All posts by nagaraj11081993

1,2,3,4,5,6,7 ಈ ದಿನದಂದು ಮಧ್ಯಾಹ್ನ ನಂತರ ಬರಲಿ ಗುಡುಗು ಸಹಿತ ಮಳೆ; ಎಲ್ಲೆಲ್ಲಿ ಮಳೆಯಾಗಬಹುದು?

1,2,3,4,5,6,7 ಈ ದಿನದಂದು ಮಧ್ಯಾಹ್ನ ನಂತರ ಬರಲಿ ಗುಡುಗು ಸಹಿತ ಮಳೆ; ಎಲ್ಲೆಲ್ಲಿ ಮಳೆಯಾಗಬಹುದು?

ಬೆಂಗಳೂರು, ಏ.1: ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಮುಂದಿನ ಒಂದು ವಾರ ಕರ್ನಾಟಕದಾದ್ಯಂತ ಒಣ ಹವೆ ಮತ್ತು ಬಿಸಿಲಿನ ತಾಪಮಾನ ಮುಂದುವರಿಯಲಿದೆ. ಆದರೆ, ಮಧ್ಯಾಹ್ನದ ನಂತರ ಹವಾಮಾನದಲ್ಲಿ ಬದಲಾವಣೆಯಾಗುವ ಲಕ್ಷಣಗಳಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಲಿದ್ದು, ಸೆಖೆಯ ವಾತಾವರಣ ಇರಲಿದೆ. ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಅಲ್ಲಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ.

ವಾರದ ಕೆಲವು ದಿನಗಳಲ್ಲಿ ರಾಜ್ಯದ ಅಲ್ಲಲ್ಲಿ ಗುಡುಗು, ಸಿಡಿಲು ಹಾಗೂ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇನ್ನು ಮುಂದಿನ ಒಂದು ವಾರ ಸಿಲಿಕಾನ್ ಸಿಟಿಯಲ್ಲಿ ಮಿಶ್ರ ಹವಾಮಾನ ಇರಲಿದೆ. ಹಗಲಿನಲ್ಲಿ ತಾಪಮಾನ ಏರಿಕೆಯಾಗಲಿದ್ದರೆ, ಸಂಜೆ ಅಥವಾ ರಾತ್ರಿ ವೇಳೆ ವರುಣನ ಆಗಮನವಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 34°C ನಿಂದ 36°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ 21°C ನಿಂದ 23°C ಆಸುಪಾಸಿನಲ್ಲಿರಲಿದೆ.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶುಭ್ರ ಆಕಾಶ ಹಾಗೂ ಪ್ರಖರ ಬಿಸಿಲು ಇರಲಿದ್ದು, ಸೆಖೆಯ ಅನುಭವ ಹೆಚ್ಚಾಗಲಿದೆ. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ನಗರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಸಮಯದಲ್ಲಿ ಗುಡುಗು, ಸಿಡಿಲು ಹಾಗೂ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಜೋರಾದ ಗಾಳಿ ಬೀಸುವ ಸಂಭವವಿದೆ.

Cb52c21d 58b5 4bb2 Ba19 Bfad6aa54e05

ಕರಾವಳಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೆಖೆ ಹಾಗೂ ಆರ್ದ್ರತೆ (Humidity) ಇರಲಿದೆ. ಹಗಲಿನಲ್ಲಿ ಪ್ರಖರ ಬಿಸಿಲು ಮುಂದುವರಿಯಲಿದೆ. ಮುಂದಿನ 7 ದಿನ ಗರಿಷ್ಠ 33°C – 35°C ವರೆಗೆ ಇರಬಹುದು. ಮಲೆನಾಡಿನ ಭಾಗಗಳಲ್ಲಿ ಹವಾಮಾನವು ಆಹ್ಲಾದಕರವಾಗಿದ್ದರೂ, ಮಧ್ಯಾಹ್ನದ ನಂತರ ಬದಲಾಗಲಿದೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಮಲೆನಾಡು ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗುವ ಹೆಚ್ಚಿನ ಸಂಭವವಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ!

ಮಳೆಯ ಸಮಯದಲ್ಲಿ ಜೋರಾದ ಗಾಳಿ (ಗಂಟೆಗೆ 30-40 ಕಿ.ಮೀ) ಬೀಸುವ ಸಾಧ್ಯತೆಯಿದೆ. ತೋಟಗಾರಿಕಾ ಬೆಳೆಗಾರರು ಜಾಗರೂಕರಾಗಿರಲು ಸೂಚಿಸಲಾಗಿದೆ. ಇಲ್ಲಿ ಬಿಸಿಲಿನ ಪ್ರತಾಪ ಅತ್ಯಂತ ಹೆಚ್ಚಿರಲಿದೆ. ಕಲಬುರಗಿ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಉಷ್ಣ ಅಲೆ ಸದೃಶ ವಾತಾವರಣವಿರಲಿದೆ. ಗರಿಷ್ಠ ತಾಪಮಾನವು 38°C ನಿಂದ 41°C ವರೆಗೆ ತಲುಪುವ ಸಾಧ್ಯತೆಯಿದೆ. ಕೆಲವು ಭಾಗಗಳಲ್ಲಿ (ವಿಶೇಷವಾಗಿ ಬೆಳಗಾವಿ ಮತ್ತು ಧಾರವಾಡ) ಮಧ್ಯಾಹ್ನದ ನಂತರ ಒಣ ಹವೆಯ ನಡುವೆಯೂ ಅಲ್ಲಲ್ಲಿ ಗುಡುಗು ಸಹಿತ ಹಗುರ ಮಳೆಯಾಗಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Astrological Impact: ಏ.02ರಂದು ಮಂಗಳ ಮೀನ ರಾಶಿಗೆ ಪ್ರವೇಶ; ಈ ಮೂರು ರಾಶಿಯವರು ಅತ್ಯಂತ ಜಾಗರೂಕರಾಗಿರಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಅಧಿಪತಿಯಾದ ಮಂಗಳನ ಪ್ರತಿ ಚಲನೆಯು ದ್ವಾದಶ ರಾಶಿಗಳ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ಸುಮಾರು 18 ತಿಂಗಳ ಸುದೀರ್ಘ ಅವಧಿಯ ನಂತರ, ಏಪ್ರಿಲ್ 2 ರಂದು ಮಂಗಳ ಗ್ರಹವು ಮೀನ ರಾಶಿಗೆ ಪ್ರವೇಶಿಸುತ್ತಿದೆ. ವಿಶೇಷವೆಂದರೆ, ಈಗಾಗಲೇ ಮೀನ ರಾಶಿಯಲ್ಲಿ ಸೂರ್ಯ ಮತ್ತು ಶನಿ ನೆಲೆಸಿದ್ದಾರೆ. ಶನಿ ಮತ್ತು ಮಂಗಳ ಎರಡೂ ಅತ್ಯಂತ ಪ್ರಬಲ ಹಾಗೂ ಉಗ್ರ ಸ್ವಭಾವದ ಗ್ರಹಗಳಾಗಿದ್ದು, ಪರಸ್ಪರ ಶತ್ರುತ್ವವನ್ನು ಹೊಂದಿವೆ.

