All posts by nagaraj11081993

Karnataka Weather Today: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾಗಶಃ ಬಿಸಿಲಿನ ವಾತಾವರಣವಿರಲಿದೆ – Kannada News | Karnataka Weather Today: Bengaluru Max 33°C, Heat Alert for Kalburgi and Raichur

ಬೆಂಗಳೂರು, ಫೆ.12: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾಗಶಃ ಬಿಸಿಲಿನ ವಾತಾವರಣ ಇರುತ್ತದೆ ಎಂದು ಹವಾಮಾನ ಇಲಾಖೆ (Karnataka Weather Today) ಹೇಳಿದೆ. ಬೆಂಗಳೂರಿನಲ್ಲಿ ಬಿಸಿಲು ಹೆಚ್ಚಾಗಲಿದ್ದು, ಗರಿಷ್ಠ ತಾಪಮಾನ 31°C ನಿಂದ 33°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ಸಂಜೆ ಮತ್ತು ರಾತ್ರಿ ವೇಳೆ ಆಹ್ಲಾದಕರ ಹವಾಮಾನವಿರಲಿದ್ದು, ಕನಿಷ್ಠ ತಾಪಮಾನ 18°C ಆಸುಪಾಸಿನಲ್ಲಿರಲಿದೆ. ಯಾವುದೇ ಮಳೆಯ ಮುನ್ಸೂಚನೆ ಇಲ್ಲ ಎಂದು ಇಲಾಖೆ ಹೇಳಿದೆ.

ಕಲ್ಬುರ್ಗಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಲಿದೆ. ಇಲ್ಲಿ ಗರಿಷ್ಠ ತಾಪಮಾನವು 35°C ನಿಂದ 37°C ವರೆಗೆ ತಲುಪಬಹುದು. ಮಧ್ಯಾಹ್ನದ ವೇಳೆ ಒಣ ಹವೆ ಇರಲಿದ್ದು, ಬಿಸಿಲಿನ ಝಳ ಹೆಚ್ಚಾಗಿರುತ್ತದೆ. ಮಂಗಳೂರು, ಉಡುಪಿ ಮತ್ತು ಕಾರವಾರ ಭಾಗಗಳಲ್ಲಿ ಉಷ್ಣಾಂಶದ ಜೊತೆಗೆ ತೇವಾಂಶ ಕೂಡ ಇರಲಿದೆ. ಇದರಿಂದ ಸೆಕೆ ಹೆಚ್ಚಾಗುವ ಸಾಧ್ಯತೆ ಇದೆ.

ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣವಿದ್ದು, ಹಗಲಿನಲ್ಲಿ ಸಾಧಾರಣ ಬಿಸಿಲಿರುತ್ತದೆ. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಸಾಮಾನ್ಯ ಹವಾಮಾನವಿರಲಿದ್ದು, ತಾಪಮಾನವು ಸರಿಸುಮಾರು 32°C ಇರಲಿದೆ. ಬಿಸಿಲು ಹೆಚ್ಚಾಗುತ್ತಿರುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಸಾಕಷ್ಟು ನೀರು ಕುಡಿಯಿರಿ ಎಂದು ತಜ್ಞರು ಹೇಳಿದ್ದಾರೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ನೇರ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ ಎಂದು ಕೂಡ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಮತ್ತೆ ಕರ್ನಾಟಕದ ಪರ ಧ್ವನಿ ಎತ್ತಿದ ದೇವೇಗೌಡ್ರು, ಈ ಬಾರಿ ಕೇಳಿದ್ದೇನು?

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ಹಗಲಿನಲ್ಲಿ ಸಾಧಾರಣ ಬಿಸಿಲಿದ್ದರೂ, ರಾತ್ರಿ ಮತ್ತು ಮುಂಜಾನೆ ತಂಪು ವಾತಾವರಣವಿರುತ್ತದೆ. ಮೈಸೂರು, ಹಾಸನ, ತುಮಕೂರು, ಮಂಡ್ಯ ಸಮತೋಲಿತ ಹವಾಮಾನವಿರಲಿದ್ದು, ಮಳೆಯ ಯಾವುದೇ ಮುನ್ಸೂಚನೆ ಇಲ್ಲ. ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಗಾಳಿಯ ಮಟ್ಟದಲ್ಲೂ ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದಂತಹ ನಗರಗಳಲ್ಲಿ ಸಾಧಾರಣ ಮಟ್ಟದಲ್ಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಬಗ್ಗೆ ಅನೇಕರಿಗೆ ಅನುಮಾನ – Kannada News | Horoscope 12 February 2026; Dina Rashi Bhavishya Today, Checkout the details here

ಮೇಷ ರಾಶಿ:

ಎಲ್ಲರಂತೆ ಒಂದಾಗುವ ಇಚ್ಛೆ ನಿಮ್ಮೊಳಗೆ ಬಾರದು. ತಪ್ಪಿನ ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ. ಅಸಮಾಧಾನವನ್ನು ಯಾವುದಾದರೊಂದು ರೀತಿಯಲ್ಲಿ ಹೊರಹಾಕಿ. ಕಳೆದು ಹೋದುದರ ಬಗ್ಗೆ ಅತಿಯಾಗಿ ಆಲೋಚಿಸಿ ಫಲವಿಲ್ಲ. ಹಠಮಾರಿ ಸ್ವಭಾವದಿಂದ ಮನೆಯಲ್ಲಿ ತೊಂದರೆ ಆದೀತು. ನಿಮ್ಮ ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ. ಮೂರನೇ ವ್ಯಕ್ತಿಗಳ ಮೂಲಕ ಇಂದು ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ.

ವೃಷಭ ರಾಶಿ:

ಸಂಗಾತಿಯ ಮಾತುಗಳು ನಿಮ್ಮನ್ನು ಹಿಂಜರಿಯುವಂತೆ ಮಾಡುವುದು. ಅನಿರೀಕ್ಷಿತ ಸಂಪತ್ತನ್ನು ತಂದೆಯಿಂದ ಪಡೆಯುವಿರಿ. ಕಛೇರಿಯ ಕೆಲಸದಲ್ಲಿ ನೀವು ಹೆಚ್ಚು ಆಸ್ಥೆಯನ್ನು ತೋರಿಸಬೇಕಾಗುವುದು. ನಿಮ್ಮ ಇರಾದೆಯನ್ನು ಸಂಗಾತಿಯ ಜೊತೆ ಹೇಳಿಕೊಳ್ಳಬಹುದು. ಅವಕಾಶ ಸಿಕ್ಕಾಗ ಮುನ್ನುಗ್ಗಲು ಹಿಂಜರಿಯುವಿರಿ. ಮನೋವ್ಯಥೆಯಿಂದ ನಿಮಗೆ ಬಹಳಷ್ಟು ತೊಂದರೆಗಳು ಬರಬಹುದು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು.

