All posts by nagaraj11081993

RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 11ನೇ ಪಂದ್ಯದಲ್ಲಿ ಆರ್​ಸಿಬಿ ಅಭಿಮಾನಿಗಳು ಯಾವ ಫಲಿತಾಂಶವನ್ನು ನಿರೀಕ್ಷಿಸಿದ್ದರೋ ಅದೇ ಫಲಿತಾಂಶ ಹೊರಬಿದ್ದಿದೆ. ಹೈವೋಲ್ಟೇಜ್ ಕದನದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದ್ದ ಹಾಲಿ ಚಾಂಪಿಯನ್ ಆರ್​ಸಿಬಿ, 43 ರನ್​ಗಳ ಭಾರಿ ಅಂತರದ ಗೆಲುವು ದಾಖಲಿಸಿತು. ಪಂದ್ಯದ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಸಿಎಸ್​ಕೆ ಮೇಲುಗೈ ಸಾಧಿಸದಂತೆ ನೋಡಿಕೊಂಡ ಆರ್​ಸಿಬಿ, ಸಿಎಸ್​ಕೆ ತಂಡಕ್ಕೆ ಹ್ಯಾಟ್ರಿಕ್ ಸೋಲಿನ ಆಘಾತ ನೀಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ 250 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ 207 ರನ್​ ಕಲೆಹಾಕಲಷ್ಟೇ ಶಕ್ತವಾಗಿ ಹೀನಾಯ ಸೋಲು ಅನುಭವಿಸಿತು.

Source link

IPL 2026: ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಭುವಿ; ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗಿ

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ ಇತಿಹಾಸಿಕ ಮೈಲಿಗಲ್ಲು ದಾಟಿದ್ದಾರೆ. ಐಪಿಎಲ್‌ನಲ್ಲಿ 200 ವಿಕೆಟ್‌ಗಳ ಗಡಿ ದಾಟಿರುವ ಭುವನೇಶ್ವರ್ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಅವರಿಗೂ ಮೊದಲು, ಐಪಿಎಲ್ ಇತಿಹಾಸದಲ್ಲಿ ಯಾವುದೇ ವೇಗದ ಬೌಲರ್ 200 ವಿಕೆಟ್‌ಗಳನ್ನು ಪಡೆದಿರಲಿಲ್ಲ. ಇದೀಗ ಆ ದಾಖಲೆ ಭುವಿ ಪಾಲಾಗಿದೆ. ಇದರ ಜೊತೆಗೆ ಐಪಿಎಲ್‌ನಲ್ಲಿ ವಿಕೆಟ್‌ಗಳ ದ್ವಿಶತಕ ಪೂರೈಸಿದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೂ ಭುವಿ ಪಾತ್ರರಾಗಿದ್ದಾರೆ.

ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ ತಮ್ಮ ಮೊದಲ ಓವರ್‌ನಲ್ಲಿಯೇ ಆಯುಷ್ ಮ್ಹಾತ್ರೆ ಅವರ ವಿಕೆಟ್ ಉರುಳಿಸುವ ಮೂಲಕ ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಈ ಮೂಲಕ ಐಪಿಎಲ್‌ನಲ್ಲಿ 200 ಕ್ಕೂ ಅಧಿಕ ವಿಕೆಟ್ ಉರುಳಿಸಿದ ಬೌಲರ್​ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ 224 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭುವಿ ಈಗ 200 ವಿಕೆಟ್‌ಗಳೊಂದಿಗೆ ಈ ಕ್ಲಬ್‌ಗೆ ಸೇರಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs CSK Turning Point: ಟಿಮ್ ಡೇವಿಡ್​ಗೆ ಜೀವದಾನ ನೀಡಿ ಕೆಟ್ಟ ಸಿಎಸ್​ಕೆ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಆರ್​ಸಿಬಿ ತಂಡದ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 70 ರನ್ ಬಾರಿಸಿದರು. ಇವರ ಈ ಅಬ್ಬರದ ಬ್ಯಾಟಿಂಗ್​ನಿಂದ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಬರೋಬ್ಬರಿ 250 ರನ್ ಕಲೆಹಾಕಿತು. ಮಾತ್ರವಲ್ಲದೆ ತಂಡ ಕೊನೆಯ 5 ಓವರ್​ಗಳಲ್ಲಿ 90 ಕ್ಕೂ ಅಧಿಕ ರನ್ ಪೇರಿಸಿತು.

