All posts by nagaraj11081993

ಗಿಲ್ಲಿ ಮೇಲೆ ರಕ್ಷಿತಾಗೆ ನಿಜಕ್ಕೂ ಆಗಿದೆ ಪ್ರೀತಿ? ಈ ಘಟನೆಗಳೇ ಸಾಕ್ಷಿ – Kannada News | Rakshita Shetty’s Gilli Love in Bigg Boss Kannada: Is it True

ಗಿಲ್ಲಿ ರೀತಿಯ ಹುಡುಗ ಬೇಕು ಎಂದು ರಕ್ಷಿತಾ ಶೆಟ್ಟಿ ಆಗಾಗ ಹೇಳುತ್ತಾ ಇರುತ್ತಾರೆ. ಬಿಗ್ ಬಾಸ್ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಅವರಿಗೆ ಗಿಲ್ಲಿ ಮೇಲಿನ ಒಲವು ಹೆಚ್ಚಿದಂತೆ ಕಾಣಿಸುತ್ತಿದೆ. ಅವರು ಸದಾ ಗಿಲ್ಲಿ ಜೊತೆ ಇರುತ್ತಾರೆ. ಗಿಲ್ಲಿಗೆ ಪ್ರೀತಿ ವಿಷಯದಲ್ಲಿ ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ. ಇವುಗಳನ್ನು ನೋಡಿದರೆ ಗಿಲ್ಲಿ ಮೇಲೆ ರಕ್ಷಿತಾಗೆ ನಿಜಕ್ಕೂ ಲವ್ ಆಗಿದೆಯೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಗಿಲ್ಲಿ ನಟ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಈ ಕಾರಣದಿಂದಲೇ ಕಾವ್ಯಾ ಮೇಲೆ ರಕ್ಷಿತಾ ಕೋಪ ಹೊರಹಾಕುತ್ತಾರೆ ಎಂಬ ವಾದ ಇದೆ. ಇದನ್ನು ರಕ್ಷಿತಾ ಶೆಟ್ಟಿ ಒಪ್ಪಿಕೊಳ್ಳೋದಿಲ್ಲ. ಜನವರಿ 8ರ ಎಪಿಸೋಡ್​​ನಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮಧ್ಯೆ ಜಗಳ ಆಗಿದೆ. ಈ ವೇಳೆ ಕೆಲವು ಸಲಹೆಗಳನ್ನು ರಕ್ಷಿತಾ ಅವರು ನೀಡಿದ್ದಾರೆ.

‘ನೀವು ಯಾರ ಬಳಿಯೂ ಪ್ರೀತಿಸುವಂತೆ ಒತ್ತಾಯಿಸಬಾರದು. ಯಾರು ನಿಮ್ಮನ್ನು ಪ್ರೀತಿಸುತ್ತಾರೋ ಅವರಿಗೆ ಸಮಯ ಹಾಗೂ ಪ್ರೀತಿ ಕೊಡಬೇಕು’ ಎಂದು ಮಾತನಾಡಿದರು. ಅಲ್ಲಿಯೇ ಇದ್ದ ರಘು ಅವರಿಗೆ ಈ ಮಾತು ಅರ್ಥವಾಗಿ ಹೋಯಿತು. ಕಾವ್ಯಾ ಬಳಿ ಮಾತನಾಡುವಂತೆ, ಗಮನ ಕೊಡುವಂತೆ ಒತ್ತಾಯಿಸುವ ಬದಲು ಪ್ರೀತಿ ತೋರಿಸುವ ತಮ್ಮ ಬಗ್ಗೆ ಗಮನ ಹರಿಸು ಎಂಬುದು ರಕ್ಷಿತಾ ಮಾತಿನ ಅರ್ಥವಾಗಿತ್ತು.

ಇದನ್ನೂ ಓದಿ: ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ

ಇನ್ನು, ಗಿಲ್ಲಿ ಹಾಗೂ ರಕ್ಷಿತಾ ಗಾರ್ಡನ್ ಏರಿಯಾದಲ್ಲಿ ಮಾತನಾಡುತ್ತಿದ್ದರು. ಅಲ್ಲಿಯೇ ಬೀನ್ ಬ್ಯಾಗ್ ಇತ್ತು. ಈ ಬ್ಯಾಗ್​​ನ ಅವಳು ತೆಗೆದುಕೊಂಡು ಹೋಗಿ ದೂರದಲ್ಲಿ ಇಟ್ಟಿದ್ದಾರೆ. ಇಬ್ಬರೇ ಮಾತನಾಡಬೇಕು ಎಂಬುದು ರಕ್ಷಿತಾ ಉದ್ದೇಶ. ಸದಾ ಗಿಲ್ಲಿ ಜೊತೆಯೇ ಇರೋ ಅವರು ಆಗಾಗ ಗಿಲ್ಲಿಯ ಕೆನ್ನೆ ಹಿಂಡುವ ಕೆಲಸ ಮಾಡುತ್ತಾರೆ. ‘ಗಿಲ್ಲಿ ರೀತಿಯ ಹುಡುಗ ಬೇಕು’ ಎಂದು ಹಲವು ಬಾರಿ ಹೇಳುತ್ತಾರೆ. ಕಳೆದ ವೀಕೆಂಡ್​​ನಲ್ಲೂ ಇದೇ ವಿಷಯ ಚರ್ಚೆ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:06 pm, Fri, 9 January 26

Source link

Indian Army Recruitment 2026: ಭಾರತೀಯ ಸೇನೆಯಲ್ಲಿ 350 ಇಂಜಿನಿಯರಿಂಗ್ ಪದವೀಧರರ ನೇಮಕಾತಿ; ತಿಂಗಳಿಗೆ 1,77,500 ರೂ. ಸಂಬಳ – Kannada News | Indian Army SSC Tech 67 Recruitment 2026: 350 Engineering Graduate Posts