ಮಿಥುನ ರಾಶಿ:

ಸೃಜನಾತ್ಮಕವಾಗಿ ಏನನ್ನಾದರೂ ಮಾಡುವುದು ಒಳ್ಳೆಯದು. ಸ್ಥಿರಾಸ್ತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಿರಿ. ಒಂಟಿತನವು ನಿಮಗೆ ಇಷ್ಟವಾಗದು. ಇನ್ನೊಬ್ಬರ ನೋವನ್ನು ಕಂಡೂ ನೀವು ಸುಮ್ಮನಿರುವುದು ಬೇಡ. ಆಕರ್ಷಕ ವಸ್ತುಗಳಿಗೆ ಮನಸೋಲುವಿರಿ. ನಿಮ್ಮ ಯಂತ್ರಗಳು ದುರಸ್ತಿಗೆ ಬರಬಹುದು. ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು. ನಿಮ್ಮ ವ್ಯವಹಾರವು ಇಂದು ಪೂರ್ಣವಾಗಲಾರದು.

ಕರ್ಕಾಟಕ ರಾಶಿ:

ಉದ್ಯಮದಲ್ಲಿ ಊಹಿಸಿದ ತೊಂದರೆ ಎದುರಾಗುತ್ತದೆ. ತಜ್ಞರಿಂದ ಅದನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಯಾರನ್ನೋ ಅನುಕರಿಸುತ್ತ ನೀವು ಸಂತೋಷವನ್ನು ಪಡುವಿರಿ. ಕೆಲವು ವ್ಯಕ್ತಿಗಳ ಬೆಂಬಲವೂ ಕೂಡ ನಿಮಗೆ ಸಿಗುತ್ತದೆ. ಅವಸರದ ನಿರ್ಧಾರವನ್ನು ಮಾಡಲುಹೋಗುವುದು ಬೇಡ. ಪಾಲುದಾರಿಕೆಯಲ್ಲಿ ಮನಸ್ತಾಪವನ್ನು ಉಳಿಸಿಕೊಳ್ಳದೇ ಮುನ್ನಡೆಯಿರಿ. ಈ ದಿನವನ್ನು ಕಳೆಯಲು ನೀವು ನಾನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ.

ಸಿಂಹ ರಾಶಿ:

ಸರ್ಕಾರಿ ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಣೆ ಮಾಡುವರು. ಭೂಮಿಯ ವ್ಯವಹಾರವು ಪೂರ್ಣ ಲಾಭವನ್ನು ತಂದುಕೊಡದು. ಚಿಂತೆಗಳೇ ಇರುವ ಮನಸ್ಸಿನಲ್ಲಿ ದೇವರ ಭಕ್ತಿಯನ್ನು ತುಂಬಿಕೊಂಡು ಸಮಾಧಾನದಿಂದ ಇರಿ. ಸಂಗಾತಿಯ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ಇಂದು ನಿಮ್ಮ ಆರ್ಥಿಕತೆಯ ಸ್ಥಿತಿಯು ಸರಿಯಾಗಿ ಗೊತ್ತಾಗಲಿದೆ. ಸ್ಥಗಿತವಾದ ಕಾರ್ಯಗಳಿಗೆ ಕಾಯಕಲ್ಪದ ಅವಶ್ಯಕತೆ ಇದೆ.

ಕನ್ಯಾ ರಾಶಿ:

ಕೆಲವು ಸಂಗತಿಗಳನ್ನು ನಿಮ್ಮನ್ನೇ ಹುಡುಕಿಕೊಂಡು ಬಂದು ನಿಮ್ಮ ಮನಸ್ಸನ್ನು ಮತ್ತಷ್ಟು ದುರ್ಬಲಗೊಳಿಸೀತು. ಮಾರುಕಟ್ಟೆಯ ವ್ಯವಹಾರವನ್ನು ಅರಿತು ಹೂಡಿಕೆ ಮಾಡಿ. ಒಳ್ಳೆಯ ಸಮಯವನ್ನು ಕಳೆದುಕೊಳ್ಳಬೇಕಾಗುವುದು. ಬಹಳ ಕಾಲದ ಹಿಂದೇ ಆಲೋಚಿಸಿದ್ದ ಕಾರ್ಯವು ಇಂದು ಆರಂಭಿಸಬೇಕು ಎಂದೆನಿಸುವುದು. ಸಂಗಾತಿಯ ಮಾತಿಗೆ ಸ್ಪಂದನೆಯೂ ಇರದು. ನಿಮ್ಮ ವಾಗ್ದಾನವನ್ನು ಉಳಿಸಿಕೊಳ್ಳಿ.

ತುಲಾ ರಾಶಿ:

ನಿಮ್ಮ ವಿದ್ಯಾಭ್ಯಾಸದ ಕನಸನ್ನು ಕುಟುಂಬದಲ್ಲಿ ಹಂಚಿಕೊಳ್ಳುವಿರಿ. ಎಲ್ಲಿ ಕಳೆದುಕೊಂಡಿರೋ ಅಲ್ಲಿಯೇ ಪಡೆಯುವ ಪ್ರಯತ್ನ ನಡೆಯುವುದು. ಕೆಲವು ಘಟನೆಗಳು ಕೌಟುಂಬಿಕ ಕಾಳಜಿಯನ್ನು ಹೆಚ್ಚು ಮಾಡುವುದು. ಜಾಣ್ಮೆಯ ವ್ಯವಹಾರವನ್ನು ಇಂದು ಮಾಡಬೇಕಾದೀತು. ವಿವಾಹದ ಬಗ್ಗೆ ನಾನಾ ಗೊಂದಲ ಕಾಡಬಹುದು. ಪಾಪಪ್ರಜ್ಞೆಯು ನಿಮ್ಮನ್ನು ಖಿನ್ನವಾಗಿಸಬಹುದು. ಸಕಾರಾತ್ಮಕ ಆಲೋಚನೆಯನ್ನು ಪ್ರಯತ್ನಪೂರ್ವಕವಾಗಿ ಮಾಡುವಿರಿ.

