ಪತ್ನಿಗೆ ವಿಮೆ ಹಣ ಸಿಗಲಿ ಎಂದು ಸತ್ತಂತೆ ನಾಟಕವಾಡಿದ ಪತಿ, ಅಗಲುವಿಕೆಯ ನೋವು ತಾಳಲಾರದೆ ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ – Kannada News | Insurance Fraud Triggers China Family Tragedy: Husband Fakes Death, Wife Kills Kids and Self
ಬೀಜಿಂಗ್, ಮಾರ್ಚ್ 02: ಎಂಥಾ ವಿಪರ್ಯಾಸ ನೋಡಿ, ಹೆಂಡತಿ ಮಕ್ಕಳು ಸುಖವಾಗಿರಬೇಕು ಎಂದು ಪತಿ ಸತ್ತಂತೆ ನಾಟವಾಡಿದರೆ, ಅದೇ ನಿಜವೆಂದು ನಂಬಿ ಮನನೊಂದು ಪತ್ನಿ ಹಾಗೂ ಮಕ್ಕಳು ನಿಜವಾಗಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಆಗ್ನೇಯ ಚೀನಾದ ಹುನಾನ್ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತುಂಬಾ ಸಾಲ ಮಾಡಿಕೊಂಡಿದ್ದ, ಅದರಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಾಟಕವಾಡಿದ್ದ. ತನ್ನ ಪತಿಯ ಹಠಾತ್ ಸಾವಿನ ಸುದ್ದಿಯಿಂದ ಆ ವ್ಯಕ್ತಿಯ ಪತ್ನಿ ದಂಗಾಗಿದ್ದಳು. ಆಕೆಯ ಪತಿಯ ಕಾರು ನದಿಯಲ್ಲಿ ಪತ್ತೆಯಾಗಿತ್ತು. ಆದರೂ…