ಭಾರತೀಯ ಸೇನೆಯು ಇತ್ತೀಚೆಗೆ 67ನೇ ಶಾರ್ಟ್ ಸರ್ವಿಸ್ ಕಮಿಷನ್ (Tech) ಕೋರ್ಸ್‌ಗೆ ಪ್ರವೇಶಕ್ಕಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಕೋರ್ಸ್‌ಗೆ ಪ್ರವೇಶಕ್ಕಾಗಿ ಎಂಜಿನಿಯರಿಂಗ್ ಪದವೀಧರ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 350 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಪುರುಷ ಅಭ್ಯರ್ಥಿಗಳು ಮಾತ್ರ SSC ಟೆಕ್ 67 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಹೊಂದಿರುತ್ತಾರೆ. ಆಯ್ಕೆಯಾದವರಿಗೆ ಅಕ್ಟೋಬರ್ 2026 ರಿಂದ ಪ್ರಿ-ಕಮಿಷನಿಂಗ್ ಟ್ರೈನಿಂಗ್ ಅಕಾಡೆಮಿ (PCTA) ನಲ್ಲಿ ಕೋರ್ಸ್ ಪ್ರಾರಂಭವಾಗುತ್ತದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್​ಗೆ ಭೇಟಿ ನೀಡುವ ಮೂಲಕ ಫೆಬ್ರವರಿ 5ರ ವರೆಗೆ ಅರ್ಜಿ ಸಲ್ಲಿಸಬಹುದು.

ಶಾರ್ಟ್ ಸರ್ವಿಸ್ ಕಮಿಷನ್ (Tech) 67 ಕೋರ್ಸ್ ಇದನ್ನು ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಮೆಕ್ಯಾನಿಕಲ್, MISC ನಂತಹ ವಿವಿಧ ಎಂಜಿನಿಯರಿಂಗ್ ವಿಭಾಗಗಳಲ್ಲಿ ನೀಡಲಾಗುತ್ತದೆ. ಇದು ಒಂದು ವರ್ಷದ ಅವಧಿಯದ್ದಾಗಿರುತ್ತದೆ. ಕೋರ್ಸ್ ಪೂರ್ಣಗೊಳಿಸಿದ ನಂತರ, ನಿಮ್ಮನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಶಾಖೆಯಲ್ಲಿ ಬಿಇ, ಬಿಟೆಕ್ ಉತ್ತೀರ್ಣರಾಗಿರಬೇಕು. ಅಕ್ಟೋಬರ್ 1, 2026 ರ ಮೊದಲು ಪದವಿ ಪೂರ್ಣಗೊಳಿಸುವ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಅಲ್ಲದೆ, ಅಭ್ಯರ್ಥಿಗಳ ದೈಹಿಕ ಮಾನದಂಡಗಳ ಅಧಿಸೂಚನೆಯಲ್ಲಿ ಸೂಚಿಸಿದಂತೆ, ಅವರು 10.30 ನಿಮಿಷಗಳಲ್ಲಿ 2.4 ಕಿ.ಮೀ ಓಟವನ್ನು ಪೂರ್ಣಗೊಳಿಸಬೇಕು. ಅಲ್ಲದೆ, ಅವರು 40 ಪುಷ್-ಅಪ್‌ಗಳು, 6 ಪುಲ್-ಅಪ್‌ಗಳು ಮತ್ತು 30 ಸಿಟ್-ಅಪ್‌ಗಳನ್ನು ಮಾಡಬೇಕು. ಅವರು ಈಜುವುದರಲ್ಲಿ ಕನಿಷ್ಠ ಪ್ರಾವೀಣ್ಯತೆಯನ್ನು ಹೊಂದಿರಬೇಕು.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಅಭ್ಯರ್ಥಿಗಳ ವಯಸ್ಸಿನ ಮಿತಿ 20 ರಿಂದ 27 ವರ್ಷಗಳ ನಡುವೆ ಇರಬೇಕು. ಅಂದರೆ, ಅಕ್ಟೋಬರ್ 1, 1999 ರಿಂದ ಸೆಪ್ಟೆಂಬರ್ 30, 2006 ರ ನಡುವೆ ಜನಿಸಿದವರು ಮಾತ್ರ ಅರ್ಹರು. ಈ ಅರ್ಹತೆಗಳನ್ನು ಹೊಂದಿರುವ ಯಾರಾದರೂ ಇಂದಿನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಯು ಫೆಬ್ರವರಿ 5 ರವರೆಗೆ ಅರ್ಹವಾಗಿರುತ್ತದೆ. ಸ್ವೀಕರಿಸಿದ ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ ಮತ್ತು ಪದವಿ ಅಂಕಗಳು ಮತ್ತು ಎಸ್‌ಎಸ್‌ಬಿ ಸಂದರ್ಶನದ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಅಂದರೆ, ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ದೈಹಿಕ ಗುಣಮಟ್ಟ ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ. ತರಬೇತಿಯ ಸಮಯದಲ್ಲಿ ತಿಂಗಳಿಗೆ ರೂ. 56,100 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ಅದರ ನಂತರ, ಕರ್ತವ್ಯಕ್ಕೆ ಸೇರುವವರಿಗೆ ತಿಂಗಳಿಗೆ ರೂ. 1,77,500 ವರೆಗೆ ವೇತನ ನೀಡಲಾಗುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಲೇಜು ಆಡಳಿತ ಮಂಡಳಿಯಿಂದ ಕಿರುಕುಳ ಆರೋಪ: ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ – Kannada News | Harassment Allegations Against Management: Dental Student Loses Her Life in Anekal

