All posts by nagaraj11081993

ಇನ್ನೂ ಮದುವೆ ಆಗದಿರಲು ಆ ಸಮಸ್ಯೆ ಕಾರಣ: ನಟಿ ಚಿತ್ರ ರೇಖಾ – Kannada News | Rekha Vedavyas talks about her personal life and marriage

ಇಸವಿ 2000 ರಲ್ಲಿ ಕನ್ನಡ ಚಿತ್ರರಂಗಕ್ಕೆ (Sandalwood) ಇಬ್ಬರು ರೇಖಾರ ಪರಿಚಯವಾಯ್ತು. ಒಬ್ಬರು ‘ಸ್ಪರ್ಷ’ ರೇಖಾ ಎನಿಸಿಕೊಂಡರೆ ಮತ್ತೊಬ್ಬರು ‘ಚಿತ್ರ’ ರೇಖಾ. ‘ಸ್ಪರ್ಷ’ ರೇಖಾ, ಸುದೀಪ್ ಮತ್ತು ದರ್ಶನ್ ಇಬ್ಬರೂ ನಾಯಕನಾಗಿ ನಟಿಸಿದ ಸಿನಿಮಾನಲ್ಲಿ ನಾಯಕಿ ಆಗಿ ನಟಿಸಿದ್ದರು. 2004 ರ ಬಳಿಕ ಚಿತ್ರರಂಗದಿಂದ ದೂರಾಗಿದ್ದ ಸ್ಪರ್ಷ ರೇಖಾ, 2015 ರಿಂದ ಮತ್ತೆ ಸಕ್ರಿಯರಾಗಿದ್ದಾರೆ. ಬಿಗ್​​ಬಾಸ್​​ನಲ್ಲಿಯೂ ಇವರು ಭಾಗವಹಿಸಿದ್ದರು. ಆದರೆ ಚಿತ್ರ ರೇಖಾ ಅವರದ್ದು ಬೇರೆ ಕತೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದ ಕನ್ನಡತಿ ‘ಚಿತ್ರ’ ರೇಖಾ. 2014ರ ವರೆಗೆ ಸಕ್ರಿಯರಾಗಿದ್ದರು. ಆ ಬಳಿಕ ಹಠಾತ್ತನೆ ಚಿತ್ರರಂಗದಿಂದ ದೂರಾದರು. ರೇಖಾ ಮದುವೆ ಸಹ ಆಗಿಲ್ಲ, ಈಗಲೂ ಸಿಂಗಲ್ ಆಗಿಯೇ ಇದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ರೇಖಾ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ತೆರೆಯ ಮೇಲೆ ಹಾಡುತ್ತಾ, ಕುಣಿಯುತ್ತಾ ಖುಷಿಯಿಂದ ಕಾಣಿಸಿಕೊಳ್ಳುವ ನಟಿಯರ ಖಾಸಗಿ ಜೀವನದಲ್ಲಿ ಎಷ್ಟೆಲ್ಲ ನೋವುಗಳಿರುತ್ತವೆ ಎಂಬುದಕ್ಕೆ ರೇಖಾ ಅವರ ಜೀವನ ಉದಾಹರಣೆ. ಬೆಂಗಳೂರಿನವರಾದ ರೇಖಾ ವೇದವ್ಯಾಸ, ಚಿತ್ರರಂಗದಲ್ಲಿ ಸುಮಾರು ಒಂದು ದಶಕದ ಕಾಲ ಸ್ಟಾರ್ ನಟಿಯಾಗಿ ಮೆರೆದರು. ಭಾರಿ ಬೇಡಿಕೆಯ ನಟಿ ಎನಿಸಿಕೊಂಡರು. ಆದರೆ ಅವರ ಖಾಸಗಿ ಜೀವನದಲ್ಲಿ ಉಂಟಾದ ಸಮಸ್ಯೆ, ನೋವುಗಳು ಅವರನ್ನು ಹಿಂಡಿ ಹಿಪ್ಪೆ ಮಾಡಿದವು.

ಕನ್ನಡದ ‘ಹುಚ್ಚ’ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ರೇಖಾ, ಬಳಿಕ ‘ಚಿತ್ರ’ ಸಿನಿಮಾನಲ್ಲಿ ನಟಿಸಿ ಚಿತ್ರ ರೇಖಾ ಎನಿಸಿಕೊಂಡರು. ತೆಲುಗಿನ ‘ಆನಂದಂ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರೇಖಾ, ಅಲ್ಲಿಯೂ ಸಹ ಮೊದಲ ಸಿನಿಮಾನಲ್ಲಿಯೇ ಭಾರಿ ಯಶಸ್ಸು ಗಳಿಸಿದರು. ತಮಿಳು, ತೆಲುಗು ಹಾಗೂ ಕನ್ನಡ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದ ಈ ಸುಂದರಿ, 2012ರ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದರು. ಈ ಹಠಾತ್ ಕಣ್ಮರೆಯ ಹಿಂದೆ ದೊಡ್ಡದೊಂದು ನೋವಿನ ಕಥೆಯೇ ಇತ್ತು.

