ಸಿಗ್ನಲಿಂಗ್ ಸುಧಾರಣೆ, ಪ್ಲಾಟ್‌ಫಾರ್ಮ್ ವಿಸ್ತರಣೆ ಕಾಮಗಾರಿ ಹಿನ್ನೆಲೆ KSR ಬೆಂಗಳೂರು ನಿಲ್ದಾಣದಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ – Kannada News | KSR Bengaluru Faces Major Train Disruptions Amid Signalling and Platform Upgrade Works
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣImage Credit source: deccanherald.com ಬೆಂಗಳೂರು, ಜೂನ್ 16: ಯಾರ್ಡ್ ಮರು ವಿನ್ಯಾಸ (Yard Remodelling) ಹಾಗೂ ಸುರಕ್ಷತಾ ಸುಧಾರಣಾ ಕಾಮಗಾರಿಗಳು ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಮುಂದಿನ ಕೆಲವು ದಿನ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಕಾಮಗಾರಿಗಳ ಹಿನ್ನೆಲೆ 58 ರೈಲುಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದ್ದು, 116 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ನಾಲ್ಕು ರೈಲುಗಳ ಸಂಚಾರವನ್ನು ಭಾಗಶಃ ವಿಸ್ತರಿಸಲಾಗಿದ್ದು, 26 ರೈಲುಗಳ ಮಾರ್ಗ…