All posts by nagaraj11081993

ಭಾರತದ ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಮೆರಿಕದಿಂದ ಶೇ. 126 ಸುಂಕ; ಕುಸಿತ ಕಂಡ ಸೋಲಾರ್ ಕಂಪನಿಗಳ ಷೇರುಬೆಲೆ – Kannada News | US impose import duty of 126pc on Indian solar products

ನವದೆಹಲಿ, ಫೆಬ್ರುವರಿ 25: ಭಾರತದ ಸೋಲಾರ್ ಉತ್ಪನ್ನಗಳ (Indian solar imports) ಮೇಲೆ ಅಮೆರಿಕ ಶೇ. 126ರಷ್ಟು ಪೂರ್ವಭಾವಿ ಸುಂಕಗಳನ್ನು (Preliminery duties) ವಿಧಿಸಿದೆ. ಇತರ ಕೆಲ ದೇಶಗಳ ಮೇಲೂ ವಿವಿಧ ದರಗಳ ಸುಂಕಗಳನ್ನು ಅಮೆರಿಕ ವಿಧಿಸಿದೆ. ಲಾವೋಸ್, ಇಂಡೋನೇಷ್ಯಾ ದೇಶಗಳಿಂದ ರಫ್ತಾಗುವ ಸೋಲಾರ್ ಉತ್ಪನ್ನಗಳ ಮೇಲೆ ಶೇ. 81ರಿಂದ 143ರಷ್ಟು ಸುಂಕವನ್ನು ಅಮೆರಿಕ ಹೇರಿದೆ ಎಂದು ಸಿಎನ್​ಬಿಸಿ ಟಿವಿ18ನಲ್ಲಿ ವರದಿಯಾಗಿದೆ.

ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಮೆರಿಕ ವಿಧಿಸಿರುವ ಸುಂಕಕ್ಕೂ ಅದರ ಪ್ರತಿಸುಂಕ ಕ್ರಮಕ್ಕೂ ಸಂಬಂಧ ಇಲ್ಲ. ಸೋಲಾರ್ ಉತ್ಪನ್ನಗಳು ತಯಾರಾದ ದೇಶದಲ್ಲಿ ಅದಕ್ಕೆ ಸಿಕ್ಕಿರುವ ಸಬ್ಸಿಡಿಗಳೆಷ್ಟು ಎನ್ನುವುದರ ಆಧಾರದ ಮೇಲೆ ಸುಂಕವನ್ನು ವಿಧಿಸಲಾಗಿರುವುದು ತಿಳಿದುಬಂದಿದೆ. ಅಂದರೆ, ಸೋಲಾರ್ ಉತ್ಪನ್ನ ತಯಾರಿಸುವ ಕಂಪನಿಗಳಿಗೆ ಆ ದೇಶದ ಸರ್ಕಾರ ಸಬ್ಸಿಡಿ ನೆರವು ಒದಗಿಸಿದಾಗ, ಉತ್ಪನ್ನದ ಬೆಲೆ ಕಡಿಮೆ ಆಗಿರುತ್ತದೆ. ಇದರಿಂದ ಕಡಿಮೆ ಬೆಲೆಗೆ ರಫ್ತು ಮಾಡಲು ಸಾಧ್ಯವಾಗುತ್ತದೆ. ಅಮೆರಿಕದ ಸೋಲಾರ್ ಉತ್ಪಾದಕರಿಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಈ ಅಂಶ ಪರಿಗಣಿಸಿ ಅಮೆರಿಕದ ವಾಣಿಜ್ಯ ಸಚಿವಾಲಯವು ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಧಿಕ ಸುಂಕವನ್ನು ಹೇರಲು ನಿರ್ಧರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ನಮ್ಮನ್ನು ಕಿತ್ತು ತಿನ್ನುತ್ತಿದ್ದವರು ಇವತ್ತು ಟ್ಯಾರಿಫ್ ಕಟ್ತಿದಾರೆ, ಅವರೂ ಖುಷ್, ನಾವೂ ಖುಷ್: ಡೊನಾಲ್ಡ್ ಟ್ರಂಪ್

ಭಾರತದ ಯಾವ್ಯಾವ ಕಂಪನಿಗಳ ಮೇಲೆ ಪರಿಣಾಮ?

ಭಾರತದಲ್ಲಿ ಸೋಲಾರ್ ಉಪಕರಣಗಳನ್ನು ತಯಾರಿಸುವ ಹಲವಾರು ಕಂಪನಿಗಳಿವೆ. ಅವುಗಳ ಪೈಕಿ ಕೆಲ ಕಂಪನಿಗಳು ಅಮೆರಿಕನ್ ಮಾರುಕಟ್ಟೆಗೆ ಹೆಚ್ಚು ರಫ್ತು ಮಾಡುತ್ತವೆ. ಅಂಥ ಕಂಪನಿಗಳಲ್ಲಿ ವಾರೀ ಎನರ್ಜೀಸ್, ವಿಕ್ರಮ್ ಸೋಲಾರ್ ಲಿಮಿಟೆಡ್, ಪ್ರೀಮಿಯರ್ ಎನರ್ಜೀಸ್ ಲಿಮಿಟೆಡ್ ಇತ್ಯಾದಿ ಇವೆ.

ಅಮೆರಿಕದಿಂದ ಸಿಕ್ಕಾಪಟ್ಟೆ ಸುಂಕ ಹೇರಿಕೆ ಕ್ರಮ ಬಂದ ಬೆನ್ನಲ್ಲೇ ಈ ಸೋಲಾರ್ ಕಂಪನಿಗಳ ಷೇರುಗಳು ಬುಧವಾರ ನೆಲಕಚ್ಚಿವೆ. ವಾರೀ ಎನರ್ಜೀಸ್ ಷೇರುಬೆಲೆ ಬೆಳಗಿನ ವಹಿವಾಟಿನಲ್ಲಿ ಶೇ. 10ರಷ್ಟು ಕುಸಿದಿತ್ತು. ಪ್ರೀಮಿಯರ್ ಎನರ್ಜೀಸ್ ಕೂಡ ಶೇ. 10 ಕೆಳಗಿನ ಮಿತಿ ಮುಟ್ಟಿತ್ತು. ವಿಕ್ರಮ್ ಸೋಲಾರ್​ನ ಷೇರುಬೆಲೆ ಶೇ. 5ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ.