ಇದನ್ನೂ ಓದಿ:ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಇತ್ತೀಚಿನ ಸಂದರ್ಶನವೊಂದರಲ್ಲಿ ಭಾವುಕರಾಗಿ ಮಾತನಾಡಿರುವ ರೇಖಾ, ತಾನು ಸಿನಿಮಾದಿಂದ ದೂರ ಉಳಿಯಲು ಮುಖ್ಯ ಕಾರಣ ‘ಆರೋಗ್ಯದ ಸಮಸ್ಯೆ’ ಎಂದು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಏರುಪೇರಿನಿಂದ ಬಳಲುತ್ತಿದ್ದರಂತೆ. ಇದರಿಂದಾಗಿ ಅವರು ದೈಹಿಕವಾಗಿ ತುಂಬಾ ಕುಗ್ಗಿ ಹೋಗಿದ್ದರು. ಇದೇ ಕಾರಣಕ್ಕೆ ಅವರು ಬಂದಂತಹ ಅನೇಕ ಸಿನಿಮಾ ಅವಕಾಶಗಳನ್ನು ಕೈಬಿಡಬೇಕಾಯಿತಂತೆ.

ರೇಖಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, “ಹಿಂದೆ ನನಗೆ ಮದುವೆಯ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಆದರೆ ನಂತರ ಮನಸ್ಸು ಬದಲಾಗಿ ಮದುವೆಯಾಗೋಣ ಎಂದು ನಿರ್ಧರಿಸಿದೆ. ಆದರೆ ನನ್ನ ಇಂದಿನ ಪರಿಸ್ಥಿತಿ ಮತ್ತು ಆರೋಗ್ಯದ ಸ್ಥಿತಿಯನ್ನು ನೋಡಿ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ” ಎಂದು ಅತೀವ ನೋವಿನಿಂದ ಹೇಳಿಕೊಂಡಿದ್ದಾರೆ.

ಅಲ್ಲದೆ, “ಅವಸರಪಟ್ಟು ಮದುವೆಯಾಗಿ ವಿಚ್ಛೇದನದವರೆಗೆ ಹೋಗುವ ಸಂಬಂಧಗಳಿಗಿಂತ, ಸ್ವಲ್ಪ ತಡವಾದರೂ ಪರವಾಗಿಲ್ಲ ಒಬ್ಬ ಸರಿಯಾದ ಸಂಗಾತಿ ಸಿಗಲಿ ಎಂಬುದು ನನ್ನ ಅಭಿಪ್ರಾಯ. ಇಂದು ಚಿತ್ರರಂಗ ಸಂಪೂರ್ಣ ಬದಲಾಗಿದೆ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ನಾನು ಇಂದಿಗೂ ಧೈರ್ಯವಾಗಿ ನಿಂತಿದ್ದೇನೆ ಎಂದರೆ ಅದಕ್ಕೆ ದೇವರ ಕೃಪೆಯೇ ಕಾರಣ” ಎಂದು ಅವರು ಹೇಳಿದ್ದಾರೆ.

ತಾವು ಆರೋಗ್ಯ ಸಮಸ್ಯೆಯಿಂದ ಬಳಲಿರುವ ಬಗ್ಗೆ ಹೇಳಿಕೊಂಡಿರುವ ರೇಖಾ, ತಮಗೆ ಇದ್ದ ಸಮಸ್ಯೆ ಏನು ಎಂಬುದನ್ನು ಹೇಳಿಲ್ಲ. ಸದ್ಯ ರೇಖಾ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಹಾವು: ಬೆಚ್ಚಿಬಿದ್ದ ಜನ, ಮುಂದೇನಾಯ್ತು ನೋಡಿ – Kannada News | Mumbai Solapur Vande Bharat Train: Culprit Who Unleashed Snake in Toilet Arrested

ಮುಂಬೈ, ಫೆ.14: ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವನ್ನು ಬಿಟ್ಟು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆ (RPF) ಕೊನೆಗೂ ಬಂಧಿಸಿದೆ. ಸುಮಾರು 50 ದಿನಗಳ ಸುದೀರ್ಘ ಹುಡುಕಾಟದ ನಂತರ ಆರೋಪಿಯನ್ನು ಮುಂಬ್ರಾದಲ್ಲಿ ಸೆರೆಹಿಡಿಯಲಾಗಿದೆ.ಈ ಘಟನೆಯು ಡಿಸೆಂಬರ್ 27, 2025 ರಂದು ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 22225) ನಲ್ಲಿ ನಡೆದಿತ್ತು. ರೈಲಿನ ಕೋಚ್ C-16 ರ ಶೌಚಾಲಯದಲ್ಲಿ ಸುಮಾರು 2.5 ಅಡಿ ಉದ್ದದ ಇಂಡಿಯನ್ ರ್ಯಾಟ್ ಸ್ನೇಕ್ (Rat Snake) ಪತ್ತೆಯಾಗಿತ್ತು. ಇದರಿಂದ ಪ್ರಯಾಣಿಕರು ಭೀತಿಗೊಳಗಾಗಿದ್ದರು.

ಬಂಧಿತನನ್ನು ನಾಸಿಕ್ ಜಿಲ್ಲೆಯ ನಿವಾಸಿ ಜಗನ್ ಅರ್ಜುನ್ ಭಾಲೆ (37) ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಈತ ಠಾಣೆ ರೈಲ್ವೆ ನಿಲ್ದಾಣದಲ್ಲಿ ಚೀಲದೊಂದಿಗೆ ರೈಲು ಹತ್ತಿ ಶೌಚಾಲಯದ ಒಳಗೆ ಹಾವನ್ನು ಬಿಟ್ಟು ಕೆಳಗಿಳಿಯುವ ದೃಶ್ಯ ಸೆರೆಯಾಗಿದೆ. ವಿಚಾರಣೆ ವೇಳೆ ಆರೋಪಿ ತಾನು ಕೇವಲ “ಗೊಂದಲ ಮತ್ತು ಜನರಲ್ಲಿ ಆತಂಕ” ಸೃಷ್ಟಿಸಲು ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವನ್ನು ಬಿಟ್ಟು ಪ್ರಯಾಣಿಕರಲ್ಲಿ ಭೀತಿ ಸೃಷ್ಟಿಸಿದ್ದ ಆರೋಪಿ ಜಗನ್ ಅರ್ಜುನ್ ಭಾಲೆಗೆ ಕಲ್ಯಾಣ್ ರೈಲ್ವೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಬಾಂಬ್​​ ಬೆದರಿಕೆ: ವಿಮಾನದ ಶೌಚಾಲಯದಲ್ಲಿ ಸಿಕ್ತು ಅಚ್ಚರಿಯ ಪತ್ರ

