All posts by nagaraj11081993

T20 World Cup: ಮಳೆಯಿಂದ ಮೊದಲ ಸೂಪರ್ 8 ಪಂದ್ಯ ರದ್ದು; ಪಾಕ್ ತಂಡಕ್ಕೆ ಭಾರಿ ನಷ್ಟ – Kannada News | T20 World Cup 2026 Super 8: New Zealand Pakistan Match Canceled Due to Rain

2026 ರ ಟಿ20 ವಿಶ್ವಕಪ್ ಎರಡನೇ ಸುತ್ತಿಗೆ ಎಂಟ್ರಿಕೊಟ್ಟಿದೆ. ಅಂದರೆ ಗುಂಪು ಹಂತ ಮುಕ್ತಾಯಗೊಂಡಿದ್ದು, ಇಂದಿನಿಂದ ಸೂಪರ್ 8 ಸುತ್ತು ಶುರುವಾಗಿದೆ. ಗುಂಪು ಹಂತದಲ್ಲಿ ಒಟ್ಟಾರೆ 20 ತಂಡಗಳು ಭಾಗವಹಿಸಿದ್ದವು. ಅದರಲ್ಲಿ 8 ತಂಡಗಳು ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿವೆ. ಈ 8 ತಂಡಗಳನ್ನು ತಲಾ 4 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಎರಡನೇ ಗುಂಪಿನ ಮೊದಲ ಸೂಪರ್ 8 ಪಂದ್ಯ ಇಂದು ನಡೆಯಬೇಕಿತ್ತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬೇಕಿತ್ತು.ಆ ಪ್ರಕಾರ, ಉಭಯ ತಂಡಗಳ ನಡುವೆ ಟಾಸ್ ಕೂಡ ನಡೆಯಿತು. ಅದರೆ ಟಾಸ್ ಬಳಿಕ ಎಂಟ್ರಿಕೊಟ್ಟ ವರುಣರಾಯ ಒಂದೇ ಒಂದು ಎಸೆತವನ್ನು ಎಸೆಯಲು ಅನುವು ಮಾಡಿಕೊಡಲಿಲ್ಲ. ಇದರ ಪರಿಣಾಮವಾಗಿ ಪಂದ್ಯವು ಒಂದೇ ಒಂದು ಎಸೆತವನ್ನು ಕಾಣದೆ ರದ್ದಾಯಿತು.

Source link

ಲಂಚ ಪಡೆಯುವಾಗ ಬಿಜೆಪಿ ಶಾಸಕ ಲಾಕ್​​: ಚಂದ್ರು ಲಮಾಣಿಯಿಂದ ಧಮ್ಕಿ; ಗುತ್ತಿಗೆದಾರ ನೀಡಿದ ದೂರಿನಲ್ಲೇನಿದೆ? – Kannada News | BJP MLA arrested while accepting bribe; Chandru Lamani issues threat; what complaint did the contractor file

ಬಿಜೆಪಿ ಶಾಸಕ ಚಂದ್ರು ಲಮಾಣಿ Image Credit source: moneycontrol

ಗದಗ, ಫೆಬ್ರವರಿ 21: ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ ಕೆರಳಿದ್ದಾರೆ. ಕಮಿಷನ್​​​ ದಂಧೆ ಜೋರಾಗಿದೆ ಅಂತ ಆರೋಪ ಮಾಡುತ್ತಿದ್ದಾರೆ. ಇದನ್ನೇ ಬಿಜೆಪಿ ನಾಯಕರು ಅಸ್ತ್ರ ಮಾಡ್ಕೊಂಡು ವಾಗ್ದಾಳಿ ಮಾಡುತ್ತಿದ್ದಾರೆ. ಇಂತಹ ಹೊತ್ತಲ್ಲಿ ಗದಗ ಜಿಲ್ಲೆಯ ಶಿರಹಟ್ಟಿಯ ಬಿಜೆಪಿ ಶಾಸಕ ಚಂದ್ರು ಲಮಾಣಿ (Chandru Lamani), ಗುತ್ತಿಗೆದಾರನಿಂದ ಕಮಿಷನ್ ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಸದ್ಯ ಇದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಫೆ 18ರಂದೇ ಲೋಕಾಯುಕ್ತಕ್ಕೆ ಗುತ್ತಿಗೆದಾರ ವಿಜಯರಾಜ ಎಸ್ ಪೂಜಾರ ದೂರು ನೀಡಿದ್ದರು. ಜೊತೆಗೆ ಚಂದ್ರು ಲಮಾಣಿ ಧಮ್ಕಿ ಹಾಕಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗುತ್ತಿಗೆದಾರ ನೀಡಿದ್ದ ದೂರಿನಲ್ಲೇನಿದೆ?

