ಬೆಂಗಳೂರು, ಮಾರ್ಚ್ 13:ಕಾಂಗ್ರೆಸ್ಪಕ್ಷದ 27-28 ಹಿರಿಯ ಶಾಸಕರು ಸಚಿವ ಸಂಪುಟ ಪುನಾರಚನೆಗೆ ಒತ್ತಾಯಿಸಿ ಬೌರಿಂಗ್ ಕ್ಲಬ್‌ನಲ್ಲಿ ಸಭೆ ನಡೆಸಿದ್ದಾರೆ. ಈ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಮುಂದಿನ ಚುನಾವಣೆಗಳಿಗೂ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಈ ಚರ್ಚೆ ನಡೆಸಲಾಗಿದೆ. ಸಚಿವ ಸಂಪುಟದಲ್ಲಿ ಬದಲಾವಣೆ ತಂದು ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಇದು ಯಾವುದೇ ಭಿನ್ನಮತವಲ್ಲ, ಬದಲಾಗಿ ಪಕ್ಷದ ಅಭಿವೃದ್ಧಿಗಾಗಿ ಮತ್ತು ಹಿರಿಯರಿಗೆ ಅವಕಾಶ ನೀಡಲು ಕೇಳುತ್ತಿರುವ ಹಕ್ಕು ಎಂದು ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಬಳಿಕ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಸಂಪರ್ಕಿಸಲು ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಆಕಾಶ್’ ಸಿನಿಮಾ ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದೆ. 2005 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾನಲ್ಲಿ ರಮ್ಯಾ ನಾಯಕಿಯಾಗಿ ನಟಿಸಿದ್ದರು. ಪುನೀತ್ ನಾಯಕನಾಗಿ ನಟಿಸಿದ ಐದನೇ ಸಿನಿಮಾ ಇದಾಗಿದ್ದು, ರಮ್ಯಾ ಜೊತೆಗೆ ನಟಿಸಿದ ಎರಡನೇ ಸಿನಿಮಾ ಆಗಿತ್ತು. ಮಹೇಶ್ ನಿರ್ದೇಶಿಸಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾ ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದ್ದು, ನಟಿ ರಮ್ಯಾ ಸೇರಿದಂತೆ, ರಾಘವೇಂದ್ರ ರಾಜ್ಕುಮಾರ್ ಇನ್ನೂ ಹಲವರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದರು. ಪುನೀತ್ ಅಭಿಮಾನಿಗಳು ಸಹ ಅದ್ಧೂರಿಯಾಗಿ ‘ಆಕಾಶ್’ ಸಿನಿಮಾವನ್ನು ಸ್ವಾಗತಿಸಿದರು. ವಿಡಿಯೋ ನೋಡಿ…
ತುಮಕೂರು, ಮಾರ್ಚ್ 13: ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ಬಾಲಕಿಯರ ವಸತಿ ನಿಲಯ (Girl’s Hostel) ಅಭಿವೃದ್ಧಿ ಕಾಣದೆ ಪಾಳು ಬಿದ್ದಿದೆ. ಗ್ರಾಮದಲ್ಲಿ ಇರುವ ಪಾರಂಪರಿಕ ನಂಬಿಕೆಯನ್ನು ನೆಪ ಮಾಡಿಕೊಂಡು ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ತೋರಿಸುತ್ತಿದೆಯೇ ಎಂಬ ಪ್ರಶ್ನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಸುಮಾರು 69 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಸ್ತೂರಿಬಾ ಬಾಲಿಕಿಯರ ವಿದ್ಯಾರ್ಥಿನಿಲಯ ಕಳೆದ ಎಂಟು ವರ್ಷಗಳಿಂದ ಖಾಲಿ ಬಿದ್ದಿದ್ದು, ಇದು ಇದೀಗ ವಿವಾದಕ್ಕೆ ಕಾರಣವಾಗಿದೆ.
ನಿರ್ಮಾಣವಾದ ಒಂದು ತಿಂಗಳಲ್ಲೇ ಖಾಲಿಯಾದ ಕಟ್ಟಡ
2015ರಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲವಾಗಲೆಂದು ಈ ಬಾಲಕೀಯರ ನಿಲಯ ನಿರ್ಮಿಸಲಾಗಿತ್ತು. ಆದರೆ ನಿರ್ಮಾಣವಾದ ಕೇವಲ ಒಂದು ತಿಂಗಳಲ್ಲೇ ವಿದ್ಯಾರ್ಥಿನಿಯರ ಕೊರತೆಯಿಂದ ನಿಲಯವನ್ನು ಬಂದ್ ಮಾಡಲಾಗಿದೆ. ಅದಾದ ಬಳಿಕ ಇಂದಿಗೂ ಈ ವಿದ್ಯಾರ್ಥಿನಿಲಯ ಬಳಸಲಾಗದೇ ಖಾಲಿಯಾಗಿಯೇ ಉಳಿದಿದೆ.
