All posts by nagaraj11081993

ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

ನವದೆಹಲಿ, ಏಪ್ರಿಲ್ 13: ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಇಂದು ಟಿಸಿಎಸ್ ನಾಸಿಕ್‌ನಲ್ಲಿ ನಡೆದ ಲೈಂಗಿಕ ಕಿರುಕುಳ ಆರೋಪಗಳನ್ನು ಟೀಕಿಸಿದ್ದಾರೆ. “ಈ ಘಟನೆ ಗಂಭೀರವಾಗಿದ್ದು, ಕಳವಳಕಾರಿ ಮತ್ತು ದುಃಖಕರದ್ದಾಗಿದೆ” ಎಂದು ಬೇಸರ ಹೊರಹಾಕಿದ್ದಾರೆ. ಟಿಸಿಎಸ್​ (Tata Consultancy Services) ಕಂಪನಿಯ ಹಿರಿಯ ಕಾರ್ಯನಿರ್ವಾಹಕರ ನೇತೃತ್ವದಲ್ಲಿ ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಬಹುರಾಷ್ಟ್ರೀಯ ಕಂಪನಿಯ ಕಚೇರಿಯಲ್ಲಿ 8 ಮಹಿಳಾ ಉದ್ಯೋಗಿಗಳಿಂದ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪಗಳು ಕೇಳಿಬಂದಿತ್ತು.

ಟಾಟಾ ಗ್ರೂಪ್ ತನ್ನ ಉದ್ಯೋಗಿಗಳಿಂದ ಯಾವುದೇ ರೀತಿಯ ದಬ್ಬಾಳಿಕೆ ಅಥವಾ ದುಷ್ಕೃತ್ಯವನ್ನು ಸಹಿಸುವುದಿಲ್ಲ ಎಂದು ಎನ್. ಚಂದ್ರಶೇಖರನ್ ಹೇಳಿದ್ದಾರೆ. “ಸತ್ಯಗಳನ್ನು ಪತ್ತೆಹಚ್ಚಲು ಮತ್ತು ಈ ಪರಿಸ್ಥಿತಿಗೆ ಕಾರಣರಾದ ಎಲ್ಲ ವ್ಯಕ್ತಿಗಳನ್ನು ಗುರುತಿಸಲು ಸಂಪೂರ್ಣ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.

“ಟಿಸಿಎಸ್‌ನ ನಾಸಿಕ್ ಶಾಖೆಯಿಂದ ಬಂದಿರುವ ದೂರುಗಳು ಮತ್ತು ಆರೋಪಗಳು ತೀವ್ರ ಕಳವಳಕಾರಿ ಮತ್ತು ತೀವ್ರ ದುಃಖಕರವಾಗಿವೆ. ಆರೋಪಿಗಳಾದ ಉದ್ಯೋಗಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನಡೆಯುತ್ತಿರುವ ತನಿಖೆಗಳಿಗೆ ಕಂಪನಿಯು ತನ್ನ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ” ಎಂದು ಚಂದ್ರಶೇಖರನ್ ಹೇಳಿದ್ದಾರೆ.

ಇದನ್ನೂ ಓದಿ: ನಾಸಿಕ್​ನ ಐಟಿ ಕಂಪನಿಯಲ್ಲಿ ಮಹಿಳೆಯರ ಮತಾಂತರ, ಲೈಂಗಿಕ ದೌರ್ಜನ್ಯ ದಂಧೆ ಬಯಲು 

“ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ನಾಸಿಕ್ ಶಾಖೆಯಿಂದ ಬಂದಿರುವ ದೂರುಗಳು ಮತ್ತು ಆರೋಪಗಳು ತೀವ್ರ ಕಳವಳಕಾರಿ ಮತ್ತು ದುಃಖಕರವಾಗಿವೆ. ಆರೋಪಿ ಉದ್ಯೋಗಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಕಂಪನಿಯು ನಡೆಯುತ್ತಿರುವ ತನಿಖೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ” ಎಂದು ಚಂದ್ರಶೇಖರನ್ ಪ್ರತಿಕ್ರಿಯೆ ನೀಡಿದ್ದಾರೆ.

ಟಿಸಿಎಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆರತಿ ಸುಬ್ರಮಣಿಯನ್ ಈ ಪ್ರಕರಣದ ತನಿಖೆಯ ನೇತೃತ್ವ ವಹಿಸಲಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಟಾಟಾ ಗ್ರೂಪ್ ಸೂಕ್ತ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಚಂದ್ರಶೇಖರನ್ ಹೇಳಿದ್ದಾರೆ.

ಇದನ್ನೂ ಓದಿ: ಟಿಸಿಎಸ್​ನಲ್ಲಿ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಸಂಖ್ಯೆ 12 ಸಾವಿರವಾ, 30 ಸಾವಿರವಾ?

ಏನಿದು ಘಟನೆ?:

ಮಾರ್ಚ್‌ನಲ್ಲಿ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿ ತನ್ನ ಸಹೋದ್ಯೋಗಿಯೊಬ್ಬರು ಮದುವೆಯ ಭರವಸೆ ನೀಡುವ ಮೂಲಕ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದಾರೆಂದು ಆರೋಪಿಸಿ ದೂರು ಸಲ್ಲಿಸಿದ್ದರು. ಈ ಪ್ರಕರಣದ ತನಿಖೆಯ ಸಮಯದಲ್ಲಿ ಪೊಲೀಸರು ಟಿಸಿಎಸ್​ ಉದ್ಯೋಗಿಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಮತಾಂತರ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಎಫ್‌ಐಆರ್‌ಗಳನ್ನು ದಾಖಲಿಸಿದ್ದರು.

ಇಲ್ಲಿಯವರೆಗೆ, ಟಿಸಿಎಸ್​ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 7 ಜನರನ್ನು ಬಂಧಿಸಲಾಗಿದೆ. ನಾಸಿಕ್ ಪೊಲೀಸ್ ಆಯುಕ್ತರ ಕಚೇರಿಗೆ ಬಂದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಬಂಧಿತ ವ್ಯಕ್ತಿಗಳನ್ನು ಆಸಿಫ್ ಅನ್ಸಾರಿ, ಶಫಿ ಶೇಖ್, ಶಾರುಖ್ ಖುರೇಷಿ, ರಜಾ ಮೆಮನ್, ತೌಸಿಫ್ ಅತ್ತಾರ್ ಮತ್ತು ಡ್ಯಾನಿಶ್ ಶೇಖ್ ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಗುರುತು ಪತ್ತೆಯಾಗದ ಮಹಿಳೆಯೂ ಇದ್ದಾರೆ ಎನ್ನಲಾಗಿದೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಚೇರಿ ಸಮಯ ಬದಲಾವಣೆ: ವಿಜಯಪುರ ಸರ್ಕಾರಿ ಅಧಿಕಾರಿ-ಸಿಬ್ಬಂದಿಗೆ ಹೇಳೋರಿಲ್ಲ, ಕೇಳೋರಿಲ್ಲ

