All posts by nagaraj11081993

ರಂಗೇರಿದ ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಯಾವ ಕಡೆ?

ರಂಗೇರಿದ ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಯಾವ ಕಡೆ?

ಬಾಗಲಕೋಟೆ, (ಮಾರ್ಚ್ 26): ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾವು ರಂಗೇರಿದೆ. ಆದ್ರೆ, ಈ ಉಪಚುನಾವಣೆಯಲ್ಲಿ ಕಾಂಗ್ರೆಸ್​​​ಗೆ ಮುಸ್ಲಿಂ ಸಮುದಾಯ ಕಂಟಕವಾಗಿ ಪರಿಣಮಿಸಿದೆ. ಅದರಲ್ಲೂ ಮುಖ್ಯವಾಗಿ ದಾವಣಗೆರೆಯಲ್ಲಿ ಮುಸ್ಲಿಂ ಮುಖಂಡರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದು, ಬಾಗಲಕೋಟೆ ಮುಸ್ಲಿಮರಿಗೂ ಕಾಂಗ್ರೆಸ್​​ಗೆ ಮತ ಹಾಕಬೇಡಿ ಎಂದು ಕರೆ ಕೊಟ್ಟಿದ್ದಾರೆ. ಹೀಗಾಗಿ ಬಾಗಲಕೋಟೆಯಲ್ಲೂ ದಾಣವಗೆರೆ ಮುಸ್ಲಿಂ ಸಮುದಾಯದ ಬಂಡಾಯದ ಬಿಸಿ ತಟ್ಟುತ್ತಾ ಎನ್ನುವ ಆತಂಕ ಇತ್ತು. ಆದ್ರೆ, ಬಾಗಲಕೋಟೆ ಮುಸ್ಲಿಮರು ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಬಾಗಲಕೋಟೆಯಲ್ಲಿ ನಮ್ಮ ಸಮುದಾಯದಿಂದ ಯಾವುದೇ ಬಂಡಾಯ ಇಲ್ಲ. ನಾವೆಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ ನಮ್ಮ ಸಮುದಾಯಕ್ಕೆ ಆದ ಅನ್ಯಾಯ ಹೈಕಮಾಂಡ್ ನಾಯಕರು ಸರಿ ಮಾಡ್ತೇವೆ ಎಂದು ಹೇಳಿದ್ದಾರೆ. ದಾವಣೆಗೆರೆ ವಸ್ತು ಸ್ಥಿತಿ ಬೇರೆಯೇ ಇದೆ. ಬಾಗಲಕೋಟೆಯ ವಸ್ತು ಸ್ಥಿತಿ ಬೇರೆ ಇದೆ. ಬಾಗಲಕೋಟೆಯ ಶಾಸಕರಾಗಿದ್ದ ದಿವಂಗತ ಎಚ್.ವೈ ಮೇಟಿ ಅವರು ನಮ್ಮ ಸಮುದಾಯದ ಜನರನ್ನು ಸರಿಯಾಗಿ ನೋಡಿಕೊಂಡಿದ್ದಾರೆ. ನಾವೆಲ್ಲರೂ ಮೇಟಿ ಕುಟುಂಬದ ಪರ ನಿಲ್ಲುತ್ತೇವೆ. ಬಾಗಲಕೋಟೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಜೊತೆಗೆ ನಿಲ್ಲುತ್ತೆ. ಈ ಬಾರಿ ನಾವು ಉಮೇಶ್ ಪರ ಕೆಲಸ ಮಾಡ್ತೇವೆ, ಇಲ್ಲಿ ನಮ್ಮ ಬಂಡಾಯ ಇಲ್ಲ ಎಂದಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ನಿಟ್ಟುಸಿರುಬಿಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: 12 ಸ್ಥಳ, 50 ಪಂದ್ಯಗಳು; ಐಪಿಎಲ್​ನ ಎರಡನೇ ಹಂತದ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

2026 ರ ಐಪಿಎಲ್​ನ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. 50 ಪಂದ್ಯಗಳನ್ನು ಒಳಗೊಂಡ ಲೀಗ್ ಹಂತದ ಉಳಿದ ಪಂದ್ಯಗಳು ಏಪ್ರಿಲ್ 13 ರಿಂದ ಮೇ 24, 2026 ರವರೆಗೆ ಭಾರತದ 12 ಸ್ಥಳಗಳಲ್ಲಿ ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಜೈಪುರ, ಧರ್ಮಶಾಲಾ, ರಾಯ್ಪುರ್ ಮತ್ತು ನ್ಯೂ ಚಂಡೀಗಢದಲ್ಲಿ ನಡೆಯಲಿವೆ. ಉಳಿದಂತೆ ಪ್ಲೇಆಫ್‌ ಸುತ್ತಿನ 4 ಪಂದ್ಯಗಳ ವೇಳಾಪಟ್ಟಿಯನ್ನು ಕೊನೆಯ ವಾರದಲ್ಲಿ ಘೋಷಿಸಲಾಗುವುದು. ಆದಾಗ್ಯೂ ಈ ಆವೃತ್ತಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು 74 ರಿಂದ 84 ಕ್ಕೆ ಹೆಚ್ಚಿಸಲಾಗುವುದು ಎಂಬ ಸುದ್ದಿ ಹರಿದಾಡಿತ್ತು. ಆದರೆ ಬಿಸಿಸಿಐ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸದೆ 74 ಪಂದ್ಯಗಳಿಗೆ ಸೀಮಿತಗೊಳಿಸಿದೆ.

