ರನ್ ವೇಯಿಂದ ಹಾರಿದ ಕೆಲವೇ ಕ್ಷಣದಲ್ಲಿ ಯುಎಸ್ ಬಾಂಬರ್ ವಿಮಾನ ಪತನ: ಎಂಟು ಮಂದಿ ಸಾವು – Kannada News | Deadly B 52 Crash at California Air Base Claims Eight Lives, Spotlight Turns to Iconic Bomber
ಕ್ಯಾಲಿಫೋರ್ನಿಯಾ, ಜೂನ್ 16: ಅಮೆರಿಕದ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿರುವ ಎಡ್ವರ್ಡ್ಸ್ ವಾಯುಪಡೆ ನೆಲೆಯಲ್ಲಿ ಭೀಕರ ವಿಮಾನ ಅಪಘಾತ(Plane Crash)ವೊಂದು ಸಂಭವಿಸಿದೆ. ಯುಎಸ್ ವಾಯುಪಡೆಗೆ ಸೇರಿದ ಪ್ರಸಿದ್ಧ ‘ಬಿ-52 ಸ್ಟ್ರಾಟೊಫೋರ್ಟ್ರೆಸ್’ (B-52 Stratofortress) ಬಾಂಬರ್ ವಿಮಾನವು ರನ್‌ವೇಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಂಟೂ ಜನ ಸಾವನ್ನಪ್ಪಿದ್ದಾರೆ. ವಿಮಾನವು ಪತನಗೊಂಡ ತಕ್ಷಣ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದರಿಂದ ವಿಮಾನ ಸಂಪೂರ್ಣವಾಗಿ ನಾಶವಾಗಿದೆ. ವಿಮಾನದಲ್ಲಿದ್ದ ಮಿಲಿಟರಿ ಸಿಬ್ಬಂದಿ ಮತ್ತು ಸರ್ಕಾರಿ ಗುತ್ತಿಗೆದಾರರು ಸೇರಿದಂತೆ ಎಂಟು ಮಂದಿಯೂ ಸಾವನ್ನಪ್ಪಿದ್ದಾರೆ ಎಂದು…