ಇದನ್ನೂ ಓದಿ: ಡಿಸೆಂಬರ್ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.1 ಹಿಗ್ಗಿರುವ ಸಾಧ್ಯತೆ: ಎಸ್​ಬಿಐ ವರದಿಯಲ್ಲಿ ಅಂದಾಜು

ಎರಡು ವರ್ಷದಲ್ಲಿ 9 ಪಟ್ಟು ರಫ್ತು ಹೆಚ್ಚಳ

ಅಮೆರಿಕದ ವಾಣಿಜ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಭಾರತದಿಂದ ಸೋಲಾರ್ ಉತ್ಪನ್ನಗಳನ್ನು 2024ರಲ್ಲಿ ಆಮದು ಮಾಡಿಕೊಂಡಿರುವುದು 792.6 ಮಿಲಿಯನ್ ಡಾಲರ್ ಮೌಲ್ಯದಷ್ಟು. 2022ದಕ್ಕೆ ಹೋಲಿಸಿದರೆ 2024ರಲ್ಲಿ ಒಂಬತ್ತು ಪಟ್ಟು ಹೆಚ್ಚು ಆಮದು ನಡೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರು ನಗರಕ್ಕೇ ಎಂಟ್ರಿಕೊಟ್ಟ ಚಿರತೆ: ಕದ್ರಿ ಬಳಿ ಚಿರತೆ ಓಡಾಟದ ವಿಡಿಯೋ ವೈರಲ್

ಮಂಗಳೂರು, ಫೆಬ್ರವರಿ 25: ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಚಿರತೆ ಕಾಣಿಸಿಕೊಂಡ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ ಮಂಗಳೂರು ನಗರಕ್ಕೇ ಚಿರತೆ ಎಂಟ್ರಿ ಕೊಟ್ಟಿದೆ. ಮಂಗಳೂರಿನ ಕದ್ರಿ ಡಾಕ್ಟರ್ಸ್ ಕಾಲೊನಿಯಲ್ಲಿ ಮಧ್ಯರಾತ್ರಿ ಚಿರತೆ ಒಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಕಾಡುಕೋಣ ಪತ್ತೆಯಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲೆಂಡ್​ಗೆ ಜಯ… ಭಾರತ vs ಪಾಕಿಸ್ತಾನ್ ‘ಸೆಮಿ’ ಮುಖಾಮಖಿ ಇಲ್ಲ! – Kannada News | No India vs Pakistan Semi Final clash in T20 World Cup 2026

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್​ಗೇರುವ ನಾಲ್ಕು ತಂಡಗಳಾವುವು ಎಂಬ ಲೆಕ್ಕಾಚಾರ ಜೋರಾಗಿದೆ. ಈ ಲೆಕ್ಕಾಚಾರದ ಜೊತೆಗೆ ಇದೀಗ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲ್ಲ ಎಂಬುದು ಕೂಡ ಬಹುತೇಕ ಖಚಿತವಾಗಿದೆ. ಏಕೆಂದರೆ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಇಂಗ್ಲೆಂಡ್ ತಂಡವು ಸೆಮಿಫೈನಲ್​ಗೇರಿದೆ.

ಮೊದಲ ಪಂದ್ಯದಲ್ಲಿ ಶ್ರೀಲಂಕಾಗೆ ಸೋಲುಣಿಸಿದ್ದ ಇಂಗ್ಲೆಂಡ್, ಇದೀಗ ಪಾಕ್ ವಿರುದ್ಧ ಗೆದ್ದು ಒಟ್ಟು 4 ಅಂಕಗಳನ್ನು ಪಡೆದುಕೊಂಡಿದೆ. ಇನ್ನು ನ್ಯೂಝಿಲೆಂಡ್ ವಿರುದ್ಧ ಗೆದ್ದರೆ ಒಟ್ಟು 6 ಅಂಕಗಳನ್ನು ಪಡೆಯಲಿದೆ. ಅತ್ತ ಪಾಕಿಸ್ತಾನ್ ತಂಡ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೆ ಪಡೆಯುವುದು ಕೇವಲ 3 ಅಂಕಗಳು ಮಾತ್ರ.

ಏಕೆಂದರೆ ಪಾಕಿಸ್ತಾನ್-ನ್ಯೂಝಿಲೆಂಡ್ ನಡುವಣ ನಡುವಣ ಪಂದ್ಯವು ರದ್ದಾಗಿರುವ ಕಾರಣ 1 ಅಂಕಗಳನ್ನು ಹಂಚಿಕೊಳ್ಳಲಾಗಿದೆ. ಅದರಂತೆ ಇನ್ನುಳಿದಿರುವ ಮ್ಯಾಚ್​ನಲ್ಲಿ ಗೆದ್ದರೂ ಪಾಕಿಸ್ತಾನ್ ತಂಡಕ್ಕೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಸಾಧ್ಯವಾಗುವುದಿಲ್ಲ.

ಇದರಿಂದ ಸೆಮಿಫೈನಲ್ ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವ ಸಾಧ್ಯತೆ ಕೂಡ ಸಂಪೂರ್ಣ ಕ್ಷೀಣಿಸಿದೆ. ಏಕೆಂದರೆ ಇತ್ತ ಗ್ರೂಪ್-1 ರಿಂದ ಸೆಮಿಫೈನಲ್​ಗೇರಲು ಟೀಮ್ ಇಂಡಿಯಾ ಮುಂದಿನ ಎರಡು ಮ್ಯಾಚ್​ಗಳಲ್ಲೂ ಜಯ ಸಾಧಿಸಬೇಕು. ಅತ್ತ ಸೌತ್ ಆಫ್ರಿಕಾ ಅಥವಾ ವೆಸ್ಟ್ ಇಂಡೀಸ್​ ತಂಡಗಳು ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಜಯ ಸಾಧಿಸಿದರೂ ಅತ್ಯುತ್ತಮ ನೆಟ್ ರನ್ ರೇಟ್ ಕಾರಣ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ.

ಟಿ20 ವಿಶ್ವಕಪ್​ ಟೂರ್ನಿಯ ‘ಸೂಪರ್ 8’ ಹಂತದ ನಿಯಮದಂತೆ, ಒಂದು ಗುಂಪಿನ ಅಗ್ರಸ್ಥಾನಿ ತಂಡವು ಮತ್ತೊಂದು ಗುಂಪಿನ ಎರಡನೇ ಸ್ಥಾನದ ತಂಡದೊಂದಿಗೆ ಸೆಮಿಫೈನಲ್‌ನಲ್ಲಿ ಆಡಬೇಕಾಗುತ್ತದೆ.

  • ಸೆಮಿಫೈನಲ್ 1: ಗ್ರೂಪ್ 1 ರ ವಿಜೇತ vs ಗ್ರೂಪ್ 2 ರ ರನ್ನರ್ ಅಪ್.
  • ಸೆಮಿಫೈನಲ್ 2: ಗ್ರೂಪ್ 2 ರ ವಿಜೇತ vs ಗ್ರೂಪ್ 1 ರ ರನ್ನರ್ ಅಪ್.

