All posts by nagaraj11081993

ಶಕ್ತಿ ಯೋಜನೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರಿಗೆ ಗುಡ್ ನ್ಯೂಸ್ – Kannada News | BMTC Gets 1750 New Electric Buses Under PM E DRIVE: Relief for Bangaluru Commuters

ಬೆಂಗಳೂರು, ಫೆಬ್ರವರಿ 11: ಶಕ್ತಿ ಯೋಜನೆ (Shakti Yojana) ಆರಂಭವಾದ ಮೇಲೆ ಬಿಎಂಟಿಸಿ ಬಸ್ (BMTC bus) ​​ಗಳಲ್ಲಿ ಪುರುಷರಿಗೆ, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತಿಲ್ಲ ಎನ್ನುವ ಅಸಮಾಧಾನವಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದ PM- E-DRIVE ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಹೊಸ ಬಸ್​​ಗಳು ಬರುತ್ತಿದ್ದು, ಇದಕ್ಕೆ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ.

ಶಕ್ತಿ ಯೋಜನೆ ಆರಂಭವಾದ ಮೇಲೆ ಬಿಎಂಟಿಸಿ ಬಸ್​ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿದ್ದಾರೆ. ಸದ್ಯ ಬಿಎಂಟಿಸಿಯಲ್ಲಿರುವ 6800ಕ್ಕೂ ಹೆಚ್ಚು ಬಸ್​​ಗಳು ಸಾಲುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ PM- E-DRIVE ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್​ಗಳು ಬರಲಿವೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!

ಮೊದಲ ಹಂತದಲ್ಲಿ ಸಿಇಎಸ್ಎಲ್ ಸಂಸ್ಥೆ ಟೆಂಡರ್ ಪ್ರಕ್ರಿಯೆ ಮೂಲಕ, ಏಕಾ ಮೊಬಿಲಿಟಿ ಗೆ 1750 ಬಸ್​ಗಳು ಹಂಚಿಕೆ ಮಾಡಲು ಮುಂದಾಗಿದೆ. ಏಕಾ ಮೊಬಿಲಿಟಿಗೆ ಸಿಇಎಸ್ಎಲ್ ಕಂಪನಿ ಲೆಟರ್ ಆಫ್ ಇನ್ಫರ್ಮೇಷನ್ ಆಫ್ ಕ್ವಾಂಟಿಟಿ ಕೂಡ ನೀಡಿದ್ದಾರೆ.

ಇನ್ನು 1750 ಹೊಸ ಬಸ್​​ಗಳಿಂದ ಬಿಎಂಟಿಸಿಯ ಹಳೆಯ ಬಸ್​​ಗಳಿಗೆ ಮುಕ್ತಿ ಸಿಗಲಿದೆ. ಸಾಮಾನ್ಯವಾಗಿ ಈ ಬಸ್​ಗಳಲ್ಲಿ ಡ್ರೈವರ್ ಕಂಪನಿ ಕಡೆಯಿಂದ, ಕಂಡಕ್ಟರ್ ಬಿಎಂಟಿಸಿ ಕಡೆಯಿಂದ ಬರುತ್ತಾರೆ. ಒಂದು ಕಿಮೀ 45 ರಿಂದ 50 ರೂ ವೆಚ್ಚದಲ್ಲಿ ಬಿಎಂಟಿಸಿ ಗುತ್ತಿಗೆದಾರ ಕಂಪನಿಗೆ ಹಣ ನೀಡುತ್ತದೆ. ಈ ಎಲೆಕ್ಟ್ರಿಕ್ ಬಸ್​ಗಳು 12 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿಯಲ್ಲಿ ಸಂಚಾರ ಮಾಡಲಿವೆ.

ಪಿಎಂ-ಈ-ಡ್ರೈವ್ ಯೋಜನೆ ಅಡಿಯಲ್ಲಿ ದೇಶಕ್ಕೆ 14 ಸಾವಿರ ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್​ಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಲ್ಲಿ ಬೆಂಗಳೂರಿಗೆ 4500 ಬಸ್​ಗಳು (ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್) ಘೋಷಣೆ ಮಾಡಲಾಗಿದೆ.

ಪ್ರಯಾಣಿಕರು ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಮಾತನಾಡಿದ ಬಿಎಂಟಿಸಿ ಪ್ರಯಾಣಿಕ ವಸಂತ, ಹೊಸ ಬಸ್​ಗಳು ಬರುವುದರಿಂದ ತುಂಬಾ ಸಹಾಯ ಆಗುತ್ತದೆ ಎಂದಿದ್ದಾರೆ. ಅದೇ ರೀತಿಯಾಗಿ ಮಹಿಳಾ ಪ್ರಯಾಣಿಕರಾದ ಸೌಮ್ಯ ಎನ್ನುವವರು ಕೂಡ    ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮತ್ತೆ ಕುಖ್ಯಾತಿಗೆ ಒಳಗಾದ ಬಿಎಂಟಿಸಿ ಸಂಸ್ಥೆ; ಬಸ್ ಹರಿದು ಬಾಲಕಿ ದಾರುಣ ಸಾವು

ಒಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಬರುತ್ತಿರುವ 1750 ಬಸ್​ಗಳಿಂದ ಸಿಲಿಕಾನ್ ಸಿಟಿಯ ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಮನ್ನಾರ ಹಾಟ್ ಅವತಾರ ನೋಡುವ ಕಾತರದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ – Kannada News | Tamannah Bhatia starrer Ragini MMS 3 movie shelved

ತಮನ್ನಾ ಭಾಟಿಯಾ (Tamannah Bhatia) ಚಿತ್ರರಂಗಕ್ಕೆ ಬಂದು 20 ವರ್ಷಗಳಾದವು ಈಗಲೂ ಸಹ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ಭಾರತ ಚಿತ್ರರಂಗದ ಫಿಟ್, ಗ್ಲಾಮರಸ್ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ ತಮನ್ನಾ ಭಾಟಿಯಾ ಹಾಟ್ ಆದ ಐಟಂ ಹಾಡುಗಳು, ಹಾಟ್ ಆದ ಪಾತ್ರಗಳಲ್ಲಿ ಹೆಚ್ಚಿಗೆ ನಟಿಸುತ್ತಿದ್ದಾರೆ. ಅಂಥಹಾ ಪಾತ್ರಗಳು ಅವರಿಗೆ ಸೂಟ್ ಸಹ ಆಗುತ್ತವೆ. ಅತಿಯಾದ ಗ್ಲಾಮರ್​​ ಅಂಶಗಳಿಂದಾಗಿಯೇ ಜನಪ್ರಿಯತೆ ಗಳಿಸಿರುವ ಸಿನಿಮಾ ‘ರಾಗಿಣಿ ಎಂಎಂಎಸ್’ ಸರಣಿಯ ಹೊಸ ಸಿನಿಮಾನಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದರು. ಇದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಆದರೆ ಸಿನಿಮಾ ಇದೀಗ ಅರ್ಧಕ್ಕೆ ನಿಂತು ಹೋಗಿದೆ.

‘ರಾಗಿಣಿ ಎಂಎಂಎಸ್’ ಸಿನಿಮಾ ಒಂದು ರೀತಿಯ ಶೃಂಗಾರಭರಿತ ಸಿನಿಮಾ ಆಗಿದ್ದು, ಈ ಹಿಂದೆ ಸನ್ನಿ ಲಿಯೋನಿ ಇನ್ನೂ ಕೆಲವು ಬಲು ಹಾಟ್ ನಟಿಯರು ಆ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೆ ‘ರಾಗಿಣಿ ಎಂಎಂಎಸ್ 3’ ಸಿನಿಮಾವನ್ನು ಘೋಷಿಸಲಾಗಿತ್ತು. ಸಿನಿಮಾದ ನಾಯಕಿ ಪಾತ್ರದಲ್ಲಿ ತಮನ್ನಾ ಭಾಟಿಯಾ ನಟಿಸಬೇಕಿತ್ತು. ಸಹಜವಾಗಿಯೇ ಅಭಿಮಾನಿಗಳು, ತಮನ್ನಾರನ್ನು ಹಾಟ್​ ಅವತಾರದಲ್ಲಿ ಕಾಣಲು ಉತ್ಸುಕರಾಗಿದ್ದರು ಆದರೆ ಇದೀಗ ಅವರಿಗೆ ನಿರಾಸೆ ಎದುರಾಗಿದೆ.

‘ರಾಗಿಣಿ ಎಂಎಂಎಸ್ 3’ ಸಿನಿಮಾ ನಿರ್ದೇಶಿಸಬೇಕಿದ್ದ ಸಾಹಿರ್ ರಜಾ ಸಿನಿಮಾದಿಂದ ಹೊರನಡೆದಿರುವುದು ಚಿತ್ರ ಸ್ಥಗಿತಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ. ಸಾಹಿರ್ ರಜಾ ಅವರು ಪ್ರಸ್ತುತ ನೆಟ್‌ಫ್ಲಿಕ್ಸ್‌ನ ದೊಡ್ಡ ಸರಣಿಯೊಂದರಲ್ಲಿ ಶೋ-ರನ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನ ಹೊಸ ನಿಯಮದಂತೆ ಶೋ-ರನ್ನರ್‌ಗಳು ಪ್ರತಿದಿನ ಸೆಟ್‌ನಲ್ಲಿ ಇರಲೇಬೇಕು. ಈ ಕಾರಣದಿಂದಾಗಿ ಅವರಿಗೆ ‘ರಾಗಿಣಿ ಎಂಎಂಎಸ್ 3’ ಚಿತ್ರಕ್ಕೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಕಾಲ್‌ಶೀಟ್ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಸದ್ಯಕ್ಕೆ ಚಿತ್ರೀಕರಣವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಶೂಟಿಂಗ್ ಮಾಡುವಾಗ ಸಿಟ್ಟಾದ ತಮನ್ನಾ ಭಾಟಿಯಾ: ವಿಡಿಯೋ ನೋಡಿ

