All posts by nagaraj11081993

ಭೋಜ್​ಶಾಲಾದಲ್ಲಿರುವ ಕಮಲ್ ಮೌಲಾ ಮಸೀದಿಯನ್ನು ಪ್ರಾಚೀನ ದೇವಾಲಯದ ಅವಶೇಷಗಳ ಬಳಸಿಕೊಂಡು ನಿರ್ಮಿಸಲಾಗಿದೆ: ಎಎಸ್​ಐ – Kannada News | Dhar Bhojshala: ASI Confirms Ancient Temple Remains Under Kamal Maula Mosque

ಧಾರ್, ಫೆಬ್ರವರಿ 24: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜ್​ಶಾಲಾ ಸಂಕೀರ್ಣದೊಳಗೆ ಇರುವ ಕಮಲ್ ಮೌಲಾ ಮಸೀದಿ(Mosque)ಯನ್ನು ಪ್ರಾಚೀನ ದೇವಾಲಯದ ಅವಶೇಷಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ ವರದಿ ಹೇಳಿದೆ. ತನ್ನ ತನಿಖಾ ವರದಿಯಲ್ಲಿ ಪ್ರಾಚೀನ ದೇವಾಲಯಗಳ ಅವಶೇಷಗಳನ್ನು ಬಳಸಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದಿದೆ.

ಎಎಸ್​ಐ ಪ್ರಕಾರ, ಈ ತೀರ್ಮಾನವು ವೈಜ್ಞಾನಿಕ ತನಿಖೆ, ಸಮೀಕ್ಷೆಗಳು, ಉತ್ಖನನಗಳು, ಉತ್ಖನನ ಅವಶೇಷಗಳ ಅಧ್ಯಯನ ಮತ್ತು ವಾಸ್ತುಶಿಲ್ಪದ ರಚನೆಗಳು, ಶಾಸನಗಳು, ಕಲೆ ಮತ್ತು ಶಿಲ್ಪಗಳ ವಿಶ್ಲೇಷಣೆಯನ್ನು ಆಧರಿಸಿದೆ. ಈ ಎಎಸ್​ಐ ವರದಿಯನ್ನು ಮದ್ಯಪ್ರದೇಶ ಹೈಕೋರ್ಟ್​​ನ ಇಂದೋರ್ ಪೀಠಕ್ಕೆ ಸಲ್ಲಿಸಲಾಗಿತ್ತು, 10 ಸಂಪುಟಗಳಲ್ಲಿ ಬಿಡುಗಡೆ ಮಾಡಲಾದ ಸುಮಾರು 2,000 ಪುಟಗಳ ವರದಿಯನ್ನು ASI ಹೆಚ್ಚುವರಿ ಮಹಾನಿರ್ದೇಶಕ ಅಲೋಕ್ ತ್ರಿಪಾಠಿ ನೇತೃತ್ವ ವಹಿಸಿದ್ದರು.

ಉತ್ಖನನದ ಸಮಯದಲ್ಲಿ ಒಟ್ಟು 94 ಶಿಲ್ಪಗಳು ಮತ್ತು ಅವುಗಳ ಅವಶೇಷಗಳು ಕಂಡುಬಂದವು, ಅವುಗಳಲ್ಲಿ ಹಲವು ಹಾನಿಗೊಳಗಾಗಿದ್ದವು. ಇವುಗಳಲ್ಲಿ ಗಣೇಶ, ಬ್ರಹ್ಮ, ನರಸಿಂಹ ಮತ್ತು ಭೈರವ ಸೇರಿದಂತೆ ಹಲವಾರು ದೇವತೆಗಳ ಕೆತ್ತನೆಗಳು ಹಾಗೂ ಮಾನವ ಮತ್ತು ಪ್ರಾಣಿಗಳ ಆಕೃತಿಗಳು ಸೇರಿವೆ. ಈ ಸ್ಥಳವು ಸರಸ್ವತಿ ದೇವಿಗೆ ಅರ್ಪಿತವಾದ ಪ್ರಾಚೀನ ದೇವಾಲಯವಾಗಿರಬಹುದು ಎಂದು ಎಎಸ್​ಐ ಸೂಚಿಸಿದೆ.

ಮತ್ತಷ್ಟು ಓದಿ: ಬಾಬರಿ ಮಸೀದಿ ಶಿಲಾನ್ಯಾಸದ ವೇಳೆ ತಲೆ ಮೇಲೆ ಇಟ್ಟಿಗೆ ಹೊತ್ತುಕೊಂಡು ಬಂದ ಮುಸ್ಲಿಮರು

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅರ್ಜಿದಾರರು ಮತ್ತು ಹಿಂದೂ ಫ್ರಂಟ್ ಫಾರ್ ಜಸ್ಟೀಸ್‌ನ ರಾಜ್ಯ ಉಪಾಧ್ಯಕ್ಷ ಆಶಿಶ್ ಗೋಯಲ್, ಎಎಸ್‌ಐ ಸಮೀಕ್ಷೆಯು ಸಂಪೂರ್ಣ ರಚನೆಯು ಪರ್ಮಾರ್ ರಾಜವಂಶದ ಹಿಂದಿನದು ಮತ್ತು ರಾಜ ಭೋಜ್ ಮತ್ತು ಅವರ ಪೂರ್ವಜರಿಂದ ನಿರ್ಮಿಸಲ್ಪಟ್ಟಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಈ ರಚನೆಯು ಸರಿಸುಮಾರು 950 ರಿಂದ 1,000 ವರ್ಷಗಳಷ್ಟು ಹಳೆಯದು ಎಂದರು.