ಇಂಗ್ಲೆಂಡ್ ತಂಡವು ಗ್ರೂಪ್ 2 ರಲ್ಲಿ ಮೊದಲ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಈಗ ಕೇವಲ ಎರಡನೇ ಸ್ಥಾನ ಪಡೆಯಲು ಮಾತ್ರ ಅವಕಾಶವಿದೆ. ಇತ್ತ ಗ್ರೂಪ್ 1 ರಲ್ಲಿ ಭಾರತ ತಂಡವು ಸೌತ್ ಆಫ್ರಿಕಾ ವಿರುದ್ಧ ಸೋತಿರುವುದರಿಂದ, ತನ್ನ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಇಬ್ಬರೂ ತಮ್ಮ ಗುಂಪುಗಳಲ್ಲಿ ಎರಡನೇ ಸ್ಥಾನ ಪಡೆದರೆ, ಅವರು ಪರಸ್ಪರ ಎದುರಾಗಲು ಸಾಧ್ಯವಿಲ್ಲ.

ಇದಾಗ್ಯೂ ಮುಂದಿನ ಎರಡು ಮ್ಯಾಚ್​ಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ನೆಟ್ ರನ್ ರೇಟ್​ನಲ್ಲಿ ಉಳಿದ ತಂಡಗಳನ್ನು ಹಿಂದಿಕ್ಕಿದರೆ ಭಾರತ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಬಹುದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಮುಖಾಮುಖಿ.

ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಒಂದು ಟೀಮ್ ಜಯಗಳಿಸುವುದು ಖಚಿತ. ಇದರಿಂದ ಎರಡು ಟೀಮ್​ಗಳಲ್ಲಿ ಒಂದು ತಂಡದ ನೆಟ್ ರನ್ ರೇಟ್ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ನೆಟ್ ರನ್ ರೇಟ್​ ಟಾರ್ಗೆಟ್ ಮಾಡಿ ಟೀಮ್ ಇಂಡಿಯಾ ಅಮೋಘ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಮೇಲೇರುವುದು ಅಂದುಕೊಂಡಷ್ಟು ಸುಲಭವಲ್ಲ.

ಹೀಗಾಗಿಯೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಇನ್ನು ಉಭಯ ತಂಡಗಳು ಸೆಮಿಫೈನಲ್​ಗೇರಿ ಆ ಪಂದ್ಯಗಳಲ್ಲಿ ಜಯ ಗಳಿಸಿದರೆ ಮಾತ್ರ ಫೈನಲ್​ನಲ್ಲಿ ಮುಖಾಮುಖಿಯಾಗಬಹುದು.

ಇನ್ನೂ ಓದಿ: ಪಾಕಿಸ್ತಾನದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ಬಾಬರ್ ಆಝಂ

ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಮತ್ತೊಂದು ಮುಖಾಮುಖಿ ಖಚಿತವಾಗಲು ಮಾರ್ಚ್ 1 ರವರೆಗೆ ಕಾಯಲೇಬೇಕು. ಏಕೆಂದರೆ ಭಾನುವಾರದೊಳಗೆ ಸೆಮಿಫೈನಲ್ ಆಡಲಿರುವ 4 ತಂಡಗಳಾವುವು ಎಂಬುದು ಕನ್ಫರ್ಮ್ ಆಗಲಿದೆ. ಈ ನಾಲ್ಕು ತಂಡಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡವಿದ್ದರೆ ಮಾತ್ರ ಉಭಯ ತಂಡಗಳ ಫೈನಲ್ ಮುಖಾಮುಖಿಯನ್ನು ನಿರೀಕ್ಷಿಸಬಹುದು.

Source link

‘ನಮ್ಮ ಬದುಕು ಹಾಳು ಮಾಡಬೇಡಿ’: ದಾವಣಗೆರೆಯಲ್ಲಿ ಪ್ಲಾಟಿನಮ್-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು – Kannada News | Davangere Farmers Oppose Platinum and Manganese Search in Ubrani Taluk

ದಾವಣಗೆರೆಯಲ್ಲಿ ಪ್ಲಾಟಿನಮ್-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು

ದಾವಣಗೆರೆ, ಫೆಬ್ರವರಿ 25: ಜಿಲ್ಲೆಯ ಚನ್ನಗಿರಿ (Davanagere) ತಾಲೂಕಿನ ಉಬ್ರಾಣಿ ಹೋಬಳಿ ವ್ಯಾಪ್ತಿಯಲ್ಲಿ ಪ್ಲಾಟಿನಮ್ ಹಾಗೂ ಮ್ಯಾಂಗನೀಸ್ ಖನಿಜ ನಿಕ್ಷೇಪಗಳಿರುವ ಸಾಧ್ಯತೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ಖನಿಜಾನ್ವೇಷಣೆಗೆ ಜಿಲ್ಲಾಡಳಿತ ಮುಂದಾಗಿದ್ದು, ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಖನಿಜಾನ್ವೇಷಣೆ ಮುಂದುವರಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ

ಉಬ್ರಾಣಿ ಹೋಬಳಿಯ ಅರಣ್ಯ ಪ್ರದೇಶದ ಗುಡ್ಡಗಳು ಹಾಗೂ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಪ್ಲಾಟಿನಮ್ ಮತ್ತು ಮ್ಯಾಂಗನೀಸ್ ಅದಿರು ಲಭ್ಯವಿರಬಹುದು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಅವರ ನೇತೃತ್ವದಲ್ಲಿ ಚನ್ನಗಿರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ರೈತರು ಖನಿಜಾನ್ವೇಷಣೆಗೆ ಕಠಿಣ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ದಾವಣಗೆರೆ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ: ಇಡೀ ರಾತ್ರಿ ದೇಗುಲದ ಆವರಣದಲ್ಲೇ ಕಾದು ಕುಳಿತ ಡಿಸಿ, ಎಸ್​​ಪಿ

ನೆಲ್ಲಿಹಂಕಲು, ಕಗ್ಗಿ, ಮುಗಳಿಹಳ್ಳಿ, ತಾವರೆಕೆರೆ, ಉಬ್ರಾಣಿ, ಹನಮಂತಾಪುರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯಲ್ಲಿ ನಿಕ್ಷೇಪಗಳಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೇ ಪ್ರದೇಶದಲ್ಲಿ 2006ರಲ್ಲಿ ಕೂಡ ಶೋಧ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದರೂ, ರೈತರ ತೀವ್ರ ವಿರೋಧದ ಹಿನ್ನೆಲೆ ಯೋಜನೆ ಕೈಬಿಡಲಾಗಿತ್ತು. ಮತ್ತೆ ಇದೇ ವಿಚಾರವಾಗಿ ನಡೆದ ಸಭೆಯಲ್ಲಿಯೂ ವಿರೋಧ ವ್ಯಕ್ತಪಡಿಸಿದ ರೈತರು, ನಾವು ಅಡಿಕೆ ತೋಟ ಮಾಡಿಕೊಂಡು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ. ಪ್ಲಾಟಿನಂ ಮತ್ತು ಮ್ಯಾಂಗನೀಸ್ ಹೆಸರಿನಲ್ಲಿ ನಮ್ಮ ಭೂಮಿ ಹಾಗೂ ಜೀವನ ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಖನಿಜಾನ್ವೇಷಣೆ ಮುಂದುವರಿದರೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಜೀಂ ಪ್ರೇಮ್ ಜಿ ವಿವಿ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದೇಕೆ? ಪ್ರತ್ಯೇಕತಾವಾದಕ್ಕೆ ನೀಡಿದ್ರಾ ಕುಮ್ಮಕ್ಕು? ಇಲ್ಲಿದೆ ಅಸಲಿಯತ್ತು – Kannada News | Why Did Protests Erupt Against Azim Premji University? ABVP Alleges Support to Kashmir Separatism, Writes to Amit Shah