ಫೆಬ್ರವರಿ 18ರಂದು ಗದಗ ಜಿಲ್ಲೆಯ ಗದಗ ತಾಲೂಕಿನ ಚಿಂಚಲಿ ಗ್ರಾಮದ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರ ವಿಜಯರಾಜ ಎಸ್ ಪೂಜಾರ ಗದಗ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದಾರೆ. ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳನ್ನು ಮಾಡುತ್ತಿದ್ದು, 2025ರ ಜುಲೈ ತಿಂಗಳಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಲಕ್ಷ್ಮೀಶ್ವರ ತಾಲೂಕಿ ಸಂಕದಾಳ ಗ್ರಾಮದಲ್ಲಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಎರಡು ಕಾಮಗಾರಿಗಳನ್ನು ಮಾಡಲು ಆದೇಶ ಪಡೆದಿರುತ್ತಾರೆ.

ಇದನ್ನೂ ಓದಿ: ಗದಗ: 11 ಲಕ್ಷ ರೂ ಲಂಚಕ್ಕೆ ಬೇಡಿಕೆ; ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಬಿಜೆಪಿ ಶಾಸಕ

ಈ ಕಾಮಗಾರಿಗಳನ್ನು ಮಾಡಲು ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಎಂಎಲ್​​ಎ ಚಂದ್ರು ಲಮಾಣಿ ತೊಂದರೆ ಮಾಡುತ್ತಿದ್ದು, ಫಿರ್ಯಾದಿದಾರರು ಅವರನ್ನು ಬೇಟಿಯಾದಾಗ ಶಾಸಕರು ಹಾಗೂ ಅವರ ಪಿ.ಎ ಮಂಜುನಾಥ್​ ವಾಲ್ಮೀಕಿ ಮತ್ತು ಶಾಸಕರ ಸಂಬಂಧಿ ಗುರು ಲಮಾಣಿ ಗುತ್ತಿಗೆದಾರರಿಗೆ ಈ ಎರಡು ಕಾಮಗಾರಿಗಳನ್ನು ತಮಗೆ ತಿಳಿಸದೇ ಏಕೆ ಮಾಡುತ್ತಿದ್ದೀರಾ, ಈ ಟೆಂಡರ್ ರದ್ದು ಮಾಡಿಸುತ್ತೇವೆ. 12% ಕಮಿಷನ್ ಕೊಟ್ಟರೆ ಮಾತ್ರ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುತ್ತೇವೆ. ಇಲ್ಲದಿದ್ದರೆ ರೌಡಿಗಳನ್ನು ಕಳುಹಿಸಿ ಬುದ್ದಿ ಕಲಿಸುತ್ತೇವೆ ಎಂದು ಧಮಕಿ ಹಾಕಿರುತ್ತಾರೆ ಹಾಗೂ ಎರಡು ಕಾಮಗಾರಿಗಳಿಗೆ ಒಟ್ಟು 11 ಲಕ್ಷ ರೂ ಹಣವನ್ನು ಲಂಚವಾಗಿ ಕಮಿಷನ್ ರೂಪದಲ್ಲಿ ಕೊಡಲು ಒತ್ತಾಯ ಮಾಡಿರುತ್ತಾರೆ.