ಮೀನ ರಾಶಿಯಲ್ಲಿ ಉಂಟಾಗುತ್ತಿರುವ ಈ ಮಂಗಳ ಮತ್ತು ಶನಿಯ ಅಪರೂಪದ ಸಂಯೋಗವು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ. ವಿಶೇಷವಾಗಿ ಮೇ 11 ರವರೆಗೆ, ಅಂದರೆ ಮಂಗಳನು ಮೇಷ ರಾಶಿಯನ್ನು ಪ್ರವೇಶಿಸುವವರೆಗೆ ಈ ಕೆಳಗಿನ ಮೂರು ರಾಶಿಯ ವ್ಯಕ್ತಿಗಳು ಹೆಚ್ಚಿನ ಜಾಗರೂಕತೆ ವಹಿಸುವುದು ಅವಶ್ಯಕ.

ಮೇಷ ರಾಶಿ: ಹಣಕಾಸಿನ ವಿಚಾರದಲ್ಲಿ ಎಚ್ಚರ

ಮಂಗಳ ಮತ್ತು ಶನಿಯ ಈ ಸಂಯೋಗವು ಮೇಷ ರಾಶಿಯವರಿಗೆ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ತರಬಹುದು. ವಿಶೇಷವಾಗಿ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಕೆಲವು ಅನಿರೀಕ್ಷಿತ ಅಡೆತಡೆಗಳು ಎದುರಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಯಾರಿಗಾದರೂ ಸಾಲ ನೀಡುವುದಾಗಲಿ ಅಥವಾ ಹಣದ ವ್ಯವಹಾರ ಮಾಡುವುದಾಗಲಿ ಬೇಡ, ಏಕೆಂದರೆ ಕೊಟ್ಟ ಹಣವು ಮರಳಿ ಬರುವುದು ಕಷ್ಟವಾಗಬಹುದು. ಹೊಸ ಉದ್ಯಮ ಅಥವಾ ಹೂಡಿಕೆ ಮಾಡುವ ಯೋಜನೆಯಿದ್ದರೆ ಮೇ 11 ರವರೆಗೆ ಕಾಯುವುದು ಉತ್ತಮ. ಯಾವುದೇ ರೀತಿಯ ಅನಗತ್ಯ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಕನ್ಯಾ ರಾಶಿ: ವೃತ್ತಿ ಜೀವನದಲ್ಲಿ ಸಂಯಮವಿರಲಿ

ಕನ್ಯಾ ರಾಶಿಯವರಿಗೆ ಈ ಗ್ರಹಗಳ ಸಂಯೋಜನೆಯು ಅಷ್ಟೊಂದು ಲಾಭದಾಯಕವಾಗಿಲ್ಲ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ವರ್ಚಸ್ಸಿಗೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸುವುದು ಮುಖ್ಯ. ವೃತ್ತಿಜೀವನ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ಆರ್ಥಿಕವಾಗಿ ನಷ್ಟ ಉಂಟಾಗುವ ಸಂಭವವಿರುವುದರಿಂದ ಹಣದ ನಿರ್ವಹಣೆಯಲ್ಲಿ ಜಾಗ್ರತೆಯಿರಲಿ. ಕಠಿಣ ಸಂದರ್ಭಗಳಲ್ಲಿ ತಾಳ್ಮೆ ಮತ್ತು ಸಂಯಮವನ್ನು ಕಳೆದುಕೊಳ್ಳದೆ ಪರಿಸ್ಥಿತಿಯನ್ನು ನಿಭಾಯಿಸುವುದು ನಿಮ್ಮ ಹಿತದೃಷ್ಟಿಯಿಂದ ಒಳ್ಳೆಯದು.