Source link

ಪ್ರತಿ ಸಿನಿಮಾದ ಸಂಭಾವನೆಯಲ್ಲಿ ತಮ್ಮ ಗುರುವಿಗೆ 25 ಸಾವಿರ ಕೊಡ್ತಾರೆ ಅನುಪಮ್ ಖೇರ್

ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ (Anupam Kher) ಕಳೆದ 44 ವರ್ಷಗಳಿಂದ ನಟಿಸುತ್ತಿದ್ದಾರೆ. ಈ ವರೆಗೆ ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1982 ರಲ್ಲಿ ಅವರು ನಟನೆ ಆರಂಭಿಸಿದರು. ಅವರ ನಟನೆಯ ಎರಡನೇ ಸಿನಿಮಾ ಹಾಗೂ ಅನುಪಮ್ ಖೇರ್ ಅವರಿಗೆ ದೊಡ್ಡ ಗುರುತು ನೀಡಿದ ಸಿನಿಮಾ ‘ಸಾರಾಂಶ್’. ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್. ‘ಸಾರಾಂಶ್’ ಬಳಿಕ ದೊಡ್ಡ ಸ್ಟಾರ್ ಆಗಿ ಬೆಳೆದರು. ಅನುಪಮ್ ಖೇರ್ ಅವರು ಆಗಿನಿಂದಲೂ ಮಹೇಶ್ ಭಟ್ ಅವರನ್ನು ತಮ್ಮ ಗುರು ಎಂದೇ ಭಾವಿಸುತ್ತಾರೆ, ಆರಾಧಿಸುತ್ತಾರೆ. ಅದು ಯಾವ ಮಟ್ಟಿಗಿನ ಗುರು ಭಕ್ತಿ ಎಂದರೆ ಅನುಪಮ್ ಖೇರ್, ಪ್ರತಿ ಸಿನಿಮಾ ಒಪ್ಪಿಕೊಂಡಾಗಲೂ 25 ಸಾವಿರ ರೂಪಾಯಿ ಹಣವನ್ನು ಮಹೇಶ್ ಭಟ್ ಅವರಿಗೆ ಕಳಿಸುತ್ತಾರಂತೆ.

ಇತ್ತೀಚೆಗೆ ಶೋ ಒಂದರಲ್ಲಿ ಅನುಪಮ್ ಖೇರ್ ಅವರು ಮಹೇಶ್ ಭಟ್ ಅವರೊಟ್ಟಿಗಿನ ತಮ್ಮ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ತಾವು ನಟಿಸುವ ಪ್ರತಿಯೊಂದು ಸಿನಿಮಾದ ಸಂಭಾವನೆಯಿಂದ 25,000 ರೂಪಾಯಿಗಳನ್ನು ತಮ್ಮ ಗುರು ಮಹೇಶ್ ಭಟ್ ಅವರಿಗೆ ನೀಡುತ್ತಾರಂತೆ. ‘ಇದು ನಾನು ಅವರಿಗೆ ಸಲ್ಲಿಸುವ ಗೌರವ ಮತ್ತು ಗುರುದಕ್ಷಿಣೆ. 1984ರಲ್ಲಿ ‘ಸಾರಂಶ್’ ಚಿತ್ರದ ಮೂಲಕ ನನಗೆ ಜೀವನ ನೀಡಿದವರು ಅವರು. ಅಂದಿನಿಂದ ಇಂದಿನವರೆಗೂ ನಾನು ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದೇನೆ’ ಎಂದು ಖೇರ್ ತಿಳಿಸಿದ್ದಾರೆ.

ಇದೇ ಸಂದರ್ಶನದಲ್ಲಿ ತಮ್ಮ ಫಿಟ್ನೆಸ್ ಬಗ್ಗೆಯೂ ಮಾತನಾಡಿದ 69 ವರ್ಷದ ನಟ, ತಮಗೆ ಈಗಿನ ವಯಸ್ಸಿನಲ್ಲೂ ಸಿಕ್ಸ್ ಪ್ಯಾಕ್ ಅಥವಾ ಉತ್ತಮ ಮೈಕಟ್ಟು ಪ್ರದರ್ಶಿಸುವ ಆಸೆ ಇದೆ ಎಂದಿದ್ದಾರೆ. ‘ನಾನು ನನ್ನ ದೇಹವನ್ನು ಪ್ರದರ್ಶಿಸಲು ಬಯಸುತ್ತೇನೆ. ಜನರು ನನ್ನ ಫಿಟ್ನೆಸ್ ನೋಡಿ ಆಶ್ಚರ್ಯಪಡಬೇಕು ಎಂಬುದು ನನ್ನ ಇಚ್ಛೆ. ಅದಕ್ಕಾಗಿ ನಾನು ಕಠಿಣ ವ್ಯಾಯಾಮ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. ಅನುಪಮ್ ಖೇರ್, 28 ವರ್ಷದ ನಟನಾಗಿದ್ದಾಗ, 65 ವರ್ಷದ ವೃದ್ಧನ ಪಾತ್ರವನ್ನು ಮಹೇಶ್ ಭಟ್ ನೀಡಿದ್ದರು. ಮೊದಲು ಈ ಪಾತ್ರಕ್ಕೆ ಸಂಜೀವ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು, ಆದರೆ ಭಟ್ ಅವರು ಖೇರ್ ಅವರ ಪ್ರತಿಭೆ ನಂಬಿ ಅವಕಾಶ ನೀಡಿದ್ದರು.

ಇದನ್ನೂ ಓದಿ:‘ಕಾಂತಾರ’ ವೀಕ್ಷಿಸಿ ರಿಷಬ್​​ಗೆ ವಿಡಿಯೋ ಕಾಲ್ ಮಾಡಿದ ಅನುಪಮ್ ಖೇರ್

ನಿರ್ದೇಶಕ ಮಹೇಶ್ ಭಟ್ ಅವರು ಈ ಹಣವನ್ನು ಸ್ವೀಕರಿಸುತ್ತಾರೆಯೇ ಎಂಬ ಪ್ರಶ್ನೆಗೆ, ‘ಅವರು ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ, ಅದು ನಮ್ಮ ನಡುವಿನ ನಂಬಿಕೆ ಮತ್ತು ಗೌರವದ ಸಂಕೇತ’ ಎಂದು ಖೇರ್ ಈ ಹಿಂದೆ ತಿಳಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಅನುಪಮ್ ಖೇರ್ ಅವರು ಯೋಗ ಮತ್ತು ಜಿಮ್‌ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಶಾರುಖ್ ಖಾನ್ ಅಥವಾ ಸಲ್ಮಾನ್ ಖಾನ್ ಅವರಂತೆ ತಮಗೂ ಫಿಟ್ ಬಾಡಿ ಇರಬೇಕು ಎಂಬುದು ಅವರ ಇತ್ತೀಚಿನ ಸಿನಿಮಾಗಳ ತಯಾರಿಗಾಗಿ ಇಟ್ಟುಕೊಂಡಿರುವ ಗುರಿಯಾಗಿದೆಯಂತೆ.