ಮತ್ತೊಬ್ಬ ಅರ್ಜಿದಾರರಾದ ಭೋಜ್ ಉತ್ಸವ ಸಮಿತಿ ಸಂಚಾಲಕ ಅಶೋಕ್ ಜೈನ್ ಮಾತನಾಡಿ, ನಮ್ಮ ಬೇಡಿಕೆ ಮೊದಲಿನಿಂದಲೂ ಸ್ಪಷ್ಟವಾಗಿದೆ, ಸ್ಥಳವು ಮಸೀದಿಯಾಗಿದ್ದರೆ, ಅದನ್ನು ಮುಸ್ಲಿಂ ಕಡೆಯವರಿಗೆ ನೀಡಬೇಕು ಮತ್ತು ಅದು ದೇವಾಲಯವಾಗಿದ್ದರೆ, ಅದನ್ನು ಹಿಂದೂ ಕಡೆಯವರಿಗೆ ನೀಡಬೇಕು ಎಂದು ಹೇಳಿದರು.

ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ್ ಅವಸ್ಥಿ ಅವರು ಪಕ್ಷಗಳು ತಮ್ಮ ಆಕ್ಷೇಪಣೆಗಳು ಮತ್ತು ಪ್ರತಿಕ್ರಿಯೆಗಳನ್ನು ಹದಿನೈದು ದಿನಗಳೊಳಗೆ ಸಲ್ಲಿಸುವಂತೆ ಕೇಳಿದ್ದಾರೆ, ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ನಿಗದಿಪಡಿಸಲಾಗಿದೆ.

ಧಾರ್‌ನಲ್ಲಿರುವ ಐತಿಹಾಸಿಕ ಸಂಕೀರ್ಣದ ವಿವಾದದ ನಂತರ, ಎಎಸ್‌ಐ ಏಪ್ರಿಲ್ 7, 2003 ರಂದು ಆದೇಶ ಹೊರಡಿಸಿತ್ತು, ಪ್ರತಿ ಮಂಗಳವಾರ ಹಿಂದೂಗಳು ಆ ಸ್ಥಳದಲ್ಲಿ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:58 am, Tue, 24 February 26

Source link

ರಣಜಿ ಟ್ರೋಫಿ ಫೈನಲ್ ಫೈಟ್: ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ – Kannada News | Karnataka vs Jammu and Kashmir, Ranji Final Playing XI

ಹುಬ್ಬಳ್ಳಿಯ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಜಮ್ಮು- ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಜಮ್ಮು-ಕಾಶ್ಮೀರ ತಂಡದ ನಾಯಕ ಪರಸ್ ಡೋಗ್ರಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಇದೀಗ ಕಮ್ರಾನ್ ಇಕ್ಬಾಲ್ ಹಾಗೂ ಯಾವರ್ ಹಸನ್ ಇನಿಂಗ್ಸ್ ಆರಂಭಿಸಿದ್ದಾರೆ.

ಇನ್ನು ಈ ಪಂದ್ಯಕ್ಕಾಗಿ ಕರ್ನಾಟಕ ತಂಡವು ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಿದೆ. ತಂಡದಲ್ಲಿ ಅನುಭವಿ ದಾಂಡಿಗರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇದ್ದು, ಇಬ್ಬರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ದೇವದತ್ ಪಡಿಕ್ಕಲ್ ಬ್ಯಾಟ್ ಬೀಸಲಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಮತ್ತೋರ್ವ ಅನುಭವಿ ದಾಂಡಿಗ ಕರುಣ್ ನಾಯರ್ ಕಣಕ್ಕಿಳಿಯಲಿದ್ದಾರೆ. ಇನ್ನು ಯುವ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ಐದನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಹಾಗೆಯೇ ಆಲ್​ರೌಂಡರ್ ಆಗಿ ಶ್ರೇಯಸ್ ಗೋಪಾಲ್ ಕಣಕ್ಕಿಳಿದರೆ, ವಿಎಕಟ್ ಕೀಪರ್ ಬ್ಯಾಟರ್ ಆಗಿ ಕೃತಿಕ್ ಕೃಷ್ಣ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬೌಲರ್​ಗಳಾಗಿ ವಿದ್ಯಾಧರ್ ಪಾಟೀಲ್, ವಿಜಯಕುಮಾರ್ ವೈಶಾಕ್, ಶಿಖರ್ ಶೆಟ್ಟಿ ಹಾಗೂ ಪ್ರಸಿದ್ಧ್ ಕೃಷ್ಣ ಕರ್ನಾಟಕ ಪ್ಲೇಯಿಂಗ್ ಇಲೆವೆನ್​ನಲ್ಲಿದ್ದಾರೆ.

