All posts by nagaraj11081993

ಪ್ರೀಮಿಯಮ್ ಪೆಟ್ರೋಲ್, ಡೀಸಲ್ ಬೆಲೆ ಮತ್ತೆ ಏರಿಕೆ; ಲೀಟರ್​ಗೆ 11 ರೂ ದರ ಹೆಚ್ಚಳ

ಪ್ರೀಮಿಯಮ್ ಪೆಟ್ರೋಲ್, ಡೀಸಲ್ ಬೆಲೆ ಮತ್ತೆ ಏರಿಕೆ; ಲೀಟರ್​ಗೆ 11 ರೂ ದರ ಹೆಚ್ಚಳ

ನವದೆಹಲಿ, ಏಪ್ರಿಲ್ 1: ಹೊಸ ವರ್ಷದ ಮೊದಲ ದಿನದಂದು ಸಾಮಾನ್ಯ ಜನರಿಗೆ ಡಬಲ್ ಶಾಕ್ ಸಿಕ್ಕಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 19 ರೂ ಏರಿಕೆಯಾದರೆ, ಪ್ರೀಮಿಯಮ್ ಪೆಟ್ರೋಲ್ ಮತ್ತು ಡೀಸಲ್ ಬೆಲೆಯಲ್ಲೂ (Premium Petrol price) ಭರ್ಜರಿ ಹೆಚ್ಚಳ ಆಗಿದೆ. ಪ್ರೀಮಿಯಮ್ ಪೆಟ್ರೋಲ್ ಬೆಲೆ ಲೀಟರ್​ಗೆ 11 ರೂನಷ್ಟು ಹೆಚ್ಚಿದೆ. ಪ್ರೀಮಿಯಮ್ ಡೀಸಲ್ ಬೆಲೆಯಲ್ಲಿ ಒಂದೂವರೆ ರೂನಷ್ಟು ಅಲ್ಪ ಹೆಚ್ಚಳ ಆಗಿದೆ. ತೈಲ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಈ ದರ ಏರಿಕೆ ಮಾಡಿವೆ. ಕಳೆದ ತಿಂಗಳು ಕೂಡ ಪ್ರೀಮಿಯಮ್ ಇಂಧನ ಬೆಲೆಗಳಲ್ಲಿ ಏರಿಕೆ ಮಾಡಲಾಗಿತ್ತು.

ಭಾರತದ ಅತಿದೊಡ್ಡ ತೈಲ ಮಾರುಕಟ್ಟೆ ಸಂಸ್ಥೆಯಾದ ಇಂಡಿಯನ್ ಆಯಿಲ್ ತನ್ನ ಪ್ರೀಮಿಯಮ್ ದರ್ಜೆಯ ಎಕ್ಸ್​ಪಿ100 ಪೆಟ್ರೋಲ್ ಬೆಲೆಯನ್ನು 160 ರೂ ಹೆಚ್ಚಿಸಿದೆ. 149 ರೂ ಇದ್ದ ಇದರ ಬೆಲೆಯಲ್ಲಿ 11 ರೂ ಏರಿಕೆ ಆಗಿದೆ. ಈ ಎಕ್ಸ್​ಪಿ100 ಭಾರತದ ಮೊದಲ 100 ಆಕ್ಟೇನ್ ಪ್ರೀಮಿಯಮ್ ಪೆಟ್ರೋಲ್ ಎನಿಸಿದೆ.

ಇದನ್ನೂ ಓದಿ: Commercial LPG Cylinder Price: ಗಾಯದ ಮೇಲೆ ಬರೆ; ಕಮರ್ಷಿಯಲ್​​ ಸಿಲಿಂಡರ್​​ ದರ 195ರೂ. ಹೆಚ್ಚಳ

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆಯ ಪವರ್100 ಪೆಟ್ರೋಲ್ ದರವೂ ಏರಿಕೆ ಆಗಿರುವುದು ತಿಳಿದುಬಂದಿದೆ. ಈ ಪ್ರೀಮಿಯಮ್ ಪೆಟ್ರೋಲ್ ಅನ್ನು ಅಧಿಕ ಎಂಜಿನ್ ಕಾರ್ಯಕ್ಷಮತೆ ಅಗತ್ಯ ಇರುವ ಲಕ್ಷುರಿ ಕಾರು, ಸ್ಪೋರ್ಟ್ಸ್ ಬೈಕ್​ಗಳಲ್ಲಿ ಬಳಸಲಾಗುತ್ತದೆ.

ಪ್ರೀಮಿಯಮ್ ಡೀಸಲ್ ಬೆಲೆಯಲ್ಲೂ ಏರಿಕೆ

ಇನ್ನು, ಪ್ರೀಮಿಯಮ್ ಡೀಸಲ್ ಬೆಲೆಯಲ್ಲೂ ಹೆಚ್ಚಳ ಆಗಿದೆ. ಇಂಡಿಯನ್ ಆಯಿಲ್​ನ ಎಕ್ಸ್​ಟ್ರಾ ಗ್ರೀನ್ ಪ್ರೀಮಿಯಮ್ ಡೀಸಲ್​ನ ರೀಟೇಲ್ ಬೆಲೆ ಒಂದು ಲೀಟರ್​ಗೆ 91.49 ರೂನಿಂದ 92.99 ರೂಗೆ ಏರಿದೆ.

