T20 World Cup 2026: ಟಿ20 ವಿಶ್ವಕಪ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ಬರೆದಿರುವುದು ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ (Harry Brook). ಅದು ಸಹ ಭರ್ಜರಿ ಶತಕ ಸಿಡಿಸುವ ಮೂಲಕ. ಈ ಶತಕದೊಂದಿಗೆ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
T20 World Cup 2026: ಟಿ20 ವಿಶ್ವಕಪ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ಬರೆದಿರುವುದು ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ (Harry Brook). ಅದು ಸಹ ಭರ್ಜರಿ ಶತಕ ಸಿಡಿಸುವ ಮೂಲಕ. ಈ ಶತಕದೊಂದಿಗೆ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
Dr. Kattesh V. Katti: Top Innovator of the Year in HealthcareImage Credit source: Getty Images
ವಿಜ್ಞಾನ ಕ್ಷೇತ್ರದಲ್ಲಿ ಭಾರತ ಮೂಲದ ಅನೇಕ ಮಹನೀಯರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಂತಹವರಲ್ಲಿ ಒಬ್ಬರು ಡಾ. ಕಟ್ಟೇಶ್ ವಿ. ಕಟ್ಟಿ (Dr. Kattesh V. Katti). ಇವರು ಮೂಲತಃ ಧಾರಾವಾಡದವರಾಗಿದ್ದು, ಇವರ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯೇ. ಇವರನ್ನು “ಹಸಿರು ನ್ಯಾನೊತಂತ್ರಜ್ಞಾನದ ಪಿತಾಮಹ” (Father of Green Nanotechnology) ಎಂದೇ ಕರೆಯಲಾಗುತ್ತದೆ. ಗ್ರೀನ್ ನ್ಯಾನೋಟೆಕ್ನಾಲಜಿ ಕ್ಷೇತ್ರದಲ್ಲಿ ಇವರ ಸಾಧನೆ ಅಪಾರವಾಗಿದ್ದು, ಸಾಂಪ್ರದಾಯಿಕ ಆಯುರ್ವೇದ ಔಷಧಿಗಳನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ‘ನ್ಯಾನೋ-ಆಯುರ್ವೇದ’ ಪರಿಕಲ್ಪನೆಯನ್ನು ಪರಿಚಯಿಸಿದ್ದು. ಈ ಸಾಧನೆಗಾಗಿ ಡಾ. ಕಟ್ಟಿ ಅವರನ್ನು ಐಎಓಟಿಪಿ (IAOTP- International Association of Top Professionals) ಸಂಸ್ಥೆ 2026ನೇ ಸಾಲಿನ ಹೆಲ್ತ್‌ಕೇರ್ ಟಾಪ್ ಇನೋವೇಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಗೌರವ ಸಮಾರಂಭವು ಡಿಸೆಂಬರ್‌ನಲ್ಲಿ ನ್ಯೂಯಾರ್ಕ್ ನಗರದ ಐತಿಹಾಸಿಕ ದಿ ಪ್ಲಾಜಾ ಹೋಟೆಲ್ ನಲ್ಲಿ ನಡೆಯಲಿದೆ. ಈ ಕುರಿತು ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಡಾ. ಕಟ್ಟೇಶ್ ವಿ. ಕಟ್ಟಿ ಅವರು ವಿಶ್ವವಿಖ್ಯಾತ ಭಾರತೀಯ- ಅಮೇರಿಕನ್ ವಿಜ್ಞಾನಿ, ಮಿಸೌರಿ ವಿಶ್ವವಿದ್ಯಾಲಯದ ಮೆಡಿಕಲ್ ಸ್ಕೂಲ್‌ನಲ್ಲಿ ಪ್ರಾಧ್ಯಾಪಕರಾಗಿರುವ ಇವರು, ಆಯುರ್ವೇದ ಮತ್ತು ಆಧುನಿಕ ನ್ಯಾನೊತಂತ್ರಜ್ಞಾನವನ್ನು ಸಂಯೋಜಿಸಿ (Nano-Ayurvedic Medicine) ಕ್ಯಾನ್ಸರ್ ಚಿಕಿತ್ಸೆಗಾಗಿ ಟೀ, ದಾಲ್ಚಿನ್ನಿ ಮುಂತಾದ ನೈಸರ್ಗಿಕ ಮೂಲಗಳಿಂದ (phytochemicals) ವಿಷಕಾರಿಯಲ್ಲದ ನ್ಯಾನೊಪಾರ್ಟಿಕಲ್ಸ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸಸ್ಯ ಮೂಲದ ಫೈಟೋಕೇಮಿಕಲ್‌ಗಳನ್ನು ಬಳಸಿ 100% ಹಸಿರು ವಿಧಾನದಲ್ಲಿ ನ್ಯಾನೋ ವಸ್ತುಗಳನ್ನು ಅಭಿವೃದ್ಧಿಪಡಿಸುವುದು ಅವರ ಸಂಶೋಧನೆಯ ವಿಶೇಷತೆ. ಈ ವಿಧಾನವು ಪರಿಸರ ಸ್ನೇಹಿ ಹಾಗೂ ಆರೋಗ್ಯಪರವಾಗಿರುವುದು ಗಮನಾರ್ಹ. ಇವರ ಈ ಸಂಶೋಧನೆಯು ಕ್ಯಾನ್ಸರ್ ಮತ್ತು ಸಂಧಿವಾತದಂತಹ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳನ್ನು ಕಂಡುಹಿಡಿಯಲು ಸಹಾಯ ಮಾಡಿದೆ.