ಆನೇಕಲ್​​, ಜನವರಿ 09: ಡೆಂಟಲ್ ಕಾಲೇಜು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ. ಯಶಸ್ವಿನಿ (23) ಮೃತ ವಿದ್ಯಾರ್ಥಿನಿಯಾಗಿದ್ದು, ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ನೊಂದ ಈಕೆ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಆರೋಪ ಕೇಳಿಬಂದಿದೆ. ಮೃತ ವಿದ್ಯಾರ್ಥಿನಿಯ ಸ್ನೇಹಿತರು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದ್ದು, ಯಶಸ್ವಿನಿ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

ಪರಿಮಳ-ಭೋದೆವಯ್ಯ ದಂಪತಿಯ ಒಬ್ಬಳೇ ಮಗಳು ಯಶಸ್ವಿನಿ ಬೊಮ್ಮನಹಳ್ಳಿಯ ಪ್ರತಿಷ್ಠಿತ ಖಾಸಗಿ ಡೆಂಟಲ್​​ ಕಾಲೇಜಿನಲ್ಲಿ Oral Medicine and Radiology ವಿಭಾಗದಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಸೆಮಿನಾರ್​​ಗೆ ಅವಕಾಶ ನೀಡದ ಜೊತೆಗೆ ರೇಡಿಯಾಲಜಿ ಕೇಸ್​ ಕೂಡ ನೀಡದೆ ಕಾಲೇಜಿನಲ್ಲಿ ಈಕೆಗೆ ಕಿರುಕುಳ ನೀಡಲಾಗಿದೆ. ಇದರ ನಡುವೆ ಬುಧವಾರ ಕಣ್ಣು ನೋವಿನ ಕಾರಣಕ್ಕೆ ಕಾಲೇಜಿಗೆ ಯಶಸ್ವಿನಿ ಹೋಗಿರಲಿಲ್ಲ. ಮಾರನೇ ದಿನ ಕಾಲೇಜಿಗೆ ಬಂದಾಗ ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿಕೊಂಡೆ? ಪೂರ್ತಿ ಬಾಟಲ್​ ಹಾಕಿಕೊಂಡ್ಯಾ? ಎಂದೆಲ್ಲ ಕೇಳಿ ಪ್ರಾಧ್ಯಾಪಕರು ಅವಮಾನ ಮಾಡಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಈಕೆ ಪ್ರಾಣಕಳೆದುಕೊಳ್ಳುವ ನಿರ್ಧಾರ ಮಾಡಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ; ಬೈಕ್​​ ಸವಾರಿಗೆ ಬಿತ್ತು ಗೂಸಾ

ಇರುವ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಟಾರ್ಚರ್ ನೀಡಿದ ಪ್ರಾಂಶುಪಾಲ ಮತ್ತು ಅವಮಾನಿಸಿದ ಪ್ರಾಧ್ಯಾಪಕರ ವಿರುದ್ಧ ಕ್ರಮಕ್ಕೆ ಯಶಸ್ವಿನಿ ತಾಯಿ ಆಗ್ರಹಿಸಿದ್ದಾರೆ. ಮಗಳನ್ನು ಅವಮಾನಿಸಿ ಅವಳ ಸಾವಿಗೆ ಕಾರಣರಾದವರಿಗೆ ಮಕ್ಕಳು ಇಲ್ವಾ? ಕಣ್ಣು ನೋವಿದೆ ಎಂದು ನನಗೆ ತಿಳಿಸಿಯೇ ಆಕೆ ಕಾಲೇಜಿಗೆ ರಜೆ ಮಾಡಿದ್ದಳು. ಹಗಲು ರಾತ್ರಿ ಓದಿ ಭವಿಷ್ಯದ ಕನಸು ಕಂಡಿದ್ದ ಮಗಳು ಇಂದು ನನ್ನ ಜೊತೆಗಿಲ್ಲ ಎಂದು ಪರಿಮಳಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ರೀತಿ ಅನ್ಯಾಯ ಯಾರಿಗೂ ಆಗಬಾರದು ಎಂಬ ಆಗ್ರಹ ಸಂಬಂಧಿಕರಿಂದಲೂ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಗದ ವ್ಹೀಲ್​ಚೇರ್, ಕೆಲಸದ ಒತ್ತಡ, ನ್ಯಾಯಾಲಯದಿಂದ ಹಾರಿ ಪ್ರಾಣ ಬಿಟ್ಟ ದಿವ್ಯಾಂಗ ಕ್ಲರ್ಕ್​ – Kannada News | Disabled Clerk Suicide: Saket Court Work Pressure, Wheelchair Plea Ignored

ನವದೆಹಲಿ, ಜನವರಿ 09: ಕೆಲಸದ ಒತ್ತಡದಿಂದ ಬೇಸತ್ತು ದಿವ್ಯಾಂಗ ಗುಮಾಸ್ತರೊಬ್ಬರು ದೆಹಲಿಯ ಸಾಕೇತ್ ನ್ಯಾಯಾಲಯದ ಕಟ್ಟಡದಿಂದ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಉದ್ಯೋಗಿಯನ್ನು ನ್ಯಾಯಾಲಯದ ಆವರಣದಲ್ಲಿ ಗುಮಾಸ್ತರಾಗಿದ್ದ ಹರೀಶ್ ಸಿಂಗ್ ಮಹಾರ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆ ಪತ್ರವೂ ಪತ್ತೆಯಾಗಿದ್ದು, ಅದರಲ್ಲಿ ಅವರು ಈ ಕಠಿಣ ಕ್ರಮ ತೆಗೆದುಕೊಳ್ಳಲು ಕಾರಣಗಳನ್ನು ವಿವರಿಸಿದ್ದಾರೆ. ಹರೀಶ್ ಶೇ.60ರಷ್ಟು ಅಂಗವಿಕಲರಾಗಿದ್ದರು.

ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಆತ್ಮಹತ್ಯೆಗೆ ಪತ್ರ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ನ್ಯಾಯಾಲಯದ ದಾಖಲೆಗಳನ್ನು ನಿರ್ವಹಿಸುವ ಮತ್ತು ನ್ಯಾಯಾಧೀಶರಿಗೆ ಸಹಾಯ ಮಾಡುವ ಜವಾಬ್ದಾರಿಯುತ ಹರೀಶ್ ಸಿಂಗ್​ರದ್ದು, ಕೆಲಸದ ಸಮಯದಲ್ಲಿ ಸಾಕೇತ್ ನ್ಯಾಯಾಲಯದ ಕಟ್ಟಡದ ಅತಿ ಎತ್ತರದ ಮಹಡಿಗೆ ಹತ್ತಿ ಅಲ್ಲಿಂದ ಹಾರಿ ಪ್ರಾಣಬಿಟ್ಟಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಓಡಿ ಬಂದಿದ್ದರಿಂದ ನ್ಯಾಯಾಲಯದ ಕಲಾಪಗಳು ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿದ್ದವು.

ಸಿಂಗ್ ಅವರಿಂದ ವಶಪಡಿಸಿಕೊಂಡ ಆತ್ಮಹತ್ಯೆ ಪತ್ರದಲ್ಲಿ, ಅವರ ನಿರ್ಧಾರಕ್ಕೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆತ್ಮಹತ್ಯೆ ಪತ್ರದಲ್ಲಿ ಯಾರ ಹೆಸರನ್ನು ಅವರು ಹೇಳದೇ ಇದ್ದರು, ಇತರೆ ಸಿಬ್ಬಂದಿ ಇವರು ಕೆಲಸದ ಒತ್ತಡದಿಂದಾಗಿಯೇ ಪ್ರಾಣ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.

ಮತ್ತಷ್ಟು ಓದಿ: ದೆಹಲಿಯ ಪಂಚತಾರಾ ಹೋಟೆಲ್​ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

ಹೆಚ್ಚುವರಿಯಾಗಿ, ದೆಹಲಿ ಪೊಲೀಸ್ ತಂಡವು ಅವರ ಸಹೋದ್ಯೋಗಿಗಳನ್ನು ಪ್ರಶ್ನಿಸುವುದು ಸೇರಿದಂತೆ ಸಂಪೂರ್ಣ ತನಿಖೆ ನಡೆಸುತ್ತಿದೆ. ಜತೆಗೆ ಆತ್ಮಹತ್ಯಾ ಪತ್ರದಲ್ಲಿ ವ್ಹೀಲ್​ ಚೇರ್ ನೀಡುವಂತೆ ಮನವಿ ಮಾಡಿದ್ದಾರೆ, ವ್ಹೀಲ್​ ಚೇರ್ ನೀಡಿದರೆ ಮುಂದೆ ಬರುವ ದಿವ್ಯಾಂಗ ಗುಮಾಸ್ತರಿಗೆ ಅನುಕೂಲವಾಗುತ್ತದೆ ಎಂದು ಬರೆದಿದ್ದಾರೆ.

ನ್ಯಾಯಾಲಯದ ಗುಮಾಸ್ತನಾದಾಗಿನಿಂದಲೂ ತನಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು, ಆದರೆ ಅದರ ಬಗ್ಗೆ ಯಾರಿಗೂ ಹೇಳಿರಲಿಲ್ಲ ಎಂದು ಅವರು ವಿವರಿಸಿದ್ದಾರೆ. ಅದನ್ನು ನಿವಾರಿಸಲು ಅವರು ಪ್ರಯತ್ನಿಸಿದ್ದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅವರು ಕೆಲಸದ ಒತ್ತಡದಲ್ಲಿದ್ದರು, ಅದನ್ನು ನಿಭಾಯಿಸಲು ಸಾಧ್ಯವಿಲ್ಲ ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ! – Kannada News | Biligirirangana Betta Fire: Shops Burnt, Lakhs Loss, Cylinders Explode

ಚಾಮರಾಜನಗರ, ಜನವರಿ 09: ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣದ ಬಳಿ ಸಂಭವಿಸಿದ ಅಗ್ನಿ ಅವಘಡದಲ್ಲಿ 8ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿವೆ. ಮೂರಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಅಥವಾ ಕಿಡಿಗೇಡಿಗಳ ಕೃತ್ಯವಾಗಿದ್ದಿರಬಹುದೆಂದು ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರ ಸ್ಫೋಟಕ ಹೇಳಿಕೆ – Kannada News | K.N. Rajanna says he is an aspirant for the KPCC president post