ಅನುಪಮ್ ಖೇರ್ ಅವರು ಹಿಂದಿ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ, ಇಂಗ್ಲೀಷ್, ಚೈನೀಸ್, ಬೆಂಗಾಲಿ ಮತ್ತು ಕನ್ನಡ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಅನುಪಮ್ ಖೇರ್ ಅವರು ಶಿವರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ ‘ಘೋಸ್ಟ್’ನಲ್ಲಿ ನಟಿಸಿದ್ದಾರೆ. 2012 ರಲ್ಲಿ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ ‘ಪಾರಿಜಾತ’ನಲ್ಲಿಯೂ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಹುಲ್ ಗಾಂಧಿಯವರೇ ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ: ಬಿಜೆಪಿ ಸಂಸದನ ಪ್ರಶ್ನೆ

ನವದೆಹಲಿ, ಮಾರ್ಚ್​ 26: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಮೀಸಲಾತಿ ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲಿ ನಿಮ್ಮ ತಾಯಿಗೆ ಏಕೆ ಚಿಕಿತ್ಸೆ ಕೊಡಿಸುತ್ತಿದ್ದೀರ, ಏಮ್ಸ್​ನಲ್ಲಿ ಚಿಕಿತ್ಸೆ ಕೊಡಿಸಿದ್ದರೆ ನಿಮಗೆ ಶೇ.60ರಷ್ಟು ಮೀಸಲಾತಿ ಇರುವ ವೈದ್ಯರೇ ಸಿಗುತ್ತಿದ್ದರು. ನಿಮಗೆ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ಇಲ್ಲವೇ, ನಾವೆಲ್ಲರೂ ಸೋನಿಯಾ ಬೇಗ ಚೇತರಿಸಿಕೊಳ್ಳಲೆಂದೇ ಬಯಸುತ್ತೇವೆ, ಜಾರ್ಜ್ ಸೊರಸ್ ಅವರ ಮಾತು ಕೇಳಿ ಸಮಾಜವನ್ನು ವಿಭಜಿಸಲು ಯಾಕೆ ನೀವು ಪ್ರಯತ್ನಿಸುತ್ತಿದ್ದೀರಿ ಎಂದು ದುಬೆ ಪ್ರಶ್ನಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಧುರಂಧರ್ 3’ ಎಫೆಕ್ಟ್​?; ‘ಆಪರೇಷನ್ ಸಿಂಧೂರ್’ ಸಿನಿಮಾ ಘೋಷಣೆ ಮಾಡಿದ ವಿವೇಕ್ ಅಗ್ನಿಹೋತ್ರಿ

ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಲಕ ಗಮನ ಸೆಳೆದರು. ಕಾಶ್ಮೀರಿ ಪಂಡಿತರ ಮೇಲೆ ನಡೆದ ದಾಳಿಯ ಕುರಿತು ಈ ಸಿನಿಮಾ ಇತ್ತು. ನಂತರ ಬಂದ ‘ದಿ ವ್ಯಾಕ್ಸಿನ್ ವಾರ್’ ಹಾಗೂ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾಗಳು ಗಮನ ಸೆಳೆಯಲು ವಿಪಲವಾದವು. ಈಗ ವಿವೇಕ್ ಅವರು ಪೆಹಲ್ಗಾಮ್ ದಾಳಿ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರು ಇಟ್ಟಿದ್ದಾರೆ. ಪೆಹಲ್ಗಾಮ್ ದಾಳಿ ಬಳಿಕ ನಡೆಯುವ ಘಟನೆಗಳನ್ನು ವಿವೇಕ್ ಕಟ್ಟಿಕೊಡಲಿದ್ದಾರೆ.

ಜಮ್ಮು ಕಾಶ್ಮೀರದ ಪೆಹಲ್ಗಾಮ್​​ ಅಲ್ಲಿ ಉಗ್ರರು ದಾಳಿ ಮಾಡಿದರು. ವಿವಾಹಿತರಲ್ಲಿ ಪುರಷರನ್ನೇ ಟಾರ್ಗೆಟ್ ಮಾಡಿ ಈ ದಾಳಿ ನಡೆಸಲಾಯಿತು. ಒಟ್ಟೂ 26 ಜನ ಟೂರಿಸ್ಟ್​ಗಳನ್ನು ಕೊಲ್ಲಲಾಯಿತು. ಈ ದಾಳಿ ಇಡೀ ಭಾರತವೇ ತತ್ತರಿಸುವಂತೆ ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಹಾಗೂ ಪಾಕಿಸ್ತಾ ಆಕ್ರಮಿತ ಭಾಗಗಳ ಮೇಲೆ ಭಾರತ ದಾಳಿ ನಡೆಸಿತು. ಈ ಘಟನೆ ಆಧರಿಸಿ ‘ಆಪರೇಷನ್ ಸಿಂಧೂರ್’ ಮಾಡಲಾಗುದು ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