ವೃಶ್ಚಿಕ ರಾಶಿ:

ಮನೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನೀವು ಮಗ್ನರಾಗುವಿರಿ. ವ್ಯಾಪಾರದ ಹೊಸ ಅನುಭವವು ನಿಮಗೆ ಅಚ್ಚರಿಯಾದೀತು. ದೈವದ ಬಗ್ಗೆ ನಿಮಗೆ ಅಪನಂಬಿಕೆ ಬರಬಹುದು. ನಿಮ್ಮ ತಿಳಿವಳಿಕಯೇ ಉನ್ನತ ಸ್ಥಾನಕ್ಕೆ ಏರುವಂತೆ ಮಾಡುವುದು. ಮಕ್ಕಳ ಹಠಸ್ವಭಾವವು ಇಮಗೆ ಇಷ್ಟವಾಗದು. ಇಂದು ಆಡಂಬರಕ್ಕೆ ತೋರ್ಪಡಿಕೆಗೆ ಹೆಚ್ಚು ಒತ್ತು ನೀಡುವಿರಿ. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು.

ಧನು ರಾಶಿ:

ಅಶುಭ ಸೂಚನೆಗಳನ್ನು ಗಮನಿಸಿ ಕೊಂಡು ಕಾರ್ಯಪ್ರವೃತ್ತರಾಗಿ. ಭೂಮಿಯ ಲಾಭಕ್ಕಾಗಿ ಓಡಾಟವನ್ನು ಮಾಡಬೇಕಾದೀತು. ಒಂದು ರೀತಿಯಲ್ಲಿ ನಿಮಗೆ ಆತಂಕದ ದಿವಸವೂ ಆಗಬಹುದು. ವಿದೇಶದ ವ್ಯವಹಾರವು ನಿಮಗೆ ಸರಿಯಾಗಿ ಆಗಿಬರದು. ಸಾಹಿತ್ಯಾಸಕ್ತರು ತಮ್ಮ ಬಳಗದ ಜೊತೆ ಹೆಚ್ಚು ಸಮಯ ಇರುವರು. ಎಲ್ಲರೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡಲಿದ್ದು ನೀವು ಹತಾಶೆಯ ಭಾವ ಜಾಗೃತವಾಗಿ ಖಿನ್ನತೆಗೂ ಹೋಗಬಹುದು.

ಮಕರ ರಾಶಿ:

ಆರ್ಥಿಕ ವಹಿವಾಟಿನಲ್ಲಿ ಎಚ್ಚರಿಕೆ ಲಕ್ಷ್ಯವು ಹೆಚ್ಚಿರಲಿ. ನಿಮ್ಮ ಯೋಜನೆಗಳನ್ನು ಮಹಿಳೆಯರು ವಿರೋಧಿಸುವರು. ಕುಟುಂಬದ ಸಮಸ್ಯೆಗಳ ಪರಿಹಾರಕ್ಕೆ ನಿಮ್ಮ ಸಲಹೆಯು ಬೇಕಾಗುವುದು. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ. ನಿಮ್ಮ ಪ್ರೀತಿಗೆ ಇಂದು ಅಧಿಕೃತ ಮುದ್ರೆಯು ಬೀಳಲಿದ್ದು ನಿಮಗೆ ಖುಷಿಯಾಗಲಿದೆ. ನಿಮ್ಮ ವೃತ್ತಿಯ ಕುರಿತು ಯಾರಾದರೂ ಕೇಳಿಯಾರು.

ಕುಂಭ ರಾಶಿ:

ಯಾರ ಮೇಲೂ ಸಂದೇಹವನ್ನು ಇಟ್ಟುಕೊಳ್ಳುವುದು ಬೇಡ. ದುರಭ್ಯಾಸವನ್ನು ತಡೆಯಲಾಗದೇ ದುಃಖವಾಗಬಹುದು. ವ್ಯಾಪಾರವನ್ನು ಮಾಡುವಾಗ ಜಾಗರೂಕತೆ ಇರಲಿ. ಮನೆಯ ಜವಾಬ್ದಾರಿಯು ನಿಮಗೆ ಅನಿರೀಕ್ಷಿತವಾಗಿ ಬರಬಹುದು. ಗ್ರಾಹಕರಿಂದ ಮೋಸ ಹೋಗಬೇಕಾದೀತು. ಯಾರನ್ನಾದರೂ ಕಳೆದುಕೊಳ್ಳುವ ಭೀತಿಯು ಇರಲಿದೆ. ನಿಮಗೇ ನೆರವು ಬೇಕಾಗಿದ್ದರೂ ಇನ್ನೊಬ್ಬರ ಸಹಾಯಕ್ಕೆ ಹೋಗುವಿರಿ. ನಿಮ್ಮ ವಿರೋಧಿಗಳ ಸಂಖ್ಯೆ ಕಡಿಮೆಯಾಗುವುದು.

ಮೀನ ರಾಶಿ:

ಅಪರಿಚಿತರಿಂದ ಬೆಂಬಲವು ಸಿಗಲಿದೆ. ಕುಟುಂಬಕ್ಕೆ ನೀವು ಹಾಕಿದ ಶ್ರಮ ಫಲಿಸುವುದು. ವಿದ್ಯಾಭ್ಯಾಸದಲ್ಲಿ ಶ್ರದ್ಧೆಯು ಹೆಚ್ಚು ಬೇಕಾಗುವುದು. ನಿರ್ಮಾಣ ಕಾರ್ಯದ ಅಗತ್ಯವನ್ನು ನೀವು ಅನುಭವಿಸುವಿರಿ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಮನೆಯ ಬಗ್ಗೆ ಚಿಂತಿಸಬೇಕಾಗುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಧ್ರುವ, ಕರಣ : ಗರಜ, ಸೂರ್ಯೋದಯ – 06 – 50 am, ಸೂರ್ಯಾಸ್ತ – 06 – 26 pm, ಇಂದಿನ ಶುಭಾಶುಭ ಕಾಲ : ರಾಹು 14:06 – 15:13, ಯಮಗಂಡ ಕಾಲ 06:50 – 08:17 ಗುಳಿಕ ಕಾಲ 09:45 – 11:12