ಗ್ರಾಮಸ್ಥರ ಪಾರಂಪರಿಕ ನಂಬಿಕೆ
ವಿದ್ಯಾರ್ಥಿನಿಲಯದ ಸಮೀಪದಲ್ಲಿರುವ ಏಳುಮಂದೆಮ್ಮ ದೇವಾಲಯದ ಕಾರಣದಿಂದಾಗಿ ಈ ಪ್ರದೇಶದಲ್ಲಿ ಮಹಿಳೆಯರು ಸಂಚರಿಸುವುದು ಅಪವಿತ್ರ ಎಂದು ಗ್ರಾಮಸ್ಥರು ನಂಬುತ್ತಾರೆ. ಮುಟ್ಟಾದ ಮಹಿಳೆಯರು ಅಥವಾ ಬಾಣಂತಿಯರು ಈ ಜಾಗದಲ್ಲಿ ಸಂಚರಿಸಿದರೆ ದೇವಿ ಮುನಿಸಿಕೊಳ್ಳುತ್ತಾಳೆ ಎಂಬ ಭಯ ಗ್ರಾಮಸ್ಥರಲ್ಲಿ ಇದೆ. ಈ ಕಾರಣದಿಂದ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಈ ವಿದ್ಯಾರ್ಥಿನಿಲಯಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೆಲ ಗ್ರಾಮಸ್ಥರು ಹೇಳಿದ್ದಾರೆ.
ಸರ್ಕಾರ ಕುಂಟು ನೆಪ ಹೇಳುತ್ತಿದೆ ಎನ್ನುತ್ತಿರುವ ಗ್ರಾಮಸ್ಥರು
ಆದರೆ ಗ್ರಾಮದ ಕೆಲವರು ಈ ಮೌಢ್ಯವನ್ನು ನೆಪ ಮಾಡಿಕೊಂಡು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ನಿರ್ಲಕ್ಷ್ಯ ತೋರಿಸುತ್ತಿವೆ ಎಂದು ಆರೋಪಿಸುತ್ತಿದ್ದಾರೆ. ವಿದ್ಯಾರ್ಥಿನಿಲಯವನ್ನು ಸರಿಯಾಗಿ ನಿರ್ವಹಿಸದೇ, ಭದ್ರತೆ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡದೇ ಕಾಂಟ್ರಾಕ್ಟ್ ಮೂಲಕ ಖಾಸಗಿಯವರಿಗೆ ನೀಡಿದ್ದರಿಂದಲೇ ಈ ಸ್ಥಿತಿ ಉಂಟಾಗಿದೆ ಎಂದು ಕೆಲ ಗ್ರಾಮಸ್ಥರು ದೂರಿದ್ದಾರೆ.
ಅರ್ಚಕರು ಹೇಳಿದ್ದೇನು?
ಇದರ ನಡುವೆ ದೇವಸ್ಥಾನದ ಅರ್ಚಕರು ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿನಿಲಯವು ದೇವಾಲಯದ ಗಡಿಯ ಹೊರಗಿದ್ದು ದೇವಸ್ಥಾನಕ್ಕೂ ಹಾಸ್ಟೆಲ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮೌಢ್ಯ ನಂಬಿಕೆ, ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ಅಭಿವೃದ್ಧಿಯ ಕೊರತೆ ನಡುವೆ 8 ವರ್ಷಗಳಿಂದ ಬಾಲಕೀಯರ ನಿಲಯ ಖಾಲಿ ಬಿದ್ದಿರುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿಯೇ ಪರಿಣಮಿಸಿದೆ.
ವಾಷಿಂಗ್ಟನ್, ಮಾರ್ಚ್ 13: ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮಹತ್ವದ ಹೇಳಿಕೆ ನೀಡಿದ್ದಾರೆ. ಮೊಜ್ತಾಬಾ ಖಮೇನಿ ಉಸಿರಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಇಡೀ ಮಧ್ಯಪ್ರಾಚ್ಯವನ್ನು ಆವರಿಸಿದೆ. ಅಮೆರಿಕ-ಇಸ್ರೇಲ್ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಗಲ್ಫ್ ರಾಷ್ಟ್ರಗಳಾದ ಯುಎಇ, ಬಹ್ರೇನ್, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾಗಳ ಮೇಲೆ ದಾಳಿ ಮಾಡಿದೆ.
ಯುದ್ಧದ ಮಧ್ಯೆ, ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಅನೇಕ ಹೇಳಿಕೆಗಳು ಬರುತ್ತಿವೆ.
ಫೆಬ್ರವರಿ 28 ರಂದು ಟೆಹ್ರಾನ್ ಮೇಲೆ ನಡೆದ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು ಮತ್ತು ಮೊಜ್ತಬಾ ಖಮೇನಿ ಗಾಯಗೊಂಡಿದ್ದರು ಎಂದು ಅಮೆರಿಕದ ಮಾಧ್ಯಮ ವರದಿಯ ನಂತರ ಟ್ರಂಪ್ ಅವರ ಹೇಳಿಕೆ ಹೊರಬಿದ್ದಿದೆ .
ಮೊಜ್ತಬಾ ಖಮೇನಿ ಕೋಮಾದಲ್ಲಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ. ಇರಾನ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ ಅಧಿಕಾರ ವಹಿಸಿಕೊಂಡಾಗಿನಿಂದ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಫಾಕ್ಸ್ ನ್ಯೂಸ್ ರೇಡಿಯೊದಲ್ಲಿ ಬ್ರಿಯಾನ್ ಕಿಲ್ಮೀಡ್ ಶೋಗೆ ಮಾತನಾಡಿದ ಟ್ರಂಪ್, ಅವರು ಗಾಯಗೊಂಡಿರಬಹುದು, ಯಾವುದೋ ರೂಪದಲ್ಲಿ ಜೀವಂತವಾಗಿರಬಹುದು ಎಂದರು.
ಇರಾನ್‌ನ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮೊಜ್ತಬಾ ಖಮೇನಿ ಅವರ ಬಗ್ಗೆ ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ.