‘ಕೆಲವು ಕಥೆಗಳನ್ನು ಆಯ್ಕೆ ಮಾಡಲಾಗುವುದಿಲ್ಲ, ಅವು ನಿಮ್ಮನ್ನು ಆಯ್ಕೆ ಮಾಡುತ್ತವೆ. ಆಪರೇಷನ್ ಸಿಂಧೂರ್ ಅಂತಹ ಕಥೆಗಳಲ್ಲಿ ಒಂದು. ಪ್ರಾಮಾಣಿಕತೆ, ಧೈರ್ಯ ಮತ್ತು ಜವಾಬ್ದಾರಿಯಿಂದ ಹೇಳಬೇಕಾದ ಕಥೆ. ಇದು ಕೇವಲ ಸಿನಿಮಾ ಅಲ್ಲ, ಇದು ವಿಷಯಗಳನ್ನು ಹೊರಜಗತ್ತಿಗೆ ತೋರಿಸುವ ಪ್ರಕ್ರಿಯೆ. ಒಂದು ರಾಷ್ಟ್ರದಲ್ಲಿ ಇಷ್ಟು ದೊಡ್ಡ ಘಟನೆ ನಡೆದಾಗ ಅವುಗಳನ್ನು ಸತ್ಯಗಳನ್ನು ಹೇಳಿ ದಾಖಲಿಸುವುದು ಮುಖ್ಯವಾಗುತ್ತದೆ’ ಎಂದು ನಿರ್ಮಾಪಕ ಭೂಷಣ್ ಕುಮಾರ್ ಹೇಳಿದ್ದಾರೆ.

ನಿರ್ದೇಶಕ-ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮಾತನಾಡಿ, ‘ಭಾರತವು ಪೆಹಲ್ಗಾಮ್ ಭಯೋತ್ಪಾದನಾ ದಾಳಿಗೆ ಸೇಡು ತೀರಿಸಿಕೊಂಡಿದೆ. ಪಾಕಿಸ್ತಾನವನ್ನು ಶಿಕ್ಷಿಸಿದೆ ಮಾತ್ರವಲ್ಲದೆ, ಆಧುನಿಕ ಯುದ್ಧದಲ್ಲೂ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂದೂರ್ ಕುರಿತು ಸಿನಿಮಾ ಮಾಡಲಿರುವ ವಿವೇಕ್ ಅಗ್ನಿಹೋತ್ರಿ

ಸದ್ಯ, ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಭಾರತ ನಡೆಸಿದ ಆಪರೇಷನ್ ಆಧಾರವನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿವೇಕ್ ಅಗ್ನಿಹೋತ್ರಿ ಈ ಚಿತ್ರ ಘೋಷಿಸಿದರೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿರುಗಾಳಿ, ಮಳೆಯಲ್ಲಿ ಸಿಲುಕಿದ ಮಮತಾ ಬ್ಯಾನರ್ಜಿ ಇದ್ದ ಹೆಲಿಕಾಪ್ಟರ್, 8 ಬಾರಿ ಲ್ಯಾಂಡಿಂಗ್​ಗೆ ಯತ್ನ

ಕೋಲ್ಕತ್ತಾ, ಮಾರ್ಚ್​ 26: ಕೋಲ್ಕತ್ತಾದಲ್ಲಿ ಬಿರುಗಾಳಿ ಮತ್ತು ಮಳೆಯಿಂದಾಗಿ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಹೆಲಿಕಾಪ್ಟರ್ ಕೂಡ ಲ್ಯಾಂಡಿಂಗ್ ವೇಳೆ ಸಮಸ್ಯೆ ಎದುರಿಸಿದೆ. ಅರ್ಧ ಗಂಟೆ ತಡವಾಗಿ ಇಳಿದಿದೆ. ಅದಕ್ಕೂ ಮುನ್ನ 8 ಬಾರಿ ಲ್ಯಾಂಡಿಂಗ್​ಗೆ ಪ್ರಯತ್ನಿಸಲಾಗಿತ್ತು.

ವರದಿಗಳ ಪ್ರಕಾರ, ಮಮತಾ ಬ್ಯಾನರ್ಜಿ ಅವರಿದ್ದ ಹೆಲಿಕಾಪ್ಟರ್ ಕೋಲ್ಕತ್ತಾ ವಿಮಾನ ನಿಲ್ದಾಣದ ಮೇಲೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುತ್ತುತ್ತಿತ್ತು, ಏಕೆಂದರೆ ಹವಾಮಾನ ವೈಪರೀತ್ಯದಿಂದಾಗಿ ಅದಕ್ಕೆ ಇಳಿಯಲು ಅನುಮತಿ ನಿರಾಕರಿಸಲಾಗಿತ್ತು. ಮುಖ್ಯಮಂತ್ರಿ ತಮ್ಮ ಚುನಾವಣಾ ಪ್ರಚಾ ಮುಗಿಸಿ ಅಂಡಾಲ್‌ನಿಂದ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದರು.

ಅವರ ಸಣ್ಣ ಖಾಸಗಿ ವಿಮಾನವು ಮಧ್ಯಾಹ್ನ 3.39 ಕ್ಕೆ ಅಂಡಾಲ್ ವಿಮಾನ ನಿಲ್ದಾಣದಿಂದ ಹೊರಟು ಸಂಜೆ 4 ಗಂಟೆಯ ಸುಮಾರಿಗೆ ಕೋಲ್ಕತ್ತಾಗೆ ಆಗಮಿಸಬೇಕಿತ್ತು, ಆದರೆ ಹವಾಮಾನವು ಸಮಸ್ಯೆಗಳನ್ನು ಉಂಟುಮಾಡಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಳಗಾವಿ ಪೊಲೀಸರ ಭರ್ಜರಿ ಬೇಟೆ: ಗೋವಾ ಮೂಲದ ಖೋಟಾ ನೋಟ್ ಗ್ಯಾಂಗ್​ ಲಾಕ್​​

