All posts by nagaraj11081993

T20 World Cup 2026: ಸೊನ್ನೆ ಸುತ್ತದ ಏಕೈಕ ತಂಡ ದಕ್ಷಿಣ ಆಫ್ರಿಕಾ – Kannada News | T20 World Cup 2026: South Africa Sets Unique No Duck Feat While India and Abhishek Sharma Face Duck Trouble

ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ತನ್ನ ಗುಂಪು ಹಂತದ ನಾಲ್ಕು ಪಂದ್ಯಗಳನ್ನು ಗೆದ್ದು ಸೂಪರ್ 8 ರಲ್ಲಿ ಅಗ್ರಸ್ಥಾನದಲ್ಲಿದೆ. ಕ್ವಿಂಟನ್ ಡಿ ಕಾಕ್, ರಯಾನ್ ರಿಕಲ್ಟನ್, ಐಡೆನ್ ಮಾರ್ಕ್ರಾಮ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಒಳಗೊಂಡ ಅವರ ಬ್ಯಾಟಿಂಗ್ ತಂಡವು ಸ್ಥಿರವಾಗಿ ರನ್ ಗಳಿಸುವುದನ್ನು ಮುಂದುವರೆಸಿದೆ. ಇದೀಗ ಆಫ್ರಿಕಾ ತಂಡ ಸೂಪರ್ 8 ಸುತ್ತಿನಲ್ಲಿ ಭಾರತ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆಯನ್ನು ಎದುರಿಸಲಿದ್ದಾರೆ.

Source link

ಎಐ ಶೃಂಗಸಭೆಯ ಪ್ರತಿಭಟನೆಗೆ ಆಕ್ರೋಶ; ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು – Kannada News | BJP workers show black flag to Rahul Gandhi in Mumbai after Congress shirtless protests at AI Summit

ನವದೆಹಲಿ, ಫೆಬ್ರವರಿ 21: ನವದೆಹಲಿಯಲ್ಲಿ ನಡೆದ AI ಶೃಂಗಸಭೆಯಲ್ಲಿ ಭಾರತೀಯ ಯುವ ಕಾಂಗ್ರೆಸ್ (IYC) ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಇಂದು ಮುಂಬೈನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ರಸ್ತೆಯ ಬದಿ ನಿಂತಿದ್ದ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿಯ ಕಾರು ಬರುತ್ತಿದ್ದಂತೆ ಕಪ್ಪು ಬಾವುಟ ತೋರುತ್ತಾ ಅವರ ವಿರುದ್ಧ ಘೋಷಣೆ ಕೂಗಿದರು.

2014ರ RSS ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿವಂಡಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗಲು ಲೋಕಸಭೆಯ ವಿರೋಧ ಪಕ್ಷದ ನಾಯಕ ಇಂದು ಮುಂಬೈಗೆ ತೆರಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಮದುವೆ ವಿಷಯ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ – Kannada News | Rashmika Vijay Wedding Confirmed: Actress Reacts, Udaipur Destination Details Out!

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ (Rashmika Mandanna) ಮಂದಣ್ಣ ಅವರು ಇನ್ನು ಕೆಲವೇ ದಿನಗಳಲ್ಲಿ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಫೆಬ್ರವರಿ 26ರಂದು ಇವರ ಮದುವೆ ನಡೆಯುತ್ತಿದೆ. ಈ ವಿವಾಹದ ಬಗ್ಗೆ ಅವರು ಈವರೆಗೆ ಅಧಿಕೃತ ಮಾಹಿತಿ ನೀಡಿರಲಿಲ್ಲ. ಈಗ ರಶ್ಮಿಕಾ ಮಂದಣ್ಣ ಅವರು ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ಕಳುಹಿಸಿದ ಸಂದೇಶಕ್ಕೆ ಪ್ರೀತಿಯಿಂದ ಪ್ರತಿಕ್ರಿಯಿಸಿ, ಮದುವೆ ಒಪ್ಪಿಕೊಂಡಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ತೆರೆಮೇಲೆ ಒಟ್ಟಿಗೆ ನಟಿಸಿದವರು. ಬಣ್ಣ ಹಚ್ಚುತ್ತಲೇ ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಇವರ ಪ್ರೀತಿ ಆರಂಭ ಆಗಿದ್ದು ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಗುಟ್ಟಾಗಿ ಇವರ ನಿಶ್ಚಿತಾರ್ಥ ನಡೆದಿತ್ತು. ಈಗ ವಿವಾಹ ಆಗುವ ಮೂಲಕ ಅವರು ಸಂಬಂಧಕ್ಕೆ ಹೊಸ ಅರ್ಥ ಸಿಗುತ್ತಿದೆ.