ಈ ಬಗ್ಗೆ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರಿನನ್ವಯ ಇಂದು ಮಧ್ಯಾಹ್ನ 02 ಗಂಟೆಯ ಸುಮಾರಿಗೆ ಫಿರ್ಯಾದಿದಾರರಿಂದ ಮೇಲ್ಕಂಡ ಮೂರು ಜನ ಆಪಾದಿತರು ಲಂಚದ ಹಣವಾಗಿ 5 ಲಕ್ಷ ರೂಗಳನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ದಸ್ತಗಿರಿ ಆಗಿರುತ್ತಾರೆ.

ಇದನ್ನೂ ಓದಿ: ಸರ್​​ 12 ಬೇಡ.. 11 ಪರ್ಸೆಂಟ್ ಸಾಕು: ಕಮಿಷನ್​​ ಪಡೆಯುವಾಗಲೇ ಬಿಜೆಪಿ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ

ಈ ಪ್ರಕರಣದಲ್ಲಿ ಎಡಿಜಿಪಿ ಮನೀಷ ಕರ್ಬಿಕರ್, ಐಜಿಪಿ ಸುಬ್ರಹ್ಮಣೇಶ್ವರ ರಾವ್, ಎಸ್.ಟಿ.ಸಿದ್ದಲಿಂಗಪ್ಪ, ಎಸ್.ಪಿ ಕರ್ನಾಟಕ ಲೋಕಾಯುಕ್ತ ಧಾರವಾಡ ರವರ ಮಾರ್ಗದರ್ಶನದಲ್ಲಿ ಗದಗ ಮತ್ತು ಧಾರವಾಡ ಲೋಕಾಯುಕ್ತ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಕಾರ್ಯಚರಣೆ ಮಾಡಿದ್ದು, ಸದ್ಯ ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಾಸಕ ಚಂದ್ರು ಲಮಾಣಿ ಎರಡು-ಮೂರು ಲಕ್ಷ ರೂ.ಗೆ ಕೈ ಒಡ್ಡುವ ಮನುಷ್ಯ ಅಲ್ಲ: ಯತ್ನಾಳ್ – Kannada News | Chandru Lamani Lokayukta: Yatnal Claims Political Trap Against Banjara Leader

ವಿಜಯಪುರ, ಫೆ.21: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣವು ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೊಂದು ವ್ಯವಸ್ಥಿತವಾದ ಸಂಚು ಎಂದು ಕಿಡಿಕಾರಿದ್ದಾರೆ. ಚಂದ್ರು ಲಮಾಣಿ ಅವರು ಒಬ್ಬ ಒಳ್ಳೆಯ ವೈದ್ಯರು ಹಾಗೂ ಉತ್ತಮ ಮನುಷ್ಯ. ಅವರು ಕೇವಲ ಎರಡು-ಮೂರು ಲಕ್ಷ ರೂಪಾಯಿಗಾಗಿ ಕೈವೊಡ್ಡುವಂತಹ ಸಣ್ಣ ವ್ಯಕ್ತಿತ್ವದ ಮನುಷ್ಯ ಅಲ್ಲವೇ ಅಲ್ಲ,” ಎಂದು ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ. ಬಂಜಾರ ಸಮಾಜದ ಉದಯೋನ್ಮುಖ ನಾಯಕನನ್ನು ಹತ್ತಿಕ್ಕುವ ಉದ್ದೇಶದಿಂದ ಈ ಟ್ರ್ಯಾಪ್ ಮಾಡಲಾಗಿದೆ. ವ್ಯವಸ್ಥಿತವಾಗಿ ಒಬ್ಬ ಬಂಜಾರ ಸಮಾಜದ ಶಾಸಕನನ್ನು ಸಿಲುಕಿಸಬೇಕು ಎಂಬ ಕಾರಣಕ್ಕೆ ಈ ಪ್ಲಾನ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಇಡೀ ಪ್ರಕರಣದ ಹಿಂದೆ ರಾಜಕೀಯ ಪ್ರೇರಿತ ಸಂಚು ಅಡಗಿದೆ. ಅವರನ್ನು ಸಿಲುಕಿಸಲೇಬೇಕು ಎಂಬ ಹಠದಿಂದ ಈ ಕಾರ್ಯಾಚರಣೆ ನಡೆಸಿದಂತೆ ಕಾಣುತ್ತಿದೆ ಎಂದು ಯತ್ನಾಳ್ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಬ್ರೆಜಿಲ್ ಅಧ್ಯಕ್ಷ ಲುಲಾ ಖಂಡನೆ – Kannada News | Brazilian President Lula Condemns Terror Attacks In Kashmir Watch Video

