All posts by nagaraj11081993

ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರಿಗೂ ಬಿಎಂಟಿಸಿ ಗುಡ್ ನ್ಯೂಸ್: ಇನ್ಮುಂದೆ 80 ಕಿಮೀ ವ್ಯಾಪ್ತಿಯಲ್ಲಿ ಸಂಚಾರ! – Kannada News | BMTC Extends Bus Services Up to 80 KM: Big Relief for Bengaluru Rural Passengers

ಬೆಂಗಳೂರು, ಫೆಬ್ರವರಿ 23: ಬೆಂಗಳೂರು (Bangalore) ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಬೇಕು ಅಂದರೆ ಬಿಎಂಟಿಸಿ ಬಸ್ (BMTC Bus) ಬೇಕೇಬೇಕು. ರಾಜಧಾನಿಯ ಗಲ್ಲಿ ಗಲ್ಲಿಗೂ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡುತ್ತವೆ. ಆದರೆ ಇನ್ಮುಂದೆ ಬಿಎಂಟಿಸಿ ಬಸ್ಸುಗಳು ಬೆಂಗಳೂರು ಗ್ರಾಮಾಂತರ ಭಾಗಗಳಿಗೂ ಸಂಚಾರ ಮಾಡಲು ಸಜ್ಜಾಗಿವೆ. ಇಲ್ಲಿಯವರೆಗೆ ಬಿಎಂಟಿಸಿ ಬಸ್ಸುಗಳು 40 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಸಂಚಾರ ಮಾಡುತ್ತಿದ್ದವು. ಇನ್ಮುಂದೆ ರಾಮನಗರ, ಕನಕಪುರ, ನೆಲಮಂಗಲ-ಹೊಸಕೋಟೆ, ದೇವನಹಳ್ಳಿ- ದೊಡ್ಡಬಳ್ಳಾಪುರಕ್ಕೂ ಸಂಚಾರ ಮಾಡಲಿವೆ.

ಬಿಎಂಟಿಸಿ ಹೊಸ ನಿರ್ಧಾರ ಪ್ರಯಾಣಿಕರಿಗೂ ಖುಷಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ಪ್ರಯಾಣಿಕರು, ಗ್ರಾಮಾಂತರ ಭಾಗಗಳಿಗೂ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡುವುದರಿಂದ ಶಾಲೆ-ಕಾಲೇಜು, ಕೆಲಸಕ್ಕೆ ಹೋಗುವವರಿಗೆ ತುಂಬಾ ಸಹಾಯ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳು ಸೇರಿದಂತೆ ಒಟ್ಟು 6750 ಬಸ್ಸುಗಳಿವೆ. ಪ್ರತಿದಿನ 45 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, ಒಂದು ದಿನಕ್ಕೆ ಬಿಎಂಟಿಸಿ ಬಸ್​ಗಳು 13 ಲಕ್ಷ ಕಿಮೀ ಸಂಚಾರ ಮಾಡುತ್ತವೆ.

ಯಾವೆಲ್ಲ ಪ್ರದೇಶಗಳಿಗೆ ಬಿಎಂಟಿಸಿ ಬಸ್ ಸಂಚಾರ ವಿಸ್ತರಣೆ?

ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ಸ್ಟ್ಯಾಂಡ್​ನಿಂದ ರಾಮನಗರಕ್ಕೆ, ಬನಶಂಕರಿ ಬಸ್ ಸ್ಟ್ಯಾಂಡ್ ನಿಂದ ಕನಕಪುರಕ್ಕೆ, ಮೆಜಸ್ಟಿಕ್ ಕೆಂಪೇಗೌಡ ಬಸ್ ಸ್ಟ್ಯಾಂಡ್​ನಿಂದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರಕ್ಕೆ ಬಸ್ಸುಗಳು ಸಂಚಾರ ಮಾಡಲಿವೆ.