ಬಾಲಿವುಡ್ ಹಂಗಾಮ ತಂಡದವರು ರಶ್ಮಿಕಾ ಮಂದಣ್ಣಗೆ ‘ಅಭಿನಂದನೆಗಳು’ ಎಂಬ ಸಂದೇಶ ಕಳುಹಿಸಿತ್ತಂತೆ. ಸಾಮಾನ್ಯವಾಗಿ ಗಾಸಿಪ್ ಆದರೆ, ಈ ವಿಷಯದಲ್ಲಿ ಸೈಲೆಂಟ್ ಆಗುತ್ತಾರೆ. ಆದರೆ, ರಶ್ಮಿಕಾ ಹಾಗೆ ಮಾಡಿಲ್ಲ. ಅವರು ‘ಧನ್ಯವಾದಗಳು’ ಎಂದು ಉತ್ತರಿಸಿದ್ದಾರೆ. ಇದಕ್ಕೆ ನಗುವ ಎಮೋಜಿ ಕೂಡ ಹಾಕಿದ್ದಾರಂತೆ. ಈ ಮೂಲಕ ವಿವಾಹ ವಿಷಯ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಗೆ ವಿದೇಶಿ ಸಂಸ್ಥೆಯ ಭದ್ರತೆ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಉದಯಪುರದಲ್ಲಿ ಮದುವೆ ಆಗುತ್ತಿದ್ದಾರೆ. ಇದಕ್ಕೆ ಐಷಾರಾಮಿ ಹೋಟೆಲ್ ಬುಕ್ ಆಗಿದ್ದು, ಸಿದ್ಧತೆ ನಡೆಯುತ್ತಿದೆ. ಇತ್ತೀಚೆಗೆ ದಂಪತಿಯ ಆಮಂತ್ರಣಪತ್ರ ವೈರಲ್ ಆಗಿ ಗಮನ ಸೆಳೆಯಿತು. ವಿವಾಹದ ಬಳಿಕ ಹೈದರಾಬಾದ್​​ನಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ಆಯೋಜನೆ ಮಾಡಲಾಗಿದೆ. ಮಾರ್​ಚ್ 4ರಂದು ಈ ಆರತಕ್ಷತೆ ನಿಗದಿ ಆಗಿದೆ. ಡೆಸ್ಟಿನೇಷನ್ ವೆಡ್ಡಿಂಗ್​ಗೆ ಉದಯಪುರ ಒಳ್ಳೆಯ ಜಾಗ. ಅನೇಕ ಸೆಲೆಬ್ರಿಟಿಗಳು ಇಲ್ಲಿ ವಿವಾಹ ಆಗಿದ್ದಾರೆ. ಈ ಸಾಲಿಗೆ ರಶ್ಮಿಕಾ ಕೂಡ ಸೇರುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು ‘ಗೀತ ಗೋವಿಂದಂ’ ಧಾರಾವಾಹಿಯಲ್ಲಿ. ಆ ಬಳಿಕ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಇವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನನಗೆ ಚಿಂತೆ ಶುರುವಾಗಿದೆ; ಸೂಪರ್ 8 ಸುತ್ತಿಗೂ ಮುನ್ನ ಅಭಿಷೇಕ್ ಬಗ್ಗೆ ಸೂರ್ಯನ ಸ್ಫೋಟಕ ಹೇಳಿಕೆ – Kannada News | T20 WC 2026: Abhishek’s 3 Ducks; Surya Backs Player Ahead of Super 8 Challenge

2026 ರ ಟಿ20 ವಿಶ್ವಕಪ್‌ನ (T20 World Cup 2026) ಒಂದು ಸುತ್ತು ಮುಗಿದಿದ್ದು, ಈಗ ಎರಡನೇ ಸುತ್ತು ಇಂದಿನಿಂದ ಆರಂಭವಾಗಿದೆ. ಟೀಂ ಇಂಡಿಯಾ ಮೊದಲ ಸುತ್ತಿನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಸುತ್ತಿನಲ್ಲಿ ತನ್ನ ಮೊದಲ ಪಂದ್ಯವನ್ನು ಕಳೆದ ವಿಶ್ವಕಪ್ ರನ್ನರ್ ಅಪ್ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ತಂಡಕ್ಕೆ ಅಭಿಷೇಕ್ (Abhishek Sharma) ಅವರ ಹ್ಯಾಟ್ರಿಕ್ ಸೊನ್ನೆ ಪ್ರದರ್ಶನ ದೊಡ್ಡ ತಲೆನೋವಾಗಿದೆ. ಈ ಪಂದ್ಯಾವಳಿಯಲ್ಲಿ ಆಡಿರುವ ಸತತ ಮೂರು ಪಂದ್ಯಗಳಲ್ಲಿಯೂ ಅಭಿಷೇಕ್ 0 ರನ್ ಗಳಿಸಿ ಔಟಾಗಿದ್ದಾರೆ. ಹೀಗಾಗಿ ಸೂಪರ್ 8 ಸುತ್ತು ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಸೂರ್ಯಕುಮಾರ್ (Suryakumar Yadav) ಬಳಿ, ಅಭಿಷೇಕ್ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸೂರ್ಯ, ವಿಭಿನ್ನ ಉತ್ತರ ನೀಡುವ ಮೂಲಕ ಟೀಕಕಾರರ ಬಾಯಿ ಮುಚ್ಚಿಸಿದರು.

