All posts by nagaraj11081993

ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ

ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ

ಬಾಗಲಕೋಟೆ, ಏಪ್ರಿಲ್​ 03: ಏ.9ರಂದು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಐಹೊಳೆ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ಯುಗಾದಿ ಹಬ್ಬದಂದೂ ಮಾಂಸ ತಿಂತೀನಿ ಅಂತಾರೆ. ಸಿದ್ರಾಮಣ್ಣ ನೀನು ಮಾಂಸನಾದ್ರೂ ತಿನ್ನು, ಸುನ್ನತ್​​ ಆದರೂ ಮಾಡಿಕೋ, ಏನ್ಬೇಕಾದರೂ ಮಾಡು ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ನೀನು ಯುಗಾದಿ, ದೀಪಾವಳಿ ಹಬ್ಬಕ್ಕೆ ಮಾಂಸ ತಿಂತೀನಿ ಅಂದರೆ 15% ಮುಸ್ಲಿಮರನ್ನು ಓಲೈಸಲು ಹಿಂದೂಗಳ ಭಾವನೆಗೆ ಧಕ್ಕೆ ತಂದಂತೆ. 85% ಹಿಂದೂಗಳಿದ್ದರೂ ಹರಿದು ಹಂಚಿ ಹೋಗಿದ್ದಾರೆ. ಗೌಡ, ಲಿಂಗಾಯತ, ಕುರುಬ, ವಾಲ್ಮೀಕಿ, ದಲಿತರು ವಿಭಜನೆಯಾಗಿದೆ. ಹಿಂದೂಗಳು ಉಳಿಯಬೇಕು ಅಂದ್ರೆ ಒಗ್ಗಟ್ಟಾಗಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

CSK vs PBKS: 6,6,6,6.. ಸಿಎಸ್​ಕೆ ಬೌಲರ್​ಗಳ ಬೆವರಿಳಿಸಿದ ಪ್ರಿಯಾಂಶ್

ಚೆನ್ನೈನ ಚೆಪಾಕ್​ ಮೈದಾನದಲ್ಲಿ ನಡೆದ ಐಪಿಎಲ್ 2026 ರ7ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ, ಪಂಜಾಬ್ ತಂಡಕ್ಕೆ 210 ರನ್‌ಗಳ ಗುರಿ ನೀಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 209 ರನ್ ಗಳಿಸಿತು. ಪಂಜಾಬ್ ಪರ ಆಯುಷ್ ಮ್ಹಾತ್ರೆ 73 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಈ ಗುರಿ ಬೆನ್ನಟ್ಟಿದ ಪಂಜಾಬ್​ಗೆ ಆರಂಭಿಕ ಪ್ರಿಯಾಂಶ್ ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು.

ಪ್ರಿಯಾಂಶ್ ಆರ್ಯ, ಖಲೀಲ್ ಅಹ್ಮದ್ ಎಸೆದ ಇನ್ನಿಂಗ್ಸ್​ನ ಮೊದಲ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿಸಿದರೆ, ನಂತರದ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಎರಡನೇ ಓವರ್​ನಲ್ಲೂ ಅಬ್ಬರಸಿದ ಪ್ರಿಯಾಂಶ್ ಆರ್ಯ, ಮ್ಯಾಟ್ ಹೆನ್ರಿ ಬೌಲಿಂಗ್​ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. 3ನೇ ಓವರ್​ನಲ್ಲೂ ಸಿಕ್ಸರ್ ಬಾರಿಸಿದ ಪ್ರಿಯಾಂಶ್ ಕೇವಲ 9 ಎಸೆತಗಳಲ್ಲಿ 33 ರನ್ ಕಲೆಹಾಕಿದರು.