ನವದೆಹಲಿ, ಫೆಬ್ರವರಿ 21: ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ನವದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಬ್ರೆಜಿಲ್ ಅಧ್ಯಕ್ಷ ಲುಲಾ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗಳನ್ನು ಬಲವಾಗಿ ಖಂಡಿಸಿದ್ದಾರೆ. “ಭಯೋತ್ಪಾದನೆ ಯಾವುದೇ ರಾಷ್ಟ್ರೀಯತೆ ಅಥವಾ ಧರ್ಮದೊಂದಿಗೆ ಸಂಬಂಧ ಹೊಂದಿಲ್ಲ” ಎಂದು ಅವರು ಹೇಳಿದ್ದಾರೆ.

ಭಾರತ-ಬ್ರೆಜಿಲ್ ಒಗ್ಗಟ್ಟನ್ನು ಬಲಪಡಿಸಿದ ಅವರು, ಭಯೋತ್ಪಾದನೆಯ ವಿರುದ್ಧದ ಜಾಗತಿಕ ಪ್ರಯತ್ನಗಳು ನಿರ್ದಿಷ್ಟ ಸಮುದಾಯಗಳು ಅಥವಾ ರಾಷ್ಟ್ರಗಳೊಂದಿಗೆ ಹಿಂಸಾಚಾರವನ್ನು ಜೋಡಿಸುವುದನ್ನು ತಪ್ಪಿಸಬೇಕು ಎಂದು ಹೇಳಿದರು. ಇದಕ್ಕೂ ಮುನ್ನ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಲೂಲಾ ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಏಪ್ರಿಲ್ 22, 2025ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಈ ಹೇಳಿಕೆ ನೀಡಲಾಗಿದೆ. ಈ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು. ಈ ದಾಳಿಗೆ ಬ್ರೆಜಿಲ್ ಈ ಹಿಂದೆ ಸಂತಾಪ ಸೂಚಿಸಿತ್ತು ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಫಿ ಶೈನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಶಿಖರ್ ಧವನ್; ವಿಡಿಯೋ ವೈರಲ್ – Kannada News | Shikhar Dhawan’s Second Innings: Marries Sophie Shine in Traditional Ceremony

ಭಾರತ ಕ್ರಿಕೆಟ್ ತಂಡದ ಮಾಜಿ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ವೈಯಕ್ತಿಕ ಬದುಕಿನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ವಾಸ್ತವವಾಗಿ ಫೆಬ್ರವರಿ 21 ರ ಶನಿವಾರದಂದು ತಮ್ಮ ಪ್ರೇಯಸಿ ಸೋಫಿ ಶೈನ್ ಅವರೊಂದಿಗೆ ಶಿಖರ್ ಧವನ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಶಿಖರ್ ಧವನ್​ಗೆ ಇದು ಎರಡನೇ ಮದುವೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. 2012 ರಲ್ಲಿ ಆಯೇಷಾ ಮುಖರ್ಜಿ ಅವರನ್ನು ಮದುವೆಯಾಗಿದ್ದ ಧವನ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ದಂಪತಿಗಳಿಬ್ಬರು 2023 ರಲ್ಲಿ ವಿಚ್ಛೇದನ ಪಡೆದಿದ್ದರು.