ವಾಸ್ತವವಾಗಿ ಟಿಮ್ ಡೇವಿಡ್ ಕೇವಲ 26 ರನ್ ಕಲೆಹಾಕಿದ್ದಾಗ ವಿಕೆಟ್ ಕೈಚೆಲ್ಲಿದ್ದರು. ಸಿಎಸ್​ಕೆ ವೇಗಿ ಅನ್ಶುಲ್ ಕಾಂಬೋಜ್ ಮಾಡಿದ 18ನೇ ಓವರ್​ನಲ್ಲಿ ಡೇವಿಡ್ ಕ್ಲೀನ್ ಬೌಲ್ಡ್ ಆಗಿದ್ದರು. ಆಗ ತಂಡದ ಮೊತ್ತ 199 ರನ್​ಗಳಾಗಿತ್ತು. ಆದರೆ ಕಾಂಬೋಜ್ ಮಾಡಿದ 18ನೇ ಓವರ್​ನ 5ನೇ ಎಸೆತ ನೋ ಬಾಲ್ ಆಗಿತ್ತು. ಇದರಿಂದ ಡೇವಿಡ್ ಔಟಾಗುವುದರಿಂದ ಪಾರಾದರು.

ಈ ಜೀವದಾನದ ಲಾಭ ಪಡೆದ ಡೇವಿಡ್ 19ನೇ ಓವರ್​ನಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 30 ರನ್ ಕಲೆಹಾಕಿದರು. ಇದರ ಜೊತೆಗೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಹಾಗೆಯೇ 20ನೇ ಓವರ್​ನಲ್ಲೂ ಬೌಂಡರಿ ಬಾರಿಸಿದರು. ಅಂದರೆ ಕಾಂಬೋಜ್ ಮಾಡಿದ ಅದೊಂದು ನೋ ಬಾಲ್ ಸಿಎಸ್​ಕೆಗೆ 50 ಕ್ಕೂ ಅಧಿಕ ರನ್​ಗಳ ದಂಡ ವಿಧಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರ್ತ್​​ಡೇ ಗರ್ಲ್ ರಶ್ಮಿಕಾ ಮಂದಣ್ಣ ಕೈಯಲ್ಲಿರುವ ಸಿನಿಮಾಗಳೆಷ್ಟು?

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡದ ನಟಿಯಾದರೂ ಈಗ ಮಿಂಚುತ್ತಿರುವುದು ಪರಭಾಷೆ ಸಿನಿಮಾಗಳಲ್ಲಿಯೇ. ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮೆರೆದು, ತಮಿಳಿನಲ್ಲೂ ಬೇಡಿಕೆಯ ನಟಿ ಎನಿಸಿಕೊಂಡು ಬಳಿಕ ಬಾಲಿವುಡ್​​ಗೆ ಪದಾರ್ಪಣೆ ಮಾಡಿ, ಅಲ್ಲಿಯೂ ಸಹ ಸಾವಿರಾರು ಕೋಟಿ ಗಳಿಕೆಯ ಸಿನಿಮಾಗಳ ಭಾಗವಾಗಿ ಈಗ ಬಾಲಿವುಡ್​​ನ ಬ್ಯುಸಿ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ ರಶ್ಮಿಕಾ. ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಜೊತೆಗೆ ವಿವಾಹವಾದ ನಟಿ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬ ಇಂದು (ಏಪ್ರಿಲ್ 05). ಅಂದಹಾಗೆ ಈ ಬ್ಯುಸಿ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಇರುವ ಸಿನಿಮಾಗಳೆಷ್ಟು?

ರಶ್ಮಿಕಾ ಮಂದಣ್ಣ ಭಾರತದ ಬಲು ಬ್ಯುಸಿ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಅವರ ಕೈಯಲ್ಲಿ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯ ಹಲವು ಸಿನಿಮಾಗಳಿವೆ. ಪ್ರಸ್ತುತ ಅವರ ಒಂದು ಹಿಂದಿ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅದುವೇ ‘ಕಾಕ್​​ಟೇಲ್ 2’. ಶಾಹಿದ್ ಕಪೂರ್ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಕೃತಿ ಸನೋನ್ ಅವರುಗಳೊಟ್ಟಿಗೆ ರಶ್ಮಿಕಾ ಮಂದಣ್ಣ ‘ಕಾಕ್​​ಟೇಲ್ 2’ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾ ಏಪ್ರಿಲ್ 8ಕ್ಕೆ ಬಿಡುಗಡೆ ಆಗಲಿದೆ.

