All posts by nagaraj11081993

Bengaluru: ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ; ಬೈಕ್​​ ಸವಾರಿಗೆ ಬಿತ್ತು ಗೂಸಾ – Kannada News | Bike riders attack a delivery boy in Bengaluru; video goes viral

ಬೆಂಗಳೂರು, ಜನವರಿ 09: ಕ್ಷುಲ್ಲಕ ಡೆಲಿವರಿ ಬಾಯ್​​ಗೆ ಬೈಕ್​​ ಸವಾರರು ಥಳಿಸಿರುವ ಘಟನೆ ಬೆಂಗಳೂರಿನ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡೆಲಿವರಿ ಬಾಯ್​​ ಅಡ್ಡಬಂದ ಕಾರಣ ನಿಯಂತ್ರಣತಪ್ಪಿ ಬೈಕ್​​ ಸವಾರರು ಕೆಳಗೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಡೆಲಿವರಿ ಬಾಯ್ ಸಹಾಯಕ್ಕೆ ಸ್ಥಳೀಯರು ಬಂದಿದ್ದು, ಸಮಾಧಾನಪಡಿಸಿದ್ರೂ ಸುಮ್ಮನಾಗದ ಹಿನ್ನೆಲೆ ಬೈಕ್ ಸವಾರರಿಗೆ ಧರ್ಮದೇಟು ನೀಡಿದ್ದಾರೆ. ಸ್ಥಳೀಯರ ಗೂಸಾ ಕೊಡ್ತಿದ್ದಂತೆ ಸವಾರರು ಎಸ್ಕೇಪ್​ ಆಗಿದ್ದು, ಜ.4ರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಒಂದಲ್ಲ, ಎರಡಲ್ಲ 200 ಮಿಲಿಯನ್’; ‘ಟಾಕ್ಸಿಕ್’ ಟೀಸರ್ ಅಬ್ಬರಕ್ಕೆ ‘ಕೆಜಿಎಫ್ 2’ ದಾಖಲೆ ಉಡೀಸ್ – Kannada News | Toxic Teaser Shatters Records: Yash’s Film Hits 200M Views, Beats KGF 2!

ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ (Toxic Teaser) ಅಬ್ಬರಕ್ಕೆ ‘ಕೆಜಿಎಫ್ 2’, ‘ಕಾಂತಾರ: ಚಾಪ್ಟರ್ 1’ ಮೊದಲಾದ ಸಿನಿಮಾಗಳು ಬರೆದಿದ್ದ ದಾಖಲೆಗಳೆಲ್ಲ ಉಡೀಸ್ ಆಗಿವೆ. ಏಕೆಂದರೆ 24 ಗಂಟೆಯಲ್ಲಿ ‘ಟಾಕ್ಸಿಕ್’ ಟೀಸರ್ ಬರೋಬ್ಬರಿ 200 ಮಿಲಿಯನ್ ಅಂದರೆ 20 ಕೋಟಿ ಡಿಜಿಟಿಲ್ ವೀವ್ಸ್ ಪಡೆದುಕೊಂಡಿದೆ. ಈ ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ನೀಡಿದೆ. ಇದು ತಂಡದ ಖುಷಿಗೆ ಕಾರಣ ಆಗಿದೆ.

‘ಟಾಕ್ಸಿಕ್’ ಸಿನಿಮಾ ಟೀಸರ್ ಯೂಟ್ಯೂಬ್ ಜೊತೆಗೆ ಇನ್​​ಸ್ಟಾಗ್ರಾಮ್, ಫೇಸ್​​ಬುಕ್ ಸೇರಿದಂತೆ ವಿವಿಧ ಡಿಜಿಟಲ್ ಪ್ಲ್ಯಾಟ್​​ಫಾರ್ಮ್​​ಗಳಲ್ಲಿ ಹಂಚಿಕೊಳ್ಳಲಾಗಿತ್ತು. ಈ ಎಲ್ಲಾ ಫ್ಲ್ಯಾಟ್​ಫಾರ್ಮ್​​ಗಳ ವೀಕ್ಷಣೆಗಳನ್ನು ಪರಿಗಣಿಸಿ, ‘ಟಾಕ್ಸಿಕ್’ ಟೀಸರ್ ವೀಕ್ಷಣೆ 200 ಮಿಲಿಯನ್ ಎಂದು ಕೆವಿಎನ್ ಪ್ರೊಡಕ್ಷನ್ಸ್ ಘೋಷಣೆ ಮಾಡಿದೆ. 55 ಲಕ್ಷಕ್ಕೂ ಅಧಿಕ ಲೈಕ್ಸ್​​ಗಳು ಸಿಕ್ಕಿವೆ. ಈ ಮೂಲಕ ಸಿನಿಮಾಗೆ ದೊಡ್ಡ ಬೂಸ್ಟ್ ಸಿಕ್ಕಿದೆ.

ಮಾರ್ಚ್ 19ರಂದು ‘ಟಾಕ್ಸಿಕ್’ ಜೊತೆಗೆ ‘ಧುರಂಧರ್ 2’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಈಗಾಗಲೇ ‘ಧುರಂಧರ್’ ಹಿಟ್ ಆಗಿರುವುದರಿಂದ ‘ಧುರಂಧರ್ 2’ ಬಗ್ಗೆ ನಿರೀಕ್ಷೆ ಇದೆ. ಈ ಕಾರಣದಿಂದಲೇ ‘ಟಾಕ್ಸಿಕ್’ ಚಿತ್ರಕ್ಕೆ ಈ ಸಿನಿಮಾ ದೊಡ್ಡ ಸವಾಲಗಾಬಹುದು ಎಂದು ಹೇಳಲಾಗುತ್ತಿದೆ. ಆದರೆ, ‘ಟಾಕ್ಸಿಕ್’ ಚಿತ್ರದ ಅಬ್ಬರ ನೋಡಿ ಬಾಲಿವುಡ್ ಮಂದಿ ದಂಗಾಗಿದ್ದಾರೆ.