ಇದನ್ನೂ ಓದಿ: ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು
ಡಾ. ಕಟ್ಟಿ ಅಭಿವೃದ್ಧಿಪಡಿಸಿದ ಕಟ್ಟಿ ಪೆಪ್ಟೈಡ್ಸ್ (Katti Peptides) ನ್ಯಾನೋ ಕಣಗಳು ಕೋಶ ಮಟ್ಟದಲ್ಲಿ ರೋಗ ಪತ್ತೆಹಚ್ಚಲು ಸಹಕಾರಿಯಾಗಿವೆ. ವಿಶೇಷವಾಗಿ ಈ ನ್ಯಾನೋ ಕಣಗಳನ್ನು ಟ್ಯೂಮರ್ ಪ್ರದೇಶಗಳಲ್ಲಿ ಬಳಸುವ ಮೂಲಕ ಸ್ತನ, ಯಕೃತ್, ಶ್ವಾಸಕೋಶ, ಬಾಯಿ, ಪ್ರೋಸ್ಟೇಟ್ ಹಾಗೂ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ಇದಲ್ಲದೆ, ಆಸ್ಟಿಯೋಆರ್ಥ್ರೈಟಿಸ್ ಮತ್ತು ಪಾರ್ಕಿನ್ಸನ್‌ಗಳಂತಹ ದೀರ್ಘಕಾಲದ ಕಾಯಿಲೆಗಳಿಗೂ ಅವರ ಸಂಶೋಧನೆ ವಿಸ್ತರಿಸಿದೆ. ಇದಲ್ಲದೆ ನ್ಯಾನೋ ಆಯುರ್ವೇದಿಕ್ ಮೆಡಿಸಿನ್ ಎಂಬ ಹೊಸ ವೈದ್ಯಕೀಯ ವಿಧಾನವನ್ನು ಪರಿಚಯಿಸಲಾಗಿದೆ. ಈ ಉತ್ಪನ್ನಗಳಲ್ಲಿ ಕೆಲವು ಭಾರತ ಸರ್ಕಾರದ ಅನುಮೋದನೆ ಪಡೆದಿವೆ.