ಈ ಮೊದಲು ಸನ್ನಿ ಲಿಯೋನ್ ನಟಿಸಿದ್ದ ‘ರಾಗಿಣಿ ಎಂಎಂಎಸ್ 2’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸನ್ನಿ ಲಿಯೋನಿ ಸಖತ್ ಹಾಟ್ ಆಗಿ ‘ರಾಗಿಣಿ ಎಂಎಂಎಸ್ 2’ ಸಿನಿಮಾನಲ್ಲಿ ನಟಿಸಿದ್ದರು. ಈಗ ತಮನ್ನಾ ಭಾಟಿಯಾ ಈ ಸರಣಿಯಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಕಾತರರಾಗಿದ್ದರು. ಅಲ್ಲದೆ, ಈ ಬಾರಿ ಚಿತ್ರವನ್ನು ಕೇವಲ ಶೃಂಗಾರಕ್ಕೆ ಸೀಮಿತಗೊಳಿಸದೆ ‘ಹಾರರ್-ಕಾಮಿಡಿ’ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ತರಲು ನಿರ್ಮಾಪಕಿ ಏಕ್ತಾ ಕಪೂರ್ ನಿರ್ಧರಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾಕ್ಕೆ ಬ್ರೇಕ್ ಬಿದ್ದಿದೆ.

ಇದೀಗ ಚಿತ್ರತಂಡ ಹೊಸ ನಿರ್ದೇಶಕರಿಗಾಗಿ ಹುಡುಕಾಟ ನಡೆಸುತ್ತಿದೆಯಾದರೂ, ಸದ್ಯಕ್ಕಂತೂ ಸಿನಿಮಾ ಆರಂಭವಾಗುವ ಲಕ್ಷಣಗಳಿಲ್ಲ. ಇನ್ನು ತಮನ್ನಾ ಭಾಟಿಯಾ ಅವರು ಸದ್ಯ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ‘ವ್ಯಾನ್’, ‘ಪುರುಷನ್’, ‘ವಿ ಶಾಂತಾರಾಮ್’, ‘ಮರಿಯಾ ಐಪಿಎಸ್’, ‘ರೇಂಜರ್’, ತಮಿಳಿನ ‘ಪುರುಷನ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ಇಶಾನ್ ಕಿಶನ್ ಕಾಲಿಗೆ ಗಾಯ; ಸಂಕಷ್ಟದಲ್ಲಿ ಟೀಂ ಇಂಡಿಯಾ – Kannada News | Ishan Kishan Injury Scare: Team India Opener Injured by Bumrah Ahead of T20 World Cup Namibia Match

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ವಿಶ್ವಕಪ್ ಅಖಾಡಕ್ಕಿಳಿದಿರುವ ಟೀಂ ಇಂಡಿಯಾಕ್ಕೆ ಒಂದರ ಹಿಂದೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ತಂಡದಲ್ಲಿ ಗಾಯದ ಸರಣಿ ಮುಂದುವರೆದಿದ್ದು, ಇದೀಗ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಇಶಾನ್ ಕಿಶನ್ ಅಭ್ಯಾಸ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನವೇ ತಂಡಕ್ಕೆ ಇಶಾನ್ ಕಿಶನ್ ಗಾಯದ ರೂಪದಲ್ಲಿ ಈ ಆಘಾತ ಎದುರಾಗಿದೆ. ವರದಿಗಳ ಪ್ರಕಾರ, ಟೀಂ ಇಂಡಿಯಾದ ಅಭ್ಯಾಸ ಅವಧಿಯಲ್ಲಿ ಇಶಾನ್ ಗಾಯಗೊಂಡಿದ್ದಾರೆ. ಅದು ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಎಂದು ತಿಳಿದುಬಂದಿದೆ.

ನಮೀಬಿಯಾ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿತ್ತು. ಈ ವೇಳೆ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಇಶಾನ್ ಕಿಶನ್ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಬುಮ್ರಾ ಯಾರ್ಕರ್ ಬೌಲ್ ಮಾಡಿದ್ದಾರೆ. ಆದರೆ ಕಿಶನ್​ಗೆ ಈ ಯಾರ್ಕರ್​​ನ ಕ್ಲೀಯರ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಬ್ಯಾಟ್​ನಿಂದ ತಪ್ಪಿಸಿಕೊಂಡು ಬಂದ ಚೆಂಡು ಕಿಶನ್ ಅವರ ಎಡಗಾಲಿನ ಬೆರಳಿಗೆ ತಗುಲಿದೆ.