ಇರಾನ್‌ನೊಂದಿಗಿನ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಇರಾನ್‌ನಲ್ಲಿ ಇತ್ತೀಚೆಗೆ ನಡೆದ ದಾಳಿಗಳ ನಂತರ, ಮೊಜ್ತಾಬಾ ಖಮೇನಿ ಬಗ್ಗೆ ವಿವಿಧ ಊಹಾಪೋಹಗಳು ಹರಡುತ್ತಿವೆ. ದಿ ಸನ್ ವರದಿಯ ಪ್ರಕಾರ, 56 ವರ್ಷದ ಖಮೇನಿ ಈ ದಾಳಿಗಳಲ್ಲಿ ಒಂದು ಕಾಲು ಕಳೆದುಕೊಂಡಿದ್ದಾರೆ ಮತ್ತು ಅವರ ಹೊಟ್ಟೆ ಅಥವಾ ಯಕೃತ್ತಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಿದೆ.
ಮೊಜ್ತಬಾ ಖಮೇನಿ ಅವರ ಪತ್ನಿ, ಅವರ ಸಹೋದರಿಗಳಲ್ಲಿ ಒಬ್ಬರು, ಅವರ ಸೊಸೆ ಮತ್ತು ಅವರ ತಂದೆ ಮತ್ತು ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕೂಡ ಅಮೆರಿಕದ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.
ಯುದ್ಧ ಪ್ರಾರಂಭವಾದಾಗಿನಿಂದ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಯುದ್ಧವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ ಅವರ ಮೊದಲ ಸಾರ್ವಜನಿಕ ಹೇಳಿಕೆಯನ್ನು ದೂರದರ್ಶನದಲ್ಲಿ ಅಥವಾ ವೀಡಿಯೊ ರೆಕಾರ್ಡಿಂಗ್ ಮೂಲಕ ವೈಯಕ್ತಿಕವಾಗಿ ನೀಡಲಾಗಿಲ್ಲ.
ಕುಂಭಮೇಳದ ಒಂದು ಚಿತ್ರದಿಂದ ಭಾರಿ ಜನಪ್ರಿಯತೆ ಪಡೆದ ಮೊನಲಿಸಾ ಭೋಸ್ಲೆಯ (Monalisa Bhosle) ಮದುವೆ ಇತ್ತೀಚೆಗಷ್ಟೆ ಕೇರಳದಲ್ಲಿ ನಡೆದಿದ್ದು, ಅವರ ಕುಂಭಮೇಳದ ಚಿತ್ರದಷ್ಟೆ ಅವರ ಮದುವೆಯೂ ವೈರಲ್ ಆಗುತ್ತಿದೆ. ಮೊನಲಿಸಾ ಭೋಸ್ಲೆ, ಫರ್ಮಾನ್ ಖಾನ್ ಎಂಬುವರನ್ನು ಅವರ ಕುಟುಂಬದ ಇಚ್ಛೆಯ ವಿರುದ್ಧವಾಗಿ ಕೇರಳದಲ್ಲಿ ಮದುವೆ ಆಗಿದ್ದಾರೆ. ಇವರ ಮದುವೆಯ ಮುಂದಾಳತ್ವವನ್ನು ಕೇರಳದ ಕೆಲವು ರಾಜಕೀಯ ಮುಖಂಡರು ವಹಿಸಿಕೊಂಡಿದ್ದು ವಿಶೇಷ. ಮೊನಲಿಸಾ ಮತ್ತು ಫರ್ಮಾನ್ ಖಾನ್ ಅವರ ಮದುವೆಯನ್ನು ಕೆಲವರು ‘ಲವ್ ಜಿಹಾದ್’ ಎಂದು ಸಹ ಕರೆದಿದ್ದಾರೆ, ಆದರೆ ನೂತನ ವಧು-ವರರು ಇದನ್ನು ಅಲ್ಲಗಳೆದಿದ್ದಾರೆ. ಇದೀಗ ಮೊನಲಿಸಾ ತಂದೆ ಈ ಬಗ್ಗೆ ಮಾತನಾಡಿದ್ದಾರೆ.
ಮೊನಲಿಸಾ ತಂದೆ ಜಯಸಿಂಗ್ ಭೋಸ್ಲೆ ಹೇಳಿರುವಂತೆ, ‘ಕೆಲ ದಿನಗಳ ಹಿಂದಷ್ಟೆ ಕೆಲವರು ಅವರ ಮನೆಗೆ ಬಂದು ಕೇರಳದಲ್ಲಿ ನಟನೆ ತರಬೇತಿ ಹಾಗೂ ಸಿನಿಮಾ ಅಭಿನಯಕ್ಕಾಗಿ ತೆರಳುತ್ತಿದ್ದು, ಮೊನಲಿಸಾ ಅವರನ್ನು ಕಳಿಸಿಕೊಡುವಂತೆ ಕೇಳಿದರಂತೆ. ಇಂಥಹಾ ವಿಷಯಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಜಯಸಿಂಗ್ ಭೋಸ್ಲೆ ಸರಿಯೆಂದು ಒಪ್ಪಿಕೊಂಡಿದ್ದು ಮಾತ್ರವಲ್ಲದೆ ಅವರೂ ಸಹ ಮೊನಲಿಸಾ ಜೊತೆಗೆ ಕೇರಳಕ್ಕೆ ತೆರಳಿದ್ದರಂತೆ. ಮನೆಗೆ ಬಂದಿದ್ದ ಗುಂಪಿನಲ್ಲಿ ಮೊನಲಿಸಾ ಈಗ ಮದುವೆ ಆಗಿರುವ ಫರ್ಮಾನ್ ಖಾನ್ ಸಹ ಇದ್ದರಂತೆ. ಈಗ ನೋಡಿದರೆ ಇಬ್ಬರೂ ಮದುವೆ ಆಗಿದ್ದಾರೆ.
ಮದುವೆ ಆಗುವ ವಿಷಯ ಹೇಳಿದಾಗ ನಾನು ವಿರೋಧಿಸಿದೆ, ಊರಿಗೆ ಮರಳೋಣ ಎಂದು ಕೇಳಿದೆ ಆದರೆ ಅವರು ಕೇರಳ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೇಳಿದರು. ಪೊಲೀಸರು, ಮೊನಲಿಸಾ ಈಗಾಗಲೇ 18 ವರ್ಷ ವಯಸ್ಸಿನವರಾಗಿರುವ ಕಾರಣ ಅವರು ತಮಗೆ ಇಚ್ಛೀಸಿದವರನ್ನು ವಿವಾಹವಾಗಬಹುದು ಎಂದರು. ನಾವು ಏನೂ ಮಾಡಲಾಗಲಿಲ್ಲ’ ಎಂದಿದ್ದಾರೆ ಜಯಸಿಂಗ್ ಭೋಸ್ಲೆ.
ಮೊನಲಿಸಾ ಅವರ ಚಿಕ್ಕಪ್ಪ ಮಾತನಾಡಿ, ‘ಸಿನಿಮಾ ಅವಕಾಶದ ನೆಪ ಹೇಳಿ ಕೆಲವರು ಆಕೆಯನ್ನು ಕೇರಳಕ್ಕೆ ಕರೆಸಿದ್ದರು. ನಾವು ಹೆಚ್ಚು ವಿದ್ಯಾವಂತರಲ್ಲ ಮತ್ತು ಇದೆಲ್ಲ ಹೇಗೆ ನಡೆಯಿತು ಎಂದು ನಮಗೆ ಅರ್ಥವಾಗುತ್ತಿಲ್ಲ. ಬಹುಶಃ ಯಾರಾದರೂ ಆಕೆಯ ಮೇಲೆ ಪ್ರಭಾವ ಬೀರಿರಬಹುದು. ಆಕೆಯ ನಿರ್ಧಾರವನ್ನು ಒಪ್ಪಿಕೊಳ್ಳದೆ ಕುಟುಂಬಕ್ಕೆ ಬೇರೆ ದಾರಿಯಿಲ್ಲ’ ಎಂದಿದ್ದಾರೆ. ಅಲ್ಲದೆ, ‘ನಮಗೆ ಮೊದಲೇ ಹೇಳಿದ್ದರೆ ನಾವೇ ಮದುವೆಯನ್ನು ಏರ್ಪಾಡು ಮಾಡುತ್ತಿದ್ದೆವು’ ಎಂದು ಸಹ ಹೇಳಿದ್ದಾರೆ.
ಕನ್ನಡದಲ್ಲಿ ಕೆಲವು ಅದ್ಭುತವಾದ ನಟರುಗಳಿದ್ದಾರೆ. ಪ್ರತಿಭೆಯ ವಿಷಯವಾಗಿ, ವ್ಯಕ್ತಿತ್ವದ ವಿಷಯವಾಗಿ ಅವರು ಇತರೆ ಚಿತ್ರರಂಗದ ನಟರುಗಳಿಗೆ ಮಾದರಿ ಆಗಬಲ್ಲರು. ಆದರೆ ಕೆಲವು ವಿಷಯಗಳಲ್ಲಿ ವಿಶೇಷವಾಗಿ ಸ್ವತಃ ಚಿತ್ರರಂಗದ ವಿಷಯವಾಗಿ ಅವರಿಂದ ಇನ್ನಷ್ಟು ತೊಡಗಿಕೊಳ್ಳುವಿಕೆಯನ್ನು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ತೆಲುಗು ಚಿತ್ರರಂಗದ ಸ್ಟಾರ್ ನಟರು ಮಾಡುತ್ತಿರುವ ಕಾರ್ಯವನ್ನು ಪ್ರೇಕ್ಷಕರು ಕನ್ನಡದ ಸ್ಟಾರ್ ನಟರು ತಂತ್ರಜ್ಞರಿಂದಲೂ ನಿರೀಕ್ಷಿಸುತ್ತಿದ್ದಾರೆ.
ತೆಲುಗಿನ ಸ್ಟಾರ್ ನಟರುಗಳಾದ ಮಹೇಶ್ ಬಾಬು, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಇನ್ನೂ ಹಲವರು ತಮ್ಮದೇ ಆದ ಚಿತ್ರಮಂದಿರಗಳನ್ನು ಅದರಲ್ಲೂ ಮಲ್ಟಿಸ್ಕ್ರೀನ್ಗಳನ್ನು ಹೊಂದಿರುವ ಮಲ್ಟಿಪ್ಲೆಕ್ಸ್ಗಳನ್ನು ಹೊಂದಿರುವುದು ಮಾತ್ರವೇ ಅಲ್ಲದೆ, ತಮ್ಮ ಮಲ್ಟಿಪ್ಲೆಕ್ಸ್ ಬ್ಯುಸಿನೆಸ್ ಅನ್ನು ವಿಸ್ತರಣೆ ಸಹ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಚಿತ್ರಮಂದಿರಗಳು ಇರುವುದೇ ಕರ್ನಾಟಕದಲ್ಲಿ ಆದರೆ ಇಲ್ಲಿ ಮಾತ್ರ ಚಿತ್ರರಂಗದ ಮಂದಿ ಚಿತ್ರಮಂದಿರ ನಿರ್ಮಾಣದ ಕಡೆಗೆ ತಿರುಗಿಯೂ ನೋಡುತ್ತಿಲ್ಲ.