ಮೀನ ರಾಶಿ: ಮಾನಸಿಕ ಒತ್ತಡದ ಸಾಧ್ಯತೆ

ಮಂಗಳನ ಸಂಚಾರವು ಮೀನ ರಾಶಿಯಲ್ಲಿಯೇ ನಡೆಯುತ್ತಿರುವುದರಿಂದ, ಈ ರಾಶಿಯವರ ಮೇಲೆ ಅದರ ಪ್ರಭಾವ ನೇರವಾಗಿರಲಿದೆ. ಶನಿ ಮತ್ತು ಮಂಗಳನ ಒಕ್ಕೂಟವು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಇದರಿಂದ ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಇಳಿಕೆಯಾಗುವ ಆತಂಕವಿರುತ್ತದೆ. ಈ ಸಮಯದಲ್ಲಿ ನೀವು ಮಾನಸಿಕ ಒತ್ತಡ ಅಥವಾ ಆತಂಕಕ್ಕೆ ಒಳಗಾಗುವ ಸಾಧ್ಯತೆಯಿದೆ. ಸಣ್ಣ ನಿರ್ಲಕ್ಷ್ಯವೂ ಸಹ ದೊಡ್ಡ ಮಟ್ಟದ ನಷ್ಟಕ್ಕೆ ಕಾರಣವಾಗಬಹುದು, ಆದ್ದರಿಂದ ಪ್ರತಿಯೊಂದು ಹೆಜ್ಜೆಯನ್ನು ಯೋಚಿಸಿ ಇಡುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Adam Zampa: IPL ತೊರೆದು PSL ಆಡಲು ಇದುವೇ ಮುಖ್ಯ ಕಾರಣ..!

ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್ ಆ್ಯಡಂ ಝಂಪಾ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಂಡಿಲ್ಲ. ಇತ್ತ ಐಪಿಎಲ್​ನಿಂದ ಹಿಂದೆ ಸರಿದಿರುವ ಝಂಪಾ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇದಕ್ಕೆ ಕಾರಣಗಳೇನು ಎಂಬುದನ್ನು ಖುದ್ದು ಝಂಪಾ ಬಹಿರಂಗಪಡಿಸಿದ್ದಾರೆ.

ಸಮಯ ಮತ್ತು ಹಣದ ಮೌಲ್ಯ:

ಆ್ಯಡಂ ಝಂಪಾ  ಅವರ ಪ್ರಕಾರ, ಐಪಿಎಲ್ ಸುದೀರ್ಘ ಅವಧಿಯ ಟೂರ್ನಿಯಾಗಿದೆ. ತಮ್ಮ ಸ್ಪಿನ್ ಬೌಲಿಂಗ್ ಕೌಶಲ್ಯಕ್ಕೆ ಐಪಿಎಲ್‌ನಲ್ಲಿ ಸಿಗುವ ಸಂಭಾವನೆಗಿಂತ, ಅಲ್ಲಿ ವಿನಿಯೋಗಿಸಬೇಕಾದ ಸಮಯ ಬಹಳ ಹೆಚ್ಚು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬೇರೆ ಕೌಶಲವಿರುವ ಆಟಗಾರರಿಗೆ ಸಿಗುವ ಮೌಲ್ಯ ಮತ್ತು ತಮಗೆ ಸಿಗುವ ಮೌಲ್ಯವನ್ನು ಹೋಲಿಸಿದಾಗ, ಐಪಿಎಲ್‌ಗಾಗಿ ಇಷ್ಟು ಸಮಯ ಮೀಸಲಿಡುವುದು ಅವರಿಗೆ ಸರಿ ಎನಿಸಲಿಲ್ಲ.

ಕೆಲಸದ ಒತ್ತಡ:

ಸತತ ಕ್ರಿಕೆಟ್ ಸರಣಿಗಳು ಮತ್ತು ವಿಶ್ವಕಪ್‌ನಿಂದಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸುಸ್ತಾಗಿದ್ದೆ. ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಐಪಿಎಲ್‌ಗಿಂತ ಕಡಿಮೆ ಅವಧಿಯ ಟೂರ್ನಿಯ ಅಗತ್ಯವಿತ್ತು. ಹೀಗಾಗಿ ಪಾಕಿಸ್ತಾನ್ ಸೂಪರ್ ಲೀಗ್ ಆಯ್ಕೆ ಮಾಡಿಕೊಂಡೆ ಎಂದು ಆ್ಯಡಂ ಝಂಪಾ ಹೇಳಿದ್ದಾರೆ.

ಅವಕಾಶದ ಕೊರತೆ:

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದಾಗ ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಲ್ ಅವರಂತಹ ಘಟಾನುಘಟಿ ಸ್ಪಿನ್ನರ್‌ಗಳ ನಡುವೆ ಸ್ಥಾನ ಪಡೆಯಲು ಕಷ್ಟಪಡಬೇಕಿತ್ತು. ಹೆಚ್ಚಿನ ಪಂದ್ಯಗಳಲ್ಲಿ ಬೆಂಚ್ ಕಾಯುವ ಬದಲು, ತಾವು ಪ್ರತಿ ಪಂದ್ಯದಲ್ಲೂ ಆಡಬಹುದಾದ ಲೀಗ್ ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಆ್ಯಡಂ ಝಂಪಾ ತಿಳಿಸಿದ್ದಾರೆ.

ಪಿಎಸ್ಎಲ್‌ನಲ್ಲಿ ಝಂಪಾ:

2026ರ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಆ್ಯಡಂ ಝಂಪಾ ಕರಾಚಿ ಕಿಂಗ್ಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.  ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ದಾಳಿ ಸಂಘಟಿಸಿರುವ ಅವರು 4 ಓವರ್​ಗಳಲ್ಲಿ ಕೇವಲ 26 ರನ್‌ಗಳಿಗೆ 1 ವಿಕೆಟ್ ಪಡೆದು ಮಿಂಚಿದ್ದಾರೆ.

ಹಾಗೆಯೇ ಲಾಹೋರ್ ಖಲಂದರ್ಸ್ ವಿರುದ್ಧದ ಮ್ಯಾಚ್​ನಲ್ಲಿ 4 ಓವರ್​​ಗಳಲ್ಲಿ ಕೇವಲ 11 ರನ್ ಮಾತ್ರ ನೀಡಿದ್ದರು. ಈ ವೇಳೆ 2 ವಿಕೆಟ್ ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಈ ಕೂಪರ್ ಕೊನೊಲಿ ಯಾರು ಗೊತ್ತಾ?