ಇದನ್ನೂ ಓದಿ: ಆತ್ಮಹತ್ಯೆ ತಡೆಗೆ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್​ಡಿ ಡೋರ್ ಬದಲಿಗೆ ಸ್ಟೀಲ್ ಬ್ಯಾರಿಕೇಡ್ ಮೊರೆ ಹೋದ ಬಿಎಂಆರ್​ಸಿಎಲ್

ಒಟ್ಟಿನಲ್ಲಿ, ಇಷ್ಟು ದಿನಗಳ ಕಾಲ ನಗರದೊಳಗೆ ಮಾತ್ರ ಸಂಚಾರ ಮಾಡುತ್ತಿದ್ದ ಬಿಎಂಟಿಸಿ ಬಸ್ಸುಗಳು ಇನ್ಮುಂದೆ ಬೆಂಗಳೂರು ಗ್ರಾಮಾಂತರ ಭಾಗಗಳಿಗೂ ಸಂಚಾರ ಮಾಡುವುದರಿಂದ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ದೊಡ್ಡಮಟ್ಟದಲ್ಲಿ ಸಹಾಯವಾಗುವುದರಲ್ಲಿ ಅನುಮಾನವಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಕೂಲ್ ಸಿಟಿ ಇನ್ಮುಂದೆ ಹಾಟ್ ಸಿಟಿ! ಬೆಂಗಳೂರಿಗೆ ಗರಿಷ್ಠ ತಾಪಮಾನದ ಅಲರ್ಟ್ – Kannada News | Bengaluru temperature: Heat wave alert in Bengaluru after March

ಕೂಲ್ ಸಿಟಿ ಇನ್ಮುಂದೆ ಹಾಟ್ ಸಿಟಿ! ಬೆಂಗಳೂರಿಗೆ ಗರಿಷ್ಠ ತಾಪಮಾನದ ಅಲರ್ಟ್

ಬೆಂಗಳೂರು, ಫೆಬ್ರವರಿ 23: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ (Weather Forecast) ಆವರಿಸಿದ್ದು, ನಿನ್ನೆಯಷ್ಟೇ ಮೋಡ ಕವಿದ ವಾತಾವರಣ ಕಾಣಿಸಿತ್ತು. ಆದರೆ ಇಂದು ಎಲ್ಲೆಡೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು, ಇನ್ನು ಕೆಲ ದಿನಗಳಲ್ಲಿ ಬೆಂಗಳೂರು ಬಿಸಿಲಿನ ಬೇಗೆಯಿಂದ ತತ್ತರಿಸಲಿದೆ ಎನ್ನಲಾಗಿದೆ. ರಾಜ್ಯದಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಬಿಸಿಲಿನ ತಾಪಕ್ಕೆ ತತ್ತರಿಸುತ್ತಿದೆ. ಕಳೆದ ಒಂದು ವಾರದಿಂದ ತಾಪಮಾನ ನಿರಂತರ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 38ರಿಂದ 39 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನೀವೇನು ಮಾಡಬೇಕು?

ನಗರದಲ್ಲಿ ಈಗಾಗಲೇ ಮಧ್ಯಾಹ್ನ ವೇಳೆಯಲ್ಲಿ ಹೊರಗೆ ಸಂಚಾರ ಮಾಡುವುದು ಕಷ್ಟಕರವಾಗಿದ್ದು, ಜನರು ಏರ್ ಕೂಲರ್ ಮತ್ತು ಫ್ಯಾನ್‌ಗಳ ಸಹಾಯಕ್ಕೆ ಮೊರೆ ಹೋಗಿದ್ದಾರೆ. ಹವಾಮಾನ ಇಲಾಖೆ ತಜ್ಞರ ಪ್ರಕಾರ, ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು,ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಕೇಸ್! ಏನಿದು ಹೊಸ ಕೇಸ್? ಇಲ್ಲಿದೆ ನೋಡಿ – Kannada News | Another FIR Filed Against Activist Snehamayi Krishna in Bengaluru: Fresh Case Registered at Basaveshwaranagar

ಬೆಂಗಳೂರು, ಫೆಬ್ರವರಿ 23: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಕೇಸ್​​ನಲ್ಲಿ ತೀವ್ರ ಹೋರಾಟ ನಡೆಸಿದ್ದ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರನ್ನು 2 ದಿನ ಹಿಂದಷ್ಟೇ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಿದ್ದರು. ಮುಡಾ ಮಾಜಿ ಆಯುಕ್ತ ನಟೇಶ್ ಅವರ ಆಡಿಯೋ ಬಹಿರಂಗ ವಿಚಾರವಾಗಿ ಈ ಕ್ರಮ ಆಗಿತ್ತು. ಇದೀಗ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಪವಿತ್ರಾ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ಹೊಸ ಎಫ್‌ಐಆರ್ ದಾಖಲಿಸಲಾಗಿದೆ.

