All posts by nagaraj11081993

ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದಲ್ಲದೆ, ಬಿಟ್ಟುಕಳುಹಿಸಿದ ಪೊಲೀಸರನ್ನೇ ನಿಂದಿಸಿದಾತನ ವಿರುದ್ಧ ಎಫ್​ಐಆರ್

ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದಲ್ಲದೆ, ಬಿಟ್ಟುಕಳುಹಿಸಿದ ಪೊಲೀಸರನ್ನೇ ನಿಂದಿಸಿದಾತನ ವಿರುದ್ಧ ಎಫ್​ಐಆರ್

ದೇವನಹಳ್ಳಿ, ಮಾರ್ಚ್ 31: ಸಂಚರಿಸುತ್ತಿದ್ದ ವಿಮಾನದಲ್ಲಿ ತುರ್ತು ನಿರ್ಗಮನದ ಬಾಗಿಲು (Emergency Door) ತೆರೆಯಲು ಯತ್ನಿಸಿ ಆತಂಕ ಸೃಷ್ಟಿಸಿದ್ದ ಮಹಾರಾಷ್ಟ್ರ ಮೂಲದ ಪ್ರಯಾಣಿಕನೊಬ್ಬ, ಬುದ್ಧಿಹೇಳಿ ಬಿಟ್ಟು ಕಳುಹಿಸಿದ ಬೆಂಗಳೂರು (Bangalore) ಏರ್​ಪೋರ್ಟ್​ ಪೊಲೀಸರ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸದ್ಯ ಆರೋಪಿಯ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಅಚಾತುರ್ಯದಿಂದ ತಪ್ಪು ಮಾಡಿರಬಹುದು ಎಂದು ಬೆಂಗಳೂರು ಏರ್​ಪೋರ್ಟ್ ಪೊಲೀಸರು ಆತನ ವಿರುದ್ಧ ಎನ್​​ಸಿಆರ್ (Non-Cognizable Report) ಅಥವಾ ಗಂಭೀರವಲ್ಲದ ಪ್ರಕರಣ ದಾಖಲಿಸಿ ಬಿಟ್ಟು ಕಳುಹಿಸಿದ್ದರು. ಆದರೆ, ಠಾಣೆಯಿಂದ ಹೊರಬರುತ್ತಿದ್ದಂತೆಯೇ ಆತ ಮತ್ತೆ ತನ್ನ ಅಸಲಿ ಬುದ್ಧಿ ಪ್ರದರ್ಶಿಸಿದ್ದ.

ಘಟನೆಯ ವಿವರ

ಮಾರ್ಚ್ 22ರಂದು ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಉತ್ಕರ್ಷ್ ಗೌತಮ್ ಎಂಬ ಪ್ರಯಾಣಿಕ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ. ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಏರ್‌ಲೈನ್ಸ್ ಸಿಬ್ಬಂದಿ ಈತನನ್ನು ಕೆಐಎಬಿ (KIAB) ಪೊಲೀಸರ ವಶಕ್ಕೆ ನೀಡಿದ್ದರು. ಪೊಲೀಸರು ಈತನಿಗೆ ಬುದ್ಧಿವಾದ ಹೇಳಿ ಎನ್‌ಸಿಆರ್ (NCR) ದಾಖಲಿಸಿ ಕಳುಹಿಸಿಕೊಟ್ಟಿದ್ದರು.

ಪೊಲೀಸರ ವಿರುದ್ಧವೇ ಟ್ವೀಟ್

ಪೊಲೀಸ್ ಠಾಣೆಯಿಂದ ಹೊರಬಂದ ಬೆನ್ನಲ್ಲೇ ಆರೋಪಿ ಉತ್ಕರ್ಷ್ ತನ್ನ ಎಕ್ಸ್ (X) ಖಾತೆಯಲ್ಲಿ ಬೆಂಗಳೂರು ಪೊಲೀಸರನ್ನು ನಿಂದಿಸಿದ್ದಾನೆ. ‘Mumbai Police please Arrest @ Blr City Police Bustards’ ಎಂದು ಟ್ವೀಟ್ ಮಾಡಿದ್ದಲ್ಲದೆ, ಪೊಲೀಸರು ತನ್ನನ್ನು 4 ಗಂಟೆಗಳ ಕಾಲ ಸೆಲ್‌ನಲ್ಲಿ ಕೂರಿಸಿ ಹಿಂಸೆ ನೀಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದ.