ಪ್ರಿಯಾಂಶ್ ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ಪಂಜಾಬ್ ಕೇವಲ 20 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿತು. ತನ್ನ ಸ್ಫೋಟಕ ಬ್ಯಾಟಿಂಗ್‌ ಮುಂದುವರೆಸಿದ ಪ್ರಿಯಾಂಶ್ ಐದನೇ ಓವರ್‌ನ ಮೊದಲ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಆದರೆ ಮುಂದಿನ ಎಸೆತದಲ್ಲಿ ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಆದಾಗ್ಯೂ, ಪ್ರಿಯಾಂಶ್ ಕೇವಲ 11 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಒಳಗೊಂಡಂತೆ 39 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್​ ಇಲ್ಲಿದೇ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು: ಬೆಂಗಳೂರು ಜೀವನಾಡಿ ಸಾರಥಿಗಳಿಗೆ ಸಂಕಷ್ಟ

ಬೆಂಗಳೂರು, (ಏಪ್ರಿಲ್ 03): ಇಸ್ರೆಲ್ ಅಮೆರಿಕಾ-ಇರಾನ್ ಯುದ್ಧದಿಂದಾಗಿ ಭಾರತದಲ್ಲಿ ಗ್ಯಾಸ್ ಅಭಾಯ ಸೃಷ್ಟಿಯಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್‌ಪಿಜಿ (LPG) ಸಮಸ್ಯೆ ಉದ್ಭವಿಸಿದೆ. ಆಟೋ ದುಡಿಮೆಯನ್ನು ನಂಬಿ ಜೀವನ ಮಾಡುತ್ತಿರುವಾಗ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ ಆಟೋವನ್ನು ನಿಲ್ಲಿಸುವ ಸ್ಥಿತಿ ಬಂದಿದ್ದು, ಸಂಸಾರದ ಬಂಡಿ ಸಾಗಿಸಲು ಸಾರಥಿಗಳು ಒದ್ದಾಡುತ್ತಿದ್ದಾರೆ. ಯಾಕಂದ್ರೆ, ಹಗಲು-ರಾತ್ರಿ ಗ್ಯಾಸ್‌ಗಳ ಮುಂದೆ ಕ್ಯೂ ನಿಲ್ಲೋದೇ ಆಯ್ತು. ಗ್ಯಾಸ್ ತುಂಬಿ ಆಟೋ (Auto) ಓಡಿಸೋದೆ ಆಮೇಲಿನ ಮಾತು. ಯಾವ ಬಂಕ್ ಮುಂದೆ ನೋಡಿದ್ರೂ ಕಿಲೋಮೀಟರ್‌ಗಟ್ಟಲೇ ಹನುಮನ ಬಾಲದಂತೆ ಆಟೋಗಳ ಸಾಲು ಸಾಮಾನ್ಯವಾಗಿ ಬಿಟ್ಟಿದೆ. ಯಾವ ಬಂಕ್ ನೋಡಿದ್ರೂ ಕನಿಷ್ಠ 100 ರಿಂದ 200 ಆಟೋಗಳು ಇದ್ದೇ ಇರ್ತವೆ. ಮನೆ ಮಕ್ಕಳು ಬೀದಿಯಲ್ಲಿ ನಿಲ್ಲೋ ಸ್ಥಿತಿ ಬಂದೊದಗಿದೆ.

Source link

ಹೊಸ ತಿರುವು ಪಡೆದ ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ

ಬಳ್ಳಾರಿ, ಏಪ್ರಿಲ್​ 03: ಬಳ್ಳಾರಿ ಪಾಲಿಕೆಯ 39ನೇ ವಾರ್ಡ್​ ಕಾಂಗ್ರೆಸ್ ಸದಸ್ಯ ವಿ. ಕುಬೇರರಿಂದ AEE ವೀರೇಶ್​ ಮೇಲೆ ಹಲ್ಲೆ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಸಲಾಂ ಬಳ್ಳಾರಿ ಕಾರ್ಯಕ್ರಮದ ವೇಳೆ ಹಲ್ಲೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ನಾರಾ ಭರತ್‌ ರೆಡ್ಡಿ, ಅದೇ ವಾರ್ಡಿನಲ್ಲಿ ನಾನು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅದನ್ನ ತಿಳಿಗೊಳಿಸಿದ್ದೆ. ಬೇರೆಡೆ ತೆರಳುತ್ತಿದಂತೆ ಹಲ್ಲೆ ಮಾಡಿರುವುದು ಗೊತ್ತಾಗಿದೆ. ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು ಸಂಪೂರ್ಣ ತಪ್ಪು. ಅಧಿಕಾರಿಗಳಿಂದಲೇ ವ್ಯವಸ್ಥೆ ನಡೆಯುತ್ತದೆ ಮತ್ತು ಅವರು ಸಾರ್ವಜನಿಕ ಸೇವೆಗಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಈ ಘಟನೆಯಲ್ಲಿ ಯಾರು ತಪ್ಪಿತಸ್ಥರು ಎಂಬುದು ಇನ್ನೂ ತಿಳಿದಿಲ್ಲ. ಪೂರ್ಣ ಮಾಹಿತಿ ಪಡೆದು, ಯಾರಿಗೆ ಅನ್ಯಾಯವಾಗಿದೆಯೋ ಅವರಿಗೆ ನ್ಯಾಯ ಒದಗಿಸುತ್ತೇವೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Delhi Earthquake: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪ

ನವದೆಹಲಿ, ಏಪ್ರಿಲ್ 3: ಇಂದು ಸಂಜೆ ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವು ಕಡೆಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀತಿಯನ್ನು ಉಂಟುಮಾಡಿದೆ. ದೆಹಲಿ-ಎನ್‌ಸಿಆರ್, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದ್ದರಿಂದ ಜನರು ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿಬಂದರು. ಈ ಭೂಕಂಪನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

Source link

ಕೆಲ ವರ್ಷಗಳ ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ: ಮಾಜಿ ಸಚಿವ ಬೆಳಮಗಿ ಕಣ್ಣೀರು

ಕಲಬುರಗಿ, (ಏಪ್ರಿಲ್ 03): ದುಷ್ಕರ್ಮಿಗಳು ಫೈನಾನ್ಸ್ ಕಚೇರಿಗೆ ನುಗ್ಗಿ ಕರ್ನಾಟಕದ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅಳಿಯನನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಲಬುರಗಿಯ ಸಿದ್ದೇಶ್ವರ ಬಡಾವಣೆಯ ನಿವಾಸಿ ಅನೀಲ್ ರಾಠೋಡ್ (45)ಕೊಲೆಯಾದ ವ್ಯಕ್ತಿ. ಅನೀಲ್ ರಾಠೋಡ್ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರ ಅಳಿಯನಾಗಿದ್ದು, ಕಲಬುರಗಿಯ ಪಿ ಆ್ಯಂಡ್​ ಟಿ ಕಾಲೋನಿಯ ವೆಂಕಟೇಶ್ವರ್​ ಕಾಂಪ್ಲೆಕ್ಸ್​ನಲ್ಲಿ ಫೈನಾನ್ಸ್​ ನಡೆಸುತ್ತಿದ್ದರು. ಆದ್ರೆ, ದುಷ್ಕರ್ಮಿಗಳು ಫೈನ್ಸಾನ್ಸ್ ಕಚೇರಿಗೆ ನುಗ್ಗಿ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನು ಈ ಬಗ್ಗೆ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಮಾತನಾಡಿದ್ದು, ಕೆಲ ವರ್ಷಗಳ ಹಿಂದೆ ನಮ್ಮ ಸಂಬಂಧಿಯನ್ನ ಕಟ್ಟಡ ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿತ್ತು. ಇದೀಗ ದುಷ್ಕರ್ಮಿಗಳು ಫೈನಾನ್ಸ್‌ಗೆ ನುಗ್ಗಿ ನಮ್ಮ ಅಳಿಯನನ್ನೇ ಹತ್ಯೆ ಮಾಡಿದ್ದು, ಕೂಡಲೇ ಪೊಲೀಸರು ಹಂತಕರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಫೈನಾನ್ಸ್ ಕಚೇರಿಗೆ ನುಗ್ಗಿ ಮಾಜಿ ಸಚಿವರ ಸಂಬಂಧಿಯ ಹತ್ಯೆ: ಬೆಚ್ಚಿಬಿದ್ದ ಕಲಬುರಗಿ