ಈ ಮೊದಲು ತೆರೆಗೆ ಬಂದಿದ್ದ ‘ಕೆಜಿಎಫ್ 2’ ಸಿನಿಮಾ 24 ಗಂಟೆಯಲ್ಲಿ 109 ಮಿಲಿಯನ್ ಡಿಜಿಟಿಲ್ ವ್ಯೂವ್ಸ್, ‘ಕಾಂತಾರ: ಚಾಪ್ಟರ್ 1’ 107 ಮಿಲಿಯನ್, ‘ಅನಿಮಲ್’ 71 ಮಿಲಿಯನ್ ಹಾಗೂ ‘ಪುಷ್ಪ 2’ 107 ಮಿಲಿಯನ್ ವೀಕ್ಷಣೆ ಕಂಡಿತ್ತು. ಈ ಎಲ್ಲಾ ದಾಖಲೆಗಳನ್ನು ಯಶ್ ಅವರು ಪೀಸ್ ಪೀಸ್ ಮಾಡಿದ್ದಾರೆ.

ಇದನ್ನೂ ಓದಿ: ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್; ಇದು ಯಶ್ ಹವಾ

‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಯಶ್ ಜೊತೆ ತಾರಾ ಸುತಾರಿಯಾ, ನಯನತಾರಾ, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ತೆಲುಗು, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

KSTDCನಿಂದ ವಿಶೇಷ ಪ್ಯಾಕೇಜ್: 20% ರಿಯಾಯಿತಿ, ಎಲ್ಲಿಗೆಲ್ಲ ಟೂರ್ – Kannada News | New Year KSTDC South India Travel: Mysore, Ooty, Kodaikanal and 20% Discount

ದಕ್ಷಿಣ ಭಾರತ ಪ್ರವಾಸಗಳ ತವರು, ( KSTDC South India Tour) ಇಲ್ಲಿರುವಷ್ಟು ಪ್ರಕೃತಿ ಸೌಂದರ್ಯದ ಸೋಬಗು ಎಲ್ಲಿಯೂ ಇರಲು ಸಾಧ್ಯವಿಲ್ಲ. ಅದರಲ್ಲೂ ಕರ್ನಾಟಕ, ಕೇರಳ, ತಮಿಳುನಾಡು ತನ್ನದೇ ಆಗಿರುವ ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿದೆ. ಆದರೆ ಇಲ್ಲಿ ಹೋಗುವುದಕ್ಕೆ ತುಂಬಾ ಖರ್ಚು ಆಗುತ್ತದೆ ಎಂಬುದು ಅನೇಕರ ಚಿಂತೆ. ಅದಕ್ಕೆ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಆಗ್ಗಾಗೆ ವಿಶೇಷ ಪ್ಯಾಕೇಜ್​​ಗಳನ್ನು ನೀಡುತ್ತದೆ. ಇದೀಗ ಹೊಸ ವರ್ಷದ ಎರಡನೇ ವಾರ ವಿಶೇಷ ಪ್ಯಾಕೇಜ್​​​​ ಒಂದನ್ನು ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣಗಳಾದ ಮೈಸೂರು, ಊಟಿ ಮತ್ತು ಕೊಡೈಕೆನಾಲ್ ಪ್ರವಾಸ ಹೋಗಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶ. ಈ ಪ್ಯಾಕೇಜ್​​​​​ ಮೂಲಕ ವಿಶೇಷ ಸ್ಥಳಗಳನ್ನು ನೋಡಬಹುದು. ಒಂದು ವೇಳೆ ಈ ಪ್ಯಾಕೇಜ್​​​​ ಆಯ್ಕೆ ಮಾಡಿಕೊಂಡರೆ 20% ರಿಯಾಯಿತಿ ಇರುತ್ತದೆ. ಪ್ರವಾಸದ ಮಾರ್ಗ, ಸ್ಥಳ, ಟಿಕೆಟ್ ದರ, ಸಂಚಾರ ಸಮಯ, ಪ್ಯಾಕೇಜ್ ಬುಕ್ಕಿಂಗ್ ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ:

ಭೇಟಿ ನೀಡುವ ಪ್ರಮುಖ ನಗರಗಳು:

ಮೈಸೂರು (ಅರಮನೆ ನಗರಿ): ಪ್ರಪಂಚದಾದ್ಯಂತ ಪ್ರವಾಸಿಗರನ್ನು ಸೆಳೆಯುವ ಮೈಸೂರು, ಭವ್ಯ ಅರಮನೆ, ಮ್ಯೂಸಿಯಂಗಳು, ಚರ್ಚುಗಳು ಮತ್ತು ಪ್ರಾಣಿಸಂಗ್ರಹಾಲಯಕ್ಕೆ ಹೆಸರುವಾಸಿಯಾಗಿರುವ ಕಾರಣ, ಇಲ್ಲಿ ಒಂದು ಅದ್ಭುತ ಕ್ಷಣಗಳನ್ನು ಕಳೆಯಬಹುದು. ವಿಶೇಷ ಪ್ರವಾಸಿ ತಾಣಗಳನ್ನು ನೋಡಬಹುದು.

ಊಟಿ (ಗಿರಿದಾಮಗಳ ರಾಣಿ): ಇಲ್ಲಿನ ಚಹಾ ತೋಟಗಳು ವಿಶ್ವಪ್ರಸಿದ್ಧ. ನೀವು ಮಸಾಲಾ, ಮಲ್ಲಿಗೆ, ಏಲಕ್ಕಿ ಮತ್ತು ಚಾಕೊಲೇಟ್ ಫ್ಲೇವರ್‌ನ ವಿವಿಧ ಚಹಾಗಳನ್ನು ಇಲ್ಲಿ ಸವಿಯಬಹುದು. ಇಲ್ಲಿನ ಬೆಟ್ಟಗಳು ಹಾಗೂ ವಿಶೇಷ ಪ್ರವಾಸಿ ತಾಣಗಳನ್ನು ನೋಡಬಹುದು.