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 12ರ ದಿನಭವಿಷ್ಯ

ಈ ದಿನ ನಲವತ್ತೆಂಟು ಬಾರಿ ಓಂ ನಮಃ ಶಿವಾಯ ಎಂದು ಹೇಳಿಕೊಳ್ಳಿ. ನಿಮಗೆ ಕಾಡುವಂಥ ಹಿಂಜರಿಕೆ, ಅಭದ್ರತೆಯಿಂದ ಹೊರಬರುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಸಾಧ್ಯವಾದಲ್ಲಿ ಈಶ್ವರನ ದೇವಸ್ಥಾನಕ್ಕೆ ತೆರಳಿ ದರ್ಶನ ಕೂಡ ಪಡೆದುಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಯಾವ ಕಾರ್ಯಗಳನ್ನು ಪೂರ್ಣಗೊಳ್ಳುವುದು ಬಹಳ ಕಷ್ಟ ಆಗಬಹುದು ಎಂದು ನೀವು ಅಂದುಕೊಳ್ಳುತ್ತಾ ಇರುತ್ತೀರೋ ಅಂಥವು ಬಹಳ ಆಶ್ಚರ್ಯಕರ ರೀತಿಯಲ್ಲಿ ಮಾಡಿ ಮುಗಿಸಲಿದ್ದೀರಿ. ಇಷ್ಟು ಸಮಯ ನಿಮ್ಮನ್ನು ಬೇಕಂತಲೆ ರೇಗಿಸುತ್ತಿದ್ದವರು, ತಮಾಷೆ ಮಾಡುತ್ತಿದ್ದವರು ಗಾಬರಿ ಆಗುವ ಮಟ್ಟಕ್ಕೆ ನೀವು ಈ ದಿನ ಅವರಿಗೆ ಕಾಡಲಿದ್ದೀರಿ. ತಂದೆ- ತಾಯಿಯ ಪ್ರವಾಸಕ್ಕಾಗಿ ಹಣ ಖರ್ಚು ಮಾಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಯಾರ ಜತೆಗೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಇಷ್ಟು ಸಮಯ ಬಯಸುತ್ತಾ ಇರುತ್ತೀರಿ ಅಂಥವರೊಂದಿಗೆ ದೀರ್ಘವಾದ ಒಡನಾಟ ಸಾಧ್ಯವಾಗಲಿದೆ. ಕಟ್ಟಡ ನಿರ್ಮಾಣ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಮೆಚ್ಚುಗೆ ಮಾತುಗಳು ಕೇಳಿಬರಲಿವೆ. ಇದರ ಜತೆಗೆ ಪ್ರಮುಖವಾದ ಪ್ರಾಜೆಕ್ಟ್ ಒಂದನ್ನು ನಿಮಗೆ ವಹಿಸುವ ಸಾಧ್ಯತೆಯೂ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಹೊಸ ವ್ಯಾಪಾರವನ್ನು ಆರಂಭ ಮಾಡಲು ಬಂಡವಾಳ ಹೊಂದಿಸುವುದಕ್ಕೆ ಶ್ರಮ ಪಡುತ್ತಿದ್ದೀರಿ ಅಂತಾದಲ್ಲಿ ಶುಭ ಸುದ್ದಿ ಕೇಳಿಬರಲಿದೆ. ನಿಮಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಪ್ರಭಾವಿಯೊಬ್ಬರು ಶಿಫಾರಸು ಮಾಡುವುದಕ್ಕೆ ಮುಂದೆ ಬರಲಿದ್ದು, ಅವರಿಂದ ಹೇಗೆ ಪ್ರಯೋಜನ ಪಡೆದುಕೊಳ್ಳಬೇಕು ಎಂಬ ಆಲೋಚನೆಯೇ ಹೊಳೆಯದಂತೆ ಆಗಲಿದೆ. ಏಕಾಂಗಿತನ ಈ ದಿನ ನಿಮ್ಮನ್ನು ಕಾಡಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 12ರ ದಿನಭವಿಷ್ಯ

ದುರ್ಗಾ ಸೂಕ್ತದ ಶ್ರವಣ ಮಾಡಿದಲ್ಲಿ ಕೆಲವು ಬೆಳವಣಿಗೆಗಳು ನಿಮ್ಮ ಪರವಾಗಿ ಆಗಲಿವೆ. ಒಂದು ವೇಳೆ ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಆ ವಿಚಾರದಲ್ಲಿ ನಿಮಗೆ ಕಾಡುತ್ತಿರುವ ಅಡೆತಡೆಗಳು ದೂರ ಆಗಲಿವೆ. ಆರ್ಥಿಕ ಒತ್ತಡಗಳಿಂದ ಹೊರಬರಲು ಸಹಾಯಗಳು ಒದಗಲಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸೇಲ್ಸ್- ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂತಾದಲ್ಲಿ ಮೇಲಧಿಕಾರಿ ನೀಡುವ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ದೂರ ಪ್ರಯಾಣ ಅನಿವಾರ್ಯ ಅಂತಾದಲ್ಲಿ ಯಾವುದೇ ಹಿಂಜರಿಕೆ ಮಾಡದೆ ಹೊರಟುಬಿಡಿ. ಇದರಿಂದ ನಿಮಗೆ ಹಲವು ರೀತಿಯಲ್ಲಿ ಅನುಕೂಲಗಳು ಒದಗಿಬರಲಿವೆ. ದೇವತಾ ಕಾರ್ಯಗಳಲ್ಲಿ ಭಾಗೀ ಆಗುವುದಕ್ಕೆ ಆಹ್ವಾನ ಬಂದಲ್ಲಿ ಇಲ್ಲ ಎನ್ನದೆ ಕಡ್ಡಾಯವಾಗಿ ಭಾಗಿ ಆಗುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಾ ಇರುವವರು ವ್ಯಾಪಾರದ ವಿಸ್ತರಣೆಗೆ ಹಲವು ರೀತಿ ಪ್ರಯತ್ನಗಳನ್ನು ಮಾಡಲಿದ್ದೀರಿ. ನಿಮ್ಮ ಉಳಿತಾಯ ಹಾಗೂ ಹೂಡಿಕೆ ಮಾಡಿದ್ದ ಹಣವನ್ನು ತೆಗೆದು, ಅದನ್ನು ಈ ಉದ್ದೇಶಕ್ಕೆ ಬಳಸುವುದಕ್ಕೆ ಮುಂದಾಗಲಿದ್ದೀರಿ. ಹೊಸ ಮಾರುಕಟ್ಟೆಯಲ್ಲಿ ಈಗಷ್ಟೇ ಕೆಲಸ ಆರಂಭಿಸಿದವರು ತಾಳ್ಮೆ- ಸಂಯಮ ವಹಿಸುವುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಹಣ್ಣು- ತರಕಾರಿ ಬೆಳೆಗಾರರಿಗೆ ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳಲು ಮಾರ್ಗೋಪಾಯ ಗೋಚರ ಆಗಲಿವೆ. ಇಷ್ಟು ದಿನ ಯಾವ ಅಡೆತಡೆಗಳು ನಿಮಗೆ ಸವಾಲಾಗಿ ಪರಿಣಮಿಸಿದ್ದವೋ ಅವುಗಳನ್ನು ದಾಟುವುದಕ್ಕೆ ಸಾಧ್ಯವಾಗಲಿದೆ. ಚಿತ್ರಮಂದಿರಗಳ ಮಾಲೀಕರು ವ್ಯವಹಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ತೀರ್ಮಾನ ಮಾಡುತ್ತೀರಿ. ಇದಕ್ಕೆ ಕುಟುಂಬ ಸದಸ್ಯರ ಬೆಂಬಲ ಸಹ ದೊರೆಯಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 12ರ ದಿನಭವಿಷ್ಯ