ಡಾ. ಕಟ್ಟಿ ಅವರ ಸಂಶೋಧನೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದ್ದು, ಹಸಿರು ತಂತ್ರಜ್ಞಾನವನ್ನು ಬಳಸಿಕೊಂಡು ಜೀವ ಉಳಿಸುವ ಔಷಧಿಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರೀನ್ ನ್ಯಾನೋಟೆಕ್ನಾಲಜಿಯನ್ನು ಇನ್ನಷ್ಟು ವಿಸ್ತರಿಸಿ ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವ ಉದ್ದೇಶ ಅವರದ್ದಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬ್ರೆಜಿಲ್‌ನ ರಿಯೊ ಗ್ರಾಂಡೆ ದೊ ನಾರ್ಟೆ (Rio Grande do Norte) ಪ್ರಾಂತ್ಯದಲ್ಲಿ ವಿಚಿತ್ರ ಮತ್ತು ಸ್ವಾರಸ್ಯಕರ ಘಟನೆ ನಡೆದಿದೆ. ಪೌಲೊ ರೋಡ್ರಿಗೋ ದಾಸ್ ನೆವೆಸ್ (Paulo Rodrigo das Neves) ಎಂಬ ಯುವಕ ದೀರ್ಘಕಾಲದಿಂದ ಬ್ರೆಜಿಲ್ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಈತ ಕಾರುಗಳ ಸೌಂಡ್ ಸಿಸ್ಟಮ್ ಮತ್ತು ಇತರ ಬಿಡಿಭಾಗಗಳನ್ನು ಕಳವು ಮಾಡುತ್ತಿದ್ದ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಈತನ ಕೃತ್ಯಗಳು ಹಲವಾರು ಬಾರಿ ಸೆರೆಯಾಗಿದ್ದವು. ಆದರೆ, ಬ್ರೆಜಿಲ್‌ನ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಗಂಭೀರ ಅಪರಾಧಗಳಿಗಾಗಿ ಬಂಧಿಸಿ ಜೈಲಿಗೆ ಹಾಕಲು ಸಾಧ್ಯವಿರಲಿಲ್ಲ. ಪೌಲೊ ತನ್ನ 18ನೇ ವರ್ಷಕ್ಕೆ ಕಾಲಿಡುವ ದಿನದವರೆಗೂ ಪೊಲೀಸರು ಕಾದು ಕುಳಿತಿದ್ದರು. ಆತ 18ನೇ ವರ್ಷಕ್ಕೆ ಕಾಲಿಟ್ಟ ತಕ್ಷಣವೇ ಪೊಲೀಸರು ಆತನ ಮನೆಗೆ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧನದ ನಂತರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಆತನಿಗೆ ಒಂದು ಸರ್ಪ್ರೈಸ್ ನೀಡಿದರು. ಕೇಕ್ ಮತ್ತು ಕೋಕಾಕೋಲಾ ತಂದು ಪೊಲೀಸರು ಆತನ ಸುತ್ತಲೂ ನಿಂತು ವ್ಯಂಗ್ಯವಾಗಿ “ಹ್ಯಾಪಿ ಬರ್ತ್ ಡೇ” ಹಾಡನ್ನು ಹಾಡಿದ್ದಾರೆ. ಈ ಅವಮಾನಕರ ಮತ್ತು ವಿಚಿತ್ರ ಹುಟ್ಟುಹಬ್ಬದ ಆಚರಣೆಯ ವೇಳೆ ಆತನ ತಾಯಿಯೂ ಅಲ್ಲೇ ಇದ್ದರು. ಕೇಕ್ ಕತ್ತರಿಸಿದ ನಂತರ ಪೊಲೀಸರು ಆತನಿಗೆ ಕೈಕೋಳ ತೊಡಿಸಿ ಜೈಲಿಗೆ ಕಳುಹಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉರ್ದುವಿನಲ್ಲಿ ಪ್ರಕಟವಾಯ್ತು ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ!Image Credit source: tv9
ಬೆಂಗಳೂರು, ಫೆಬ್ರವರಿ 25: ಕರ್ನಾಟಕದಲ್ಲಿ (Kanataka) ಅಧಿಕೃತ ಆಡಳಿತ ಭಾಷೆಯಾದ ಕನ್ನಡವನ್ನೇ (Kannada) ನಿರ್ಲಕ್ಷಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕೃತ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದುವಿನಲ್ಲಿ (Urdu) ಪ್ರಕಟಿಸಿರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಿಮೋಫಿಲಿಯಾ ರೋಗಿಗಳಿಗೆ ರೋಗನಿರೋಧಕ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳ ಲೋಕಾರ್ಪಣೆಗೊಳಿಸುವ ಮಹತ್ವದ ಕಾರ್ಯಕ್ರಮವನ್ನು ನೆಹರೂ ತಾರಾಲಯದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೇವಲ ಉರ್ದುವಿನಲ್ಲಿ ಮುದ್ರಿಸಲಾಗಿದೆ ಎನ್ನಲಾಗಿದ್ದು, ಕನ್ನಡ ಪರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸರ್ಕಾರ ಆಡಳಿತ ಭಾಷೆ ಕನ್ನಡವನ್ನೇ ಮರೆತುಬಿಟ್ಟಿದೆಯೇ, ಅಥವಾ ಯಾವುದಾದರೂ ಒಂದು ಸಮುದಾಯವನ್ನು ಓಲೈಸುವ ರಾಜಕಾರಣಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಕರ್ನಾಟಕ ರಾಜ್ಯ ಅಧಿಕೃತ ಭಾಷಾ ಕಾಯ್ದೆಯ ಅನ್ವಯ, ಸರ್ಕಾರವು ಆಹ್ವಾನ ಪತ್ರಿಕೆಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸುವುದು ಶಿಷ್ಟಾಚಾರವಾಗಿದೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಶಿಷ್ಟಾಚಾರವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಇಲಾಖೆಯ ಈ ನಡೆ ಒಂದು ನಿರ್ದಿಷ್ಟ ವರ್ಗವನ್ನು ಓಲೈಸುವ ಪ್ರಯತ್ನ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಉರ್ದುವಿನಲ್ಲಿ ಆಹ್ವಾನ ಪತ್ರಿಕೆ ಮುದ್ರಿಸಿದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಉರ್ದು ಭಾಷೆ ಮಾತನಾಡುವವರು ಕರ್ನಾಟಕದಲ್ಲಿ ಇಲ್ಲವೇ ಎಂದು ಉಡಾಫೆಯಿಂದ ಪ್ರಶ್ನಿಸಿದ್ದಾರೆ. ಆದರೆ, ರಾಜ್ಯದಲ್ಲಿ ಉರ್ದು ಮಾತನಾಡುವವರಷ್ಟೇ ಅಲ್ಲದೆ, ತುಳು, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಹೀಗಿರುವಾಗ, ಸರ್ಕಾರವು ಎಲ್ಲಾ ಭಾಷೆಗಳಿಗೂ ಸಮಾನ ಪ್ರಾಮುಖ್ಯತೆ ನೀಡಿ, ಆಯಾ ಭಾಷೆಗಳಲ್ಲೂ ಆಹ್ವಾನ ಪತ್ರಿಕೆಗಳನ್ನು ಪ್ರಕಟಿಸಬೇಕಾಗಿತ್ತು ಎಂಬ ವಾದ ಕೂಡ ಕೇಳಿಬಂದಿದೆ. ಕೇವಲ ಉರ್ದುವಿನಲ್ಲಿ ಮಾತ್ರ ಪ್ರಕಟಿಸಿದ್ದು, ಸರ್ಕಾರದ ಉದ್ದೇಶದ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಅರೆಬೆತ್ತಲೆ ಪ್ರತಿಭಟನೆಗೆ ಖರ್ಗೆ ಸಮರ್ಥನೆ: ದೇಶದ ಹಿತಕ್ಕಾಗಿ ಪ್ರೊಟೆಸ್ಟ್ ಎಂದ AICC ಅಧ್ಯಕ್ಷ
ವಿರೋಧ ಪಕ್ಷಗಳು ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿವೆ. ಅಭಿವೃದ್ಧಿ ಕಾರ್ಯಗಳಿಗೆ ಗಮನ ನೀಡುವ ಬದಲು, ಇಂತಹ ರಾಜಕೀಯ ಚಟುವಟಿಕೆಗಳಲ್ಲಿ ಸರ್ಕಾರ ನಿರತವಾಗಿದೆ ಎಂದು ಆರೋಪಿಸಿವೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉರ್ದು ಭಾಷೆಯ ಅಭಿವೃದ್ಧಿಗೆ 110 ಕೋಟಿ ರೂಪಾಯಿ ಅನುದಾನ ನೀಡಿ, ಕನ್ನಡ ಭಾಷೆಗೆ ಕೇವಲ 32 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು ಎಂಬ ಆರೋಪವೂ ಕೇಳಿಬಂದಿತ್ತು. ಈ ರೀತಿಯ ಬೆಳವಣಿಗೆಗಳು ಸರ್ಕಾರವು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವುದನ್ನು ಮತ್ತಷ್ಟು ದೃಢಪಡಿಸಿವೆ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿವೆ.