ಇಲ್ಲಿದೆ ನೋಡಿ ವಿಡಿಯೋ:

ರೈಲ್ವೆ ರಕ್ಷಣಾ ಪಡೆ (RPF) ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತನ ವಿರುದ್ಧ ರೈಲ್ವೆ ಕಾಯ್ದೆಯ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 145(ರೈಲಿನಲ್ಲಿ ಅಸಭ್ಯ ವರ್ತನೆ ಮತ್ತು ಜನರಿಗೆ ತೊಂದರೆ ನೀಡುವುದು) ಸೆಕ್ಷನ್ 147 (ರೈಲ್ವೆ ಆಸ್ತಿಯೊಳಗೆ ಅತಿಕ್ರಮ ಪ್ರವೇಶ)ಸೆಕ್ಷನ್ 153 (ರೈಲು ಪ್ರಯಾಣಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವುದು) ಸಿಸಿಟಿವಿ ಆಧಾರದ ಮೇಲೆ ಬಂಧಿತನಾಗಿರುವ ಈತ, ಕೇವಲ ಕುಚೇಷ್ಟೆಗಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಈಗ ಜೈಲಿಗಟ್ಟಲಾಗಿದ್ದು, ರೈಲ್ವೆ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:51 pm, Sat, 14 February 26

Source link

ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರದ ಸಾಧನೆಯ ಸಮಾವೇಶ; ಬಸವರಾಜ ಬೊಮ್ಮಾಯಿ ವ್ಯಂಗ್ಯ – Kannada News | Congress Celebration Corruption Samavesha in Haveri BJP Leader Basavaraj Bommai lashes out

ಬೆಂಗಳೂರು, ಫೆಬ್ರವರಿ 14: ಕರ್ನಾಟಕ ಸರ್ಕಾರ 1,000 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ (Congress) ಸಾಧನಾ ಸಮಾವೇಶ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಇಂದು ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಶೂನ್ಯ ಸಾಧನೆಯ ಸಮಾವೇಶ ಮಾಡಿದೆ. ಈ ಸಮಾವೇಶಕ್ಕೆ ಸ್ವಯಂ ಪ್ರೇರಿತವಾಗಿ ಜನರು ಬರಲು ಸಾಧ್ಯವಿಲ್ಲ ಎಂದು ಅರಿತು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಇರುವ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಮಾಡಿದ್ದಾರೆ” ಎಂದು ಟೀಕಿಸಿದ್ದಾರೆ.

“ನಮ್ಮ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ನಾವು ಅಕ್ರಮ ಇದ್ದದ್ದನ್ನು ಸಕ್ರಮ ಮಾಡಿದ್ದೇವೆ. ಅದರ ಮುಖಾಂತರ ಸಾಲ ಸಿಗುವ ವ್ಯವಸ್ಥೆ ಮಾಡಿದ್ದೇವೆ. ಈಗ ಜನರ ಆಸ್ತಿಯನ್ನು ಅವರೇ ಕೊಂಡುಕೊಳ್ಳುವ ವ್ಯವಸ್ಥೆ ಮಾಡಿ ಕಾಂಗ್ರೆಸ್ ಸರ್ಕಾರ ಬರಿದಾದ ಖಜಾನೆ ತುಂಬಲು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಾ ಶುಲ್ಕವನ್ನು ಬಡವರ ತಲೆ ಮೇಲೆ ಹೇರಿದೆ. ಒಬ್ಬ ಬಡವ 3-4 ಲಕ್ಷ ಕಟ್ಟುವ ಪರಿಸ್ಥಿತಿ ಬಂದಿದೆ. ಅಷ್ಟೇ ಅಲ್ಲ, ಈ ವ್ಯವಸ್ಥೆ ಮಾಡಲು ಕಂದಾಯ ಇಲಾಖೆಯಲ್ಲಿ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಇದು ಭ್ರಷ್ಟಾಚಾರದ ಸಾಧನೆಯ ಸಮಾವೇಶ. ಬಡವರ ತಲೆ ಮೇಲೆ ಆರ್ಥಿಕ ಭಾರದ ಹೊಡೆತವನ್ನು ಈ ಸರ್ಕಾರ ಕೊಡುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ

“ಇದೇ ಜಾಗದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಯಾವುದೇ ಮನೆಗಳನ್ನು ಕಟ್ಟುವ ಪ್ರಕ್ರಿಯೆ ರಾಜ್ಯದಲ್ಲಿ ನಡೆಯುತ್ತಿಲ್ಲ. ಒಂದು ಸಾವಿರ ದಿವಸದ ವ್ಯರ್ಥ ಆಡಳಿತದ ಶೂನ್ಯ ಸಾಧನೆಯ ಈ ಸಮಾವೇಶವನ್ನು ಬಡವರು ಹಿಡಿ ಶಾಪ ಹಾಕುತ್ತಿರುವುದು ಸತ್ಯ. ಇದು ಅತ್ಯಂತ ಖಂಡನೀಯ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs PAK: ವಿಮಾನ, ಹೋಟೆಲ್‌ ರೂಂ ಬೆಲೆ ದುಪ್ಪಟ್ಟು; ಕೊಲಂಬೊದಲ್ಲಿ ಜನ ಜಾತ್ರೆ – Kannada News | T20 World Cup Hype: India Pak Clash Drives Sky High Ad Rates, Flights and Hotel Costs

