nagaraj11081993

ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ, ಹೆಬ್ಬುಲಿ ಕಂಡು ಭೀತಿಯಲ್ಲಿ ಗ್ರಾಮಸ್ಥರು – Kannada News | Tiger Population Rises in Chamarajanagar: Frequent Sightings in Bandipur, BRT and MM Hills Forests Trigger Fear

ಚಾಮರಾಜನಗರ, ಡಿಸೆಂಬರ್ 24: ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ಸಂತತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಅರಣ್ಯ ಇಲಾಖೆ ಗಮನಕ್ಕೆ ಬಂದಿದೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್, ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದ್ದು, ದಿನಕ್ಕೊಂದು ಕಡೆ ವ್ಯಾಘ್ರಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯ ಮೂಡಿಸುತ್ತಿವೆ. ಇತ್ತೀಚೆಗೆ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ನ ಕೆ.ಗುಡಿ ಸಮೀಪ ಬೃಹತ್ ಗಂಡು ಹುಲಿ ಪ್ರತ್ಯಕ್ಷವಾಗಿದ್ದು, ತನ್ನ ವ್ಯಾಪ್ತಿಯಲ್ಲಿ ಮತ್ತೊಂದು ಹುಲಿ ಓಡಾಟ ನಡೆಸಿದ್ದೇನೋ…

Read More

‘45’ ಸಿನಿಮಾ ವಿಮರ್ಶೆ; ಅರ್ಜುನ್ ಜನ್ಯ ಮ್ಯಾಜಿಕ್​​ನಲ್ಲಿ ‘ಶಿವ’ತಾಂಡವ; – Kannada News | 45 Film Review: Raj B Shetty, Upendra and Shivrajkumar Shine in Arjun Janya’s Directorial Debut

ಅರ್ಜುನ್ ಜನ್ಯ ಅವರು ಇಷ್ಟು ವರ್ಷಗಳ ಕಾಲ ಮ್ಯೂಸಿಕ್ ಲೋಕದಲ್ಲಿ ಗಮನ ಸೆಳೆದವರು. ಅವರು ಈಗ ‘45’ ಸಿನಿಮಾನ ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರ ಎಂದರೆ ದೊಡ್ಡ ಚಾಲೆಂಜ್ ಇರುತ್ತದೆ. ಈ ಚಾಲೆಂಜ್ ಮಧ್ಯೆ ಅರ್ಜುನ್ ಅವರು ಮಲ್ಟಿ ಸ್ಟಾರರ್ ಸಿನಿಮಾ ಹಾಗೂ ಬಿಗ್ ಬಜೆಟ್​ನ ಆಯ್ಕೆ ಮಾಡಿಕೊಂಡಿದ್ದಾರೆ. ಗ್ರಾಫಿಕ್ಸ್ ಕೆಲಸ ಕೂಡ ಬಹುವಾಗಿರೋ ‘45’ ಚಿತ್ರದ ವಿಮರ್ಶೆ ಇಲ್ಲಿದೆ. ವಿನಯ್ (ರಾಜ್ ಬಿ ಶೆಟ್ಟಿ) ಓರ್ವ ಸಾಮಾನ್ಯ ಐಟಿ ಉದ್ಯೋಗಿ. ನಿತ್ಯ ಕಚೇರಿ ಹೋಗಿ ಬರುವ…

Read More

ಅಪ್ಲಿಕೇಶನ್‌ಗಳಲ್ಲಿ ಉಚಿತ ಚಲನಚಿತ್ರ ವೀಕ್ಷಿಸುವ ಅಭ್ಯಾಸ ಇದೆಯಾ? ಈಗಲೇ ನಿಲ್ಲಿಸಿ – Kannada News | PikaShow Warning: Free Movies Risk Data Breach, Cyber Attacks and Legal Action