ಕೊಡೈಕೆನಾಲ್ (ಗಿರಿಧಾಮಗಳ ರಾಜಕುಮಾರಿ): ತನ್ನ ಶಾಂತಿಯುತ ವಾತಾವರಣ ಮತ್ತು ಸುಂದರವಾದ ಬೆಟ್ಟಗುಡ್ಡಗಳಿಗೆ ಹೆಸರಾಗಿದೆ. ಈ ಪ್ರದೇಶವನ್ನು ದಂಪತಿಗಳು ಹೆಚ್ಚು ಇಷ್ಟಪಡುತ್ತಾರೆ. ಇಲ್ಲಿ ಹೆಚ್ಚು ಕಪಲ್ಸ್​ ಬರುತ್ತಾರೆ.

ಇದನ್ನೂ ಓದಿ: 2026ರಲ್ಲಿ ಪ್ರವಾಸ ಪ್ರಿಯರಿಗೆ ಸಿಗಲಿವೆ ಸಾಲು ಸಾಲು ರಜೆಗಳು; ಸಂಪೂರ್ಣ ವಿವರ ಇಲ್ಲಿದೆ

ನೋಡಬೇಕಾದ ಸ್ಥಳ:

ಶ್ರೀರಂಗಪಟ್ಟಣ: ಟಿಪ್ಪು ಸುಲ್ತಾನನ ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ.

ಮೈಸೂರು: ಸೇಂಟ್ ಫಿಲೋಮಿನಾ ಚರ್ಚ್, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ ಮತ್ತು ಬೃಂದಾವನ ಗಾರ್ಡನ್.

ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜುಂಡೇಶ್ವರ ದೇವಸ್ಥಾನ.

ಊಟಿ ಮತ್ತು ಕೊಡೈಕೆನಾಲ್: ಪ್ರಸಿದ್ಧ ಗಿರಿಧಾಮಗಳ ವೀಕ್ಷಣೆ.

ಸಾರಿಗೆ ಮತ್ತು ವಾಸ್ತವ್ಯದ ವಿವರ:

ಸಾರಿಗೆ: ಸುಸಜ್ಜಿತ ಡಿಲಕ್ಸ್ ಕೋಚ್ (Deluxe Coach) ಮೂಲಕ ಪ್ರಯಾಣ.

ಹೋಟೆಲ್ ವಾಸ್ತವ್ಯ:

ಮೈಸೂರಿನಲ್ಲಿ: ಹೋಟೆಲ್ ಮಯೂರ ಹೊಯ್ಸಳ (ಕೆಎಸ್‌ಟಿಡಿಸಿ ಹೋಟೆಲ್).

ಊಟಿಯಲ್ಲಿ: ಹೋಟೆಲ್ ಮಯೂರ ಸುದರ್ಶನ್ ಅಥವಾ ಸಮಾನ ದರ್ಜೆಯ ಹೋಟೆಲ್.

ಕೊಡೈಕೆನಾಲ್‌ನಲ್ಲಿ: ಹೋಟೆಲ್ ಎಸ್ ವಿ ಇಂಟರ್ನ್ಯಾಷನಲ್.

ಪ್ರವಾಸದ ಇತರ ಸೌಲಭ್ಯ:

ಮೈಸೂರು-ಊಟಿ-ಕೊಡೈಕೆನಾಲ್ ಪ್ರವಾಸ ಪ್ಯಾಕೇಜ್ ಗೆ ಒಬ್ಬರಿಗೆ ತಲಾ ₹9,310 ರೂಪಾಯಿ ಇದೆ. ಹಿರಿಯ ನಾಗರಿಕಿಗೆ ದರದಲ್ಲಿ ಶೇಕಡಾ 20ರಷ್ಟು ರಿಯಾಯಿತಿ ಇದೆ.

ಪ್ರತಿಯೊಂದು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಸಾಕಷ್ಟು ಸಮಯವನ್ನು ನಿಗದಿಪಡಿಸಲಾಗಿದೆ.

ಪ್ರತಿಯೊಂದು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಸಾಕಷ್ಟು ಸಮಯವನ್ನು ನಿಗದಿಪಡಿಸಲಾಗಿದೆ.

ಪ್ರವಾಸಿ ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸಲು ಪರಿಣಿತ ಗೈಡ್ ಸೌಲಭ್ಯ.

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ (PSU) ನೌಕರರಿಗೆ LTC (Leave Travel Concession) ಸೌಲಭ್ಯ ಲಭ್ಯವಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:17 pm, Fri, 9 January 26

Source link

ಮೊದಲು ಗುಂಡು ಹಾರಿಸ್ತೀವಿ, ಆಮೇಲೆ ಪ್ರಶ್ನೆ ಕೇಳ್ತೀವಿ, ಡೆನ್ಮಾರ್ಕ್​ ಆದೇಶಕ್ಕೆ ಅಮೆರಿಕ ಗಢ ಗಢ – Kannada News | Denmark’s Greenland Sends Strong Warning Over Territorial Security

ಟ್ರಂಪ್-ಫ್ರೆಡೆರಿಕ್ಸೆನ್Image Credit source: India Today

ವಾಷಿಂಗ್ಟನ್, ಜನವರಿ 09: ಗ್ರೀನ್‌ಲ್ಯಾಂಡ್‌ಗೆ ಸಂಬಂಧಿಸಿದಂತೆ ಡೆನ್ಮಾರ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌(Donald Trump)ಗೆ ಕಠಿಣ ಎಚ್ಚರಿಕೆ ನೀಡಿದೆ. ಅಮೆರಿಕ ಗ್ರೀನ್‌ಲ್ಯಾಂಡ್ ಮೇಲೆ ಆಕ್ರಮಣ ಮಾಡಿದರೆ, ಅದರ ಪಡೆಗಳು ಮೊದಲು ಗುಂಡು ಹಾರಿಸಿ ನಂತರ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ ಎಂದು ಡ್ಯಾನಿಶ್ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ.