ಫೆಬ್ರವರಿ 15 ರಂದು ನಡೆಯುಲಿರುವ ಟಿ20 ವಿಶ್ವಕಪ್‌ (T20 World Cup) ಪಂದ್ಯಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಈ ದಿನದಂದು ಭಾರತ ಮತ್ತು ಪಾಕಿಸ್ತಾನ (India vs Pakist) ನಡುವೆ ರೋಮಾಂಚಕಾರಿ ಪಂದ್ಯ ನಡೆಯಲಿದೆ. ಶ್ರೀಲಂಕಾದ ಕೊಲಂಬೊದಲ್ಲಿರುವ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಎರಡೂ ದೇಶಗಳ ಕ್ರಿಕೆಟ್​ ಅಭಿಮಾನಿಗಳು ಇಲ್ಲಿಗೆ ಆಗಮಿಸಿದ್ದಾರೆ. ಇವರ ಜೊತೆಗೆ ಶ್ರೀಲಂಕಾದ ನಾಗರಿಕರು ಸಹ ಈ ಪಂದ್ಯವನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ ಕೊಲಂಬೊಗೆ ತೆರಳುತ್ತಿರುವ ವಿಮಾನಗಳ ಟಿಕೆಟ್​ ಬೆಲೆ ದುಪ್ಪಟ್ಟಾಗಿದೆ. ಇದರ ಜೊತೆಗೆ ಕೊಲಂಬೊದಲ್ಲಿರುವ ಹೋಟೆಲ್​ಗಳ ರೂಂಗಳ ಬೆಲೆಯೂ ಗಗನಕ್ಕೇರಿದೆ.

ಹಾಗೆಯೇ ಜಾಹೀರಾತು ದರಗಳು ಸಹ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಜಾಹೀರಾತು ಸ್ಲಾಟ್‌ಗಳನ್ನು ಪಡೆಯಲು ಕಂಪನಿಗಳು ಭಾರಿ ಹಣವನ್ನು ಪಾವತಿಸುತ್ತಿವೆ. ವರದಿಯ ಪ್ರಕಾರ, ಈ ಹೈ-ವೋಲ್ಟೇಜ್ ಪಂದ್ಯಕ್ಕಾಗಿ 10 ಸೆಕೆಂಡುಗಳ ಟಿವಿ ಜಾಹೀರಾತು ಸ್ಲಾಟ್‌ಗೆ 30 ರಿಂದ 40 ಲಕ್ಷ ರೂ.ಗಳ ದರವನ್ನು ವಿಧಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಾಹೀರಾತು ಸ್ಲಾಟ್‌ಗಳ ಬೆಲೆ ಶೇಕಡಾ 20 ರಿಂದ 25 ರಷ್ಟು ಹೆಚ್ಚಾಗಿದೆ. ಬ್ರಾಡ್‌ಕಾಸ್ಟರ್ ಜಿಯೋಸ್ಟಾರ್ ಇಡೀ ಪಂದ್ಯಾವಳಿಯಲ್ಲಿ ಜಾಹೀರಾತುಗಳಿಂದಲೇ ಸುಮಾರು 2000 ಕೋಟಿ ರೂ.ಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

ಜಾಹೀರಾತು ಸ್ಲಾಟ್ ಪಡೆಯಲು ಹೋರಾಟ

ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್‌ನಲ್ಲಿ ಜಾಹೀರಾತು ದರಗಳು ಏರಿಕೆಯಾಗುತ್ತಿವೆ. ಇಲ್ಲಿ 10 ಸೆಕೆಂಡುಗಳ ಜಾಹೀರಾತು ಸ್ಲಾಟ್ 15 ರಿಂದ 20 ಲಕ್ಷ ರೂ.ಗಳನ್ನು ತಲುಪಿದೆ. ಆಟೋಮೊಬೈಲ್, ಎಫ್‌ಎನ್‌ಸಿಜಿ, ಹಣಕಾಸು, ವಿಮೆ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಟಿ20 ವಿಶ್ವಕಪ್‌ನಲ್ಲಿ ಜಾಹೀರಾತು ನೀಡುವ ಕಂಪನಿಗಳಲ್ಲಿ ಎಮಿರೇಟ್ಸ್, ಅಮುಲ್, ಓಪನ್ ಎಐ, ಹುಂಡೈ, ಮಹೀಂದ್ರಾ & ಮಹೀಂದ್ರಾ ಮತ್ತು ಬ್ರಿಟಾನಿಯಾ ಸೇರಿದಂತೆ ಹಲವು ಪ್ರಮುಖ ಬ್ರ್ಯಾಂಡ್‌ಗಳು ಸೇರಿವೆ.