ಬೆಳಗಾವಿ, ಮಾರ್ಚ್​ 26: ಬೆಳಗಾವಿ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಖೋಟಾ ನೋಟು (Khota Notu) ದಂಧೆಯನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ್ದ ಗೋವಾ ಮೂಲದ ಗ್ಯಾಂಗ್​​ನ್ನು ಬಂಧಿಸಿದ್ದಾರೆ. ಎ1 ಮೊಹಮ್ಮದ್‌ ಅರ್ಬಾಜ್ (21), ಎ2 ರೂಪೇಶ್ ವಾಕೋಡೆ (26), ಎ3 ಮೊಹಮ್ಮದ್ ಹುಸೇನ್ ಭಕ್ಷಿ(23), ಶ್ರವಣಕುಮಾರ (25) ಬಂಧಿತರು. ಆರೋಪಿಗಳಿಂದ ಒಂದು ಕಾರು, 2 ಲಕ್ಷ 40 ಸಾವಿರ ರೂ ಮುಖ ಬೆಲೆಯ ಖೋಟಾ ನೋಟು ಮತ್ತು 4 ಮೊಬೈಲ್ ಜಪ್ತಿ ಮಾಡಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ

ಗೋವಾ ರಾಜ್ಯದ ಬಂಧಿತ ನಾಲ್ವರು ಆರೋಪಿಗಳು ಒಂದು ಲಕ್ಷ ರೂ ಅಸಲಿ ನೋಟಿಗೆ 2 ಲಕ್ಷ ರೂ ಖೋಟಾ ನೋಟು ನೀಡುತ್ತಿದ್ದರು. ಬೆಳಗಾವಿಯ ಖಡೇಬಜಾರ್ ಅಂಗಡಿಯಲ್ಲಿ ಖೋಟಾ ನೋಟು ಚಲಾವಣೆಗೆ ಗ್ಯಾಂಗ್​​ ಯತ್ನಿಸಿದೆ. ಸಂಶಯಗೊಂಡ ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅದರಂತೆ ನಾಲ್ವರನ್ನು ಬಂಧಿಸಿದ್ದು, ಇನ್ನೂ ಮೂವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

ಗೋವಾ ಜೈಲಿನಿಂದಲೇ ಖೋಟಾ ನೋಟು ದಂಧೆ

ಇನ್ನು ಖೋಟಾ ನೋಟ್ ಗ್ಯಾಂಗ್​ನ ಕಿಂಗ್ ಪಿನ್​ ಗೋವಾ ಜೈಲಿನಲ್ಲಿದ್ದಾನೆ. ಎ1 ಆರೋಪಿ ಮೊಹಮ್ಮದ್‌ ಅರ್ಬಾಜ್​ನ ಅಣ್ಣ ಮೊಹಮ್ಮದ್‌ ಸರ್ಫರಾಜ್ ಅಸಲಿ ಕಿಂಗ್ ಪಿನ್. ಜೈಲಿನಲ್ಲಿರುವ ಅಣ್ಣನೊಂದಿಗೆ ಫೋನ್​ ಮಾಡಿ ಖೋಟಾ ನೋಟು ತರಿಸಿಕೊಂಡಿದ್ದ. ಜೈಲಿನಲ್ಲಿ ಕುಳಿತುಕೊಂಡೇ ಫೋನ್​ ಮೂಲಕ ಸರ್ಪರಾಜ್​ ಆಪರೇಟ್ ಮಾಡುತ್ತಿದ್ದ.

ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಮಹಾರಾಷ್ಟ್ರ ಎಸ್​ಐಟಿ ತನಿಖಾ ವರದಿಯಲ್ಲಿ ಸ್ಫೋಟಕ ಅಂಶ!

ಗೋವಾದಲ್ಲಿ ವ್ಯಕ್ತಿಯೊಬ್ಬನಿಗೆ 1 ಲಕ್ಷ ರೂ ಅಸಲಿ ಹಣಕ್ಕೆ 2 ಲಕ್ಷ ರೂ ಖೋಟಾ ನೋಟ್ ಸಪ್ಲೈ ಮಾಡಿದ್ದರು. ಜೈಲಿನಲ್ಲಿರುವ ಅಣ್ಣನ ಸೂಚನೆಯಂತೆ ತಮ್ಮ ಖೋಟಾ ನೋಟು ಸಪ್ಲೈ ಮಾಡಿದ್ದ. ಖೋಟಾ ನೋಟ್ ಸಪ್ಲೈ ಮಾಡಿದ್ದ ಅಪರಿಚಿತ ಆರೋಪಿ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ. ಸದ್ಯ ಬೆಳಗಾವಿ ಸಿಸಿಬಿ ಪೊಲೀಸರಿಗೆ ಕೇಸ್ ರವಾನಿಸಲಾಗಿದ್ದು, ಉಳಿದ ಮೂವರು ಆರೋಪಿಗಳ ಬಂಧಿಸುವ ಹೊಣೆಗಾರಿಕೆ ಹೊತ್ತಿದೆ. ಬೆಳಗಾವಿ ಪೊಲೀಸ್ ಕಮಿಷನರ್ ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

2031ರವರೆಗೂ ಹಣದುಬ್ಬರ ಶೇ. 4ರಲ್ಲಿ ಇರುವಂತೆ ಮಾಡಿ: ಆರ್​ಬಿಐಗೆ ಟಾರ್ಗೆಟ್ ಕೊಟ್ಟ ಸರ್ಕಾರ

ನವದೆಹಲಿ, ಮಾರ್ಚ್ 26: ಕೇಂದ್ರ ಸರ್ಕಾರ ತನ್ನ ಹಣದುಬ್ಬರ (Retail Inflation) ನಿಲುವನ್ನು ಮುಂದುವರಿಸಿದೆ. ಮುಂದಿನ ಐದು ವರ್ಷ, ಅಂದರೆ 2023ರ ಮಾರ್ಚ್​ವರೆಗೂ ರೀಟೇಲ್ ಹಣದುಬ್ಬರ ಶೇ. 4 ಅನ್ನು ಕಾಯ್ದುಕೊಳ್ಳುವಂತೆ ಆರ್​ಬಿಐಗೆ ಸರ್ಕಾರ ಗುರಿ ಕೊಟ್ಟಿದೆ. ರೀಟೇಲ್ ಹಣದುಬ್ಬರ ಶೇ. 4, ಆಚೀಚೆ ಎರಡು ಪ್ರತಿಶತ ಮೀರದಂತೆ ಇರಬೇಕು ಎಂಬುದು ಸರ್ಕಾರದ ನಿರ್ದೇಶನ. ಅಂದರೆ, ಹಣದುಬ್ಬರವು ಶೇ. 2ರಿಂದ ಶೇ. 6ರ ಶ್ರೇಣಿಯಲ್ಲೇ ಇರುವಂತೆ ನೋಡಿಕೊಳ್ಳಬೇಕೆಂದು ಆರ್ಬಿಐಗೆ ಸರ್ಕಾರ ತಿಳಿಸಿದೆ.