ಅಂದರೆ ಅವರು ಅನುಮತಿ ಅಥವಾ ಆದೇಶಗಳಿಗಾಗಿ ಕಾಯದೆ ತಕ್ಷಣವೇ ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದು ಡೆನ್ಮಾರ್ಕ್ ರಕ್ಷಣಾ ಸಚಿವಾಲಯ ಹೇಳಿದೆ. 1952 ರ ಈ ಆದೇಶ ಇನ್ನೂ ಜಾರಿಯಲ್ಲಿದೆ ಮತ್ತು ಯಾವುದೇ ಸಂಭಾವ್ಯ ದಾಳಿಗೆ ತಕ್ಷಣದ ಪ್ರತಿಕ್ರಿಯೆಯನ್ನು ನೀಡುವ ಉದ್ದೇಶವನ್ನು ಇದು ಹೊಂದಿದೆ ಎಂದು ಡ್ಯಾನಿಶ್ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

ನಿಯಮದ ಅಡಿಯಲ್ಲಿ, ಪಡೆಗಳು ಮೇಲಿನಿಂದ ಆದೇಶಗಳಿಗಾಗಿ ಕಾಯಬಾರದು, ಆದರೆ ದಾಳಿಯ ಸಂದರ್ಭದಲ್ಲಿ ತಕ್ಷಣವೇ ಯುದ್ಧದಲ್ಲಿ ತೊಡಗಬೇಕು ಎಂದು ಸಚಿವಾಲಯ ಹೇಳಿದೆ. ಈ ಎಚ್ಚರಿಕೆ ಯುರೋಪಿಯನ್ ರಾಷ್ಟ್ರಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ.

ಫ್ರಾನ್ಸ್, ಜರ್ಮನಿ ಮತ್ತು ಇತರ NATO ಸದಸ್ಯರು ಗ್ರೀನ್‌ಲ್ಯಾಂಡ್‌ನ ಸಾರ್ವಭೌಮತ್ವವನ್ನು ಬೆಂಬಲಿಸುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ತಗ್ಗಿಸಲು ಅಮೆರಿಕವನ್ನು ಒತ್ತಾಯಿಸುತ್ತಿದ್ದಾರೆ.
ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಸಾಮ್ರಾಜ್ಯ ನ್ಯಾಟೊ ಭಾಗವಾಗಿದೆ. ಪರಿಣಾಮವಾಗಿ, ಅವು ಮೈತ್ರಿಕೂಟದ ಭದ್ರತಾ ಖಾತರಿಗಳ ಅಡಿಯಲ್ಲಿ ಬರುತ್ತವೆ.

ಮತ್ತಷ್ಟು ಓದಿ: US threat: ರಷ್ಯನ್ ತೈಲ ಖರೀದಿ- ಭಾರತದ ಮೇಲೆ ಮತ್ತೆ ಟ್ಯಾರಿಫ್ ಬೆದರಿಕೆ ಹಾಕಿದ ಟ್ರಂಪ್

ಮುಂದಿನ ವಾರ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ನ ಅಧಿಕಾರಿಗಳನ್ನು ಭೇಟಿ ಮಾಡಲು ಯೋಜಿಸುತ್ತಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯ ಪ್ರಕಾರ, ಟ್ರಂಪ್ ಮಿಲಿಟರಿ ಬಲವನ್ನು ಬಳಸುವುದಲ್ಲ, ದ್ವೀಪವನ್ನು ಖರೀದಿಸಲು ಬಯಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ಡೆನ್ಮಾರ್ಕ್ ಅಮೆರಿಕದ ಅಧಿಕಾರಿಗಳೊಂದಿಗಿನ ಸಭೆಯನ್ನು ಸ್ವಾಗತಿಸಿದೆ ಮತ್ತು ಇದನ್ನು ಪ್ರಮುಖ ಚರ್ಚೆ ಎಂದು ಕರೆದಿದೆ.

ಗ್ರೀನ್‌ಲ್ಯಾಂಡ್ ಅನ್ನು ಹಿಡಿದಿಟ್ಟುಕೊಳ್ಳುವುದು ಅಮೆರಿಕದ ರಾಷ್ಟ್ರೀಯ ಭದ್ರತಾ ಆದ್ಯತೆಯಾಗಿದೆ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿ ನಮ್ಮ ವಿರೋಧಿಗಳನ್ನು ತಡೆಯುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಅಧ್ಯಕ್ಷ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಈ ಪ್ರಮುಖ ವಿದೇಶಾಂಗ ನೀತಿ ಗುರಿಯನ್ನು ಸಾಧಿಸಲು ಅಧ್ಯಕ್ಷರು ಮತ್ತು ಅವರ ತಂಡವು ಹಲವಾರು ಆಯ್ಕೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ ಮತ್ತು ಸಹಜವಾಗಿ, ಯುಎಸ್ ಮಿಲಿಟರಿಯನ್ನು ಬಳಸುವುದು ಯಾವಾಗಲೂ ಕಮಾಂಡರ್ ಇನ್ ಚೀಫ್‌ಗೆ ಲಭ್ಯವಿರುವ ಆಯ್ಕೆಯಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಳ್ಳಾರಿ ಗಲಭೆ: ಪೊಲೀಸರ ನಡೆಗೆ ಜನಾರ್ದನ ರೆಡ್ಡಿ ಭಾರಿ ಅಸಮಧಾನ; ಕಾರಣ ಇಲ್ಲಿದೆ – Kannada News | Ballari Poster Row: Janardhan Reddy Blames Police, outraged over not filing an FIR