Source link

ದಾಖಲೆ ಬರೆದ ಬೆಂಗಳೂರಿನ ಕೋರಮಂಗಲ ಆರ್ಟಿಓ ‌ಕಚೇರಿ: ರಾಜ್ಯದಲ್ಲಿ ನಂ 1, ದೇಶದಲ್ಲಿ 3ನೇ ಸ್ಥಾನ

ಬೆಂಗಳೂರು, ಏಪ್ರಿಲ್​ 03: ಸದಾ ಒಂದಿಲ್ಲೊಂದು ನೆಗೆಟಿವ್ ಸುದ್ದಿಯಲ್ಲಿರುವ ಬೆಂಗಳೂರಿನ ಸೆಂಟ್ರಲ್ ಆರ್​ಟಿಓ (Koramangala RTO) ಕಚೇರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಯಾವುದೇ ನೆಗೆಟಿವ್ ವಿಚಾರವಾಗಿ ಅಲ್ಲದೇ ಹೊಸ ದಾಖಲೆಯೊಂದನ್ನು ಬರೆದಿದೆ. ದೇಶದಲ್ಲೇ ಅತೀ ಹೆಚ್ಚು ಆದಾಯ ಗಳಿಸಿದ 3ನೇ ಅತಿದೊಡ್ಡ ಆರ್​ಟಿಓ ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದಿಲ್ಲೊಂದು ಅಕ್ರಮ, ಹಗರಣ ಆರೋಪದಲ್ಲಿ ಸುದ್ದಿಯಾಗುವ ಬೆಂಗಳೂರಿನ ಸೆಂಟ್ರಲ್ ಕೋರಮಂಗಲ ಆರ್​ಟಿಓ ಇದೀಗ ದೇಶದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದು, ಈ ಬಾರಿ KA-01 ಕೋರಮಂಗಲ ಆರ್​ಟಿಓ ಆದಾಯ ಗಳಿಸುವುದರಲ್ಲಿ ನಂ-1 ಬಂದಿದೆ. ದೇಶದಲ್ಲೇ ಅತಿಹೆಚ್ಚು ರಾಜಸ್ವ ಸಂಗ್ರಹ ಮಾಡಿದ 3ನೇ ಅತಿದೊಡ್ಡ ಆರ್​ಟಿಓ ಕಚೇರಿ ಎಂಬ ದಾಖಲೆ ಬರೆದಿದೆ.

ಇದನ್ನೂ ಓದಿ; ಮೈಸೂರು ರೈಲ್ವೆ ದಾಖಲೆ: ಸರಕು ಸಾಗಣೆ-ಪಾರ್ಸೆಲ್, ಟಿಕೆಟ್ ಪರಿಶೀಲನೆಯಲ್ಲಿ ಕೋಟ್ಯಂತರ ರೂ ಆದಾಯ

ಇತ್ತ ರಾಜ್ಯದಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಮೊದಲ KA-01 ಆರ್​ಟಿಓ ಎನ್ನುವ ದಾಖಲೆಯನ್ನು ನಿರ್ಮಿಸಿದೆ. 2025-26 ಆರ್ಥಿಕ ವರ್ಷದಲ್ಲಿ ಕೋರಮಂಗಲ ಆರ್​​ಟಿಓ ಕಚೇರಿ ಬರೋಬ್ಬರಿ 1273 ಕೋಟಿ ರೂ ರಾಜಸ್ವ ಸಂಗ್ರಹ ಮಾಡಿದೆ.

ಯಾವ ಆರ್​​ಟಿಓ ಕಚೇರಿಗೆ ಯಾವ ಸ್ಥಾನ

ಇನ್ನು ದೇಶದಲ್ಲಿ ಮೊದಲ ಸ್ಥಾನವನ್ನು ಮಹಾರಾಷ್ಟ್ರದ ಪುಣೆ ಆರ್​​ಟಿಓ ಪಡೆದುಕೊಂಡು 1900 ಕೋಟಿ ರೂ ಆದಾಯ ಗಳಿಸಿದ್ದಾರೆ. 1500 ಕೋಟಿ ರೂ ರಾಜಸ್ವ ಸಂಗ್ರಹ ಮಾಡುವ ಮೂಲಕ ಮಹಾರಾಷ್ಟ್ರದ ಪಿಂಪ್ರಿ ಆರ್​ಟಿಓ ಕಚೇರಿ ಎರಡನೇ ಸ್ಥಾನ ಪಡೆದುಕೊಂಡಿದೆ. 1273 ಕೋಟಿ ರೂ ಆದಾಯ ಗಳಿಸುವ ಮೂಲಕ ಕೋರಮಂಗಲ ಆರ್​​ಟಿಓ ರಾಜ್ಯದಲ್ಲೇ ಅತಿ ಹೆಚ್ಚು ರಾಜಸ್ವ ಸಂಗ್ರಹ ಮಾಡಿದ ಆರ್​ಟಿಓ ಕಚೇರಿಯಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಜಿಬಿಎ: ಎಲ್ಲಿಂದ ಎಲ್ಲಿಗೆ ಸಂಪರ್ಕ?