ಆ ಬಳಿಕ ಐರಿಶ್ ಮೂಲದ ಸೋಫಿ ಶೈನ್ ಜೊತೆ ಸುಮಾರು ಒಂದೂವರೆ ವರ್ಷದಿಂದ ಪ್ರೀತಿಯಲ್ಲಿ ಬಿದಿದ್ದ ಧವನ್, ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ, ಸುಮಾರು 40 ದಿನಗಳ ನಂತರ ಮದುವೆಯಾಗಿದ್ದಾರೆ. ಭಾರತೀಯ ಪದ್ಧತಿಗಳ ಪ್ರಕಾರ ಇವರಿಬ್ಬರ ವಿವಾಹ ನೆರವೇರಿದ್ದು, ಮೆಹಂದಿ ಮತ್ತು ಹಲ್ದಿಯಂತಹ ಕಾರ್ಯಕ್ರಮಗಳಲ್ಲಿ ಈ ಜೋಡಿ ಸಂಭ್ರಮದಲ್ಲಿ ಮಿಂದೆದ್ದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಶಿಖರ್ ಮತ್ತು ಸೋಫಿ ಅವರ ವಿವಾಹದಲ್ಲಿ ಅವರ ಕುಟುಂಬಗಳು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕೂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದು, ಅದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

Source link

ಪ್ರೀತಮ್ ನೋಡಿ ಕಾಳಿದಾಸನ ನೆನಪಿಸಿಕೊಂಡ ಶಿವಣ್ಣ – Kannada News | Shivarajkumar Happy After Preetham Acting In Dance Karnataka Dance

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಪ್ರೀತಮ್ ಅವರು ಕವಿರತ್ನ ಕಾಳಿದಾಸನ ಪಾತ್ರ ಮಾಡಿದ್ದಾರೆ. ಇದನ್ನು ನೋಡಿ ಶಿವರಾಜ್​​ಕುಮಾರ್ ಅವರು ಭಾವುಕರಾದರು. ಅವರಿಗೆ ಈ ಕ್ಷಣ ತುಂಬಾನೇ ವಿಶೇಷವಾಗಿತ್ತು. ಶಿವಣ್ಣಗೆ ಕಾಳಿದಾಸನೇ ನೆನಪಾದರು. ಈ ಸಂದರ್ಭದ ವಿಡಿಯೋ ವೈರಲ್ ಗಮನ ಸೆಳೆದಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಅಪರೂಪದ ಕ್ಷಣ ಗಮನ ಸೆಳೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ – Kannada News | Brazilian President Luiz Inacio Lula da Silva receives ceremonial welcome at Delhi Rashtrapati Bhavan

ನವದೆಹಲಿ, ಫೆಬ್ರವರಿ 21: ಭಾರತಕ್ಕೆ ಅಧಿಕೃತ ಭೇಟಿ ನೀಡಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರಿಗೆ ಇಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಔಪಚಾರಿಕ ಸ್ವಾಗತ ನೀಡಲಾಯಿತು. ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ಲೂಲಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಗಾರ್ಡ್ ಆಫ್ ಹಾನರ್ ನೀಡಲಾಯಿತು. ಬ್ರೆಜಿಲ್ ಅಧ್ಯಕ್ಷರನ್ನು ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಪತಿ ಭವನದಲ್ಲಿ ಬರಮಾಡಿಕೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಗೆಲುವಿನ ಖಾತೆ ತೆರೆಯದ ತಂಡಗಳಿಗೂ ಕೋಟಿ ಬಹುಮಾನ – Kannada News | T20 World Cup 2026: Winless Teams Oman, Namibia, Canada Still Earn ICC Prize Money