ವಿಜಯಪುರ, ಏಪ್ರಿಲ್ 13: ಜಿಲ್ಲೆಯಲ್ಲಿನ ಸರ್ಕಾರಿ ಇಲಾಖೆಯ ಅಧಿಕಾರಿಗಳು (government offices) ಹಾಗೂ ಸಿಬ್ಬಂದಿ ಅನ್ನ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದೆ. ಕಾರಣ ಯಾರೋಬ್ಬರು ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸುತ್ತಿಲ್ಲ. ಬಿಸಿಲಿನ (summer) ಕಾರಣ ಎಲ್ಲಾ ಸರ್ಕಾರಿ ಇಲಾಖೆಗಳ ಸಮಯ ಬೆಳಿಗ್ಗೆ 8ರಿಂದ ಮದ್ಯಾಹ್ನ 1:30 ರವರೆಗೆ ನಿಗದಿ ಮಾಡಲಾಗಿದೆ. ಆದರೆ 9ಗಂಟೆಯಾದರೂ ಅಧಿಕಾರಿಗಳು, ಸಿಬ್ಬಂದಿ ಕಚೇರಿಗೆ ಆಗಮಿಸದೇ ಸೇವಾ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚುತ್ತಿರುವ ತೀವ್ರ ಬಿಸಿಲು ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಬಿಸಿಲಿನ ತಾಪಮಾನದಿಂದ ಜನತೆ ಬಸವಳಿಯುತ್ತಿದೆ. ಇದನ್ನು ಮನಗಂಡ ಸರ್ಕಾರ ವಿವಿಧ ಸರ್ಕಾರಿ ಕಚೇರಿಗಳ ಕಾರ್ಯ ಸಮಯವನ್ನು ಬದಲಿಸಿದೆ. ಏಪ್ರಿಲ್ 1 ರಿಂದ ಮೇ ತಿಂಗಳ ಕೊನೆಯವರೆಗೆ ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳ ಸರ್ಕಾರಿ ಕಚೇರಿಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1-30ರವರೆಗೆ ಕೆಲಸದ ಸಮಯ ನಿಗದಿಪಡಿಸಲಾಗಿದೆ. ಆದರೆ ಸಮಯ ಬದಲಾವಣೆಯಾದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: “ಸರ್ ಪ್ಲೀಸ್, ಸುಡುವ ಬಿಸಿಲಲ್ಲಿ ಕೆಲಸ ಕಷ್ಟ”: ಗದಗದಲ್ಲಿ ಕೆಲಸದ ಸಮಯ ಬದಲಾವಣೆಗೆ ಸರ್ಕಾರಿ ನೌಕರರ ಪಟ್ಟು!

ಹಲವು ಇಲಾಖೆಗಳ ಕಚೇರಿಗಳಲ್ಲಿ ಸಿಬ್ಬಂದಿ ಬೆಳಿಗ್ಗೆ 8 ಗಂಟೆಗೆ ಹಾಜರಾಗದೆ, 9ಗಂಟೆಯಾದರೂ ಕಚೇರಿಗೆ ಬಾರದ ಸ್ಥಿತಿ ಕಂಡುಬರುತ್ತಿದೆ. ಯೋಜನಾ ನಿರ್ದೇಶಕರ ಕಾರ್ಯಾಲಯ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರ ಕಚೇರಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸೇರಿದಂತೆ ಹಲವೆಡೆ ಈ ನಿರ್ಲಕ್ಷ್ಯ ಕಂಡುಬಂದಿದೆ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದು ಪರಿಗಣಿಸಿದರೂ, ನಿಗದಿತ ಸಮಯಕ್ಕೆ ಅಧಿಕಾರಿಗಳು ಹಾಜರಾಗದೇ ಜನರ ಕೆಲಸ ವಿಳಂಬವಾಗುತ್ತಿದೆ. ತಡವಾಗಿ ಬರುವ ಸಿಬ್ಬಂದಿ ಮಧ್ಯಾಹ್ನಕ್ಕೂ ಮುನ್ನವೇ ಕಚೇರಿ ತೊರೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಸಿಲಿನ ತೀವ್ರತೆಯನ್ನು ಮನಗಂಡು ಸರ್ಕಾರ ಸಮಯ ಬದಲಾವಣೆ ಮಾಡಿದ್ದರೂ, ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದಾಗಿ ಆರೋಪಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಿಗದಿತ ಸಮಯಕ್ಕೆ ಬಾರದಿದ್ದರೆ ಹಾಜರಾತಿ ಗೈರು 

ಸರ್ಕಾರದ ಆದೇಶದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಿಗ್ಗೆ 8 ಗಂಟೆಗೆ ಸೇವೆಗೆ ಹಾಜರಾಗಲೇಬೇಕು. ಮಧ್ಯಾಹ್ನ 1:30 ರವರೆಗೆ ಕೆಲಸ ಮಾಡಬೇಕು. ಆದರೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಯಾರೊಬ್ಬ ಅಧಿಕಾರಿಗಳು ಆಗಮಿಸುತ್ತಿಲ್ಲ. ಮನಸ್ಸಿಗೆ ಬಂದಂತೆ ಕರ್ತವ್ಯ ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ವಿ ವಿ ಸಾಲೀಮಠ ಇಲಾಖೆಯ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಾತಿ ಪುಸ್ತಕವನ್ನು ತಮ್ಮ ಚೇಂಬರ್​ನಲ್ಲೇ ಇಟ್ಟುಕೊಂಡಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಬಾರದ ಅಧಿಕಾರಿಗಳು, ಸಿಬ್ಬಂದಿ ಹಾಜರಾತಿಯನ್ನು ಗೈರು ಎಂದು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.

ಡಿಸಿ ಕೆ ಆನಂದ್ ಹೇಳಿದ್ದಿಷ್ಟು 

ಇನ್ನು ಈ ವಿಷಯ ಕುರಿತು ಡಿಸಿ ಕೆ ಆನಂದ್​ ಪ್ರತಿಕ್ರಿಯಿಸಿದ್ದು, ಬಿಸಿಲಿನ ಕಾರಣ ಏಪ್ರಿಲ್​ 1 ರಿಂದ ಮೇ ಕೊನೆಯವರೆಗೆ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳ ಸಮಯ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1-30 ರವರೆಗೆ ಮಾಡಲಾಗಿದೆ. ನಿಗದಿತ ಸಮಯಕ್ಕೆ ಅಧಿಕಾರಿಗಳು, ಸಿಬ್ಬಂದಿ ಹಾಜರಾಗಬೇಕು. ಇಲ್ಲವಾದರೆ ಮೊದಲಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಆಗಲೂ ಸರಿಯಾಗಿ ಸೇವೆಗೆ ಹಾಜರಾಗದಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಜಯಪುರ: 21 ವರ್ಷಗಳ ಕಳ್ಳ-ಪೊಲೀಸ್​​ ಆಟಕ್ಕೆ ಬ್ರೇಕ್: ಪೆರೋಲ್ ಮೇಲೆ ಎಸ್ಕೇಪ್ ಆಗಿದ್ದ ಕೈದಿ ಅಂದರ್