ಇದೀಗ ಪತಿ ವಿಜಯ್ ದೇವರಕೊಂಡ ಜೊತೆಗೆ ‘ರಣಬಾಲಿ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ಅವರದ್ದು ‘ಜಯಮ್ಮ’ ಹೆಸರಿನ ಪಾತ್ರ. ಹಲವು ವರ್ಷಗಳ ಬಳಿಕ ಮತ್ತೆ ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿದ್ದಾರೆ ರಶ್ಮಿಕಾ. ಇದರ ಜೊತೆಗೆ ‘ಮೈಸಾ’ ಹೆಸರಿನ ಆಕ್ಷನ್ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದು, ಇದು ಮಹಿಳಾ ಪ್ರಧಾನ ಸಿನಿಮಾ ಎಂಬುದು ವಿಶೇಷ. ಇದು ಅವರ ಮೊದಲ ಸೋಲೊ ಆಕ್ಷನ್ ಸಿನಿಮಾ ಆಗಿರಲಿದೆ.

ಇದನ್ನೂ ಓದಿ:‘ಈಗ ನಾವು ಮೂವರು’; ಮದುವೆ ಆದ ಒಂದೇ ತಿಂಗಳಿಗೆ ಸಿಹಿ ಸುದ್ದಿ ಕೊಟ್ರಾ ರಶ್ಮಿಕಾ?

ವಿಜಯ್ ದೇವರಕೊಂಡ ಜೊತೆಗೆ ‘ಗೀತಾ ಗೋವಿಂದಂ 2’ ಸಿನಿಮಾ ಸಹ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಸಿನಿಮಾವನ್ನು ದಿಲ್ ರಾಜು ನಿರ್ಮಿಸಲಿದ್ದು, ಸಿನಿಮಾದ ಘೋಷಣೆ ಸಹ ಈಗಾಗಲೇ ಆಗಿದೆ. ಅಲ್ಲು ಅರ್ಜುನ್ ನಟಿಸಿ ಅಟ್ಲಿ ನಿರ್ದೇಶನ ಮಾಡುತ್ತಿರುವ ಫ್ಯೂಚರಿಸ್ಟಿಕ್ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿ ಓಡಾಡುತ್ತಿದೆ. ಅಂದಹಾಗೆ ‘ಪುಷ್ಪ 3’ ಸಿನಿಮಾನಲ್ಲಿಯೂ ರಶ್ಮಿಕಾ ಇರುವುದು ಖಾತ್ರಿ.

ಇವುಗಳ ಜೊತೆಗೆ ತಮಿಳಿನಲ್ಲಿ ಅಜಿತ್ ನಟಿಸಲಿರುವ ಹೊಸ ಸಿನಿಮಾಕ್ಕೆ ರಶ್ಮಿಕಾ ನಾಯಕಿ ಎನ್ನಲಾಗುತ್ತಿದೆ. ಹಿಂದಿಯಲ್ಲಿ ಸಹ ಕೆಲ ಹೊಸ ಸಿನಿಮಾಗಳನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಟೈಗರ್ ಶ್ರಾಫ್ ಜೊತೆಗೆ ಹೊಸ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಲ ಸಿನಿಮಾಗಳ ಘೋಷಣೆ ಆಗಿದೆ, ಕೆಲ ಸಿನಿಮಾಗಳ ಘೋಷಣೆ ಆಗಬೇಕಿದೆ. ಒಟ್ಟಾರೆ ರಶ್ಮಿಕಾರ ವೃತ್ತಿ ಜೀವನ ಬಲು ಜೋರಾಗಿಯೇ ನಡೆಯುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೋಣಿ ಚೀಲದಲ್ಲಿ ವ್ಯಕ್ತಿ ಶವ ಪತ್ತೆ ಕೇಸ್: ಡಿಸಿಪಿ ಹೇಳಿದ್ದಿಷ್ಟು