ಆದರೆ, ಇತರ ಸಾಮಾನ್ಯ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ಯಾವುದೇ ಏರಿಕೆ ಆಗಿಲ್ಲ. ನಯಾರಾ ಪೆಟ್ರೋಲ್ ಬಂಕ್​ಗಳಲ್ಲಿ ಮಾತ್ರ ಪೆಟ್ರೋಲ್ ಬೆಲೆ 5 ರೂ ಹೆಚ್ಚಿದೆ. ಇಂಡಿಯನ್ ಆಯಿಲ್, ಬಿಪಿ, ಎಚ್​ಪಿ ಪಂಪ್​ಗಳಲ್ಲಿ ಸಾಮಾನ್ಯ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ವ್ಯತ್ಯಯ ಆಗಿಲ್ಲ. ಕಳೆದ ವಾರ ಸರ್ಕಾರವು ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಇದರಿಂದ ತೈಲ ಮಾರುಕಟ್ಟೆ ಕಂಪನಿಗಳ ಮೇಲಿನ ಹೊರೆಯನ್ನು ಸರ್ಕಾರ ಇಳಿಸಿದಂತಾಗಿದೆ.

ಇದನ್ನೂ ಓದಿ: ಎಲ್​ಪಿಜಿ ಕೊರತೆ ನಡುವೆ ಗ್ಯಾಸ್ ಬುಕಿಂಗ್ ನಿಯಮ ಬದಲಿಸಿದ ಕೇಂದ್ರ , ಸಿಲಿಂಡರ್ ಬುಕ್ ಮಾಡಿದ್ರೆ ಎಷ್ಟು ದಿನ ಕಾಯ್ಬೇಕು?

ಇದೇ ವೇಳೆ ಇವತ್ತು 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 195 ರೂನಷ್ಟು ಏರಿಕೆ ಆಗಿದೆ. ಮಾರ್ಚ್ ತಿಂಗಳಿಂದೀಚೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 300 ರೂ ಹೆಚ್ಚಳ ಆದಂತಾಗಿದೆ. ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಕಳೆದ ತಿಂಗಳು ಒಮ್ಮೆ ಏರಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಎಷ್ಟು ಚಂದ ಈ ಬಾಂಧವ್ಯ; ಅಪ್ಪನಿಗೆ ತನ್ನ ಪುಟ್ಟ ಕೈಗಳಿಂದ ಕೈ ತುತ್ತು ನೀಡಿದ ಪುಟಾಣಿ

ತಾಯಿ ತನ್ನ ಕಂದಮ್ಮನನ್ನು ಒಂಬತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡರೆ, ತಂದೆ (father) ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚವನ್ನು ತೋರಿಸುತ್ತಾನೆ. ಹೀಗಾಗಿ ಪ್ರತಿಯೊಬ್ಬ ಮಗಳಿಗೂ (daughter) ಅಪ್ಪ ಅಂದ್ರೆ ಆಕಾಶನೇ. ತಂದೆಗೂ ತನ್ನ ಮಗಳೆಂದರೆ ಜೀವಕ್ಕಿಂತಲೂ ಹೆಚ್ಚು. ಮಗಳ ಯಾವುದೇ ಬೇಡಿಕೆಗೆ ಇಲ್ಲ ಎನ್ನದೇ ಈಡೇರಿಸುತ್ತಾನೆ.  ಇತ್ತ ತಮದೆಗೆ ಮಗಳು ತಾಯಿ ಪ್ರೀತಿಸುತ್ತಾಳೆ. ಇದೀಗ ಮಗಳೊಬ್ಬಳು ಕೆಲಸದಲ್ಲಿದ್ದ ಬ್ಯುಸಿಯಾಗಿದ್ದ ತಂದೆಗೆ ತನ್ನ ಪುಟ್ಟ ಕೈಗಳಿಂದ ಕೈ ತುತ್ತು ನೀಡಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಈ ಸುಂದರ ಸಂಬಂಧವನ್ನು ಮೆಚ್ಚಿಕೊಂಡಿದ್ದಾರೆ.