ಐಪಿಎಲ್ vs ಪಿಎಸ್​ಎಲ್ ವೇತನ:

ಐಪಿಎಲ್ 2025 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದ ಆ್ಯಡಂ ಝಂಪಾ ಪಡೆದಿದ್ದ ವೇತನ 2.40 ಕೋಟಿ ರೂ. ಇದೀಗ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಕರಾಚಿ ಕಿಂಗ್ಸ್​ ಪರ 1.51 ಕೋಟಿ ರೂ.ಗೆ ಪಡೆಯುತ್ತಿದ್ದಾರೆ.

 

Source link

ಇದು ರೈಲ್ವೆ ಬೋಗಿನಾ ಅಥ್ವಾ ಮನೇನಾ, ಕೋಚ್ ತುಂಬಾ ಒಳ ಉಡುಪುಗಳನ್ನು ನೇತು ಹಾಕಿದ ಮಹಿಳೆಯರು

ಮನಿಹಾರಿ, ಏಪ್ರಿಲ್ 1: ಒಮ್ಮೆ ಈ ರೈಲ್ವೆ ಬೋಗಿಯನ್ನು ನೋಡಿದಾಗ ಇದು ನಿಜವಾಗಿಯೂ ಬೋಗಿಯೇ ಅಥವಾ ಖಾಸಗಿ ವಿಮಾನವೇ ಎನ್ನುವ ಅನುಮಾನ ಮೂಡುತ್ತದೆ. ಯಾಕೆಂದರೆ ಬೇರೆ ಬಟ್ಟೆಗಳು ಹಾಗಿರಲಿ ಒಳ ಉಡುಪುಗಳನ್ನು ಕೂಡ ಮಹಿಳೆಯರು ನೇತುಹಾಕಿದ್ದಾರೆ. ಈ ಘಟನೆ ಮನಿಹಾರಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಇಡೀ ಬೋಗಿಯ ತುಂಬೆಲ್ಲಾ ಬಟ್ಟೆಗಳನ್ನು ಒಣಹಾಕಿದ್ದಾರೆ. ಇವರಿಗೆ ಕಿಂಚಿತ್ತಾದರೂ ನಾಗರಿಕ ಪ್ರಜ್ಞೆ ಇದೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ರೈಲ್ವೆ ಆಡಳಿತ ಇಂಥವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಬ್ರ್ಯಾಂಡೆಡ್ ವಾಚ್ ಎಂದು ಕಮ್ಮಿ ಬೆಲೆಗೆ ನಕಲಿ ವಾಚ್​ಗಳನ್ನು ಮಾರುತ್ತಿದ್ದ ಐವರ ಬಂಧನ!

ಬೆಂಗಳೂರು, ಏಪ್ರಿಲ್ 01: ಬ್ರಾಂಡೆಡ್ ವಾಚ್ (Branded Watch)​ ಎಂದು ಹೇಳಿಕೊಂಡು ನಕಲಿ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿಧೆಡೆ ನಕಲಿ ಕೈ ಗಡಿಯಾರದ ಅಂಗಡಿಗಳನ್ನು ನಡೆಸುತ್ತಿದ್ದು, ಪೊಲೀಸರು ಅವರಿಂದ ಸುಮಾರು 25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಸಿದ್ಧ ಭಾರತೀಯ ಬ್ರಾಂಡ್‌ಗಳ ಹೆಸರಿನಲ್ಲಿ ನಕಲಿ ಗಡಿಯಾರಗಳ ಮಾರಾಟ

ಬಂಧಿತ ಆರೋಪಿಗಳನ್ನು ಹರೀಶ್ ಕುಮಾರ್, ಸಯ್ಯದ್ ಜೈಸಾದ್ ಇಕ್ಬಾಲ್, ಮೊಹಮ್ಮದ್ ಹಬೀಬ್ ಹುಸೈನ್, ಖಲೀಮ್ ಉಲ್ಲಾ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಇವರು ನಗರದ ಆರ್‌ಟಿ ನಗರ, ಗಂಗಾನಗರ ಮತ್ತು ಚಿಕ್ಕಪೇಟೆ ಪ್ರದೇಶಗಳಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದು, ಪ್ರಸಿದ್ಧ ಭಾರತೀಯ ಬ್ರಾಂಡ್‌ಗಳ ಹೆಸರಿನಲ್ಲಿ ನಕಲಿ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಐದು ಅಂಗಡಿಗಳ ಮೇಲೆ ದಾಳಿ ನಡೆಸಿದರು. ದಾಳಿಯ ವೇಳೆ 670 ನಕಲಿ ಗಡಿಯಾರಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯವನ್ನು ಸುಮಾರು 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಗ್ರಾಹಕರನ್ನು ಯಾಮಾರಿಸಲು ಆರೋಪಿಗಳು ಕಡಿಮೆ ಬೆಲೆಯಲ್ಲಿ, “ಆಫರ್ ರೇಟ್”ನಲ್ಲಿ ಗಡಿಯಾರಗಳನ್ನು ನೀಡುತ್ತಿದ್ದರು. ಇವು ಮೂಲ ಬ್ರಾಂಡ್ ಉತ್ಪನ್ನಗಳೇ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಸ್ತುತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Vasthu Tips: ಮನೆಯಲ್ಲಿ ಈ ಗಿಡಗಳಿದ್ದರೆ ತಕ್ಷಣ ಹೊರಹಾಕಿ, ಇಲ್ಲದಿದ್ದರೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಗಿಡಗಳು ಪ್ರಕೃತಿಯ ಸಂಕೇತವಾಗಿದ್ದರೂ, ಕೆಲವು ನಿರ್ದಿಷ್ಟ ಗಿಡಗಳನ್ನು ಮನೆಯೊಳಗೆ ಅಥವಾ ಆವರಣದಲ್ಲಿ ಬೆಳೆಸುವುದು ವಾಸ್ತು ಪ್ರಕಾರ ಅಶುಭ ಎಂದು ಪರಿಗಣಿಸಲಾಗಿದೆ. ಅಂತಹ ಗಿಡಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಮುಳ್ಳಿನ ಗಿಡಗಳು:

ವಾಸ್ತು ಶಾಸ್ತ್ರದ ಪ್ರಕಾರ, ಮುಳ್ಳಿನ ಗಿಡಗಳನ್ನು ಮನೆಯ ಒಳಗೆ ಇಡಬಾರದು. ಕಳ್ಳಿ ಗಿಡ ಅಥವಾ ಕ್ಯಾಕ್ಟಸ್‌ನಂತಹ ಮುಳ್ಳಿನ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ ಎಂದು ನಂಬಲಾಗಿದೆ. ಇವು ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ, ಜಗಳ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಆದರೆ, ಗುಲಾಬಿ ಗಿಡವನ್ನು ಇದಕ್ಕೆ ಹೊರತಾಗಿ ನೋಡಲಾಗುತ್ತದೆ; ಇದನ್ನು ಮನೆಯ ಹೊರಗಿನ ಅಂಗಳದಲ್ಲಿ ಬೆಳೆಸಬಹುದು.

ಬೋನ್ಸಾಯ್ ಗಿಡಗಳು:

ಇತ್ತೀಚಿನ ದಿನಗಳಲ್ಲಿ ಬೋನ್ಸಾಯ್ ಗಿಡಗಳು ಅಲಂಕಾರಿಕ ವಸ್ತುವಾಗಿ ಜನಪ್ರಿಯವಾಗಿವೆ. ಆದರೆ ವಾಸ್ತುವಿನ ಪ್ರಕಾರ, ಬೋನ್ಸಾಯ್ ಗಿಡಗಳು “ಕುಂಠಿತ ಬೆಳವಣಿಗೆಯನ್ನು” ಪ್ರತಿನಿಧಿಸುತ್ತವೆ. ದೊಡ್ಡದಾಗಿ ಬೆಳೆಯಬೇಕಾದ ಮರವನ್ನು ಕೃತಕವಾಗಿ ಚಿಕ್ಕದಾಗಿಸಿ ಇಡುವುದರಿಂದ, ಅದು ಮನೆಯ ಸದಸ್ಯರ ವೃತ್ತಿಜೀವನ ಮತ್ತು ವೈಯಕ್ತಿಕ ಪ್ರಗತಿಯ ಮೇಲೆ ಅಡ್ಡಪರಿಣಾಮ ಬೀರಬಹುದು. ಹೀಗಾಗಿ, ಪ್ರಗತಿಯನ್ನು ಬಯಸುವವರು ಮನೆಯೊಳಗೆ ಬೋನ್ಸಾಯ್ ಇಡುವುದನ್ನು ತಪ್ಪಿಸಬೇಕು.

ಹಾಲಿನ ದ್ರವ ಸೂಸುವ ಸಸ್ಯಗಳು:

ಯಾವ ಗಿಡಗಳ ಎಲೆ ಅಥವಾ ಕೊಂಬೆಯನ್ನು ಮುರಿದಾಗ ಹಾಲಿನಂತಹ ಬಿಳಿ ದ್ರವ (Milky Sap) ಹೊರಬರುತ್ತದೆಯೋ, ಅಂತಹ ಗಿಡಗಳನ್ನು ಮನೆಯೊಳಗೆ ಇಡಬಾರದು. ಈ ರೀತಿಯ ಸಸ್ಯಗಳು ಮನೆಯ ಶಾಂತಿ ಮತ್ತು ನೆಮ್ಮದಿಯನ್ನು ಹಾಳುಮಾಡುವುದಲ್ಲದೆ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ರಬ್ಬರ್ ಪ್ಲಾಂಟ್‌ನಂತಹ ಗಿಡಗಳನ್ನು ಮನೆಯ ಹೊರಗೆ ಇಡುವುದು ಉತ್ತಮ, ಆದರೆ ಮನೆಯ ಪ್ರವೇಶ ದ್ವಾರದ ಬಳಿ ಅಥವಾ ಬೆಡ್‌ರೂಮ್‌ನಲ್ಲಿ ಇಡುವುದು ವಾಸ್ತು ಸಮ್ಮತವಲ್ಲ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಬಾಡಿದ ಮತ್ತು ಒಣಗಿದ ಗಿಡಗಳು:

ಮನೆಯಲ್ಲಿ ಸದಾ ಹಸಿರಾಗಿರುವ ಗಿಡಗಳು ಜೀವಕಳೆಯನ್ನು ನೀಡುತ್ತವೆ. ಆದರೆ, ಸರಿಯಾದ ಆರೈಕೆ ಇಲ್ಲದೆ ಒಣಗಿಹೋದ ಅಥವಾ ಬಾಡಿಹೋದ ಗಿಡಗಳು ತೀವ್ರವಾದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಒಣಗಿದ ಎಲೆಗಳು ಮೌಡ್ಯ ಮತ್ತು ದುಃಖದ ಸಂಕೇತವಾಗಿದ್ದು, ಇವು ಮನೆಯಲ್ಲಿದ್ದರೆ ಅನಾರೋಗ್ಯ ಮತ್ತು ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಆದ್ದರಿಂದ, ಗಿಡಗಳು ಒಣಗಿದ ತಕ್ಷಣ ಅವುಗಳನ್ನು ತೆಗೆದು ಹೊಸ ಗಿಡಗಳನ್ನು ನೆಡುವುದು ಅತ್ಯಗತ್ಯ.