ಬೆಂಗಳೂರು, ಜನವರಿ 09: ಪಕ್ಷದ ಅಧ್ಯಕ್ಷ ಗಿರಿ ಕೊಟ್ರೆ ಮಂತ್ರಿ ಸ್ಥಾನ ಬಿಡ್ತೀನಿ ಎಂದು ಸಚಿವನಾಗಿದ್ದಾಗಲೇ ಹೇಳಿದ್ದೆ. ಈಗ ಬಿಡೋಕೆ ಯಾವುದೇ ಸ್ಥಾನ ಬಾಕಿ ಇಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾದ್ರೆ ಪಕ್ಷ ಸಂಘಟನೆ ಮಾಡ್ತೀನಿ. ಹೈಕಮಾಂಡ್​​ಗೆ ಈ ಬಗ್ಗೆ ವಿಷಯ ತಿಳಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಎನ್​. ರಾಜಣ್ಣ ಹೇಳಿದ್ದಾರೆ. ಸಂಪುಟ ಪುನಾರಚನೆ ಆದ್ರೆ ಮತ್ತೆ ಸಚಿವರು ಆಗ್ತೀರಾ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು, ಸಚಿವನಾದರೂ ಹೀಗೆ ಇರ್ತೇನೆ. ಇಲ್ಲ ಅಂದ್ರೂ ಹೀಗೆ ಇದ್ದೇನೆ. ನಾನು ಯಾವತ್ತೂ ಅಧಿಕಾರ ಹುಡುಕಿಕೊಂಡು ಹೋದವನಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Shukra Dosha Remedies: ಜಾತಕದಲ್ಲಿ ಶುಕ್ರ ದೋಷವಿದ್ದರೆ ಶುಕ್ರವಾರದಂದು ತಪ್ಪದೇ ಈ ಕೆಲಸ ಮಾಡಿ – Kannada News | Shukra Dosha Remedies: Strengthen Weak Venus on Fridays with Vastu Tips

ಜಾತಕದಲ್ಲಿ ಶುಕ್ರ ದೋಷ ಅಥವಾ ಶುಕ್ರ ದುರ್ಬಲ ಸ್ಥಾನದಲ್ಲಿ ಇರುವವರಿಗೆ ಶುಕ್ರವಾರದಂದು ವಾಸ್ತು ಶಾಸ್ತ್ರವು ಕೆಲವು ವಿಶೇಷ ಪರಿಹಾರಗಳನ್ನು ಸೂಚಿಸಿದೆ. ಈ ಪರಿಹಾರಗಳನ್ನು ಅನುಸರಿಸಿದರೆ, ಜಾತಕದಲ್ಲಿ ಶುಕ್ರ ದೋಷದ ಪರಿಣಾಮಗಳು ನಿವಾರಣೆಯಾಗುತ್ತವೆ ಮತ್ತು ದುರ್ಬಲ ಶುಕ್ರನು ಬಲಶಾಲಿಯಾಗುತ್ತಾನೆ. ಇದರೊಂದಿಗೆ, ಶುಕ್ರನು ಅಶುಭ ಫಲಿತಾಂಶಗಳನ್ನು ನೀಡುವ ಬದಲು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾನೆ ಎಂದು ನಂವಲಾಗಿದೆ.

ಜಾತಕದಲ್ಲಿ ಶುಕ್ರ ದೋಷದ ಲಕ್ಷಣ:

ಜಾತಕದಲ್ಲಿ ಶುಕ್ರ ದೋಷ ಅಥವಾ ಶುಕ್ರ ದುರ್ಬಲ ಸ್ಥಾನದಲ್ಲಿರುವ ಜನರು ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. ಅಂತಹ ಜನರು ಮದ್ಯ, ಜೂಜು, ಮಾದಕ ದ್ರವ್ಯಗಳು ಮತ್ತು ಕೆಟ್ಟ ಸಹವಾಸದತ್ತ ಒಲವು ತೋರುತ್ತಾರೆ. ಮದುವೆ ವಿಳಂಬವಾಗುತ್ತವೆ. ಸಂಬಂಧಗಳು ಹಾಳಾಗುತ್ತವೆ. ಚರ್ಮ ಮತ್ತು ಕಣ್ಣಿನ ಸಮಸ್ಯೆಗಳು ಉದ್ಭವಿಸುತ್ತವೆ. ಜೀವನದಲ್ಲಿ ಭೌತಿಕ ಸೌಕರ್ಯಗಳು ಕೊರತೆಯಿರುತ್ತವೆ. ಪ್ರೇಮ ಸಂಬಂಧಗಳು ಯಶಸ್ವಿಯಾಗುವುದಿಲ್ಲ. ಧೂಮಪಾನ ಮತ್ತು ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳಿಗೆ ವ್ಯಸನಿಯಾಗಬಹುದು.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಶುಕ್ರವಾರ ಈ ಪರಿಹಾರಗಳನ್ನು ಮಾಡಿ:

ಶುಕ್ರನ ದುಷ್ಟ ಪ್ರಭಾವಗಳನ್ನು ತೆಗೆದುಹಾಕಲು ಮತ್ತು ನಿಮ್ಮ ಜಾತಕದಲ್ಲಿ ಶುಕ್ರನನ್ನು ಬಲಪಡಿಸಲು, ಶುಕ್ರವಾರದಂದು ಬಿಳಿ ವಸ್ತುಗಳನ್ನು ದಾನ ಮಾಡಿ. 11 ಶುಕ್ರವಾರಗಳಂದು ವೈಭವ ಲಕ್ಷ್ಮಿ ಉಪವಾಸವನ್ನು ಆಚರಿಸಿ. ಇದು ಶುಕ್ರನನ್ನು ಮೆಚ್ಚಿಸುತ್ತದೆ. ಶುಕ್ರವಾರದಂದು ಬಡವರಿಗೆ ಆಹಾರ ನೀಡಿ. ಹಸುಗಳಿಗೆ ತುಪ್ಪ ಹಚ್ಚಿ ಬೆಲ್ಲವನ್ನು ತಿನ್ನಿಸಿ. ಇದು ನಿಮ್ಮ ಜಾತಕದಲ್ಲಿ ಶುಕ್ರನನ್ನು ಬಲಪಡಿಸುತ್ತದೆ. ದುರ್ಬಲ ಶುಕ್ರ ಇರುವವರು ನಿಯಮಿತವಾಗಿ ‘ಓಂ ಶುಕ್ರಯಣ ನಮಃ’ ಎಂಬ ಮಂತ್ರವನ್ನು ಜಪಿಸಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಶಾಲೆಯ ಜಾಗ ಕಬಳಿಸಿ ನಿರ್ಮಾಣವಾಗ್ತಿದೆ ಮಸೀದಿ! ಮುಳಬಾಗಿಲು ಗುಂಡ್ಲಹಳ್ಳಿ ಗ್ರಾಮದಲ್ಲಿ ಭಾರಿ ವಿವಾದ – Kannada News | Alleged Encroachment of Government School Land for Mosque Construction Sparks Major Controversy in Mulbagal, Kolar

ಸರ್ಕಾರಿ ಶಾಲೆಯ ಜಾಗ ಕಬಳಿಸಿ ನಿರ್ಮಾಣವಾಗ್ತಿದೆ ಮಸೀದಿ!