2026 ರ ಟಿ20 ವಿಶ್ವಕಪ್​ನ ಗುಂಪು ಹಂತ ಮುಕ್ತಾಯಗೊಂಡಿದೆ. ಇದರರ್ಥ ಈ ಟೂರ್ನಿಯಲ್ಲಿ 12 ತಂಡಗಳ ಪ್ರಯಾಣವೂ ಅಂತ್ಯಗೊಂಡಿದೆ. ವಾಸ್ತವವಾಗಿ ಒಟ್ಟು 20 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ 8 ತಂಡಗಳು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದರೆ, ಉಳಿದ 12 ತಂಡಗಳು ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿವೆ. ಈ ತಂಡಗಳಲ್ಲಿ ಮೂರು ತಂಡಗಳಿಗೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಂದರೆ ಈ ಮೂರು ತಂಡಗಳು ಗುಂಪು ಹಂತದಲ್ಲಿ ಆಡಿದ ಎಲ್ಲಾ 4 ಪಂದ್ಯಗಳನ್ನು ಸೋತವು. ಆದಾಗ್ಯೂ ಐಸಿಸಿ, ಈ ಮೂರು ತಂಡಗಳಿಗೆ ಕೋಟಿ ಮೊತ್ತದ ಬಹುಮಾನ ನೀಡಲಿದೆ.

ಮೂರು ತಂಡಗಳಿಗೆ ಗೆಲುವು ಧಕ್ಕಲಿಲ್ಲ

2026 ರ ಟಿ20 ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದ ತಂಡಗಳು ಓಮನ್, ನಮೀಬಿಯಾ ಮತ್ತು ಕೆನಡಾ. ನಮೀಬಿಯಾ ಟೂರ್ನಮೆಂಟ್‌ನಲ್ಲಿ ಎ ಗುಂಪಿನ ಭಾಗವಾಗಿತ್ತು, ಭಾರತ, ಪಾಕಿಸ್ತಾನ, ನೆದರ್‌ಲ್ಯಾಂಡ್ಸ್ ಮತ್ತು ಯುಎಸ್‌ಎ ವಿರುದ್ಧ ಸೋತಿತು. ಇತ್ತ ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಕೆನಡಾ ಕೂಡ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಯುಎಇ ವಿರುದ್ಧ ಸೋತಿತು. ಮತ್ತೊಂದೆಡೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಓಮನ್, ಜಿಂಬಾಬ್ವೆ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ವಿರುದ್ಧ ಸೋತಿತು. ಈ ಮೂರು ತಂಡಗಳನ್ನು ಹೊರತುಪಡಿಸಿ ಉಳಿದ 17 ತಂಡಗಳು ಕನಿಷ್ಠ ಒಂದು ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದವು.

ಸೋತ ತಂಡಗಳಿಗೂ ಬಹುಮಾನ

ಈ ಮೂರು ತಂಡಗಳು ಒಂದು ಪಂದ್ಯವನ್ನು ಗೆದ್ದಿಲ್ಲದಿರಬಹುದು, ಆದಾಗ್ಯೂ ಈ ತಂಡಗಳಿಗೆ ಐಸಿಸಿಯಿಂದ ಬಹುಮಾನದ ಹಣ ಸಿಗುವುದು ಖಚಿತ. ವಾಸ್ತವವಾಗಿ, ಕಳೆದ ಆವೃತ್ತಿಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು 9 ರಿಂದ 12 ನೇ ಸ್ಥಾನ ಪಡೆದ ಪ್ರತಿ ತಂಡಕ್ಕೆ ಸುಮಾರು 2.25 ಕೋಟಿ ರೂ. ಬಹುಮಾನ ನೀಡಿತ್ತು. ಹಾಗೆಯೇ 13 ರಿಂದ 20 ನೇ ಸ್ಥಾನ ಪಡೆದ ಪ್ರತಿ ತಂಡಗಳು ಕೂಡ ಸುಮಾರು 2 ಕೋಟಿ ರೂ. ಬಹುಮಾನ ಪಡೆದಿದ್ದವು. ಹೀಗಾಗಿ ಈ ಆವೃತ್ತಿಯಲ್ಲಿ ಕೊನೆಯ 3 ಸ್ಥಾನ ಪಡೆದುಕೊಂಡಿರುವ ಈ ಮೂರು ತಂಡಗಳಿಗೂ ಕನಿಷ್ಠ 2 ಕೋಟಿ ರೂ. ಬಹುಮಾನ ಸಿಗುವುದು ಖಚಿತ.