ವಾಸ್ತವವಾಗಿ ಈ ವಿಶ್ವಕಪ್‌ನಲ್ಲಿ ಅಭಿಷೇಕ್ ಅವರನ್ನು ಟೀಂ ಇಂಡಿಯಾದ ಬ್ಯಾಟಿಂಗ್‌ ವಿಭಾಗದ ಅತಿದೊಡ್ಡ ಶಕ್ತಿ ಎಂದು ಪರಿಗಣಿಸಲಾಗಿತ್ತು. ಕಳೆದೊಂದು ವರ್ಷದಿಂದ ಅಭಿಷೇಕ್ ಕೂಡ ಇದನ್ನು ಸಾಭೀತುಪಡಿಸಿಕೊಂಡು ಬಂದಿದ್ದರು. ಆದರೆ ಟಿ20 ವಿಶ್ವಕಪ್​ನಲ್ಲಿ ಅಭಿಷೇಕ್​ಗೆ ಉತ್ತಮ ಪ್ರದರ್ಶನ ನೀಡುವುದಿರಲಿ, ಖಾತೆಯನ್ನೂ ತೆರೆಯಲು ಆಗಿಲ್ಲ. ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆಯೇ ಔಟಾದ ನಂತರ, ಅಭಿ ಅವರ ಆರೋಗ್ಯ ಹದಗೆಟ್ಟಿತು. ಇದರಿಂದಾಗಿ ಎರಡು ದಿನಗಳ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಆದಾಗ್ಯೂ, ಅವರು ಆಟಕ್ಕೆ ಮರಳಿದರೂ ಅವರ ಅದೃಷ್ಟ ಬದಲಾಗಲಿಲ್ಲ ಮತ್ತು ಮುಂದಿನ ಎರಡು ಪಂದ್ಯಗಳಲ್ಲಿ ಅಭಿ ಸೊನ್ನೆ ಸುತ್ತಿದರು.

ಅಭಿಷೇಕ್‌ ಬೆನ್ನಿಗೆ ನಿಂತ ಸೂರ್ಯ

ಪರಿಣಾಮವಾಗಿ, ಸೂಪರ್ 8 ಸುತ್ತು ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ನಾಯಕ ಸೂರ್ಯ, ‘ಅಭಿಷೇಕ್ ಶರ್ಮಾ ಅವರ ಫಾರ್ಮ್ ಬಗ್ಗೆ ಚಿಂತಿಸುತ್ತಿರುವವರ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಅಭಿಷೇಕ್ ಅವರನ್ನು ಎದುರಿಸುವ ತಂಡಗಳ ಬಗ್ಗೆ ನಾನು ಹೆಚ್ಚು ಚಿಂತಿತನಾಗಿದ್ದೇನೆ. ಅವರು ಕಳೆದ ವರ್ಷ ತಂಡಕ್ಕೆ ಎಲ್ಲವನ್ನೂ ಮಾಡಿದರು, ಆದ್ದರಿಂದ ಈಗ ಅಭಿ ಅವರ ಬೆನ್ನಿಗೆ ನಿಲ್ಲುವ ಸರದಿ ನಮ್ಮದು’ ಎಂದು ಹೇಳಿದರು.

IND vs NED: ಸತತ ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ ಅಭಿಷೇಕ್ ಶರ್ಮಾ

ಒಂದೇ ತಿಂಗಳಲ್ಲಿ 5 ಬಾರಿ ಸೊನ್ನೆಗೆ ಔಟ್

ಈ ವಿಶ್ವಕಪ್‌ನಲ್ಲಿ ಇಂತಹ ಆರಂಭವನ್ನು ಟೀಂ ಇಂಡಿಯಾ ಮತ್ತು ಅಭಿಷೇಕ್ ಸ್ವತಃ ಊಹಿಸಲೂ ಸಾಧ್ಯವಿಲ್ಲ. ಈ ವಿಶ್ವಕಪ್ ಮಾತ್ರವಲ್ಲ, ಅಭಿಷೇಕ್ ಅವರ 2026 ರ ಪ್ರದರ್ಶನವು ಇಲ್ಲಿಯವರೆಗೆ ಆಶಾದಾಯಕವಾಗಿಲ್ಲ. ಕೇವಲ ಒಂದು ತಿಂಗಳಲ್ಲಿ, ಅವರು ಎಂಟು ಟಿ20 ಪಂದ್ಯಗಳನ್ನಾಡಿದ್ದು, ಐದರಲ್ಲಿ ತಮ್ಮ ಖಾತೆಯನ್ನು ತೆರೆಯಲು ವಿಫಲರಾಗಿದ್ದಾರೆ. ಇದರ ಹೊರತಾಗಿಯೂ, ಟೀಂ ಇಂಡಿಯಾ ವಿಶ್ವಕಪ್‌ನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದಿದೆ, ಆದರೆ ಸೂಪರ್ 8 ಸುತ್ತಿನಲ್ಲಿ ಸ್ಪರ್ಧೆಯು ಮೊದಲಿಗಿಂತ ಕಠಿಣವಾಗಿರುತ್ತದೆ. ಆದ್ದರಿಂದ, ಅಭಿಷೇಕ್ ದಕ್ಷಿಣ ಆಫ್ರಿಕಾ ವಿರುದ್ಧ ಬಲವಾದ ಅಥವಾ ಪ್ರಭಾವಶಾಲಿ ಇನ್ನಿಂಗ್ಸ್ ನೀಡದಿದ್ದರೆ, ತಂಡಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿಂದ ಹೊರ ಬರುವ ಆಸೆಯಲ್ಲಿದ್ದ ಕಮಲಾಕರ ಭಟ್​​ಗೆ ನಿರಾಸೆ: ಇನ್ನೊಂದು ಕೇಸ್ ದಾಖಲು – Kannada News | Karwar: Kamalakara Bhat Faces New POCSO Case in Siddapura