ಇದನ್ನೂ ಓದಿ: ದಾರಿಯುದ್ಧಕ್ಕೂ ಯುವತಿಯ ಮೈಮುಟ್ಟಿ ಅಸಭ್ಯ ವರ್ತನೆ: ರಾಪಿಡೋ ಬೈಕ್ ಚಾಲಕ ಮೊಹಮ್ಮದ್ ಖಾಜಾ ಬಂಧನ

ಟ್ವೀಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಎಫ್‌ಐಆರ್ ಜಡಿಯುತ್ತಲೇ ಆರೋಪಿ ತನ್ನೆಲ್ಲಾ ಟ್ವೀಟ್ ಡಿಲೀಟ್ ಮಾಡಿ ತಲೆಮರೆಸಿಕೊಂಡಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಇರಾನ್​​ನ ಇಸ್ಫಹಾನ್​ನಲ್ಲಿ ಅಮೆರಿಕ-ಇಸ್ರೇಲ್ ದಾಳಿ, ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್, ಮಾರ್​ಚ್​ 31: ಇರಾನ್​ನಲ್ಲಿ ಇಂದು(ಮಾರ್ಚ್​31) ಮುಂಜಾನೆ ಭಾರಿ ಸ್ಫೋಟ ಸಂಭವಿಸಿದೆ. ಇರಾನ್​ನ ಇಸ್ಫಹಾನ್​ನಲ್ಲಿ ಇಸ್ರೇಲ್-ಅಮೆರಿಕ ದಾಳಿ ನಡೆಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 2.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಮತ್ತು ಬದ್ರ್ ಮಿಲಿಟರಿ ವಾಯುನೆಲೆಯ ನೆಲೆಯಾಗಿರುವ ಇರಾನ್ ನಗರವಾದ ಇಸ್ಫಹಾನ್‌ನಲ್ಲಿರುವ ಪ್ರಮುಖ ಶಸ್ತ್ರಾಸ್ತ್ರ ಡಿಪೋದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ಮಾಡಿವೆ ಎಂದು ವರದಿಗಳು ಹೇಳುತ್ತಿವೆ. ಇರಾನ್​ನ ಪರಮಾಣು ಸೌಲಭ್ಯ, ಜಲಸ್ಥಾವರಗಳನ್ನು ನಾಶಪಡಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತಂದೆ, ಮಕ್ಕಳಿಗೂ ಸಾಲ ಕೊಟ್ಟಿದ್ದಾರೆ ದಳಪತಿ ವಿಜಯ್; ಟೀಕೆ ಎದುರಿಸಿದ ನಟ

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ಅವರು ಟಿವಿಕೆ ಪಕ್ಷದ ಮೂಲಕ ಸ್ಪರ್ಧೆಗೆ ಇಳಿದಿದ್ದಾರೆ. ಅವರು ಈಗ ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ. ವಿಜಯ್ ಅವರು 603 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅಫಿಡವಿಟ್ ಅಲ್ಲಿ ಸಾಲ ಕೊಟ್ಟ ವಿವರ ಕೂಡ ಇದೆ. ಇದೇ ವಿಷಯವನ್ನು ಇಟ್ಟುಕೊಂಡು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ಇದರ ಅಸಲಿಯತ್ತು ಬೇರೆಯದೇ ಇದೆ.

ವಿಜಯ್ ಅವರು 603 ಕೋಟಿ ರೂಪಾಯಿ ಆಸ್ತಿಯಲ್ಲಿ 404.58 ಕೋಟಿ ರೂಪಾಯಿ ಮೊತ್ತದ ಚರಾಸ್ತಿ ಹಾಗೂ 198.62 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರು ಕೊಡೈಕೆನಾಲ್ ಅಲ್ಲಿ ಎಸ್ಟೇಟ್ ಹೊಂದಿದ್ದಾರೆ. ಚೆನ್ನೈನ ವಿವಿಧ ಕಡೆಗಳಲ್ಲಿ ವಾಣಿಜ್ಯ ಮಳಿಗೆ ಇದೆ. ಈ ಮಧ್ಯೆ ಅವರು ತಮ್ಮವರಿಗೆ ಕೊಟ್ಟ ಸಾಲದ ವಿಷಯ ಉಲ್ಲೇಖ ಆಗಿದೆ.