ಅಜೀಂ ಪ್ರೇಮ್‌ಜಿ ವಿವಿ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆImage Credit source: tv9

ಬೆಂಗಳೂರು, ಫೆಬ್ರವರಿ 25: ಸ್ಪಾರ್ಕ್ ಹಾಗೂ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಸಂಘಟನೆಗಳು ಬೆಂಗಳೂರಿನ ಸರ್ಜಾಪುರದಲ್ಲಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ (Azim Premji University) ದೇಶ ವಿರೋಧಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿವೆ ಎಂದು ಎಬಿವಿಪಿ ಗಂಭೀರ ಆರೋಪ ಮಾಡಿದೆ. ಅಷ್ಟೇ ಅಲ್ಲದೆ, ಈ ಸಂಘಟನೆಗಳು ಕಾಶ್ಮೀರ ಪ್ರತ್ಯೇಕತಾವಾದಕ್ಕೆ ಪ್ರೋತ್ಸಾಹ ನೀಡುತ್ತಿವೆ. ಭಾರತೀಯ ಸೇನೆಯ ಸೈನಿಕರನ್ನು ಅವಮಾನಿಸುತ್ತಿವೆ ಎಂದು ಆರೋಪಿಸಿದ್ದು, ಪ್ರತಿಭಟನೆಯನ್ನೂ ನಡೆಸಿವೆ. ಸದ್ಯ, ಕ್ಯಾಂಪಸ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ. ಅವರ ವಿರುದ್ಧ ಎಫ್​ಐಆರ್ ಕೂಡ ದಾಖಲಿಸಿದ್ದಾರೆ.

ಏತನ್ಮಧ್ಯೆ, ಸ್ಪಾರ್ಕ್ ಸಂಘಟನೆಗೆ ನಿಷೇಧ ಹೇರಬೇಕು ಮತ್ತು ವಿಶ್ವವಿದ್ಯಾಲಯ ಕ್ಷಮೆಯಾಚಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರವನ್ನೂ ಬರೆದಿದೆ.

ವಿವಿ ವಿರುದ್ಧ ಎಬಿವಿಪಿ ಆಕ್ರೋಶಕ್ಕೆ ಅಸಲಿ ಕಾರಣ ಏನು?

ಸ್ಪಾರ್ಕ್ ಹಾಗೂ ಎಐಎಸ್‌ಎ ಸಂಘಟನೆಗಳು ಈ ಹಿಂದೆ ಭಾರತೀಯ ಸೈನಿಕರಿಗೆ ಅವಮಾನ ಮಾಡಿವೆ. ಸೈನಿಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿವೆ. ಯೋಧರು ಕಾಶ್ಮೀರ ಪ್ರದೇಶದಲ್ಲಿ ಕ್ರೌರ್ಯ ಎಸಗುತ್ತಿದ್ದಾರೆ ಎಂಬಂಥ ಹೇಳಿಕೆಗಳನ್ನು ನೀಡಿವೆ. ಇಂಥ ಸಂಘಟನೆಗಳು ಇದೀಗ ಅಜೀಂ ಪ್ರೇಮ್ ಜಿ ವಿವಿಯಲ್ಲಿ ಫೆಬ್ರವರಿ 26, 27 ಹಾಗೂ 28 ರಂದು ಕಾರ್ಯಕ್ರಮ ಆಯೋಜಿಸಲು ಮುಂದಾಗಿವೆ. ಕಾಶ್ಮೀರ ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವಂತಹ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಹೊಂದಿವೆ ಎಂದು ಎಬಿವಿಪಿ ಆರೋಪಿಸಿದ್ದು, ಇದಕ್ಕೆ ಯಾವ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ಆಗ್ರಹಿಸಿದೆ.

ಅಮಿತ್ ಶಾಗೆ ಎಬಿವಿಪಿ ಬರೆದ ಪತ್ರದಲ್ಲೇನಿದೆ?

‘ವಿದ್ಯಾಸಂಸ್ಥೆಗಳು ಜ್ಞಾನಾರ್ಜನೆಯ ಕೇಂದ್ರವಾಗಬೇಕು.ಆದರೆ ಇಂದು ಪ್ರತಿಷ್ಠಿತ ವಿದ್ಯಾಸಂಸ್ಥೆಗಳೇ ದೇಶವಿರೋಧಿ ಚಟುವಟಿಕೆಗಳ ತಾಣವಾಗಿ ನಿರ್ಮಾಣವಾಗುತ್ತಿರುವುದು ವಿಪರ್ಯಾಸ. ಅಖಿಲ ಭಾರತೀಯ ವಿದ್ಯಾರ್ಥಿ ಸಂಘ (AISA) ಎನ್ನುವ ವಿದ್ಯಾರ್ಥಿ ಸಂಘಟನೆ ಕಳೆದ ಅನೇಕ ವರ್ಷಗಳಿಂದ ದೇಶವಿರೋಧಿ ಚಟುವಟಿಕೆಗಳ ಮೂಲಕ ಯುವಸಮಾಜವನ್ನು ದೇಶದ ವಿರುದ್ಧ ಕಾರ್ಯನಿರ್ವಹಿಸುವಂತೆ ಮಾಡುತ್ತಿದೆ. AISA ಪ್ರಾಯೋಜಿತ SPARK ಎನ್ನುವ ಸಂಸ್ಥೆಯ ಮೂಲಕ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಚಿಂತನೆಗಳ ಕೂಟಗಳನ್ನು ನಡೆಸುತ್ತಾ ದೇಶದ ಗಡಿ ಕಾಯುವ ಸೈನಿಕರನ್ನು ಅತ್ಯಾಚಾರಿಗಳು ಹಿಂಸಾಚಾರಿಗಳು ಎನ್ನುವಂತೆ ಬಿಂಬಿಸುವ ಕಾರ್ಯಕ್ರಮಗಳು, ಭಾರತದ ಮುಕುಟಮಣಿ ಕಾಶ್ಮೀರ ಭಾರತದ ಭಾಗವಲ್ಲ,ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎನ್ನುವ ದೇಶವಿರೋಧಿ ಕಾರ್ಯಕ್ರಮಗಳ ಮೂಲಕ ಭಾರತದ ಸಮಗ್ರತೆಗೆ ಧಕ್ಕೆ ತರುವ ಕಾರ್ಯಗಳು, ಅಪರೇಷನ್ ಸಿಂಧೂರ ಸೈನಿಕ ಕಾರ್ಯಾಚರಣೆಯನ್ನು ಖಂಡಿಸುವ ಚಟುವಟಿಕೆಗಳು, ನಕ್ಸಲ್ ವಾದ ಹಾಗೂ ಮಾವೋವಾರಿಗಳನ್ನು ಬೆಂಬಲಿಸಿ ಕಾರ್ಯಕ್ರಮಗಳನ್ನು ನಡೆಸುತ್ತಾ ಯುವ ಮನಸುಗಳಲ್ಲಿ ದೇಶವಿರೋಧಿ ಚಿಂತನೆಯನ್ನು ಬಿತ್ತುತ್ತಿವೆ. ಹೀಗೆ ದೇಶದೊಳಗಿದ್ದುಕೊಂಡು ದೇಶವಿರೋಧಿ ಕೃತ್ಯಗಳ ಮೂಲಕ ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಧಕ್ಕೆ ತರುವಂತಹ ಈ ಸಂಸ್ಥೆಯನ್ನು ಈ ಕೂಡಲೇ ನಿಷೇಧಿಸಬೇಕು’ ಎಂದು ಅಮಿತ್ ಶಾಗೆ ಬರೆದ ಪತ್ರದಲ್ಲಿ ಎಬಿವಿಪಿ ಆಗ್ರಹಿಸಿದೆ.