ಚೆಂಡು ಬಿದ್ದ ರಬಸಕ್ಕೆ ಕಿಶನ್ ನೋವಿನಿಂದ ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಅಭ್ಯಾಸವನ್ನು ನಿಲ್ಲಿಸಿ ನೆಟ್ಸ್‌ನಿಂದ ಹೊರನಡೆದಿದ್ದಾರೆ. ಇದನ್ನು ನೋಡಿದ ತಂಡದ ಫಿಸಿಯೋ ತಕ್ಷಣವೇ ಕಿಶನ್ ಅವರ ಬಳಿ ಬಂದು ಅವರನ್ನು ಪರೀಕ್ಷಿಸಿದ್ದಾರೆ. ಚಿಕಿತ್ಸೆಯ ನಂತರ ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡ ಕಿಶನ್ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಮುಂದುವರೆಸಿದ್ದಾರೆ. ಆದಾಗ್ಯೂ ಕಿಶನ್ ನೋವಿನಿಂದ ಬಳಲುತ್ತಿದ್ದದ್ದು ಸ್ಪಷ್ಟವಾಗಿ ಕಂಡುಬಂತು.

ಕಿಶನ್​ ಅವರ ಗಾಯದ ತೀವ್ರತೆ ಎಷ್ಟು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಒಂದು ವೇಳೆ ಕಿಶನ್​ಗೆ ಗಾಯ ಗಂಭೀರವಾಗಿದ್ದರೆ ಅದು ತಂಡಕ್ಕೆ ದೊಡ್ಡ ಹೊಡೆತವಾಗಲಿದೆ. ಏಕೆಂದರೆ ಈಗಾಗಲೇ ಅಭಿಷೇಕ್ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಕಿಶನ್ ಗಾಯಗೊಂಡಿರುವುದು ತಂಡಕ್ಕೆ ಆರಂಭಿಕರಿಲ್ಲದಂತೆ ಮಾಡಿದೆ. ಅಭಿಷೇಕ್ ಬದಲಿಗೆ ಸಂಜು ಸ್ಯಾಮ್ಸನ್ ಇದ್ದಾರೆಯಾದರೂ, ಕಿಶನ್ ಬದಲಿಗೆ ಯಾರು ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

Published On – 9:15 pm, Wed, 11 February 26

Source link

ನಾಯಕತ್ವ ಜಂಜಾಟದ ನಡುವೆ ಸದ್ದು ಮಾಡಿದ ಶಾಸಕರ ಫಾರಿನ್ ಟ್ರಪ್: ಈ ಪ್ರವಾಸದ ಹಿಂದಿನ ಗುಟ್ಟೇನು? – Kannada News | Karnataka congress 25 MLAs foreign tour during power tussle fight

ಬೆಂಗಳೂರು, (ಫೆಬ್ರವರಿ 11): ಕರ್ನಾಟಕ (karnataka) ಕಾಂಗ್ರೆಸ್ ಶಾಸಕರಿಗೆ ವಿದೇಶ ಪ್ರವಾಸ (Congress MLAs foreign tour) ಯೋಗ ಬಂದಿದ್ದು, ಅಧ್ಯಯನ ನಿಮಿತ್ತ ಫಾರಿನ್ ಟೂರ್ ಆಯೋಜನೆ ಮಾಡಲಾಗಿದೆ. ಪಶುಸಂಗೋಪನಾ ಇಲಾಖೆಯಿಂದ ಅಧ್ಯಯನ ಪ್ರವಾಸ ಆಯೋಜಿಸಲಾಗಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್​​ ಗೆ ಶಾಸಕರನ್ನು ಕಳುಹಿಸಲು ತೀರ್ಮಾನ ಮಾಡಲಾಗಿದೆ. ಅಧುನಿಕ ಪದ್ಧತಿ ಅಳವಡಿಕೆ ಹಾಗೂ ಪಶುಸಂಗೋಪನ ಇಲಾಖೆ ಉನ್ನತೀಕರಣದ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಈಗ ನಾಯಕತ್ವ ಯುದ್ದ ನಡೆಯುತ್ತಿದೆ. ಇಂತಹ ಸಮಯದಲ್ಲಿ ಶಾಸಕರು ಅವರವರ ನಾಯಕರ ಪರ ಮಾತು ಕೂಡ ಆಡುತ್ತಿದ್ದಾರೆ.. ಇಂತಹ ಸಮಯದಲ್ಲಿ ಬರೋಬ್ಬರಿ 25 ಶಾಸಕರು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಟೂರ್ ಕೈಗೊಳ್ಳಲು ಸಜ್ಜಾಗಿದ್ದಾರೆ. ಆದ್ರೆ ಇದರ ಹಿಂದಿರೋ ರಾಜಕೀಯ ಕಾರಣದ ಗುಟ್ಟನ್ನ ಶಾಸಕರು ಬಿಟ್ಟು ಕೊಡುತ್ತಿಲ್ಲ.. ಫೆಬ್ರವರಿ 16ರಂದ ಮಾರ್ಚ್ 3ರವರೆಗೂ ಟೂರ್ ಗೆ ಪ್ಲಾನ್ ಮಾಡಲಾಗಿದೆ‌.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ: ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್​ಗೆ ಬಣಗಳ ಸಿದ್ಧತೆ

ವಿದೇಶ ಪ್ರವಾಸಕ್ಕೆ ಹೋಗುವವರು ಯಾರು?

