ಪಿಯುಸಿ ಹಾಗೂ ಸಿಇಟಿ ವಿದ್ಯಾರ್ಥಿಗಳಿಗೆ ಕೆಇಎ ಬಿಗ್ ರಿಲೀಫ್: ಇನ್ಮುಂದೆ ‘ಒಂದು ಅರ್ಜಿ, ಎರಡು ಪರೀಕ್ಷೆ’; ಸಾಲು ಸಾಲು ಎಡವಟ್ಟುಗಳಿಗೆ ಬ್ರೇಕ್ – Kannada News | KEA Streamlines UG CET and 2nd PU Application: New Integrated System Launched
ಬೆಂಗಳೂರು, ಜೂ.13: ದ್ವಿತೀಯ ಪಿಯುಸಿ ಹಾಗೂ ಸಿಇಟಿ (UG-CET) ಪರೀಕ್ಷೆ ಬರೆಯುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿ ಸುದ್ದಿ ನೀಡಿದೆ. ಪ್ರತಿ ವರ್ಷ ಸಿಇಟಿ ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಸಮಸ್ಯೆ, ತಪ್ಪು ಮಾಹಿತಿ ಸಲ್ಲಿಕೆಯಂತಹ ಸಾಲು ಸಾಲು ಅವಾಂತರಗಳಿಂದ ಕಂಗಾಲಾಗುತ್ತಿದ್ದ ವಿದ್ಯಾರ್ಥಿಗಳ ನೆರವಿಗೆ ಧಾವಿಸಿರುವ ಪ್ರಾಧಿಕಾರ, ಇನ್ಮುಂದೆ ಪಿಯುಸಿ ಹಾಗೂ ಸಿಇಟಿ ಎರಡಕ್ಕೂ ಸೇರಿ ‘ಒಂದೇ ಅರ್ಜಿ’ ಸಲ್ಲಿಸುವ ಕ್ರಾಂತಿಕಾರಿ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ವಿದ್ಯಾರ್ಥಿಗಳಿಗೆ ಸಿಇಟಿ ಬಗ್ಗೆ…