ನವದೆಹಲಿ, ಫೆಬ್ರವರಿ 25: ಎನ್‌ಸಿಇಆರ್‌ಟಿಯ 8 ನೇ ತರಗತಿಯ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ(Corruption)ದ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ . ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ, ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳು ಅಸಮಾಧಾನಗೊಂಡಿದ್ದಾರೆ. ನಾನು ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತೇನೆ. ಸಂಸ್ಥೆಯನ್ನು ಕೆಣಕಲು ನಾನು ಯಾರಿಗೂ ಅವಕಾಶ ನೀಡುವುದಿಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸೋಮವಾರ 8 ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕವನ್ನು ಬಿಡುಗಡೆ ಮಾಡಿದೆ. ಹೊಸ ಪುಸ್ತಕವು ನ್ಯಾಯಾಂಗ(Judiciary)ದ ಪಾತ್ರವನ್ನು ವಿವರಿಸುವ, ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಮತ್ತು ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳಂತಹ ಸವಾಲುಗಳನ್ನು ಪರಿಹರಿಸುವ ಹೊಸ ವಿಭಾಗವನ್ನು ಒಳಗೊಂಡಿದೆ. ಈ ವಿಷಯಗಳನ್ನು ಹಳೆಯ ಪುಸ್ತಕದಲ್ಲಿ ನೇರವಾಗಿ ಉಲ್ಲೇಖಿಸದ ಕಾರಣ ಈ ಬದಲಾವಣೆಯು ಮಹತ್ವದ್ದಾಗಿದೆ.
ಮತ್ತಷ್ಟು ಓದಿ: NCERT: ಎಂಟನೇ ತರಗತಿಯ ಹೊಸ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ
ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಎಂಬ ಅಧ್ಯಾಯದಲ್ಲಿ ಹೊಸ ಪುಸ್ತಕವು ನ್ಯಾಯಾಲಯಗಳು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸುತ್ತದೆ. ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವು ಪ್ರಚಲಿತವಾಗಿದೆ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ನ್ಯಾಯಾಧೀಶರ ಕೊರತೆ, ಕಾನೂನು ಪ್ರಕ್ರಿಯೆಯ ಸಂಕೀರ್ಣತೆಗಳು ಮತ್ತು ನ್ಯಾಯಾಲಯಗಳಲ್ಲಿ ಸರಿಯಾದ ಮೂಲಸೌಕರ್ಯಗಳ ಕೊರತೆಯಂತಹ ಹಲವಾರು ಕಾರಣಗಳನ್ನು ಉಲ್ಲೇಖಿಸಿ, ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವುದನ್ನು ಪುಸ್ತಕವು ಎತ್ತಿ ತೋರಿಸುತ್ತದೆ.