ಇವು ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮೂಲಕ ಅನುಭವವನ್ನು ಪಡೆಯುವ ಅಸೋಸಿಯೇಟ್ ರಾಷ್ಟ್ರಗಳಾಗಿದ್ದು, ಐಸಿಸಿಯಿಂದ ಬರುವ ಈ ಬಹುಮಾನವು ಅವರ ಕ್ರಿಕೆಟ್ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಈ ತಂಡಗಳು ಐಸಿಸಿಯಿಂದ ಸಿಗುವ ಈ ಹಣವನ್ನು ಮುಂದಿನ ಪಂದ್ಯಾವಳಿಗೆ ತಯಾರಿ, ಆಟಗಾರರ ಅಭಿವೃದ್ಧಿ ಮತ್ತು ಕ್ರಿಕೆಟ್ ಮೂಲಸೌಕರ್ಯಕ್ಕಾಗಿ ಖರ್ಚು ಮಾಡಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕ ಚಂದ್ರು ಲಮಾಣಿ ಲೋಕಾ ಬಲೆಗೆ: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಏನಂದ್ರು ನೋಡಿ – Kannada News | Union Minister Pralhad Joshi Reacts to MLA Chandru Lamanis Lokayukta Trap

ಧಾರವಾಡ, ಫೆಬ್ರವರಿ 21: ಗದಗ ಜಿಲ್ಲೆಯ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ,  ಮಾಹಿತಿ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಜನಪ್ರತಿನಿಧಿಗಳಾದವರು ಬಹಳ ಜಾಗರೂಕರಾಗಿರಬೇಕು ಮತ್ತು ಜನರ ಕೆಲಸ ಮಾಡಲು ಬಂದಿರುತ್ತಾರೆ. ಸಾರ್ವಜನಿಕ ಬದುಕಿನಲ್ಲಿ ಜನರಿಗೆ ಆದರ್ಶವಾಗಿರಬೇಕು. ಪ್ರಾಥಮಿಕ ವರದಿಗಳನ್ನು ಗಮನಿಸಿದಾಗ ಈ ವಿಷಯ ಮನಸ್ಸಿಗೆ ಕಿರಿಕಿರಿ ಮತ್ತು ನೋವುಂಟು ಮಾಡಿದೆ. ಶಾಸಕರು ಈ ಕೃತ್ಯ ಎಸಗಿದ್ದಾರೆಯೇ ಅಥವಾ ಇಲ್ಲವೇ ಎಂಬ ನಿರ್ಧಾರಕ್ಕೆ ನಾನು ಬರುವುದಿಲ್ಲ. ಏಕೆಂದರೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮೊಮ್ಮಗನ ಮದುವೆ ನೋಡುವ ಆಸೆಯಲ್ಲಿದ್ದ ಅಜ್ಜಿಗೆ ಶಾಕ್​​​: ಇಡೀ ಊರಿಗೆ ಬಾಡೂಟ ಹಾಕಿಸಿ ಮದುಮಗ ನಾಪತ್ತೆ! – Kannada News | Bettadooru Missing: Muddurangappa Vanishes Post Feast Before Wedding

ರಾಯಚೂರು, ಫೆ.21: ಇನ್ನೊಂದು ತಿಂಗಳಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನೊಬ್ಬ, ಇಡೀ ಊರಿಗೆ ಬಾಡೂಟ ಹಾಕಿಸಿದ ಮಾರನೇ ದಿನವೇ ನಾಪತ್ತೆಯಾಗಿರುವ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಮಾನ್ವಿ ತಾಲೂಕಿನ ಬೆಟ್ಟದೂರು ಗ್ರಾಮದಲ್ಲಿ (Raichur missing groom) ನಡೆದಿದೆ. ಬೆಟ್ಟದೂರು ಗ್ರಾಮದ ನಿವಾಸಿ 25 ವರ್ಷದ ಮುದ್ದುರಂಗಪ್ಪ ನಾಪತ್ತೆಯಾದ ಯುವಕ. ಬಿಎ ಪದವೀಧರನಾಗಿದ್ದ ಈತ ಹೊಲದ ಕೆಲಸ ಮಾಡಿಕೊಂಡಿದ್ದ. ಕಳೆದ ಒಂದು ವರ್ಷದ ಹಿಂದೆ ಸಂಬಂಧಿಕರ ಯುವತಿಯೊಂದಿಗೆ ಈತನ ಮದುವೆ ನಿಶ್ಚಯವಾಗಿತ್ತು. ಇನ್ನೇನು ಒಂದು ತಿಂಗಳಲ್ಲಿ ಮದುವೆ ನಡೆಯಬೇಕಿತ್ತು.