ಇಂದ್ರಜಿತ್‌ ಎಎನ್‌ (Indrajith AN) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೂ ಪ್ಲೇಟ್‌ನಲ್ಲಿ ದ್ರಾಕ್ಷಿ ಹಣ್ಣು ಇಟ್ಟುಕೊಂಡಿದೆ. ತನ್ನ ತಂದೆ ಲ್ಯಾಪ್ ಟಾಪ್ ಮುಂದೆ ಕುಳಿತು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಒಂದೊಂದು ದ್ರಾಕ್ಷಿ ಹಣ್ಣನ್ನು ತನ್ನ ಪುಟ್ಟ ಕೈಯಿಂದ ತೆಗೆದು ತನ್ನ ಅಪ್ಪನ ಬಾಯಿಗೆ ಇಡುತ್ತಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇವ್ಳು ಪುಟ್ಟ ಟೀಚರಮ್ಮ; ಅಪ್ಪನಿಗೆ ಪದ್ಯ ಹೇಳಿಕೊಡುತ್ತಿರುವ ಪುಟಾಣಿ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಪ್ಪನ ಮುದ್ದು ಮಗಳು ಎಂದರೆ, ಮತ್ತೊಬ್ಬರು, ಬೆಸ್ಟ್ ವರ್ಕ್ ಫ್ರಮ್ ಹೋಮ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ದೇವರ ಉಡುಗೊರೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹದ ಮೇಲಿರುವ ಚಿನ್ನಾಭರಣವನ್ನೇ ಕದ್ದ ಕಳ್ಳ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಕಲಬುರಗಿ, ಏಪ್ರಿಲ್ 01: ಜಿಲ್ಲೆಯಲ್ಲಿ ದೇವಸ್ಥಾನ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ನಗರದ ಕುವೆಂಪು ನಗರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕಳ್ಳನು ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹದ ಮೇಲಿದ್ದ ಚಿನ್ನಾಭರಣ ಕದ್ದಿದ್ದಾನೆ. ಕಬ್ಬಿಣದ ರಾಡಿನಿಂದ ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಖದೀಮನು ದೇವಿಯ ಕೊರಳಲ್ಲಿದ್ದ ಸುಮಾರು 9 ಗ್ರಾಂ ತೂಕದ ಚಿನ್ನದ ತಾಳಿ ಹಾಗೂ 100 ಗ್ರಾಂ ತೂಕದ ಬೆಳ್ಳಿ ಮುಖವಾಡವನ್ನು ಕಳವು ಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ದೇವಸ್ಥಾನದ ಸಿಸಿ ಕ್ಯಾಮೆರಾಗಳಲ್ಲಿ ಸೆರೆವಾಗಿದ್ದು, ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಾಲದ ಸುಳಿಯಲ್ಲಿರುವ ರಾಜ್​​ಪಾಲ್​​ಗೆ ಅತ್ಯಮೂಲ್ಯ ಸಲಹೆ ನೀಡಿದ ಅಕ್ಷಯ್ ಕುಮಾರ್

ತಮ್ಮ ಹಾಸ್ಯಪ್ರಜ್ಞೆಯಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ನಟ ರಾಜ್‌ಪಾಲ್ ಯಾದವ್, ತಿಹಾರ್ ಜೈಲಿನಲ್ಲಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಚಿತ್ರ ನಿರ್ಮಿಸಲು ಅವರು 5 ಕೋಟಿ ರೂ. ಸಾಲ ಪಡೆದಿದ್ದರು, ಆದರೆ ಚಿತ್ರ ವಿಫಲವಾದ ಕಾರಣ, ಅವರು ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಅವರು ನೀಡಿದ ಎಲ್ಲಾ ಚೆಕ್‌ಗಳು ಬೌನ್ಸ್ ಆದ ನಂತರ, ಅವರು ಅಂತಿಮವಾಗಿ ತಿಹಾರ್ ಜೈಲಿನಲ್ಲಿ ಶರಣಾಗಬೇಕಾಯಿತು. ಅದರ ನಂತರ, ಬಾಲಿವುಡ್ ಉದ್ಯಮದ ಅನೇಕ ನಟರು ಅವರಿಗೆ ಸಹಾಯ ಮಾಡಿದರು. ಈಗ ನಟ ಅಕ್ಷಯ್ ಕುಮಾರ್ ಈ ಪ್ರಕರಣದ ಬಗ್ಗೆ ರಾಜ್‌ಪಾಲ್ ಬಗ್ಗೆ ಮಾತನಾಡಿದ್ದಾರೆ.

ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ‘ಭೂತ್ ಬಾಂಗ್ಲಾ’ದಲ್ಲಿ ರಾಜ್‌ಪಾಲ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಚಿತ್ರದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ, ರಾಜ್‌ಪಾಲ್ ಅವರ ಚೆಕ್ ಬೌನ್ಸ್ ಪ್ರಕರಣದ ಬಗ್ಗೆ ಅಕ್ಷಯ್ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು. ಈ ಮೊದಲು ರಾಜ್​​ಪಾಲ್ ಹಾಗೂ ಅಕ್ಷಯ್ ಕುಮಾರ್ ‘ಫಿರ್ ಹೇರಾ ಫೇರಿ’, ‘ಭೂಲ್​ ಭುಲಯ್ಯ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.

‘ಭೂತ್ ಬಾಂಗ್ಲಾ’ ಚಿತ್ರದ ಪ್ರಚಾರದ ಸಮಯದಲ್ಲಿ, ಅಕ್ಷಯ್ ಅವರು ರಾಜ್‌ಪಾಲ್‌ಗೆ ಈಗಾಗಲೇ ಸಿನಿಮಾ ನಿರ್ಮಿಸದಂತೆ ಸಲಹೆ ನೀಡಿರುವುದಾಗಿ ಸ್ಪಷ್ಟಪಡಿಸಿದರು. ಹಿರಿಯ ನಟ ಅಸ್ರಾನಿ ಅವರು ಅಕ್ಷಯ್​​ಗೆ ಒಂದು ಸಲಹೆ ನೀಡಿದ್ದರು. ತಮ್ಮ ಜೀವನದ ಕಠಿಣ ಅವಧಿಯನ್ನು ಉಲ್ಲೇಖಿಸಿದ್ದ ಅಸ್ರಾನಿ, ಚಲನಚಿತ್ರಗಳನ್ನು ನಿರ್ಮಿಸುವುದು ತಮ್ಮ ದೊಡ್ಡ ತಪ್ಪು ಎಂದು ಅಕ್ಷಯ್‌ಗೆ ಹೇಳಿದ್ದರು. ಈ ಅನುಭವದ ಆಧಾರದ ಮೇಲೆ, ನಟರು ಮೊದಲು ನಿರ್ಮಾಣ ಕ್ಷೇತ್ರಕ್ಕೆ ಹಾರುವ ಮೊದಲು ಸಂಪೂರ್ಣವಾಗಿ ಅಧ್ಯಯನ ಮಾಡಬೇಕು ಎಂದು ಅಕ್ಷಯ್ ಅವರು ರಾಜ್‌ಪಾಲ್ ಯಾದವ್‌ಗೆ ವಿವರಿಸಿದ್ದರು. ’ನಾವು ನಟರು ಮತ್ತು ನಿರ್ಮಾಪಕರ ಕೆಲಸವು ತುಂಬಾ ವಿಭಿನ್ನವಾಗಿದೆ. ನಾವು ಶಾರ್ಟ್‌ಕಟ್‌ಗಳ ಮೂಲಕ ಹಣ ಗಳಿಸಲು ಪ್ರಯತ್ನಿಸಬಾರದು’ ಎಂದು ಅಕ್ಷಯ್ ರಾಜ್‌ಪಾಲ್‌ಗೆ ಈ ಮಾತುಗಳಲ್ಲಿ ವಿವರಿಸಿದರು.