ಬಳ್ಳಾರಿ ಗಲಭೆಗೆ ಅಧಿಕಾರಿಗಳೇ ಕಾರಣವೆಂದು ದೂರು; FIR ಮಾಡದ್ದಕ್ಕೆ ರೆಡ್ಡಿ ಆಕ್ರೋಶ

ಬಳ್ಳಾರಿ, ಜನವರಿ 09: ಜಿಲ್ಲೆಯಲ್ಲಿ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದ ಗಲಭೆ ಪ್ರಕರಣ ದಿನೇದಿನೇ ತಿರುವು ಪಡೆದುಕೊಳ್ಳುತ್ತಿದ್ದು, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಲಭೆಗೆ ಪೊಲೀಸ್ ಅಧಿಕಾರಿಗಳೇ ನೇರ ಕಾರಣ ಎಂದು ಆರೋಪಿಸಿ, ಬಳ್ಳಾರಿ ASP ರವಿಕುಮಾರ್, DSP ಚಂದ್ರಕಾಂತ ನಂದರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ರೆಡ್ಡಿ ದೂರು ಸಲ್ಲಿಸಿದ್ದರು.

ಜನವರಿ 1ರಂದು ತಮ್ಮ ನಿವಾಸದ ಬಳಿ ಬ್ಯಾನರ್ ಹಾಕುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತ ಹಾಗೂ ಗುಂಡಿನ ದಾಳಿ ನಡೆದಿರುವುದಾಗಿ ರೆಡ್ಡಿ ಆರೋಪಿಸಿದ್ದಾರೆ. ಈ ಘಟನೆಯಲ್ಲಿ ತಮ್ಮನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಜನವರಿ 6ರಂದು ಮೂವರ ವಿರುದ್ಧ ನೀಡಿದ ದೂರಿಗೆ ಪೊಲೀಸರು FIR ದಾಖಲಿಸದೇ ಹಿಂಬರಹ ನೀಡಿರುವುದಕ್ಕೆ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರಿಂದ ಹಿಂಬರಹ

ನಾನು ನೀಡಿದ ದೂರು ಬೇರೆ, ಪೊಲೀಸರು ಕೊಟ್ಟ ಹಿಂಬರಹ ಬೇರೆ. ಸ್ಪಷ್ಟವಾಗಿ ಆರೋಪಿಗಳ ವಿರುದ್ಧ ಕೇಸ್ ಮಾಡಬೇಕಾದರೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ರೆಡ್ಡಿ ಕಿಡಿಕಾರಿದ್ದಾರೆ. ಈ ಕುರಿತು ಹಿಂಬರಹ ನೀಡಿರುವ ಪೊಲೀಸರು, ಇದೇ ಘಟನೆಗೆ ಸಂಬಂಧಿಸಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಹೊಸ ದೂರನ್ನು ಮುಂದುವರೆದ ಮಾಹಿತಿ ಎಂದು ಪರಿಗಣಿಸಿ ತನಿಖೆಗೆ ಸೇರಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ ಬಳ್ಳಾರಿ ಬ್ಯಾನರ್ ಗಲಾಟೆ: ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ; ನೂತನ ಎಸ್ಪಿ ನೇಮಕ

ಆದರೆ ಅಧಿಕಾರಿಗಳು ಮತ್ತು ರಾಜಕೀಯ ಒತ್ತಡದಿಂದ ಹಾದಿ ತಪ್ಪಿಸಲಾಗುತ್ತಿದೆ ಎಂದು ಗಾಲಿ ಜನಾರ್ದನ ರೆಡ್ಡಿ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಕರಣ ಬಳ್ಳಾರಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಗಲು ಗೌರಮ್ಮ, ರಾತ್ರಿಯಾದರೆ ಕಾಳಿ: ಸಮಂತಾ ಹೊಸ ಅವತಾರ – Kannada News | Samantha Ruth Prabhu starrer Maa Inti Bangaaram movie teaser released

ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣದ ಸ್ಟಾರ್ ನಟಿ ಆಗಿದ್ದವರು. ಆದರೆ ಇತ್ತೀಚೆಗೆ ಅವರೇ ಹೇಳಿಕೊಂಡಿರುವಂತೆ ತೆಲುಗು ಚಿತ್ರರಂಗದಲ್ಲಿ ಅವರಿಗೆ ಅವಕಾಶಗಳು ಕಡಿಮೆ ಆಗಿವೆಯಂತೆ. ಇದೇ ಕಾರಣಕ್ಕೆ ಅವರು ಹಿಂದಿಯ ವೆಬ್ ಸರಣಿಗಳ ಕಡೆ ಮುಖ ಮಾಡಿದ್ದಾರೆ. ಆದರೆ ವರ್ಷದ ಹಿಂದೆಯೇ ಸಮಂತಾ ನಟಿಸಲಿದ್ದ ‘ಮಾ ಇಂಟಿ ಬಂಗಾರಂ’ ಸಿನಿಮಾ ಘೋಷಣೆ ಆಗಿತ್ತು. ಕೆಲವು ಕಾರಣಗಳಿಗಾಗಿ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಇದೀಗ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟ್ರೇಲರ್ನಲ್ಲಿ ಸಮಂತಾ ಎರಡು ಭಿನ್ನ ಅವತಾರದಲ್ಲಿ ಕಾಣಿಸಿಕೊಂಂಡಿದ್ದಾರೆ.

ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾದ ಟೀಸರ್ ಇಂದು (ಜನವರಿ 09) ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಸಮಂತಾ ಪತಿಯಾಗಿ ಕನ್ನಡದ ನಟ ದಿಗಂತ್ ನಟಿಸಿದ್ದಾರೆ. ಟೀಸರ್​​ನಲ್ಲಿ ತೋರಿಸಿರುವಂತೆ ಸಮಂತಾ ಹಾಗೂ ದಿಗಂತ್ ಪ್ರೀತಿಸಿ ಮನೆಯವರಿಗೆ ತಿಳಿಯದೇ ಮದುವೆ ಆಗಿದ್ದಾರೆ. ಈಗ ಸಮಂತಾ ಮೊದಲ ಬಾರಿ ಗಂಡನ ಮನೆಗೆ ಬಂದಿದ್ದಾರೆ. ಗಂಡನ ಮನೆಯದ್ದು ಕೂಡು ಕುಟುಂಬ, ಎಲ್ಲರೂ ಸೊಸೆ ಹೇಗೆ, ಸೊಸೆಯ ವ್ಯಕ್ತಿತ್ವ ಹೇಗೆ ಎಂದು ಕುತೂಹಲದಿಂದ ಇರುತ್ತಾರೆ, ಪ್ರತಿ ಹೆಜ್ಜೆಗೂ ಟೀಕೆ, ಪರಿಶೀಲನೆ ನಡೆಯುತ್ತಲೇ ಇರುತ್ತದೆ. ಆದರೆ ಸಮಂತಾ ಮಾತ್ರ ಸುಸಂಸ್ಕೃತ ಸೊಸೆಯಂತೆ ನಗು ಮುಖದಿಂದ ಎಲ್ಲರ ಸೇವೆ ಮಾಡುತ್ತಾರೆ. ಆದರೆ ಸಮಂತಾರ ಈ ಗೌರಮ್ಮನ ಅವತಾರ ಹಗಲು ಹೊತ್ತು ಮಾತ್ರ.

ಇದನ್ನೂ ಓದಿ:ಮದುವೆ ಬಳಿಕ ಸಮಂತಾ ಮೊದಲ ಸಿನಿಮಾ; ಹೇಗಿದೆ ನೋಡಿ ಫಸ್ಟ್ ಲುಕ್

ಸಮಂತಾಗೆ ಇನ್ನೊಂದು ಮುಖವೂ ಇದೆ. ಟೀಸರ್​​ನಲ್ಲಿ ತೋರಿಸಿರುವಂತೆ ಸಮಂತಾ ಯಾವ ನಾಯಕರಿಗೂ ಕಡಿಮೆ ಇಲ್ಲದಂತೆ ವಿಲನ್​​ಗಳನ್ನು ಚಚ್ಚಿ ಕೆಡವುತ್ತಾರೆ. ಸೀರೆಯುಟ್ಟು ಕಾಳಿಯಂತೆ ವಿಲನ್ನುಗಳ ಮೇಲೆ ಹಾರಿ ಬೀಳುತ್ತಿದ್ದಾರೆ. ಚುಚ್ಚಿ ಕೊಂದೇ ಹಾಕುತ್ತಿದ್ದಾರೆ. ಈ ಎಲ್ಲ ಸಾಹಸ ಅತ್ತೆಯ ಮನೆಯಲ್ಲೇ ನಡೆಯುತ್ತಿದೆ. ಮನೆ ಮಂದಿಯ ಕಣ್ಣು ತಪ್ಪಿಸಿ ಈ ಸಾಹಸಗಳನ್ನು ಸಮಂತಾ ಮಾಡುತ್ತಿದ್ದಾರೆ. ಆದರೆ ಸಮಂತಾರ ಈ ದ್ವಿವ್ಯಕ್ತಿತ್ವಕ್ಕೆ ಕಾರಣ ಏನು? ಸಮಂತಾ ಮೇಲೆ ದಾಳಿ ಮಾಡುತ್ತಿರುವ ಆ ಪುಂಡರು ಯಾರು? ಇದೆಲ್ಲ ತಿಳಿಯಬೇಕೆಂದರೆ ಸಿನಿಮಾ ನೋಡಬೇಕು.

https://www.youtube.com/watch?v=aXAZNg50Xgs

‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ಸಮಂತಾ ಪತಿಯ ಪಾತ್ರದಲ್ಲಿ ಕನ್ನಡಿಗ ದಿಗಂತ್ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಮತ್ತೊಬ್ಬ ಕನ್ನಡಿಗ ಗುಲ್ಷನ್ ದೇವಯ್ಯ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನಂದಿನಿ ರೆಡ್ಡಿ. ನಿರ್ಮಾಣ ಮಾಡಿರುವುದು ಸಮಂತಾರ ಪತಿ ರಾಜ್ ನಿಧಿಮೋರು. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಿಸಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯನ್ನು ಪತ್ತೆ ಹಚ್ಚಬಲ್ಲಿರಾ – Kannada News | Optical Illusion: There are four people in this picture, not three, solve this puzzle in 7 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಒಗಟುಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಸುಲಭ, ಇನ್ನು ಕೆಲವರಿಗೆ ಕಷ್ಟಕರ. ಈ ಟ್ರಿಕ್ಕಿ ಒಗಟಿನ ಚಿತ್ರ ಬಿಡಿಸುತ್ತಾ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಆದರೆ ಈ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡಿ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಇದೀಗ ಇಂತಹದ್ದೇ ಕಠಿಣ ಸವಾಲಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯನ್ನು ಕೇವಲ 7 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ಕಣ್ಣು ಬಿಟ್ಟು ಈ ಚಿತ್ರ ನೋಡಿ ಒಗಟು ಬಿಡಿಸಲು ಪ್ರಯತ್ನಿಸಿ.

ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಏನು ಕಾಣಿಸಿತು?