ಸಿದ್ದರಾಮಯ್ಯ ಆಪ್ತ ಪಶುಸಂಗೋಪನೆ ಸಚಿವ ವೆಂಕಟೇಶ್ ನೇತೃತ್ವದಲ್ಲಿ ಪ್ರವಾಸ ಕೈಗೊಂಡಿದ್ದು, ಫೆಬ್ರವರಿ 16ರಂದು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸಕ್ಕೆ ಕಾಂಗ್ರೆಸ್​ನ 25 ಶಾಸಕರಿಗೆ ಟಿಕೆಟ್​ ಬುಕ್ ಆಗಿದೆ. ಸಚಿವ ವೆಂಕಟೇಶ್, ಶಾಸಕರಾದ ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದು,ರಾಘವೇಂದ್ರ ಹಿಟ್ನಾಳ್, ಯಶವಂತರಾಯಗೌಡ ಪಾಟೀಲ್, ಬಿ.ಎಂ.ನಾಗರಾಜು, ಜೆ.ಟಿ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬಸವನಗೌಡ ದದ್ದಲ್, ಬಸವನಗೌಡ ತುರವಿಹಾಳ್, ಎ.ಆರ್.ಕೃಷ್ಣಮೂರ್ತಿ ಸೇರಿ 25 ಶಾಸಕರು ವಿದೇಶಕ್ಕೆ ಹೋಗುತ್ತಿದ್ದಾರೆ.

ಶಾಸಕರ ಫಾರಿನ್ ಟ್ರಿಪ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ. ಶಾಸಕರು ಅವರ ಸ್ವಂತ ದುಡ್ಡಿನಲ್ಲಿ ಹೋದ್ರೆ ನಾನು ಬೇಡ ಅನ್ನೋಕೆ ಆಗುತ್ತಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. MLA ಗಳು, MLC ಗಳು ಅವರ ಸ್ವಂತ ದುಡ್ಡಿನಲ್ಲಿ ಹೋಗುತ್ತಿದ್ದಾರೆ. ಶಾಸಕರು ಫಾರಿನ್ ಟ್ರಿಪ್ ಹೋಗುವುದು ನನ್ನ ಗಮನಕ್ಕೆ ಇಲ್ಲ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ನೋಡಿ: ಬಜೆಟ್ ನಡುವೆ ಶಾಸಕರಿಂದ ವಿದೇಶ ಪ್ರವಾಸ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ ಆಪ್ತ

ಈ ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ ಶಾಸಕರು ಯಾವಾಗ ಬೇಕಾದರೂ ಪ್ರವಾಸಕ್ಕೆ ಹೋಗಬಹುದು. ಅದಕ್ಕೆ ಅಡ್ಡಿ ಇಲ್ಲ ಅಂತ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇತ್ತ ಡಿಸಿಎಂ ಡಿಕೆ ಸಹೋದರ ಡಿಕೆ ಸುರೇಶ್ ಅವರಂತೂ, ಡಿಕೆ ಗೂ ಮತ್ತು ಫಾರೇನ್ ಪ್ರವಾಸಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ ಬೇಕಂತಲೇ ಡಿಕೆಗೆ ಕೆಟ್ಟ ಹೆಸರು ತರೀ ಹುನ್ನಾರ ಇದು ಎಂದು ಆಕ್ರೋಶ ಹೊರಹಾಕಿದ್ದಾರೆ

ಇತ್ತ ಡಿಕೆ ಬಣದಲ್ಲಿ ಗುರುತಿಸಿಕೊಂಡಿರೋ ಶಾಸಕ ಬಾಲಕೃಷ್ಣ ಬೇರೆಯದ್ದೇ ರೀತಿ ಮಾತನಾಡಿದ್ದಾರೆ. ನನಗೂ ಕರೆದಿದ್ದರಯ, ನಾನು ಹೋಗಲ್ಲ ಅಂದೆ. ಪಶುಸಂಗೋಪನೆ ಅಧ್ಯಯನ ಅಂತ‌ ಹೋಗ್ತಿದ್ದಾರೆ. ಹಾಲು ಎಷ್ಟು ಕರೆಯುತ್ತೆ ಅನ್ನೋದನ್ನ ನೋಡಿಕೊಂಡು ಬರಲು ಹೋಗ್ತಿದ್ದಾರೆ ಎಂದು ಲೇವಡಿ ಮಾಡಿದರು. ಹಾಗೆಯೇ ವಿದೇಶಿ ಪ್ರವಾಸದಲ್ಲಿ ಯಾವುದೇ ರಾಜಕೀಯ ಕಾರಣಕ್ಕೆ ಮಾಡುತ್ತಿಲ್ಲ ಎಂದು ಪುಟ್ಟರಂಗಶೆಟ್ಟಿ ಸ್ಪಷ್ಟನೆ‌ ನೀಡಿದ್ದಾರೆ. ಅತ್ತ ನಾನು ಯಾವ ಬಣದಲ್ಲೂ ಇಲ್ಲ.. ಕಾಂಗ್ರೆಸ್ ನಮ್ಮ ಬಣ, ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಆಗಿದೆ ಅಂತ‌ ಕೋನರೆಡ್ಡಿ ಹೇಳಿದ್ದರು.