ಈ ದಿನ ರಾಘವೇಂದ್ರ ಸ್ವಾಮಿ ಮಠದಲ್ಲಿನ ವೃಂದಾವನಕ್ಕೆ ಹಾಕುವುದಕ್ಕೆ ತುಳಸೀ ಮಾಲೆಯನ್ನು ತೆಗೆದುಕೊಂಡು ಹೋಗಿ ಕೊಡಿ. ಒಂದು ವೇಳೆ ಸಾಧ್ಯವಾಗದೇ ಇದ್ದಲ್ಲಿ ರಾಘವೇಂದ್ರ ಸ್ವಾಮಿಗಳನ್ನು ನೆನಪಿಸಿಕೊಂಡು, ದೇವರ ಮನೆಯಲ್ಲಿ ಚಿತ್ರಪಟಕ್ಕಾದರೂ ತುಳಸಿ ದಳವನ್ನು ಅರ್ಪಿಸಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈಗ ನಿಮ್ಮ ಬಳಿ ಇರುವ ಎಲ್ಲ ಮೊತ್ತವನ್ನು ಒಂದೇ ಕಡೆಗೆ ಹೂಡಿಕೆ ಮಾಡುವ ಮುಂಚೆ ಒಂದಕ್ಕೆ ನಾಲ್ಕು ಬಾರಿಗೆ ಆಲೋಚನೆ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಬಳಿ ಇರುವ ವಾಹನದ ಮಾಡಿಫಿಕೇಷನ್ ಮಾಡಿಸಬೇಕು ಎಂದಿದ್ದಲ್ಲಿ ಸ್ವಲ್ಪ ಸಮಯಕ್ಕೆ ತೀರ್ಮಾನವನ್ನು ಮುಂದಕ್ಕೆ ಹಾಕಿ. ಇನ್ನು ಈಗಾಗಲೇ ಸಾಕಷ್ಟು ಮುಂದುವರಿದಿದ್ದೇವೆ, ಇನ್ನೇನಿದ್ದರೂ ಕೆಲಸ ಮಾಡಿಸುವುದಷ್ಟೇ ಬಾಕಿ ಅಂತೇನಾದರೂ ಇದ್ದಲ್ಲಿ ಟ್ರೆಂಡ್ ಒಮ್ಮೆ ನೋಡಿಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಆಗಲಿ, ಮಾಡಿಕೊಡುತ್ತೇನೆ ಎಂದು ನೀವಾಗಿಯೇ ಭರವಸೆ ನೀಡಿದ್ದ ಕೆಲವು ಕಾರ್ಯಗಳನ್ನು ಅಂದುಕೊಂಡ ಸಮಯದ ಒಳಗಾಗಿ ಪೂರ್ಣ ಮಾಡುವುದು ಅಸಾಧ್ಯ ಎಂಬುದು ಖಚಿತ ಆಗಲಿದೆ. ಆದರೆ ಈ ವಿಚಾರವನ್ನು ಹೇಗೆ ಹೇಳುವುದು ಎಂಬುದು ಇಕ್ಕಟ್ಟಿಗೆ ಸಿಲುಕಿಸಲಿದೆ. ಆರ್ಥಿಕ ವಿಚಾರಗಳಿಗೆ ಅಭದ್ರತೆ ಭಾವವೊಂದು ನಿಮ್ಮನ್ನು ಮುತ್ತಿಕೊಳ್ಳಲಿದೆ. ನಿಮ್ಮ ಉದ್ದೇಶ ಬದಲಿಸಿಕೊಳ್ಳುವುದಕ್ಕೆ ಸಾಧ್ಯವಿದ್ದಲ್ಲಿ ಆ ದಿಕ್ಕಿನ ಕಡೆಗೆ ಮುನ್ನಡೆಯಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮಿಂದ ಎಷ್ಟು ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಸ್ಪಷ್ಟ ಚಿತ್ರಣವೊಂದು ಇರಿಸಿಕೊಂಡ ನಂತರವೇ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದು ಒಳ್ಳೆಯದು. ಏಕೆಂದರೆ ಈ ದಿನ ನಿಮಗೆ ಬರುವಂಥ ಕೆಲವು ಕೆಲಸಗಳು ಮೇಲ್ನೋಟಕ್ಕೆ ಬಹಳ ದೊಡ್ಡ ಲಾಭ ತಂದುಕೊಡುವಂತೆ ಅನಿಸಲಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಆಗಿರುವ ಅಥವಾ ಮುಂದೆ ಆಗುವ ಬದಲಾವಣೆಗಳ ಕಾರಣಕ್ಕೆ ನೀವು ನಿರೀಕ್ಷೆ ಮಾಡಿರುವ ಮಟ್ಟಕ್ಕೆ ಲಾಭ ತಂದುಕೊಡುವುದಿಲ್ಲ.

ಲೇಖನ- ಸ್ವಾತಿ ಎನ್.ಕೆ.

Source link

ಪೊಲೀಸ್ ಆಗಬೇಕೆಂದುಕೊಂಡಿದ್ದ ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್ – Kannada News | Bihar Police Aspirant Drugged And Dragged for Forced Marriage watch video

ಸಮಸ್ತಿಪುರ, ಫೆಬ್ರವರಿ 11: ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕನನ್ನು ಅಪಹರಿಸಿ, ಡ್ರಗ್ಸ್ ನೀಡಿ, ಅವನ ಇಚ್ಛೆಗೆ ವಿರುದ್ಧವಾಗಿ ಹುಡುಗಿಯನ್ನು ಮದುವೆ (Wedding) ಮಾಡಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆ ಯುವಕ ನಿತೀಶ್ ಕುಮಾರ್ ಸಂಪೂರ್ಣವಾಗಿ ಕುಡಿದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಹಾರವನ್ನು ಹಿಡಿಯಲು ಸಹ ಸಾಧ್ಯವಾಗುತ್ತಿರಲಿಲ್ಲ. ವಧುವಿನ ಕುತ್ತಿಗೆಗೆ ಹಾರವನ್ನು ಹಾಕಲು ಮತ್ತೊಬ್ಬ ವ್ಯಕ್ತಿ ಬಲವಂತವಾಗಿ ಅವರ ಕೈಯನ್ನು ಹಿಡಿದುಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಹೆತ್ತ ತಂದೆ-ತಾಯಿಯನ್ನೇ ಕೊಂದ ಮಗ – Kannada News | A Son Kills His Father And Mother In Bengaluru