ಇಂತಹ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುತ್ತಿರುವ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದು ಮಾಡಬೇಕು ಹಾಗೂ ಈ ರೀತಿಯ ಚಟುವಟಿಕೆಗಳ ಮೂಲಕ ದೇಶವಿರೋಧಿ ಚಿಂತನೆಯನ್ನು ಕ್ಯಾಂಪಸ್ನಲ್ಲಿ ಹರಡುತ್ತಿರುವ ದೇಶವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಈ ಮೂಲಕ ಆಗ್ರಹಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಎಬಿವಿಪಿ ಹೇಳಿದ್ದೇನು?

ಅಜೀಂ ಪ್ರೇಮ್ ಜೀ ಯೂನಿವರ್ಸಿಟಿ ಮುಂದೆ ಪ್ರತಿಭಟನೆ ನಡೆಸಿದ್ದೇವೆ. ಸ್ಪಾರ್ಕ್ ಎನ್ನುವ ಸಂಘಟನೆಯ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡಲಾಗುತ್ತಿದೆ ಎಂದು ಎಬಿವಿಪಿ ಸಂಘಟನೆಯ ಮುಖಂಡ ಮಣಿಕಂಠ ಕಳಸ ಹೇಳಿದ್ದಾರೆ. ‘ಕಾಶ್ಮೀರ ಭಾರತದ ಭೂಭಾಗವಲ್ಲ, ಭಾರತದವರು ಅಲ್ಲಿಗೆ ಹೋಗಿ ದೌರ್ಜನ್ಯ ಎಸಗುತ್ತಿದ್ದಾರೆ. ಸೈನಿಕರು ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದಾರೆ’ ಎಂಬ ಹೇಳಿಕೆಗಳನ್ನು ಸ್ಪಾರ್ಕ್ ಸಂಘಟನೆಯವರು ನೀಡುತ್ತಾರೆ ಎಂದು ಮಣಿಕಂಠ ಕಳಸ ಆರೋಪಿಸಿದ್ದಾರೆ.

ಇದನ್ನೂ ಓದಿ: ಅಜೀಂ ಪ್ರೇಮ್ ಜಿ ವಿವಿಯಲ್ಲಿ ದೇಶ ವಿರೋಧಿ ಚಟುವಟಿಕೆ ಆರೋಪ: ಎಬಿವಿಪಿ ಪ್ರತಿಭಟನೆ, ಮಾನ್ಯತೆ ರದ್ದುಗೊಳಿಸಲು ಅಮಿತ್ ಶಾಗೆ ಪತ್ರ

ಸ್ಪಾರ್ಕ್ ಸಂಘಟನೆ ದೇಶ ವಿರೋಧಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದನ್ನು ವಿರೋಧಿಸಿ ನಾವು ಪ್ರತಿಭಟನೆ ನಡೆಸಿದ್ದೇವೆ. ವಿವಿ ತಪ್ಪು ಹೆಜ್ಜೆ ಇಟ್ಟಿರುವುದರಿಂದ ಬೋರ್ಡಿಗೆ ಕಪ್ಪು ಮಸಿ ಬಳಿದಿದ್ದೆವು. ಭದ್ರತಾ ಸಿಬ್ಬಂದಿಯನ್ನು ಬಳಸಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲಿನ ಸಿಬ್ಬಂದಿ ಕಾಲೇಜು ವಿಧ್ಯಾರ್ಥಿಗಳಿಗೆ ಹೇಳಿಕೊಟ್ಟು ನಮ್ಮ ಮೇಲೆ ಹಲ್ಲೆ ನಡೆಸಲು ಕಳುಹಿಸಿದ್ದಾರೆ. ಭಾರತದ ಧ್ವಜವನ್ನ ಹಿಡಿದು ಅಲ್ಲಿ ಪ್ರತಿಭಟನೆ ನಡೆಸಿದ್ದೆವು. ಆಗ, ಅಲ್ಲಿನ ವಿಧ್ಯಾರ್ಥಿಗಳು ಅಶ್ಲೀಲ ಸನ್ನೆಗಳನ್ನು ತೋರಿದ್ದಾರೆ. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರ ವಿರುದ್ದ ಕ್ರಮವಾಗಬೇಕು ಎಂದು ಮಣಿಕಂಠ ಕಳಸ ಆಗ್ರಹಿಸಿದ್ದಾರೆ.

ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್​ಐಆರ್

ಮಂಗಳವಾರ ರಾತ್ರಿ ಎಬಿವಿಪಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು 21 ಮಂದಿಯನ್ನು ಬಂಧಿಸಿದ್ದಾರೆ. ಎಫ್​ಐಆರ್ ಸಹ ದಾಖಲಿಸಲಾಗಿದೆ. ನಂತರ ಅವರಿಗೆ ಜಾಮೀನು ಮಂಜೂರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:51 am, Wed, 25 February 26