ಕಾರವಾರ, ಫೆಬ್ರವರಿ 21: ಜ್ಯೋತಿಷಿಯಾಗಿ ಪ್ರಸಿದ್ಧಿ ಪಡೆದಿದ್ದ ಕಮಲಾಕರ ಭಟ್ (Kamalakar Bhat)​​, ಹಣ, ಆಸ್ತಿ, ರಾಜಕೀಯ ನಾಯಕರ ಬೆಂಬಲ ಸಂಪಾದಿಸಿದ್ಧ. ಆದರೆ ಸುಚಿತ್ರಾಳ ಸಹವಾಸ ಮಾಡಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲು ಕಂಬಿ ಎಣಿಸುವಂತಾಗಿದೆ. ಹೀಗಿರುವಾಗಲೇ ಇದೀಗ ಕಮಲಾಕರ ಭಟ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ (POCSO Case) ದಾಖಲಾಗಿದೆ. ಹೀಗಾಗಿ ಸದ್ಯ ಜೈಲಿನಿಂದ ಹೊರಬರುವುದು ಭಾರೀ ಕಷ್ಟವಾಗಿದೆ.

ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್‌ ಸದ್ಯ ಜೈಲು ಸೇರಿದ್ದಾರೆ. ಈ ಮಧ್ಯೆ ಅವರ ವಿರುದ್ಧ ಇನ್ನೊಂದು ಕೇಸ್ ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಆರೋಪದಡಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ತುಂಗಾನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಜ್ಯೋತಿಷ್ಯ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್‌-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು

ಕಳೆದ ಕೆಲ ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಕಮಲಾಕರ ಭಟ್, ಕೊಲೆಯ ವಿಚಾರವಾಗಿ ಪೊಲೀಸ್‌ ಹತ್ತಾರು ಪ್ರಶ್ನೆಗಳನ್ನ ಕೇಳಿದ್ದಾರೆ. ಈ ವೇಳೆ ಕೊಲೆಯಾದ ಸ್ಥಳದಲ್ಲಿ ತಾನು ಇರಲಿಲ್ಲ, ಕೊಲೆ ಆದ ಸಂದರ್ಭದಲ್ಲಿ ನಾನು ಬೇರೆ ಕಡೆ ಇದ್ದೆ. ಬೇಕಾದರೆ ನನ್ನ ಮೊಬೈಲ್ ಲೊಕೇಶನ್ ಚೆಕ್ ಮಾಡಿ ಎಂದಿದ್ದರು.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ: ದೂರು ನೀಡಿದ್ದಕ್ಕೆ ಹಲ್ಲೆ; ಓರ್ವ ಸಾವು

ಲೊಕೇಶನ್ ಚೆಕ್ ಮಾಡಿದಾಗ ಕೊಲೆಯಾದ ಸಂದರ್ಭದಲ್ಲಿ ಅಲ್ಲಿ ಇರಲಿಲ್ಲ. ಸಿದ್ದಾಪುರದಲ್ಲಿ ಇದ್ದರು, ಆದರೆ ಅವರಗುಪ್ಪಗೆ ಹೊಗಿರಲಿಲ್ಲ. ಪೊಲೀಸ್ ತನಿಖೆ ವೇಳೆ ಅವರಗುಪ್ಪಗೆ ಹೊಗದೆ ಇರುವುದು ಕಂಡುಬಂದಿತ್ತು. ಸದ್ಯ ಇನ್ನೇನು ಜೈಲಿನಿಂದ ಹೊರ ಬರುತ್ತೇನೆ ಎಂಬ ಆಶಯದಲ್ಲಿದ್ದ ಕಮಲಾಕರ ಭಟ್​​ಗೆ ಇದೀಗ ಈ ಪೋಕ್ಸೋ ಕೇಸ್ ದಾಖಲಾಗಿರುವುದು ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆಹಾ, ಎಷ್ಟು ಚೆಂದ; ಗುಲಾಬಿ ಹೂವಿನಂತೆ ಕಂಗೊಳಿಸಿದ ವೈಷ್ಣವಿ

Source link

ಬೆಂಗಳೂರಿನ ಮಹಿಳೆಯರೇ ಎಚ್ಚರ: ಮತ್ತೆ ನಗರದಲ್ಲಿ ಸರಗಳ್ಳರು ಹಾವಳಿ! – Kannada News | Bengaluru Crime Alert: Chain Snatchers Target Women; Police Investigate