ಆನೇಕಲ್, ಏಪ್ರಿಲ್​ 05: ಗೋಣಿ ಚೀಲದಲ್ಲಿ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣವನ್ನು ಹೆಬ್ಬಗೋಡಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಡಿಶಾ ಮೂಲದ ಬಸುದೇವ್ ಮಲ್ಲಿಕ್ ಎಂಬಾತನನ್ನು ಬಂಧಿಸಲಾಗಿದ್ದು, ತನ್ನ ಸ್ನೇಹಿತ ಸುನೀಲ್ ನನ್ನು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಸುನೀಲ್ ಕುಡಿದು ನಿತ್ಯ ತನ್ನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿದ್ದ. ಈ ವಿಷಯವನ್ನು ಸುನೀಲ್ ಪತ್ನಿ ಬಸುದೇವ್ ಮಲ್ಲಿಕ್​ಗೆ ತಿಳಿಸಿದ್ದಳು. ಸುನೀಲ್ ಪತ್ನಿಯ ಸಹಾನುಭೂತಿ ಗಳಿಸುವ ದುರುದ್ದೇಶದಿಂದ ಬಸುದೇವ್, ಸುನೀಲ್‌ನನ್ನು ಕಂಠಪೂರ್ತಿ ಕುಡಿಸಿ ಬಳಿಕ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

RCB vs CSK: ಟಿಮ್ ಡೇವಿಡ್ ಡೇವಿಲ್ ಬ್ಯಾಟಿಂಗ್​ಗೆ ಸಿಎಸ್​ಕೆ ಅಲ್ಲೋಲ ಕಲ್ಲೋಲ; ವಿಡಿಯೋ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಇಂದು ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗೆ ಸಾಕ್ಷಿಯಾಯಿತು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಸಿಎಸ್​ಕೆ ಬೌಲರ್​ಗಳು ಮೈದಾನದಲ್ಲೇ ಅಳುವಂತೆ ಮಾಡಿದರು. ಡೇವಿಡ್ ಸುನಾಮಿಗೆ ಸಿಲುಕಿದ ಸಿಎಸ್​ಕೆ ಬೌಲರ್​ಗಳು ದಿಕ್ಕೆ ತೋಚದವರಂತ್ತಾಗಿ ಡೇವಿಡ್ ಬಾರಿಸುವ ಸಿಕ್ಸರ್​ಗಳನ್ನು ಮೂಕ ವಿಸ್ಮಿತರಾಗಿ ನಿಂತು ನೋಡಬೇಕಾಯಿತು.

ಈ ಪಂದ್ಯದಲ್ಲಿ ಆರ್​ಸಿಬಿ ಪರ ಎಲ್ಲಾ ಬ್ಯಾಟರ್​ಗಳು ಅಮೋಘ ಪ್ರದರ್ಶನ ನೀಡಿದರು. ಹೀಗಾಗಿ ವಿಕೆಟ್ ಪತನದ ಬಳಿಕವೂ ಆ ಬಳಿಕ ಬಂದ ಬ್ಯಾಟ್ಸ್‌ಮನ್​ಗಳು ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಬ್ಯಾಟ್ ಬೀಸಿದರು. ಅದರ ಪರಿಣಾಮ ಡೇವಿಡ್ ಅವರ ಬ್ಯಾಟಿಂಗ್​ನಲ್ಲೂ ಕಂಡುಬಂತು. ಬಂದ ಬಂದವರೇ ಟಾಪ್ ಗೇರ್​ನಲ್ಲಿ ಬ್ಯಾಟಿಂಗ್ ಶುರು ಮಾಡಿದ ಡೇವಿಡ್ ತಂಡದ ಸ್ಕೋರ್ ಬೋರ್ಡ್​ನ ವೇಗ ಹೆಚ್ಚಿಸಿದರು.

15ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ಡೇವಿಡ್ 17ನೇ ಓವರ್​ನಿಂದ ಸಿಕ್ಸರ್‌ಗಳ ಮಳೆ ಸುರಿಸಲು ಶುರು ಮಾಡಿದರು. ಈ ಓವರ್​ನ ಮೂರು, ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಹೀಗಾಗಿ ಈ ಓವರ್​ನಲ್ಲಿ 21 ರನ್​ಗಳು ಬಂದವು. 18ನೇ ಓವರ್​ನಲ್ಲೂ ಅವರ ಬ್ಯಾಟ್​ನಿಂದ ಒಂದು ಬೌಂಡರಿ ಹಾಗೂ ಸಿಕ್ಸರ್ ಬಂತು.

19ನೇ ಓವರ್​ನಲ್ಲಿ ಉಗ್ರರೂಪ ತಾಳಿದ ಡೇವಿಡ್ ಈ ಓವರ್​ನ ಐದು ಎಸೆತಗಳನ್ನು ಬೌಂಡರಿಗಟ್ಟಿದರು. ಇದರಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿದ್ದವು. ಹೀಗಾಗಿ ಈ ಓವರ್​ನಲ್ಲಿ 30 ರನ್​ಗಳು ಬಂದವು. ಹಾಗೆಯೇ ಇದೇ ಓವರ್​ನಲ್ಲಿ ಡೇವಿಡ್ ಕೂಡ ಅರ್ಧಶತಕ ಪೂರೈಸಿದರು. ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಬೌಂಎರಿ ಬಾರಿಸುವ ಮೂಲಕ ಡೇವಿಡ್​ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 25 ಎಸೆತಗಳನ್ನು ಎದುರಿಸಿದ ಡೇವಿಡ್ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 70 ರನ್ ಬಾರಿಸಿದರು.