ಮತ್ತೊಂದೆಡೆ ಜಮ್ಮು-ಕಾಶ್ಮೀರ ಪರ ಬ್ಯಾಟಿಂಗ್ ಶಕ್ತಿಯಾಗಿ ಪರಸ್ ಡೋಗ್ರಾ ಹಾಗೂ ಅಬ್ದುಲ್ ಸಮದ್ ಇದ್ದಾರೆ. ಇನ್ನು ಬೌಲಿಂಗ್​ನಲ್ಲಿ ಜಮ್ಮು-ಕಾಶ್ಮೀರ ತಂಡ ನೆಚ್ಚಿಕೊಂಡಿರುವು ಆಖಿಬ್ ನಬಿ ಅವರನ್ನು. ಹೀಗಾಗಿ ಕಾಶ್ಮೀರಿ ಪಡೆಯಿಂದ ಕೂಡ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಂತೆ ಈ ಪಂದ್ಯದಲ್ಲಿ ಕಣಕ್ಕಿಳಿದಿರುವ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿವೆ…

ಜಮ್ಮು ಮತ್ತು ಕಾಶ್ಮೀರ ಪ್ಲೇಯಿಂಗ್ XI: ಕಮ್ರಾನ್ ಇಕ್ಬಾಲ್, ಯಾವರ್ ಹಸನ್, ಶುಭಂ ಪುಂಡೀರ್, ಪರಸ್ ಡೋಗ್ರಾ (ನಾಯಕ), ಅಬ್ದುಲ್ ಸಮದ್, ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್, ಆಖಿಬ್ ನಬಿ ದಾರ್, ಯುದ್ವೀರ್ ಸಿಂಗ್ ಚರಕ್, ಸಾಹಿಲ್ ಲೋತ್ರಾ, ಸುನೀಲ್ ಕುಮಾರ್.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ ಬ್ರಿಯಾನ್ ಬೆನ್ನೆಟ್

ಕರ್ನಾಟಕ ಪ್ಲೇಯಿಂಗ್ XI: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ (ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ.

Source link

ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ದೊಡ್ಡ ಎಡವಟ್ಟು? – Kannada News | Big Loophole in Renukaswamy Murder Case Big Twist in Case

ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ದೊಡ್ಡ ಟ್ವಿಸ್ಟ್ ಎದುರಾಗೋ ಸೂಚನೆ ಸಿಕ್ಕಿದೆ. ತನಿಖಾಧಿಕಾರಿ ಗಿರೀಶ್ ನಾಯಕ್ ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳನ್ನು ಟೈಲ್ಸ್ ಇರೋ ಕ್ಯಾಬಿನ್ ಅಲ್ಲಿ ಫೋಟೋ ತೆಗೆಯಲಾಗಿತ್ತಂತೆ. ಆದರೆ, ಕಾಮಾಕ್ಷಿ ಪಾಳ್ಯದಲ್ಲಿ ಆ ರೀತಿಯ ಟೈಲ್ಸ್ ಇಲ್ಲ ಎಂದು ಹೇಳಲಾಗಿದೆ. ಇದರಿಂದ ಸಾಕಷ್ಟು ಚರ್ಚೆ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾರ್ಟ್​ ಸರ್ಕ್ಯೂಟ್​​ನಿಂದ ಮನೆಯಲ್ಲಿ ಭಾರಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ – Kannada News | Short Circuit Sparks Deadly House Fire in Meerut, Six Killed

ಮೀರತ್, ಫೆಬ್ರವರಿ 24: ಶಾರ್ಟ್ ಸರ್ಕ್ಯೂಟ್​​ನಿಂದಾಗಿ ಮನೆಯಲ್ಲಿ ಭಾರಿ ಅಗ್ನಿ ಅವಘಡ(Fire Accident) ಸಂಭವಿಸಿದ್ದು, ಐವರು ಮಕ್ಕಳು ಸೇರಿ ಆರು ಮಂದಿ ಸುಟ್ಟು ಕರಕಲಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್​​ನಲ್ಲಿ ನಡೆದಿದೆ. ಮೃತರಲ್ಲಿ ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಇಬ್ಬರು ಅವಳಿ ಶಿಶುಗಳು ಸೇರಿದ್ದಾರೆ. ಸೋಮವಾರ ಸಂಜೆ ಇಕ್ಬಾಲ್ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಿರುಚಾಟ ಕೇಳಿ ಮತ್ತು ಜ್ವಾಲೆಯ ತೀವ್ರತೆ ನೋಡಿ ಸ್ಥಳೀಯರು ಕೂಡಲೇ ಸಹಾಯಕ್ಕೆ ಮುಂದಾದರು.

ಬೆಂಕಿಯು ಕೆಳ ಮಹಡಿಯಿಂದ ಮನೆಯ ಮೇಲಿನ ಮಹಡಿಗೆ ವೇಗವಾಗಿ ಹಬ್ಬಿತ್ತು, ಕುಟುಂಬ ಸದಸ್ಯರು ಮನೆಯ ಒಳಗೆ ಸಿಲುಕಿಕೊಂಡರು. ಗಾಯಾಳುಗಳನ್ನು ಛಾವಣಿಯ ಮೂಲಕ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ, ಇದು ಆ ಪ್ರದೇಶದಲ್ಲಿ ಅವ್ಯವಸ್ಥೆಗೆ ಕಾರಣವಾಗಿದೆ.

ಅಗ್ನಿಶಾಮಕ ದಳದ ತಂಡಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ.ಎಸ್‌ಪಿ ಸಿಟಿ ಆಯುಷ್ ವಿಕ್ರಮ್ ಸಿಂಗ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು, ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಲಿಸಾರಿ ಗೇಟ್ ಪ್ರದೇಶದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಒಬ್ಬ ಮಹಿಳೆ ಮತ್ತು ಐದು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ವಿದ್ಯುತ್ ಉಪಕರಣದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ ಎಂದು ಎಸ್‌ಎಸ್‌ಪಿ ಪಾಂಡೆ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ ಬ್ರಿಯಾನ್ ಬೆನ್ನೆಟ್ – Kannada News | Brian bennett creates new world record in t20 world cup 2026

ಟಿ20 ವಿಶ್ವಕಪ್​ನಲ್ಲಿ ಝಿಂಬಾಬ್ವೆ ತಂಡದ ಆರಂಭಿಕ ದಾಂಡಿಗ ಬ್ರಿಯಾನ್ ಬೆನ್ನೆಟ್ (brian bennett) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಬರೋಬ್ಹರಿ 180 ರನ್​ಗಳನ್ನು ಪೇರಿಸುವ ಮೂಲಕ. ಅಂದರೆ ವಿಶ್ವಕಪ್ ಇತಿಹಾಸದಲ್ಲಿ ಔಟ್ ಆಗುವ ಮುನ್ನ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಬ್ರಿಯಾನ್ ಹೆಸರಿಗೆ ಸೇರ್ಪಡೆಯಾಗಿದೆ.