ಸಂಗೀತಾ ಅವರಿಗೆ 12 ಕೋಟಿ ರೂಪಾಯಿ, ತಂದೆಗೆ 3 ಕೋಟಿ ರೂಪಾಯಿ ಸಾಲ, ಮಗನಿಗೆ ಹಾಗೂ ತಾಯಿಗೆ ತಲಾ 87 ಲಕ್ಷ ರೂಪಾಯಿ, ಮಗಳಿಗೆ 4 ಲಕ್ಷ ರೂಪಾಯಿ ಸಾಲ ಕೊಟ್ಟ ಬಗ್ಗೆ ಉಲ್ಲೇಖ ಆಗಿದೆ. ಇದನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಮಗ ಹಾಗೂ ಅಪ್ಪನಿಗೂ ವಿಜಯ್ ಸಾಲ ಕೊಟ್ಟಿದ್ದಾರೆ ಎಂದರೆ ಇದರ ಅರ್ಥ ಏನು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ 603 ಕೋಟಿ ರೂಪಾಯಿ ಆಸ್ತಿ ವಿವರ ಬಹಿರಂಗ: ಪತ್ನಿ ಬಳಿ ಎಷ್ಟಿದೆ?

ಆದರೆ, ಇದೊಂದು ಸಾಮಾನ್ಯ ಪ್ರಕ್ರಿಯೆ. ಅಫಿಡವಿಟ್ ಪರಿಶೀಲನೆಯ ಸಮಯದಲ್ಲಿ ಮಗ, ಪತ್ನಿ ಅಥವಾ ಯಾರೇ ಇರಬಹುದು, ಅವರಿಗೆ ಕೊಟ್ಟ ಹಣ ಉಲ್ಲೇಖ ಆಗದಿದ್ದರೆ ಅದನ್ನು ಗೌಪ್ಯವಾಗಿ ಇಟ್ಟಿದ್ದು ಎಂದು ಪರಿಗಣಿಸಲಾಗುತ್ತದೆ. ಹಾಗಾಬಾರದು ಎಂಬ ಕಾರಣಕ್ಕೆ ವಿಜಯ್ ಅದನ್ನು ಉಲ್ಲೇಖಿಸಿದ್ದಾರೆ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸ್ಮಶಾನಕ್ಕೆ ಕಳುಹಿಸುತ್ತೇವೆ’: ಮೊಬೈಲ್ ವಶಕ್ಕೆ ಪಡೆಯಲು ಬಂದ ಜೈಲು ಸಿಬ್ಬಂದಿಗೆ ಕೈದಿಗಳ ಜೀವ ಬೆದರಿಕೆ!

ಬೆಂಗಳೂರು, ಮಾರ್ಚ್​ 31: ಇತ್ತೀಚೆಗೆ ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಭಾನುವಾರ ಬೆಳಕಿಗೆ ಬಂದ ಬೆನ್ನಲ್ಲೇ ಹಲವು ಮೊಬೈಲ್ ಫೋನ್​ಗಳನ್ನು ಡ್ರೈನೇಜ್ ಮಾರ್ಗದಲ್ಲಿ ಬಚ್ಚಿಟ್ಟಿದ್ದೂ ತಿಳಿದು ಬಂದಿತ್ತು. ಕಟ್ಟುನಿಟ್ಟಿನ ನಿಯಮಗಳಿದ್ದರೂ ಈ ರೀತಿಯ ಅಕ್ರಮ ನಡೆಯುತ್ತಿರುವುದು ಆತಂಕ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಈ ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲು ಮುಂದಾದ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿರುವುದೂ ತಿಳಿದುಬಂದಿದೆ.