ಪವಿತ್ರಾ ಅವರ ಪತಿ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ಮರುತನಿಖೆಗೆ ಆಗ್ರಹಿಸಿದ್ದ ಸ್ನೇಹಮಯಿ ಕೃಷ್ಣ, ಮೈಲಾರಪ್ಪ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆಯುವಂತೆ ಪವಿತ್ರಾ ಅವರಿಗೆ ತಾಕೀತು ಮಾಡಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ಸ್ನೇಹಮಯಿ ಕೃಷ್ಣ ಅವರು 2025ರ ಡಿಸೆಂಬರ್ 5ರಂದು ಪವಿತ್ರಾ ಅವರ ಮನೆ ವಿಳಾಸಕ್ಕೆ ಪತ್ರವೊಂದನ್ನು ಬರೆದಿದ್ದರು. ಈ ಪತ್ರದ ಮೂಲಕ ಒತ್ತಡ ಹೇರಿದ್ದರಿಂದ ತಮ್ಮ ನೆಮ್ಮದಿ ಹಾಳಾಗಿದೆ ಎಂದು ಪವಿತ್ರಾ ದೂರು ನೀಡಿದ್ದಾರೆ.

ಈ ಹಿಂದೆ ಬಸವೇಶ್ವರ ನಗರ ಪೊಲೀಸರು ಈ ಸಂಬಂಧ ಎನ್‌ಸಿಆರ್ ದಾಖಲಿಸಿದ್ದರು. ಇದೀಗ ನ್ಯಾಯಾಲಯದ ಅನುಮತಿಯ ಮೇರೆಗೆ ಸ್ನೇಹಮಯಿ ಕೃಷ್ಣ ಮತ್ತು ಮೈಲಾರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪವಿತ್ರಾ ನೀಡಿದ ದೂರಿನ ಎರಡು ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಜಬಲ್ಪುರ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆಯ ದೊಡ್ಡ ಭಾಗ ಕುಸಿತ – Kannada News | Partial Railway Bridge Collapse on National Highway 45 Sparks Safety Concerns in MP

ಜಬಲ್ಪುರ, ಫೆಬ್ರವರಿ 23: ಮಧ್ಯಪ್ರದೇಶದ ರಾಷ್ಟ್ರೀಯ ಹೆದ್ದಾರಿ 45 ರಲ್ಲಿರುವ ಶಹಪುರ ಸೇತುವೆಯ ದೊಡ್ಡ ಭಾಗ ಭಾನುವಾರ ಕುಸಿದಿದೆ. ಅದೃಷ್ಟವಶಾತ್, ಸೇತುವೆ ಕುಸಿದಾಗ ಸ್ಥಳದಲ್ಲಿ ಯಾವುದೇ ವಾಹನಗಳು ಇರಲಿಲ್ಲ. ಮೇಲ್ಸೇತುವೆ ಕುಸಿದ ಸ್ಥಳದ ಬಳಿ ರೈಲ್ವೆ ಕ್ರಾಸಿಂಗ್ ಇದೆ. ಈ ಸೇತುವೆಯನ್ನು ರೈಲ್ವೆ ಕ್ರಾಸಿಂಗ್ ಮೇಲೆಯೇ ನಿರ್ಮಿಸಲಾಗಿದೆ. ಡಿಸೆಂಬರ್‌ನಲ್ಲಿ, ಇದೇ ಸೇತುವೆಯ ಮತ್ತೊಂದು ಭಾಗವೂ ಕುಸಿದಿತ್ತು. ಈ ಸೇತುವೆ ಜಬಲ್‌ಪುರದಿಂದ ಕೇವಲ 30-35 ಕಿಲೋಮೀಟರ್ ದೂರದಲ್ಲಿದೆ. ಸೇತುವೆ ತುಂಬಾ ಹಳೆಯದಲ್ಲ, ಇದು ಸುಮಾರು ಐದು ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಆಂಧ್ರಮುಖ ಬೈಪಾಸ್‌ನಿಂದ ಹಿರಣ್ ನದಿಯವರೆಗಿನ 54 ಕಿಲೋಮೀಟರ್ ಉದ್ದದ ರಸ್ತೆಯನ್ನು ಮಧ್ಯಪ್ರದೇಶ ರಸ್ತೆ ಅಭಿವೃದ್ಧಿ ನಿಗಮದ (MPRDC) ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಗಿದೆ. ಪ್ಯಾಕೇಜ್ 1 ರ ಅಡಿಯಲ್ಲಿ ರಸ್ತೆ ಮತ್ತು ಫ್ಲೈಓವರ್‌ಗೆ ಸುಮಾರು 628.45 ಕೋಟಿ ರೂ. ಖರ್ಚು ಮಾಡಲಾಗಿದೆ. ನಿರ್ಮಾಣವು ನವೆಂಬರ್ 2015 ರಲ್ಲಿ ಪ್ರಾರಂಭವಾಯಿತು ಮತ್ತು ಜನವರಿ 2020 ರಲ್ಲಿ ಪೂರ್ಣಗೊಂಡಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮದುವೆಗೆ ಎರಡು ವಾರ ಇರುವಾಗಲೇ ಅಲ್ಲು ಮನೆಯಲ್ಲಿ ಸಂಭ್ರಮ ಆರಂಭ; ಅದ್ದೂರಿ ಪಾರ್ಟಿ – Kannada News | Allu Sirish and Nayaniika Wedding: Grand Pre Wedding Bash by Allu Arjun and Sneha Reddy