ಇಷ್ಟೆಲ್ಲದರ‌ ನಡುವೆ, ಕಾಂಗ್ರೆಸ್ ಶಾಸಕರ ಫಾರಿನ್ ಟೂರ್, ಬಿಜೆಪಿ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಶಾಸಕರು ಭ್ರಮನಿರಸನರಾಗಿದ್ದಾರೆ. ಅದಕ್ಕೆ ಫಾರಿನ್ ಟೂರ್ ಹೋಗುತ್ತಿದ್ದಾರೆ. ಈ ಸರ್ಕಾರ ಸ್ವಯಂ ಕೃತಾಪರಾಧದಿಂದ ಕುಸಿದು ಬೀಳುತ್ತದೆ. ಹೀಗಾಗಿ ಫಾರಿನ್ ಟೂರ್ ಗೂ ಹೋಗುತ್ತಾರೆ, ರಾಜಕಾರಣವನ್ನೂ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಎಕ್ಸ್ ಖಾತೆಯಲ್ಲಿ ಜೆಡಿಎಸ್ ಟೀಕೆ ಮಾಡಿದೆ.. ಕುರ್ಚಿ ಉಳಿಸಿಕೊಳ್ಳುವ ಆತಂಕದಲ್ಲಿರುವ ಸಿದ್ದರಾಮಯ್ಯ ತಮ್ಮ ಬಣದ ಶಾಸಕರನ್ನು ಹಿಡಿದಿಟ್ಟಿಕೊಳ್ಳಲು ಸದ್ದಿಲ್ಲದೇ ಫಾರಿನ್‌ ಟ್ರಿಪ್ಪು ಕಳಿಸಲು ಪ್ಲಾನ್‌ ಮಾಡಿದ್ದಾರೆ. ಪಟ್ಟಕ್ಕಾಗಿ ದೆಹಲಿ ಯಾತ್ರೆಯಲ್ಲಿರುವ ಡಿಕೆ ಶಿವಕುಮಾರ್ ಹೇಗಾದರೂ ಮಾಡಿ ಕುರ್ಚಿ ಪಡೆಯಬೇಕು ಎಂದು ಹೈಕಮಾಂಡ್‌ ಹಿಂದೆ ಬಿದ್ದಿದ್ದಾರೆ.

ಬಜೆಟ್‌ನಲ್ಲಿ ಸಿಗುವ ಅನುದಾನಕ್ಕಿಂತ ಫಾರಿನ್ ಟೂರ್‌ನಲ್ಲಿ ಸಿಗುವ ‘ಸಮಾಧಾನ’ ದೊಡ್ಡದು ಅಂತ ಕೆಲ ಶಾಸಕರು ವಿಮಾನ ಹತ್ತಲು ರೆಡಿಯಾಗಿದ್ದಾರೆ. ಸಿದ್ದರಾಮಯ್ಯ ವರ್ಸಸ್ ಡಿಕೆಶಿ ಬಣಗಳ ರಾಜಕೀಯದ ಮಧ್ಯೆ ಬಜೆಟ್ ಕೇವಲ ಅಂಕಿ-ಅಂಶಗಳ ಆಟವಾಗಿದ್ರೆ, ಅಸಲಿ ಆಟವೆಲ್ಲಾ ಶಾಸಕರ ಹೈಜಾಕ್ ರಾಜಕಾರಣವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬರೀ “ಕುರ್ಚಿ ಉಳಿಸಿಕೊಳ್ಳುವ”, “ಕುರ್ಚಿ ಕಿತ್ತುಕೊಳ್ಳುವ” ಬೃಹನ್ನಾಟಕ ಕಾಂಗ್ರೆಸ್‌ ಪಕ್ಷದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಕಾಂಗ್ರೆಸ್‌ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅಧಿಕಾರಿಗಳು ಲಂಚವಿಲ್ಲದೇ ಯಾವುದೆ ಕೆಲಸ ಕಾರ್ಯಗಳನ್ನು ಮಾಡದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದೆ..