ದೊಡ್ಡ ಮರಗಳು:

ಮನೆಯ ತೀರಾ ಹತ್ತಿರದಲ್ಲಿ ಹುಣಸೆ ಮರ ಅಥವಾ ಖರ್ಜೂರದ ಮರಗಳನ್ನು ಬೆಳೆಸಬಾರದು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಹುಣಸೆ ಮರವು ನಕಾರಾತ್ಮಕ ಶಕ್ತಿಗಳನ್ನು ಸೆಳೆಯುತ್ತದೆ ಎಂಬ ನಂಬಿಕೆ ಇದೆ, ಇದು ಮನೆಯವರ ಮಾನಸಿಕ ಶಾಂತಿಗೆ ಧಕ್ಕೆ ತರಬಹುದು. ಹಾಗೆಯೇ, ಖರ್ಜೂರದ ಮರವು ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಈ ಮರಗಳನ್ನು ಮನೆಯ ಆವರಣದಿಂದ ದೂರದಲ್ಲಿ ಬೆಳೆಸುವುದು ಶ್ರೇಯಸ್ಕರ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಕಾನೂನು ಪಾಲನೆ ಕೇವಲ ಆಯ್ಕೆಯ ವಿಷಯವೇ?: ಬಸವನಗುಡಿ ಪುತ್ತಿಗೆ ಮಠಕ್ಕೆ ಬಂದಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ ಯುವಕ

ಬೆಂಗಳೂರು, ಏ.1: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ನಾಗರಿಕ ಪ್ರಜ್ಞೆ ಹೇಗೆ ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಬಸವನಗುಡಿಯಲ್ಲಿ ನಡೆದ ಪಾರ್ಕಿಂಗ್ ವಿವಾದವೊಂದು ಸಾಕ್ಷಿಯಾಗಿದೆ. ಪುತ್ತಿಗೆ ಮಠದ ಮುಂಭಾಗ ವಾಹನ ನಿಲುಗಡೆ ಮಾಡುವ ವಿಚಾರದಲ್ಲಿ ಕಾಲೇಜು ವಿದ್ಯಾರ್ಥಿ ಮತ್ತು ಮಹಿಳಾ  ನಡುವೆ ನಡೆದ ಜಗಳ, ಕೊನೆಗೆ ಪೊಲೀಸರ ಸಮ್ಮುಖದಲ್ಲಿ ‘ರಾಜಿ’ಯೊಂದಿಗೆ ಅಂತ್ಯಗೊಂಡಿದೆ.

ವರದಿಗಳ ಪ್ರಕಾರ, ಕಾಲೇಜು ವಿದ್ಯಾರ್ಥಿಯೊಬ್ಬ ಮಠದ ಮುಂಭಾಗ ನಿರ್ಬಂಧವಿದ್ದರೂ ಆತುರದಲ್ಲಿ ವಾಹನ ಪಾರ್ಕ್ ಮಾಡಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಮಠದ ಭಕ್ತನೊಂದಿಗೆ ವಿದ್ಯಾರ್ಥಿ ವಾಗ್ವಾದಕ್ಕಿಳಿದಿದ್ದು, ಇದು ದೈಹಿಕ ಹಲ್ಲೆಯ ಹಂತಕ್ಕೆ ತಲುಪಿದೆ. ಗಲಾಟೆಯ ನಡುವೆ ವಿದ್ಯಾರ್ಥಿಯು ಮಹಿಳೆಯೊಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಇಲ್ಲಿದೆ ನೋಡಿ ವಿಡಿಯೋ:

ಈ ಘಟನೆಯ ನಂತರ ಎರಡೂ ಕಡೆಯವರು ಬಸವನಗುಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ, ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಬದಲು, ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಆತನ ಪೋಷಕರನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಯಾವುದೇ ಎಫ್‌ಐಆರ್ (FIR) ದಾಖಲಿಸದೆ ಪ್ರಕರಣವನ್ನು ಪರಸ್ಪರ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಸಿದ ಮಾಜಿ ಎಂ.ಡಿಗೆ ಶಾಕ್: ವಿ. ಮುನಿಯಪ್ಪಗೆ 3 ವರ್ಷ ಜೈಲು, 4.5 ಕೋಟಿ ರೂ. ದಂಡ ವಿಧಿಸಿದ ಲೋಕಾಯುಕ್ತ ಕೋರ್ಟ್!

ಬೆಂಗಳೂರಿನಲ್ಲಿ ಕಾನೂನು ಪಾಲನೆ ಕೇವಲ ಆಯ್ಕೆಯ ವಿಷಯವೇ? ದೈಹಿಕ ಹಲ್ಲೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳನ್ನು ಕೇವಲ ‘ರಾಜಿ’ಯ ಮೂಲಕ ಮುಚ್ಚಿ ಹಾಕುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧ್ಯರಾತ್ರಿ ಸುರಿದ ಮಳೆ ಅಬ್ಬರಕ್ಕೆ ಶಿವಮೊಗ್ಗದಲ್ಲಿ ಮನೆಗೆ ನುಗ್ಗಿದ ನೀರು: ಭಾರಿ ಅವಾಂತರ

ಶಿವಮೊಗ್ಗ, ಏಪ್ರಿಲ್​​ 01: ನಿನ್ನೆ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದ ನಗರದ ಶರಾವತಿ ನಗರ ಬಡಾವಣೆಯ ಮನೆಯೊಂದಕ್ಕೆ ಚಾನಲ್ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ರಾತ್ರಿ 12 ಗಂಟೆಯ ವೇಳೆಗೆ ಗುಡುಗು ಸಮೇತ ಆರಂಭವಾದ ಮಳೆ, ಬೆಳಗ್ಗಿನ ಜಾವ ಸುಮಾರು 3 ಗಂಟೆಯವರೆಗೂ ಸುರಿದಿದೆ. ಭಾರಿ ಮಳೆ ಹಿನ್ನೆಲೆ ತುಂಗಾ ಚಾನಲ್​​ನಿಂದ ಉಕ್ಕಿ ಹರಿದ ನೀರು ತಗ್ಗುಪ್ರದೇಶದಲ್ಲಿರುವ ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ನೆಂದು ತೊಪ್ಪೆಯಾಗಿದ್ದು,
ಹಾಸಿಗೆ, ಮಂಚ, ಅಡುಗೆ ಮನೆಯ ಬಹುತೇಕ ವಸ್ತುಗಳು ನೀರು ಪಾಲಾಗಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