ಅಲ್ಲು ಅರ್ಜುನ್ (Allu Arjun) ಸಹೋದರು ಅಲ್ಲು ಸಿರಿಶ್ ಅವರು ಮಾರ್ಚ್ 6ರಂದು ವಿವಾಹ ಆಗುತ್ತಿದ್ದಾರೆ. ತಾವು ಪ್ರೀತಿಸುತ್ತಿದ್ದ ನಯಾನಿಕಾ ಜೊತೆ ಅವರು ವಿವಾಹ ಆಗುತ್ತಿದ್ದಾರೆ. ಸದ್ಯ ಸಂಭ್ರಮ ಜೋರಾಗಿದೆ. ಈ ಮೊದಲು ದುಬೈನಲ್ಲಿ ಕುಟುಂಬದವರು ಯಾಚ್​ ಪಾರ್ಟಿ ಮಾಡಿದ್ದರು. ಈಗ ಹೈದರಾಬಾದ್​​ನಲ್ಲಿ ದೊಡ್ಡ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹಾ ರೆಡ್ಡಿ ಇದನ್ನು ಹೋಸ್ಟ್ ಮಾಡಿದ್ದರು. ವಿವಾಹಕ್ಕೆ ಎರಡು ವಾರ ಇರುವಾಗಲೇ ಪಾರ್ಟಿ ಜೋರಾಗಿದೆ.

ಅಲ್ಲು ಅರ್ಜುನ್ ದಂಪತಿ ಆಯೋಜನೆ ಮಾಡಿದ ಪಾರ್ಟಿಗೆ ರಾಮ್ ಚರಣ್, ಉಪಾಸನಾ ಕೊನಿಡೆಲಾ, ಶ್ರೀಲೀಲಾ, ಮಿಹೀಕಾ ಬಜಾಜ್ ಹಾಗೂ ಇತರರು ಭಾಗಿ ಆಗಿದ್ದರು. ಈಗ ಅಲ್ಲು ಸಿರಿಶ್ ಅವರು ಪಾರ್ಟಿ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಇದನ್ನು ಮ್ಯಾಡ್ ಪಾರ್ಟಿ ಎಂದು ಅವರು ಕರೆದಿದ್ದಾರೆ.  ಅಲ್ಲು  ಸಿರಿಶ್ ಅವರು ಪಾರ್ಟಿಯ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆಯೋಜನೆ ಮಾಡಿದ ಪಾರ್ಟಿಯ ಡೆಕೋರೇಷನ್ ಅದ್ಭುತವಾಗಿತ್ತು.

ಅಲ್ಲು ಸಿರಿಶ್ ಅವರು ಭಾವಿ ಪತ್ನಿ ನಯಾನಿಕಾ ಜೊತೆ ಸ್ಟನ್ನಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಅಲ್ಲು ಅರ್ಜುನ್ ಹಾಗೂ ಸ್ನೆಹಾ ರೆಡ್ಡಿ ನನಗೆ ಹಾಗೂ ನಯಾನಿಕಾಗಾಗಿ ಎಂತಹ ಮ್ಯಾಡ್ ಪಾರ್ಟಿ ಆಯೋಜನೆ ಮಾಡಿದ್ದರು. ಎಲ್ಲರೂ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದವು. ಸೆಟ್ ಕೂಡ ಅದ್ಭುತವಾಗಿದ್ದವು’ ಎಂದು ಅಲ್ಲು ಸಿರಿಶ್ ಹೇಳಿದ್ದಾರೆ. ಈ ಪಾರ್ಟಿಯನ್ನು ಅದ್ಭುತವಾಗಿ ಹೋಸ್ಟ್ ಮಾಡಿದ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿಗೂ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಭೇಟಿಗೆ ಇವೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?