ಹತ್ತು ದಿನಗಳಲ್ಲಿ 21 ಮೊಬೈಲ್ ಪತ್ತೆ, ಡಿಜಿಪಿ ಅಸಮಾಧಾನ

ಕಳೆದ ಹತ್ತು ದಿನಗಳಲ್ಲಿ ಜೈಲು ಅಧಿಕಾರಿಗಳು 21 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ, ಬಹುತೇಕ ಫೋನ್‌ಗಳನ್ನು ಹಾಲಿನ ಕವರ್‌ಗಳಲ್ಲಿ ಮೊಬೈಲ್‌ಗಳನ್ನು ಪ್ಯಾಕ್ ಮಾಡಿ ಕೊಳಚೆ ನೀರು ಹರಿಯುವ ಪೈಪ್‌ಗಳಲ್ಲಿ ಮರೆಮಾಚಿ ಇಟ್ಟಿರುವುದು ಪತ್ತೆಯಾಗಿದೆ. ಜೈಲಿನೊಳಗೆ ಜಾಮರ್ ವ್ಯವಸ್ಥೆ ಇದ್ದರೂ ನೆಟ್‌ವರ್ಕ್ ಸಿಗುತ್ತಿರುವುದರ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಜೈಲರ್‌ಗಳು ಹಾಗೂ ವಾರ್ಡರ್‌ಗಳ ಶಾಮೀಲು ಇರುವ ಶಂಕೆ ವ್ಯಕ್ತವಾಗಿದ್ದು, ಎಲ್ಲರ ಮೇಲೂ ವಿಚಾರಣೆ ನಡೆಸಲು ಸೂಚಿಸಲಾಗಿದೆ. ಎಸ್‌ಪಿ ಅಂಶುಕುಮಾರ್ ನೇತೃತ್ವದಲ್ಲಿ ಕೆಲ ಅನುಮಾನಿತ ವಾರ್ಡರ್‌ಗಳನ್ನು ವಿಚಾರಣೆಗೊಳಪಡಿಸಲಾಗಿದೆ.

ಇದನ್ನೂ ಓದಿ ‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಜೈಲಲ್ಲೇ ಕೂತು ವಿಡಿಯೋ ಮಾಡಿದ ಕೈದಿಗಳು!

ಬೆದರಿಕೆ ಹಾಕಿದವರ ವಿರುದ್ಧ ಕೇಸ್

ಮೊಬೈಲ್ ವಶಕ್ಕೆ ಪಡೆಯಲು ಮುಂದಾದ ಜೈಲು ಸಿಬ್ಬಂದಿಗೆ ಕೆಲವು ಕೈದಿಗಳು ಜೀವ ಬೆದರಿಕೆ ಹಾಕಿರುವ ಘಟನೆ ಕೂಡ ನಡೆದಿದೆ. ರಿಜ್ವಾನ್ ಅಲಿ ಮತ್ತು ಮೊಹಮ್ಮದ್ ಸಾಧಿಕ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಮನೆಗೆ ಹೋಗುವುದಿಲ್ಲ, ಸ್ಮಶಾನಕ್ಕೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ ಆರೋಪ ಇದೆ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

 

Source link

ರಾತ್ರೋರಾತ್ರಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ಮುಸ್ಲಿಂ​ ಮುಖಂಡರು! ದಿಢೀರ್ ಬೆಳವಣಿಗೆಗೆ ಕಾರಣ ಏನು ಗೊತ್ತೇ?

ಬಾಗಲಕೋಟೆ, ಮಾರ್ಚ್ 31: ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರದ ಉಪಚುನಾವಣೆ (By Election) ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿರುವ ನಡುವೆಯೇ, ಮುಸ್ಲಿಂ ಮುಖಂಡರು ರಾತ್ರೋರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮುಸ್ಲಿಂ ಮುಖಂಡರು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಬಾಗಲಕೋಟೆ ಕ್ಷೇತ್ರದ ಉಪಚುನಾವಣಾ ಪ್ರಚಾರಕ್ಕಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕರೆಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕಾರಿನಲ್ಲೇ ಕುಳಿತು ಮುಖಂಡರೊಂದಿಗೆ ಕೆಲ ಸಮಯ ಚರ್ಚೆ ನಡೆಸಿದ್ದಾರೆ.

ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಕೇರಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಏಪ್ರಿಲ್ 5ರಂದು ಕರ್ನಾಟಕಕ್ಕೆ ವಾಪಸ್ ಆಗಲಿದ್ದು, ಮೊದಲು ದಾವಣಗೆರೆ ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಬಳಿಕ ಏಪ್ರಿಲ್ 6 ಮತ್ತು 7ರಂದು ಬಾಗಲಕೋಟೆ ಕ್ಷೇತ್ರದ ಪ್ರಚಾರಕ್ಕೆ ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮುಖಂಡ ಸಾಧಿಕ್ ಪೈಲ್ವಾನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಖಾನ್ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಆದರೆ ಈ ಆರೋಪವನ್ನು ಜಮೀರ್ ಅಹ್ಮದ್ ತಳ್ಳಿ ಹಾಕಿದ್ದು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ತಾನು ಸಂಪೂರ್ಣವಾಗಿ ಶ್ರಮಿಸುವುದಾಗಿ ಸ್ಪಷ್ಟಪಡಿಸಿದ್ದರು.

ಆದಾಗ್ಯೂ, ಅವರು ಈ ನಡುವೆ ಕೇರಳ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಕರ್ನಾಟಕ ಉಪಚುನಾವಣೆಯ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಬಾಗಲಕೋಟೆ ಸೇರಿದಂತೆ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಜಮೀರ್ ಅಹ್ಮದ್ ಪ್ರಚಾರಕ್ಕೆ ಬರಬೇಕು ಎಂಬ ಬೇಡಿಕೆಯನ್ನು ಮುಸ್ಲಿಂ ಮುಖಂಡರು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​​ನ ಆಪರೇಷನ್ ಮುಸ್ಲಿಂ ಕ್ಯಾಂಡಿಡೇಟ್ ಕಾರ್ಯಾಚರಣೆ ಫೇಲ್

ಒಟ್ಟಾರೆ ಬಾಗಲಕೋಟೆ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮುಸ್ಲಿಂ ಮುಖಂಡರ ಈ ದಿಢೀರ್ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಸ್​​ಕೆಗೆ ಬಂದ ಹೀನಾಯ ಸ್ಥಿತಿ ನೋಡಿ ಭಾವುಕರಾದ ಜಡೇಜಾ

ಸಿಎಸ್​​ಕೆ ಕಳೆದ ವರ್ಷ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಬಾರಿ ಹಾಗಾಗಬಾರದು ಎಂದು ಅವರು ಅಂದುಕೊಂಡಿದ್ದರು. ಆದರೆ, ಹಾಗಾಗಿಲ್ಲ. ಮೊದಲ ಪಂದ್ಯದಲ್ಲೇ ಸಿಎಸ್​​ಕೆ ಹೀನಾಯವಾಗಿ ಸೋತಿದೆ. ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ 60 ರನ್​​​ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ಯಾಮೆರಾ ಜಡೇಜಾ ಕಡೆ ತಿರುಗಿತು. ಆಗ ಅವರು ಭಾವುಕರಾದಂತೆ ಕಂಡುಬಂತು. ಈ ವಿಡಿಯೋ ವೈರಲ್ ಆಗಿದೆ. ಜಡೇಜಾ ಕಳೆದ ಬಾರಿ ಸಿಎಸ್​​​ಕೆ ಅಲ್ಲಿದ್ದರು. ಅವರನ್ನು ನಂತರ ಆರ್​​ಆರ್​​ಗೆ ಕಳುಹಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಬಾಹುಬಲಿ 2’ ಬರೆದ ದಾಖಲೆ ಮುರಿದ ‘ಧುರಂಧರ್ 2’ 

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ ಚಿತ್ರ ಪ್ರತಿದಿನ ಒಂದಲ್ಲ ಒಂದು ದಾಖಲೆಯನ್ನು ಮುರಿಯುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ‘ಧುರಂಧರ್ 2’ ಚಿತ್ರದ ಪ್ರಾಬಲ್ಯವನ್ನು ಸಾಧಿಸಿದೆ. ಈ ಚಿತ್ರವು ಮಾರ್ಚ್ 19ರಂದು ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಕೇವಲ 10 ದಿನಗಳಲ್ಲಿ, ಇದು ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಡೂಪರ್ ಹಿಟ್ ಚಿತ್ರಗಳನ್ನು ಸಹ ಹಿಂದಿಕ್ಕಿದೆ. ಈಗ ಪ್ರಭಾಸ್ ಅವರ ಬ್ಲಾಕ್‌ಬಸ್ಟರ್ ಚಿತ್ರ ‘ಬಾಹುಬಲಿ 2: ದಿ ಕನ್ಕ್ಲೂಷನ್’ ಚಿತ್ರ ಬರೆದ ದಾಖಲೆ ಮುರಿದಿದೆ. ‘ಧುರಂಧರ್ 2’ ವಿದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ.