ಆಪ್ಟಿಕಲ್‌ ಇಲ್ಯೂಷನ್‌ ಒಗಟಿನ ಚಿತ್ರವು ನೋಡುವುದಕ್ಕೆ ಸುಲಭವಾಗಿ ಕಂಡರೂ ಟ್ರಿಕ್ಕಿಯಾಗಿರುತ್ತದೆ. ಇದೀಗ ಈ ಚಿತ್ರವೂ ಅಷ್ಟೇ ಕಠಿಣ ಸವಾಲಿನದ್ದಾಗಿದ್ದು, ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಮೂವರು ಕಾಡಿನಲ್ಲಿ ಕೆಲಸ ಮಾಡುತ್ತಿರುವಂತೆ ಕಾಣುತ್ತದೆ. ನಾಲ್ಕನೇ ವ್ಯಕ್ತಿಯೂ ಇಲ್ಲಿ ಅಡಗಿ ಕುಳಿತಿದ್ದಾನೆ. ಈ ವ್ಯಕ್ತಿಯನ್ನು ಗುರುತಿಸುವುದೇ ಇಲ್ಲಿರುವ ಸವಾಲು. ಏಳು ಸೆಕೆಂಡುಗಳಲ್ಲಿ ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ.

ಇದನ್ನೂ ಓದಿ: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರಗಳ ನಡುವಿನ ಮೂರು ವ್ಯತ್ಯಾಸಗಳನ್ನು ಗುರುತಿಸಬಲ್ಲಿರಾ

ನಾಲ್ಕನೇ ವ್ಯಕ್ತಿ ನಿಮ್ಮ ಕಣ್ಣಿಗೆ ಬಿದ್ದನೇ?

ಎಷ್ಟೇ ಹುಡುಕಿದರೂ ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಾಲ್ಕನೇ ವ್ಯಕ್ತಿಯನ್ನು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರವನ್ನು ನೇರವಾಗಿ ನೋಡಬೇಡಿ. ನಿಮ್ಮ ಫೋನ್‌ನ್ನು ತಿರುಗಿಸಿ ಅಥವಾ ಬೇರೆ ದೃಷ್ಟಿ ಕೋನದಿಂದ ನೋಡಲು ಪ್ರಯತ್ನಿಸಿ. ಮರಗಳ ನಡುವಿನ ಸ್ಥಳಗಳು ಮತ್ತು ನೆರಳುಗಳಿಂದ ರಚಿಸಲಾದ ಆಕಾರಗಳ ಮೇಲೆ ಕೇಂದ್ರೀಕರಿಸಿ. ಆಗ ಮಾತ್ರ ಮನುಷ್ಯನ ಆಕೃತಿಯನ್ನು ಕಾಣಲು ಸಾಧ್ಯ. ಈ ಎಲ್ಲಾ ಸುಳಿವು ನೀಡಿದರೂ ನಾಲ್ಕನೇ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವಿಲ್ಲವೇ. ನಾವೇ ಉತ್ತರವನ್ನು ಹೇಳುತ್ತೇವೆ. ಮರದ ಕಾಂಡಗಳ ನಡುವಿನ ಖಾಲಿ ಜಾಗದಲ್ಲಿ ನಾಲ್ಕನೇ ವ್ಯಕ್ತಿಯನ್ನು ಜಾಣತನದಿಂದ ಇರಿಸಲಾಗಿದೆ. ನಾವು  ನಾಲ್ಕನೇ ವ್ಯಕ್ತಿಯನ್ನು ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್: ದೃಶ್ಯ ನೋಡಿದ್ರೆ ಬೆಚ್ಚಿ ಬೀಳ್ತೀರ

ಹುಬ್ಬಳ್ಳಿ, ಜನವರಿ 09: ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವಿವಿಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಆರೋಪ ರಾಜ್ಯಾದ್ಯಂತ ಚರ್ಚೆ ಆಗುತ್ತಿರುವ ನಡುವೆ ಆಕೆಯೇ ವ್ಯಕ್ತಿಯೋರ್ವನನ್ನು ಬಟ್ಟೆ ಬಿಚ್ಚಿಸಿ ಥಳಿಸಿರುವ ವಿಡಿಯೋ ವೈರಲ್​​ ಆಗಿದೆ. ಧಾರವಾಡ ಮೂಲದ ತುಕಾರಾಂ ಎಂಬವರನ್ನು ವಿವಸ್ತ್ರಗೊಳಿಸಿ ಸುಜಾತಾ ಮತ್ತು ಆಕೆ ಸಹಚರರು ಥಳಿಸಿದ್ದರು. ಹನಿಟ್ರ್ಯಾಪ್ ಮಾಡಿ ತುಕಾರಾಂನನ್ನು ಅಪಹರಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಎರಡೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ ವಿಡಿಯೋ ಈಗ ವೈರಲ್ ಆಗಿದೆ.

ಇನ್ನು BJP ಕಾರ್ಯಕರ್ತೆ ಸುಜಾತಾ ಹಳೆಯ ವಿಡಿಯೋ ರಿಲೀಸ್​ ವಿಚಾರ ಸಂಬಂಧ ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವ ಸಂದರ್ಭದಲ್ಲಿ ವಿಡಿಯೋ ಆಗಿತ್ತೆಂದು ಸ್ಪಷ್ಟೀಕರಣ ನೀಡಲಿ. ಕಾಂಗ್ರೆಸ್ ಸಹಯೋಗದಲ್ಲಿದ್ದಾಗಲೇ ಇದು ನಡೆದಿದೆ. ಮೊನ್ನೆ ನಡೆದ ಘಟನೆ ಖಂಡಿಸಿ ಮಾತ್ರ ನಾವು ಹೋರಾಟ ಮಾಡ್ತಿದ್ದೇವೆ. ಸುಜಾತಾ ಹಂಡಿ ತಪ್ಪು ಮಾಡಿದ್ರೆ ಕಾನೂನಿನಡಿ ಶಿಕ್ಷೆಯಾಗಲಿ. ಪಾಲಿಕೆ ಸದಸ್ಯೆ ಸುವರ್ಣ ಪ್ರಕರಣಯೊಂದರಲ್ಲಿ ದೋಷಿ ಆಗಿದ್ದು, ಅವರ ಬಗ್ಗೆ ಯಾಕೆ ಕಾಂಗ್ರೆಸ್​ನವರು ಮಾತನಾಡುತ್ತಿಲ್ಲ ಎಂದು ಶಾಸಕರು ಪ್ರಶ್ನಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video:ಬಾಯಿಂದ ಹರೀತಿತ್ತು ರಕ್ತ, ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ – Kannada News | Dead for 47 Years Iranian Protester’s Message Draws Global Attention