ಹೊಸ ಪುಸ್ತಕವು ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಅಂದಾಜು ಅಂಕಿಅಂಶಗಳನ್ನು ಸಹ ಒದಗಿಸುತ್ತದೆ. ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 81,000 ಪ್ರಕರಣಗಳು ಬಾಕಿ ಉಳಿದಿವೆ. ಏತನ್ಮಧ್ಯೆ, ಭಾರತದ ಹೈಕೋರ್ಟ್‌ಗಳಲ್ಲಿ ಸುಮಾರು 6,240,000 ಪ್ರಕರಣಗಳು ಬಾಕಿ ಉಳಿದಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಫೆಬ್ರವರಿ 25: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಮಗುವಿನ ಬೆರಳನ್ನೇ ನರ್ಸ್ ಕತ್ತರಿಸಿರುವ ಘಟನೆ ಬೆಂಗಳೂರಿನ ಇಂದಿರಾ ನಗರದಲ್ಲಿ ನಡೆದಿದೆ. ಜ್ವರ ಮತ್ತು ಕಫದ ಹಿನ್ನೆಲೆ ಚಿನ್ಮಯ್ ಮಿಷನ್ ಆಸ್ಪತ್ರೆಗೆ ಮಗುವನ್ನು ಪೋಷಕರು ಫೇಬ್ರವರಿ 19ರಂದು ದಾಖಲಿಸಿದ್ದರು. ಅಲ್ಲಿಂದ ಫೆ.24ರ ವರೆಗೆ ಮಗುವಿಗೆ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ಡ್ರಿಪ್ಸ್ಗೆ ಹಾಕಿದ್ದ ಡ್ರೆಸ್ಸಿಂಗ್ ತೆಗೆಯುವ ಸಂದರ್ಭ ನಿರ್ಲಕ್ಷದ ಕಾರಣದಿಂದ ನರ್ಸ್ ಮಗುವಿನ ಎಡಗೈ ಕಿರುಬೆರೆಳಿನ ಅರ್ಧ ಬಾಗವನ್ನೇ ಕತ್ತರಿಸಿದ್ದಾರೆ. ಗಂಭೀರ ಗಾಯದಿಂದ ಎಳೆಯ ಕಂದಮ್ಮ ನರಳಾಡುತ್ತಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
6 ತಿಂಗಳ ತಮ್ಮ ಗಂಡು ಮಗು ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಹಿನ್ನೆಲೆ ಇಂದಿರಾನಗರದಲ್ಲಿರುವ ಚಿನ್ಮಯ ಮಿಷನ್ ಆಸ್ಪತ್ರೆಗೆ ಆತನನ್ನು ಕರೆತಂದು ವೈದ್ಯರನ್ನು ಸಂಪರ್ಕಿಸಿದ್ದೆವು. ಮಗುವಿಗೆ ತೀವ್ರ ಅನಾರೋಗ್ಯದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲು ಅವರು ಸೂಚಿಸಿದ್ದರು. 5-6 ದಿನಗಳ ಚಿಕಿತ್ಸೆ ಬಳಿಕ ಫೆಬ್ರವರಿ 24ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಡಿಸ್ಚಾರ್ಜ್ಗೆ ನಿರ್ಧರಿಸಲಾಗಿತ್ತು. ನಾವು ಬಿಲ್ಲಿಂಗ್ ಕೌಂಟರ್ಗೆ ಹಣ ಪಾವತಿ ಮಾಡಲು ಹೋಗಿದ್ದ ಸಂದರ್ಭ, ನರ್ಸ್ ನಿರ್ಲಕ್ಷ್ಯಕ್ಕೆ ಮಗುವಿನ ಎಡಗೈ ಕಿರು ಬೆರಳು ಕಟ್ ಆಗಿದೆ. ಹೀಗಾಗಿ ವೈದ್ಯರು, ಸಿಬ್ಬಂದಿ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಗುವಿನ ತಂದೆ ವಿಜಯ್ ಕುಮಾರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಯುವಕ ಬಲಿ; ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಆತ್ಮಹತ್ಯೆಗೆ ಯತ್ನ!
ಘಟನೆ ಬಳಿಕ ತುರ್ತು ಚಿಕಿತ್ಸಾ ಘಟಕಕ್ಕೆ ಮಗುವನ್ನು ಕರೆದುಕೊಂಡು ಹೋಗಲಾಗಿದ್ದು, ಗಾಯಕ್ಕೆ ಡ್ರೆಸ್ಸಿಂಗ್ ಮಾಡಲಾಗಿದೆ. ಹೀಗಿದ್ದರೂ ಯಾವುದೇ ದೊಡ್ಡ ಗಾಯವಾಗಿಲ್ಲ. ಮಗು ಚಿಕ್ಕದಾಗಿರುವ ಕಾರಣ ಗಾಯ ಅದಾಗೇ ಗುಣವಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಘಟನೆಯಲ್ಲಿ ಮಗುವಿನ ಅರ್ಧ ಬೆರಳು ಕಟ್ ಆಗಿದೆ ಎಂದು ವಿಜಯ್ ಕುಮಾರ್ ದೂರಿದ್ದಾರೆ.
ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 12:34 pm, Wed, 25 February 26
ಚಿಕ್ಕಮಗಳೂರು, ಫೆಬ್ರವರಿ 25: ಭಜನೆ ಹಾಡು, ಜಾಗಟೆ, ಘಂಟೆ ಶಬ್ದದಿಂದ ಕಿರಿಕಿರಿ ಆಗುತ್ತಿದೆಯೆಂದು ಮುಸ್ಲಿಂ ವ್ಯಕ್ತಿಯೊಬ್ಬ ಚಿಕ್ಕಮಗಳೂರು ನಗರದ ಹಳೇ ಉಪ್ಪಳ್ಳಿಯಲ್ಲಿರುವ ಈಶ್ವರ ದೇಗುಲ ಬಳಿ ಹೈಡ್ರಾಮಾ ನಡೆಸಿದ್ದಾನೆ. ಭಜನೆ ಹಾಕುವುದನ್ನು ನಿಲ್ಲಿಸಬೇಕು ಎಂದು ಪೊಲೀಸರಿಗೆ ಕರೆ ಮಾಡಿದ್ದು, ದೇವಾಲಯದಿಂದ ಬರುವ ಶಬ್ದದಿಂದ ಕಿರಿಕಿರಿ ಆಗುತ್ತಿದೆ. ಹೀಗಾಗಿ ಸಂಪೂರ್ಣ ಧ್ವನಿವರ್ಧಕ ಬಂದ್ ಮಾಡಿಸುವಂತೆ ಫಾರೂಕ್ ಎಂಬಾತ ಪಟ್ಟು ಹಿಡಿದಿದ್ದಾನೆ. ದೇಗುಲದ ಅಕ್ಕಪಕ್ಕದ ನಿವಾಸಿಗೆ ಇದರಿಂದ ತೊಂದರೆ ಆಗುತ್ತಿದೆ ಎಂದು ದೂರಿದ್ದು, ಈತ ದೇವಾಲಯದ ಪಕ್ಕದಲ್ಲೇ ವಾಸವಿದ್ದಾನೆ ಎಂಬುದು ಗೊತ್ತಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಹೇಳುವಂತೆ, ಕೇವಲ ಮಂಗಳಾರತಿ ಸಮಯದಲ್ಲಿ ಸುಮಾರು ಹತ್ತು ನಿಮಿಷಗಳ ಅವಧಿಗೆ ಮಾತ್ರ ಭಜನೆಗಳನ್ನು ಹಾಕಲಾಗುತ್ತೆ. ಮಂಗಳಾರತಿ, ಪೂಜೆಗೆ ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಅಲ್ಮಾಟಿ, ಫೆಬ್ರವರಿ 25: ದುಷ್ಕರ್ಮಿಯೊಬ್ಬ ಏರ್ಪೋರ್ಟ್ ಮಹಿಳಾ ಸಿಬ್ಬಂದಿಯ ಕೂದಲು ಹಿಡಿದು ಕುತ್ತಿಗೆಗೆ ಚಾಕು ಹಿಡಿದಿದ್ದ ವಿಡಿಯೋ ವೈರಲ್ ಆಗಿದೆ. ಕಝಾಕಿಸ್ತಾನದ ಅಲ್ಮಾಟಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ಸಿಬ್ಬಂದಿಯನ್ನು ಕಾಪಾಡಲು ಆಕೆಯ ಬದಲಾಗಿ ಆ ಸ್ಥಾನದಲ್ಲಿ ತಾನು ನಿಲ್ಲುವುದಾಗಿ ಹೇಳಿ ಉಪಾಯದಿಂದ ಸಿಬ್ಬಂದಿಯನ್ನು ಪಕ್ಕಕ್ಕೆ ಕಳುಹಿಸಿ ಮಾಜಿ ಬಾಕ್ಸರ್ ಮೂಸಾ ಅಬ್ರೈಮ್ ದಾಳಿಕೋರನ ಪಕ್ಕದಲ್ಲಿ ನಿಂತರು. ಬಳಿಕ ಆತನ ಗಮನ ಬೇರೆಡೆಗೆ ಸೆಳೆದು ಚಾಕುವನ್ನು ಕಸಿದುಕೊಂಡು ಆತನನ್ನು ನೆಲಕ್ಕೆ ನೂಕಿದ್ದಾರೆ. ಆಗ ಪೊಲೀಸರು ದಾಳಿಕೋರನನ್ನು ಹಿಡಿದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಕೇತುಗ್ರಸ್ತ ಚಂದ್ರಗ್ರಹಣ ಮಿಥುನ ರಾಶಿಯವರ ಮೇಲೆ ಹೇಗಿರಲಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಈ ಚಂದ್ರಗ್ರಹಣವು ಮಿಥುನ ರಾಶಿಯವರಿಗೆ “ಡಬಲ್ ಧಮಾಕ” ಫಲಿತಾಂಶಗಳನ್ನು ತರಲಿದೆ. ಮೃಗಶಿರಾ, ಆರಿದ್ರ ಮತ್ತು ಪುನರ್ವಸು ನಕ್ಷತ್ರದವರು ಈ ಪ್ರಭಾವಕ್ಕೆ ಒಳಪಡುತ್ತಾರೆ. ಮಿಥುನ ರಾಶಿಯಿಂದ ಮೂರನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಇದು ಭ್ರಾತೃ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಗುರೂಜಿ ಸೂಚನೆ ನೀಡಿದ್ದಾರೆ.