ಈ ಬಾರಿಯ ವಿಶ್ವಕಪ್​ನಲ್ಲಿ ಒಮಾನ್ ವಿರುದ್ಧ ಅಜೇಯ 48 ರನ್ ಬಾರಿಸಿದ್ದ ಬ್ರಿಯಾನ್ ಬೆನ್ನೆಟ್, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಜೇಯ 64 ರನ್​ ಗಳಿಸಿದ್ದರು. ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಜೇಯ 63 ರನ್ ಬಾರಿಸಿದ್ದರು. 

ಅಂದರೆ ಮೊದಲ ಮೂರು ಇನಿಂಗ್ಸ್​ಗಳಲ್ಲಿ ಬ್ರಿಯಾನ್ ಬೆನ್ನೆಟ್ ಔಟ್ ಆಗಿರಲಿಲ್ಲ. ಆದರೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬ್ರಿಯಾನ್ ಬೆನ್ನೆಟ್ ಕೇವಲ 5 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

ಈ ಮೂಲಕ ಕಳೆದ 4 ಇನಿಂಗ್ಸ್​ಗಳ ಮೂಲಕ ಬ್ರಿಯಾನ್ ಬೆನ್ನೆಟ್ ಬರೋಬ್ಬರಿ 180 ರನ್​ಗಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಔಟಾಗುವ ಮುನ್ನ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು.

2022 ರ ಟಿ20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಮೊದಲ ಮೂರು ಇನಿಂಗ್ಸ್​ಗಳಲ್ಲಿ 82*, 62*, 12 ರನ್ ಬಾರಿಸಿದ್ದರು. ಈ ಮೂಲಕ 156 ರನ್ ಬಾರಿಸಿ ಟಿ20 ವಿಶ್ವಕಪ್​ನಲ್ಲಿ ಔಟಾಗುವ ಮುನ್ನ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ 48*, 64*, 63*, 5 ರನ್​ಗಳಿಸುವ ಮೂಲಕ ಬ್ರಿಯಾನ್ ಬೆನ್ನೆಟ್ ಒಟ್ಟು 180 ರನ್ ಕಲೆಹಾಕಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ ದಾಖಲೆ ಮುರಿದು ಟಿ20 ವಿಶ್ವಕಪ್​ನಲ್ಲಿ ಔಟಾಗುವ ಮುನ್ನ ಅತೀ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Published On – 9:09 am, Tue, 24 February 26

Source link

ಬೆಂಗಳೂರು ಏರ್​ಪೋರ್ಟಲ್ಲಿ ಭರ್ಜರಿ ಕಾರ್ಯಾಚರಣೆ: ಬ್ಯಾಂಕಾಕ್, ಹಾಂಕಾಂಗ್​ನಿಂದ ಬರ್ತಿದ್ದ ಅಪಾರ ಪ್ರಮಾಣದ ಡ್ರಗ್ಸ್ ವಶ – Kannada News | Massive Drug Bust at Bengaluru Airport: Hydroponic Ganja Worth Rs 3.1 Crore Seized, MDMA Haul in Ramanagara

ದೇವನಹಳ್ಳಿ/ರಾಮನಗರ: ಕರ್ನಾಟಕದಲ್ಲಿ ಮಾದಕ ವಸ್ತು ಜಾಲದ ವಿರುದ್ಧ ಕಾರ್ಯಾಚರಣೆ ಮುಂದುವರಿದಿದ್ದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಾಮನಗರದಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್‌ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ವೇಳೆ ಭಾರೀ ಪ್ರಮಾಣದ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಬ್ಯಾಂಕಾಕ್‌ನಿಂದ ಬಂದಿದ್ದ ಪ್ರಯಾಣಿಕನ ಲಗೇಜ್ ಪರಿಶೀಲನೆ ವೇಳೆ ಸುಮಾರು 8 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ 2.8 ಕೋಟಿ ರೂ. ಎಂದು ತಿಳಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಹಾಂಕಾಂಗ್‌ನಿಂದ ಬಂದಿದ್ದ ಮತ್ತೊಬ್ಬ ಪ್ರಯಾಣಿಕನ ಬಳಿಯಿಂದ 900 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು 31.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇಬ್ಬರೂ ಪ್ರಯಾಣಿಕರು ಗಾಂಜಾವನ್ನು ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟುಕೊಂಡು ಬಂದಿದ್ದರು ಎನ್ನಲಾಗಿದೆ.

ತಕ್ಷಣ ಕ್ರಮ ಕೈಗೊಂಡ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು NDPS ಕಾಯ್ದೆಯಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ಮತ್ತು ಕಸ್ಟಮ್ಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಿಂದ ಈ ಡ್ರಗ್ಸ್ ಸ್ಮಗ್ಲಿಂಗ್ ಯತ್ನ ವಿಫಲಗೊಂಡಿದೆ.