ಬೆಂಗಳೂರು, ಫೆ.21: ರಾಜಧಾನಿಯಲ್ಲಿ (Bangalore chain snatching) ಬಂಗಾರದ ಬೆಲೆ ಗಗನಕ್ಕೇರುತ್ತಿದ್ದಂತೆ, ಇತ್ತ ಸರಗಳ್ಳರ ಹಾವಳಿಯೂ ಮಿತಿಮೀರಿದೆ. ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬರುವ ಖದೀಮರು, ರಸ್ತೆಯಲ್ಲಿ ಒಂಟಿಯಾಗಿ ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಕಿತ್ತು ಪರಾರಿಯಾಗುತ್ತಿರುವ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಆಗ್ಗಾಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇದೀಗ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿಡಿಯೋ ಸ್ಟಾಪ್ ನಿವಾಸಿ ಇಂದ್ರಾವತಿ ಎಂಬುವವರೇ ಈ ಕೃತ್ಯಕ್ಕೆ ಬಲಿಯಾದ ಮಹಿಳೆ. ರಾತ್ರಿ ಸುಮಾರು 8:30ರ ವೇಳೆಗೆ ಇಂದ್ರಾವತಿ ಅವರು ದಿನಸಿ ಅಂಗಡಿಯಿಂದ ಸಾಮಾನು ತರಲು ಒಂಟಿಯಾಗಿ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಹೊಂಚು ಹಾಕಿದ್ದ ಇಬ್ಬರು ಕಿರಾತಕರು ಬೈಕ್‌ನಲ್ಲಿ ಬಂದು, ಮೊದಲು ಇವರನ್ನು ದಾಟಿ ಮುಂದೆ ಹೋಗಿದ್ದಾರೆ. ಬಳಿಕ ಯಾರು ಇಲ್ಲದನ್ನು ಖಚಿತಪಡಿಸಿಕೊಂಡು ವಾಪಸ್ ತಿರುಗಿ ಬಂದು, ಇಂದ್ರಾವತಿ ಅವರ ಕುತ್ತಿಗೆಯಲ್ಲಿದ್ದ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತು ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಇಡೀ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹೆಲ್ಮೆಟ್ ಧರಿಸಿದ್ದರಿಂದ ಆರೋಪಿಗಳ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ. ಇಂದ್ರಾವತಿ ಅವರು ಗಾಬರಿಯಿಂದ ಕಿರುಚಾಡಿದರೂ, ಆರೋಪಿಗಳು ಕ್ಷಣಾರ್ಧದಲ್ಲಿ ಕಣ್ಮರೆಯಾಗಿದ್ದಾರೆ. ಬೈಕ್‌ನಲ್ಲಿ ಬಂದವರು ಏಕಾಏಕಿ ಸರಕ್ಕೆ ಕೈ ಹಾಕಿದರು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಸರ ಕಿತ್ತುಕೊಂಡು ವೇಗವಾಗಿ ಹೊರಟು ಹೋದರು ಎಂದು ಇಂದ್ರಾವತಿ ಹೇಳಿದ್ದಾರೆ.

ಇದನ್ನೂ ಓದಿ: ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ! ಎಲ್ಲವೂ ಸುಟ್ಟು ಭಸ್ಮ

ನಗರದಲ್ಲಿ ಸರಗಳ್ಳರು ಮತ್ತೆ ಸಕ್ರಿಯರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ಬಂಗಾರದ ಬೆಲೆ ಏರಿಕೆಯಾಗಿರುವ ಈ ಸಂದರ್ಭದಲ್ಲಿ ಹಳೇ ಖದೀಮರೇ ಮತ್ತೆ ಆಕ್ಟಿವ್ ಆಗಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ವರದಿ:  ಮಂಜುನಾಥ್

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಈ ಅಂಶಗಳೇ ಮುಖ್ಯ ಕಾರಣ – Kannada News | Chanakya Niti: Chanakya says this is the main reason why relationships between couples deteriorate

ಗಂಡ ಹೆಂಡತಿಯ ಸಂಬಂಧ (relationship) ಎನ್ನುವಂತಹದ್ದು ತುಂಬಾನೇ ಅಮೂಲ್ಯ ಮತ್ತು ವಿಶೇಷವಾದದ್ದು. ಈ ಸಂಬಂಧವನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ, ಇಲ್ಲದಿದ್ದರೆ ಒಡೆದು ಹೋಗುತ್ತದೆ. ಅದರಲ್ಲೂ ಈ ಕೆಲವು ಅಂಶಗಳು ವಿಚ್ಛೇದನಕ್ಕೂ ಕಾರಣವಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಅವುಗಳನ್ನು ಸರಿಪಡಿಸಿಕೊಂಡರೆ ಖಂಡಿತವಾಗಿಯೂ ಸಂಸಾರ ಹಾಲು ಜೇನಿನಂತಿರುತ್ತದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಯಾವ ಅಂಶಗಳು ಗಂಡ ಹೆಂಡತಿಯ ಸಂಬಂಧದ ನಡುವೆ ಬಿರುಕು ಮೂಡಲು ಕಾರಣವಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಕಾರಣ ಈ ಅಂಶ:

ಸಂವಹನದ ಕೊರತೆ: ಸಂಬಂಧವನ್ನು ಬಲಪಡಿಸುವಲ್ಲಿ ಸಂವಹನ ಬಹುಮುಖ್ಯ ಪಾತ್ರ ವಹಿಸುತ್ತದೆ. ಸಣ್ಣಪುಟ್ಟ ಜಗಳಗಳಾದಾಗ ಮಾತು ಬಿಟ್ಟು ಕುಳಿತರೆ ಅಂತಹ ಸಂದರ್ಭಗಳಲ್ಲಿ ಸಂಬಂಧ ಮತ್ತಷ್ಟು ದೂರವಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಪತಿಪತ್ನಿಯರು ಮಾತು ಬಿಡಬಾರದು.