ಅದೇನೇ ಹೇಳಿ, ಶಾಸಕರು ಫ್ಯಾಮಿಲಿ ಟ್ರಿಪ್, ಈಗ ಹೊಸದಾದ ದಾರಿ ಗೆ ರಿಬ್ಬನ್ ಕಟ್ ಮಾಡಿದೆ. ಇದು ಮತ್ತೊಂದು ಕಾಳಗಕ್ಕೆ ಶುಭಾರಂಭನಾ ಎಂಬ ಪ್ರಶ್ನೆಯೂ ಹುಟ್ಟುಹಾಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದತ್ತು ಪುತ್ರನಿಗೆ ಹಿಂದು ಸಂಪ್ರದಾಯದಂತೆಯೇ ಮದುವೆ ಮಾಡಿಸಿದ ಮುಸ್ಲಿಂ ದಂಪತಿ! ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಬಸ್ತವಾಡ

Source link

ಸರ್ಕಾರಿ ಶಾಲೆಗಳ ‘ನಲಿ ಕಲಿ’ ಯೋಜನೆ ವಿಫಲ! ಶಿಕ್ಷಣ ಸಚಿವರಿಗೆ ವರದಿ ಸಲ್ಲಿಕೆ – Kannada News | Nali Kali Project Failure: KDA Report Exposes Flaws in Karnataka Govt Schools

ಸರ್ಕಾರಿ ಶಾಲೆಗಳ ‘ನಲಿ ಕಲಿ’ ಯೋಜನೆ ವಿಫಲ: ಶಿಕ್ಷಣ ಸಚಿವರಿಗೆ ವರದಿ ಸಲ್ಲಿಕೆ

ಬೆಂಗಳೂರು, ಫೆಬ್ರವರಿ 11: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ‘ನಲಿ ಕಲಿ’ (Nali-Kali) ಯೋಜನೆ ಮಕ್ಕಳ ಉದ್ದೇಶಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಸಮಗ್ರ ವರದಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಸಲಾಗಿದೆ.

1995-96ರಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯಲ್ಲಿ ಪ್ರಾಯೋಗಿಕವಾಗಿ ಆರಂಭವಾದ ನಲಿ ಕಲಿ ಯೋಜನೆ, 2010-11ರಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ವಿಸ್ತರಿಸಲಾಯಿತು. ಮಕ್ಕಳಿಗೆ ಚಟುವಟಿಕೆ ಆಧಾರಿತ ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀಡುವುದು, ಭಾಷಾ ಕೌಶಲ್ಯವನ್ನು ವೃದ್ಧಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಆದರೆ ಕಾಲಕ್ರಮೇಣ ಯೋಜನೆ ಪರಿಣಾಮಕಾರಿತ್ವ ಕಳೆದುಕೊಂಡಿದೆ ಎಂದು ವರದಿ ಸೂಚಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಈ ಬಗ್ಗೆ ಮಾಡಿದ ಎಕ್ಸ್ ಪೋಸ್ಟ್ ಇಲ್ಲಿದೆ

ಶಿಕ್ಷಕರಿಗೆ ಸಮರ್ಪಕ ತರಬೇತಿ ಕೊರತೆ, ಬಹುತರಗತಿ ನಿರ್ವಹಣೆಯಲ್ಲಿ ಸಮಸ್ಯೆಗಳು, ಹೆಚ್ಚಿನ ವಿದ್ಯಾರ್ಥಿಗಳ ಕಾರಣ ವೈಯಕ್ತಿಕ ಗಮನದ ಅಭಾವ, ಅಗತ್ಯ ಕಲಿಕಾ ಸಾಮಗ್ರಿಗಳ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಅಭಾವ ಪ್ರಮುಖ ಕಾರಣಗಳಾಗಿವೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿನ ದೋಷಗಳು ಮತ್ತು ಮೂರನೇ ತರಗತಿಯ ನಂತರ ವಿದ್ಯಾರ್ಥಿಗಳಿಗೆ ಹೊಂದಾಣಿಕೆ ಸಮಸ್ಯೆಯೂ ಕಂಡುಬಂದಿದೆ.

ಇದನ್ನೂ ಓದಿ ಮುಂದಿನ ಶೈಕ್ಷಣಿಕ ವರ್ಷಕ್ಕೆ 10 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

ಮೂರು ತರಗತಿಗಳಿಗೆ ಒಬ್ಬ ಶಿಕ್ಷಕ ಎಂಬ ವ್ಯವಸ್ಥೆಗೆ ಪೋಷಕರಿಂದ ಆಕ್ರೋಶ ವ್ಯಕ್ತವಾಗಿದೆ. ಭಾಷಾ ಕಲಿಕೆಯ ಗುಣಮಟ್ಟ ಹೆಚ್ಚಳವಾಗಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಈ ಎಲ್ಲಾ ಕಾರಣಗಳಿಂದ ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆ ಕುಸಿದು, ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 2:45 pm, Wed, 11 February 26

Source link

ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಪುತ್ರಿ ಐಶ್ವರ್ಯಾ ಹೇಳಿದ್ದೇನು? – Kannada News | Aishwarya Sarja said as director Arjun Sarja is very strict