ರಾಮನಗರದಲ್ಲಿ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ರಾಮನಗರ ಜಿಲ್ಲೆಯ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಒಂದೂವರೆ ಕೋಟಿ ರೂ. ಮೌಲ್ಯದ 750 ಗ್ರಾಂ ಡ್ರಗ್ಸ್ ವಶಪಡಿಸಲಾಗಿದೆ. ದಾಳಿಯ ವೇಳೆ 450 MDMA ಮಾತ್ರೆಗಳು ಹಾಗೂ 550 ಗ್ರಾಂ ಕ್ರಿಸ್ಟಲ್ ಡ್ರಗ್ಸ್ ಸೀಜ್ ಮಾಡಲಾಗಿದೆ.

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಗೋರಿಪಾಳ್ಯದ ಸಜ್ಜಿಲ್ ಪಾಷಾ ಅಲಿಯಾಸ್ ಸಲ್ಮಾನ್, ಸಾದಿಕ್ ಹಾಗೂ ಉಗಾಂಡ ಮೂಲದ ನಾನಾ ಜಾನ್ಸನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬೆಂಗಳೂರಿನಿಂದ ಡ್ರಗ್ಸ್ ತಂದು ರಾಮನಗರದಲ್ಲಿ ಮಾರಾಟ ಮಾಡುತ್ತಿದ್ದರೆಂಬದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಬೆಂಗಳೂರು ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ನಿಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಮುಂದುವರಿದ ಡ್ರಗ್ ಬೇಟೆ: ಮಾದಕವಸ್ತು ಸಾಗಿಸುತ್ತಿದ್ದ ನಾಲ್ವರ ಬಂಧನ

ಮತ್ತೊಂದೆಡೆ, ಮೈಸೂರು ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಿರುವ ಪೊಲೀಸರು, 10.30 ಲಕ್ಷ ರೂ. ಮೌಲ್ಯದ 103 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್​​ನಿಂದ ವಿಚ್ಛೇದವಾಯ್ತಾ? ಟ್ರೋಲ್ ಮಾಡುವವರಿಗೆ ಉತ್ತರಿಸಿದ ಸಮಂತಾ – Kannada News | Samantha Ruth Prabhu Clarifies Raj Nidimoru Marriage, Debunks Divorce Rumors

ಸಮಂತಾ ರುತ್ ಪ್ರಭು (Samantha) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ರಾಜ್ ನಿಧಿಮೋರು ಜೊತೆ ಎರಡನೇ ಮದುವೆ ಆಗಿದ್ದಾರೆ. ರಾಜ್​​ಗೂ ಇದು ಎರಡನೇ ವಿವಾಹ. ರಾಜ್ ಆಗಮದಿಂದಲೇ ಸಮಂತಾ ವಿಚ್ಛೇದನ ಆಯಿತು ಎಂಬ ವದಂತಿ ಹಬ್ಬಿತ್ತು. ಇದಕ್ಕೆಲ್ಲ ಸಮಂತಾ ಉತ್ತರ ನೀಡಿದ್ದಾರೆ. ಅವರ ಉತ್ತರದಿಂದ ಎಲ್ಲರೂ ಗಪ್​ ಚುಪ್ ಆಗಿದ್ದಾರೆ.

ಸಮಂತಾ ವಿಚ್ಛೇದನ ಪಡೆದಿದ್ದು 2021ರ ಅಕ್ಟೋಬರ್​​ನಲ್ಲಿ. ಆದರೆ, ಅವರಿಗೆ ರಾಜ್ ಪರಿಚಯ ಆಗಿದ್ದು 2019ರಲ್ಲಿ. ಹೀಗಾಗಿ, ಇದೆರಡನ್ನೂ ತಾಳೆ ಹಾಕಿ ಕೆಲವರು ರಾಜ್ ಅವರನ್ನು ಟೀಕಿಸಿದ್ದರು. ರಾಜ್ ಜೊತೆಗಿನ ಪ್ರೀತಿ ಕಾರಣದಿಂದಲೇ ನಾಗ ಚೈತನ್ಯ ಅವರು ಸಮಂತಾಗೆ ಡಿವೋರ್ಸ್ ನೀಡಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಆದರೆ, ಈ ಊಹೆ ತಪ್ಪು ಎಂಬುದನ್ನು ಸಮಂತಾ ಸಾಬೀತು ಮಾಡಿದ್ದಾರೆ.

ಸಮಂತಾ ಅವರು ರಾಜ್ ಜೊತೆ ಕ್ಲೋಸ್ ಆಗಿದ್ದು ಯಾವಾಗ ಎಂಬುದನ್ನು ಹೇಳಿದ್ದಾರೆ. ಡಿವೋರ್ಸ್ ಬಳಿಕ ಯಾರ ಜೊತೆಯೂ ಕ್ಲೋಸ್ ಆಗೋದಿಲ್ಲ ಎಂದು ಸಮಂತಾ ಭಾವಿಸಿದ್ದರಂತೆ. ಆದರೆ, ಅವರಿಗೆ ರಾಜ್ ನೀಡಿದ ಆಪ್ಯಾಯತೆ ಖುಷಿ ಕೊಟ್ಟಿತು. ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಆಯಿತು.