ಇದನ್ನೂ ಓದಿ: ‘ಧುರಂಧರ್ 2’ ಆರ್ಭಟಕ್ಕೆ ಬೆದರಿದ ‘ಭೂತ್ ಬಂಗ್ಲ’: ಅಕ್ಷಯ್ ಕುಮಾರ್ ಚಿತ್ರದ ಬಿಡುಗಡೆ ಮುಂದೂಡಿಕೆ

ನಿರ್ದೇಶಕ ಪ್ರಿಯದರ್ಶನ್ ಮತ್ತು ಅಕ್ಷಯ್ ಕುಮಾರ್ ‘ಭೂತ್ ಬಾಂಗ್ಲಾ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಅಕ್ಷಯ್ ಕುಮಾರ್ ಜೊತೆಗೆ, ಪರೇಶ್ ರಾವಲ್, ರಾಜ್‌ಪಾಲ್ ಯಾದವ್, ವಾಮಿಕಾ ಗಬ್ಬಿ ಮತ್ತು ಟಬು ಕೂಡ ಇದರಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಹಾರರ್ ಕಾಮಿಡಿ ಚಿತ್ರಕ್ಕಾಗಿ ಅಕ್ಷಯ್ ಸುಮಾರು 50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಟಬು 2.5 ಕೋಟಿ ರೂ. ಸ್ವೀಕರಿಸಿದ್ದಾರೆ. ಹಿರಿಯ ನಟ ಪರೇಶ್ ರಾವಲ್ 2 ಕೋಟಿ ರೂ. ಮತ್ತು ನಟಿ ವಾಮಿಕಾ ಗಬ್ಬಿ 3 ಕೋಟಿ ರೂ. ಇದರಲ್ಲಿ, ರಾಜ್‌ಪಾಲ್ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೊಲೀಸ್ ಇಲಾಖೆಗೆ ಸೇರಿದ 80 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಕೆ! ಬೆಸ್ಕಾಂ ಅಧಿಕಾರಿಗಳು ಸೇರಿ ಹಲವರ ಮೇಲೆ ಎಫ್ಐಆರ್

ಬೆಂಗಳೂರು, ಏಪ್ರಿಲ್ 01: ಪೊಲೀಸ್ ಇಲಾಖೆಗೆ ಸೇರಿದ ಸುಮಾರು 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಬಳಿಸಲು ಯತ್ನಿಸಿರುವ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಸ್ಕಾಂ, ಬಿಬಿಎಂಪಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಮಹಿಳೆಯ ಹೆಸರಲ್ಲಿ ಬಂದ ವಿದ್ಯುತ್ ಬಿಲ್

ಹಳೆಯ ಮಲ್ಲೇಶ್ವರಂ ಪೊಲೀಸ್ ಠಾಣೆ ಹಾಗೂ ಪೊಲೀಸ್ ವಸತಿ ಗೃಹಗಳಿರುವ ಈ ಜಾಗಕ್ಕೆ 100 ವರ್ಷಕ್ಕೂ ಹೆಚ್ಚು ಇತಿಹಾಸವಿದೆ. 1913ರ ಮಾಪನ ನಕ್ಷೆಯಲ್ಲಿಯೇ ಈ ಪ್ರದೇಶವನ್ನು ಪೊಲೀಸ್ ವಸತಿಗೃಹ ಎಂದು ಗುರುತಿಸಲಾಗಿದೆ. ಪ್ರಸ್ತುತವೂ ಇಲ್ಲಿ ನಾಲ್ವರು ಇನ್ಸ್‌ಪೆಕ್ಟರ್‌ಗಳ ಕುಟುಂಬಗಳು ವಾಸಿಸುತ್ತಿವೆ. ಆದರೆ ಇತ್ತೀಚೆಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ಅವರ ಮನೆಗೆ ಬಂದ ವಿದ್ಯುತ್ ಬಿಲ್ಲಿನಲ್ಲಿ ಮಹಾಲಕ್ಷ್ಮೀ ಎಂಬ ಖಾಸಗಿ ವ್ಯಕ್ತಿಯ ಹೆಸರು ನಮೂದಾಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದ ಅನುಮಾನಗೊಂಡ ಕುಮಾರ್ ಸಂಬಂಧಪಟ್ಟ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ, ಅಕ್ರಮವಾಗಿ ಆಸ್ತಿ ದಾಖಲೆಗಳನ್ನು ಮಹಾಲಕ್ಷ್ಮೀ ಹೆಸರಿಗೆ ವರ್ಗಾವಣೆ ಮಾಡಿರುವುದು ಬಹಿರಂಗವಾಗಿದೆ.