ಸದ್ಯ ವಿಜಯಪುರ ಜಿಲ್ಲೆಯ ಸರ್ಕಾರಿ ಕಚೇರಿಗಳ ಅಧಿಕಾರಿಗಳಿಗೆ, ಸಿಬ್ಬಂದಿಗೆ ಒಂದು ರೀತಿಯ ಸಮ್ಮರ್ ವೆಕೇಷನ್ ಎಂಬಂತಾಗಿದೆ. ಬಿಸಿಲಿನ ಕಾರಣ ಕಚೇರಿ ಸಮಯ ಬದಲಾವಣೆಯಾಗಿದ್ದರೂ ಸರಿಯಾಗಿ ಕಚೇರಿಗೆ ಆಗಮಿಸದ ಅಧಿಕಾರಿಗಳು, ಸಿಬ್ಭಂದಿ ಮೇಲೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದರೆ ಸಾರ್ವಜನಿಕರಿಗೆ ಸಮಸ್ಯೆ ಮುಂದುವರೆಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿದ್ದರಾಮಯ್ಯ ಹೆಸರಿನ ಸೇತುವೆ ಉದ್ಘಾಟನೆ: 6 ದಶಕಗಳ ಕನಸು ನನಸು, 30 ಕಿಮೀ ಸುತ್ತಾಟ ಈಗ 3 ಕಿಮೀಗೆ ಇಳಿಕೆ

ಚಿಕ್ಕಮಗಳೂರು, (ಏಪ್ರಿಲ್ 13): ಎನ್‌ಆರ್‌ಪುರ (NR Pura) ಪಟ್ಟಣದ ಹೊರಹೊಲಯದಲ್ಲಿ ನಿರ್ಮಾಣಗೊಂಡಿರುವ ತಮ್ಮದೇ ಹೆಸರಿನ ಸೇತುವೆಯನ್ನು (Siddaramaiah Bridge) ಸಿಎಂ ಸಿದ್ದರಾಮಯ್ಯ (Siddaramaiah) ಇಂದು (ಏಪ್ರಿಲ್ 13) ಉದ್ಘಾಟಿಸಿದ್ದಾರೆ. ಭದ್ರಾ ಹಿನ್ನೀರಿನ ಹಂದೂರು ಬಳಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅರ್ಧ ಕಿಲೋ ಮೀಟರ್ ಉದ್ದದ ಸೇತುವೆ ಇದಾಗಿದ್ದು, ಹತ್ತಾರು ಹಳ್ಳಿ ಗ್ರಾಮಸ್ಥರ 6 ದಶಕಗಳ ಕನಸು ನನಸಾಗಿದೆ. ಈ ಸೇತುವೆ ನಿರ್ಮಾಣದಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವರದಾನವಾಗಿದ್ದು, ಗ್ರಾಮಸ್ಥರು ಪಟ್ಟಣಕ್ಕೆ ಬರಲು ಮೊದಲು 30 ಕಿಮೀ ಸುತ್ತಿ ಬರಬೇಕಿತ್ತು. ಈ ದೂರವನ್ನು ಸೇತುವೆ ಕೇವಲ 3 ಕಿಮೀಗೆ ಇಳಿಸಿದೆ.

ಸೇತುವೆಗೆ ಸಿದ್ದರಾಮಯ್ಯ ಹೆಸರು

504 ಮೀಟರ್ ಉದ್ಧದ ಈ ಸೇತುವೆಗೆ ‘ಸಿದ್ದರಾಮಯ್ಯ’ ಎಂದು ಹೆಸರಿಡಲಾಗಿದೆ. ಸುಮಾರು 38 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುಗೆ 2017 ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಅವರೇ ಈ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಸೇತುವೆಯಿಂದ ಹತ್ತಾರು ಹಳ್ಳಿಗಳಿಗೆ ಜೀವ ಬಂದಂತಾಗಿದೆ.

ಇದನ್ನೂ ನೋಡಿ: ಚಿಕ್ಕಮಗಳೂರು: ಎನ್​ಆರ್ ಪುರದಲ್ಲಿ ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಸೇತುವೆ ಮೇಲೆ ಸಿದ್ದರಾಮಯ್ಯ ಪುತ್ಥಳಿ

ಈ ಸೇತುವೆ ಮೇಲೆ ಎರಡು ಅಡಿಗಳಷ್ಟು ಎತ್ತರದ ಕೃಷ್ಣ ಶಿಲೆಯ ಕಲ್ಲಿನಿಂದ ಸಿದ್ದರಾಮಯ್ಯ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಅಭಿಮಾನಿಗಳು ,MLC ಶ್ರೀನಿವಾಸ್ ಅವರು ಸೇತುವೆ ಮೇಲೆ ಸಿದ್ದರಾಮಯ್ಯ ಅವರ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಗ್ರಾಮ ಪಂಚಾಯತಿಯಿಂದ ಸಿದ್ದರಾಮಯ್ಯ ಸೇತುವೆಗೆ ಹೆಸರು ಮತ್ತು ಪುತ್ಥಳಿಗೆ ಅನುಮತಿ ಪಡೆದಿದ್ದು, ಇಂದು ಸಚಿವ ಕೆ.ಜೆ ಜಾರ್ಜ್ ಸಿದ್ದರಾಮಯ್ಯ ಪುತ್ಥಳಿ ಅನಾವರಣ ಮಾಡಿದ್ದಾರೆ.

30 ಕಿಮೀಟರ್​​ನಿಂದ 3 ಕಿಮೀಗೆ ಇಳಿಕೆ

ಭದ್ರಾ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣದಿಂದ NR ಪುರ ನಗರಕ್ಕೆ ಬರಲು ಅನುಕೂಲವಾಗಿದ್ದು , ಭದ್ರಾ ಹಿನ್ನೀರಿನ ಹಂದೂರು ಬಳಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 58 ಮೀಟರ್ ಉದ್ದದ ಸೇತುವೆ ಇದಾಗಿದೆ. ಹತ್ತಾರು ಹಳ್ಳಿ ಗ್ರಾಮಸ್ಥರು 6 ದಶಕಗಳಿಂದ ಸೇತುವೆಗೆ ಬೇಡಿಕೆ ಇಟ್ಟಿದ್ದರು. ಸೇತುವೆ ನಿರ್ಮಾಣದಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವರದಾನವಾಗಿದೆ. ಗ್ರಾಮಸ್ಥರು ಪಟ್ಟಣಕ್ಕೆ ಬರಲು ಮೊದಲು 30 ಕಿಮೀ ಸುತ್ತಿ ಬರಬೇಕಿತ್ತು. ಈ ದೂರವನ್ನು ಸೇತುವೆ ಕೇವಲ 3 ಕಿಮೀಗೆ ಇಳಿಸಿದೆ.