ಅಲ್ಲು ಸಿರಿಶ್ ಹಾಗೂ ನಯಾನಿಕಾ ಅವರು ಕಳೆದ ವರ್ಷ ಅಕ್ಟೋಬರ್ 31ರಂದು ನಿಶ್ಚಿತಾರ್ಥ ಮಾಡಿಕೊಂಡರು. ಅಲ್ಲು ಅರ್ಜುನ್ ಹಾಗೂ ಅವರ ಕುಟುಂಬ ಇದರಲ್ಲಿ ಭಾಗಿ ಆಯಿತು. ಈಗ ಮಾರ್ಚ್ 6ರಂದು ಈ ಜೋಡಿ ವಿವಾಹ ಆಗುತ್ತಿದೆ. ಅಲ್ಲು ಅರ್ಜುನ್ ಕೂಡ ಇದೇ ದಿನಾಂಕದಂದು ಮದುವೆ ಆಗಿದ್ದರು ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಂಡ ಟೀಮ್ ಇಂಡಿಯಾ – Kannada News | Biggest defeat for India in T20 World Cups

T20 World Cup 2026: ಟಿ20 ವಿಶ್ವಕಪ್ ಶುರುವಾಗಿ 19 ವರ್ಷಗಳಾಗಿವೆ. ಈ ಹತ್ತೊಂಬತ್ತು ವರ್ಷಗಳಲ್ಲಿ 10 ಟಿ20 ವಿಶ್ವಕಪ್ ಟೂರ್ನಿ ನಡೆದಿದೆ. ಈ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಒಮ್ಮೆಯೂ 50 ಕ್ಕಿಂತ ಹೆಚ್ಚಿನ ರನ್ ಗಳ ಅಂತರದಿಂದ ಸೋತಿರಲಿಲ್ಲ. ಆದರೆ ಈ ಬಾರಿ ಭಾರತ ತಂಡಕ್ಕೆ ಹೀನಾಯ ಸೋಲುಣಿಸುವಲ್ಲಿ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿದೆ.

Source link

ಮದುವೆ ಮುಗಿಸಿ ಹಿಂದಿರುವಾಗ ಪತಿ ಹಣೆಗೆ ಗನ್ ಇಟ್ಟು ನವ ವಧುವನ್ನು ಅಪಹರಿಸಿದ ಮಾಜಿ ಪ್ರೇಮಿ – Kannada News | Odisha: Ex Lover Abducts New Bride at Gunpoint After Wedding Ceremony

ಒಡಿಶಾ, ಫೆಬ್ರವರಿ 23: ಮದುವೆ ಮುಗಿಸಿಕೊಂಡು ಪತಿಯೊಂದಿಗೆ ಮನೆಗೆ ತೆರಳುತ್ತಿದ್ದ ನವ ವಧುವನ್ನು ಮಾಜಿ ಪ್ರೇಮಿ ಅಪಹರಿಸಿರುವ ಘಟನೆ ಒಡಿಶಾದ ಬೋಲಂಗೀರ್ ಜಿಲ್ಲೆಯಲ್ಲಿ ನಡೆದಿದೆ. ದಂಪತಿ ಇದ್ದ ಕಾರಿಗೆ ಮೂವರು ಅಡ್ಡ ಬಂದು, ಇಬ್ಬರನ್ನೂ ಕಾರಿಂದ ಇಳಿಸಿ ಆಕೆಯ ಪತಿಯ ಹಣೆಗೆ ಗನ್ ಇಟ್ಟು ಆಕೆಯನ್ನು ಅಪಹರಣ(Kidnap) ಮಾಡಿದ್ದಾನೆ. ಬೋಲಂಗಿರ್ ಜಿಲ್ಲೆಯ ನಿವಾಸಿ ಹರಿಬಂಧು ಪಟೇಲ್ ಎಂಬ ವರ ಮದುವೆಗಾಗಿ ಕಾಂತಮಲ್‌ಗೆ ಹೋಗಿದ್ದ, ಮದುವೆಯ ವಿಧಿವಿಧಾನಗಳು ಮುಗಿದ ನಂತರ, ವಧು-ವರರು ಕುಟುಂಬ ಸದಸ್ಯರೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ, ತರ್ಭಾ ರಸ್ತೆಯ ಬಡಬಂಧ ಬಳಿ ಅವರ ವಾಹನವನ್ನು ಕೆಲವರು ಅಡ್ಡಗಟ್ಟಿದ್ದರು.