ಕೋಲಾರ, ಜನವರಿ 9: ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಿ.ಗುಂಡ್ಲಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಜಾಗವನ್ನು ಒತ್ತುವರಿ ಮಾಡಿ ಮಸೀದಿ (Mosque) ನಿರ್ಮಾಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ವಿಷಯ ಗ್ರಾಮದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಸ್ಥಳೀಯರು ಹಾಗೂ ಗ್ರಾಮಸ್ಥರು ಮಸೀದಿ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಜಾಗದಲ್ಲಿ ಹಾಗೂ ಶಾಲಾ ಆವರಣದ ಸಮೀಪದಲ್ಲಿರುವ ದೇವಸ್ಥಾನದ ಬಳಿಯೇ ಮಸೀದಿ ನಿರ್ಮಾಣ ಕಾಮಗಾರಿ ಆರಂಭಗೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದು ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದ್ದು, ಆದರೆ ಆ ಜಾಗವು ಸರ್ಕಾರಿ ಶಾಲೆಗೆ ಸೇರಿದ್ದು ಎನ್ನುವ ಆರೋಪವನ್ನು ಗ್ರಾಮಸ್ಥರು ಮುಂದಿಟ್ಟಿದ್ದಾರೆ.

ಈ ಸಂಬಂಧ ಗ್ರಾಮಸ್ಥರು ಹಾಗೂ ಸ್ಥಳೀಯರು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು ಸಹ ಮುಳಬಾಗಿಲು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಮೀನು ದಾಖಲೆ ಪತ್ರಗಳ ಪ್ರತಿಯ ಸಹಿತ ದೂರು ನೀಡಿದ್ದಾರೆ. ಅದರಲ್ಲಿ, ಶಾಲಾ ಜಾಗ ಒತ್ತುವರಿ ಮಾಡಿಕೊಂಡು ಮಸೀದಿ ನಿರ್ಮಾಣ ಮಾಡುತ್ತಿರುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಶಾಲಾ ಮಕ್ಕಳ ಭವಿಷ್ಯ ಹಾಗೂ ಸರ್ಕಾರಿ ಆಸ್ತಿಯ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಸಿ.ಗುಂಡ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ

ವಿವಾದ ತೀವ್ರಗೊಂಡ ಹಿನ್ನೆಲೆ, ಮಸೀದಿ ನಿರ್ಮಾಣ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದ್ದು, ಕಾಮಗಾರಿ ಸ್ಥಗಿತಗೊಳಿಸುವಂತೆ ಪೊಲೀಸರಿಂದಲೂ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾಗದ ನೈಜ ಸ್ಥಿತಿಯನ್ನು ಸ್ಪಷ್ಟಪಡಿಸಲು ಸರ್ವೆ ಕಾರ್ಯ ನಡೆಸಲಾಗುವುದು. ಅದರ ವರದಿ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಗಿಲು ಬೆನ್ನಲ್ಲೇ ನಾಗವಾರ ಬಳಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: 30ಕ್ಕೂ ಹೆಚ್ಚು ಮನೆ, ಶೆಡ್, ಗ್ಯಾರೇಜ್ ಧ್ವಂಸ

ಶಾಲಾ ಜಾಗ ಒತ್ತುವರಿ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ವಿಚಾರ ಇದೀಗ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರು ಜನರಿಗೆ ಗುಡ್​​ನ್ಯೂಸ್​: ಮೆಟ್ರೋ ಮಾರ್ಗದ ಕಾಮಗಾರಿ ಆರಂಭ, ಯಾವೆಲ್ಲ ಮಾರ್ಗದಲ್ಲಿ ಸಂಚಾರಿಸಲಿದೆ? – Kannada News | Namma Metro Phase 4: Bengaluru Tumakuru DPR Finalized

ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಗೆ ಅಧಿಕೃತವಾಗಿ ಘೋಷಣೆ

ಬೆಂಗಳೂರು, ಜ.9: ಬಹುಕಾಲ ಬೇಡಿಕೆಯಾಗಿದ್ದ ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯು ಅಧಿಕೃತವಾಗಿ ಘೋಷಣೆ ಆಗಿ, ಇದೀಗ ಅಡಿಪಾಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮಹತ್ವಾಕಾಂಕ್ಷೆಯ ಅಂತರ್​ ಜಿಲ್ಲಾ ಕಾರಿಡಾರ್‌ ಬಗ್ಗೆ ಯೋಜನಾ ವರದಿ (ಡಿಪಿಆರ್) ತಯಾರಿಕೆ ಮಾಡಲಾಗಿದೆ. ನಿರ್ಮಾಣ ಕಾರ್ಯಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದರ ವೆಚ್ಚ ಹಾಗೂ ವಿಸ್ತರಣೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಯೋಜನೆ ಬಂದರೆ ಬೆಂಗಳೂರು ಹಾಗೂ ತುಮಕೂರು ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.