ಪ್ರವಾಸಿ ತಾಣವಾದ ಸೇತುವೆ

ನೂತನ ಸೇತುವೆ ಈಗ ಸಾವಿರಾರು ಜನರಿಗೆ ಉಪಯೋಗ ಆಗುವ ಜೊತೆಗೆ ಒಂದು ರೀತಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಭದ್ರಾ ನೀರಿನಲ್ಲಿ ನಿರ್ಮಿಸಿರುವುದರಿಂದ ಸುತ್ತಲು ಹಚ್ಚ ಹಸಿರು, ನೀರಿನಿಂದ ಕಂಗೊಳಿಸುತ್ತಿದ್ದು, ಈ ಸೇತುವೆಯನ್ನು ನೋಡಲು ಜಿಲ್ಲೆಯ ವಿವಿಧ ಭಾಗದಿಂದ ಜನರು ಸಂಜೆ ವೇಳೆ ಆಗಮಿಸುತ್ತಿದ್ದಾರೆ. ಸೇತುವೆ ಮೇಲೆ ನಿಂತು ಅದ್ಭುತ ಪ್ರಕೃತಿ ಸೌದರ್ಯವನ್ನು ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಇದಕ್ಕಿದ್ದಂತೆ ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ ಬಿಸಿಸಿಐ

ಐಪಿಎಲ್ 2026 ರಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಪೂರ್ಣ ವೇಳಾಪಟ್ಟಿಯನ್ನು ಕೂಡ ಈಗಾಗಲೇ ಘೋಷಿಸಲಾಗಿದೆ. ಆದಾಗ್ಯೂ, ಲೀಗ್ ಆರಂಭವಾದ ಎರಡು ವಾರಗಳ ಬಳಿಕ ಬಿಸಿಸಿಐ ಇದ್ದಕ್ಕಿದ್ದಂತೆ ವೇಳಾಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಿದೆ. ಅದರಂತೆ ಎರಡು ಪ್ರಮುಖ ಪಂದ್ಯಗಳ ದಿನಾಂಕಗಳು ಮತ್ತು ಸ್ಥಳಗಳನ್ನು ಬದಲಾಯಿಸಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಎರಡು ಪಂದ್ಯಗಳಿಗೆ ಸಂಬಂಧಿಸಿದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

2 ಪಂದ್ಯಗಳ ಸ್ಥಳ ಬದಲು

ಈ ಬಗ್ಗೆ ಏಪ್ರಿಲ್ 13 ರಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಈ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಎರಡು ಪಂದ್ಯಗಳು ನಡೆಯಲಿವೆ. ಆರಂಭಿಕ ವೇಳಾಪಟ್ಟಿಯ ಪ್ರಕಾರ, ಎರಡೂ ತಂಡಗಳ ನಡುವಿನ ಮೊದಲ ಪಂದ್ಯವನ್ನು ಏಪ್ರಿಲ್ 26 ರಂದು ಮಧ್ಯಾಹ್ನ 3:30 ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿಗದಿಪಡಿಸಲಾಗಿತ್ತು. ಆದಾಗ್ಯೂ, ಈ ಪಂದ್ಯವನ್ನು ಈಗ ಅಹಮದಾಬಾದ್ ಬದಲಿಗೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅದೇ ಸಮಯ ಮತ್ತು ದಿನಾಂಕದಂದು ನಡೆಸಲಾಗುವುದು.

ಅದೇ ರೀತಿ, ಎರಡೂ ತಂಡಗಳ ನಡುವಿನ ಎರಡನೇ ಪಂದ್ಯವು ಮೇ 21 ರಂದು ಚೆನ್ನೈನಲ್ಲಿ ನಡೆಯಬೇಕಿತ್ತು. ಈ ಪಂದ್ಯವು ಮೂಲತಃ ಸಂಜೆ 7:30 ಕ್ಕೆ ಆರಂಭವಾಗಬೇಕಿತ್ತು, ಆದರೆ ಈಗ ಚಿದಂಬರಂ ಕ್ರೀಡಾಂಗಣದ ಬದಲಿಗೆ ಅದೇ ದಿನಾಂಕದಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಇದರರ್ಥ ಪಂದ್ಯಗಳ ದಿನಾಂಕಗಳು ಮತ್ತು ಸಮಯಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲವಾದರೂ ಸ್ಥಳಗಳನ್ನು ಮಾತ್ರ ಬದಲಾಯಿಸಲಾಗಿದೆ.

ಸ್ಥಳ ಬದಲಾವಣೆಗೆ ಕಾರಣವೇನು?

ಬಿಸಿಸಿಐ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಚುನಾವಣೆ. ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಏಪ್ರಿಲ್ 26 ರಂದು ಅಹಮದಾಬಾದ್ ಸೇರಿದಂತೆ ಗುಜರಾತ್‌ನ ಹಲವಾರು ಭಾಗಗಳಲ್ಲಿ ಪುರಸಭೆ ಚುನಾವಣೆಗಳು ನಡೆಯಲಿವೆ. ಪರಿಣಾಮವಾಗಿ, ಏಪ್ರಿಲ್ 26 ರಂದು ಅಹಮದಾಬಾದ್‌ನಲ್ಲಿ ಪಂದ್ಯವನ್ನು ನಡೆಸುವುದು ಭದ್ರತಾ ದೃಷ್ಟಿಕೋನದಿಂದ ಸವಾಲಿನದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಮಂಡಳಿಯು ಈ ಬದಲಾವಣೆಯನ್ನು ಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಬಲ್ ಟಿವಿಯಲ್ಲಿ ‘ಜನ ನಾಯಗನ್’ ಸಿನಿಮಾ ಪ್ರಸಾರ ಮಾಡಿದ ವ್ಯಕ್ತಿ ಬಂಧನ

ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿ ದೊಡ್ಡ ವಿವಾದ ಸೃಷ್ಟಿಸಿದೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಸ್ಥಳೀಯ ಕೇಬಲ್ ಟಿವಿ (Cable Tv) ಆಪರೇಟರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಂಬತ್ತೂರು ಜಿಲ್ಲೆಯ ಕರುಮತ್ತಂಪಟ್ಟಿ ನಿವಾಸಿ ಎಸ್. ಪಳನಿಸ್ವಾಮಿ ಎಂಬಾತ ಬಂಧಿತ ಆರೋಪಿ. ಈತ ಆ ಭಾಗದಲ್ಲಿ ‘ರಾಶಿ ಕೇಬಲ್ ಟಿವಿ’ ಎಂಬ ಚಾನೆಲ್ ನಡೆಸುತ್ತಿದ್ದಾನೆ.