ಎಸ್. ಎಸ್. ರಾಜಮೌಳಿ ಅವರ ‘ಬಾಹುಬಲಿ 2’ ಚಿತ್ರವು ಉತ್ತರ ಅಮೆರಿಕಾದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿತ್ತು. ಈ ಚಿತ್ರವು ಉತ್ತರ ಅಮೆರಿಕಾದಲ್ಲಿ $20 ಮಿಲಿಯನ್ ಅಥವಾ ಸುಮಾರು 188 ಕೋಟಿ ರೂ.ಗಳನ್ನು ಸಂಗ್ರಹಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಕಳೆದ ಒಂಬತ್ತು ವರ್ಷಗಳಿಂದ, ‘ಬಾಹುಬಲಿ 2’ ರ ಈ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಾಗಲಿಲ್ಲ. ಈಗ ಆದಿತ್ಯ ಧಾರ್ ಅವರ ‘ಧುರಂಧರ್ 2’ ಚಿತ್ರವು ಪ್ರಭಾಸ್ ಚಿತ್ರದ ಈ ದಾಖಲೆಯನ್ನು ಮುರಿಯುವ ಮೂಲಕ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದೆ. ‘ಬಾಕ್ಸ್ ಆಫೀಸ್ ಮೋಜೊ’ ವರದಿಯ ಪ್ರಕಾರ, ‘ಧುರಂಧರ್ 2’ ಉತ್ತರ ಅಮೆರಿಕಾದಲ್ಲಿ ಇಲ್ಲಿಯವರೆಗೆ $22 ಮಿಲಿಯನ್ ಅಥವಾ ಸುಮಾರು 207 ಕೋಟಿ ರೂ.ಗಳನ್ನು ಗಳಿಸಿದೆ.

‘ಬಾಹುಬಲಿ 2’ ಚಿತ್ರದ ನಿರ್ಮಾಪಕರು ಈಗ ‘ಧುರಂಧರ್ 2’ ಚಿತ್ರದ ಅದ್ಭುತ ಯಶಸ್ಸಿಗೆ ಪ್ರತಿಕ್ರಿಯಿಸಿದ್ದಾರೆ. ‘ಬಾಹುಬಲಿ 2’ ಚಿತ್ರದ ಭಾಗವಾಗಿರುವ ನಿರ್ಮಾಪಕ ಶೋಭು, ‘9 ವರ್ಷಗಳ ಹಳೆಯ ಬಾಹುಬಲಿ 2 ದಾಖಲೆಯನ್ನು ಮುರಿದು ಭಾರತ, ಯುಎಸ್ಎ ಮತ್ತು ವಿಶ್ವಾದ್ಯಂತ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದಕ್ಕಾಗಿ ಆದಿತ್ಯ ಧರ್ ಮತ್ತು ‘ಧುರಂಧರ್: ದಿ ರಿವೆಂಜ್’ ಚಿತ್ರದ ಸಂಪೂರ್ಣ ತಂಡಕ್ಕೆ ಅಭಿನಂದನೆಗಳು’ ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಧುರಂಧರ್ ನೋಡಿ ಕಲಿಯಿರಿ: ಮೌನ ತಾಳಿದ ಬಾಲಿವುಡ್ ಮಂದಿಗೆ ಆರ್​ಜಿವಿ ಖಡಕ್ ಮಾತು

‘ನಾನು ಧುರಂಧರ್ 2 ಚಿತ್ರವನ್ನು ನೋಡಿದೆ ಮತ್ತು ನನಗೆ ಅದು ತುಂಬಾ ಇಷ್ಟವಾಯಿತು. ಈ ಚಿತ್ರವು ಎಲ್ಲಾ ದಾಖಲೆಗಳನ್ನು ಮುರಿದು ಭಾರತ ಮತ್ತು ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಇಡೀ ತಂಡಕ್ಕೆ ಶುಭಾಶಯಗಳು’ ಎಂದು ಶೋಭು ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಆತಂಕಕಾರಿ ಮಟ್ಟದಲ್ಲಿದೆ ಮೈಸೂರಿನ ಏರ್ ಕ್ವಾಲಿಟಿ!