ಇಂದಿನ ಜನರಿಗೆ ಎಲ್ಲವೂ ಫ್ರೀ.. ಫ್ರೀ ಇರಬೇಕು. ಎಲ್ಲಿ ಉಚಿತ ಇರುತ್ತದೆ ಅಲ್ಲಿ ಜನ ಮೊದಲು, ಆದರೆ ಈ ಫ್ರೀಯಿಂದ ದೊಡ್ಡ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಈ ಯುವಕರು ಹೆಚ್ಚು ಅಪಾಯಕ್ಕೆ ಸಿಲುಕಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿದೆ. ಇಂದಿನ ಯುವಕರಿಗೆ ಮೂವಿ ನೋಡುವ ಹುಚ್ಚು ಹೆಚ್ಚು. ಹೊಸ ಹೊಸ ಸಿನಿಮಾ (free movie apps) ಬಂದರೆ ಅದನ್ನು ಥಿಯೇಟರ್​​ಗಿಂತ ಮೊಬೈಲ್​ನಲ್ಲಿ ನೋಡುವವರೇ ಹೆಚ್ಚು. ಅದಕ್ಕಾಗಿ ಬೇರೆ ಬೇರೆ ಅಪ್ಲಿಕೇಶನ್‌ ಡೌನ್​​ ಲೋಡ್​​ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ದೊಡ್ಡ…

Read More

Video: ಅಂತರ ಕಾಯ್ದುಕೊಳ್ಳಿ, ಇಎಂಐ ಬಾಕಿ ಇದೆ; ಕಾರಿನ ಹಿಂಬದಿಯ ಬರಹ ವೈರಲ್ – Kannada News | Keep your distance, EMI is pending; Man warns other motorists

ಮಂಗಳೂರು, ಡಿಸೆಂಬರ್ 24: ಆಟೋ, ಬೈಕ್ (bike) ಸೇರಿದಂತೆ ಕಾರಿನ ಹಿಂಭಾಗದಲ್ಲಿ ಪ್ರೀತಿ ಪಾತ್ರದ ಹೆಸರು, ಕೆಲವರು ತಂದೆ ತಾಯಿಯ ಆಶೀರ್ವಾದ, ಕೈಕೊಟ್ಟ ಪ್ರೇಮಿಯ ನೆನಪಿನಲ್ಲಿ ಕೆಲ ಸಾಲುಗಳನ್ನು ಬರೆದಿರುವುದನ್ನು ನೋಡಿರುತ್ತಿರುತ್ತೀರಿ. ಇಂತಹ ಸಾಲುಗಳನ್ನು ನೋಡಿದಾಗ ತುಟಿಯಂಚಿನಲ್ಲಿ ಸದ್ದಿಲ್ಲದೇ ನಗು ಮೂಡುತ್ತದೆ. ಇದೀಗ ಇಂತಹದ್ದೇ ಕಾರಿನ ಹಿಂಭಾಗದಲ್ಲಿ ಬರೆದ ಸಾಲುಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಮಂಗಳೂರಿನ (Manglore) ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಚಲಿಸುತ್ತಿರುವ ಮಾರುತಿ ಸುಜುಕಿ ಆಲ್ಟೋ ಕಾರ್‌ನ ಹಿಂಭಾಗದಲ್ಲಿ ಬರೆದ ಸಾಲುಗಳು ಉಳಿದ ವಾಹನ ಸವಾರರಿಗೆ…

Read More

ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತು ಇದೆ ಗೊತ್ತೇ? – Kannada News | Lokayukta Raids Close Aide of Karnataka Minister Zameer Ahmed Khan Over Disproportionate Assets Allegations

ಬೆಂಗಳೂರು, ಡಿಸೆಂಬರ್ 24: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ನಿವಾಸ ಸೇರಿದಂತೆ ಹತ್ತು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಈ ದಾಳಿ ನಡೆದಿದೆ. ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಹೆಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಸರ್ದಾರ್…

Read More

Money Plant Vastu: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ – Kannada News | Money Plant Vastu: Place a Coin for Wealth and Prosperity Tips

ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಅನ್ನು ಅತ್ಯಂತ ಶುಭ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದನ್ನು ಸಂಪತ್ತನ್ನು ಆಕರ್ಷಿಸುವ ಸಸ್ಯ ಎಂದೂ ಹೇಳಲಾಗುತ್ತದೆ. ಮನಿ ಪ್ಲಾಂಟ್ ಗಿಡದ ಬುಡದಲ್ಲಿ ಒಂದು ರೂಪಾಯಿ ಅಥವಾ ಯಾವುದೇ ನಾಣ್ಯವನ್ನು ಇಡುವುದರಿಂದ ಅದರ ಸಕಾರಾತ್ಮಕ ಪರಿಣಾಮಗಳು ಹಲವು ಪಟ್ಟು ಹೆಚ್ಚಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರವು ತಿಳಿಸುತ್ತದೆ. ಮನಿ ಪ್ಲಾಂಟ್‌ನ ಬುಡದಲ್ಲಿ ನಾಣ್ಯವನ್ನು ಹೂತಿಟ್ಟರೆ, ಅದು ಹಣದ ಆಕರ್ಷಣೆಯನ್ನು ವೇಗಗೊಳಿಸುತ್ತದೆ ಎಂಬ ನಂಬಿಕೆಯಿದೆ. ನಾಣ್ಯವು ಸ್ವತಃ ಸಂಪತ್ತಿನ ಸಂಕೇತವಾಗಿದ್ದು, ಮನಿ ಪ್ಲಾಂಟ್ ಜೊತೆಗೆ ಅದರ…

Read More

ಜಗನ್ ಹುಟ್ಟುಹಬ್ಬದಂದು ಪಟಾಕಿ ಹೊಡಿಬೇಡಿ ಎಂದಿದ್ದಕ್ಕೆ ಗರ್ಭಿಣಿ ಹೊಟ್ಟೆಗೆ ಒದ್ದ ವ್ಯಕ್ತಿ – Kannada News | Pregnant Woman Allegedly Assaulted After Objecting to Fireworks at Birthday Event

ಆಂಧ್ರಪ್ರದೇಶ, ಡಿಸೆಂಬರ್ 24: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್ ಜಗನ್​ಮೋಹನ್ ರೆಡ್ಡಿ ಹುಟ್ಟುಹಬ್ಬದ ದಿನ ತಾನು ಗರ್ಭಿಣಿ(Pregnant) ದಯವಿಟ್ಟು ಹೆಚ್ಚು ಪಟಾಕಿ ಹೊಡೆಯಬೇಡಿ ಎಂದು ಕೇಳಿಕೊಂಡಿದ್ದಕ್ಕೆ ವೈಎಸ್​ಆರ್ ಕಾಂಗ್ರೆಸ್​ನ ಕಾರ್ಯಕರ್ತ ಅಜಯ್ ದೇವ್ ಎಂಬಾತ ಮಹಿಳೆಯ ಒದ್ದಿರುವ ಘಟನೆ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ. ಸಾರ್ವಜನಿಕರ ಆಕ್ರೋಶದ ನಂತರ ಬಲವಾದ ಕ್ರಮವಾಗಿ, ಆಂಧ್ರಪ್ರದೇಶದಲ್ಲಿ ಪೊಲೀಸರು ಮಂಗಳವಾರ ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಮೆರವಣಿಗೆ ಮಾಡಿದರು. ಡಿಸೆಂಬರ್ 21 ರಂದು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್…

Read More

ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್ – Kannada News | Anjanadri Temple Clash: Fight Between Two Swamijis Inside Hanuman Sanctum, Video Goes Viral