ಬೆಂಗಳೂರು, (ಫೆಬ್ರವರಿ 11): ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು (Father And Mother) ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನವೀನ್ ಚಂದ್ರ ಭಟ್(60), ಡಾ.ಶ್ಯಾಮಲಾ ಭಟ್(55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ಆಗಿದ್ದರೆ, ಡಾ.ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು. ಕೌಟುಂಬಿಕ ವಿಚಾರಕ್ಕೆ ಪುತ್ರ ರೋಹನ್ ಭಟ್(33) ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದ್ದು, ಸದ್ಯ ಹಂತಕ ರೋಹನ್ ಭಟ್ ನನ್ನು ಹೆಚ್‌ಎಎಲ್‌ ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ತಂದೆ ಚಂದ್ರ ಭಟ್(60) ಹಾಗೂ ತಾಯಿ ಡಾ.ಶ್ಯಾಮಲಾ ಭಟ್(55) ಜೊತೆ ಪುತ್ರ ರೋಹನ್ ಭಟ್ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಆದ್ರೆ, ಕೌಟುಂಬಿಕ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದ್ದು, ಕೋಪದಲ್ಲಿ ತಂದೆ ತಾಯಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಬಳಿಕ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಮನೆ ಮುಂದೆ ಕೆಮ್ಮಿದ್ದಕ್ಕೆ ಮಾರಣಾಂತಿಕ ಹಲ್ಲೆ! ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಮೃತ ದಂಪತಿಯ ಪುತ್ರಿ ಅಮೆರಿಕಾದಲ್ಲಿದ್ದು, ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಶವ ಬೌರಿಂಗ್ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.

ಆದ್ರೆ, ಕೊಲೆ ಮಾಡುವಷ್ಟು ಏನಾಗಿತ್ತು ಎನ್ನುವುದೇ ಇನ್ನೂ ತಿಳಿದುಬಂದಿಲ್ಲ.  ಈ ಬಗ್ಗೆ  ಹೆಚ್‌ಎಎಲ್‌ ಪೊಲೀಸರು ಹಂತಕ ಮಗ ರೋಹನ್ ಭಟ್ ನನ್ನು ಬಂಧಿಸಿದ್ದು,  ತನಿಖೆ ನಡೆಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:53 pm, Wed, 11 February 26

Source link

ENG vs WI: ನೇಪಾಳ ವಿರುದ್ಧ ತಿಣುಕಾಡಿ ಗೆದಿದ್ದ ಇಂಗ್ಲೆಂಡ್​ಗೆ ವಿಂಡೀಸ್ ವಿರುದ್ಧ ಸೋಲು – Kannada News | West Indies Unbeaten Run Continues: Beat England in T20 World Cup 2026

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು 2026 ರ ಟಿ20 ವಿಶ್ವಕಪ್​ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯ 15 ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್ ಶೆರ್ಫೇನ್ ರುದರ್ಫೋರ್ಡ್ ಅವರ ಸ್ಫೋಟಕ ಇನ್ನಿಂಗ್ಸ್ ಬಲದಿಂದ ಇಂಗ್ಲೆಂಡ್‌ಗೆ 197 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ವಿಂಡೀಸ್ ಸ್ಪಿನ್ನರ್‌ಗಳ ಬಲೆಗೆ ಸಿಲುಕಿ ಪೂರ್ಣ 20 ಓವರ್​ಗಳನ್ನು ಆಡಲಾಗದೆ ಆಲೌಟ್ ಆಯಿತು. ಅಂತಿಮವಾಗಿ ಇಂಗ್ಲೆಂಡ್‌ನ ಇನ್ನಿಂಗ್ಸ್ 19 ಓವರ್‌ಗಳಲ್ಲಿ 166 ರನ್‌ಗಳಿಗೆ ಕೊನೆಗೊಂಡಿತು. ಇದರೊಂದಿಗೆ ವೆಸ್ಟ್ ಇಂಡೀಸ್ 10 ವರ್ಷಗಳ ನಂತರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಸಾಧನೆ ಮಾಡಿತು.

Source link

ಮುಸ್ಲಿಂರಿಂದ ಹಲಾಲ್ ಮಾಡಿಸಿದರೆ ದೇವಿಯ ಶಾಪ: ಏನಿದು ದುರ್ಗಮ್ಮನ ಜಾತ್ರೆಯಲ್ಲಿ ಶುರುವಾದ ವಿವಾದ? – Kannada News | Davanagere Durgamma Jatre: Shri Rama Sene Calls for Halal Free Sacrifice and Protest

ದಾವಣಗೆರೆ, ಫೆಬ್ರವರಿ 11: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ದಾವಣಗೆರೆಯ (Davanagere) ದುರ್ಗಮ್ಮನ ಜಾತ್ರೆ ಕೂಡ ಒಂದು. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಜಾತ್ರೆ (Jatre) ನಡೆಯುತ್ತದೆ. ನಾಟಕ, ಕುಸ್ತಿ, ಟಗರ ಕಾಳಗ ಹೀಗೆ ಹತ್ತು ಹಲವು ಕ್ಷಣಗಳು ಜಾತ್ರೆಯ ವಿಶೇಷ. ಇದೆಲ್ಲಕ್ಕಿಂತ ಹೆಚ್ಚು ಆಕರ್ಷಣೆ ಅಂದರೆ ಕುರಿ ಊಟ. ಪ್ರತಿ ಮನೆಗಳಿಂದ ಮೂರು ನಾಲ್ಕು ಕುರಿಗಳನ್ನ ದೇವಿಗೆ ಬಲಿ ಕೊಡುತ್ತಾರೆ. ಸದ್ಯ ಇದೇ ವಿಚಾರವಾಗಿ ಇದೀಗ ಹೊಸ ಹೋರಾಟ ಶುರುವಾಗಿದೆ.

ಹಲಾಲ್ ಮುಕ್ತ ದುರ್ಗಮ್ಮನ ಜಾತ್ರೆಗೆ ಶ್ರೀರಾಮ ಸೇನೆ ಕರೆ

ಶ್ರೀರಾಮ ಸೇನೆ ಹೊಸ ಹೋರಾಟಕ್ಕೆ ಮುಂದಾಗಿದೆ. ಹೇಳಿದಂತೆ ನಡೆದುಕೊಳ್ಳದಿದ್ದರೆ ದೇವಿ ಶಾಪ ಹಾಕುತ್ತಾಳೆ ಎಂಬ ಭಯ ಕೂಡ ಶ್ರೀರಾಮ ಸೇನೆ ಹಾಕುತ್ತಿದೆ. ಈ ಸಲ ಶ್ರೀರಾಮ ಸೇನೆ ಕರೆ ನೀಡಿದ್ದು, ಹಲಾಲ್ ಮುಕ್ತ ದುರ್ಗಮ್ಮನ ಜಾತ್ರೆ ಆಗಬೇಕು ಎಂದು. ಮುಸ್ಲಿಂ‌ ಕಡೆಯಿಂದ ಹಲಾಲ್ ಮಾಡಿಸಿದರೆ ದೇವಿಯ ಶಾಪ ತಟ್ಟುತ್ತದೆ ಎಂಬ ಪ್ರಚಾರ ಶುರುವಾಗಿದೆ.