ದೇಶದಲ್ಲಿ 1100 ಆರ್​​ಟಿಓ ಕಚೇರಿಗಳ ಪೈಕಿ ಕೋರಮಂಗಲ ಆರ್​ಟಿಓ ಕಚೇರಿ 3ನೇ ಸ್ಥಾನ ಪಡೆದುಕೊಂಡಿದೆ. ಫ್ಯಾನ್ಸಿ ನಂಬರ್, ಪರ್ಮಿಟ್, ಎಫ್‌ಸಿ ನವೀಕರಣ, ವಾಹನ ತಪಾಸಣೆ ಸೇರಿದಂತೆ ಹಲವು ರೀತಿಯ ಆರ್​ಟಿಓ ಸೇವೆಗಳಿಂದ ಅತಿಹೆಚ್ಚು ರಾಜಸ್ವ ಗಳಿಸಿದೆ.

ಒಟ್ಟಿನಲ್ಲಿ ಈ ಬಾರಿಯ ಆರ್ಥಿಕ ವರ್ಷದಲ್ಲಿ 1273 ಆದಾಯ ಗಳಿಸುವ ಮೂಲಕ ದೇಶದಲ್ಲೇ ಮೂರನೇ ಸ್ಥಾನ ಪಡೆದಿದ್ದು, ಬರುವ ಆರ್ಥಿಕ ವರ್ಷದಲ್ಲಿ ಎರಡನೇ ಸ್ಥಾನ ಪಡೆಯುವ ಗುರಿ ಹಾಕಿಕೊಂಡಿರುವುದು ವಿಶೇಷ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದಿಂದ ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್

ರವಿ ಶ್ರೀವತ್ಸ ಅವರು ‘ಗ್ಯಾಂಗ್ಸ್ ಆಫ್ ಯುಕೆ’ (Gangs of UK) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಒರಟ ಪ್ರಶಾಂತ್‍, ಪದ್ಮಾ ವಾಸಂತಿ, ಪ್ರವೀಣ್, ಮುನಿ, ಸೋನು ಉಪಾಧ್ಯ, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ಪ್ರಜ್ವಲ್ ಮಸ್ಕಿ, ನವೀನ್, ವಿಕಾಸ್, ಉಮೇಶ್, ಅಮೋಘ್‍ ಮುಂತಾದ ಕಲಾವಿದರು ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಚಿತ್ರದ ಟ್ರೇಲರ್ ಸಖತ್ ಮಾಸ್ ಆಗಿದೆ. ಏಪ್ರಿಲ್ 10ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿದರು. ನಟ ಒರಟ ಪ್ರಶಾಂತ್ (Orata Prashanth) ಅವರ ವೃತ್ತಿಜೀವನದಲ್ಲಿ ಈ ಚಿತ್ರ ಭಿನ್ನವಾಗಿದೆ ಎಂಬುದು ಟ್ರೇಲರ್ ನೋಡಿದರೆ ತಿಳಿಯುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಈ ಸಿನಿಮಾದಿಂದ ಬೇರೊಂದು ಅಧ್ಯಾಯ ಆರಂಭ ಆಗಲಿದೆ ಎಂದು ಪ್ರಶಾಂತ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್ ಮಲ್ಯ ಅಥವಾ ಲಲಿತ್ ಮೋದಿ ಪಾತ್ರದಲ್ಲಿ ‘ಧುರಂಧರ್’ ನಟ ಅರ್ಜುನ್ ರಾಮ್​ಪಾಲ್?

‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಸಿನಿಮಾಗಳ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಅರ್ಜುನ್ ರಾಮ್​ಪಾಲ್ (Arjun Rampal) ಈಗ ಒಟಿಟಿ ಮೂಲಕ ಅಬ್ಬರಿಸಲು ಸಿದ್ಧರಾಗಿದ್ದಾರೆ. ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಬಿಲಿಯನೇರ್’ (Billionaire) ವೆಬ್ ಸರಣಿಯಲ್ಲಿ ಅರ್ಜುನ್ ರಾಮ್​ಪಾಲ್ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಬಗ್ಗೆ ಈಗ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿದೆ. ಯಾರಿದು ಬಿಲಿಯನೇರ್ ಎಂಬ ಪ್ರಶ್ನೆ ಉದ್ಭವ ಆಗಿದೆ.

ವಿಜಯ್ ಮಲ್ಯ ಅಥವಾ ಲಲಿತ್ ಮೋದಿ ರೀತಿ ಒಬ್ಬ ಪ್ರಭಾವಿ ಉದ್ಯಮಿಯ ಮಹತ್ವಾಕಾಂಕ್ಷೆ, ಅಧಿಕಾರದ ಹಪಾಹಪಿ ಮತ್ತು ಯಶಸ್ಸಿನ ಹಿಂದಿನ ಕರಾಳ ಮುಖವನ್ನು ಈ ಸರಣಿ ಅನಾವರಣಗೊಳಿಸಲಿದೆ. ಆದರೆ, ಈ ಕಥೆ ನಿಜ ಜೀವನದ ವ್ಯಕ್ತಿಗಳಿಂದ ಪ್ರೇರಿತವಾಗಿದೆಯೇ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಆದ್ದರಿಂದ ‘ಬಿಲಿಯನೇರ್’ ವೆಬ್ ಸಿರೀಸ್ ಕೌತುಕ ಮೂಡಿಸಿದೆ.

‘ಕಿಂಗ್ ಆಫ್ ಗುಡ್ ಟೈಮ್ಸ್’ ಎಂದು ಕರೆಸಿಕೊಳ್ಳುತ್ತಿದ್ದ ವಿಜಯ್ ಮಲ್ಯ ಅವರ ವೈಭವೋಪೇತ ಜೀವನ ಶೈಲಿ ಮತ್ತು ನಂತರ ಎದುರಿಸಿದ ಕಾನೂನು ಸಂಕಷ್ಟಗಳಿಗೂ, ಈ ಸರಣಿಯ ಕಥೆಗೂ ಸಾಮ್ಯತೆ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಅದೇ ರೀತಿ, ಐಪಿಎಲ್ ಮೂಲಕ ಕ್ರಿಕೆಟ್ ಜಗತ್ತನ್ನೇ ಬದಲಿಸಿದ ಲಲಿತ್ ಮೋದಿ ಅವರ ಪಾತ್ರದ ಎಳೆಗಳು ಕೂಡ ಈ ಸರಣಿಯಲ್ಲಿ ಇರಲಿವೆ ಎಂಬ ಮಾತು ಕೇಳಿಬರುತ್ತಿದೆ. ಅಧಿಕಾರ, ರಾಜಕಾರಣ ಮತ್ತು ಉದ್ಯಮ ಲೋಕದ ಸಂಘರ್ಷಗಳು ಇವರ ಜೀವನಕ್ಕೆ ಹತ್ತಿರವಾಗಿವೆ ಎನ್ನಲಾಗುತ್ತಿದೆ.

ಈ ಹಿಂದೆ ‘ಸ್ಕ್ಯಾಮ್’ ವೆಬ್ ಸರಣಿಯ ಮೂಲಕ ನೈಜ ಘಟನೆಗಳನ್ನು ರೋಚಕವಾಗಿ ತೆರೆಮೇಲೆ ತಂದಿದ್ದ ಹನ್ಸಲ್ ಮೆಹ್ತಾ ಅವರು, ‘ಬಿಲಿಯನೇರ್’ ಸರಣಿಯಲ್ಲೂ ಅಂತಹದ್ದೇ ಮ್ಯಾಜಿಕ್ ಮಾಡಲಿದ್ದಾರೆ ಎಂಬ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಾಗಿರದೆ, ಹಲವು ಉದ್ಯಮಿಗಳ ಜೀವನದ ಘಟನೆಗಳನ್ನು ಸೇರಿಸಿ ಸಿದ್ಧಪಡಿಸಿದ ಕಾಲ್ಪನಿಕ ಕಥೆಯಾಗಿರುವ ಸಾಧ್ಯತೆಯಿದೆ.