ಇರಾನ್, ಜನವರಿ 09: ಇರಾನ್ ಸರ್ಕಾರ ತನ್ನ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದಂತೆ, ಇರಾನ್ ಮಹಿಳೆಯೊಬ್ಬರು ಇಸ್ಲಾಮಿಕ್ ಆಡಳಿತವನ್ನು ಧಿಕ್ಕರಿಸುತ್ತಾ ರಕ್ತ ಸಿಕ್ತವಾದ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಾಯಿಯಿಂದ ರಕ್ತ ಸುರಿಯುತ್ತಿದ್ದರೂ ಮಹಿಳೆ ಟೆಹ್ರಾನ್​ನ ಬೀದಿಯಲ್ಲಿ ಮಹಿಳೆ ಘೋಷಣೆ ಕೂಗುತ್ತಾ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ನನಗೆ ಭಯವಿಲ್ಲ, ನಾನು ಸತ್ತು 47 ವರ್ಷಗಳಾಯಿತು ಎಂದು ಆಕೆ ಕೂಗುತ್ತಿದ್ದರು.ಇರಾನ್‌ನ ಇಸ್ಲಾಮಿಕ್ ಆಡಳಿತವು 47 ವರ್ಷಗಳ ಹಿಂದೆ 1979 ರ ಇಸ್ಲಾಮಿಕ್ ಕ್ರಾಂತಿಯೊಂದಿಗೆ ಪ್ರಾರಂಭವಾಯಿತು.ಪಾಶ್ಚಿಮಾತ್ಯ ಪರ ಶಾ ಮೊಹಮ್ಮದ್ ರೆಜಾ ಪಹ್ಲವಿಯನ್ನು ಪದಚ್ಯುತಗೊಳಿಸಿ ಅಯತೊಲ್ಲಾ ರುಹೊಲ್ಲಾ ಖೊಮೇನಿ ನೇತೃತ್ವದ ಶಿಯಾ ಇಸ್ಲಾಮಿಕ್ ಪ್ರಭುತ್ವವನ್ನು ಸ್ಥಾಪಿಸಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate Today Bangalore: ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ಇಳಿಕೆ – Kannada News | Gold Price Today on 9th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 9: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಭಿನ್ನ ದಾರಿ ತುಳಿದಿವೆ. ಚಿನ್ನದ ಬೆಲೆ (gold rates) ಏರಿದರೆ, ಬೆಳ್ಳಿಗೆ ಬೆಲೆ ಇಳಿದಿವೆ. ನಿನ್ನೆ 130 ರೂ ಕಡಿಮೆಗೊಂಡಿದ್ದ ಚಿನ್ನದ ಬೆಲೆ ಇವತ್ತು 65 ರೂ ಏರಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು, ಬೆಳ್ಳಿ ಬೆಲೆ ಇಂದು 3 ರೂ ತಗ್ಗಿದೆ. ಎರಡು ದಿನದಲ್ಲಿ 13 ರೂ ಬೆಲೆ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,900 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,800 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 9ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,871 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,715 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,403 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 249 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,871 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,715 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 249 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,715 ರೂ
  • ಚೆನ್ನೈ: 12,800 ರೂ
  • ಮುಂಬೈ: 12,715 ರೂ
  • ದೆಹಲಿ: 12,730 ರೂ
  • ಕೋಲ್ಕತಾ: 12,715 ರೂ
  • ಕೇರಳ: 12,715 ರೂ
  • ಅಹ್ಮದಾಬಾದ್: 12,720 ರೂ
  • ಜೈಪುರ್: 12,730 ರೂ
  • ಲಕ್ನೋ: 12,730 ರೂ
  • ಭುವನೇಶ್ವರ್: 12,715 ರೂ

ಇದನ್ನೂ ಓದಿ: ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (12,598 ರುಪಾಯಿ)
  • ದುಬೈ: 496.75 ಡಿರಾಮ್ (12,168 ರುಪಾಯಿ)
  • ಅಮೆರಿಕ: 138.50 ಡಾಲರ್ (12,462 ರುಪಾಯಿ)
  • ಸಿಂಗಾಪುರ: 179.30 ಸಿಂಗಾಪುರ್ ಡಾಲರ್ (12,551 ರುಪಾಯಿ)
  • ಕತಾರ್: 494.50 ಕತಾರಿ ರಿಯಾಲ್ (12,206 ರೂ)
  • ಸೌದಿ ಅರೇಬಿಯಾ: 506 ಸೌದಿ ರಿಯಾಲ್ (12,141 ರುಪಾಯಿ)
  • ಓಮನ್: 52.65 ಒಮಾನಿ ರಿಯಾಲ್ (12,305 ರುಪಾಯಿ)
  • ಕುವೇತ್: 40.46 ಕುವೇತಿ ದಿನಾರ್ (11,913 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 249 ರೂ
  • ಚೆನ್ನೈ: 268 ರೂ
  • ಮುಂಬೈ: 249 ರೂ
  • ದೆಹಲಿ: 249 ರೂ
  • ಕೋಲ್ಕತಾ: 249 ರೂ
  • ಕೇರಳ: 268 ರೂ
  • ಅಹ್ಮದಾಬಾದ್: 249 ರೂ
  • ಜೈಪುರ್: 249 ರೂ
  • ಲಕ್ನೋ: 249 ರೂ
  • ಭುವನೇಶ್ವರ್: 268 ರೂ
  • ಪುಣೆ: 249

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link