ಈ ಯೋಜನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, ಆರ್ವೀ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್‌ಗೆ ಡಿಪಿಆರ್ ಸಲಹಾ ಕಾರ್ಯವನ್ನು ನೀಡಿದೆ. ಸಂಸ್ಥೆಯು 1.2 ಕೋಟಿ ರೂ. ವೆಚ್ಚದ 59.60 ಕಿಮೀ ಉದ್ದದ ಮೆಟ್ರೋ ಮಾರ್ಗಕ್ಕಾಗಿ ಡಿಪಿಆರ್ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರ ಟೆಂಡರ್‌ಗಳನ್ನು ನವೆಂಬರ್ 2025 ರಲ್ಲಿ ಕರೆಯಲಾಯಿತು. ಇನ್ನು ಈ ಕಾರಿಡಾರ್​​ಗಾಗಿ ಅಧಿಕಾರಿಗಳು ಹಾಗೂ ತಜ್ಞರು ಕ್ಷೇತ್ರಮಟ್ಟದ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ. ಹಾಗೂ ನಮ್ಮ ಮೆಟ್ರೋದ 4ನೇ ಹಂತದ ವಿಸ್ತರಣೆಯ ಭಾಗವಾಗಿರುವ ಈ ಯೋಜನೆಯು 20,649 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ದಿ ಹಿಂದೂಗೆ ತಿಳಿಸಿದ್ದಾರೆ.

ಈಗ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದೆ. ಇದರಲ್ಲಿ ಸಂಚಾರ ಮತ್ತು ಪ್ರಯಾಣದ ಮಾದರಿಗಳ ಕುರಿತು ದತ್ತಾಂಶ ಸಂಗ್ರಹಣೆ, ಪ್ರಾಥಮಿಕ ಜೋಡಣೆ ಪರಿಶೀಲನೆಗಳು, ವಿವಿಧ ಮೌಲ್ಯಮಾಪನಗಳು ಮತ್ತು ಆರಂಭಿಕ ಭೂತಾಂತ್ರಿಕ ತನಿಖೆಗಳನ್ನು ಒಳಗೊಂಡಿದೆ. ಜತೆಗೆ ಮುಂದಿನ ದಿನಗಳಲ್ಲಿ ಇದರ ವಿಸ್ತರಣೆ ಬಗ್ಗೆಯೂ ಚರ್ಚೆಗಳು ಆಗಿದೆ ಎಂದು ಹೇಳಿದ್ದಾರೆ. ಬೆಂಗಳೂರು-ತುಮಕೂರು ಮೆಟ್ರೋವನ್ನು ನಮ್ಮ ಮೆಟ್ರೋದ 4 ನೇ ಹಂತದ ವಿಸ್ತರಣೆಯ ಭಾಗವಾಗಿ ಯೋಜಿಸಲಾಗಿದೆ ಮತ್ತು ಇದು ರಾಜ್ಯದ ಸಾರಿಗೆ ಮಾರ್ಗದಲ್ಲಿ ಅತ್ಯಂತ ದುಬಾರಿ ಯೋಜನೆಗಳಲ್ಲಿ ಒಂದಾಗಿದೆ.

ಯೋಜನೆಯ ಪ್ರಮುಖ ವಿವರಗಳು:

ಒಟ್ಟು ಮಾರ್ಗದ ಉದ್ದ: 59.60 ಕಿ.ಮೀ.

ಅಂದಾಜು ವೆಚ್ಚ: 20,649 ಕೋಟಿ ರೂ.

ಒಟ್ಟು ನಿಲ್ದಾಣಗಳು: 26

ಪ್ರಯಾಣ: ಮಾದವರ (ಬೆಂಗಳೂರು)ನಿಂದ ನಾಗಣ್ಣನಪಾಳ್ಯ (ತುಮಕೂರು)ವರೆಗೆ

ಇದನ್ನೂ ಓದಿ: ಬೆಂಗಳೂರು – ತುಮಕೂರು ಮೆಟ್ರೋ ಯೋಜನೆ ಡಿಪಿಆರ್​ಗೆ ಬಿಡ್ ಕರೆದ ಬಿಎಂಆರ್ ಸಿಎಲ್

ಈ ಕಾರಿಡಾರ್ ಪೂರ್ಣಗೊಂಡ ನಂತರ, ಬೆಂಗಳೂರಿನ ವಾಯುವ್ಯ ಹೊರವಲಯ ಮತ್ತು ನಗರ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ತುಮಕೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಬಿಎಂಆರ್‌ಸಿಎಲ್ ಸಲ್ಲಿಸಿದ ಕಾರ್ಯಸಾಧ್ಯತಾ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದ ನಂತರ ಡಿಪಿಆರ್‌ನೊಂದಿಗೆ ಮಾತುಕತೆ ನಡೆಸಿ, ಮುಂದುವರಿದಿದೆ. ಗೃಹ ಸಚಿವ ಜಿ ಪರಮೇಶ್ವರ ಅವರು ಈ ಹಿಂದೆ ವರದಿಯನ್ನು ಅನುಮೋದಿಸಲಾಗಿದೆ ಎಂದು ಹೇಳಿದ್ದರು. ವಿಶೇಷವಾಗಿ ತುಮಕೂರಿಗೆ ಪೂರ್ಣ ಪ್ರಮಾಣದ ಮೆಟ್ರೋ ಅಗತ್ಯವಿದೆಯೇ ಎಂದು ಹೇಳಲಾಗಿತ್ತು. ಈ ಯೋಜನೆ ಮುಗಿದ ನಂತರ ಅದನ್ನು ಕೂಡ ವಿಸ್ತರಣೆ ಮಾಡಲಾಗವುದು ಎಂದು ಹೇಳಿದ್ದಾರೆ.