ಕೊಪ್ಪಳ, ಡಿಸೆಂಬರ್ 24: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ಭಾರೀ ಗಲಾಟೆ ನಡೆದಿದೆ. ಆಂಜನೇಯ ಸ್ವಾಮಿಯ ಗರ್ಭಗುಡಿಯಲ್ಲಿಯೇ ಸ್ವಾಮೀಜಿಗಳ ಮಧ್ಯೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಹೊಡೆದಾಟದ ಮಟ್ಟಕ್ಕೆ ತಲುಪಿದೆ. ದೇವಸ್ಥಾನದ ಪೂಜಾ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಅರ್ಚಕ ವಿದ್ಯಾದಾಸ ಬಾಬಾ ಸ್ವಾಮೀಜಿ, ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪೂಜಾ ಸಮಯದಲ್ಲಿ ಅವಾಚ್ಯ ಪದ ಬಳಸಿ ನಿಂದನೆ ಮಾಡಲಾಗಿದೆ ಎಂದು ವಿದ್ಯಾದಾಸ ಬಾಬಾ ಆರೋಪಿಸಿದ್ದಾರೆ….

Read More

ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ! – Kannada News | Bengaluru Petrol Attack: A man set a mother on fire for not getting her daughter married to him!

ಬೆಂಗಳೂರು, ಡಿಸೆಂಬರ್ 24: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಯುವತಿಯ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ ಘಟನೆ ಬೆಂಗಳೂರಿನ ಬಸವೇಶ್ವರನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಗೀತಾ ಎಂದು ಗುರುತಿಸಲಾಗಿದ್ದು, ಆರೋಪಿಯ ಹೆಸರು ಮುತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಗೀತಾ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದು, ಮುತ್ತು ಎಂಬ ಯುವಕ ಅದೇ ಪ್ರದೇಶದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದ. ಒಬ್ಬರಿಗೊಬ್ಬರು ಪರಿಚಯವಾದ ಬಳಿಕ, ಗೀತಾ, ಆಕೆಯ 19 ವರ್ಷದ ಮಗಳು ಹಾಗೂ ಮುತ್ತು ಒಂದೇ…

Read More

ದರ್ಶನ್ ಸಿಂಹ ಎಂದ ಧನ್ವೀರ್​ಗೆ ಟಾಂಗ್ ಕೊಟ್ಟ ವಿನಯ್ ಗೌಡ – Kannada News | Vinay Gowda share post in support of Sudeep

ದರ್ಶನ್ (Darshan) ಮತ್ತು ಸುದೀಪ್ ಅಭಿಮಾನಿಗಳ ಮಧ್ಯೆ ವರ್ಷಗಳಿಂದಲೂ ಫ್ಯಾನ್ಸ್ ವಾರ್ ನಡೆಯುತ್ತಲೇ ಇದೆ. ಆದರೆ ಸುದೀಪ್ ಇದಕ್ಕೆಲ್ಲ ಹೆಚ್ಚು ಪ್ರತಿಕ್ರಿಯಿಸುತ್ತಿರಲಿಲ್ಲ. ಆದರೆ ತಮ್ಮ ಸಿನಿಮಾಕ್ಕೆ ಬೆದರಿಕೆಗಳು ಬಂದಾಗ ಪರೋಕ್ಷವಾಗಿ ಸುದೀಪ್ ಅವರು ಎಚ್ಚರಿಕೆ ನೀಡಿದರು. ಸುದೀಪ್ ಅವರ ಸಣ್ಣ ಹೇಳಿಕೆಯನ್ನೇ ದೊಡ್ಡದು ಮಾಡಿ ಇದೀಗ ಫ್ಯಾನ್ಸ್​​ಗಳ ಜೊತೆಗೆ ದರ್ಶನ್ ಆಪ್ತರು ಸಹ ಅಖಾಡಕ್ಕಿಳಿದು ಫ್ಯಾನ್ಸ್ ವಾರ್ ಬೆಂಕಿಗೆ ತುಪ್ಪ ಸುರಿದಿದ್ದಾರೆ. ದರ್ಶನ್ ಅವರ ಪರಮಾಪ್ತ ಧನ್ವೀರ್ ಗೌಡ, ‘ಕಾಡಿನಲ್ಲಿ ಸಾಕಷ್ಟು ಪ್ರಾಣಿಗಳಿರುತ್ತವೆ, ಆದರೆ ಸಿಂಹ ಮಾತ್ರವೇ…

Read More