VIDEO: ಬ್ಯಾಟ್ಸ್​ಮನ್​ನಿಂದ ಗಾಯಗೊಂಡ ಶ್ರೇಯಸ್ ಅಯ್ಯರ್

ಗುಜರಾತ್ ಟೈಟಾನ್ಸ್ (GT) ವಿರುದ್ಧದ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಹೀಗೆ ಗಾಯಗೊಂಡಿದ್ದು ಪಂಜಾಬ್ ಕಿಂಗ್ಸ್ ಬ್ಯಾಟರ್​ನಿಂದ. ಅಂದರೆ ಕೂಪರ್ ಕೊನೊಲಿ ಬಾರಿಸಿದ ಚೆಂಡು ಶ್ರೇಯಸ್ ಅಯ್ಯರ್ ಅವರ ಕೈಗೆ ಬಲವಾಗಿ ಬಡಿದಿದೆ.

ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕೂಪರ್ ಕೊನೊಲಿ ಹೊಡೆದ ವೇಗದ ‘ಸ್ಟ್ರೈಟ್ ಡ್ರೈವ್’ ಚೆಂಡು ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಶ್ರೇಯಸ್ ಅಯ್ಯರ್ ಅವರ ಮಣಿಕಟ್ಟಿಗೆ ನೇರವಾಗಿ ಬಡಿಯಿತು. ತೀವ್ರ ನೋವಿನಿಂದ ಅಯ್ಯರ್ ಮೈದಾನದಲ್ಲೇ ಕುಸಿದು ಬಿದ್ದ ಅಯ್ಯರ್ ತಕ್ಷಣವೇ ಫಿಸಿಯೋ ಅವರಿಂದ ಚಿಕಿತ್ಸೆ ಪಡೆದರು. ಇದಾದ ಬಳಿಕ ಎದುರಿಸಿದ ಎಸೆತದಲ್ಲೇ ಔಟಾಗಿ ಹೊರ ನಡೆದರು.

ಇನ್ನು ಪಂದ್ಯ ಮುಗಿದ ನಂತರ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಅವರ ಕೈಗೆ ದಪ್ಪವಾಗಿ ಪಟ್ಟಿ (Taping) ಕಟ್ಟಲಾಗಿತ್ತು. ಹೀಗಾಗಿಯೇ ಅವರು ಮುಂದಿನ ಪಂದ್ಯಕ್ಕೆ ಲಭ್ಯರಿರಲಿದ್ದಾರೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಗಾಯದ ನೋವು ಕಡಿಮೆಯಾಗಿದ್ದು, ಇದಾಗ್ಯೂ ನಾನು ಯಾವುದನ್ನೂ ಈಗಲೇ ಖಚಿತಪಡಿಸಿ ಹೇಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

ಹೀಗಾಗಿ ಶ್ರೇಯಸ್ ಅಯ್ಯರ್ ಅವರ ಗಾಯದ ಮೇಲೆ ಪಂಜಾಬ್ ಕಿಂಗ್ಸ್​ ತಂಡದ ವೈದ್ಯಕೀಯ ಸಿಬ್ಬಂದಿ ನಿಗಾ ಇಟ್ಟಿದ್ದಾರೆ. ಚೆನ್ನೈನಲ್ಲಿ ನಡೆಯುವ ಅಭ್ಯಾಸದ ಅವಧಿಯ ನಂತರವಷ್ಟೇ ಅವರು ಕಣಕ್ಕಿಳಿಯುತ್ತಾರೆಯೇ ಅಥವಾ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.

ಅಂದಹಾಗೆ ಶ್ರೇಯಸ್ ಅಯ್ಯರ್ ಅವರು ದೀರ್ಘಕಾಲದ ಗಾಯದ ನಂತರ ಇತ್ತೀಚೆಗಷ್ಟೇ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ಮತ್ತೊಮ್ಮೆ ಗಾಯಗೊಂಡಿರುವುದು ಹೊಸ ಚಿಂತೆಗೆ ಕಾರಣವಾಗಿದೆ.

Source link

Middle East Flight Advisory: ದುಬೈ, ಅಬುಧಾಬಿಗೆ ಹೋಗುವ ಪ್ರಯಾಣಿಕರಿಗೆ ಕೆಲವು ಸಲಹೆಗಳ ಕೊಟ್ಟ ಏರ್ ಇಂಡಿಯಾ, ಇಂಡಿಗೋ

ನವದೆಹಲಿ, ಏಪ್ರಿಲ್ 1: ಭಾರತದ ಎರಡು ದೊಡ್ಡ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ(Air India) ಹಾಗೂ ಇಂಡಿಗೋ ದುಬೈ, ಅಬುಧಾಭಿ ಅಥವಾ ಇತರೆ ಗಲ್ಫ್​ ದೇಶಗಳಿಗೆ ಹೋಗುವ ಪ್ರಯಾಣಿಕರಿಗೆ ಕೆಲವು ಸಲಹೆಗಳನ್ನು ನೀಡಿವೆ. ಮಧ್ಯಪ್ರಾಚ್ಯದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಡಿಗೋ ಏರ್‌ಲೈನ್ಸ್ ಪ್ರಯಾಣಿಕರಿಗೆ ಪ್ರಯಾಣ ಸಲಹೆಯನ್ನು ನೀಡಿದೆ.