Source link

Lunar Eclipse 2026: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ವೃಷಭ ರಾಶಿಯ ಮೇಲೆ ಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Taurus Horoscope Predictions by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯವರು 2026ರ ಕೇತುಗ್ರಸ್ತ ಚಂದ್ರಗ್ರಹಣ ವೃಷಭ ರಾಶಿಯವರ ಮೇಲೆ ಹೇಗಿರಲಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಈ ಗ್ರಹಣವು ವೃಷಭ ರಾಶಿಯವರಿಗೆ ನಾಲ್ಕನೇ ಮನೆಯಲ್ಲಿ (ಸುಖಸ್ಥಾನ) ಸಂಭವಿಸಲಿದೆ. ಈ ಗ್ರಹಣದ ಪ್ರಭಾವ ಕೃತಿಕಾ, ರೋಹಿಣಿ ಮತ್ತು ಮೃಗಶಿರಾ ನಕ್ಷತ್ರದ ವೃಷಭ ರಾಶಿಯವರ ಮೇಲೆ ಹೆಚ್ಚಾಗಿರುತ್ತದೆ. ಅಶಾಂತಿ, ತಂದೆ-ತಾಯಿಗಳ ಬಗ್ಗೆ ಕಾಳಜಿ, ಆಸ್ತಿ ವಿಚಾರದಲ್ಲಿ ಜಾಗ್ರತೆ, ಶಿಕ್ಷಣ ಕ್ಷೇತ್ರದಲ್ಲಿ ಗೊಂದಲಗಳು, ಆರ್ಥಿಕ ಏರಿಳಿತಗಳು ಮತ್ತು ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯವೆಂದು ಗುರೂಜಿ ತಿಳಿಸಿದ್ದಾರೆ. ಹೂಡಿಕೆಯಿಂದ ಅಲ್ಪ ಲಾಭ, ಹಳೆಯ ಬಾಕಿಯ ಬಗ್ಗೆ ತೊಂದರೆಗಳು, ಪಾಲುದಾರಿಕೆಯಲ್ಲಿ ಅಶುಭ ಫಲ ನಿರೀಕ್ಷಿಸಲಾಗಿದೆ. ನಟರು, ಕಲಾವಿದರು, ಸಾಹಿತಿಗಳು ಶ್ರಮದಿಂದ ಮಾತ್ರ ಅದೃಷ್ಟವನ್ನು ಪಡೆಯುತ್ತಾರೆ.

ಆದಾಗ್ಯೂ, ಮನೆ ಕಟ್ಟುವ, ಸೈಟ್ ಕೊಳ್ಳುವ ಯೋಗ, ಶತ್ರುಗಳು ಮಿತ್ರರಾಗುವ ಸಾಧ್ಯತೆ, ಉತ್ತಮ ಸ್ನೇಹಿತರ ಬೆಂಬಲ, ವಿವಾಹ ವಿಷಯಗಳಲ್ಲಿ ಶುಭ, ವಾಹನ ಕೊಳ್ಳುವ ಯೋಗ ಮತ್ತು ರಾಜಕೀಯ ಪ್ರಗತಿಯಂತಹ ಸಕಾರಾತ್ಮಕ ಅಂಶಗಳೂ ಇವೆ. ಈ ಅವಧಿಯಲ್ಲಿ ಓಂ ನಮೋ ನಾರಾಯಣಾಯ ಮಂತ್ರ ಜಪ ಮತ್ತು ತಿರುಪತಿ ವೆಂಕಟೇಶ್ವರ ದರ್ಶನ ಮಾಡುವುದರಿಂದ ಶುಭ ಫಲ ಸಿಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದ ಸ್ಟೇಟ್ ಆಫ್​ ದಿ ಯೂನಿಯನ್ ಎಂದರೇನು? ಟ್ರಂಪ್ ಭಾಷಣದಲ್ಲಿ ಉಲ್ಲೇಖ ಮಾಡಿದ್ದೇನೇನು? – Kannada News | What is the State of the Union Donald Trump’s Address and Its Significance

ವಾಷಿಂಗ್ಟನ್, ಫೆಬ್ರವರಿ 25: ಅಮೆರಿಕದ ಸ್ಟೇಟ್ ಆಫ್ ದಿ ಯೂನಿಯನ್ ಎಂದರೆ ಅಮೆರಿಕದ ಅಧ್ಯಕ್ಷರು ಪ್ರತಿ ವರ್ಷ ಕಾಂಗ್ರೆಸ್ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾಡುವ ಭಾಷಣವಾಗಿದೆ. ಈ ಭಾಷಣದಲ್ಲಿ ದೇಶದ ಪ್ರಸ್ತುತ ಸ್ಥಿತಿ, ಸಾಧನೆಗಳು, ಪ್ರಮುಖ ಸಮಸ್ಯೆಗಳು ಹಾಗೂ ಮುಂದಿನ ವರ್ಷದ ಯೋಜನೆಗಳು ಹಾಗೂ ನೀತಿಗಳನ್ನು ವಿವರಿಸಲಾಗುತ್ತದೆ. ಈ ಬಾರಿ ಡೊನಾಲ್ಡ್​ ಟ್ರಂಪ್(Donald Trump) ಭಾಷಣ ಮಾಡಿದ್ದಾರೆ.

ದೇಶದ ಸ್ಥಿತಿಯನ್ನು ತಿಳಿಸುವುದು ಮತ್ತು ಸರ್ಕಾರದ ಭವಿಷ್ಯದ ಕಾರ್ಯಸೂಚಿಯನ್ನು ರೂಪಿಸುವುದು ಇದರ ಉದ್ದೇಶವಾಗಿದೆ. ಅಮೆರಿಕದ ಸಂವಿಧಾನದ ಅಧ್ಯಕ್ಷರು ಕಾಲಕಾಲಕ್ಕೆ ಕಾಂಗ್ರೆಸ್‌ಗೆ ರಾಷ್ಟ್ರದ ಸ್ಥಿತಿಯ ಬಗ್ಗೆ ಮಾಹಿತಿ ನೀಡಬೇಕು.

ಆರ್ಥಿಕತೆ, ಆರೋಗ್ಯ, ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆಯಂತಹ ಪ್ರಮುಖ ವಿಷಯಗಳನ್ನು ಇದರಲ್ಲಿ ಚರ್ಚಿಸಲಾಗುತ್ತದೆ.ಇದು ಅಧ್ಯಕ್ಷರು ತಮ್ಮ ನೀತಿಗಳನ್ನು ಸಮರ್ಥಿಸಿಕೊಳ್ಳಲು ಮತ್ತು ಸಾರ್ವಜನಿಕರೊಂದಿಗೆ ನೇರವಾಗಿ ಸಂವಹನ ನಡೆಸಲು ಒಂದು ಪ್ರಮುಖ ವೇದಿಕೆಯಾಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಅಮೆರಿಕದ ಅಧ್ಯಕ್ಷರು ದೇಶದ ಸ್ಥಿತಿಗತಿ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಮಂಡಿಸುವ ಪ್ರಮುಖ ಭಾಷಣವಾಗಿದೆ.