ಇದನ್ನೂ ಓದಿ ಬ್ರ್ಯಾಂಡೆಡ್ ವಾಚ್ ಎಂದು ಕಮ್ಮಿ ಬೆಲೆಗೆ ನಕಲಿ ವಾಚ್​ಗಳನ್ನು ಮಾರುತ್ತಿದ್ದ ಐವರ ಬಂಧನ!

ಇದಲ್ಲದೆ, ಬಿಬಿಎಂಪಿ ಮೂಲಕ ಅಕ್ರಮವಾಗಿ ಇ-ಖಾತಾ ಮಾಡಿಸಿರುವುದು ಹಾಗೂ ಕೃಷ್ಣಮೂರ್ತಿ ಎಂಬಾತನಿಗೆ ಮಾರಾಟ ಮಾಡಲು ಒಪ್ಪಂದ ಪತ್ರ (ಅಗ್ರಿಮೆಂಟ್ ಆಫ್ ಸೇಲ್) ಕೂಡ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ನಡುವೆ, ಅಧಿಕಾರಿಗಳಿದ್ದರೂ ಜಾಗ ಖಾಲಿ ಮಾಡಿಸುತ್ತೇನೆ ಎಂದು ಮಹಿಳೆ ಕಡೆಯವರು ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಪ್ರಸ್ತುತ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಈ 4 ತಂಡಗಳೇ ಪ್ಲೇಆಫ್ ಆಡಲಿದೆ: ಮೊಹಮ್ಮದ್ ಶಮಿ ಭವಿಷ್ಯ

Source link

Video:ದಿನಸಿ ಖರೀದಿಸಿ ವಾಪಸಾಗುತ್ತಿದ್ದಾಗ ಮಹಿಳೆಯನ್ನು ಹಿಂದಿನಿಂದ ಹಿಡಿದುಕೊಂಡು ಖಾಸಗಿ ಅಂಗಗಳ ಮುಟ್ಟಿ ಚಿತ್ರಹಿಂಸೆ ಕೊಟ್ಟ ಯುವಕರು

ಪಾಟ್ನಾ, ಏಪ್ರಿಲ್ 1: ಮನೆಗೆ ದಿನಸಿ ವಸ್ತುಗಳನ್ನು ತರಲು ಹೊರಗೆ ತೆರಳಿದ್ದ ವಿವಾಹಿತ ಮಹಿಳೆ ಮನೆಗೆ ಹಿಂದಿರುಗುವಾಗ ಗುಂಪೊಂದು ಆಕೆಯನ್ನು ಅಡ್ಡಗಟ್ಟಿತ್ತು. ಅದರಲ್ಲಿ ಒಬ್ಬಾತ ಆಕೆಯನ್ನು ಹಿಂದಿನಿಂದ ಹಿಡಿದುಕೊಂಡು ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಕೆ ಎಷ್ಟೇ ಆತನನ್ನು ತಡೆಯಲು ಪ್ರಯತ್ನಿಸಿದರೂ ಕೂಡ ಆತ ಪದೇ ಪದೇ ಅದೇ ರೀತಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು ಕೇವಲ ಅಪರಾಧವಲ್ಲ, ಆದರೆ ಕಾನೂನು ಮತ್ತು ಸಮಾಜ ಎರಡಕ್ಕೂ ಬಹಿರಂಗ ಸವಾಲು.

ಎರಡು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ ಮಾರ್ಚ್ 26 ರ ಸಂಜೆ ದಿನಸಿ ಸಾಮಾನುಗಳೊಂದಿಗೆ ಮನೆಗೆ ಹಿಂತಿರುಗುತ್ತಿದ್ದಳು. ಗ್ರಾಮದ ಮೂವರು ಯುವಕರು ಕತ್ತಲೆಯ ಲಾಭ ಪಡೆದು ದಾರಿ ಮಧ್ಯದಲ್ಲಿ ಆಕೆಯನ್ನು ಹಿಡಿದು ಬಲವಂತವಾಗಿ ಹೊಲದ ಕಡೆಗೆ ಎಳೆದುಕೊಂಡು ಹೋಗಿದ್ದಾರೆ.

ಎಫ್‌ಐಆರ್ ಪ್ರಕಾರ, ಆರೋಪಿಯು ಮಹಿಳೆಯನ್ನು ನೆಲಕ್ಕೆ ಎಸೆದು, ಆಕೆಯ ಬಟ್ಟೆಗಳನ್ನು ಹರಿದು, ಹಲ್ಲೆ ಮಾಡಲು ಪ್ರಾರಂಭಿಸಿದ್ದ.ಆರೋಪಿಗಳಲ್ಲಿ ಒಬ್ಬನು ಆಕೆಗೆ ಲೈಂಗಿಕ ಕಿರುಕುಳ ನೀಡಿದರೆ, ಉಳಿದ ಇಬ್ಬರು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು.