ಸ್ವಾರ್ಥ ಮನೋಭಾವನೆ: ಗಂಡ ತನ್ನ ಬಗ್ಗೆ ಮಾತ್ರ, ಹೆಂಡತಿ ಆಕೆಯ ಬಗ್ಗೆ ಮಾತ್ರ ಯೋಚಿಸಿದರೆ, ಗಂಡನ ಬಗ್ಗೆ ಪ್ರೀತಿ ತೋರದೆ ಸ್ವಾರ್ಥ ಭಾವನೆಯಿಂದ ಜೀವನ ನಡೆಸಿದರೆ, ಅಂತಹ ಸಂಬಂಧ ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ಹಾಗಾಗಿ ಸಂಬಂಧದಲ್ಲಿ ಸ್ವಾರ್ಥ ಭಾವನೆ ಇರಬಾರದು.

ಅಹಂಕಾರ: ನಾನೇ ಸರಿ, ನಾನು ಮಾಡಿದ್ದೆಲ್ಲವೂ ಸರಿ ಎಂಬ ಅಹಂಕಾರ ಮನೋಭಾವನೆ ಇದ್ದರೆ ಆ ಸಂಬಂಧ ಹಾಳಾಗುತ್ತದೆ. ಹಾಗಾಗಿ ಗಂಡ ಹೆಂಡತಿಯ ನಡುವೆ ನಾನೇ ಸರಿ ಎಂಬ ಅಹಂಕಾರ ಇರಬಾರದು.

ಗುಟ್ಟುಗಳ ಬಗ್ಗೆ ಇನ್ನೊಬ್ಬರ ಬಳಿ ಹೇಳುವುದು: ಪ್ರತಿಯೊಬ್ಬ ವ್ಯಕ್ತಿಗೂ ಸಾಮರ್ಥ್ಯ ಮತ್ತು ದೌರ್ಬಲ್ಯ ಇದ್ದೇ ಇರುತ್ತದೆ. ಹೀಗಿರುವಾಗ ಗಂಡ ಹೆಂಡತಿಯ ಹಾಗೂ ಪತಿ ತನ್ನ ಪತ್ನಿಯ ದೌರ್ಬಲ್ಯಗಳನ್ನು ಇತರೊಂದಿಗೆ ಹಂಚಿಕೊಳ್ಳಬಾರದು.  ಹಾಗೆ ಮಾಡುವುದರಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.

ಇದನ್ನೂ ಓದಿ: ಕೆಲವು ಸಂದರ್ಭಗಳಲ್ಲಿ ಮೌನವಾಗಿರುವುದೇ ಉತ್ತಮ

ಕೋಪ: ಪ್ರತಿಯೊಂದು ವಿಷಯಕ್ಕೂ ಕೋಪ ಮಾಡಿಕೊಳ್ಳಬಾರದು. ಏಕೆಂದರೆ ಕೋಪವು ಸಂಘರ್ಷ ಮತ್ತು ಅಪಶ್ರುತಿಗೆ ಕಾರಣವಾಗುತ್ತದೆ. ಹಾಗಾಗಿ ಗಂಡ ಹೆಂಡತಿಯ ನಡುವೆ ಕೋಪ ಇರಬಾರದು.

ಅಗೌರವ ತೋರುವುದು: ಗಂಡ-ಹೆಂಡತಿಯ ಸಂಬಂಧದಲ್ಲಿ ಪ್ರೀತಿಯಷ್ಟೇ ಗೌರವವೂ ಮುಖ್ಯ. ಒಬ್ಬರನ್ನೊಬ್ಬರು ಅಗೌರವ ತೋರಿಸಿದರೆ, ಅಂತಹ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ.

ಸುಳ್ಳು ಹೇಳುವುದು: ಗಂಡ ಹೆಂಡತಿ ನಡುವಿನ ಸಂಬಂಧವು ನಂಬಿಕೆಯ ಮೇಲೆ ನಿಂತಿದೆ. ಹೀಗಿರುವಾಗ ಒಬ್ಬರಿಗೊಬ್ಬರು ಸುಳ್ಳು ಹೇಳಿದರೆ, ಪರಸ್ಪರ ಏನನ್ನಾದರೂ ಮರೆಮಾಡಿದರೆ ಅದು ಸಂಬಂಧವನ್ನೇ ನಾಶ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುರುಕುಲದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಅವಿಮುಕ್ತೇಶ್ವರಾನಂದ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲು – Kannada News | POCSO Court orders FIR against Swami Avimuktateshwaranand Saraswati in child sexual abuse case

ನವದೆಹಲಿ, ಫೆಬ್ರವರಿ 21: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಎಡಿಜೆ ಅತ್ಯಾಚಾರ ಮತ್ತು ಪೋಕ್ಸೋ (POCSO) ವಿಶೇಷ ನ್ಯಾಯಾಲಯವು ಜ್ಯೋತಿಷ್ ಪೀಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಮತ್ತು ಅವರ ಶಿಷ್ಯ ಮುಕುಂದಾನಂದ ಗಿರಿ ವಿರುದ್ಧ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ. ನ್ಯಾಯಾಧೀಶ ವಿನೋದ್ ಕುಮಾರ್ ಚೌರಾಸಿಯಾ ಅವರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವಂತೆ ಜೋನ್ಸಿ ಪೊಲೀಸ್ ಠಾಣೆಗೆ ಆದೇಶಿಸಿದ್ದಾರೆ.

ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಶಕುಂಭರಿ ಪೀಠಾಧೀಶ್ವರ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಅವರು ಜನವರಿ 28ರಂದು ಸೆಕ್ಷನ್ 173(4) ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಸಿದ ಅರ್ಜಿಯ ಬಳಿಕ ಈ ಪ್ರಕರಣ ಗಮನ ಸೆಳೆದಿತ್ತು. ವಾರಾಣಸಿಯ ವಿದ್ಯಾಮಠದಲ್ಲಿ ‘ಗುರು ಸೇವೆ’ಯ ಸೋಗಿನಲ್ಲಿ ಅವಿಮುಕ್ತೇಶ್ವರಾನಂದ ಸ್ವಾಮಿಯ ಆಶ್ರಮವು ಗುರುಕುಲದಲ್ಲಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ನಡೆಸುತ್ತಿದೆ ಎಂದು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಅವರು ಅದಕ್ಕೆ ಸಾಕ್ಷ್ಯವಾಗಿ ಸಿಡಿಯನ್ನು ಸಲ್ಲಿಸಿದ್ದರು. ತಮ್ಮನ್ನು ಸಂಪರ್ಕಿಸಿದ್ದ ಸ್ವಾಮೀಜಿಯಿಂದ ಕಿರುಕುಳಕ್ಕೆ ಒಳಗಾದ ಸುಮಾರು 20 ಮಕ್ಕಳ ಬಗ್ಗೆ ಅದರಲ್ಲಿ ನಮೂದಿಸಿದ್ದರು. ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: ಧರ್ಮಗುರುವಿನಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಮಗು ಹುಟ್ಟೋವರೆಗೂ ಗರ್ಭಿಣಿಯಾದ ವಿಷಯವೇ ಗೊತ್ತಾಗಲಿಲ್ಲ!

ಫೆಬ್ರವರಿ 13ರಂದು, ನ್ಯಾಯಾಲಯವು ಇಬ್ಬರು ಅಪ್ರಾಪ್ತ ಬಾಲಕರಿಂದ ವೀಡಿಯೊ-ಗ್ರಾಫ್ ಮಾಡಿದ ಹೇಳಿಕೆಗಳನ್ನು ದಾಖಲಿಸಿತ್ತು. ಪೊಲೀಸ್ ವರದಿಯ ಜೊತೆಗೆ ಈ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ನ್ಯಾಯಾಧೀಶರು ಎಫ್‌ಐಆರ್ ದಾಖಲಿಸುವ ನಿರ್ದೇಶನವನ್ನು ನೀಡುವ ಮೊದಲು ತೀರ್ಪನ್ನು ಕಾಯ್ದಿರಿಸಿದ್ದರು. ಇದೀಗ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ನಡೆಸಲು ಆದೇಶ ನೀಡಲಾಗಿದೆ.

ದೂರುದಾರ ಆಶುತೋಷ್ ಬ್ರಹ್ಮಚಾರಿ ಈ ತೀರ್ಪನ್ನು ದೈವಿಕ ನ್ಯಾಯವೆಂದು ಶ್ಲಾಘಿಸಿದ್ದಾರೆ. ಜನರಿಗೆ ಸತ್ಯವನ್ನು ಬಹಿರಂಗಪಡಿಸಲು ಪ್ರಯಾಗರಾಜ್‌ನಿಂದ ವಿದ್ಯಾಮಠ ವಾರಾಣಸಿಗೆ ಪಾದಯಾತ್ರೆಯನ್ನು ನಡೆಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಸ್ವಾಮೀಜಿಯ ಬಣವು ಈ ಆರೋಪಗಳನ್ನು ಅವರ ಗೋಸಂರಕ್ಷಣಾ ಕಾರ್ಯವನ್ನು ಹಳಿತಪ್ಪಿಸಲು ರೂಪಿಸಲಾದ ಆರೋಪಗಳೆಂದು ತಳ್ಳಿಹಾಕಿದೆ. ಆದರೆ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಮ್ಮಿನ ಶಬ್ದದಿಂದಲೇ ಕಾಯಿಲೆ ಪತ್ತೆ ಹಚ್ಚುತ್ತೆ ಈ ಎಐ ಟೂಲ್! ಏಮ್ಸ್ ನಿಂದಲೂ ಸಿಕ್ಕಿದೆ ಗ್ರೀನ್ ಸಿಗ್ನಲ್! – Kannada News | New AI Tool for Asthma and COPD Diagnosis