ಮತ್ತಷ್ಟು ಓದಿ: ಭಾರತ-ಪಾಕಿಸ್ತಾನ ಯುದ್ಧ ನಾನು ನಿಲ್ಲಿಸದಿದ್ದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಾಯ್ತಿದ್ರು ಎಂದ ಟ್ರಂಪ್

ಡೊನಾಲ್ಡ್​ ಟ್ರಂಪ್ ಮಂಗಳವಾರ ಸ್ಟೇಟ್ ಆಫ್ ದಿ ಯೂನಿಯನ್​ನಲ್ಲಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ, ಡೊನಾಲ್ಡ್ ಟ್ರಂಪ್ ಅವರು ಅಧಿಕಾರದಲ್ಲಿದ್ದ ಮೊದಲ ವರ್ಷದ ಬಗ್ಗೆ ಪ್ರಸ್ತಾಪಿಸಿದರು. ಆ ಅವಧಿಯಲ್ಲಿ ಆರ್ಥಿಕ ಪುನರುಜ್ಜೀವನ, ಗಡಿಭದ್ರತೆಯನ್ನು ಕಠಿಣಗೊಳಿಸುವುದು ಮತ್ತು ಅಮೆರಿಕವನ್ನು ಮಹಾಶಕ್ತಿಯಾಗಿ ಇನ್ನಷ್ಟು ದೃಢವಾಗಿ ಸ್ಥಾಪಿಸುವುದು ಮುಖ್ಯ ಆದ್ಯತೆಗಳಾಗಿದ್ದವು ಎಂದು ಹೇಳಿದರು. ಇತ್ತೀಚೆಗೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅಮೆರಿಕದ ಐಸ್ ಹಾಕಿ ತಂಡವನ್ನೂ ಅವರು ಆಹ್ವಾನಿಸಿದ್ದರು.

ಮೊದಲಿಗಿಂತ ಶ್ರೀಮಂತ ಮತ್ತು ಬಲಿಷ್ಠವಾಗಿದೆ, ಎಂದು ಅವರು ಹೇಳಿದರು. ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯದ 250 ವರ್ಷಾಚರಣೆಯನ್ನು ದೇಶ ಆಚರಿಸಲಿದೆ ಎಂದು ತಿಳಿಸಿದರು.
ಕಳೆದ 12 ತಿಂಗಳಲ್ಲಿ ಜಗತ್ತಿನ ವಿವಿಧ ಭಾಗಗಳಿಂದ 18 ಟ್ರಿಲಿಯನ್ ಡಾಲರ್ ಹೂಡಿಕೆ ಅಮೆರಿಕಕ್ಕೆ ಬಂದಿದೆ ಎಂದರು. ವೆನೆಜುವೆಲಾದಿಂದ 80 ಮಿಲಿಯನ್ ಡಾಲರ್ ಮೌಲ್ಯದ ತೈಲವನ್ನು ಪಡೆದಿದ್ದೇವೆ, ಡ್ರಿಲ್ ಬೇಬಿ ಡ್ರಿಲ್ ಎಂಬ ನನ್ನ ವಾಗ್ದಾನವನ್ನು ನೆರವೇರಿಸಿದ್ದೇನೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate Today: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 25th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 25: ಚಿನ್ನದ ಬೆಲೆ ಬುಧವಾರ ಅಲ್ಪ ಏರಿಕೆ ಆಗಿದೆ. ಗ್ರಾಮ್​ಗೆ 9-11 ರೂನಗಳಷ್ಟು ಬೆಲೆ ಏರಿಕೆ ಆಗಿರುವುದು ತಿಳಿದುಬಂದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ (Gold Rates) ಅಲ್ಪ ವ್ಯತ್ಯಯಗಳಾಗಿವೆ. ಕೆಲವೆಡೆ ಅಲ್ಪ ಏರಿಕೆಯಾದರೆ, ಇನ್ನೂ ಕೆಲವೆಡೆ ತುಸು ಇಳಿಕೆ ಆಗಿದೆ. ಬೆಳ್ಳಿ ಬೆಲೆ ಭಾರತದ ಕೆಲವೆಡೆ ಗ್ರಾಮ್​ಗೆ 5 ರೂನಷ್ಟು ಏರಿಕೆ ಆಗಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,61,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 25ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,189 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,840 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,142 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,189 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,840 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,840 ರೂ
  • ಚೆನ್ನೈ: 14,930 ರೂ
  • ಮುಂಬೈ: 14,840 ರೂ
  • ದೆಹಲಿ: 14,855 ರೂ
  • ಕೋಲ್ಕತಾ: 14,840 ರೂ
  • ಕೇರಳ: 14,840 ರೂ
  • ಅಹ್ಮದಾಬಾದ್: 14,845 ರೂ
  • ಜೈಪುರ್: 14,855 ರೂ
  • ಲಕ್ನೋ: 14,855 ರೂ
  • ಭುವನೇಶ್ವರ್: 14,840 ರೂ

ಇದನ್ನೂ ಓದಿ: Bank Holidays: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ; ಬ್ಯಾಂಕುಗಳಿಗೆ 18 ದಿನ ರಜೆ; ಇಲ್ಲಿದೆ ಪಟ್ಟಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 618 ರಿಂಗಿಟ್ (14,434 ರುಪಾಯಿ)
  • ದುಬೈ: 573.75 ಡಿರಾಮ್ (14,204 ರುಪಾಯಿ)
  • ಅಮೆರಿಕ: 160 ಡಾಲರ್ (14,549 ರುಪಾಯಿ)
  • ಸಿಂಗಾಪುರ: 204.90 ಸಿಂಗಾಪುರ್ ಡಾಲರ್ (14,734 ರುಪಾಯಿ)
  • ಕತಾರ್: 567.50 ಕತಾರಿ ರಿಯಾಲ್ (14,158 ರೂ)
  • ಸೌದಿ ಅರೇಬಿಯಾ: 584 ಸೌದಿ ರಿಯಾಲ್ (14,157 ರುಪಾಯಿ)
  • ಓಮನ್: 61 ಒಮಾನಿ ರಿಯಾಲ್ (14,409 ರುಪಾಯಿ)
  • ಕುವೇತ್: 47 ಕುವೇತಿ ದಿನಾರ್ (13,990 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 295 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 295 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 295 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಾಸನ ಮಹಾನಗರ ಪಾಲಿಕೆ ಅಧಿಕಾರಿಗಳ ನಡುವೆ ‘ಕ್ಯಾಮರಾ’ ವಾರ್​​: ಕಾರಣ ಇಲ್ಲಿದೆ – Kannada News | CCTV Camera Removed Amidst Officer Conflict at Hassan City Corporation

ಹಾಸನ, ಫರಬ್ರವರಿ 25: ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ನಡುವೆ ಕಲಹ ವರದಿಯಾಗಿದೆ. ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ದಾಖಲಾತಿಗಾಗಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾವನ್ನು ಮ್ಯಾನೇಜರ್ ಪ್ರಕಾಶ್ ಸೂಚನೆಯಂತೆ ತೆರವುಗೊಳಿಸಲಾಗಿದೆ. ಬೇರೆ ಯಾವುದೇ ಸಿಬ್ಬಂದಿ, ಶಾಖೆಗೂ ಕ್ಯಾಮರಾ ಅಳವಡಿಸದೆ ತಮ್ಮ ಕಚೇರಿಗೆ ಮಾತ್ರ ಹಾಕಿರುವದಕ್ಕೆ ಪ್ರಕಾಶ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಅನುಮತಿ ಕೇಳದೆ ಕ್ಯಾಮರಾ ಹೇಗೆ ಹಾಕಿದ್ರು ಎಂದು ಪ್ರಶ್ನಿಸಿದ್ದಾರೆ. ಈ ಬೆಳವಣಿಗೆಯು ಹಾಸನ ಮಹಾನಗರ ಪಾಲಿಕೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎರಡು ಬಾರಿ ಮದುವೆ ಆಗಲಿದ್ದಾರೆ ರಶ್ಮಿಕಾ-ವಿಜಯ್ ದೇವರಕೊಂಡ: ಕಾರಣ? – Kannada News | Vijay Deverakonda and Rashmika Mandanna marrying twice on February 26