ಆಘಾತಕಾರಿ ವಿಡಿಯೋ

ಘಟನೆಯ ಸಮಯದಲ್ಲಿ, ಆರೋಪಿಯು ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾನೆ. ವೀಡಿಯೊದಲ್ಲಿ ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಬಿಟ್ಟುಕೊಡುವಂತೆ ಬೇಡಿಕೊಳ್ಳುತ್ತಿರುವುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ, ಆದರೆ ಆರೋಪಿಗಳು ನಗುತ್ತಾ ಅವಳನ್ನು ನಿಂದಿಸುತ್ತಾ, ವೀಡಿಯೊ ತೆಗೆಯುವಂತೆ ಒತ್ತಾಯಿಸುತ್ತಿದ್ದಾರೆ.

ಮತ್ತಷ್ಟು ಓದಿ: ಐವರು ಮಹಿಳೆಯರಿಂದ ಥಿಯೇಟರ್‌ ಮಾಲೀಕನ ಸುಲಿಗೆ: ಬ್ಲ್ಯಾಕ್​​ಮೇಲ್​​ ಮಾಡಿ ಪೀಕಿದ್ದು 25 ಲಕ್ಷ ರೂ.!

ಮಾರ್ಚ್ 27 ರಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ, ಆರೋಪಿಯು ಅದೇ ವೀಡಿಯೊವನ್ನು ಇಂಟರ್ನೆಟ್ ಮಾಧ್ಯಮದಲ್ಲಿ ವೈರಲ್ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದ.ಸಂತ್ರಸ್ತೆಯ ಪತಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿಶೇಷ ಪೊಲೀಸ್ ತಂಡ ದಾಳಿ ನಡೆಸಿ ಅಶೋಕ್ ಯಾದವ್ ಮತ್ತು ಮಟ್ಲು ಮಹ್ತೊ ಅಲಿಯಾಸ್ ನವನೀತ್ ಕುಮಾರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದೆ ಎಂದು ಸದರ್ ಡಿಎಸ್ಪಿ-2 ಸಂಜಯ್ ಕುಮಾರ್ ಜೈಸ್ವಾಲ್ ತಿಳಿಸಿದ್ದಾರೆ. ಮೂರನೇ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ.

ವಕೀಲರಾದ ತೇಜಸ್ವಿತಾ ರಾಧಾ ಮಾತನಾಡಿ, ನುರ್ಸರೈನಲ್ಲಿ ನಡೆದ ಈ ಘಟನೆ ಕೇವಲ ಮಹಿಳೆಯ ಮೇಲಿನ ದಾಳಿಯಲ್ಲ, ಬದಲಾಗಿ ಇಡೀ ಸಮಾಜಕ್ಕೆ ಒಂದು ಎಚ್ಚರಿಕೆ ಎಂದು ಅವರು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಪತಿ ವಿಜಯ್ ತೊಡೆಯಮೇಲೆ ಕುಳಿತು ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ

Source link

ಆಫೀಸ್ ಸಮಯ​​ ಆರಂಭವಾದರೂ ಬಾರದ ಅಧಿಕಾರಿಗಳು: ಕೊಪ್ಪಳದ RTO ಕಚೇರಿ ಫುಲ್​​ ಖಾಲಿ ಖಾಲಿ

ಕೊಪ್ಪಳ, ಏಪ್ರಿಲ್​​ 01: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಕಿತ್ತೂರು ಕರ್ನಾಟಕದ 2 ಮತ್ತು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿತ್ತು. ಅದರ ಅನ್ವಯ 2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಸ್ತುತ ಇರುವ ಕಚೇರಿ ವೇಳಾಪಟ್ಟಿಯ ಬದಲಾಗಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಸಮಯ ನಿಗದಿ ಮಾಡಲಾಗಿತ್ತು. ಹೀಗಿದ್ದರೂ ಕೆಲ ಅಧಿಕಾರಿಗಳು ಮಾತ್ರ ಆದೇಶಕ್ಕೆ ಕ್ಯಾರೇ ಎನ್ನುತ್ತಿಲ್ಲ. ಹೊಸ ಆದೇಶದ ಅನ್ವಯ ಬೆಳಿಗ್ಗೆ 8 ಗಂಟೆಯಿಂದಲೇ ಸರ್ಕಾರಿ ಕಚೇರಿ ಆರಂಭವಾಗಿದ್ದರೂ ಕೊಪ್ಪಳದ RTO ಕಚೇರಿಯಲ್ಲಿ ಮಾತ್ರ ಸಮಯ 9.30 ಕಳೆದರೂ ಅಧಿಕಾರಿಗಳ ಪತ್ತೆ ಇರಲಿಲ್ಲ.

ಹೌದು, ಸರ್ಕಾರದ ಆದೇಶದ ಅನ್ವಯ ಕೊಪ್ಪಳ ವ್ಯಾಪ್ತಿಯ ಸರ್ಕಾರಿ ಕಚೇರಿಗಳು ಇಂದಿನಿಂದ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿವೆ. ಸಮಯ ಬದಲಾವಣೆ ಆಗಿದ್ದರೂ ನಿಗದಿತ ವೇಳೆಗೆ ಕಚೇರಿಗೆ ಬಾರದೆ ಸಾರಿಗೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಕೆಲ ಕಾರ್ಯಗಳಿಗಾಗಿ ಇಲಾಖಾ ಕಚೇರಿಗೆ ಬಂದ ಜನರಿಗೆ ಖಾಲಿ ಕುರ್ಚಿಗಳ ದರ್ಶನವಾಗಿದ್ದು, ಕೆಲಸದ ಸಮಯದ ಕಡಿತದಿಂದಾಗಿ ಸಾರ್ವಜನಿಕ ಸೇವೆಗೆ ಯಾವುದೇ ತೊಂದರೆ ಆಗದಂತೆ ಮುತುವರ್ಜಿ ವಹಿಸಬೇಕಿದ್ದ ಅಧಿಕಾರಿಗಳ ಬೇಜವಾಬ್ದಾರಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರಿ ಕಚೇರಿ ಸಮಯ ಬದಲಾವಣೆ; ಬೇಸಿಗೆಯಲ್ಲಿ ನೌಕರರಿಗೆ, ಸಾರ್ವಜನಿಕರಿಗೆ ರಿಲೀಫ್