ಆರೋಪಿಯು ಇತರ ಇಬ್ಬರೊಂದಿಗೆ ಬಂದು ತರ್ಭಾ ರಸ್ತೆಯಲ್ಲಿ ವರನಿಗೆ ಬಂದೂಕಿನಿಂದ ಬೆದರಿಕೆ ಹಾಕಿ ವಧುವನ್ನು ಬಲವಂತವಾಗಿ ಕರೆದುಕೊಂಡು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ವರ ಮತ್ತು ಅವನ ಸಹಚರರು ಸಿಲುಕಿಕೊಂಡು ಅಸಹಾಯಕರಾಗಿದ್ದರು.

ಘಟನೆಯ ನಂತರ, ವರ ತರ್ಭಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ, ತನ್ನ ಹೆಂಡತಿಯನ್ನು ಅಪಹರಿಸಿದಾಗ ತನೆಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾಗಿ ಪೊಲೀಸರ ಬಳಿ ಹೇಳಿದ್ದಾರೆ. ತರ್ಭಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್-ಇನ್-ಚಾರ್ಜ್ (ಐಐಸಿ) ಅನಿತಾ ಕಿಡೋ ಮಾತನಾಡಿ, ಹರಿಬಂಧು ಪಟೇಲ್ ತಮ್ಮ ಮದುವೆಗಾಗಿ ಕಾಂತಮಲ್‌ಗೆ ಹೋಗಿದ್ದರು.

ಮತ್ತಷ್ಟು ಓದಿ: ಉದ್ಯಮಿ ಕಿಡ್ನ್ಯಾಪ್: 1 ಕೋಟಿ ರೂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿಗಳ ಕೈಗೆ ಸಿಕ್ಕಿದ್ದು ಚಿಪ್ಪು

ಸಮಾರಂಭದ ನಂತರ, ದಂಪತಿ ಹಿಂತಿರುಗುತ್ತಿದ್ದಾಗ, ತರ್ಭಾ ರಸ್ತೆಯ ಬಡಬಂಧ ಬಳಿ ಮೂವರು ವ್ಯಕ್ತಿಗಳು ಅವರ ವಾಹನವನ್ನು ಅಡ್ಡಗಟ್ಟಿ, ಬಂದೂಕು ತೋರಿಸಿ ಬೆದರಿಸಿ ವಧುವನ್ನು ಅಪಹರಿಸಿದ್ದಾರೆ ಎಂದು ಅವರು ಹೇಳಿದರು.
ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಮಹಿಳೆಯನ್ನು ರಕ್ಷಿಸಲು ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಆತಂಕವನ್ನು ಹುಟ್ಟುಹಾಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಪರ್ಸ್​​ನಲ್ಲಿ ಏನೇನು ಇರಬೇಕು ಯಾವ ವಸ್ತುಗಳು ಇರಬಾರದು? – Kannada News | Daily Devotional: The Significance of Your Wallet, What to Keep and Avoid for Prosperity

ಬೆಂಗಳೂರು, ಫೆಬ್ರವರಿ​ 23​: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಪರ್ಸ್​​ನಲ್ಲಿ ಏನೇನು ಇರಬೇಕು ಯಾವ ವಸ್ತುಗಳು ಇರಬಾರದುಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ ಪರ್ಸ್ ಅಥವಾ ವಾಲೆಟ್ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಕೇವಲ ಹಣ ಸಂಗ್ರಹಿಸುವ ಸಾಧನವಾಗಿ ನೋಡದೆ, ನಮ್ಮ ಆರ್ಥಿಕ ಸ್ಥಿತಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪರ್ಸ್ ಇಟ್ಟುಕೊಳ್ಳುವುದು ಸಮೃದ್ಧಿ ಮತ್ತು ಲಕ್ಷ್ಮಿಯ ಸಂಕೇತ ಎಂದಿದ್ದಾರೆ.