ಬೆಂಗಳೂರು, ಮಾರ್ಚ್​ 31: ಬೆಂಗಳೂರಿನ ವಾಯುಗುಣಮಟ್ಟ  (Bengaluru Air Quality) ಇಂದು ಹದಗೆಟ್ಟ ಸ್ಥಿತಿಯಲ್ಲೇ ಇದೆ. ಆದರೆ ಇದನ್ನೂ ಮೀರಿಸುವಂತೆ ಮೈಸೂರಿನ ಏರ್ ಕ್ವಾಲಿಟಿ ಕುಸಿದಿದ್ದು, ಆತಂಕ ಸೃಷ್ಟಿಸಿದೆ. ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 166ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇರುವಾಗಲೇ ಮೈಸೂರಿನ AQI 185 ತಲುಪಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –166
  • ಮಂಗಳೂರು-102
  • ಮೈಸೂರು –185
  • ಬೆಳಗಾವಿ – 64
  • ಕಲಬುರ್ಗಿ-82
  • ಶಿವಮೊಗ್ಗ – 126
  • ಬಳ್ಳಾರಿ – 120
  • ಹುಬ್ಬಳ್ಳಿ- 84
  • ಉಡುಪಿ –93
  • ವಿಜಯಪುರ –119

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

 

Source link

ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜ್​​ಕುಮಾರ್​​ ಇಳಿಸಲು ನಡೆದಿತ್ತು ಪ್ಲ್ಯಾನ್

ರಾಜ್​​​ಕುಮಾರ್ ಅವರು ಕನ್ನಡ ಚಿತ್ರರಂಗದ ಖ್ಯಾತ ಹೀರೋಗಳಲ್ಲಿ ಒಬ್ಬರಾಗಿದ್ದರು. ಅವರು ನಡೆದುಕೊಳ್ಳುತ್ತಿದ್ದ ರೀತಿ ಅನೇಕರಿಗೆ ಮಾದರಿ. ಅವರು ಎಂದಿಗೂ ರಾಜಕೀಯಕ್ಕೆ ಹೊರಳಿದವರಲ್ಲ. ಚಿತ್ರರಂಗದಲ್ಲಿಯೂ ಅವರು ರಾಜಕೀಯ ಮಾಡಿದವರಲ್ಲ ಎಂದರೂ ತಪ್ಪಾಗಲಾರದು. ಈ ಮೊದಲು ಅವರನ್ನು ರಾಜಕೀಯಕ್ಕೆ ಇಳಿಸುವ ಪ್ರಯತ್ನ ನಡೆಯಿತು. ಆದರೆ, ಅವರು ಅದಕ್ಕೆ ನೋ ಎಂದರು. ಅವರನ್ನು ಇಂದಿರಾಗಾಂಧಿ ವಿರುದ್ಧ ಇಳಿಸುವ ಪ್ರಯತ್ನವೂ ನಡೆದಿತ್ತು ಎಂದರೆ ನೀವು ನಂಬಲೇಬೇಕು. ಆ ಬಗ್ಗೆ ಇಲ್ಲಿದೆ ವಿವರ.

ಸಂದರ್ಶನ ಒಂದರಲ್ಲಿ ಎಂಪಿ ಶಂಕರ್ ಅವರು ಈ ಬಗ್ಗೆ ಮಾತನಾಡಿದ್ದರು. ‘ದೇವರಾಯನ ದುರ್ಗದಲ್ಲಿ ಶೂಟ್ ನಡೆಯುತ್ತಿತ್ತು. ಒಬ್ಬರು ವ್ಯಕ್ತಿ ಬಂದು ರಾಜ್​​ಕುಮಾರ್​ಗೆ ಏನೋ ಹೇಳಿದರು. ಆಗ ಅಣ್ಣಾವ್ರು ಊಟ ಮಾಡುತ್ತಿದ್ದರು’ ಎಂದು ಎಂಪಿ ಶಂಕರ್ ವಿವರಿಸಿದ್ದರು. ಆ ವ್ಯಕ್ತಿ ಹೇಳಿದ ಮಾತು ಕೇಳಿ ಅವರು ಶಾಕ್ ಆದರಂತೆ.

