ಮನವಿ ಮಾಡುತ್ತೇನೆ, ಸರ್ಕಾರವು ನಿಮಗೆ ನಿರಂತರವಾಗಿ ಒದಗಿಸುತ್ತಿರುವ ಮಾಹಿತಿಯನ್ನು ಮಾತ್ರ ನಂಬಿ ಮತ್ತು ಅದರ ಆಧಾರದ ಮೇಲೆ ಮುನ್ನುಗ್ಗಿ. ಪ್ರತಿ ಬಾರಿಯೂ ನಾವು 1.4 ಬಿಲಿಯನ್ ನಾಗರಿಕರ ಬಲದಿಂದ ಹಿಂದಿನ ಬಿಕ್ಕಟ್ಟುಗಳನ್ನು ಸೋಲಿಸಿದಂತೆ, ಈ ಬಾರಿಯೂ ನಾವೆಲ್ಲರೂ ಈ ಕಠಿಣ ಪರಿಸ್ಥಿತಿಯಿಂದ ಹೊರಬರುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದರು.

ಈ ದೇಶಗಳಲ್ಲಿ ಭಾರತದ ಲಕ್ಷಾಂತರ ಕುಟುಂಬಗಳ ಸಂಬಂಧಿಕರು ವಾಸಿಸುತ್ತಿದ್ದಾರೆ, ವಿಶೇಷವಾಗಿ ಗಲ್ಫ್ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ 1 ಕೋಟಿಗೂ ಹೆಚ್ಚು ಭಾರತೀಯರಿಗೆ ಎಲ್ಲಾ ರೀತಿಯ ಸಹಾಯವನ್ನು ಒದಗಿಸಿದ್ದಕ್ಕಾಗಿ ನಾನು ಗಲ್ಫ್ ರಾಷ್ಟ್ರಗಳಿಗೆ ತುಂಬಾ ಕೃತಜ್ಞನಾಗಿದ್ದೇನೆ.

ಯುದ್ಧ ನಡೆಯುತ್ತಿರುವ ಪ್ರದೇಶವು ನಮ್ಮ ಇಂಧನ ಅಗತ್ಯಗಳ ಪ್ರಮುಖ ಕೇಂದ್ರವಾಗಿದೆ. ಇದರಿಂದಾಗಿ, ವಿಶ್ವಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬಿಕ್ಕಟ್ಟು ಬೆಳೆಯುತ್ತಿದೆ ಎಂದು ಹೇಳಿದರು. ಇಡೀ ಜಗತ್ತು ಕೋವಿಡ್ ನಿಂದಾಗಿ ದೀರ್ಘಕಾಲದವರೆಗೆ ಹಲವಾರು ಸಮಸ್ಯೆಗಳನ್ನು ಎದುರಿಸಿದೆ ಎಂದು ನಮಗೆಲ್ಲರಿಗೂ ನೆನಪಿದೆ.

ಕೋವಿಡ್ ಬಿಕ್ಕಟ್ಟಿನಿಂದ ಹೊರಬಂದ ನಂತರ, ಜಗತ್ತು ಹೊಸ ಆರಂಭದೊಂದಿಗೆ ಪ್ರಗತಿಯ ಹಾದಿಯಲ್ಲಿ ಮುಂದುವರೆಯುತ್ತದೆ ಎಂದು ನಾವೆಲ್ಲರೂ ನಿರೀಕ್ಷಿಸಿದ್ದೆವು, ಆದರೆ ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಯುದ್ಧ ಉದ್ವಿಗ್ನತೆಯನ್ನು ಹೆಚ್ಚಿಸುತ್ತಲೇ ಇದೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಧುರಂಧರ್ 2’ ಎದುರು ತೆರೆಕಂಡರೂ ಸೂಪರ್ ಹಿಟ್ ಆದ ‘ಲವ್ ಮಾಕ್ಟೇಲ್ 3’