ಮುದ್ದುರಂಗಪ್ಪನ ಕುಟುಂಬದಲ್ಲಿ ಮದುವೆಗೂ ಮುನ್ನ ಮರಿ ಹೊಡೆದು ಇಡೀ ಊರಿಗೆ ಬಾಡೂಟ ಹಾಕಿಸುವ ಸಂಪ್ರದಾಯವಿದೆ. ಅದರಂತೆ ಕಳೆದ ಜನವರಿಯಲ್ಲಿ ಮುದ್ದುರಂಗಪ್ಪ ಸಂಭ್ರಮದಿಂದ ಇಡೀ ಊರಿಗೆ ಬಾಡೂಟ ಹಾಕಿಸಿದ್ದ. ಆದರೆ, ಈ ಸಂಭ್ರಮದ ಮರುದಿನವೇ ಆತ ಯಾರಿಗೂ ತಿಳಿಸದೆ ಏಕಾಏಕಿ ನಾಪತ್ತೆಯಾಗಿದ್ದಾನೆ.

ಮುದ್ದುರಂಗಪ್ಪ ಮತ್ತು ಆತನ ತಮ್ಮ-ತಂಗಿ ಚಿಕ್ಕವರಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದರು. ಅಂದಿನಿಂದ ಅಜ್ಜಿ ನಾಗಮ್ಮ ಅವರೇ ಕಷ್ಟಪಟ್ಟು ಮೊಮ್ಮಕ್ಕಳನ್ನು ಸಾಕಿ ಸಲಹಿದ್ದರು. ಮೊಮ್ಮಗ ಮದುವೆಯಾಗಿ ಸುಖವಾಗಿರುತ್ತಾನೆ ಎಂದು ಕನಸು ಕಂಡಿದ್ದ ಅಜ್ಜಿಗೆ ಈಗ ಮೊಮ್ಮಗ ನಾಪತ್ತೆಯಾಗಿರುವುದು ಅರಗಿಸಿಕೊಳ್ಳಲಾಗುತ್ತಿಲ್ಲ. ನನ್ನ ಮೊಮ್ಮಗ ಮರಳಿ ಬರಲಿ ಎಂದು ನಾಗಮ್ಮ ದೇವರಲ್ಲಿ ಪ್ರಾರ್ಥಿಸುತ್ತಾ ಉಪವಾಸ ಕುಳಿತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಮಹಿಳೆಯರೇ ಎಚ್ಚರ: ಮತ್ತೆ ನಗರದಲ್ಲಿ ಸರಗಳ್ಳರು ಹಾವಳಿ!

ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕುಟುಂಬಸ್ಥರು ಮತ್ತು ಊರಿನವರು ಮಂತ್ರಾಲಯ, ಆಂಧ್ರಪ್ರದೇಶ, ತೆಲಂಗಾಣ, ಯಾದಗಿರಿ, ಬಳ್ಳಾರಿ ಹಾಗೂ ಕಲಬುರ್ಗಿ ಸೇರಿದಂತೆ ಹಲವೆಡೆ ಹುಡುಕಾಟ ನಡೆಸುತ್ತಿದ್ದಾರೆ. ಫೋಟೋದಲ್ಲಿರುವ ಯುವಕ (ಮುದ್ದುರಂಗಪ್ಪ) ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಮಾನ್ವಿ ಪೊಲೀಸ್ ಠಾಣೆಗೆ ಅಥವಾ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲು ಎಂದು ಸೋಶಿಯಲ್​ ಮೀಡಿಯಾದಲ್ಲೂ ಮನವಿ ಮಾಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link