ಪರ್ಸ್‌ನ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹರಿದಿರುವ ಅಥವಾ ತೂತಾಗಿರುವ ಪರ್ಸ್ ಅನ್ನು ಎಂದಿಗೂ ಬಳಸಬಾರದು. ಇದು ಧನಾಕರ್ಷಣೆಯನ್ನು ಕುಗ್ಗಿಸುತ್ತದೆ. ಅಲ್ಲದೆ, ಪರ್ಸ್‌ನಲ್ಲಿ ಔಷಧಗಳು, ಹೋಟೆಲ್ ಬಿಲ್‌ಗಳು, ಸಾಲದ ಪಟ್ಟಿಗಳು ಅಥವಾ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಯಾವುದೇ ಕಾಗದಪತ್ರಗಳನ್ನು ಇಡಬಾರದು. ಹಣವನ್ನು ಮಡಚದೆ ನೇರವಾಗಿ ಇಡುವುದು ಸೂಕ್ತ. ಒಂದು ಅಥವಾ ಎರಡು ನಾಣ್ಯಗಳು ಮತ್ತು ಉಪಯೋಗಿಸದ ನೂರು ರೂಪಾಯಿ ನೋಟನ್ನು ಪರ್ಸ್‌ನಲ್ಲಿ ಕಡ್ಡಾಯವಾಗಿ ಇಡುವುದು ಶುಭಕರ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Source link

Horoscope Today 23 February​: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 23, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ಷಷ್ಠಿ ಮತ್ತು ಭರಣಿ ನಕ್ಷತ್ರದ ವಿಶೇಷ ದಿನವಾಗಿದೆ.

ಇಂದಿನ ಪ್ರಮುಖ ಗ್ರಹಗಳ ಸಂಚಾರವೆಂದರೆ ಕುಜ ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಿರುವುದು. ಇದು ಏಪ್ರಿಲ್ 2ರ ತನಕ ಕುಂಭ ರಾಶಿಯಲ್ಲಿರುತ್ತದೆ. ಈ ಕುಜ ಗ್ರಹದ ಪ್ರಭಾವವು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ಗುರೂಜಿ ತಿಳಿಸಿದ್ದಾರೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಮೇಷ ರಾಶಿಯಲ್ಲಿ ಸಂಚರಿಸುತ್ತಾನೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

‘ಟಾಕ್ಸಿಕ್’ ಚಿತ್ರದ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಆರ್​​ಜಿವಿ; ಚಳಿಬಿಡಿಸಿದ ಕನ್ನಡಿಗರು ‘ಟಾಕ್ಸಿಕ್’ ಚಿತ್ರದ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಆರ್​​ಜಿವಿ; ಸರಿಯಾಗಿ ಚಳಿಬಿಡಿಸಿದ ಕನ್ನಡಿಗರು  – Kannada News | RGV vs. Toxic: Kannada Fans Troll Ram Gopal Varma Over Controversial Movie Comments

ರಾಮ್​ ಗೋಪಾಲ್ ವರ್ಮ (RGV) ಒಂದು ಕಾಲದಲ್ಲಿ ಒಳ್ಳೊಳ್ಳೆಯ ಸಿನಿಮಾ ನೀಡಿದವರು. ಆದರೆ, ಈಗ ಅವರ ಬಳಿ ಅದು ಸಾಧ್ಯವಾಗುತ್ತಿಲ್ಲ. ಅವರ ಬತ್ತಳಿಕೆಯಿಂದ ಚೆನ್ನಾಗಿರೋ ಸಿನಿಮಾ ಬರದೆ ಯಾವುದೋ ಕಾಲವೇ ಆಗಿ ಹೋಗಿದೆ. ಆದರೆ, ಇದಕ್ಕೆಲ್ಲ ಅವರು ತಲೆಕೆಡಿಸಿಕೊಂಡಿಲ್ಲ. ಸಿನಿಮಾ ಮಾಡದೆ ಇದ್ದರೂ ಸದಾ ಪ್ರಚಾರದಲ್ಲಿ ಇರೋದು ಹೇಗೆ ಎಂಬುದನ್ನು ಅವರು ಕಂಡು ಹಿಡಿದುಕೊಂಡಿದ್ದಾರೆ. ಈಗ ಅದೇ ರೀತಿ ಮಾಡಲು ಹೋಗಿ ಟ್ರೋಲ್ ಆಗಿದ್ದಾರೆ. ಆ ಬಳಿಕ ಅದಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