Source link

RCB vs CSK: ಪಡಿಕ್ಕಲ್ ಪವರ್​ಗೆ ಪತರುಗುಟ್ಟಿದ ಸಿಎಸ್​ಕೆ; ವಿಡಿಯೋ

ಚಿನ್ನಸ್ವಾಮಿಯಲ್ಲಿ ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲೋಕಲ್ ಬಾಯ್ ದೇವದತ್ ಪಡಿಕ್ಕಲ್ ಆರ್​ಸಿಬಿ ಪರ ಅಬ್ಬರದ ಇನ್ನಿಂಗ್ಸ್ ಆಡಿದರು. ಎಂದಿನಂತೆ ವಿರಾಟ್ ಕೊಹ್ಲಿ ವಿಕೆಟ್ ಪತನದ ಬಳಿಕ ಬಂದ ಪಡಿಕ್ಕಲ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಬಾರಿಸಿ ಔಟಾದರು. ಹಾಗೆಯೇ ಪಾಟಿದರ್ ಜೊತೆಗೂಡಿ ಅರ್ಧಶತಕದ ಜೊತೆಯಾಟವನ್ನು ಕಟ್ಟಿ ತಂಡವನ್ನು 150 ರನ್​ಗಳ ಗಡಿ ದಾಟಿಸಿದರು. ಇದು ಈ ಆವೃತ್ತಿಯಲ್ಲಿ ಪಡಿಕ್ಕಲ್ ಅವರ ಎರಡನೇ ಅರ್ಧಶತಕವಾಗಿದೆ. ಮೊದಲ ಪಂದ್ಯದಲ್ಲೂ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಪಡಿಕ್ಕಲ್ 61 ರನ್​ಗಳ ಇನ್ನಿಂಗ್ಸ್ ಆಡಿದ್ದರು.

Source link

ರೈಲ್ವೆ ಇಲಾಖೆಗೆ ಭರ್ಜರಿ ಆದಾಯ: ನೈರುತ್ಯ ವಲಯಕ್ಕೆ 9,488 ಕೋಟಿ; ಬೆಂಗಳೂರು ವಿಭಾಗಕ್ಕೆ 2,951 ಕೋಟಿ ಲಾಭ

ಬೆಂಗಳೂರು, ಏಪ್ರಿಲ್​ 05: ದಿನದಿಂದ ದಿನಕ್ಕೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಸರಿಯಾಗಿ ಬ್ರೇಕ್ ಹಾಕಲು ಮುಂದಾಗಿರುವ ರೈಲ್ವೆ ಇಲಾಖೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರಿಗೆ ದಂಡ ಹಾಕಿದ್ದು, ಇದರಿಂದ 38 ಕೋಟಿ ರೂ ಆದಾಯ ಗಳಿಸಿದೆ. ಇತ್ತ ನೈರುತ್ಯ ರೈಲ್ವೆ ಇಲಾಖೆ (South Western Railway) ಬರೋಬ್ಬರಿ ಒಂಬತ್ತುವರೆ ಸಾವಿರ ಕೋಟಿ ರೂ ಆದಾಯ ಗಳಿಸಿದೆ.