‘ಧುರಂಧರ್ 2’ ಸಿನಿಮಾದ ಹವಾ ಹೇಗಿದೆ ಎಂಬುದು ಗೊತ್ತೇ ಇದೆ. ಅಂತಹ ದೈತ್ಯ ಸಿನಿಮಾದ ಎದುರು ಚಿಕ್ಕ ಸಿನಿಮಾಗಳು ಪೈಪೋಟಿ ನೀಡುವುದು ಕಷ್ಟ. ಆದರೆ ಕನ್ನಡದ ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾ ಪೈಪೋಟಿ ನೀಡಿದೆ. ಕನ್ನಡದ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಬಿಡುಗಡೆ ಆದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡದವರು ಇತ್ತೀಚೆಗೆ ಸಕ್ಸಸ್ ಮೀಟ್ ಆಯೋಜಿಸಿದ್ದರು. ನಿರ್ದೇಶಕ-ನಟ ಡಾರ್ಲಿಂಗ್ ಕೃಷ್ಣ (Darling Krishna), ಮಿಲನಾ ನಾಗರಾಜ್ ಸೇರಿದಂತೆ ಇಡೀ ಚಿತ್ರತಂಡದವರು ಇದರಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಿಲನಾ ನಾಗರಾಜ್ ಮಾತನಾಡಿದರು. ‘ಪಾರ್ಟ್ 1 ಹಾಗೂ 2 ಗೆದ್ದಾಗ ಖುಷಿಯಾಗಿತ್ತು. ಆದರೆ ಮೂರನೇ ಆವೃತ್ತಿಯ ಗೆಲುವು ನನ್ನನ್ನು ಭಾವುಕಳನ್ನಾಗಿಸಿದೆ. ಇದಕ್ಕೆ ಪ್ರೇಕ್ಷಕರ ಕಡೆಯಿಂದ ಬರುತ್ತಿರುವ ಪ್ರತಿಕ್ರಿಯೆಗಳಿಂದ ಮನದುಂಬಿ ಬಂದಿದೆ’ ಎಂದು ಅವರು ಹೇಳಿದರು. ಡಾರ್ಲಿಂಗ್ ಕೃಷ್ಣ ಮಾತನಾಡಿ, ಕ್ರಿಸ್‌ಮೀ ಬ್ಯಾನರಿನಡಿಯಲ್ಲಿ ವರ್ಷಕ್ಕೊಂದು ಸಿನಿಮಾ ಮಾಡುವ ಯೋಜನೆಯಿದೆ ಎಂದು ಹೇಳಿದರು.

‘ನಾವು ತುಂಬಾ ಲೆಕ್ಕಾಚಾರವಿಟ್ಟುಕೊಂಡೇ ಮುಂದುವರಿಯುತ್ತೇವೆ. ಯಾವುದೇ ಮುಲಾಜಿಗೆ ಬಿದ್ದು ಯಾರನ್ನೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ನಮ್ಮ ತಂಡದಲ್ಲಿ ಇರುವವರೆಲ್ಲರೂ ಪಕ್ಕಾ ಪ್ರತಿಭಾವಂತರು ಆಗಿರುವುದರಿಂದಲೇ ಅವಕಾಶ ಪಡೆದುಕೊಂಡಿದ್ದಾರೆ. ಅವರ ಪ್ರತಿಭೆಯನ್ನು ನಾವು ಬಳಸಿಕೊಂಡಿದ್ದೇವೆ. ಆದ್ದರಿಂದ ಸಿನಿಮಾ ತಂಡದವರ್‍ಯಾರೂ ನಮಗೆ ಥ್ಯಾಂಕ್ಸ್ ಹೇಳುವ ಹಾಗಿಲ್ಲ’ ಎಂದು ಡಾರ್ಲಿಂಗ್ ಕೃಷ್ಣ ಹೇಳಿದರು.

‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ಈ ಸಿನಿಮಾವನ್ನು ವಿತರಣೆ ಮಾಡಿದೆ. ಆ ಬಗ್ಗೆ ಮಾತನಾಡಿದ ಸುಪ್ರೀತ್ ಅವರು, ‘ಇದು ಈ ವರ್ಷದ ಮೊದಲ ಹಿಟ್ ಸಿನಿಮಾ. ಬಿಡುಗಡೆಗೂ ಒಂದಷ್ಟು ದಿನಗಳ ಮುಂಚೆ ಡಾರ್ಲಿಂಗ್ ಕೃಷ್ಣ ಸಿನಿಮಾ ತೋರಿಸಿದ್ದರು. ಅದಾದ ಬಳಿಕ ಟಾಕ್ಸಿಕ್‌ನಿಂದ ತೆರವಾದ ಜಾಗಕ್ಕೆ ಲವ್ ಮಾಕ್ಟೇಲ್ ಆಗಮಿಸಿತ್ತು. ಪ್ರೇಕ್ಷಕರೆಲ್ಲ ಅತ್ಯುತ್ತಮ ಪ್ರತಿಕ್ರಿಯೆ ನೀಡುವ ಮೂಲಕ ಲವ್ ಮಾಕ್ಟೇಲ್ 3 ಗೆದ್ದಿದೆ. ಯುಎಸ್‌ಎ, ಆಸ್ಟ್ರೇಲಿಯಾ, ಜರ್ಮನಿ ಮುಂತಾದ ಕಡೆಗಳಲ್ಲಿಯೂ ಭರ್ಜರಿಯಾಗಿಯೇ ಬುಕ್ಕಿಂಗ್ ಓಪನ್ ಆಗಿದೆ’ ಎಂದರು.

ಇದನ್ನೂ ಓದಿ: Love Mocktail 3 Review: ನಗಿಸುತ್ತಾ ಅಳಿಸುವ ತಂದೆ-ಮಗಳ ಎಮೋಷನಲ್ ಕಹಾನಿ

ನಿರ್ದೇಶಕ ಶಶಾಂಕ್ ಅವರು ಈ ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ್ದರು. ‘ಈ ಕಾಲಮಾನದಲ್ಲಿ ಯಾವುದೇ ಸಿನಿಮಾದ ಸಕ್ಸಸ್ ಮೀಟ್ ಎಂಬ ವಿಚಾರವೇ ಹಿತವೆನಿಸುತ್ತದೆ. ಈ ವರ್ಷದ ಆರಂಭದಿಂದ ಒಂದು ರೀತಿಯ ನಿರಾಶದಾಯಕ ವಾತಾವರಣ ಕನ್ನಡ ಚಿತ್ರರಂಗವನ್ನು ಆವರಿಸಿಕೊಂಡಿತ್ತು. ಇಂಥ ಹೊತ್ತಿನಲ್ಲಿ ಲವ್ ಮಾಕ್ಟೇಲ್ ಗೆದ್ದಿರುವುದರಿಂದ ಚಿತ್ರರಂಗಕ್ಕೆ ಹೊಸ ಚೈತನ್ಯ ಬಂದಂತಾಗಿದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಗಲೊಂದೇ ಅಲ್ಲ, ರಾತ್ರಿ ವೇಳೆಯ ಉಷ್ಣತೆಯೂ ಹೆಚ್ಚಳ: ಆರೋಗ್ಯದ ಮೇಲೆ ಗಂಭೀರ ಪರಿಣಾಮದ ಭೀತಿ