ಕಾರಿಡಾರ್‌ನಲ್ಲಿ ಯೋಜಿಸಲಾದ ಕೆಲವು ಪ್ರಮುಖ ನಿಲ್ದಾಣಗಳು:

ಮಕಾಲಿ

ದಾಸನಪುರ

ನೆಲಮಂಗಲ

ನೆಲಮಂಗಲ ಟೋಲ್‌ಗೇಟ್

ಟಿ. ಬೇಗೂರ್

ತಿಪ್ಪಗೊಂಡನಹಳ್ಳಿ

ಸೋಂಪುರ ಕೈಗಾರಿಕಾ ಪ್ರದೇಶ

ಡಾಬ್ಸ್‌ಪೇಟೆ

ಹಿರೇಹಳ್ಳಿ ಕೈಗಾರಿಕಾ ಪ್ರದೇಶ

ಕ್ಯಾತ್ಸಂದ್ರ

ತುಮಕೂರು ಬಸ್ ನಿಲ್ದಾಣ

ತುಡಾ ಲೇಔಟ್

ನಾಗಣ್ಣನಪಾಳ್ಯ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾರ್ಟಿಯಲ್ಲಿ ಶಂಕರ್​​ ನಾಗ್ ಹಾಡು ಹಾಡಿದ ಯಶ್; ಇಲ್ಲಿದೆ ವಿಡಿಯೋ – Kannada News | Yash Sings Shankar Nag Song: Viral Video Proves Kannada Love

ನಟ ರಾಕಿಂಗ್ ಸ್ಟಾರ್ ಯಶ್ ಅವರು ಶಂಕರ್​ ನಾಗ್ ಅವರ ದೊಡ್ಡ ಅಭಿಮಾನಿ. ಇದು ಹಲವು ಬಾರಿ ಸಾಬೀತಾಗಿದೆ. ಯಶ್​ ಅವರು ‘ಗೂಗ್ಲಿ’ ಸಿನಿಮಾದಲ್ಲಿ ಶಂಕರ್ ನಾಗ್ ಗೆಟಪ್​​ನಲ್ಲಿಯೂ ಕಾಣಿಸಿಕೊಂಡಿದ್ದರು. ಈಗ ಯಶ್ ಅವರು ಪಾರ್ಟಿಯಲ್ಲಿ ಶಂಕರ್ ನಾಗ್ ಸಿನಿಮಾದ ಹಾಡು ಹಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಯಶ್ ಅವರ ಕನ್ನಡ ಪ್ರೀತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂದಹಾಗೆ ಇದು ಅವರ ಬರ್ತ್​​​ಡೇ ಪಾರ್ಟಿ ಸಂದರ್ಭದ ವಿಡಿಯೋ ಹೌದೋ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಯಶ್ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡದ ಬಗ್ಗೆ ಅವರು ತೋರುವ ಪ್ರೀತಿ ಕಡಿಮೆ ಮಾಡಿಲ್ಲ. ಪರಭಾಷೆಯಲ್ಲಿ ಹೆಚ್ಚು ನಟಿಸೋ ಬದಲು, ಪರಭಾಷೆಯವರನ್ನು ಇಲ್ಲಿಗೆ ಕರೆಸಬೇಕು ಎಂಬ ಆಲೋಚನೆ ಅವರಿಗೆ ಯಾವಾಗಲೂ ಇತ್ತು. ‘ಟಾಕ್ಸಿಕ್’ ಚಿತ್ರ ಅದಕ್ಕೆ ಉತ್ತಮ ಉದಾಹರಣೆ. ಪರಭಾಷಾ ತಂತ್ರಜ್ಞರು ಹಾಗೂ ಕಲಾವಿದರನ್ನು ಯಶ್ ಈ ಚಿತ್ರಕ್ಕಾಗಿ ಕರೆಸಿಕೊಂಡಿದ್ದಾರೆ. ಹಾಲಿವುಡ್ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಆದರೆ, ಅವರ ಕನ್ನಡ ಪ್ರಿತಿ ಕಡಿಮೆ ಆಗಿಲ್ಲ.

ಇದನ್ನೂ ಓದಿ: ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್; ಇದು ಯಶ್ ಹವಾ

ಜನವರಿ 8 ಯಶ್ ಬರ್ತ್​​ಡೇ. ಈ ಸಂದರ್ಭದ ವಿಡಿಯೋ ಎಂದು ವಿಡಿಯೋ ಒಂದು ವೈರಲ್ ಆಗುತ್ತಿದೆ.ಈ ವಿಡಿಯೋದಲ್ಲಿ ಯಶ್ ಅವರು ಶಂಕರ್ ನಾಗ್ ಅವರ ‘ಸಿಬಿಐ ಶಂಕರ್’ ಸಿನಿಮಾದ ‘ಗೀತಾಂಜಲಿ’ ಹಾಡನ್ನು ಹಾಡುತ್ತಿದ್ದಾರೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದು ಹಳೆಯ ವಿಡಿಯೋ ಎನ್ನಲಾಗುತ್ತಿದೆ.

ಯಶ್ ಅವರು ಸದ್ಯ ಮುಂಬೈನಲ್ಲಿದ್ದಾರೆ. ಅಲ್ಲದೆ, ಯಶ್ ಅವರು ಇತ್ತೀಚೆಗೆ ಗೆಟಪ್​ ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರು ಮುಖ ಹಾಗೂ ತಲೆಯನ್ನು ಮುಚ್ಚಿಕೊಂಡು ಹೋಗಿದ್ದರು. ಈ ವಿಡಿಯೋದಲ್ಲಿ ಅವರು ಹಳೆಯ ಗೆಟಪ್​​ನಲ್ಲೇ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link