ನೈರುತ್ಯ ರೈಲ್ವೆ ಮತ್ತು ಬೆಂಗಳೂರು ರೈಲ್ವೆ ವಲಯ ಭರ್ಜರಿ ಆದಾಯ

2025-26 ಸಾಲಿನಲ್ಲಿ ನೈರುತ್ಯ ರೈಲ್ವೆ ಮತ್ತು ಬೆಂಗಳೂರು ರೈಲ್ವೆ ವಲಯ ಭರ್ಜರಿ ಆದಾಯ ಗಳಿಸಿದೆ. ಈ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ ವಿಭಾಗವು ಬರೋಬ್ಬರಿ 9,488 ಕೋಟಿ ರೂ ಆದಾಯ ಗಳಿಸಿದರೆ, ಬೆಂಗಳೂರು ರೈಲ್ವೆ ವಿಭಾಗವು 2,951 ಕೋಟಿ ರೂ ಆದಾಯ ಗಳಿಸಿದೆ. ಬೆಂಗಳೂರು ವಿಭಾಗವು 2025-26ನೇ ಸಾಲಿನಲ್ಲಿ ಟಿಕೆಟ್ ತಪಾಸಣೆಯಿಂದ 39.68 ಕೋಟಿ ರೂ ಆದಾಯ ಗಳಿಸಿದರೆ, ಪಾರ್ಸೆಲ್​ನಿಂದ 140.31 ಕೋಟಿ ರೂ ಗಳಿಸಿದ್ದು, ಸರಕು ಸಾಗಣೆ ಆದಾಯವು 351.07 ಕೋಟಿ ರೂ ಗಳಿಸಲಾಗಿದೆ.

ಇದನ್ನೂ ಓದಿ: ಮೈಸೂರು ರೈಲ್ವೆ ದಾಖಲೆ: ಸರಕು ಸಾಗಣೆ-ಪಾರ್ಸೆಲ್, ಟಿಕೆಟ್ ಪರಿಶೀಲನೆಯಲ್ಲಿ ಕೋಟ್ಯಂತರ ರೂ ಆದಾಯ

2024-25ರಲ್ಲಿ ಇದು 327.74 ಕೋಟಿ ರೂಪಾಯಿಗಳಾಗಿತ್ತು. ಪ್ರಯಾಣಿಕ ಆದಾಯವು ಸಹಾ ಏರಿಕೆಯನ್ನು ದಾಖಲಿಸಿದ್ದು 2025-26 ರಲ್ಲಿ 2420.55 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಮಾಹಿತಿ ನೀಡಿದ್ದಾರೆ.

ನೈಋತ್ಯ ರೈಲ್ವೆ ಕೋಟಿ ಕೋಟಿ ಆದಾಯ

2025–26ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ ಸರಕು ಟಿಕೆಟ್ ಚೆಕ್ಕಿಂಗ್, ಪಾರ್ಸೆಲ್​​ ವಿಭಾಗದಲ್ಲಿ 9,488 ಕೋಟಿ ರೂ ಆದಾಯ ಗಳಿಸಿದೆ. ಈ ಬಾರಿ ನೈರುತ್ಯ ರೈಲ್ವೆ ವಲಯವು ಸರಕು-ಸಾಗಣೆಯಿಂದ 5,347.40 ಕೋಟಿ ರೂ, ಆದಾಯ ಗಳಿಸಿದ್ದರೆ 2024–25ರಲ್ಲಿ 4,672 ಕೋಟಿ ರೂ ಗಳಿಸಿತ್ತು. ಕಳೆದ ವರ್ಷದ ದಾಖಲೆಯನ್ನು ಈ ವರ್ಷ ಮೀರಿಸಿದೆ. ಪ್ರಯಾಣಿಕರ ವಿಭಾಗದಲ್ಲಿ ಆದಾಯವು 3,468 ಕೋಟಿಗೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ 165.53 ಮಿಲಿಯನ್‌ನಿಂದ 176.93 ಮಿಲಿಯನ್‌ಗೆ ಹೆಚ್ಚಳವಾಗಿದ್ದು, ಕೋಚಿಂಗ್ ಆದಾಯ 329.5 ಕೋಟಿಗೆ ಏರಿದ್ದು, ಪಾರ್ಸೆಲ್ ಆದಾಯ 170.4 ಕೋಟಿಗೆ ಹೆಚ್ಚಾಗಿದೆ. ವಾಣಿಜ್ಯ ವಿವಿಧ ಆದಾಯವು 121.08 ಕೋಟಿಗೆ ಏರಿಕೆಯಾಗಿದೆ. ಟಿಕೆಟ್ ಪರಿಶೀಲನೆಯಿಂದ 70.76 ಕೋಟಿ ರೂ ‌ಆದಾಯ ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 8,489 ಕೋಟಿಗಳಿಸಿದ್ದು, ನೈರುತ್ಯ ವಲಯ ಈ ಬಾರಿ 9,488 ಕೋಟಿ ರೂ ಆದಾಯ ಗಳಿಸಿದೆ.