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನದ ಹಿನ್ನೆಲೆ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ರಾಜ್ಯ ಸರ್ಕಾರ ಕಚೇರಿ ಸಮಯ ಬದಲಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿತ್ತು. ಬೆಳಗಾವಿ ವಿಭಾಗದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರಗಿ ವಿಭಾಗಕ್ಕೆ ಒಳಪಡುವ ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1:30ರ ತನಕ ನಿಗದಿ ಮಾಡಿತ್ತು. ಮೇ ತಿಂಗಳ ಅಂತ್ಯದವರೆಗೆ ಸರ್ಕಾರಿ ಕಚೇರಿಗಳ ಈ ಸಮಯ ಬದಲಾವಣೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

April Fool’s Day 2026: ಏಪ್ರಿಲ್‌ ಫೂಲ್‌ ಆಚರಣೆ ಆರಂಭವಾದ್ದು ಹೇಗೆ? ಈ ದಿನದ ವಿಶೇಷತೆಯೇನು ತಿಳಿಯಿರಿ

ಈ ಜಗತ್ತಿನಾದ್ಯಂತ ಹಲವು ವಿಭಿನ್ನ, ವಿಶಿಷ್ಟ, ವಿಚಿತ್ರ ಆಚರಣೆಗಳಿವೆ. ಅವುಗಳಲ್ಲಿ ಏಪ್ರಿಲ್‌ ಫೂಲ್‌ ಡೇ (April Fool’s Day) ಕೂಡ ಒಂದು. ಪ್ರಪಂಚದಾದ್ಯಂತ ಏಪ್ರಿಲ್‌ 1 ರಂದು ಏಪ್ರಿಲ್‌ ಫೂಲ್‌ ಡೇ ಆಚರಿಸಲಾಗುತ್ತದೆ. ಈ ದಿನದಂದು ಜನ ಪರಸ್ಪರ ಸುಳ್ಳುಗಳನ್ನು ಹೇಳಿ, ತಮಾಷೆ ಮಾಡಿ ಒಬ್ಬರಿಗೊಬ್ಬರು ಕಾಲೆಳೆಯುತ್ತಾರೆ. ಸ್ನೇಹಿತರು, ಆಪ್ತರ ತಮಾಷೆಯಿಂದ ತಾವು ಮೂರ್ಖರಾದೆವು ಎಂದು ತಿಳಿದ ಮೇಲೆಯೂ ಜನ ಜೋರಾಗಿ ಮನಬಿಚ್ಚಿ ನಗುತ್ತಾರೆ. ಒಟ್ಟಿನಲ್ಲಿ ಇದೊಂದು ದಿನ ಮಾತ್ರ ಎಂಥವರ ಮುಖದಲ್ಲೂ ನಗು ಮೂಡಿಸಿ ಬಿಡುತ್ತದೆ. ಅಷ್ಟಕ್ಕೂ ಈ ವಿಶಿಷ್ಟ ದಿನಾಚರಣೆ ಆರಂಭವಾದ್ದು ಹೇಗೆ, ಈ ಮೂರ್ಖರ ದಿನದ ಉದ್ದೇಶವಾದರೂ ಏನು ಎಂಬುದನ್ನು ನೋಡೋಣ ಬನ್ನಿ.

ಏಪ್ರಿಲ್ ಮೂರ್ಖರ ದಿನ ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು?

ಏಪ್ರಿಲ್ ಮೂರ್ಖರ ದಿನದ ಹಿಂದೆ ಹಲವು ಕಥೆಗಳಿವೆ. ಈ ದಿನದ ಆಚರಣೆ ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡಿತು. ಏಪ್ರಿಲ್ ಮೂರ್ಖರ ದಿನದ ಅತ್ಯಂತ ಜನಪ್ರಿಯ ಕಥೆ ಫ್ರಾನ್ಸ್‌ಗೆ ಸಂಬಂಧಿಸಿದೆ. 16 ನೇ ಶತಮಾನದಲ್ಲಿ, ಚಾರ್ಲ್ಸ್ IX 1564 ರಲ್ಲಿ ಹೊಸ ಕ್ಯಾಲೆಂಡರ್ ಅನ್ನು ಜಾರಿಗೆ ತಂದರು, ಅದರಲ್ಲಿ ಹೊಸ ವರ್ಷವು ಜನವರಿ 1 ರಂದು ಪ್ರಾರಂಭವಾಯಿತು. ಆದಾಗ್ಯೂ, ಅನೇಕ ಜನರಿಗೆ ಈ ಬದಲಾವಣೆಯ ಬಗ್ಗೆ ತಿಳಿದಿರಲಿಲ್ಲ ಮತ್ತು ಏಪ್ರಿಲ್ 1 ರಂದು ಹೊಸ ವರ್ಷವನ್ನು ಆಚರಿಸುವುದನ್ನು ಮುಂದುವರೆಸಿದರು. ಅಂತಹ ಜನರನ್ನು ಅಪಹಾಸ್ಯ ಮಾಡಲು, ಅವರನ್ನು ಏಪ್ರಿಲ್ ಮೂರ್ಖರು ಎಂದು ಕರೆಯಲಾಗುತ್ತಿತ್ತು.