ಆರ್ಥಿಕತೆಯ ವೇಗವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ದಿಷ್ಟ ಹಣದುಬ್ಬರವನ್ನು ನಿರೀಕ್ಷಿಸುತ್ತದೆ. ಹಣದುಬ್ಬರ ಆಚೀಚೆ ಏರುಪೇರಾದರೆ ಆರ್ಥಿಕ ಲಯಕ್ಕೆ ಧಕ್ಕೆಯಾಗುತ್ತದೆ. 2016ರಲ್ಲಿ ಸರ್ಕಾರವು ಹಣದುಬ್ಬರವನ್ನು ಐದು ವರ್ಷಗಳ ಕಾಲ ಶೇ. 4ರಷ್ಟು ಇಡಬೇಕೆಂದು ಆರ್​ಬಿಐಗೆ ನಿರ್ದೇಶನ ಕೊಟ್ಟಿತ್ತು. 2021ರಲ್ಲೂ ಅದೇ ನಿರ್ದೇಶನ ಮುಂದುವರಿಯಿತು. ಈಗ 2026ರಲ್ಲೂ ಅದನ್ನೇ ಗುರಿಯಾಗಿ ಮುಂದುವರಿಸಲಾಗಿದೆ. ಸತತ ಮೂರು ಬಾರಿ ಸರ್ಕಾರ ಶೇ. 4ರ ಹಣದುಬ್ಬರ ಗುರಿಯನ್ನು ಆರ್​ಬಿಐಗೆ ಕೊಟ್ಟಿದೆ. ಈ ಹಣದುಬ್ಬರ ಗುರಿ ಕೊಡುವ ನೀತಿ ಶುರುವಾಗಿದ್ದೇ 2016ರಲ್ಲಿ.

ಇದನ್ನೂ ಓದಿ: ಭಾರತದಲ್ಲಿ ನಯಾರಾ ಪೆಟ್ರೋಲ್ ದರ ಹೆಚ್ಚಳ; ಲೀಟರ್​ಗೆ 5 ರೂ ಬೆಲೆ ಏರಿಕೆ

ಕಳೆದ 10 ವರ್ಷದಲ್ಲಿ ಆರ್​ಬಿಐ ಸರ್ಕಾರ ತನಗೆ ಕೊಟ್ಟ ಗುರಿಯನ್ನು ಬಹುತೇಕ ಅಚ್ಚುಕಟ್ಟಾಗಿ ನಿಭಾಯಿಸಿದೆ. ಕೋವಿಡ್ ಕಾಲಘಟ್ಟದಲ್ಲಿ ಶೇ. 7 ದಾಟಿ ಹೋಗಿದ್ದು ಬಿಟ್ಟರೆ ಹೆಚ್ಚಿನ ಕ್ವಾರ್ಟರ್​ಗಳಲ್ಲಿ ಹಣದುಬ್ಬರವು ಶೇ. 2ರಿಂದ 6ರ ಶ್ರೇಣಿಯಲ್ಲಿ ಇದೆ.

ಕಳೆದ ಕೆಲ ತಿಂಗಳಿಂದ ಹಣದುಬ್ಬರ ದರವು ಶೇ. 4ರ ಒಳಗೆಯೇ ಇದೆ. ಜನವರಿಯಲ್ಲಿ ಶೇ. 2.74 ಇದ್ದ ಹಣದುಬ್ಬರ ದರ ಫೆಬ್ರುವರಿಯಲ್ಲಿ ಶೇ. 3.21ಕ್ಕೆ ಏರಿದೆ. ಹಣದುಬ್ಬರದ ಚಲನೆಯನ್ನು ನಿಯಂತ್ರಿಸುವ ರೀತಿಯಲ್ಲಿ ಆರ್​ಬಿಐ ತನ್ನ ನೀತಿಗಳನ್ನು ಪರಿಷ್ಕರಿಸಲು ಯತ್ನಿಸುತ್ತದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ

ಹಣದುಬ್ಬರ ಅತಿಯಾಗಿದ್ದಾಗ ಆರ್​ಬಿಐ ತನ್ನ ರಿಪೋ ದರ ಅಥವಾ ಬಡ್ಡಿದರವನ್ನು ಏರಿಸುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಇರುವ ಹಲವು ಮಾರ್ಗೋಪಾಯಗಳಲ್ಲಿ ರಿಪೋ ದರವೂ ಒಂದು. ಇಂಥ ಇನ್ನೂ ಕೆಲ ಅಸ್ತ್ರಗಳು ರಿಸರ್ವ್ ಬ್ಯಾಂಕ್ ಬಳಿ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್​ನ ಈ ನಿಯಮದ ವಿರುದ್ಧ ಸಿಡಿದೆದ್ದ 10 ತಂಡಗಳ ನಾಯಕರು