‘ಆಗಲೇ ಅಲ್ಲಿಂದ ಹೊರಟುಬಿಟ್ಟರು. ರಸ್ತೆಯಲ್ಲಿ ಬರುವಾಗ ದಾರಿ ಮಧ್ಯೆ ಊಟಕ್ಕೆ ನಿಲ್ಲಿಸಿದರು. ಸುತ್ತಲೂ ಕಾಡಿತ್ತು. ಇಲ್ಲಿ ಊಟ ಮಾಡಬಹುದು ಎಂದು ಅವರಿಗೆ ಅನಿಸಿತು. ಏನಾಯಿತು? ಏನು ಬಂದು ಹೇಳಿದರು ಎಂದು ನಾವು ಕೇಳಿದೆವು. ಅದಕ್ಕೆ ಅವರು, ನನಗೆ ರಾಜಕೀಯ ಗೊತ್ತಿಲ್ಲ. ನನಗೆ ಸಿನಿಮಾ ಮಾತ್ರ ಗೊತ್ತಿದೆ. ಸಿನಿಮಾದಲ್ಲೂ ರಾಜಕೀಯ ಮಾಡಿದವನು ನಾನಲ್ಲ. ನನಗೆ ಇಂದಿರಾಗಾಂಧಿ ವಿರುದ್ಧ ನಿಲ್ಲೋಕೆ ಹೇಳುತ್ತಿದ್ದಾರೆ ಎಂದು ರಾಜ್​​ಕುಮಾರ್ ಹೇಳಿದ್ದಾಗಿ’ ಎಂಪಿ ಶಂಕರ್ ವಿವರಿಸಿದ್ದರು.

ಇದನ್ನೂ ಓದಿ: ‘ಸ್ವಸ್ತಿಕ್’ ಕನ್ನಡದ ‘ಧುರಂಧರ್’; ಉಪ್ಪಿ-ರಣವೀರ್ ಚಿತ್ರಕ್ಕೂ ಇದೆ ಹೋಲಿಕೆ

ರಾಜ್​​​ಕುಮಾರ್ ಅವರು ನಮ್ಮನ್ನು ಬಿಟ್ಟು ಹೋಗಿ ಎರಡು ದಶಕ ಕಳೆಯುತ್ತಾ ಬಂದಿದೆ. ಆದಾಗ್ಯೂ ಅವರು ಹಾಕಿಕೊಟ್ಟ ಮಾರ್ಗದರ್ಶನ ಇನ್ನೂ ನಮ್ಮ ಜೊತೆ ಇದೆ. ಇದು ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆಗೆ ಉದಾಹರಣೆ. ರಾಜ್​​ಕುಮಾರ್ ಕುಟುಂಬ ಈಗಲೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ರೈಲ್ವೆ ಸ್ಟೇಷನ್ ಮುಂಭಾಗ ಬೈಕ್​ನಲ್ಲಿ ಬಂದು ಯುವತಿ ಕೈಯಿಂದ ಬ್ಯಾಗ್ ಕಸಿದು ಕಳ್ಳ ಪರಾರಿ

ಕೋಲ್ಕತ್ತಾ, ಮಾರ್ಚ್​ 31: ಸಾಮಾನ್ಯವಾಗಿ ರೈಲ್ವೆ ನಿಲ್ದಾಣದ ಆಸು ಪಾಸು ದಿನದ 24 ಗಂಟೆಯೂ ಜನರು ಓಡಾಡುತ್ತಲೇ ಇರುತ್ತಾರೆ. ಇಷ್ಟೆಲ್ಲಾ ಜನ ಇದ್ದರೂ ಲಗೇಜ್ ಹಿಡಿದು ಅಕ್ಕ ತಂಗಿ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದಾಗ ಕಳ್ಳನೊಬ್ಬ ಬೈಕ್​ನಲ್ಲಿ ಬಂದು ಯುವತಿ ಕೈಯಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಕೋಲ್ಕತ್ತಾದ ಶಾಲಿಮರ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಬ್ಯಾಗ್​ನಲ್ಲಿ ಅಗತ್ಯವಾದ ಡಾಕ್ಯೂಮೆಂಟ್​ಗಳಿದ್ದವು ಎಂದು ಹೇಳಿರುವ ಯುವತಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link