ವಿಮಾನ ಟಿಕೆಟ್​ಗಳು ದುಬಾರಿ

ಭಾರತದಿಂದ ಕೊಲಂಬೊಗೆ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಪ್ರಯಾಣ ಬೆಳೆಸುತ್ತಿದ್ದಾರೆ. ಹೀಗಾಗಿ EaseMyTrip ಪ್ರಕಾರ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ರೌಂಡ್ ಟ್ರಿಪ್ ವಿಮಾನ ದರಗಳು ಶೇಕಡಾ 45 ರಿಂದ 50 ರಷ್ಟು ಹೆಚ್ಚಾಗಿದೆ. ಫೆಬ್ರವರಿ 15 ರ ವಾರಾಂತ್ಯದ ಕೊಲಂಬೊಗೆ ಬುಕಿಂಗ್‌ಗಳು ಮೂರು ದಿನಗಳಲ್ಲಿ ದ್ವಿಗುಣಗೊಂಡಿವೆ ಎಂದು ಮೇಕ್‌ಮೈಟ್ರಿಪ್ ಸ್ಪಷ್ಟಪಡಿಸಿದೆ. ಕ್ಲಿಯರ್ ಟ್ರಿಪ್ ಪ್ರಕಾರ, ಭಾರತ-ಪಾಕಿಸ್ತಾನ ಪಂದ್ಯದಿಂದಾಗಿ ಕೊಲಂಬೊಗೆ ಬುಕಿಂಗ್‌ಗಳು ಶೇಕಡಾ 65 ರಷ್ಟು ಹೆಚ್ಚಾಗಿದೆ.

IND vs PAK: ಸೂಪರ್ ಸಂಡೇಯಂದು ಭಾರತ-ಪಾಕ್ ನಡುವೆ ಎರಡೆರಡು ಪಂದ್ಯ

ಹೋಟೆಲ್ ಬೆಲೆ ಗಗನಕ್ಕೇರಿದೆ

ಕೊಲಂಬೊದಲ್ಲಿ ಹೋಟೆಲ್ ರೂಮ್​ಗಳ ಬೆಲೆಗಳು ಕೂಡ ಗಗನಕ್ಕೇರಿವೆ. ನಗರದ ಮಧ್ಯಭಾಗದಲ್ಲಿರುವ ನಾಲ್ಕು ಮತ್ತು ಐದು ಸ್ಟಾರ್ ಹೋಟೆಲ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದರ ಜೊತೆಗೆ ಪ್ರೀಮಿಯಂ ಹೋಟೆಲ್ ಕೊಠಡಿಗಳ ದರವೂ ಶೇಕಡಾ 20 ರಿಂದ 25 ರಷ್ಟು ದುಬಾರಿಯಾಗಿವೆ. ಪಂದ್ಯದ ಕಾರಣದಿಂದಾಗಿ ಕೊಲಂಬೊದ ಎಲ್ಲಾ ಹೋಟೆಲ್‌ಗಳು ಹೌಸ್‌ಫುಲ್ ಆಗಿವೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:53 pm, Sat, 14 February 26

Source link

Indian Army Recruitment: ಭಾರತೀಯ ಸೇನೆಯಲ್ಲಿ ಅಗ್ನಿವೀರ್ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ – Kannada News | Agnipath 2026: Indian Army Agniveer Recruitment Notification Out! Apply Now, Eligibility, CEE Dates

ಭಾರತೀಯ ಸೇನೆಯು 2026ರ ಅಗ್ನಿವೀರ್ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶಸೇವೆಗೆ ತೊಡಗಿಸಿಕೊಳ್ಳಲು ಆಸಕ್ತ ಯುವಕರಿಗೆ ಇದು ಮಹತ್ವದ ಅವಕಾಶವಾಗಿದೆ. ಫೆಬ್ರವರಿ 13ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 1ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು. ಅಗ್ನಿವೀರ್ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಜೂನ್ 1ರಿಂದ ಜೂನ್ 15ರ ನಡುವೆ ನಡೆಯಲಿದೆ.

ಶೈಕ್ಷಣಿಕ ಅರ್ಹತೆ:

ಅಗ್ನಿವೀರ್ ಹುದ್ದೆಗಳ ಪ್ರಕಾರ ಶೈಕ್ಷಣಿಕ ಅರ್ಹತೆ ವಿಭಿನ್ನವಾಗಿರುತ್ತದೆ. ಅಗ್ನಿವೀರ್ ಜನರಲ್ ಡ್ಯೂಟಿ (GD) ಹುದ್ದೆಗೆ 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳೊಂದಿಗೆ ಒಟ್ಟು ಶೇ.45 ಅಂಕ ಅಗತ್ಯವಿದೆ. ಅಗ್ನಿವೀರ್ ತಾಂತ್ರಿಕ ಹುದ್ದೆಗೆ 12ನೇ ತರಗತಿಯಲ್ಲಿ ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಕನಿಷ್ಠ ಶೇ.50 ಅಂಕ ಇರಬೇಕು. ಕ್ಲರ್ಕ್/ಸ್ಟೋರ್‌ಕೀಪರ್ ಹುದ್ದೆಗೆ 12ನೇ ತರಗತಿಯಲ್ಲಿ ಒಟ್ಟು ಶೇ.60 ಅಂಕಗಳೊಂದಿಗೆ ಇಂಗ್ಲಿಷ್ ಮತ್ತು ಗಣಿತ ಅಥವಾ ಅಕೌಂಟ್ಸ್‌ನಲ್ಲಿ 50 ಅಂಕ ಅಗತ್ಯವಿದೆ. ಟ್ರೇಡ್ಸ್‌ಮನ್ ಹುದ್ದೆಗೆ 8ನೇ ಅಥವಾ 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿ ಶೇ.33 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಮಹಿಳಾ ಮಿಲಿಟರಿ ಪೊಲೀಸ್ (GD) ಹುದ್ದೆಗೆ 10ನೇ ತರಗತಿಯಲ್ಲಿ ಶೇ.45 ಅಂಕ ಅಗತ್ಯವಿದೆ. ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಸಹಾಯಕ ಹುದ್ದೆಗೆ 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಕನಿಷ್ಠ ಶೇ.50 ಅಂಕ ಇರಬೇಕು. ಸಿಪಾಯಿ ಫಾರ್ಮಾ ಹುದ್ದೆಗೆ ಡಿ ಫಾರ್ಮಾ (ಶೇ.55) ಅಥವಾ ಬಿ ಫಾರ್ಮಾ (ಶೇ.50) ಹಾಗೂ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿ ಅಗತ್ಯ. ಜೆಸಿಒ ಧಾರ್ಮಿಕ ಶಿಕ್ಷಕ ಹುದ್ದೆಗೆ ಸಂಬಂಧಿತ ಧರ್ಮ ಹಾಗೂ ವಿಷಯದಲ್ಲಿ ಪದವಿ ಅಥವಾ ಡಿಪ್ಲೊಮಾ ಅಗತ್ಯವಿದೆ.