ಬೆಂಗಳೂರು, ಮಾರ್ಚ್​​ 29: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣನ ಅಬ್ಬರದ ನಡುವೆಯೂ ಬಹುತೇಕ ಕಡೆ ತೀವ್ರ ಸೆಕೆಯ ವಾತಾವರಣ ಮುಂದುವರಿದಿದೆ. ವಿಪರೀತ ಉಷ್ಣತೆಯ ಪರಿಣಾಮ ಜನ ನಾನಾ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಈ ನಡುವೆ ವರದಿಯೊಂದು ಆಘಾತಕಾರಿ ಅಂಶಗಳನ್ನು ಬಿಚ್ಚುಟ್ಟಿದ್ದು, ಮೂರು ದಶಕಗಳ ಹಿಂದೆ ಇದ್ದುದಕ್ಕಿಂತ ಈಗ ಕನಿಷ್ಠ 9 ರಿಂದ 13 ಹೆಚ್ಚುವರಿ ಉಷ್ಣತೆ ಹೊಂದಿರುವ ರಾತ್ರಿಗಳನ್ನು ಕರ್ನಾಟಕ ಅನುಭವಿಸುತ್ತಿದೆ. ಇದರಿಂದ ಜನರ ಉತ್ಪಾದಕತೆ ಮೇಲೆ ಪರಿಣಾಮ ಉಂಟಾಗುತ್ತಿರುವುದಲ್ಲದೆ, ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ ಎಂದು ತಿಳಿಸಿದೆ.

ಕೌನ್ಸಿಲ್​​ ಆನ್​​ ಎನರ್ಜಿ, ಎನ್​​ವೈರ್ನ್​​ಮೆಂಟ್​​ ಆ್ಯಂಡ್​​ ವಾಟರ್​​ ಪ್ರಕಟಿಸಿರುವ ಹೌ ಎಕ್ಸ್ಟ್ರೀಮ್​​ ಹೀಟ್​​ ಇಸ್​​ ಇಂಪ್ಯಾಕ್ಟಿಂಗ್​​ ಇಂಡಿಯಾ: ಅಸೆಸಿಂಗ್​​ ಡಿಸ್ಟ್ರಿಕ್ಟ್​​ ಲೆವೆಲ್​​ ಹೀಟ್​​ ರಿಸ್ಕ್​​ ವರದಿಯ ಪ್ರಕಾರ ತೇವಾಂಶದ ಏರಿಕೆ ಸೇರಿದಂತೆ ಕನಿಷ್ಠ 35 ಕಾರಣಗಳು ರಾತ್ರಿ ವೇಳೆ ತಾಪಮಾನ ಹೆಚ್ಚಲು ಕಾರಣವಾಗಿವೆ. ಈ ವರದಿ ಪ್ರಕಾರ, ಕರ್ನಾಟಕದ ಶೇ.93ರಷ್ಟು ಜಿಲ್ಲೆಗಳು ಅತ್ಯಧಿಕ ಹಾಗೂ ಹೆಚ್ಚು ಉಷ್ಣ ಅಪಾಯ ವರ್ಗಗಳಲ್ಲಿ ಸೇರಿವೆ. ಕರಾವಳಿ ಜಿಲ್ಲೆಗಳು ಮತ್ತು ಮಲನಾಡಿನ ಮೂರು ಜಿಲ್ಲೆಗಳು ಅತ್ಯಧಿಕ ಅಪಾಯದ ವಿಭಾಗದಲ್ಲಿವೆ.

ಇದನ್ನೂ ಓದಿ: ಹಾಸನ ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಮಳೆ; 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

CEEW ಫೆಲೋ ವಿಶ್ವಾಸ್ ಚಿತಾಲೆ ಅವರ ಪ್ರಕಾರ, ದಟ್ಟ ಜನಸಂಖ್ಯೆಯ ಜಿಲ್ಲೆಗಳಲ್ಲಿ ಹೆಚ್ಚಿನ ಉಷ್ಣತೆ ಹೊಂದಿರುವ ರಾತ್ರಿಗಳ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಗಳೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿ-ಧಾರವಾಡಂತಹ ನಗರೀಕರಣಗೊಳ್ಳುತ್ತಿರುವ ನಗರಗಳಲ್ಲಿಯೂ ಇದೇ ಪ್ರವೃತ್ತಿ ಕಾಣಿಸಿದೆ. 1981ರಿಂದ 2022ರವರೆಗೆ ಭಾರತದಲ್ಲಿ ಉಷ್ಣತೆಯ ತೀವ್ರತೆ ನಿರಂತರವಾಗಿ ಏರಿಕೆಯಾಗಿದೆ. ಇದರ ಪರಿಣಾಮವಾಗಿ 2013, 2016, 2019, 2022 ಮತ್ತು 2024ರಲ್ಲಿ ಭಾರೀ ಹೀಟ್‌ವೇವ್‌ಗಳು ಸಂಭವಿಸಿವೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ವಿಜಯಪುರ, ಬೆಳಗಾವಿ, ಬೀದರ, ಕಲಬುರಗಿ, ಮೈಸೂರು, ಬಾಗಲಕೋಟೆ ಮತ್ತು ಶಿವಮೊಗ್ಗ ಜಿಲ್ಲೆಗಳು ಅತ್ಯಧಿಕ ಅಪಾಯದ ವರ್ಗದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಮಧ್ಯಮ ಅಪಾಯದ ವರ್ಗದಲ್ಲಿವೆ.