2026 ರ ಐಪಿಎಲ್ (IPL 2026) ಮಾರ್ಚ್ 28 ರಿಂದ ಪ್ರಾರಂಭವಾಗಿದೆ. ಆದರೆ ಅದಕ್ಕೂ ಮೊದಲು, ಪ್ರತಿ ಬಾರಿಯ ಐಪಿಎಲ್​ನಂತೆ ಈ ಬಾರಿಯೂ ಬಿಸಿಸಿಐ (BCCI), ಲೀಗ್ ಆರಂಭಕ್ಕೂ ಮುನ್ನ ಎಲ್ಲಾ 10 ತಂಡಗಳ ನಾಯಕರೊಂದಿಗೆ ಸಭೆ ನಡೆಸಿತು. ಈ ಸಭೆಯಲ್ಲಿ, ಐಪಿಎಲ್‌ನ ಕೆಲವು ನಿಯಮಗಳ ಕುರಿತು ಚರ್ಚೆ ನಡೆಸಲಾಗಿದ್ದು, ಕೆಲವು ನಾಯಕರು ಐಪಿಎಲ್‌ನ ಒಂದು ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಐಪಿಎಲ್‌ನ ಹೆಚ್ಚಿನ ನಾಯಕರು ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮಕ್ಕೆ ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದು, ಈ ನಿಯಮವನ್ನು ತೆಗೆಯಬೇಕು ಎಂಬ ಮನವಿಯನ್ನು ಮಾಡಿದ್ದಾರೆ. ಆದರೆ ನಾಯಕರ ಮನವಿಯ ಹೊರತಾಗಿಯೂ ಬಿಸಿಸಿಐ ಈ ನಿಯಮವನ್ನು 2027 ರವರೆಗೆ ಮುಂದುವರೆಸುವುದಾಗಿ ತಿಳಿಸಿದೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಎಂದರೇನು?

2023 ರಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಐಪಿಎಲ್​ನಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಈ ನಿಯಮದ ಪ್ರಕಾರ, ತಂಡಗಳು ಪಂದ್ಯದ ಸಮಯದಲ್ಲಿ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಒಬ್ಬ ಆಟಗಾರನನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಹೀಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡವನ್ನು ಕೂಡಿಕೊಳ್ಳುವ ಆಟಗಾರ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಬಹುದಾಗಿದೆ. ಈ ನಿಯಮ ಜಾರಿಗೆ ಬಂದ ಬಳಿಕ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿವೆ.

ನಾಯಕರ ಸಭೆಯಲ್ಲಿ ನಡೆದಿದ್ದೇನು?

ಮುಂಬೈನಲ್ಲಿ ನಡೆದ 10 ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಚರ್ಚಿಸಲಾಗಿದೆ. ಅದರಂತೆ ಹೆಚ್ಚಿನ ನಾಯಕರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಐಪಿಎಲ್ ಮೂಲವೊಂದು ತಿಳಿಸಿದೆ. ಆದಾಗ್ಯೂ ಈ ನಿಯಮವನ್ನು 2027 ರ ನಂತರ ಮಾತ್ರ ಪರಿಶೀಲಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ ಎಂದು ವರದಿಯಾಗಿದೆ. ಅಂದರೆ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದಿನ ಸೀಸನ್​ನಲ್ಲೂ ಮುಂದುವರೆಯುವುದು ಖಚಿತವಾಗಿದೆ.

ಅಸಮಾಧಾನ ಹೊರಹಾಕಿದ ಅಕ್ಷರ್ ಪಟೇಲ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಈ ನಿಯಮವನ್ನು ಬಹಿರಂಗವಾಗಿ ವಿರೋಧಿಸಿದ್ದರು. ಈ ನಿಯಮದಿಂದ ಆಲ್‌ರೌಂಡರ್​ಗಳ ಪಾತ್ರ ಕಡಿಮೆಯಾಗಲಿದೆ ಎಂಬುದು ಅಕ್ಷರ್ ಪಟೇಲ್ ವಾದವಾಗಿದೆ. ಇತ್ತ ರೋಹಿತ್ ಶರ್ಮಾ ಕೂಡ ಈ ನಿಯಮದ ವಿರುದ್ಧ ಧ್ವನಿ ಎತ್ತಿದ್ದರು. ಭಾರತೀಯ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳ ಕೊರತೆ ಇರಬಹುದು ಎಂಬ ಕಾರಣಕ್ಕೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತಾನು ಒಪ್ಪುವುದಿಲ್ಲ ಎಂದು ರೋಹಿತ್ ಶರ್ಮಾ 2024 ರಲ್ಲಿ ಹೇಳಿದ್ದರು. ಹಾರ್ದಿಕ್ ಪಾಂಡ್ಯ ಕೂಡ ಈ ನಿಯಮದ ವಿರುದ್ಧ ಹೇಳಿಕೆ ನೀಡಿ, ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ತಂಡದಲ್ಲಿ ಆಲ್‌ರೌಂಡರ್‌ಗಳನ್ನು ಆಯ್ಕೆ ಮಾಡುವುದು ಕಷ್ಟಕರವಾಗಿದೆ ಎಂದಿದ್ದರು. ಅನೇಕ ವಿದೇಶಿ ಆಟಗಾರರು ಸಹ ಈ ನಿಯಮದ ವಿರುದ್ಧ ಮಾತನಾಡಿದ್ದಾರೆ.

ಐಪಿಎಲ್​ನಲ್ಲಿ 30 ಲಕ್ಷಕ್ಕೆ ಮಾರಾಟವಾಗಿದ್ದವ ಈಗ 16 ಸಾವಿರ ಕೋಟಿ ಮೌಲ್ಯದ ಆರ್​ಸಿಬಿಗೆ ಅಧ್ಯಕ್ಷ