ಚಿತ್ರರಂಗದ ಮಂದಿ ವಿಶೇಷವಾಗಿ ಜನಪ್ರಿಯ ನಟ-ನಟಿಯರು ಸಿನಿಮಾಗಳಲ್ಲಿ ನಟಿಸುವುದಕ್ಕೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಅದರ ಹೊರತಾಗಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ಗಳಾಗಿ ಹೋಗಿ ಅಲ್ಲಿಯೂ ಭರ್ಜರಿ ಕಮಾಯಿ ಮಾಡಿಕೊಂಡು ಇಷ್ಟು ಸಾಕೆಂದು ಆರಾಮವಾಗಿ ಕಾಲ ಕಳೆಯುತ್ತಾರೆ. ಕೆಲವು ಹೀರೋಗಳು ನಿರ್ಮಾಣ ಸಂಸ್ಥೆಗಳನ್ನು ಪ್ರಾರಂಭಿಸಿ ಸಿನಿಮಾ ನಿರ್ಮಿಸುತ್ತಿದ್ದಾರೆ ಅದು ಪ್ರಶಂಶನೀಯವೇ ಆದರೂ ಕರ್ನಾಟಕದಲ್ಲಿ ಅವಶ್ಯಕತೆ ಇರುವ ಚಿತ್ರಮಂದಿರಗಳ ನಿರ್ಮಾಣದ ಕಡೆಗೆ ಯಾರು ಗಮನ ಹರಿಸುತ್ತಿಲ್ಲ. ಇದರ ಲಾಭವನ್ನು ಪರಭಾಷೆ ನಟರು ಪಡೆದುಕೊಳ್ಳುತ್ತಿದ್ದಾರೆ.
ಕರ್ನಾಟಕದಲ್ಲಿ 1000ಕ್ಕೂ ಕಡಿಮೆ ಚಿತ್ರಮಂದಿರಗಳಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಅತ್ಯಂತ ವೇಗವಾಗಿ ಎಲ್ಲಿಯಾದರೂ ಅವಶೇಷ ಹೊಂದುತ್ತಿವೆ ಎಂದರೆ ಅದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ಅತ್ಯಂತ ಹೆಚ್ಚಿರುವುದಕ್ಕೆ ಚಿತ್ರಮಂದಿರಗಳ ಕೊರತೆಯೇ ಪ್ರಮುಖ ಕಾರಣ ಸಹ. ಇದೇ ಆಂಧ್ರ ಮತ್ತು ತಮಿಳುನಾಡಿನಲ್ಲಿ ಇಡೀ ದೇಶದಲ್ಲಿಯೇ ಹೆಚ್ಚು ಚಿತ್ರಮಂದಿರಗಳಿವೆ, ಅಲ್ಲಿ ಟಿಕೆಟ್ ಬೆಲೆ ಕಡಿಮೆ ಇದೆ ಮಾತ್ರವಲ್ಲದೆ ಸಿನಿಮಾಗಳು ಹೆಚ್ಚು ಯಶಸ್ವಿಯೂ ಆಗುತ್ತವೆ.
ಕರ್ನಾಟಕದಲ್ಲಿ ಚಿತ್ರಮಂದಿರಗಳ ಕೊರತೆಯನ್ನು ಗಮನಿಸಿರುವ ಪರಭಾಷೆ ನಟರುಗಳು ಇದೀಗ ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ಮಲ್ಟಿಪ್ಲೆಕ್ಸ್ಗಳನ್ನು ಪ್ರಾರಂಭ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಮಹೇಶ್ ಬಾಬು ಇಲ್ಲಿ ಮಲ್ಟಿಪ್ಲೆಕ್ಸ್ ಪ್ರಾರಂಭಿಸಿದ್ದಾರೆ. ಮುಂದೆ ಅಲ್ಲು ಅರ್ಜುನ್ ಸಹ ತಮ್ಮ ಎಎ ಸಿನಿಮಾಸ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಬಹುದು. ಲಾಭ ಇಲ್ಲದ ಹೊರತು ಅವರು ಇಲ್ಲಿ ಚಿತ್ರಮಂದಿರ ಪ್ರಾರಂಭಿಸುತ್ತಿರಲಿಲ್ಲ ಅಲ್ಲವೆ? ಅದು ಮಾತ್ರವೇ ಅಲ್ಲದೆ, ತೆಲುಗಿನ ಹಲವು ನಟರುಗಳು ಆಂಧ್ರ, ತೆಲಂಗಾಣಗಳಲ್ಲಿ ಚಿತ್ರಮಂದಿರ ಹೊಂದಿದ್ದಾರೆ. ಸ್ಟುಡಿಯೋಗಳನ್ನು ಹೊಂದಿದ್ದಾರೆ. ವಿಎಫ್ಎಕ್ಸ್ ಸ್ಟುಡಿಯೋಗಳನ್ನು ಆರಂಭಿಸಿದ್ದಾರೆ. ಚಿತ್ರರಂಗಕ್ಕೆ ಅನುಕೂಲ ಆಗುವ ಜೊತೆಗೆ ಸ್ವತಃ ಲಾಭ ಗಳಿಸುವ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಕನ್ನಡದ ನಟರು ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ ಅನಿಸುತ್ತದೆ.
ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಹೊಸ ದಾಖಲೆ ಬರೆಯಲು ರೆಡಿ ಆಗಿದೆ. ಈ ಚಿತ್ರ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಅದಕ್ಕೂ ಹಿಂದಿನ ದಿನ ಅಂದರೆ ಮಾರ್ಚ್ 18ರಂದು ಸಿನಿಮಾಗೆ ಸಾಕಷ್ಟು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಶೋ ಹೌಸ್ಫುಲ್ ಆಗಿದೆ. ಇದರಿಂದ ಸಿನಿಮಾಗೆ ದೊಡ್ಡ ಮೊಟ್ಟದಲ್ಲಿ ಹಣ ಹರಿದು ಬರುತ್ತಿದೆ. ಅಡ್ವಾನ್ಸ್ ಬುಕಿಂಗ್ನಿಂದ ಚಿತ್ರಕ್ಕೆ ವಿಶ್ವಾದ್ಯಂತ 60 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
‘ಧುರಂಧರ್ 2’ ಸಿನಿಮಾದ ಎಲ್ಲಾ ಟಿಕೆಟ್ಗಳನ್ನು ಬಿಡುಗಡೆ ಮಾಡಿಲ್ಲ. ಕೇವಲ ಮಾರ್ಚ್ 18ರ ಟಿಕೆಟ್ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಮಾರ್ಚ್ 19ರ ಟಿಕೆಟ್ಗಳನ್ನು ಕೂಡ ಬುಕಿಂಗ್ ಮಾಡುವ ಅವಕಾಶ ನೀಡಿದರೆ ಸಿನಿಮಾ ಅಬ್ಬರಿಸೋದು ಫಿಕ್ಸ್ ಎಂದು ಹೇಳಲಾಗುತ್ತಿದೆ. ಈಗಾಗಲೇ ದೇಶಾದ್ಯಂತ 4.7 ಲಕ್ಷ ಟಿಕೆಟ್ಗಳು ಸೇಲ್ ಆಗಿವೆ. ಇದರಿಂದ ಭಾರತದಲ್ಲಿ 24.4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಪವನ್ ಕಲ್ಯಾಣ್ ಅವರ ‘ಒಜಿ’ ಸಿನಿಮಾ ಪ್ರೀಮಿಯರ್ ಶೋನಿಂದ 25 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ. ಆ ದಾಖಲೆಯನ್ನು ‘ಧುರಂಧರ್ 2’ ಸುಲಭದಲ್ಲಿ ಬ್ರೇಕ್ ಮಾಡಲಿದೆ ಎಂದು ಊಹಿಸಲಾಗಿದೆ.
‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂಬ ಕುತೂಹಲ ಮೂಡಿದೆ. ‘ಧುರಂಧರ್ 2’ ಚಿತ್ರದಲ್ಲಿ ಅಕ್ಷಯ್ ಖನ್ನಾ ನಟಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ. ‘ಧುರಂಧರ್’ ಚಿತ್ರದಲ್ಲಿ ನಟ ಅಕ್ಷಯ್ ಖನ್ನಾ ರೆಹಮಾನ್ ದಕೈತ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ರೆಹಮಾನ್ ಕೊಲ್ಲಲ್ಪಟ್ಟರು. ಆದರೆ ಅವರು ‘ಧುರಂಧರ್ 2’ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.
ಈ ಬಾರಿ, ರೆಹಮಾನ್ ದಕೈತ್ ಅವರ ಇತಿಹಾಸವು ಚಿತ್ರದಲ್ಲಿ ಹೇಳುವ ಸಾಧ್ಯತೆ ಇದೆ. ಟ್ರೇಲರ್‌ನಲ್ಲಿ ಅಕ್ಷಯ್ ಖನ್ನಾ ಅವರನ್ನು ತೋರಿಸಿಲ್ಲ. ಅದಾದ ನಂತರ, ಅನೇಕ ಚರ್ಚೆಗಳು ಹುಟ್ಟಿಕೊಂಡಿವೆ… ಇದರಿಂದಾಗಿ, ಅನೇಕ ಜನರು ‘ಧುರಂಧರ್ 2’ ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ.
ತಾಯಿ (mother) ಅಂದರೆ ತ್ಯಾಗ, ಪ್ರೀತಿಗೆ ಇನ್ನೊಂದು ಹೆಸರು. ಮಕ್ಕಳ ಆರೈಕೆ ಹಾಗೂ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹುಮುಖ್ಯ. ಮಕ್ಕಳು ಬೆಳೆದು ಸ್ವಲ್ಪ ದೊಡ್ಡವರಾಗುವವರೆಗೂ ತಾಯಿ ತನ್ನ ನಿದ್ದೆ, ಊಟ, ತಿಂಡಿ ಎಲ್ಲವನ್ನೂ ತ್ಯಾಗ ಮಾಡಬೇಕು. ಇದೀಗ ಎರಡು ವರ್ಷದ ಮಗುವಿನ ಆರೈಕೆ ಮಾಡುತ್ತಿರುವ ತಾಯಿಯೊಬ್ಬಳು ತನ್ನ ಕಂದಮ್ಮ ತನ್ನನ್ನು ಬಿಟ್ಟು ಒಂದು ನಿಮಿಷ ಕೂಡ ಇರಲಾರದು. ನನಗೆ ಊಟ, ತಿಂಡಿ ಮಾಡಲು ಸಮಯವಿಲ್ಲ ಎಂದು ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪಿಂಗ್ ನೋಡಿದ ನೆಟ್ಟಿಗರು ಈ ಮಹಿಳೆಗೆ ಧೈರ್ಯ ತುಂಬಿದ್ದಾರೆ.