ಈ ಗ್ರಹಣದ ಪ್ರಭಾವದಿಂದ ಮಿಥುನ ರಾಶಿಯವರ ಆಲೋಚನೆಗಳು ಸ್ಪಷ್ಟವಾಗಿರುತ್ತವೆ, ನಿರ್ಧಾರಗಳು ಉತ್ತಮವಾಗಿರುತ್ತವೆ ಮತ್ತು ಆರ್ಥಿಕ ಪ್ರಗತಿ ಕಂಡುಬರುತ್ತದೆ. ತಪ್ಪು ತಿಳುವಳಿಕೆಗಳಿಂದ ಹೊರಬಂದು, ನ್ಯಾಯಾಲಯದ ವಿಷಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಕುಟುಂಬದ ಸದಸ್ಯರೊಂದಿಗೆ ಆಸ್ತಿ ವಿವಾದಗಳು ಇತ್ಯರ್ಥವಾಗುವ ಸಾಧ್ಯತೆಯಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಹೊಸ ವಾಹನ, ಮನೆ ಅಥವಾ ನಿವೇಶನ ಖರೀದಿಯ ಯೋಗವಿದೆ. ಶಿಕ್ಷಣಾರ್ಥಿಗಳಿಗೆ ಉದ್ಯೋಗಾವಕಾಶಗಳು ಒದಗಿ ಬರುತ್ತವೆ. ಆರೋಗ್ಯದಲ್ಲಿ ಚೇತರಿಕೆ ಮತ್ತು ಹಳೆಯ ಹೂಡಿಕೆಗಳಿಂದ ಲಾಭ ಸಿಗುತ್ತದೆ.
ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?
ಹೊಸ ವ್ಯಾಪಾರ ಆರಂಭಿಸಲು ಇದು ಉತ್ತಮ ಸಮಯ. ಐಟಿ ಅಥವಾ ಜಿಎಸ್‌ಟಿ ಸಂಬಂಧಿತ ಒತ್ತಡಗಳಿದ್ದವರಿಗೆ ನಿರಾಳತೆ ಸಿಗುತ್ತದೆ. ವಿವಾಹ ವಿಷಯಗಳಲ್ಲಿ ಶುಭ ಫಲಗಳಿರುತ್ತವೆ. ಆದಾಗ್ಯೂ, ಶೇರ್ ಅಥವಾ ಟ್ರೇಡಿಂಗ್‌ನಲ್ಲಿ ಇತರರನ್ನು ನಂಬಿ ಹಣ ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕು. ಗ್ರಹಣದ ಅವಧಿಯಲ್ಲಿ ಮೌನ ಆಚರಿಸುವುದು, ಕೃಷ್ಣ ಜಪ ಮಾಡುವುದು ಮತ್ತು ಕೃಷ್ಣ ದೇವಾಲಯಗಳಿಗೆ ಭೇಟಿ ನೀಡುವುದು ಹೆಚ್ಚು ಶುಭ ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಫೆಬ್ರವರಿ 25: ಚಿಕ್ಕಪೇಟೆಯ ಕುಂಬಾರಪೇಟೆ ಬಳಿ ಇರುವ ಹಾರ್ಡ್‌ವೇರ್ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಮೂರು ಅಂತಸ್ತಿನ ಈ ಕಟ್ಟಡದಲ್ಲಿ ಒಟ್ಟು 175 ಅಂಗಡಿ ಮಳಿಗೆಗಳಿದ್ದವು. ಕೆಳಮಹಡಿಯಲ್ಲಿನ ಹಾರ್ಡ್‌ವೇರ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಮೇಲಿನ ಅಂತಸ್ತುಗಳಿಗೆ ವ್ಯಾಪಿಸಿದೆ ಎಂದು ಹೇಳಲಾಗಿದೆ. ಕಟ್ಟಡದಲ್ಲಿ ಪ್ಲಾಸ್ಟಿಕ್, ಫ್ಯಾನ್ಸಿ ಸಾಮಗ್ರಿಗಳು, ಬಟ್ಟೆ ಹಾಗೂ ಸುಡುವಂತಹ ಇತರೆ ವಸ್ತುಗಳಿದ್ದ ಕಾರಣ ಬೆಂಕಿ ವೇಗವಾಗಿ ಹರಡಿದೆ.
ಅಗ್ನಿ ಅವಘಡದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ದಟ್ಟ ಹೊಗೆ ಆವರಿಸಿದ್ದರಿಂದ ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ ಮೂಡಿದೆ. ನಾಲ್ಕು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ಕುಂಬಾರಪೇಟೆ ಪ್ರದೇಶದ ಕಿರಿದಾದ ರಸ್ತೆಗಳಿಂದಾಗಿ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಲು ಸವಾಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.