ಏಪ್ರಿಲ್ 11ರಂದು ರಾತ್ರಿ ಪಳನಿಸ್ವಾಮಿ ಒಡೆತನದ ‘ರಾಶಿ ಪ್ರೈಮ್ ಮೂವೀಸ್’ ಎಂಬ ಸ್ಥಳೀಯ ಚಾನೆಲ್‌ನಲ್ಲಿ ಲೀಕ್ ಆದ ‘ಜನ ನಾಯಗನ್’ ಸಿನಿಮಾವನ್ನು ಪ್ರಸಾರ ಮಾಡಲಾಗಿತ್ತು. ವರದಿಗಳ ಪ್ರಕಾರ, ಚಿತ್ರದ ವಿರಾಮದ ನಂತರ ಸುಮಾರು 21 ನಿಮಿಷಗಳ ಕಾಲ ಸಿನಿಮಾವನ್ನು ಕಾನೂನುಬಾಹಿರವಾಗಿ ಪ್ರಸಾರ ಮಾಡಲಾಗಿದೆ. ಇದನ್ನು ಗಮನಿಸಿದ ವಿಜಯ್ ಅವರ ಪಕ್ಷದ ಪದಾಧಿಕಾರಿ ಮೋಹನಪ್ರಿಯಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಾಗುತ್ತಿದ್ದಂತೆಯೇ ಕರುಮತ್ತಂಪಟ್ಟಿ ಪೊಲೀಸರು ಕೇಬಲ್ ಟಿವಿ ಕಚೇರಿಗೆ ಧಾವಿಸಿ ಪ್ರಸಾರವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶಿಸಿದರು. ಅಲ್ಲದೇ, ತಲೆಮರೆಸಿಕೊಂಡಿದ್ದ ಪಳನಿಸ್ವಾಮಿಯನ್ನು ಸೋಮವಾರ (ಏಪ್ರಿಲ್ 13) ಪೊಲೀಸರು ಬಂಧಿಸಿದ್ದಾರೆ. ಆತನಿಂದ 4 ಹಾರ್ಡ್ ಡಿಸ್ಕ್‌ಗಳು ಮತ್ತು 1 ಪರ್ಸನಲ್ ಕಂಪ್ಯೂಟರ್ ವಶಕ್ಕೆ ಪಡೆಯಲಾಗಿದೆ.

ಆರೋಪಿಯ ವಿರುದ್ಧ ಕಾಪಿರೈಟ್ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಸಿನಿಮಾಟೋಗ್ರಾಫ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ‘ಜನ ನಾಯಗನ್ ಸಿನಿಮಾದ ಪೈರಸಿ ಕಾಪಿ ಈತನಿಗೆ ಎಲ್ಲಿಂದ ಸಿಕ್ಕಿತು ಎಂಬ ಬಗ್ಗೆ ನಾವು ಆಳವಾದ ತನಿಖೆ ನಡೆಸುತ್ತಿದ್ದೇವೆ’ ಎಂದು ಡಿಎಸ್‌ಪಿ ಕರಿಕಾಳ ಪರಿ ಶಂಕರ್ ತಿಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಇದಲ್ಲದೇ, ಸೈಬರ್ ಪೊಲೀಸರು ಪೈರಸಿ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದ್ದು, 6 ಜನರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಲೀಕ್ ಬೆನ್ನಲ್ಲೇ ಕಠಿಣ ಕ್ರಮ: ಸೈಬರ್ ಕ್ರೈಂ ಪೊಲೀಸರಿಂದ 6 ಜನರ ಬಂಧನ

‘ಜನ ನಾಯಗನ್’ ಚಿತ್ರವು ವಿಜಯ್ ಅವರ ರಾಜಕೀಯ ಜೀವನದ ದೃಷ್ಟಿಯಿಂದ ಅತ್ಯಂತ ಪ್ರಮುಖ ಚಿತ್ರವಾಗಿದ್ದು, ನೂರಾರು ಕೋಟಿ ಹೂಡಿಕೆ ಮಾಡಲಾಗಿದೆ. ಈ ರೀತಿ ಸಿನಿಮಾ ಲೀಕ್ ಮಾಡಿ ಪ್ರಸಾರ ಮಾಡುವುದು ಚಿತ್ರೋದ್ಯಮಕ್ಕೆ ದೊಡ್ಡ ನಷ್ಟ ಉಂಟುಮಾಡುತ್ತದೆ ಎಂದು ಚಿತ್ರತಂಡ ಆತಂಕ ವ್ಯಕ್ತಪಡಿಸಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಪಿಎಲ್ ವೃತ್ತಿಜೀವನದ ಮೊದಲ ಗೋಲ್ಡನ್ ಡಕ್; ಅನಗತ್ಯ ದಾಖಲೆ ಬರೆದ ಅಭಿಷೇಕ್

2026 ರ ವರ್ಷ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾಗೆ ಏರಿಳಿತಗಳಿಗಳಿಂದ ಕೂಡಿದೆ. ವರ್ಷ ಪ್ರಾರಂಭವಾಗುವ ಮೊದಲು ಸುಮಾರು 20 ತಿಂಗಳುಗಳ ಕಾಲ ನಿರಂತರವಾಗಿ ಸ್ಫೋಟಕ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾಗೆ ಇದೀಗ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನದಿಂದ ಬಳಲಿದ್ದ ಅಭಿಷೇಕ್ ಪ್ರಸ್ತುತ ಐಪಿಎಲ್​ನಲ್ಲೂ ಅದೇ ಸಮಸ್ಯೆಗೀಡಾಗಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಅಭಿಷೇಕ್ ಶಮಅರ್ ಶೂನ್ಯಕ್ಕೆ ಅತಿ ಹೆಚ್ಚು ಬಾರಿ ಔಟ್ ಆದ ದಾಖಲೆಯನ್ನು ಮುರಿದಿದ್ದಾರೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಅನಗತ್ಯ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾದ ಅಭಿಷೇಕ್ ಸತತ ಒಂಬತ್ತನೇ ಐಪಿಎಲ್ ಸೀಸನ್​ನಲ್ಲಿ ಐದನೇ ಬಾರಿಗೆ ಡಕ್‌ಗೆ ಔಟಾದರು. 79 ಇನ್ನಿಂಗ್ಸ್‌ಗಳ ಐಪಿಎಲ್ ವೃತ್ತಿಜೀವನದಲ್ಲಿ ಅಭಿಷೇಕ್ ಗೋಲ್ಡನ್ ಡಕ್‌ಗೆ ಔಟಾಗಿದ್ದು ಇದೇ ಮೊದಲು. ಈ ಆವೃತ್ತಿಯಲ್ಲಿ ಅಭಿಷೇಕ್ ಎರಡನೇ ಬಾರಿಗೆ ಡಕ್ ಆಗಿದ್ದಾರೆ. ಆದರೆ ಹಿಂದಿನ ಬಾರಿ ಎರಡು ಎಸೆತಗಳನ್ನು ಆಡಿ ಶೂನ್ಯಕ್ಕೆ ಔಟಾಗಿದ್ದರು.