@babymodel_jashit ಹೆಸರಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಜಶಿತ್ ಸಿಂಗ್ ನರುಲಾ ತಾಯ್ತನದ ಅನುಭವದ ಜತೆಗೆ ತನ್ನ ಪ್ರಸ್ತುತ ಸ್ಥಿತಿಯನ್ನು ವಿವರಿಸಿರುವುದನ್ನು ಕಾಣಬಹುದು. ತನ್ನ ಕಂದಮ್ಮ ಸ್ನಾನಗೃಹಕ್ಕೆ ಹೋಗುವುದರಿಂದ ಹಿಡಿದು ಊಟ ಮಾಡುವವರೆಗೆ ಒಂದು ಕ್ಷಣವು ನನ್ನನ್ನು ಬಿಟ್ಟಿರುವುದಿಲ್ಲ. ನನಗೆ ನೆಮ್ಮದಿಯಿಂದ ಚಹಾ ಕೂಡ ಕುಡಿಯಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ
ತನ್ನೊಂದಿಗೆ ಹೆಚ್ಚು ಕಾಲ ಇರುತ್ತದೆ, ಈ ಪುಟಾಣಿಯೂ ತಂದೆ ಹಾಗೂ ಅಜ್ಜನ ಬಳಿ ಹೋಗಲು ನಿರಾಕರಿಸುತ್ತಾನೆ. ಅವನನ್ನು ನಾನೇ ನೋಡಿಕೊಳ್ಳಬೇಕು. ಇದು ಬೆಳವಣಿಗೆಯ ಹಂತ ಎನ್ನುವುದು ತಿಳಿದಿದ್ದರೂ, ಇದು ಸರಳವಾದ ದೈನಂದಿನ ಕೆಲಸಗಳನ್ನು ಪೂರ್ಣಗೊಳಿಸಲು ಕಷ್ಟಕರವಾಗುತ್ತಿದೆ. ನನ್ನ ಮಗು ಟಿವಿ ನೋಡುವುದಿಲ್ಲ ಅಥವಾ ಮೊಬೈಲ್ ಬಳಸುವುದಿಲ್ಲ. ಯಾವಾಗಲೂ ಆಟ ಆಡುತ್ತದೆ ಎಂದು ಈ ಮಹಿಳೆ ಹೇಳಿದ್ದಾಳೆ.
ಪ್ರತಿಯೊಬ್ಬ ತಾಯಿಯೂ ಮನುಷ್ಯಳೇ ಆಗಿರುವುದರಿಂದ ಈ ಹಂತದಲ್ಲಿ ದುಃಖದಂತಹ ಭಾವನೆಗಳು ಇರುತ್ತವೆ, ಇದು ಸಹಜ ಕೂಡ. ಅಂತಹ ಭಾವನೆಗಳನ್ನು ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆಯೇ ಎಂಬುದು ಅವರು ಎಷ್ಟು ಬೆಂಬಲ ನೀಡುತ್ತಾರೆ ಹಾಗೂ ಅರ್ಥಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ವಿವರಿಸಿದ್ದಾಳೆ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ದಯವಿಟ್ಟು ಟಿವಿ ಆನ್ ಮಾಡಿ, ಅವನಿಗೆ 30 ನಿಮಿಷಗಳ ಕಾಲ ಸುರಕ್ಷಿತ ಕಾರ್ಯಕ್ರಮ ನೋಡಲು ಬಿಡಿ. ನೀವೇ ಒಂದು ಕಪ್ ಚಹಾ ಸವಿಯಿರಿ ಎಂದಿದ್ದಾರೆ. ಮತ್ತೊಬ್ಬರು, ಮಕ್ಕಳ ಆರೈಕೆಯೇ ಹಾಗೆ, ಎಲ್ಲವನ್ನು ತ್ಯಾಗ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನನಗೆ ನಿಮ್ಮ ಭಾವನೆ ಅರ್ಥವಾಗುತ್ತದೆ. ಆದರೆ ನೀವು ಈ ವಿಚಾರವನ್ನು ಇಂಟರ್ನೆಟ್‌ನಲ್ಲಿ ಹಾಕುವಷ್ಟು ಧೈರ್ಯಶಾಲಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 13: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಬಗ್ಗೆ ಸ್ವಪಕ್ಷ ಶಾಸಕ ಇಕ್ಬಾಲ್ ಹುಸೇನ್ ನೀಡಿದ್ದ ಹೇಳಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಇಕ್ಬಾಲ್ ಹುಸೇನ್ ಮಾತ್ರವಲ್ಲ, ಯಾರೇ ಆಗಲಿ ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಚರ್ಚಿಸಬಾರದು. ಯಾವುದೇ ಸಮಸ್ಯೆಗಳಿದ್ದರೂ, ಮುಖ್ಯಮಂತ್ರಿಗಳು ಅಥವಾ ಉಪಮುಖ್ಯಮಂತ್ರಿಗಳೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಮಾಧ್ಯಮಗಳ ಮುಂದೆ ಮಾತನಾಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ಸಮಾಧಾನ ತಂದಿಲ್ಲ. ಆಯವ್ಯಯ ಮಂಡನೆಗೂ ಮುನ್ನವೇ ಸಿಎಂ ಭೇಟಿಯಾಗಿ ಕ್ಷೇತ್ರಗಳ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದೆ. ಹೀಗಾಗಿ ಹೆಚ್ಚಿನ ಅನುದಾನದ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದರು.