ಇದನ್ನೂ ಓದಿ: ಬೇಸಿಗೆ ರಜೆಯ ಹಿನ್ನೆಲೆ ರೈಲ್ವೆ ಇಲಾಖೆ ಹೊಸ ಕೊಡುಗೆ! ಬೆಂಗಳೂರು-ತಿರುಚಿರಾಪಲ್ಲಿ ನಡುವೆ ವಿಶೇಷ ರೈಲು ವ್ಯವಸ್ಥೆ

ಒಟ್ಟಿನಲ್ಲಿ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ನೈರುತ್ಯ ರೈಲ್ವೆ, ಬೆಂಗಳೂರು ರೈಲ್ವೆ ವಲಯ ಸಾವಿರಾರು ಕೋಟಿ ರೂ ಹೆಚ್ಚುವರಿ ಆದಾಯ ಗಳಿಸಿದ್ದು, ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮುಟ್ಟಿನ ಬಗ್ಗೆ ಪ್ರಶ್ನೆಗೆ ಶ್ರೀಲೀಲಾ ಕೊಟ್ಟ ದಿಟ್ಟ ಉತ್ತರ

ಬಹುತೇಕ ಮಹಿಳೆಯರು ತಮ್ಮದೇ ವೈಯಕ್ತಿಕ ಆರೋಗ್ಯ, ನೈರ್ಮಲ್ಯ ಕುರಿತಾಗಿ ಬಹಿರಂಗವಾಗಿ ಮಾತನಾಡುವುದಿಲ್ಲ. ವಿಶೇಷವಾಗಿ ಪೀರಿಯಡ್ಸ್ ಅಥವಾ ಮುಟ್ಟಿನ ವಿಷಯವನ್ನು ಗುಟ್ಟು ಮಾಡುವುದು ಸಹ ಇದೆ. ಆದರೆ ಇತ್ತೀಚೆಗೆ ಕಾಲ, ಸಮಯ ಎಲ್ಲ ಬದಲಾಗುತ್ತಿದೆ. ಪೀರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಲಾಗುತ್ತಿದೆ. ಆದರೆ ಇತ್ತೀಚೆಗೆ ತುಸು ಭಿನ್ನ ಸಮಸ್ಯೆ ಎದುರಾಗಿದೆ. ಕೆಲ ಮಹಿಳೆಯರು, ಪೀರಿಯಡ್ಸ್ ತಮ್ಮ ಯಶಸ್ಸಿಗೆ ಅಡ್ಡಿ ಎಂಬಂತೆ ಬಿಂಬಿಸುವುದೂ ಸಹ ಇದೆ. ಆದರೆ ನಟಿ ಶ್ರೀಲೀಲಾ, ಇಂಥಹವರಿಗೆ ತಕ್ಕ ಉತ್ತರ ನೀಡಿದ್ದಾರೆ.

ಇನ್ನೂ ಯುವ ನಟಿಯಾದರೂ ಸಹ ಸ್ಪಷ್ಟ ಯೋಚನೆ, ಆಲೋಚನೆಗಳನ್ನು ಹೊಂದಿರುವ ಶ್ರೀಲೀಲಾ, ಇತ್ತೀಚೆಗೆ ಮಹಿಳಾ ನೈರ್ಮಲ್ಯ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದರು. ಬಹುತೇಕ ಮಹಿಳೆಯರೇ ಇದ್ದ ಕಾರ್ಯಕ್ರಮದಲ್ಲಿ ಶ್ರೀಲೀಲಾಗೆ ಪೀರಿಯಡ್ಸ್ ಕುರಿತಾದ, ವಿಶೇಷವಾಗಿ ಸಿನಿಮಾ ಚಿತ್ರೀಕರಣದ ಸಂದರ್ಭಗಳಲ್ಲಿ ಪೀರಿಯಡ್ಸ್ ಅಡ್ಡಿ ಆಗುವುದಿಲ್ಲವೇ? ಎಂಬ ಪ್ರಶ್ನೆ ಎದುರಾಯ್ತು. ಅದಕ್ಕೆ ಶ್ರೀಲೀಲಾ ಕೊಟ್ಟ ಉತ್ತರ ಇದೀಗ ವೈರಲ್ ಆಗುತ್ತಿದೆ.