ಆರೋಗ್ಯದ ಮೇಲೆ ಪರಿಣಾಮ

ಕಳೆದ ದಶಕದಲ್ಲಿ ಬಹಳ ಉಷ್ಣಾಂಶ ಹೊಂದಿರುವ ರಾತ್ರಿಗಳ ಸಂಖ್ಯೆ, ಹೆಚ್ಚಿನ ಹೀಟ್​​ ಹೊಂದಿರುವ ದಿನಗಳಿಗಿಂತ ವೇಗವಾಗಿ ಏರಿವೆ. ಭಾರತದಲ್ಲಿನ ಸುಮಾರು ಶೇ. 70ರಷ್ಟು ಜಿಲ್ಲೆಗಳು ಪ್ರತೀ ಬೇಸಿಗೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಈ ರೀತಿಯ ರಾತ್ರಿಗಳನ್ನು ಅನುಭವಿಸಿವೆ. ಅಧಿಕ ಉಷ್ಣಾಣ ವಾತಾವರಣದ ರಾತ್ರಿಗಳು ದೇಹಕ್ಕೆ ದಿನದ ಉಷ್ಣದಿಂದ ತಂಪಾಗಲು ಅವಕಾಶ ನೀಡದೇ, ಹೀಟ್ ಎಕ್ಸಾಸ್ಷನ್, ಹೀಟ್ ಸ್ಟ್ರೋಕ್, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮೂತ್ರಪಿಂಡ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಚಿತಾಲೆ ಹೇಳಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಪರಪ್ಪನ ಅಗ್ರಹಾರದಲ್ಲಿ ಅಲೋಕ್ ಕುಮಾರ್ ಬಗ್ಗೆ ವಿಡಿಯೋ ಮಾಡಿದ್ದ ಕಿಡಿಗೇಡಿಗಳು!

ಬೆಂಗಳೂರು, ಮಾರ್ಚ್​ 29: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಪತ್ತೆ, ಡ್ರಗ್ಸ್ ಸಾಗಾಟ ಇವೆಲ್ಲ ಹೊಸದೇನಲ್ಲ. ಆದರೆ ಇತ್ತೀಚಿಗೆ ಡಿಜಿಪಿ ಅಲೋಕ್ ಕುಮಾರ್ (DGP Alok Kumar )ಅವರ ಕಟ್ಟುನಿಟ್ಟಾದ ಕ್ರಮದಿಂದ ಈ ಎಲ್ಲಾ ಅವ್ಯವಹಾರಗಳಿಗೆ ಬ್ರೇಕ್ ಬೀಳುವ ನಿರೀಕ್ಷೆಯಿತ್ತು. ಆದರೆ ಈಗ ಮತ್ತೊಮ್ಮೆ ಜೈಲಿನೊಳಗೇ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.