ಗುವಾಹಟಿ, ಮಾರ್ಚ್ 13: ರೈತರಿಗೆಂದು ಕೇಂದ್ರ ಸರ್ಕಾರ ರೂಪಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan scheme) 22ನೇ ಕಂತಿನ ಹಣ ಇಂದು ಶುಕ್ರವಾರ ಬಿಡುಗಡೆ ಆಗುತ್ತಿದೆ. ಅಸ್ಸಾಮ್ ರಾಜಧಾನಿಯಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಪ್ರಧಾನಿಗಳು ಹಣ ಬಿಡುಗಡೆ ಮಾಡಲಿದ್ದಾರೆ. 9 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂ ಹಣ ನೇರವಾಗಿ ಜಮೆಯಾಗಲಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ 2025ರ ನವೆಂಬರ್ 19ರಂದು 21ನೇ ಕಂತಿನ ಹಣ ಬಿಡುಗಡೆ ಆಗಿತ್ತು. 9 ಕೋಟಿಗೂ ಅಧಿಕ ರೈತರಿಗೆ ಒಟ್ಟು 18,000 ಕೋಟಿ ರೂ ಹಣವನ್ನು ನೇರವಾಗಿ ಕೊಡಲಾಗಿತ್ತು. ಅದಕ್ಕೂ ಹಿಂದಿನ 20ನೇ ಕಂತಿನ ಹಣವನ್ನು ಆಗಸ್ಟ್ ತಿಂಗಳಲ್ಲಿ 9.8 ಕೋಟಿ ರೈತರಿಗೆ ನೀಡಲಾಗಿತ್ತು.
ಕಳೆದ ಮೂರು ತಿಂಗಳಲ್ಲಿ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಮರು-ಕೆವೈಸಿ ಮಾಡಲು ತಿಳಿಸಿತ್ತು. ಕೆವೈಸಿ ಅಪ್ಡೇಟ್ ಮಾಡಲು ಮೂರ್ನಾಲ್ಕು ಮಾರ್ಗಗಳ ಆಫರ್ ಕೊಡಲಾಗಿತ್ತು. ಸಮೀಪದ ರೈತ ಸಂಪರ್ಕ ಕೇಂದ್ರ, ಪಿಎಂ ಕಿಸಾನ್ ಮೊಬೈಲ್ ಆ್ಯಪ್, ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಕೆವೈಸಿ ಅಪ್ಡೇಟ್ ಮಾಡಬಹುದು. ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಈ ಹಿಂದೆ ಎಲ್ಲಾ ಕಂತುಗಳನ್ನು ಪಡೆದಿರುವ ಫಲಾನುಭವಿಗಳು ರೀ-ಕೆವೈಸಿ ಮಾಡದೇ ಇದ್ದರೆ 22ನೇ ಕಂತಿನ ಹಣ ಸಿಗುವುದಿಲ್ಲ. ವರದಿಗಳ ಪ್ರಕಾರ, ಈ ಬಾರಿ 22ನೇ ಕಂತಿನ ಹಣದಿಂದ ವಂಚಿತರಾಗುವ ಫಲಾನುಭವಿಗಳ ಸಂಖ್ಯೆ ಹಲವು ಲಕ್ಷಗಳೆನ್ನಲಾಗಿದೆ.
ಈ ಕೆಳಗಿನ ಫಲಾನುಭವಿಗಳಿಗೆ ಸಿಗೋದಿಲ್ಲ ಹಣ
ಇಕೆವೈಸಿ ಅಪ್ಡೇಟ್ ಮಾಡದಿದ್ದವರಿಗೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ. ಫಲಾನುಭವಿಗಳ ಕುಟುಂಬದಲ್ಲಿ ಯಾರಾದರೂ ಕೂಡ ಸರ್ಕಾರಿ ಅಧಿಕಾರಿಯೋ, ಶಾಸಕರೋ, ಸಂಸದರೋ, ಜಿಪಂ ಸದಸ್ಯರೋ, ವೃತ್ತಿಪರರೋ, ಐಟಿ ಪಾವತಿದಾರರೋ ಇದ್ದರೆ ಅಂಥವರು ರೈತರಾಗಿದ್ದಾಗ್ಯೂ ಯೋಜನೆಗೆ ಅರ್ಹರಿರುವುದಿಲ್ಲ.
ಮತ್ತೊಂದು ಗಮನಾರ್ಹ ಸಂಗತಿ ಎಂದರೆ 2019ರ ಫೆಬ್ರುವರಿ 1ರ ನಂತರ ಜಮೀನು ಮಾಲಕತ್ವ ಪಡೆದ ರೈತರಿಗೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ. ಒಂದೇ ಕುಟುಂಬದ ಇಬ್ಬರು ಸದಸ್ಯರು ಪ್ರತ್ಯೇಕ ಜಮೀನು ಮಾಲಕತ್ವ ಹೊಂದಿದ್ದರೂ ಒಬ್ಬರು ಮಾತ್ರವೇ ಯೋಜನೆಗೆ ಅರ್ಹರಾಗಿರುವುದು.