ಇದನ್ನೂ ಓದಿ: ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವ ಉತ್ತಮ: ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿ

ಫೆಬ್ರವರಿ 24 ಮತ್ತು 25ರಂದು ದಾವಣಗೆರೆ ದುಗ್ಗಮ್ಮನ ಜಾತ್ರೆ ನಡೆಯಲಿದೆ. ದೇವಿಗೆ ಸಾವಿರಾರು ಕುರಿಗಳ ಬಲಿ ಕೊಡಲಾಗುತ್ತದೆ. ಬಲಿ ಕೊಡುವಾಗ ಮುಸ್ಲಿಂ ಕಡೆಯಿಂದ ಹಲಾಲ್ ಮಾಡಿಸಬಾರದು. ಈ ಹಲಾಲ್ ಮಾಡುವುದು ಮುಸ್ಲಿಮರ ಪದ್ದತಿ. ದೇವಿ ಆರಾಧಕರು ಯಾರು ಕೂಡ ಮುಸ್ಲಿಮರಿಂದ ಹಲಾಲ್ ಮಾಡಿಸಬೇಡಿ. ನಮ್ಮ ಹಿಂದೂ ಸಂಪ್ರದಾಯದಂತೆ ಹಿಂದೂಗಳಲ್ಲಿರುವ ಕಲಾಲ್ ಅಥವಾ ಕಾಟೀಕ್ ಸಮಾಜದವರಿಂದ ಕುರಿ ಬಲಿ ಕೊಡಿ. ಹಿಂದೂಗಳು ಹಲಾಲ್ ಮಾಡಿಸುವುದು ಅವೈಜ್ಞಾನಿಕ, ಅದರಲ್ಲೂ ಮುಸ್ಲಿಮರಿಂದ ಹಲಾಲ್ ಮಾಡಿಸಿದರೆ ಶಾಪ ತಟ್ಟುತ್ತದೆ ಎಂದು ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ.

ಈಗಾಗಲೇ ಜಾತ್ರೆ ಸಂಭ್ರಮ ಶುರು

ಈಗಾಗಲೇ ದಾವಣಗೆರೆ ನಗರದಲ್ಲಿ ದೇವತೆ ಜಾತ್ರೆಯ ಸಂಭ್ರಮ ಶುರುವಾಗಿದೆ. ಆಕಾಶದತ್ತೆರಕ್ಕೆ ದೇವಿಯ ಹಂದರ ಗಂಬ, ಕೇಸರಿ ಧ್ವಜದ ಹಾರಾಟ, ಐತಿಹಾಸಿಕ ಜಾತ್ರೆಗೆ ಚಾಲನೆ ಸಿಕ್ಕಿದ್ದು ವಿಶೇಷ. ಇತ್ತೀಚಿಗೆ ಸಾವಿರಾರು ಜನರ ಸಮ್ಮುಖದಲ್ಲಿ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಎಸ್ ಮಲ್ಲಿಕಾರ್ಜುನ್ ಹಂದರ ಗಂಬಕ್ಕೆ ಪೂಜೆ ಸಲ್ಲಿಸಿದ್ದರು. ಇಡಿ ದೇವಸ್ಥಾನದ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು.

ಹಂದರ ಗಂಬ ಪೂಜೆಯಾದ ಬಳಿಕ ನಿಜವಾದ ಜಾತ್ರೆಗೆ ಚಾಲನೆ ಸಿಕ್ಕಿದೆ. ಫೆಬ್ರವರಿ 24 ಮತ್ತು 25ರಂದು ಜಾತ್ರೆಯ ಮಹತ್ವದ ದಿನಗಳು. ಅಂದರೆ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಇಡಿ ನಗರವೇ ಈ ಎರಡು ದಿನ ಮಾತ್ರ ಗಮ್ಮ ಎನ್ನುತ್ತಿರುತ್ತದೆ. ಒಂದು ದಿನ ಸಸ್ಯಹಾರಿಗಳಿಗೆ, ಇನ್ನೊಂದು ದಿನ ಮಾಂಸಾಹಾರಿಗಳಿಗೆ. ಇನ್ನು ದೇವಿ ಜಾತ್ರೆಯಲ್ಲಿ ಬೇವಿನ ಉಡಿಗೆ ಹಾಗೂ ಬೆತ್ತಲೆ ಸೇವೆ ನಡೆದರೆ ಸೂಕ್ತ ಕ್ರಮ‌ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಫೆ. 22ರಂದು ದುರ್ಗಾಂಭಿಕಾ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಫೆ 23 ಮತ್ತು 24 ರಂದು ಉಡಿ ತುಂಬುವ ಕಾರ್ಯವಿದೆ. ಫೆ. 24 ರಂದು ರಾತ್ರಿ 11ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಫೆ 25 ರಂದು ಚರಗ ಚಲ್ಲುವ ಮೂಲಕ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: ಗಿಡಮೂಲಿಕೆ ಮಾರಾಟಕ್ಕೆ ಆಫ್ರಿಕಾಗೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದ 8 ಮಂದಿ ಸಂಕಷ್ಟದಲ್ಲಿ: ಬಂಧನ ಭೀತಿ

ಹೀಗೆ ಒಂದು ಕಡೆ ಜಾತ್ರೆಗೆ ಸಂಭ್ರಮದ ಸಿದ್ದತೆ ನಡೆಯುತ್ತಿದೆ. ಇನ್ನೊದು ಕಡೆ ಶ್ರೀರಾಮ ಸೇನೆ ಹಲಾಲ್ ಕಟ್ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದೆ. ಮೇಲಾಗಿ ದೇವಸ್ಥಾನದ ಮುಂದೆ ಕುರಿ ಬಲಿ ನಿಷೇಧವಿದೆ.  ಹೀಗಾಗಿ ಕುರಿಗಳ ಬಲಿ ಕೊಡುವು ನಾಲ್ಕು ಗೋಡೆಗಳ ನಡುವೆ. ಅದು ಒಂದು ರೀತಿಯಲ್ಲಿ ಖಾಸಗಿ ವಿಚಾರ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಶ್ರೀರಾಮ ಸೇನೆ ಈ ವರ್ಷ ಹಲಾಲ್ ಕಟ್ ಮುನ್ನೆಲೆಗೆ ತಂದಿದ್ದು ಹತ್ತಾರು ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ದೇಹದಲ್ಲಿ ಆಹಾರ ಸರಿಯಾಗಿ ಜೀರ್ಣವಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ? – Kannada News | Digestive Issues: Symptoms of Poor Digestion

ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ, ರೋಗಗಳು ಬೇಡ ಎಂದರೂ ಬರುತ್ತದೆ. ಆದರೆ ಜನರು ಈ ಸಮಸ್ಯೆಯ ಬಗ್ಗೆ ಹೆಚ್ಚಿನ ಗಮನ ಕೊಡುವುದರ ಬದಲಾಗಿ ಅದನ್ನು ನಿರ್ಲಕ್ಷಿಸುತ್ತಾರೆ. ದೇಹದಲ್ಲಿ ಅಜೀರ್ಣವಾದಾಗ (Digestive Issues) ಕೆಲವು ಲಕ್ಷಣಗಳು ಕಂಡುಬರುತ್ತದೆ ಆದರೆ ಇವು ಸಾಮಾನ್ಯ ಸಮಸ್ಯೆಗಳೆಂದು ಜನ ತಳ್ಳಿಹಾಕುತ್ತಾರೆ. ನಿಮಗೆ ತಿಳಿದಿರಲಿ, ಉತ್ತಮ ಆರೋಗ್ಯಕ್ಕಾಗಿ ದೇಹದಲ್ಲಿ ಆಹಾರ ಸರಿಯಾಗಿ ಜೀರ್ಣವಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಇದನ್ನು ಹೇಗೆ ಗುರುತಿಸುವುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವ್ಯಕ್ತಿ ತಿಂದ ಆಹಾರ ಹೊಟ್ಟೆಯಲ್ಲಿ ಭಾರ ಅಥವಾ ಉರಿಯ ಅನುಭವವಾದರೆ ಅದನ್ನು ಹಗುರವಾಗಿ ಪರಿಗಣಿಸಬಾರದು ಎಂದು ಏಮ್ಸ್ ದೆಹಲಿಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮಾಜಿ ವೈದ್ಯೆ ಡಾ. ಅನನ್ಯ ಗುಪ್ತಾ ಹೇಳಿದ್ದಾರೆ. ಇದು ವಾರಕ್ಕೆ ಒಂದು ಅಥವಾ ಎರಡು ಬಾರಿ ಅಥವಾ ಹದಿನೈದು ದಿನಗಳಿಗೊಮ್ಮೆ ಕಂಡುಬಂದರೆ, ಕಳವಳ ಪಡಬೇಕಾಗಿಲ್ಲ. ಆದರೆ ಪ್ರತಿನಿತ್ಯವೂ ಈ ಸಮಸ್ಯೆ ಕಂಡುಬಂದರೆ ಆಹಾರವು ಜೀರ್ಣವಾಗುತ್ತಿಲ್ಲ ಎಂದರ್ಥ.

ಆಹಾರ ಸರಿಯಾಗಿ ಜೀರ್ಣವಾಗದಿರಲು ಕಾರಣಗಳೇನು?

ಸಾಮಾನ್ಯವಾಗಿ ಆಹಾರ ಸರಿಯಾಗಿ ಜೀರ್ಣವಾಗದಿರಲು ಹಲವಾರು ಕಾರಣಗಳಿವೆ ಎಂದು ಡಾ. ಗುಪ್ತಾ ಹೇಳುತ್ತಾರೆ. ಮೊದಲನೆಯದು ಯಕೃತ್ತಿನಲ್ಲಿ ಸಮಸ್ಯೆ. ತಡರಾತ್ರಿ ಆಹಾರ ಸೇವಿಸುವುದು, ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದು, ಚಹಾ ಅಥವಾ ಕಾಫಿಯ ಅತಿಯಾದ ಸೇವನೆ ಮತ್ತು ಫಾಸ್ಟ್ ಫುಡ್ ತಿನ್ನುವುದರಿಂದ ಈ ರೀತಿಯ ಸಮಸ್ಯೆ ಕಂಡುಬರಬಹುದು. ಕೆಲವರಲ್ಲಿ, ಪಿತ್ತಕೋಶವು ಅಗತ್ಯಕ್ಕಿಂತ ಹೆಚ್ಚು ಪಿತ್ತರಸವನ್ನು ಉತ್ಪಾದಿಸುತ್ತದೆ. ಇದರಿಂದಲೂ ಕೂಡ ಅಜೀರ್ಣ ಸಮಸ್ಯೆ ಕಂಡುಬರಬಹುದು. ಕೆಲವು ಸಂದರ್ಭಗಳಲ್ಲಿ, ಮೇದೋಜ್ಜೀರಕ ಗ್ರಂಥಿಯ ಕಿಣ್ವಗಳ ಕೊರತೆ ಅಥವಾ ಕರುಳಿನಲ್ಲಿ ಸೋಂಕು ಕೂಡ ಈ ಸಮಸ್ಯೆಗೆ ಕಾರಣವಾಗಬಹುದು. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ, ಅಜೀರ್ಣ ಸಂಬಂಧಿತ ಸಮಸ್ಯೆಗಳ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚುತ್ತಿದ್ದು. ಇದಕ್ಕೆ ಮುಖ್ಯ ಕಾರಣ ಕಳಪೆ ಆಹಾರ ಮತ್ತು ಜೀವನಶೈಲಿ. ಈಗ, ಈ ಸಮಸ್ಯೆ ಎಲ್ಲಾ ವಯಸ್ಸಿನವರಲ್ಲಿಯೂ ಕಂಡುಬರುತ್ತಿದ್ದು, ದೀರ್ಘಕಾಲದಿಂದ ಕಂಡುಬರುವ ಅಜೀರ್ಣ ಸಮಸ್ಯೆ ಅನೇಕ ಸಂದರ್ಭಗಳಲ್ಲಿ ಮಲಬದ್ಧತೆಗೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಈ ಆಹಾರಗಳು ಅಜೀರ್ಣಕ್ಕೆ ಕಾರಣವಾಗಬಹುದು; ಸೇವನೆ ಮಾಡುವಾಗ ಇರಲಿ ಎಚ್ಚರ

ಜೀರ್ಣಕ್ರಿಯೆಯನ್ನು ಸುಧಾರಿಸಲು ಏನು ಮಾಡಬೇಕು?

  • ತಡರಾತ್ರಿ ಊಟ ಮಾಡುವುದನ್ನು ತಪ್ಪಿಸಿ.
  • ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡಿ.
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ದಿನನಿತ್ಯ ಕನಿಷ್ಠ 30 ನಿಮಿಷಗಳ ಕಾಲ ನಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link