‘ನಾನು ವಿಚ್ಛೇದನ ಪಡೆದಾಗ ನಾನು ಹೊರ ಜಗತ್ತಿನ ಜೊತೆಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಟ್ ಮಾಡಿದೆ. ಬೇರೆಯವರ ಮೇಲೆ ಮತ್ತೆ ಅವಲಂಬಿತರಾಗಬಹುದು ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಅದೃಷ್ಟವಶಾತ್ ಆ ರೀತಿಯ ಪ್ರೀತಿ ಮತ್ತು ಸ್ನೇಹವನ್ನು ಸ್ವೀಕರಿಸಿದೆ. ರಾಜ್ ಅವರಿಂದ ಸಾಕಷ್ಟು ಪ್ರೀತಿ ಪಡೆದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೆಮ್ಮೆಯಿಂದ ತಾಳಿ ಧರಿಸಿ ಓಡಾಡುತ್ತಿರುವ ನಟಿ ಸಮಂತಾ ರುತ್ ಪ್ರಭು

‘ವಿಚ್ಛೇದನ ಪಡೆದ ಸಮಯದಲ್ಲಿ ಸಮಂತಾ ತುಂಬಾನೇ ಲೋ ಆಗಿದ್ದರು. ಆದರೆ ರಾಜ್ ಜೊತೆ ಸ್ನೇಹ ಬೆಳೆಸಿದ ನಂತರ ನನ್ನ ಜೀವನವನ್ನು ನೋಡುವ ರೀತಿಯಲ್ಲಿ ಬದಲಾವಣೆಗಳನ್ನು ಕಂಡೆ’ ಎಂದು ಅವರು ಹೇಳಿದ್ದಾರೆ. ಅಂದರೆ, ನಾಗ ಚೈತನ್ಯ ಜೊತೆ ಸಂಬಂಧ ಹೊಂದಿರುವಾಗ ಸಮಂತಾ ಅವರು ರಾಜ್ ಜೊತೆ ಪ್ರೊಫೆಷನಲ್ ಆಗೇ ವರ್ತಿಸುತ್ತಿದ್ದರು ಎಂಬುದು ಈ ಮಾತುಗಳಿಂದ ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 24 February​: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು – Kannada News | Daily Horoscope for February​ ​​24th 20​26: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 24, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ಸಪ್ತಮಿ ತಿಥಿಯಾಗಿದೆ. ಈ ದಿನ ಕೃತಿಕಾ ನಕ್ಷತ್ರದಲ್ಲಿ ಚಂದ್ರ ಸಂಚರಿಸಲಿದ್ದು, ರವಿ ಕುಂಭ ರಾಶಿಯಲ್ಲಿದ್ದಾನೆ. ಇಂದು ಸರ್ವ ಸಿದ್ಧಿ ಕಾಲವು 11:04 ರಿಂದ 12:33 ರ ವರೆಗೆ ಇರುತ್ತದೆ. ಸುಬ್ರಮಣ್ಯ ಮತ್ತು ಹನುಮಂತನ ಅನುಗ್ರಹಕ್ಕೆ ವಿಶೇಷ ದಿನವಾಗಿದೆ.

ದ್ವಾದಶ ರಾಶಿಗಳಲ್ಲಿ ಮೇಷ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದ್ದು, ಜವಾಬ್ದಾರಿಗಳು ಹೆಚ್ಚಲಿವೆ. ಆದಾಯ ಮತ್ತು ಕುಟುಂಬದ ಬೆಂಬಲ ಚೆನ್ನಾಗಿರುತ್ತದೆ. ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲ ದೊರೆಯಲಿದ್ದು, ಆರ್ಥಿಕ ವೃದ್ಧಿ, ವೃತ್ತಿಯಲ್ಲಿ ಉತ್ತಮ ಸ್ಥಿತಿ ಮತ್ತು ಹಳೆಯ ಬಾಕಿ ವಸೂಲಿ ಯೋಗವಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

‘ಟಾಕ್ಸಿಕ್’ ಸಿನಿಮಾನ ಯಾವ ರಾಜ್ಯಗಳಲ್ಲಿ ಯಾರು ಹಂಚಿಕೆ ಮಾಡ್ತಾರೆ? ಇಲ್ಲಿದೆ ಸಂಪೂರ್ಣ ಪಟ್ಟಿ – Kannada News | Toxic Movie Pre Release Distribution Rights Soar: Yash Film Secures Mega Deals Globally

‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​​ಗೆ ಇನ್ನು ಬಾಕಿ ಇರೋದು ಕೆಲವೇ ವಾರಗಳು ಮಾತ್ರ. ಈ ಮೊದಲು ರಿಲೀಸ್ ಆದ ಟೀಸರ್​​ಗಳು ಗಮನ ಸೆಳೆದಿವೆ. ಶೀಘ್ರದಲ್ಲೇ ಚಿತ್ರದ ಟ್ರೇಲರ್ ಲಾಂಚ್ ಕೂಡ ಆಗಲಿದೆ. ಅದಕ್ಕೂ ಮೊದಲು ‘ಟಾಕ್ಸಿಕ್’ ಸಿನಿಮಾದ ಹಂಚಿಕೆ ಹಕ್ಕು ಮಾರಾಟ ಆಗಿದೆ. ದೇಶ ಹಾಗೂ ವಿದೇಶದ ಹಕ್ಕುಗಳನ್ನು ದೊಡ್ಡ ದೊಡ್ಡ ಸಂಸ್ಥೆಗಳು ಪಡೆದುಕೊಂಡಿವೆ. ಇದರಿಂದ ‘ಟಾಕ್ಸಿಕ್’ ಚಿತ್ರಕ್ಕೆ ದೊಡ್ಡ ಮೊತ್ತದ ಹಣ ಹರಿದು ಬಂದಿದೆ.

‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಕಾರಣದಿಂದ ಕರ್ನಾಟಕದಲ್ಲಿ ಅವರೇ ಹಂಚಿಕೆ ಮಾಡಲಿದ್ದಾರೆ. ಕರ್ನಾಟಕದಲ್ಲಿ ಅವರ ಹಂಚಿಕೆ ನೆಟ್ವರ್ಕ್ ತುಂಬಾನೇ ದೊಡ್ಡದಾಗಿದೆ. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ. ಕರ್ನಾಟಕದಲ್ಲಿರುವ ಬಹುತೇಕ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಎ ಪ್ರಮಾಣಪತ್ರ ಸಿಕ್ಕರೆ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ತೆರಳೋದು ಕಷ್ಟ ಆಗಬಹುದು.

ಇನ್ನು, ತಮಿಳುನಾಡಿನಲ್ಲೂ ಕೆವಿಎನ್ ತನ್ನ ನೆಟ್ವರ್ಕ್ ಮೂಲಕವೇ ಹಂಚಿಕೆ ಮಾಡಲಿದೆ. ಈಗಾಗಲೇ ಅವರು ತಮಿಳಿನಲ್ಲಿ ‘ಜನ ನಾಯಗನ್’ ಸಿನಿಮಾ ನಿರ್ಮಾಣ ಮಾಡಿ ಸಾಕಷ್ಟು ಸಂಪರ್ಕ ಸಾಧಿಸಿಕೊಂಡಿದೆ. ತೆಲುಗಿನಲ್ಲಿ ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಹಾಗೂ ಹಂಚಿಕೆದಾರ ದಿಲ್ ರಾಜು ಅವರು ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದಾರೆ.
ಕೇರಳದಲ್ಲಿ ‘ಎ4 ಎಂಟರ್​ಟೇನ್​​ಮೆಂಟ್’ ಸಿನಿಮಾನ ಹಂಚಿಕೆ ಮಾಡುತ್ತಿದೆ. ‘ಅನಿಮಲ್’, ‘ಪುಷ್ಪ 2’ ರೀತಿಯ ಸಿನಿಮಾಗಳನ್ನು ಕೇರಳ ರಾಜ್ಯದಲ್ಲಿ ಹಂಚಿಕೆ ಮಾಡಿದ ಅನುಭವ ಇವರಿಗೆ ಇದೆ.

ಇದನ್ನೂ ಓದಿ: ‘ಧುರಂಧರ್ 2’ ಚಿತ್ರಕ್ಕಿಂತ ‘ಟಾಕ್ಸಿಕ್’ ಚಿತ್ರಕ್ಕೆ ಸಿಕ್ತು ಹೆಚ್ಚುವರಿ 1200 ಪರದೆಗಳು?

ಅನಿಲ್ ತಡಾನಿ ಒಡೆತನದ ‘ಎಎ ಫಿಲ್ಮ್ಸ್’ ಉತ್ತರ ಭಾರತದ ಹಂಚಿಕೆ ಹಕ್ಕು ಪಡೆದಿದೆ. ಈ ಮೊದಲು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರವನ್ನು ಉತ್ತರ ಭಾರತದಲ್ಲಿ ಹಂಚಿಕೆ ಮಾಡಲು ಇವರು ಸಹಾಯ ಮಾಡಿದ್ದರು. ಈಗ ಯಶ್ ಅವರು ಅನಿಲ್ ಜೊತೆಗಿನ ಗೆಳೆತನವನ್ನು ಮುಂದುವರಿಸಿದ್ದಾರೆ. ಅವರಿಗೆ ‘ಟಾಕ್ಸಿಕ್’ ಚಿತ್ರದ ಉತ್ತರ ಭಾರತದ ಜವಾಬ್ದಾರಿ ನೀಡಲಾಗಿದೆ. ಇನ್ನು ವಿದೇಶದಲ್ಲಿ ಫಾರ್ಸ್​ ಫಿಲ್ಮ್ಸ್ ಹಂಚಿಕೆ ಮಾಡುತ್ತಿದೆ. ಅರಬ್ ರಾಷ್ಟ್ರಗಳಲ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

+5.350, +3.800: ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ – Kannada News | T20 World Cup 2026: The “India Effect” and Qualification Scenarios

ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಸೂಪರ್- 8 ಸುತ್ತಿನಲ್ಲಿ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ತಂಡಗಳು ಭರ್ಜರಿ ಜಯ ಸಾಧಿಸಿದೆ.  ಗ್ರೂಪ್-1 ರ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಟೀಮ್ ಇಂಡಿಯಾವನ್ನು 76 ರನ್​ಗಳಿಂದ ಸೋಲಿಸಿದರೆ, ದ್ವಿತೀಯ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ತಂಡ 107 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಎರಡು ತಂಡಗಳ ಭರ್ಜರಿ ಪ್ರದರ್ಶನದಿಂದಾಗಿ ಭಾರತ ತಂಡದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.

ಏಕೆಂದರೆ ಈ ಎರಡು ತಂಡಗಳು ಮುಂದಿನ ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದರೆ ಸೆಮಿಫೈನಲ್​ಗೇರುವುದು ಬಹುತೇಕ ಖಚಿತವಾಗಲಿದೆ. ಇದಕ್ಕೆ ಮುಖ್ಯ ಕಾರಣ ಉಭಯ ತಂಡಗಳ ನೆಟ್​ ರನ್ ರೇಟ್. ಇಲ್ಲಿ ಸೌತ್ ಆಫ್ರಿಕಾ ತಂಡವು +3.800 ನೆಟ್ ರನ್ ರೇಟ್ ಹೊಂದಿದ್ದರೆ, ವೆಸ್ಟ್ ಇಂಡೀಸ್ ತಂಡವು +5.350 ನೆಟ್ ರನ್ ರೇಟ್ ಹೊಂದಿದೆ.