ವಯೋಮಿತಿ:

ಅಗ್ನಿವೀರ್ ಜಿಡಿ, ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್ ಹುದ್ದೆಗಳಿಗೆ 17.5 ರಿಂದ 22 ವರ್ಷ ವಯೋಮಿತಿ ನಿಗದಿಯಾಗಿದೆ. ಸೋಲ್ಜರ್ ಟೆಕ್ನಿಕಲ್ ಹುದ್ದೆಗಳಿಗೆ ಗರಿಷ್ಠ ವಯಸ್ಸು 23 ವರ್ಷಗಳು. ಸಿಪಾಯಿ ಫಾರ್ಮಾ ಹುದ್ದೆಗೆ 19ರಿಂದ 25 ವರ್ಷ, ಜೆಸಿಒ ಧಾರ್ಮಿಕ ಶಿಕ್ಷಕ ಹುದ್ದೆಗೆ 25ರಿಂದ 34 ವರ್ಷ ವಯಸ್ಸಿನ ಮಿತಿ ಇದೆ. ವಯಸ್ಸನ್ನು ಜುಲೈ 1, 2027ರಂತೆ ಲೆಕ್ಕ ಹಾಕಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಲವು ಹಂತಗಳನ್ನು ಒಳಗೊಂಡಿದೆ. ಮೊದಲು ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ನಡೆಯುತ್ತದೆ. ಬಳಿಕ ದೈಹಿಕ ಸದೃಢತಾ ಪರೀಕ್ಷೆ, ದೈಹಿಕ ಅಳತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ. ಸಾಮಾನ್ಯ ಹುದ್ದೆಗಳಿಗೆ ಕನಿಷ್ಠ ಎತ್ತರ 170 ಸೆಂ.ಮೀ ಅಗತ್ಯವಿದ್ದು, ಕ್ಲರ್ಕ್ ಹುದ್ದೆಗಳಿಗೆ 162 ಸೆಂ.ಮೀ ಎತ್ತರ ಬೇಕಾಗುತ್ತದೆ. ಎದೆಯ ಗಾತ್ರ 77 ಸೆಂ.ಮೀ ಮತ್ತು ಕನಿಷ್ಠ 5 ಸೆಂ.ಮೀ ವಿಸ್ತರಣೆ ಇರಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸುವುದು ಅಗತ್ಯ. ದೇಶ ಸೇವೆ ಮಾಡುವ ಕನಸು ಹೊಂದಿರುವ ಯುವಕರಿಗೆ ಅಗ್ನಿವೀರ್ ನೇಮಕಾತಿ ಒಂದು ಮಹತ್ವದ ಅವಕಾಶವಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾವೇರಿ: ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ; ಸ್ಫೋಟಕ ಮಾಹಿತಿ ನೀಡಿದ ಎಸ್​​ಪಿ – Kannada News | Haveri: Woman missing case; SP reveals explosive information

ಹಾವೇರಿ, ಫೆಬ್ರವರಿ 14: ಜಿಲ್ಲೆಯ ಬೇಲೂರು ತಾಲ್ಲೂಕಿನ ಕಲ್ಕೆರೆ ಬಳಿ ಮದುವೆಗೆ ಬಂದಿದ್ದ ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿ ಪ್ರಿಯಾಂಕಾ (28) ನಾಪತ್ತೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಿಯಾಂಕಾ ನಾಪತ್ತೆಯಾದ ಸ್ಥಳದಲ್ಲಿ ಅವರ ಬಟ್ಟೆಗಳು, ಚಪ್ಪಲಿ ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿವೆ. ಸದ್ಯ ಪೊಲೀಸರು ಪ್ರಸ್ತುತ ಎಲ್ಲಾ ತಾಂತ್ರಿಕ ವಿವರಗಳನ್ನು ಕಲೆಹಾಕುತ್ತಿದ್ದು, ಪ್ರಿಯಾಂಕಾರನ್ನು ಪತ್ತೆ ಹಚ್ಚಲು ವ್ಯಾಪಕ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ಎಸ್​​ಪಿ ಶುಭಾನ್ವಿತಾ ಹೇಳಿದ್ದಿಷ್ಟು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ – Kannada News | PM Modi Inaugurated Rs 3030 Crore Kumar Bhaskar Varma Setu over Brahmaputra River In Guwahati