ಇದನ್ನೂ ಓದಿ: ವಯಸ್ಸಲ್ಲಿ 15 ವರ್ಷ ಕಿರಿಯವಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅರ್ಜುನ್ ರಾಮ್​ಪಾಲ್

ಅರ್ಜುನ್ ರಾಮ್ಪಾಲ್ ಅವರು ಈ ಸರಣಿಯಲ್ಲಿ ಅತ್ಯಂತ ಗಂಭೀರವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಕಥೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಸೋಶಿಯಲ್ ಮೀಡಿಯಾದಲ್ಲಿ ‘ಬಿಲಿಯನೇರ್’ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಅರ್ಜುನ್ ರಾಮ್​ಪಾಲ್ ಮತ್ತು ಹನ್ಸಲ್ ಮೆಹ್ತಾ ಅವರ ಈ ಕಾಂಬಿನೇಷನ್ ಆದ್ದರಿಂದ ನಿರೀಕ್ಷೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CSK vs PBKS Record Alert: ಚೆಪಾಕ್ ಮೈದಾನದಲ್ಲಿ ಇತಿಹಾಸ ಸೃಷ್ಟಿಸಿದ ಆಯುಷ್ ಮ್ಹಾತ್ರೆ

ಚೆನ್ನೈ ಸೂಪರ್ ಕಿಂಗ್ಸ್‌ನ ತವರು ಮೈದಾನವಾದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ ಏಳನೇ ಪಂದ್ಯದಲ್ಲಿ, ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಪಂಜಾಬ್ ಕಿಂಗ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಹಾದಿಯಲ್ಲಿ ಅವರು ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಅಂತಿಮವಾಗಿ ಆಯುಷ್ 43 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 73 ರನ್ ಬಾರಿಸಿ ಔಟಾದರು.

ಈ ಅದ್ಭುತ ಇನ್ನಿಂಗ್ಸ್‌ನೊಂದಿಗೆ, ಆಯುಷ್ ಮ್ಹಾತ್ರೆ, ಚೆಪಾಕ್ ಕ್ರೀಡಾಂಗಣದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 18 ವರ್ಷ 261 ದಿನಗಳಲ್ಲಿ ಈ ಸಾಧನೆ ಮಾಡಿದ ಆಯುಷ್, ಈ ಹಿಂದೆ 21 ವರ್ಷ 148 ದಿನಗಳಲ್ಲಿ ಈ ಸಾಧನೆ ಮಾಡಿದ್ದ ರೈನಾ ಅವರ ದಾಖಲೆಯನ್ನು ಮುರಿದರು.

ಇದರ ಜೊತೆಗೆ 19 ವರ್ಷಕ್ಕೂ ಮೊದಲೇ ಐಪಿಎಲ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ ದಾಖಲಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಇದೀಗ ಆಯುಷ್ ಸೇರಿದ್ದಾರೆ. ಆಯುಷ್ ಇಲ್ಲಿಯವರೆಗೆ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದು, ಇದುವರೆಗೆ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಐಪಿಎಲ್ 2025 ರ ನಂತರ ಪವರ್‌ಪ್ಲೇನಲ್ಲಿ ಕನಿಷ್ಠ 100 ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಆಯುಷ್ ಮ್ಹಾತ್ರೆ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 183.93 ಸ್ಟ್ರೈಕ್ ರೇಟ್‌ನೊಂದಿಗೆ, ಈ ಪಟ್ಟಿಯಲ್ಲಿ ಆಯುಷ್ ಅಗ್ರಸ್ಥಾನದಲ್ಲಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 34.33 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link