ಈ ಎರಡು ತಂಡಗಳ ನೆಟ್ ರನ್​ ರೇಟ್ ಅನ್ನು ಹಿಂದಿಕ್ಕಲು ಟೀಮ್ ಇಂಡಿಯಾ ಮುಂದಿನ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಸಾಕಾಗದು. ಬದಲಾಗಿ ಅಮೋಘ ಗೆಲುವು ಅನಿವಾರ್ಯ. ಅಂದರೆ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕನಿಷ್ಠ 70 ರಿಂದ 80 ರನ್​ಗಳ ಅಂತರದಿಂದ ಗೆದ್ದರೆ ಮಾತ್ರ ನೆಟ್ ರನ್​ ರೇಟ್ ಪಾಸಿಟಿವ್ ಆಗಲಿದೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲೂ ಭರ್ಜರಿ ಜಯಗಳಿಸುವ ಮೂಲಕ ಮಾತ್ರ ಸೌತ್ ಆಫ್ರಿಕಾ ಹಾಗೂ ವಿಂಡೀಸ್ ಅನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಬಹುದು. ಹೀಗಾಗಿಯೇ ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ತಂಡಗಳ ಅತ್ಯುತ್ತಮ ಪ್ರದರ್ಶನ ಟೀಮ್ ಇಂಡಿಯಾದ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವ ಸಾಧ್ಯತೆಯಿದೆ.

ಟೀಮ್ ಇಂಡಿಯಾದ ‘ಸೆಮಿಫೈನಲ್‘ ಲೆಕ್ಕಾಚಾರ:

  • ಮೂರು ತಂಡಗಳ ಸಮಬಲದ ಭೀತಿ: ಒಂದು ವೇಳೆ ಭಾರತ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೂ, ವೆಸ್ಟ್ ಇಂಡೀಸ್ ತಂಡ ಸೌತ್ ಆಫ್ರಿಕಾವನ್ನು ಸೋಲಿಸಿದರೆ, ಮೂರು ತಂಡಗಳು ತಲಾ 4 ಅಂಕಗಳನ್ನು ಪಡೆಯುತ್ತವೆ. ಆಗ ರನ್ ರೇಟ್ ಆಧಾರದ ಮೇಲೆ ಭಾರತ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ (ಏಕೆಂದರೆ ಭಾರತದ NRR ಪ್ರಸ್ತುತ ತುಂಬಾ ಮೈನಸ್‌ನಲ್ಲಿದೆ).
  • ದೊಡ್ಡ ಅಂತರದ ಗೆಲುವಿನ ಅನಿವಾರ್ಯತೆ: ಭಾರತ ತನ್ನ ಮುಂದಿನ ಪಂದ್ಯಗಳಲ್ಲಿ (ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ) ಕೇವಲ ಗೆದ್ದರೆ ಸಾಲದು, ರನ್ ರೇಟ್ ಸುಧಾರಿಸಿಕೊಳ್ಳಲು ಸುಮಾರು 70-100 ರನ್‌ಗಳ ಬೃಹತ್ ಅಂತರದಿಂದ ಗೆಲ್ಲಬೇಕಿದೆ.
  • ಸೌತ್ ಆಫ್ರಿಕಾದ ಸಹಾಯ: ಭಾರತ ತಂಡದ ಸೆಮಿಫೈನಲ್ ಹಾದಿ ಸುಗಮವಾಗಬೇಕಿದ್ದರೆ, ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಆಗ ಭಾರತ ತನ್ನ ಮುಂದಿನ ಎರಡೂ ಪಂದ್ಯ ಗೆದ್ದರೆ ಸುಲಭವಾಗಿ 2ನೇ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಹೋಗಬಹುದು.

ಅಂದರೆ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್​ಗೇರಬೇಕಿದ್ದರೆ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಎರಡೂ ಮ್ಯಾಚ್​ಗಳಲ್ಲೂ ಗೆಲ್ಲಬೇಕು. ಒಂದು ವೆಸ್ಟ್ ಇಂಡೀಸ್ ವಿರುದ್ಧ ಸೋತು, ಝಿಂಬಾಬ್ವೆ ವಿರುದ್ಧ ಗೆದ್ದರೆ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಅಂದರೆ ಟೀಮ್ ಇಂಡಿಯಾ ತನ್ನ ಎರಡೂ ಪಂದ್ಯಗಳನ್ನು ನೆಟ್ ರನ್ ರೇಟ್ ಆಧಾರದ ಮೇಲೆ ಗೆಲ್ಲಬೇಕು. ಇಲ್ಲದಿದ್ದರೆ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಬರೋಬ್ಬರಿ 17 ಸಿಕ್ಸ್​… ಶಿಮ್ರಾನ್ ಸಿಡಿಲಬ್ಬರ

ಭಾರತದ ಮುಂದಿನ ಪಂದ್ಯಗಳು:

  • ಭಾರತ vs ಝಿಂಬಾಬ್ವೆ: ಫೆಬ್ರವರಿ 26, 2026 (ಚೆನ್ನೈ).
  • ಭಾರತ vs ವೆಸ್ಟ್ ಇಂಡೀಸ್: ಮಾರ್ಚ್ 1, 2026 (ಕೋಲ್ಕತ್ತಾ).

Source link