ಚೆಂಡು ಬದಲಾವಣೆ ನಿಯಮ

ಐಪಿಎಲ್ ನಾಯಕರ ಸಭೆಯಲ್ಲಿ, ನಾಯಕರೊಬ್ಬರು ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳ ನಂತರವೂ ಚೆಂಡನ್ನು ಬದಲಾಯಿಸುವ ಬೇಡಿಕೆಯನ್ನಿಟ್ಟರು. ಆದರೆ ಅದಕ್ಕೆ ಉಳಿದ ನಾಯಕರಿಂದ ಬೆಂಬಲ ಸಿಗಲಿಲ್ಲ. ಸಾಮಾನ್ಯವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿಯ ಪ್ರಭಾವ ಹೆಚ್ಚಾಗುವ ಕಾರಣದಿಂದಾಗಿ ಈ ನಿಯಮವನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಸಹಾಯಕವಾಗುವಂತೆ ಜಾರಿಗೆ ತರಲಾಗಿದೆ. ಇದರ ಜೊತೆಗೆ ತಂಡಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಐಪಿಎಲ್ ಅಧಿಕಾರಿಗಳು ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಹೊಸ ಬಿಸಿಸಿಐ ನಿಯಮಗಳ ಪ್ರಕಾರ, ಪಂದ್ಯದ ದಿನದಂದು ಯಾವ ತಂಡವೂ ಮೈದಾನದಲ್ಲಿ ಅಭ್ಯಾಸ ನಡೆಸುವಂತಿಲ್ಲ. ಹಾಗೆಯೇ ಒಂದು ತಂಡ ಅಭ್ಯಾಸ ಮಾಡಿದ ವಿಕೆಟ್​ನಲ್ಲಿ ಇನ್ನೊಂದು ತಂಡ ಅಭ್ಯಾಸ ಮಾಡುವಂತಿಲ್ಲ ಎಂಬುದನ್ನು ಸೂಚಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥೈಲ್ಯಾಂಡ್‌ನಲ್ಲಿ ವಿಜಯ್-ರಶ್ಮಿಕಾ ‘ಹನಿಮೂನ್’: ಐಶಾರಾಮಿ ವಾಸ್ತವ್ಯ

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಕಳೆದ ತಿಂಗಳು ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ವಿವಾಹವಾದರು. ಇವರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದವು. ಬಳಿಕ ಹೈದರಾಬಾದ್​​ನಲ್ಲಿ ರಿಸೆಪ್ಷನ್ ಸಹ ಬಲು ಜೋರಾಗಿ ನಡೆಯಿತು. ಬಳಿಕ ಇವರ ಹನಿಮೂನ್ ಪ್ರವಾಸದ​ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು ಆದರೆ ಯುದ್ಧ ಭೀತಿಯ ಕಾರಣ ಎಲ್ಲ ಯೋಜನೆಗಳನ್ನು ಕೈಬಿಟ್ಟರು. ಇದೀಗ ರಶ್ಮಿಕಾ ಮತ್ತು ವಿಜಯ್ ಅವರು ಥಾಯ್ಲೆಂಡ್​​ನಲ್ಲಿ ‘ಬಡ್ಡಿಮೂನ್’ನ ಸಣ್ಣ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಅವರು ಉಳಿದುಕೊಂಡಿದ್ದ ಏರ್​​ಬಿಎನ್​​ಬಿ ರೆಸಾರ್ಟ್​​ನ ವಿಡಿಯೋಗಳಿವೆ.

ಈ ತಾರಾ ಜೋಡಿಯು ಥೈಲ್ಯಾಂಡ್‌ನ ಶಿವಾಂಗ್ ಬೇನಲ್ಲಿನ ‘ವಿಲ್ಲಾ ಕಾನ್ ಕೂನ್’ ಎಂಬ ಅತ್ಯಂತ ದುಬಾರಿ ರೆಸಾರ್ಟ್‌ನಲ್ಲಿ ತಂಗಿದ್ದರು. ಐಶಾರಾಮಿ ರೆಸಾರ್ಟ್ ಇದಾಗಿದ್ದು, ಈ ರೆಸಾರ್ಟ್‌ನ ಒಂದು ರಾತ್ರಿಯ ಬಾಡಿಗೆ ಸುಮಾರು 2.35 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇದು ಅಲ್ಲಿನ ಸೌಲಭ್ಯಗಳು ಮತ್ತು ವಿಲ್ಲಾದ ಗಾತ್ರಕ್ಕೆ ಅನುಗುಣವಾಗಿ ಇನ್ನೂ ಹೆಚ್ಚಾಗಬಹುದು. ಈ ವಿಲ್ಲಾವು ಖಾಸಗಿ ಈಜುಕೊಳ, ಅರಬ್ಬಿ ಸಮುದ್ರದ ಸುಂದರ ನೋಟ, ವೈಯಕ್ತಿಕ ಬಟ್ಲರ್ ಸೇವೆ ಮತ್ತು ಅತ್ಯಾಧುನಿಕ ಸ್ಪಾ ಸೌಲಭ್ಯಗಳನ್ನು ಹೊಂದಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹನಿಮೂನ್ ಫೋಟೋ ವೈರಲ್

ರಶ್ಮಿಕಾ ಮತ್ತು ವಿಜಯ್ ಅವರು ರೆಸಾರ್ಟ್​​ನಲ್ಲಿ ಮಾಡಿದ ಆಕ್ಟಿವಿಟಿಗಳ ದೃಶ್ಯಗಳನ್ನು ಸಹ ಹಂಚಿಕೊಂಡಿದ್ದು, ರೆಸಾರ್ಟ್​ನ ಜಾಹೀರಾತು ವಿಡಿಯೋ ಇದಾಗಿದೆ. ರಶ್ಮಿಕಾ ಮತ್ತು ವಿಜಯ್ ಅವರು ಮದುವೆ ಆದ ಬಳಿಕ ಇಬ್ಬರಿಗೂ ಹಲವು ಜಾಹೀರಾತು ಆಫರ್​​ಗಳು ಬರುತ್ತಿವೆ. ಈಗಾಗಲೇ ಮಾನ್ಯವಾರ್ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ರೆಸಾರ್ಟ್ ಜಾಹೀರಾತು, ಇನ್ನೂ ಕೆಲವು ಜಾಹೀರಾತುಗಳಲ್ಲಿ ವಿಜಯ್ ಮತ್ತು ರಶ್ಮಿಕಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಇಬ್ಬರೂ ಒಟ್ಟಿಗೆ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ‘ರಂಗಬಲಿ’ ಹೆಸರಿನ ಸಿನಿಮಾನಲ್ಲಿ ನಟಿಸಲಿದ್ದಾರೆ. ಬಳಿಕ ‘ಗೀತ ಗೋವಿಂದಂ 2’ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಇಬ್ಬರೂ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link