ಡ್ರೈನೇಜ್​ನಲ್ಲಿ ಮೊಬೈಲ್ ಫೋನ್​ಗಳು ಪತ್ತೆ

ವಿಡಿಯೋದಲ್ಲಿ ಜೈಲಿನಲ್ಲಿ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್‌ನಂತಹ ಸೌಲಭ್ಯಗಳು ಲಭ್ಯವಿವೆ ಎಂದು ಹೇಳಲಾಗಿದ್ದು, ಡಿಜಿಪಿ ಅಲೋಕ್ ಕುಮಾರ್ ಅವರೇ ಮೊಬೈಲ್ ನೀಡಿದ್ದಾರೆಂದೂ ಕೈದಿಗಳು ಹೇಳಿದ್ದಾರೆ. ಈ ವಿಡಿಯೋ ನಿಜವಾಗಿಯೂ ಜೈಲಿನೊಳಗೇ ಚಿತ್ರೀಕರಿಸಲ್ಪಟ್ಟಿದೆಯೇ ಅಥವಾ ಬೇರೆಡೆ ಸೆಟಪ್ ಮಾಡಿ ಚಿತ್ರಿಸಿಲಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಡಿಯೋ ವೈರಲ್ ಆದ ನಂತರ ಪೊಲೀಸರು ತಕ್ಷಣವೇ ಜೈಲಿನಲ್ಲಿ ಪರಿಶೀಲನೆ ನಡೆಸಿದರು. ಕೇಂದ್ರ ಕಾರಾಗೃಹದ 9ನೇ ಬ್ಯಾರಕ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಡ್ರೈನೇಜ್ ಮಾರ್ಗದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಹಾಲಿನ ಪ್ಯಾಕೆಟ್‌ಗಳಲ್ಲಿ ಸುತ್ತಿ ಅಡಗಿಸಿಡಲಾಗಿದ್ದ ಮೊಬೈಲ್​ಗಳನ್ನು ಅಧಿಕಾರಿಗಳು ಆರೋಪಿಗಳಿಂದಲೇ ಹೊರತೆಗೆಸಿದ್ದಾರೆ.

ಮೊಬೈಲ್ ದೊರಕಿದ ವೀಡಿಯೋ ಇಲ್ಲಿದೆ

ಉದ್ದೇಶಪೂರ್ವಕವಾಗಿ ಡಿಜಿಪಿ ಹೆಸರು ಹೇಳಿ ವೀಡಿಯೋ ಮಾಡಿರುವ ಕೈದಿಗಳು

ತನಿಖೆಯಲ್ಲಿ ವಿಡಿಯೋ ಮಾಡಿದ್ದ ಕೈದಿಗಳನ್ನು ಪತ್ತೆಹಚ್ಚಲಾಗಿದೆ. ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇವರು ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನದಿಂದ ಉದ್ದೇಶಪೂರ್ವಕವಾಗಿ ಡಿಜಿಪಿ ಅಲೋಕ್ ಕುಮಾರ್​ ಹೆಸರಿಗೆ ಚ್ಯುತಿ ತರಲು ವಿಡಿಯೋ ಮಾಡಿ ವೈರಲ್ ಮಾಡಿರುವ ಸಾಧ್ಯತೆ ವ್ಯಕ್ತವಾಗಿದೆ. ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಕ್ವಾರಂಟೈನ್ ಸೆಲ್‌ಗೆ ಸ್ಥಳಾಂತರಿಸಲಾಗಿದೆ.

ವೀಡಿಯೋ ಇಲ್ಲಿದೆ

ಇದನ್ನೂ ಓದಿ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಹಾಕಲು ಹೊಸ ಅಸ್ತ್ರ ಪ್ರಯೋಗಿಸಿದ ಡಿಜಿಪಿ ಅಲೋಕ್ ಕುಮಾರ್

ಸಿಬ್ಬಂದಿ ಅಮಾನತು

ಘಟನೆ ಬಳಿಕ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಆದೇಶದ ಮೇರೆಗೆ ವಾರ್ಡರ್‌ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಜೈಲರ್ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜೈಲಿನ ಕೆಲವು ಭಾಗಗಳಲ್ಲಿ ಏರ್‌ಟೆಲ್ ಸಿಗ್ನಲ್ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಕಟ್ಟು ನಿಟ್ಟಾಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link