ಗುವಾಹಟಿ, ಫೆಬ್ರವರಿ 14: ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾಗಿರುವ 6 ಪಥಗಳ ಎಕ್ಸ್‌ಟ್ರಾಡೋಸ್ಡ್ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ (ಪಿಎಸ್‌ಸಿ) ಸೇತುವೆಯಾದ ಕುಮಾರ್ ಭಾಸ್ಕರ್ ವರ್ಮಾ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ (PM Modi in Assam) ಇಂದು ಉದ್ಘಾಟಿಸಿದರು. ಸುಮಾರು 3,030 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ ಗುವಾಹಟಿಯನ್ನು ಉತ್ತರ ಗುವಾಹಟಿಯೊಂದಿಗೆ ಸಂಪರ್ಕಿಸುತ್ತದೆ. ಇದು ಪ್ರಯಾಣದ ಸಮಯವನ್ನು 60 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ. ಅಂದರೆ 7 ನಿಮಿಷಗಳಿಗೆ ಪ್ರಯಾಣದ ಸಮಯವನ್ನು ಇಳಿಸಿದೆ. ಈ ಸೇತುವೆಯು ಈಶಾನ್ಯ ಭಾರತದಲ್ಲಿ ಮೊದಲ ಎಕ್ಸ್‌ಟ್ರಾಡೋಸ್ಡ್ ರಚನೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಮಕ್ಕಳಿಗೆ ‘ಸರ್ಪ್ರೈಸ್’ ಕೊಟ್ಟ ಸಚಿವ ಜಮೀರ್: ಸ್ವಂತ ಖರ್ಚಿನಲ್ಲಿ 60 ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ರೈಡ್ – Kannada News | Hampi Utsav Joy: 60 Govt School Kids Experience Helicopter Ride, Thanks to Minister

ಬಳ್ಳಾರಿ, ಫೆ.14: ವಿಶ್ವವಿಖ್ಯಾತ ಹಂಪಿ ಉತ್ಸವವು ಈ ಬಾರಿ ಸರ್ಕಾರಿ ಶಾಲಾ ಮಕ್ಕಳ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿದೆ. ದೂರದಿಂದ ಹೆಲಿಕಾಪ್ಟರ್ ನೋಡಿ ಸಂಭ್ರಮಿಸುತ್ತಿದ್ದ ಪುಟಾಣಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಆಕಾಶದಲ್ಲಿ ಹಾರಾಡುವ ಅವಕಾಶ ಮಾಡಿಕೊಡುವ ಮೂಲಕ ದೊಡ್ಡ ‘ಸರ್ಪ್ರೈಸ್’ ನೀಡಿದ್ದಾರೆ. ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ನೋಡಲು ಸುತ್ತಮುತ್ತಲಿನ ಸರ್ಕಾರಿ ಶಾಲಾ ಮಕ್ಕಳು ಕುತೂಹಲದಿಂದ ಬಂದಿದ್ದರು.ಈ ವೇಳೆ ಸ್ಥಳದಲ್ಲಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರು ಮಕ್ಕಳ ಬಳಿ ತೆರಳಿ ಮಾತುಕತೆ ನಡೆಸಿದರು. “ನಿಮಗೂ ಹೆಲಿಕಾಪ್ಟರ್ ಹತ್ತಬೇಕಾ?” ಎಂದು ಸಚಿವರು ಕೇಳಿದ ತಕ್ಷಣ, ಮಕ್ಕಳು ಸಂಭ್ರಮದಿಂದ “ಹೌದು ಸರ್” ಎಂದು ಕೂಗಿದರು. ಮಕ್ಕಳ ಆಸೆಯನ್ನು ಕಂಡ ಸಚಿವರು ವಿಳಂಬ ಮಾಡದೆ, ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 60ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೀವನದಲ್ಲಿ ಒಮ್ಮೆಯಾದರೂ ವಿಮಾನ ಅಥವಾ ಹೆಲಿಕಾಪ್ಟರ್ ಏರಬೇಕು ಎಂಬ ಕನಸು ಹೊತ್ತಿದ್ದ ಬಡ ಕುಟುಂಬದ ಮಕ್ಕಳು ಆಕಾಶಕ್ಕೆ ಹಾರುತ್ತಿದ್ದಂತೆ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

Source link

ಹಾವೇರಿಯಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ – Kannada News | Haveri: Congress Sadhana Convention: 1000 days of celebration; Land guarantee for one lakh families

ಭೂಗ್ಯಾರಂಟಿ ಸಮರ್ಪಣಾ ಸಮಾವೇಶImage Credit source: cm tweet

ಹಾವೇರಿ, ಫೆಬ್ರವರಿ 14: ರಾಜ್ಯದಲ್ಲಿ ಕಾಂಗ್ರೆಸ್ (congress) ಸರ್ಕಾರ ಅಧಿಕಾರಕ್ಕೆ ಬಂದು 1 ಸಾವಿರ ದಿನಗಳು ಕಳೆದಿವೆ. ಹೀಗಾಗಿ ಹಾವೇರಿಯಲ್ಲಿ ಇಂದು ಕಾಂಗ್ರೆಸ್​ ಭೂ ಗ್ಯಾರಂಟಿ ಸಮರ್ಪಣಾ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನ ಸಿಎಂ ಸಿದ್ದರಾಮಯ್ಯ (Siddaramaiah) ವಿತರಣೆ ಮಾಡಿದರು. ಆದರೆ ಇದೇ ಸಮಾವೇಶ ‘ದೋಸ್ತಿ’ಗಳ ವಾಕ್ಸಮರಕ್ಕೆ ವೇದಿಕೆ ಆಗಿತ್ತು.

ಸಮಾವೇಶದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ

ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಗ್ಯಾರಂಟಿಗಳನ್ನ ಯಾರು ವಿರೋಧ ಮಾಡ್ತಿದ್ರೋ, ಇಂದು ಅವರೇ ನಮ್ಮ ಗ್ಯಾರಂಟಿಗಳನ್ನ ಅನುಸರಿಸ್ತಿದ್ದಾರೆ. ಜನಸೇವೆಯ‌ ಸಾರ್ಥಕ ಆಡಳಿತವನ್ನು ರಾಜ್ಯ ಸರ್ಕಾರ‌ ನೀಡಿದೆ. 2 ವರ್ಷ 9 ತಿಂಗಳಲ್ಲಿ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದೇವೆ. ಈಗಾಗಲೇ 243 ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆ ಈಡೇರಿಸುತ್ತೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಗುಡುಗಿದರು.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಹೊಸ ದಾಖಲೆ ಮಾಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅಚ್ಚರಿ ಮಾತು

ಬಿಜೆಪಿ ಅವಧಿಯಲ್ಲಿ ಶೇ.10ರಷ್ಟು ಭರವಸೆಯನ್ನೂ ಈಡೇರಿಸಿಲ್ಲ. ಇದೀಗ ರಾಜ್ಯ ಸರ್ಕಾರದ ಬಳಿ ಹಣವಿಲ್ಲವೆಂದು ಟೀಕೆ ಮಾಡುತ್ತಾರೆ. ಖಜಾನೆ ಖಾಲಿಯಾಗಿದೆ ಅಂತಾ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾವು 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಗ್ಯಾರಂಟಿಗೆ 1.18 ಲಕ್ಷ ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದೇವೆ. ಖಜಾನೆ ಖಾಲಿಯಾಗಿದ್ದರೆ ಇಷ್ಟು ಹಣ ಖರ್ಚು ಮಾಡಲು ಆಗುತ್ತಿರಲಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ದೇಶದ ಗ್ಯಾರಂಟಿ: ಡಿಸಿಎಂ ಡಿಕೆ ಶೀವಕುಮಾರ್

ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶೀವಕುಮಾರ್​, ಬಿಜೆಪಿ, ಜೆಡಿಎಸ್​​ನವರು ಜನರಿಗಾಗಿ ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ ಅಂತ ಆಕ್ರೋಶಭರಿತವಾಗಿ ಪ್ರಶ್ನಿಸಿದರು. ಬಿಜೆಪಿ ನಾಯಕರ ಟೀಕೆ, ಟಿಪ್ಪಣಿಗಳ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ನಾವೇನು ಮಾಡೋಕೆ ಆಗಲಿಲ್ಲ ಅಂತ ಈಗ ಕೈಕೈ ಹಿಸುಕಿಕೊಳ್ತಿದ್ದಾರೆ ಅಂತ ಗರಂ ಆದರು.

ನಮ್ಮ ಸರ್ಕಾರಕ್ಕೆ 1 ಸಾವಿರ ದಿನಗಳಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ದೊಡ್ಡ ಬದಲಾವಣೆಯಾಗಿದೆ. 5 ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಆಗಲಿಲ್ಲ. ಇದು ಇದೀಗ ದೇಶದ ಗ್ಯಾರಂಟಿಯಾಗಿದೆ. ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಾವಿಲ್ಲ, ಆದರೆ ಟೀಕೆ ಹಾಗೂ ಅಪಪ್ರಚಾರಕ್ಕೆ ಸಾವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ನೀಡಿದ 1,323 ಕೋಟಿ 96 ಲಕ್ಷ ರೂ. ಹಣವನ್ನು ಕಾಂಗ್ರೆಸ್​​​ ಸರ್ಕಾರ ದುರ್ಬಳಕೆ ಮಾಡಿದೆ: ಬಿ.ವೈ. ವಿಜಯೇಂದ್ರ ಆರೋಪ

ಜನರ ಅನುಕೂಲಕ್ಕಾಗಿ ಭೂಗ್ಯಾರಂಟಿ ಯೋಜನೆ ಜಾರಿಮಾಡಿದ್ದೇವೆ. ರಾಜ್ಯ ಕಾಂಗ್ರೆಸ್ ಸರ್ಕಾರದ 7ನೇ ಗ್ಯಾರಂಟಿ ನೀರು. ಕೃಷ್ಣಾ, ಕಾವೇರಿ, ಮೇಕೆದಾಟು, ಎತ್ತಿನಹೊಳೆ ಕಾಮಗಾರಿಯನ್ನು ನಮ್ಮ ಅವಧಿಯಲ್ಲೇ ಎಲ್ಲಾ ಕಾಮಗಾರಿ ಮುಗಿಸುವ ಪ್ರಯತ್ನಿಸ್ತೇವೆ ಎಂದರು.

ನಮ್ಮ ಸರ್ಕಾರ ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆ ನೀಡಿದೆ. ಯಡಿಯೂರಪ್ಪ, ಕುಮಾರಸ್ವಾಮಿ, ಆರ್​ .ಅಶೋಕ್​, ವಿಜಯೇಂದ್ರ ನಿಮ್ಮ ಅವಧಿಯಲ್ಲಿ ಜನರಿಗೆ ಒಂದಾದ್ರು ಉತ್ತಮ ಕಾರ್ಯಕ್ರಮ ನೀಡಿದ್ರಾ? ನೀವು ಕೊಟ್ಟಿದ್ದರೇ ಜನರ ಮುಂದೆ ಮಾತನಾಡುವ ಅವಕಾಶ ಇರ್ತಿತ್ತು, ಆದರೆ ನೀವು ಆ ಅವಕಾಶ ಕಳೆದುಕೊಂಡಿದ್ದೀರಿ ಎಂದು ಡಿಕೆ ಶಿವಕುಮಾರ್​ ಟಾಂಗ್ ನೀಡಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link