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ವಿವಾಹ ಕಾರ್ಯಕ್ರಮಗಳು ಬಲು ಅದ್ಧೂರಿಯಾಗಿ ನಡೆಯುತ್ತಿವೆ. ರಾಜಸ್ಥಾನದ ಉದಯಪುರದ ಬಳಿಯ ಐಶಾರಾಮಿ ರೆಸಾರ್ಟ್​​ನಲ್ಲಿ ಈ ಜೋಡಿ ವಿವಾಹ ಆಗುತ್ತಿದ್ದು, ಈ ಮದುವೆಯು ಬಲು ಅದ್ಧೂರಿಯಾಗಿಯೂ ಜೊತೆಗೆ ಅತ್ಯಂತ ಖಾಸಗಿಯಾಗಿಯೂ ಇರಲಿದೆ. ಈಗಾಗಲೇ ಮದುವೆ ಕಾರ್ಯಗಳು ಪ್ರಾರಂಭವಾಗಿ ವಾರವಾಗುತ್ತಾ ಬಂದಿದೆ. ಇಂದು ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ನಡೆಯಲಿದೆ. ವಿಶೇಷವೆಂದರೆ ರಶ್ಮಿಕಾ ಮತ್ತು ವಿಜಯ್ ಅವರು ಒಂದಲ್ಲ ಎರಡು ಬಾರಿ ಮದುವೆ ಆಗಲಿದ್ದಾರೆ!

ಹಿಂದೂ ಸಂಪ್ರದಾಯದಲ್ಲಿ ಒಂದು ಬಾರಿ ಮಾಂಗಲ್ಯಧಾರಣೆ ಮಾಡುವ ಪದ್ಧತಿ ಇದೆ. ಆದರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರುಗಳು ಎರಡೆರಡು ಬಾರಿ ಮದುವೆ ಆಗಲಿದ್ದಾರೆ. ಸಾಮಾನ್ಯವಾಗಿ ಎರಡು ಬೇರೆ ಧರ್ಮದವರು ಮದುವೆ ಆದಾಗ ಹೀಗೆ ಎರಡೆರಡು ಬಾರಿ ಮದುವೆ ಮಾಡುವ ಸಂಪ್ರದಾಯ ಚಿತ್ರರಂಗದಲ್ಲಿದೆ. ಆದರೆ ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಹಿಂದೂ ಧರ್ಮದವರೇ ಆಗಿದ್ದರೂ ಸಹ ಈ ಜೋಡಿ ಎರಡೆರಡು ಬಾರಿ ಮದುವೆ ಆಗುತ್ತಿದೆ. ಆದರೆ ಹೀಗೆ ಎರಡು ಬಾರಿ ಮದುವೆ ಆಗುತ್ತಿರುವುದು ಒಳ್ಳೆಯ ಕಾರಣಕ್ಕೆ.

ನಾಳೆ (ಫೆಬ್ರವರಿ 26) ಬೆಳಿಗ್ಗೆ ಮೊದಲಿಗೆ ವಿಜಯ್ ದೇವರಕೊಂಡ ಅವರ ಕುಟುಂಬ ಮತ್ತು ಸಮುದಾಯದ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿಜಯ್ ದೇವರಕೊಂಡ ಅವರ ತೆಲುಗು ಸಂಪ್ರದಾಯದಂತೆ ಬೆಳಿಗ್ಗೆ ಮದುವೆ ಕಾರ್ಯ ನಡೆಯಲಿದೆ. ಅದಾದ ಬಳಿಕ ಸಂಜೆ ವೇಳೆಗೆ ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಇಬ್ಬರೂ ಕುಟುಂಬಗಳ ಸಂಪ್ರದಾಯಗಳನ್ನು ಗೌರವಿಸಲೆಂದು ಈ ನಿರ್ಧಾರವನ್ನು ಮಾಡಲಾಗಿದೆ.

ಇದನ್ನೂ ಓದಿ:ವಿಜಯ್ ಮತ್ತು ರಶ್ಮಿಕಾ ಮದುವೆಯ ಆಗಮಿಸುತ್ತಿರುವ ಅತಿಥಿಗಳು: ಪಟ್ಟಿ ಇಲ್ಲಿದೆ

ಈ ಮಾದರಿಯಿಂದ, ಎರಡೂ ಕಡೆಯ ಕುಟುಂಬದವರಿಗೆ ಪರಸ್ಪರರ ಕುಟುಂಬಗಳ ಸಂಪ್ರದಾಯಗಳ ಅರಿವು, ಪರಿಚಯ ಆದಂತಾಗುತ್ತದೆ. ಮತ್ತು ಎರಡೂ ಕುಟುಂಬದವರು ಪರಸ್ಪರರ ಸಂಪ್ರದಾಯ, ಆಚರಣೆಗಳನ್ನು ಗೌರವಿಸಿದಂತೆ ಆಗುತ್ತದೆ. ಹಾಗಾಗಿಯೇ ಎರಡು ಬಾರಿ ಮದುವೆ ಆಗುತ್ತಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮಗಳು ಇಂದು ನಡೆಯಲಿವೆ. ಈಗಾಗಲೇ ಅವರ ಕೆಲವಾರು ಗೆಳೆಯರು ಉದಯಪುರ ತಲುಪಿದ್ದು ಮದುವೆ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಕನ್ನಡದ ನಟಿ ಆಶಿಕಾ ರಂಗನಾಥ್ ಸಹ ಭಾಗಿ ಆಗಿದ್ದಾರೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ಮುಗಿಯಲಿದ್ದು, ಮಾರ್ಚ್ 4 ರಂದು ಹೈದರಾಬಾದ್​​ನ ತಾಜ್ ಕೃಷ್ಣ ಹೋಟೆಲ್​​ನಲ್ಲಿ ಅದ್ಧೂರಿ ರಿಸೆಪ್ಷನ್ ಅನ್ನು ಆಯೋಜಿಸಲಾಗಿದೆ. ರಿಸೆಪ್ಷನ್​​ನಲ್ಲಿ ಚಿತ್ರರಂಗದ ಹಲವಾರು ಮಂದಿ ಗಣ್ಯರು ಮತ್ತು ರಾಜಕಾರಣಿಗಳು ಭಾಗವಹಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link