ಇಷ್ಟೇ ಅಲ್ಲ, ಅಭಿಷೇಕ್ ಕೇವಲ 3 ಮತ್ತು ಅರ್ಧ ತಿಂಗಳಲ್ಲಿ ಸಂಜು ಸ್ಯಾಮ್ಸನ್ ಮತ್ತು ರೋಹಿತ್ ಶರ್ಮಾ ಅವರ ಅನಗತ್ಯ ದಾಖಲೆಯನ್ನು ಮುರಿದಿದ್ದಾರೆ. ಈ ವರ್ಷ ಅಭಿಷೇಕ್ ಟಿ20 ಕ್ರಿಕೆಟ್‌ನಲ್ಲಿ 7 ನೇ ಬಾರಿ ಡಕ್ ಔಟ್ ಆಗಿದ್ದಾರೆ. 2026 ರಲ್ಲಿ ಅಭಿಷೇಕ್ ಒಟ್ಟು 18 ಟಿ20 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಇದರಲ್ಲಿ 5 ಅರ್ಧಶತಕಗಳನ್ನು ಬಾರಿಸಿದರೆ, ಏಳು ಬಾರಿ ಶೂನ್ಯಕ್ಕೆ ಔಟಾದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಟಿ20 ಯಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಬ್ಯಾಟರ್ ಎಂಬ ಬೇಡದ ದಾಖಲೆ ಅಭಿಷೇಕ್ ಪಾಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನಸಿನ ಸಂಸಾರಕ್ಕೆ ಜಾತಿ ಅಡ್ಡಿ: ಊರು ಬಿಟ್ಟು ಹುಬ್ಬಳ್ಳಿಗೆ ಹಾರಿಬಂದ ಒಂದೇ ಬಡಾವಣೆಯ ಜೋಡಿ ಹಕ್ಕಿ

ಹುಬ್ಬಳ್ಳಿ, ಏಪ್ರಿಲ್​ 13: ಅವರಿಬ್ಬರು ಒಂದೇ ಬಡಾವಣೆಯವರು. ಹೀಗಾಗಿ ಇಬ್ಬರು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರು, ಅವರ ಪ್ರೀತಿಗೆ ಜಾತಿ ಅಡ್ಡಿಯಾಗಿರಲಿಲ್ಲ. ಮದುವೆಯಾಗಿ ಸುಂದರ ಸಂಸಾರ ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಆದರೆ ಅಂತರ್ಜಾತಿ ವಿವಾಹಕ್ಕೆ (Inter-Caste Love) ಯುವತಿ ಹೆತ್ತವರು ವಿರೋಧ ವ್ಯಕ್ತಪಡಿಸಿದ್ದು, ಹೀಗಾಗಿ ತಮಗೆ ರಕ್ಷಣೆಬೇಕು ಅಂತ ಪ್ರೇಮಿಗಳು ಕೊಪ್ಪಳದಿಂದ ಹುಬ್ಬಳ್ಳಿಗೆ (hubballi) ಓಡಿ ಬಂದಿದ್ದಾರೆ.

ಪ್ರೀತಿಗೆ ಹೆತ್ತವರ ವಿರೋಧ

ನಾಗರಾಜ್ ಮತ್ತು ಶೈಲಜಾ ಕೊಪ್ಪಳ ನಗರದ ಮಿಟ್ಟಿಗೇರಿ ಬಡಾವಣೆ ನಿವಾಸಿಗಳು. ಕಳೆದ ರಾತ್ರಿ ಬಸ್ ಹತ್ತಿಕೊಂಡು ಹುಬ್ಬಳ್ಳಿಗೆ ಬಂದಿರುವ ಜೋಡಿ, ಮುಂದೆ ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಅನ್ನೋದು ತಿಳಿಯದೇ ಕಂಗಾಲಾಗಿದ್ದಾರೆ. ಮರಳಿ ಕೊಪ್ಪಳಕ್ಕೆ ಹೋದರೆ ಜೀವ ಭಯ, ಹೀಗಾಗಿ ಹುಬ್ಬಳ್ಳಿಯಲ್ಲಿಯೇ ಅಡ್ಡಾಡುತ್ತಿದ್ದಾರೆ. ಇನ್ನು ಈ ಜೋಡಿ ಕೊಪ್ಪಳದಿಂದ ಹುಬ್ಬಳ್ಳಿಗೆ ಬರಲು ಕಾರಣ ಇವರ ಪ್ರೀತಿಗೆ ಹೆತ್ತವರ ವಿರೋಧ.

ಇದನ್ನೂ ಓದಿ: ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಆರೋಪಿ ಮುಸ್ತಾಫಾಗೆ ಅಂತರಾಜ್ಯ ಮಟ್ಕಾ ಬುಕ್ಕಿಗಳ ಲಿಂಕ್

ಕೊಪ್ಪಳ ನಗರದ ಮಿಟ್ಟಿಗೇರಿಯ ನಿವಾಸಿಯಾಗಿರುವ ನಾಗರಾಜ್ ಹಡಪದ ಮತ್ತು ಶೈಲಜಾ ವಾಲೀಕಾರ ಒಂದೇ ಬಡಾವಣೆ ನಿವಾಸಿಗಳು. ನಾಗರಾಜ್, ಕಟ್ಟಡ ನಿರ್ಮಾಣ ಕೆಲಸ ಮಾಡಿದರೆ, ಶೈಲಜಾ ಪಿಯುಸಿ ನಂತರ ಮನೆಯಲ್ಲಿಯೇ ಇದ್ದಾಳಂತೆ. ಇನ್ನು ಇಬ್ಬರು ಒಂದೇ ಬಡಾವಣೆಯಲ್ಲಿಯೇ ಮನೆ ಇದ್ದಿದ್ದರಿಂದ ಇಬ್ಬರ ನಡುವೆ ಎಂಟು ವರ್ಷಗಳ ಹಿಂದೆಯೇ ಪ್ರೀತಿಯಾಗಿತ್ತಂತೆ. ಆದರೆ ಕಳೆದ ಒಂದುವರೆ ವರ್ಷದಿಂದ  ಬಿಟ್ಟಿರಲಾರದಷ್ಟು ಪ್ರೀತಿ ಗಾಢವಾಗಿದೆ. ಹೀಗಾಗಿ ಇಬ್ಬರು ಮದುವೆಯಾಗಿ ಒಟ್ಟಿಗೆ ಬದುಕು ಕಟ್ಟಿಕೊಳ್ಳಬೇಕು ಅಂತ ಕನಸು ಕಂಡಿದ್ದಾರೆ. ಆದರೆ ಐದು ತಿಂಗಳ ಹಿಂದೆ ಯುವತಿ ಮನೆಯವರಿಗೆ ಪ್ರೀತಿ ವಿಚಾರ ಗೊತ್ತಾಗಿದ್ದು, ನಾಗರಾಜ್​​ನನ್ನು ಮಾತನಾಡುವುದಾಗಿ ಕರೆದು ಥಳಿಸಿದ್ದರಂತೆ.

ಊರು ಬಿಟ್ಟು ಓಡಿಬಂದ ಪ್ರೇಮಿಗಳು 

ನಮ್ಮ ಯುವತಿ ತಂಟೆಗೆ ಬಂದರೆ ಜೀವ ಸಮೇತ ಉಳಿಸಲ್ಲ ಅಂತ ಬೆದರಿಕೆ ಹಾಕಿದ್ದರಂತೆ. ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದ ನಾಗರಾಜ್​​ಗೆ​​ ಕಳೆದ ರಾತ್ರಿ ಕರೆ ಮಾಡಿದ ಶೈಲಜಾ, ಮದುವೆಯಾದರೆ ನಿನ್ನ ಜೊತೆಯೇ. ನಾವು ಊರು ಬಿಟ್ಟು ಓಡಿ ಹೋಗೋಣ ಅಂತ ಹೇಳಿ, ನಾಗರಾಜ್​ನನ್ನು ಕರೆದುಕೊಂಡು ಹುಬ್ಬಳ್ಳಿಗೆ ಬಂದಿದ್ದಾಳೆ.