ಇನ್ನೊಂದು ಕಥೆಯ ಪ್ರಕಾರ ಏಪ್ರಿಲ್ ಮೂರ್ಖರ ದಿನವನ್ನು ಆಚರಿಸುವ ಮೂಲವು 1381 ರಲ್ಲಿ ಇಂಗ್ಲೆಂಡ್‌ನ ರಾಜ ರಿಚರ್ಡ್ II ಮತ್ತು ಬೊಹೆಮಿಯಾದ ರಾಣಿ ಅನ್ನಿ ಅವರ ನಿಶ್ಚಿತಾರ್ಥವನ್ನು ಘೋಷಿಸಿದಾಗ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ರಾಜನು  ಜನರಿಗೆ ತನ್ನ ಮತ್ತು ರಾಣಿ ಅನ್ನಿಯ ನಿಶ್ಚಿತಾರ್ಥದ ದಿನಾಂಕ ಮಾರ್ಚ್ 32 ಎಂದು ಹೇಳಿದ್ದನು. ಜನರು ರಾಜ ಹೇಳಿದ ಈ ತಮಾಷೆಯ ಸುಳ್ಳನ್ನು ಅರ್ಥಮಾಡಿಕೊಳ್ಳದೆ ರಾಜನ ನಿಶ್ಚಿತಾರ್ಥದ ಖುಷಿಯಲ್ಲಿ ಭರ್ಜರಿ ಸಂಭ್ರಮಾಚರಣೆ ಮಾಡಿದರು.  ಆದರೆ ಇದ್ದಕ್ಕಿದ್ದಂತೆ ಕ್ಯಾಲೆಂಡರ್‌ನಲ್ಲಿ ಮಾರ್ಚ್ 32 ದಿನಾಂಕವೇ ಇಲ್ಲ ಎಂದು ಅರಿತು ಮೂರ್ಖರಾದರು.  ನಂತರ ಇದು ಬ್ರಿಟನ್‌ನಾದ್ಯಂತ ಹರಡಿ ಮೂರ್ಖರ ದಿನದ ಆಚರಣೆ ಆರಂಭವಾಯಿತು.

ಇದನ್ನೂ ಓದಿ: ಏಪ್ರಿಲ್‌ನಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ

ಏಪ್ರಿಲ್ ಫೂಲ್‌  ದಿನವನ್ನು ಹೇಗೆ ಆಚರಿಸಲಾಗುತ್ತದೆ?

ಈ ದಿನದಂದು ಜನರು ಪರಸ್ಪರ ತಮಾಷೆ ಮಾಡುತ್ತಾರೆ. ಹಲವರು ತಮಾಷೆ ಮಾಡುವ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುತ್ತಾರೆ. ಕೆಲವರು ನಕಲಿ ಸುದ್ದಿಗಳನ್ನು ಹರಡಿದರೆ, ಇನ್ನು ಕೆಲವರು ಹಾಸ್ಯಮಯ ವಂಚನೆಗಳನ್ನು ಮಾಡಿ ಇನ್ನೊಬ್ಬ ವ್ಯಕ್ತಿಯನ್ನು ನಗಿಸುತ್ತಾರೆ.

ಏಪ್ರಿಲ್ ಫೂಲ್‌ ದಿನದ ಮಹತ್ವವೇನು?

  • ಜನರು ಈ ದಿನವನ್ನು ತುಂಬಾ ಮೋಜಿನಿಂದ ಆಚರಿಸುತ್ತಾರೆ. ಇದು ಕೇವಲ ತಮಾಷೆಗಳನ್ನು ಹಂಚಿಕೊಳ್ಳುವುದು ಮತ್ತು ಸ್ನೇಹಿತರು, ಪ್ರೀತಿಪಾತ್ರರನ್ನು ತಮಾಷೆ ಮಾಡುವುದು, ಕಾಲೆಳೆಯುವುದು ಮಾತ್ರವಲ್ಲ, ಈ ದಿನ ಸಂತೋಷವನ್ನು ಹರಡುವುದರ ಬಗ್ಗೆಯೂ ಆಗಿದೆ. ಈ ದಿನ ಜೋಕ್‌ಗಳು ಮತ್ತು ನಗುವನ್ನು ಹಂಚಿಕೊಳ್ಳುವುದರಿಂದ ಎಲ್ಲರೂ ಮನಃಪೂರ್ವಕವಾಗಿ ನಗುತ್ತಾರೆ.
  • ಒಟ್ಟಾರೆಯಾಗಿ ಏಪ್ರಿಲ್ ಫೂಲ್‌ ದಿನವನ್ನು ನಗುವನ್ನು ಹರಡಲು ಮತ್ತು ಹಗುರವಾದ ಹಾಸ್ಯ ಮತ್ತು ನಗುವಿನ ಮೂಲಕ ಒತ್ತಡವನ್ನು ನಿವಾರಿಸಲು ಉದ್ದೇಶಿಸಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link