ಆರೋಗ್ಯ ವಲಯದಲ್ಲೂ ಎಐ (AI ) ಹೆಚ್ಚು ಪ್ರಯೋಜನಕಾರಿ ಎಂಬುದು ಸಾಬೀತಾಗುತ್ತಿದೆ. ಇದರ ಸಹಾಯದಿಂದ, ಕಡಿಮೆ ಸಮಯದಲ್ಲಿ ರೋಗಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೆಮ್ಮಿನಿಂದಲೇ ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಕೆಮ್ಮಿನ ಶಬ್ದವನ್ನು ಕೇಳುವ ಮೂಲಕ ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನು ಗುರುತಿಸುತ್ತದೆ. ಈ ಸ್ವಾಸ ಎಂಬ ಎಐ ಅಪ್ಲಿಕೇಶನ್ (AI Tool) ನಿಮಿಷಗಳಲ್ಲಿಯೇ ರಿಪೋರ್ಟ್ ನೀಡುವುದರಿಂದ ರೋಗಗಳನ್ನು ಬೇಗ ಪತ್ತೆ ಹಚ್ಚಬಹುದಾಗಿದೆ. ಈ ತಂತ್ರಜ್ಞಾನವನ್ನು ಏಮ್ಸ್ ಸಹ ಅನುಮೋದಿಸಿದೆ. ಹಾಗಾದರೆ ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ, ಇದರಿಂದ ಯಾವ ರೀತಿಯ ಉಪಯೋಗವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತೆ?

ಈ ಎಐ ಆಧಾರಿತ ಅಪ್ಲಿಕೇಶನ್ ಅನ್ನು ಮೊಬೈಲ್ ಫೋನ್‌ ಮೂಲಕವೇ ಬಳಸಬಹುದಾಗಿದ್ದು, ಫೋನ್ ಮುಂದೆ ಎರಡರಿಂದ ಮೂರು ಬಾರಿ ಕೆಮ್ಮಬೇಕಾಗುತ್ತದೆ. ಅಪ್ಲಿಕೇಶನ್ ಕೆಮ್ಮಿನ ಶಬ್ದವನ್ನು ದಾಖಲಿಸಿ ಎಐ ಅಲ್ಗಾರಿದಮ್ ಬಳಸಿ ಅದನ್ನು ಪತ್ತೆ ಮಾಡುತ್ತದೆ. ಸುಮಾರು 8 ನಿಮಿಷಗಳಲ್ಲಿ ವರದಿಯನ್ನು ಸಿದ್ಧಪಡಿಸುತ್ತದೆ, ಉಸಿರಾಟದ ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಮುಖ ನೋಡಿದ್ರೆ ಸಾಕು ನಿಮಗಿರುವ ರೋಗ ಹೇಳುತ್ತೆ ಈ ಯಂತ್ರ!

ಡಾ. ಹರ್ಷಲ್ ರಮೇಶ್ ಸಾಲ್ವೆ ಹೇಳುವಂತೆ ಏಮ್ಸ್ ನಲ್ಲಿ ಸುಮಾರು 460 ರೋಗಿಗಳ ಮೇಲೆ ಈ ಪ್ರಯೋಗವನ್ನು ನಡೆಸಲಾಗಿದ್ದು, ಈ ಅಪ್ಲಿಕೇಶನ್ ಆರಂಭಿಕ ಹಂತದ ಆಸ್ತಮಾ ಮತ್ತು ದೀರ್ಘಕಾಲದ ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಕಾಯಿಲೆಯನ್ನು ಸುಲಭವಾಗಿ ಪತ್ತೆ ಮಾಡುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಕೇವಲ ಕೆಮ್ಮುವಿಕೆಯ ಮೂಲಕ, ರೋಗಿಗೆ ಯಾವ ಉಸಿರಾಟದ ಕಾಯಿಲೆ ಇದೆ ಮತ್ತು ಯಾವ ಮಟ್ಟದಲ್ಲಿದೆ ಎಂಬುದನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ ಈಗ ನಾವು ಉಸಿರಾಟದ ಕಾಯಿಲೆಗಳನ್ನು ಪತ್ತೆಹಚ್ಚಲು ಎಕ್ಸ್- ರೇ ಮತ್ತು ಸಿಟಿ ಸ್ಕ್ಯಾನ್‌ಗಳನ್ನು ಮಾಡಿಸುತ್ತೇವೆ. ಆದರೆ ಈ ಅಪ್ಲಿಕೇಶನ್‌ನ ಸಹಾಯದಿಂದ, ರೋಗಗಳ ಆರಂಭಿಕ ಹಂತಗಳನ್ನು ಸುಲಭವಾಗಿ ಗುರುತಿಸಬಹುದು. ಸ್ಪೈರೋಮೆಟ್ರಿಯಂತಹ ರೋಗನಿರ್ಣಯ ತಂತ್ರಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿ ಈ ತಂತ್ರಜ್ಞಾನವು ಸಹಾಯಕವಾಗಿರುತ್ತದೆ. ಭವಿಷ್ಯದಲ್ಲಿ ಇದು ಕ್ಷಯರೋಗವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link