‘ನಾನು ಹಲವಾರು ಒಳ್ಳೆಯ ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದೇನೆ. ನನ್ನ ಹಿಟ್ ಆಗಿರುವ ಡ್ಯಾನ್ಸುಗಳೆಲ್ಲ ಬಹುತೇಕ ನನ್ನ ಪೀರಿಯಡ್ಸ್ ಸಮಯದಲ್ಲಿಯೇ ಚಿತ್ರೀಕರಣಗೊಂಡವು. ಆ ಸನ್ನಿವೇಶದಲ್ಲಿ ಚಿತ್ರೀಕರಿಸಿದ ಹಾಡುಗಳಿಗೆ ನನಗೆ ಹೆಚ್ಚು ಪ್ರಶಂಸೆ ಧಕ್ಕಿದೆ. ಪೀರಿಯಡ್ಸ್ ಎಂಬುದು ಒಬ್ಬ ಮಹಿಳೆಗೆ ನೆಪ ಆಗಬಾರದು. ಅದು ಸವಾಲಾಗಬೇಕು’ ಎಂದಿದ್ದಾರೆ ನಟಿ ಶ್ರೀಲೀಲಾ.

ಇದನ್ನೂ ಓದಿ:ನಟಿ ರಮ್ಯಾ ಬಗ್ಗೆ ಪ್ರೀತಿಯಿಂದ ಮಾತನಾಡಿದ ಶ್ರೀಲೀಲಾ: ಹೇಳಿದ್ದೇನು?

ಮುಂದುವರೆದು ಮಾತನಾಡಿ, ‘ನಾವು (ಮಹಿಳೆಯರು) ಸಮಾನವಾದ ಅವಕಾಶ, ಸಮಾನವಾದ ಶಕ್ತಿ, ಸಮಾನವಾದ ಹಕ್ಕುಗಳನ್ನು ಕೇಳುತ್ತಿರುವಾಗ ನಾವು ಪೀರಿಯಡ್ಸ್ ಅನ್ನು ನೆಪವಾಗಿ ಇರಿಸಿಕೊಂಡು ಹಿಂದುಳಿಯಲು ಹೇಗೆ ಸಾಧ್ಯ? ಮಹಿಳೆಯರಾದ ನಾವು ನಮ್ಮನ್ನು ನಾವು ದೈಹಿಕವಾಗಿ, ಮಾನಸಿಕ ಮಿತಿಗಳನ್ನು ಮೀರಬೇಕು. ನಮ್ಮನ್ನು ನಾವು ಪುಶ್ ಮಾಡಿಕೊಳ್ಳಬೇಕು. ನಮಗೆ ಪೀರಿಯಡ್ಸ್ ಎಂಬುದು ನೆಪ ಆಗಬಾರದು’ ಎಂದಿದ್ದಾರೆ ನಟಿ ಶ್ರೀಲೀಲಾ.

ನಟಿ ಶ್ರೀಲೀಲಾ, ಖುದ್ದು ವೈದ್ಯೆ ಸಹ ಆಗಿದ್ದಾರೆ. ಹಾಗಾಗಿಯೇ ಈ ವಿಷಯಗಳ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಮಾಹಿತಿ ಇದೆ, ಹಾಗೂ ಇಂಥಹಾ ವಿಷಯಗಳ ಬಗ್ಗೆ ಗಟ್ಟಿಯಾಗಿ ಮಾತನಾಡುವಷ್ಟು ಧೈರ್ಯವನ್ನು ಅವರ ಜ್ಞಾನ ಅವರಿಗೆ ನೀಡಿದೆ. ಶ್ರೀಲೀಲಾರ ಮಾತುಗಳಿಗೆ ಮೆಚ್ಚುಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RCB vs CSK: ಆರ್​ಸಿಬಿ ಬ್ಯಾಟರ್​ಗಳ ಆರ್ಭಟ; ಸಿಎಸ್​ಕೆಗೆ ದಾಖಲೆಯ ಟಾರ್ಗೆಟ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 11 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗಳನ್ನು ಕಳೆದುಕೊಂಡು 250 ರನ್ ಕಲೆಹಾಕಿದೆ. ಈ ಮೂಲಕ ಸಿಎಸ್​ಕೆಗೆ ದಾಖಲೆಯ 251 ರನ್​ಗಳನ್ನು ಗುರಿಯಾಗಿ ನೀಡಿದೆ. ಇಂದು ಆರ್​ಸಿಬಿ ಪರ ಬ್ಯಾಟಿಂಗ್ ಮಾಡಿದ ಪ್ರತಿಯೊಬ್ಬ ಬ್ಯಾಟರ್ ಕೂಡ ಅಬ್ಬರದ ಇನ್ನಿಂಗ್ಸ್ ಆಡಿದರು. ಇದರ ಫಲವಾಗಿ ಆರ್​ಸಿಬಿ ಈ ಬೃಹತ್ ಗುರಿ ನೀಡಲು ಸಾಧ್ಯವಾಯಿತು.

Source link