ಮಾರ್ಚ್ 19ರಂದು ‘ಟಾಕ್ಸಿಕ್’ ಹಾಗೂ ‘ಧುರಂದರ್ 2’ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿವೆ. ಈ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ. ಈ ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿರುವುದರಿಂದ ಸಹಜವಾಗಿ ಒಂದು ಸಿನಿಮಾಗೆ ನಷ್ಟ ಆಗುತ್ತದೆ ಎಂಬ ನಂಬಿಕೆ ಅನೇಕರದ್ದು. ಆರ್​​ಜಿವಿ ಕೂಡ ಇದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಆದರೆ, ಪ್ರಮುಖವಾಗಿ ಅವರಿಗೆ ‘ಟಾಕ್ಸಿಕ್’ ಬಗ್ಗೆ ದ್ವೇಷ ಇದ್ದಂತೆ ಇದೆ. ಅವರು ಮೊದಲಿನಿಂದಲೂ ಸಿನಿಮಾ ಬಗ್ಗೆ ನೆಗೆಟಿವ್ ವಿಷಯ ಸ್ಪ್ರೆಡ್ ಮಾಡುವ ಕೆಲಸ ಮಾಡುತ್ತಿದ್ದಾರೆ.

‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ರಿಲೀಸ್ ಆಗುತ್ತಿದೆ. ‘ಧುರಂದರ್’ ಕಲೆಕ್ಷನ್ ಎದುರು ‘ಕೆಜಿಎಫ್ 2’ ಕಲೆಕ್ಷನ್ ತುಂಬಾನೇ ಸಣ್ಣದಾಗಿ ಕಾಣಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ‘ಧುರಂಧರ್ 2’ ಎದುರು ‘ಟಾಕ್ಸಿಕ್’ ಬಂದರೆ ಯಾವ ರೀತಿಯಲ್ಲಿ ಇರಬಹುದು ಎಂದು ಊಹಿಸಿ ಎಂಬುದು ಅವರ ಮಾತಿನ ಅರ್ಥ.

‘ಈಗ ರಿಲೀಸ್ ಆಗುತ್ತಿರುವ ಸಿನಿಮಾಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಧುರಂಧರ್ ಪ್ರೇಕ್ಷಕರ ಬುದ್ಧಿಮತ್ತೆಯನ್ನು ಗೌರವಿಸುತ್ತದೆ ಮತ್ತು ಟಾಕ್ಸಿಕ್ ಜನರ ಮೂರ್ಖತನವನ್ನು ಊಹಿಸುತ್ತದೆ. ಕೆಜಿಎಫ್ 2 ಒಂದು ಸ್ಥಳೀಯ ಚಿತ್ರವಾಗಿದ್ದು, ಅದು ಜನಸಾಮಾನ್ಯರಲ್ಲಿನ ಮೂರ್ಖತನವನ್ನು ಟಾರ್ಗೆಟ್ ಮಾಡಿತ್ತು. ಧುರಂಧರ್ ಜನಸಾಮಾನ್ಯರಲ್ಲಿ ಬುದ್ಧಿವಂತಿಕೆಯನ್ನು ಟಾರ್ಗೆಟ್ ಮಾಡಿತ್ತು’ ಎಂದಿದ್ದಾರೆ. ಈ ಮೊದಲು ಆರ್​​ಜಿವಿ ‘ಕೆಜಿಎಫ್ 2’ ಚಿತ್ರವನ್ನು ಹೊಗಳಿ ಮಾಡಿದ ಟ್ವೀಟ್​ನ ತೋರಿಸಿ ಅವರಿಗೆ ಪಾಠ ಹೇಳಿಕೊಡಲಾಗಿದೆ.

ಈಗ ಈ ವಿಷಯದಲ್ಲಿ ಆರ್​​ಜಿವಿಯನ್ನು ಟ್ರೋಲ್ ಮಾಡಲಾಗಿದೆ. ಆ ಬಳಿಕ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಅರ್ಥವಾಗದ ಎಲ್ಲಾ ಡಂಬೋಗಳಿಗೆ, ನಾನು ಸ್ಪಷ್ಟಪಡಿಸಲು ಬಯಸುವುದು ಏನೆಂದರೆ, ‘2 ಬಿಡುಗಡೆಗಳ ಸಂದರ್ಭದಲ್ಲಿ, ನಾನು ಸಿನಿಮಾದ ಶೈಲಿಗಳ ಬಗ್ಗೆ ಮಾತನಾಡುತ್ತಿದ್ದೇನೆಯೇ ಹೊರತು ನಿರ್ದಿಷ್ಟವಾಗಿ ಒಂದು ಚಿತ್ರದ ಬಗ್ಗೆ ಅಲ್ಲ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:02 am, Mon, 23 February 26

Source link