ಇನ್ನು ನಾಗರಾಜ್ ಮನಯಲ್ಲಿ ಶೈಲಜಾ ಜೊತೆ ವಿವಾಹಕ್ಕೆ ಒಪ್ಪಿಗೆ ಇದೆ. ಆದರೆ ಶೈಲಜಾ ಮನೆಯಲ್ಲಿ ಮಾತ್ರ ವಿವಾಹಕ್ಕೆ ಒಪ್ಪಿಗೆ ಇಲ್ಲ. ಇದಕ್ಕೆ ಕಾರಣ ಅಂತರ್ಜಾತಿ. ನಾಗರಾಜ್​​ ಹಡಪದ ಸಮುದಾಯದವರಾಗಿದ್ದರೆ, ಶೈಲಜಾ ಗೊಲ್ಲ ಸಮುದಾಯಕ್ಕೆ ಸೇರಿದ್ದಾಳೆ. ಹೀಗಾಗಿ ಜಾತಿ ಬೇರೆ ಬೇರೆಯಾಗಿದ್ದು, ಯಾವುದೇ ಕಾರಣಕ್ಕೂ ಮದುವೆಗೆ ಒಪ್ಪಿಗೆಯಿಲ್ಲ ಅಂತ ಶೈಲಜಾ ಕುಟುಂಬ ಪಟ್ಟುಹಿಡಿದಿದೆ.

ನಮ್ಮ ಪಾಡಿಗೆ ಇರಲು ಬಿಡಿ: ಹೆತ್ತವರಿಗೆ ಮನವಿ

ಇನ್ನು ಶೈಲಜಾಗೆ ಬೇರೆ ಯುವಕನ ಜೊತೆ ವಿವಾಹಕ್ಕೆ ಹೆತ್ತವರು ಮುಂದಾಗಿದ್ದರಂತೆ. ಅದಕ್ಕಾಗಿ ಹುಡುಗನ ಹುಟುಕಾಟ ಕೂಡ ನಡೆಸಿದ್ದರಂತೆ. ಬೇರೆ ಯುವಕನ ಜೊತೆ ವಿವಾಹಕ್ಕೆ ಇಷ್ಟ ಇಲ್ಲದೇ ಇದ್ದಿದ್ದರಿಂದ, ಶೈಲಜಾ, ನಾಗರಾಜ್ ಜೊತೆ ಓಡಿ ಬಂದಿದ್ದಾಳೆ. ನಾವು ನಮ್ಮ ಜೀವನ ಕಟ್ಟಿಕೊಳ್ಳುತ್ತೇವೆ. ದಯವಿಟ್ಟು ನಮಗೆ ಅಡ್ಡಿ ಮಾಡಬೇಡಿ, ನಮ್ಮ ಪಾಡಿಗೆ ಇರಲು ಬಿಡಿ ಅಂತ ಶೈಲಜಾ ಹೆತ್ತವರಿಗೆ ಮನವಿ ಮಾಡಿದ್ದಾಳೆ.

ಇದನ್ನೂ ಓದಿ: ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದೂರು ನೀಡಿದ ಯುವತಿ; ಮುಸ್ತಫಾ ವಿರುದ್ಧವೂ ಕೇಸ್​​!

ಇನ್ನು ಈ ಬಗ್ಗೆ ಈ ಹಿಂದೆ ಕೊಪ್ಪಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲವಂತೆ. ಹೀಗಾಗಿ ಪ್ರೇಮಿಗಳು ದಿಕ್ಕು ತೋಚದಂತಾಗಿ, ಕೊಪ್ಪಳದಿಂದ ಹುಬ್ಬಳ್ಳಿಗೆ ಬಂದಿದ್ದಾರೆ. ಇಬ್ಬರು ಪ್ರಾಪ್ತ ವಯಸ್ಕರರು ಆಗಿದ್ದರಿಂದ ಪೊಲೀಸರು ಅಂತರ್ಜಾತಿ ವಿವಾಹವಾಗಲು ಮುಂದಾಗಿರುವ ಜೋಡಿಗೆ ಸೂಕ್ತ ರಕ್ಷಣೆ ನೀಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರತಿ ಇಬ್ಬರು ಉದ್ಯೋಗಿಗಳಲ್ಲಿ ಒಬ್ಬರಿಗೆ ಮಧುಮೇಹದ ಅಪಾಯ! ಸಮೀಕ್ಷೆಯಲ್ಲಿ ಆತಂಕಕಾರಿ ಅಂಶ ಬಹಿರಂಗ

ಭಾರತದಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇತ್ತೀಚೆಗೆ ಅಪೊಲೊ ಆಸ್ಪತ್ರೆ ಬಿಡುಗಡೆ ಮಾಡಿದ ‘ಹೆಲ್ತ್ ಆಫ್ ದ ನೇಶನ್ (HoN) 2026’ ವರದಿ ಪ್ರಕಾರ, ದೇಶದಲ್ಲಿ ಪ್ರತೀ 10 ಉದ್ಯೋಗಿಗಳಲ್ಲಿ ಸುಮಾರು 5 ಜನರು ಪ್ರೀಡಯಾಬಿಟೀಸ್ ಅಥವಾ ಡಯಾಬಿಟೀಸ್ (Diabetes) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಭವಿಷ್ಯದಲ್ಲಿ ದೊಡ್ಡ ಆರೋಗ್ಯ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಇದು ಒಂದು ರೀತಿಯ ಸೈಲೆಂಟ್ ಕಾಯಿಲೆಯಾದ್ದರಿಂದ ಹಲವರಿಗೆ ತಮ್ಮ ಶುಗರ್ ಮಟ್ಟ ಹೆಚ್ಚಾಗಿರುವುದೇ ತಿಳಿಯುವುದಿಲ್ಲ. ಆರಂಭಿಕ ಲಕ್ಷಣಗಳು ಬಹಳ ಸೂಕ್ಷ್ಮವಾಗಿರುವುದರಿಂದ ಇದನ್ನು ನಿರ್ಲಕ್ಷಿಸುವ ಪ್ರವೃತ್ತಿ ಹೆಚ್ಚಾಗಿದೆ. ದೀರ್ಘಕಾಲ ಇದನ್ನು ಗಮನಿಸದಿದ್ದರೆ ಹೃದಯ, ಮೂತ್ರಪಿಂಡ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ಈ ರೀತಿಯ ಸಮಸ್ಯೆಗಳನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜೀವನಶೈಲಿ ಮುಖ್ಯ ಕಾರಣ:

ಪ್ರತಿನಿತ್ಯ ಕೆಲಸಕ್ಕೆ ಹೋಗುವವರ ಜೀವನದಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡುವುದು, ವ್ಯಾಯಾಮದ ಕೊರತೆ ಮತ್ತು ಜಂಕ್ ಫುಡ್ ಸೇವನೆ ಪ್ರಮುಖ ಕಾರಣಗಳಾಗಿವೆ. ಅಧಿಕ ಸ್ಕ್ರೀನ್ ಟೈಮ್, ಒತ್ತಡ ಮತ್ತು ಅಸ್ಥಿರ ಆಹಾರ ಪದ್ಧತಿ ದೇಹದ ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಇದರಿಂದ ಶುಗರ್ ನಿಯಂತ್ರಣ ಕಷ್ಟವಾಗುತ್ತದೆ. ವರದಿ ಪ್ರಕಾರ, ಮಧುಮೇಹದ ಜೊತೆಗೆ ಹೈ ಬಿಪಿ, ಅತಿಯಾದ ತೂಕ ಮತ್ತು ವಿಟಮಿನ್ ಕೊರತೆಗಳೂ ಹೆಚ್ಚುತ್ತಿವೆ. ಹೆಚ್ಚಿದ ತೂಕ ಇನ್ಸುಲಿನ್ ರೆಸಿಸ್ಟೆನ್ಸ್ ಹೆಚ್ಚಿಸಿ ಶುಗರ್ ನಿಯಂತ್ರಣವನ್ನು ಕಷ್ಟವಾಗಿಸುತ್ತದೆ. ವಿಟಮಿನ್ D ಮತ್ತು B12 ಕೊರತೆ ದೇಹದ ಕಾರ್ಯವಿಧಾನವನ್ನು ಹಾಳುಮಾಡುತ್ತದೆ.

ಇದನ್ನೂ ಓದಿ: ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ

ತಡೆಗಟ್ಟಲು ಏನು ಮಾಡಬೇಕು?

ತಜ್ಞರ ಪ್ರಕಾರ, ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದು, ಸಮತೋಲನ ಆಹಾರ ಸೇವಿಸುವುದು ಮತ್ತು ಸಿಹಿ ಹಾಗೂ ಪ್ರೊಸೆಸ್ಡ್ ಆಹಾರಗಳಿಂದ ದೂರವಿರುವುದು ಅತ್ಯಗತ್ಯ. ಸರಿಯಾಗಿ ನಿದ್ರೆ ಮತ್ತು ಒತ್ತಡ ನಿಯಂತ್ರಣವೂ ಮುಖ್ಯ. ನಿಯಮಿತ ಆರೋಗ್ಯ ತಪಾಸಣೆ ಮೂಲಕ ಶುಗರ್ ಮತ್ತು ಬಿಪಿ ಮಟ್ಟವನ್ನು ಪರಿಶೀಲಿಸುವುದು ಉತ್ತಮ. ಏಕೆಂದರೆ ಮಧುಮೇಹವು ಈಗ ವಯೋವೃದ್ಧರಲ್ಲಿ ಮಾತ್ರವಲ್ಲದೆ, ಯುವ ಉದ್ಯೋಗಿಗಳಲ್ಲೂ ವೇಗವಾಗಿ ಹೆಚ್ಚುತ್ತಿದೆ. ಸರಿಯಾದ ಸಮಯದಲ್ಲಿ ಜೀವನಶೈಲಿ ಬದಲಾವಣೆ ಮಾಡಿಕೊಂಡರೆ ಈ ಅಪಾಯವನ್ನು ಕಡಿಮೆ ಮಾಡಬಹುದು. ಆರೋಗ್ಯಕರ ಅಭ್ಯಾಸಗಳೇ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾರಿನ ಕೆಳಗೆ ಬಿದ್ದಿತ್ತು 4 ವರ್ಷದ ಬಾಲಕಿಯ ಶವ; ಚಿಕ್ಕಪ್ಪನಿಂದಲೇ ನಡೆಯಿತಾ ಅತ್ಯಾಚಾರ?

ಗಾಜಿಯಾಬಾದ್, ಏಪ್ರಿಲ್ 13: ಗಾಜಿಯಾಬಾದ್‌ನ ಶಾಲಿಮಾರ್ ಗಾರ್ಡನ್‌ನಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗೆ 4 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಇದಕ್ಕೂ ಮೊದಲು ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಈ ಅಪರಾಧದ ತನಿಖೆ ನಡೆಸುತ್ತಿದ್ದ ಪೊಲೀಸರು ಆಕೆಯ ಚಿಕ್ಕಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಅವರೇ ಈ ಘಟನೆಯ ಹಿಂದೆ ಇದ್ದಾರೆ ಎಂದು ಹೇಳಲಾಗಿದೆ. ತಾನೇ ತನ್ನ ಅಣ್ಣನ ಮಗುವನ್ನು ಕೊಂದು ಅಮಾಯಕರಂತೆ ವರ್ತಿಸುತ್ತಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಬಂದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಏಪ್ರಿಲ್ 11ರಂದು ರಾತ್ರಿ 8 ಗಂಟೆ ಸುಮಾರಿಗೆ 80 ಅಡಿ ರಸ್ತೆಯಲ್ಲಿ ಕಾರಿನ ಕೆಳಗೆ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ವಶಕ್ಕೆ ಪಡೆದ ನಂತರ ಈ ಘಟನೆಯ ತನಿಖೆ ಆರಂಭಿಸಲಾಯಿತು. ತನಿಖೆಯ ಸಮಯದಲ್ಲಿ ಈ ಘಟನೆಯ ಹಿಂದೆ ಮಗುವಿನ ಚಿಕ್ಕಪ್ಪ ಜಮೀಲ್ ಅಲಿಯಾಸ್ ಛೋಟು ಅವರ ಕೈವಾಡವಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಲಕಿ ಮೇಲೆ ಬಿಹಾರದ ಯುವಕನಿಂದ ಅತ್ಯಾಚಾರ, ದುಡಿಯಲು ಬಂದವನಿಂದ ನೀಚ ಕೃತ್ಯ

ಆರೋಪಿಯು ಒಂಟಿಯಾಗಿದ್ದ ಮಗುವನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮಗು ಮನೆಯಲ್ಲಿ ಒಂಟಿಯಾಗಿ ಇದ್ದುದರಿಂದ ಆರೋಪಿಯು ಪರಿಸ್ಥಿತಿಯ ಲಾಭ ಪಡೆದು ಅವಳನ್ನು ತನ್ನ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಾದ ಸ್ವಲ್ಪ ಸಮಯದ ಬಳಿಕ ಆ ಹುಡುಗಿಯ ಶವವು ಕಾರಿನ ಅಡಿಯಲ್ಲಿ ಪತ್ತೆಯಾಗಿದೆ. ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ನಂತರ ಆಕೆಯ ಕೊಲೆಗೂ ಮೊದಲು ಅತ್ಯಾಚಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಕೆಯ ಕುತ್ತಿಗೆ ಮತ್ತು ಗುಪ್ತಾಂಗಗಳಲ್ಲಿ ಗಾಯದ ಗುರುತುಗಳಿವೆ. ತಪ್ಪಿಸಿಕೊಂಡಿರುವ ಆರೋಪಿಯನ್ನು ಹಿಡಿಯಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಹ್ಯಾಟ್ರಿಕ್ ಸೋಲಿನ ನೋವಿನಲ್ಲಿದ್ದ ಹಾರ್ದಿಕ್​ ಪಾಂಡ್ಯಗೆ ಮತ್ತೊಂದು ಆಘಾತ

Source link