ಬೆಂಗಳೂರಿನಲ್ಲಿ ನೂರಾರು ಮರಗಳ ಮಾರಣಹೋಮಕ್ಕೆ ರೈಲ್ವೆ ಇಲಾಖೆ ಸಿದ್ದತೆ: ಪರಿಸರ ಹೋರಾಟಗಾರರ ಆಕ್ರೋಶ – Kannada News | Mass Tree Felling Planned Near Sir M. Visvesvaraya Railway Station in Bengaluru Sparks Environmental Outrage
ಸರ್ಎಂ ವಿಶ್ವೇಶ್ವರಯ್ಯ ರೈಲ್ವೆ ಸ್ಟೇಷನ್ ಹೊರಬಾಗದ ನೋಟImage Credit source: tv9 ಬೆಂಗಳೂರು, ಮಾರ್ಚ್ 2: ಬೈಯಪ್ಪನಹಳ್ಳಿ ಬಳಿಯ ಸರ್ಎಂ ವಿಶ್ವೇಶ್ವರಯ್ಯ ರೈಲ್ವೆ ಸ್ಟೇಷನ್ನಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ಬರೋಬ್ಬರಿ 269 ಮರಗಳನ್ನು ಕಡಿಯಲು ರೈಲ್ವೆ ಇಲಾಖೆ (Indian Railways) ಮುಂದಾಗುತ್ತಿದೆ. ಇದಕ್ಕೆ ಪರಿಸರ ಹೋರಾಟಗಾರರಿಂದ ಆಕ್ಷೇಪ ವ್ಯಕ್ತವಾಗಿದೆ. ಬೈಯಪ್ಪನಹಳ್ಳಿಯಲ್ಲಿರುವ ಎಸ್ಎಂವಿಟಿ ರೈಲ್ವೆ ನಿಲ್ದಾಣದಲ್ಲಿರುವ 269 ಮರಗಳು ಹತ್ತಾರು ವರ್ಷಗಳ ಹಳೆಯದ್ದಾಗಿವೆ. ಅವುಗಳು ಬೃಹತ್ ಮರಗಳಾಗಿದ್ದು, ಹಾಗಾಗಿ ಯಾವುದೇ ಕಾರಣಕ್ಕೂ ಅವುಗಳನ್ನು ಕಡಿಯಬಾರದು ಎಂದು ಪರಿಸರ ಹೋರಾಟಗಾರರು ಆಕ್ರೋಶ…