ಪ್ರದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದಾಗಿ, ವಿಮಾನ ವೇಳಾಪಟ್ಟಿಗಳು ಆಗಾಗ ಬದಲಾಗುತ್ತಿರುತ್ತವೆ. ಆದ್ದರಿಂದ, ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಪ್ರಸ್ತುತ ಪರಿಸ್ಥಿತಿ ಬಗ್ಗೆ ಪರಿಶೀಲಿಸಿ ಎಂದು ವಿನಂತಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.

ಕಂಪನಿಯ ತಂಡಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿವೆ, ಇರಾನ್-ಇಸ್ರೇಲ್ ಸಂಘರ್ಷ ಮತ್ತು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಹಸ್ತಕ್ಷೇಪದಿಂದಾಗಿ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಿದೆ. ವಾಯುಪ್ರದೇಶದ ನಿರ್ಬಂಧಗಳು ಮತ್ತು ವಿಮಾನಗಳ ಅಡಚಣೆಗಳಿಗೆ ಕಾರಣವಾಗಿರುವ ಸಮಯದಲ್ಲಿ ಈ ಸಲಹೆ ಬಂದಿದೆ. ಏಪ್ರಿಲ್ 1ರಂದು ಇಂಡಿಗೋ ತನ್ನ ಕಾರ್ಯಾಚರಣೆಯನ್ನು ಯಾವುದೇ ಅಡೆತಡೆಗಳಿಲ್ಲದೆ ನಿರ್ವಹಿಸುವುದಾಗಿ ಹೇಳಿದೆ.

ಮತ್ತಷ್ಟು ಓದಿ: ಏರ್​ ಇಂಡಿಯಾ ಅಪಘಾತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿಯ ಸ್ಥಿತಿ ಏನಾಗಿದೆ ಗೊತ್ತೇ?

ಪಟ್ಟಿಯಲ್ಲಿ ಬಾಂಬೆ, ದೆಹಲಿ, ಹೈದರಾಬಾದ್, ಕೊಚ್ಚಿ ಮತ್ತು ಬೆಂಗಳೂರಿನಂತಹ ಭಾರತೀಯ ನಗರಗಳಿಂದ ಜೆಡ್ಡಾ, ಮದೀನಾ, ಅಬುಧಾಬಿ, ರಿಯಾದ್ ಮತ್ತು ಮಸ್ಕತ್‌ನಂತಹ ಮಧ್ಯಪ್ರಾಚ್ಯ ತಾಣಗಳಿಗೆ ವಿಮಾನಗಳು ಸೇರಿವೆ.

6E59 ಬಾಂಬೆಯಿಂದ ಮದೀನಾ, 6E61 ಬಾಂಬೆಯಿಂದ ಜೆಡ್ಡಾ, 6E71 ದೆಹಲಿಯಿಂದ ಅಬುಧಾಬಿ ಮತ್ತು 6E1271 ಕೊಚ್ಚಿಯಿಂದ ಮಸ್ಕತ್​ಗೆ ವಿಮಾನಗಳನ್ನು ನಿಗದಿಪಡಿಸಲಾಗಿದೆ. ಎರಡೂ ಕಡೆಗಳಲ್ಲಿ 30 ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಲಿವೆ.ಪ್ರಯಾಣಿಕರು ಬುಕಿಂಗ್ ಮತ್ತು ಚೆಕ್ ಇನ್ ಮಾಡುವ ಮೊದಲು ಇಂಡಿಗೋ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ಸ್ಥಿತಿಯನ್ನು ಪರಿಶೀಲಿಸಬಹುದು.
ಅಮೆರಿಕ-ಇಸ್ರೇಲಿ ದಾಳಿಗಳು ಮತ್ತು ಇರಾನ್‌ನ ಪ್ರತೀಕಾರದ ದಾಳಿಗಳಿಂದಾಗಿ ಗಲ್ಫ್ ಪ್ರದೇಶದ ವಾಯುಪ್ರದೇಶವನ್ನು ಮುಚ್ಚಲಾಗಿದೆ.

ಇದರಿಂದಾಗಿ ಅನೇಕ ವಿಮಾನಯಾನ ಸಂಸ್ಥೆಗಳು ಕತಾರ್, ಕುವೈತ್ ಮತ್ತು ಇತರ ಕೆಲವು ಸ್ಥಳಗಳಿಗೆ ವಿಮಾನಗಳನ್ನು ಸ್ಥಗಿತಗೊಳಿಸಬೇಕಾಯಿತು. ಇಂಡಿಗೋ ಕೆಲವು ಮಾರ್ಗಗಳಲ್ಲಿ ಸೇವೆಗಳನ್ನು ಕಡಿಮೆ ಮಾಡಿದೆ ಆದರೆ ಸೌದಿ ಅರೇಬಿಯಾ ಮತ್ತು ಯುಎಇಯ ಪ್ರಮುಖ ನಗರಗಳಿಗೆ ಕೆಲವು ವಿಮಾನಗಳ ಹಾರಾಟವನ್ನು ಮುಂದುವರೆಸಿದೆ.

ಗಲ್ಫ್​ ದೇಶಗಳಲ್ಲಿ 30 ಏರ್ ಇಂಡಿಯಾ, ವಿಮಾನಗಳು ಹಾರಾಟ ನಡೆಸಲಿವೆ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಇತರ ಪ್ರದೇಶಗಳಿಗೆ ಹೋಗುವ ಮತ್ತು ಹೋಗುವ ಎಲ್ಲಾ ವಿಮಾನಗಳು ಎಂದಿನಂತೆ ಹಾರಾಟ ನಡೆಸಲಿವೆ.

 

ರಾಷ್ಟ್ರೀಯ ಸುದ್ದಿಗಲಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link