ಅರ್ಜುನ್ ಸರ್ಜಾ (Arjun Sarja) ಬಹುಭಾಷಾ ಸ್ಟಾರ್ ನಟ. ಕನ್ನಡ ಪ್ರೇಕ್ಷಕರಿಗೆ ಬಾಲನಟನಾಗಿನಿಂದಲೂ ಪರಿಚಿತವಾಗಿರುವ ಅರ್ಜುನ್ ಸರ್ಜಾ, ಆಕ್ಷನ್ ಹೀರೋ ಆಗಿರುವ ಜೊತೆಗೆ ಒಳ್ಳೆಯ ಸಿನಿಮಾ ನಿರ್ದೇಶಕರು ಸಹ. ಈ ಹಿಂದೆ ಕೆಲವಾರು ಸಿನಿಮಾಗಳನ್ನು ನಿರ್ದೇಶಿಸಿ ಸೂಪರ್ ಹಿಟ್​ಗಳನ್ನು ಕೊಟ್ಟಿರುವ ಅರ್ಜುನ್ ಸರ್ಜಾ ಇದೀಗ ಮಗಳು ಐಶ್ವರ್ಯಾ ಸರ್ಜಾ ಮತ್ತು ಉಪೇಂದ್ರ ಅಣ್ಣನ ಮಗ ನಿರಂಜನ್ ಅವರನ್ನು ಹಾಕಿಕೊಂಡು ‘ಸೀತಾ ಪಯಣ’ ಹೆಸರಿನ ಸಿನಿಮಾ ಮಾಡಿದ್ದಾರೆ. ಸಿನಿಮಾದ ಬಗ್ಗೆ ಟಿವಿ9ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಐಶ್ವರ್ಯಾ ಅವರು ತಂದೆಯ ಜೊತೆಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಬೆಳಗಾವಿ ಮಲಪ್ರಭಾ ನದಿಯಲ್ಲಿ ಮೂರು ಬೈಕ್​​​ ಪತ್ತೆ: ಇದರ ಹಿಂದಿದೆ ಒಂದು ಜಾಲ – Kannada News | Belagavi: Three bikes found in Malaprabha river; Chaddi Gang Link Suspected

ಬೆಳಗಾವಿ, ಫೆಬ್ರವರಿ 11: ಮಲಪ್ರಭಾ ನದಿ (Malaprabha River) ದಂಡೆ ಮೇಲೆ ವಾಕಿಂಗ್ ಮಾಡುತ್ತಿದ್ದವರಿಗೆ ಕಂಡಿದ್ದು ನದಿಯಲ್ಲಿ ಬೈಕ್ (Bike) ಒಂದು. ಮುಂದೆ ಹೋಗಿ ನೋಡಿದವರಿಗೆ ಸಿಕ್ಕಿದ್ದು ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂರು ಬೈಕ್​ಗಳು. ನದಿ ನೀರಲ್ಲಿ ಬೈಕ್ ಕಂಡು ಶಾಕ್ ಆದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಬೈಕ್ ಮೂಲ ಪತ್ತೆ ಹಚ್ಚಿದ್ದಾರೆ. ಒಂದೂವರೆ ತಿಂಗಳ ಹಿಂದೆ ಕಳ್ಳತನವಾಗಿದ್ದ ಬೈಕ್​ಗಳು ಇದೀಗ ನದಿಯಲ್ಲಿ ಪತ್ತೆ ಆಗಿವೆ.

ಒಂದೂವರೆ ತಿಂಗಳ ಹಿಂದೇ ಬೈಕ್​ಗಳು ಕಳ್ಳತನ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಹೊರ ವಲಯದಲ್ಲಿ ಹಾದು ಹೋಗುವ ಮಲಪ್ರಭಾ ನದಿಯಲ್ಲಿ ಮೂರು ಬೈಕ್​ಗಳು ಪತ್ತೆ ಆಗಿವೆ. ಇಂದು ಬೆಳಂಬೆಳಗ್ಗೆ ನದಿ ನೀರಲ್ಲಿ ದಂಡೆ ಮೇಲೆ ಬೈಕ್ ಒಂದು ಕಾಣಿಸಿದೆ. ಹತ್ತಿರ ಹೋಗಿ ನೋಡಿ ಯಾರೋ ಬೈಕ್ ಸಮೇತ ಸೇತುವೆ ಮೇಲಿಂದ ಬಿದ್ದಿರಬಹುದು ಅಂತಾ ನದಿಗಿಳಿದು ಹುಡುಕಾಟ ನಡೆಸಿದ್ದಾರೆ. ಅಲ್ಲಿ ಮನುಷ್ಯರ ಬದಲಿಗೆ ಸಿಕ್ಕಿದ್ದು ಮತ್ತೊಂದು ಬೈಕ್, ಇದನ್ನ ಕಂಡು ಶಾಕ್ ಆಗಿ ಮತ್ತೆ ಹುಡುಕಿದಾಗ ಸಿಕ್ಕಿದ್ದು ಮತ್ತೊಂದು ಬೈಕ್. ಹೀಗೆ ಮೂರು ಬೈಕ್​ಗಳು ನದಿ ನೀರಿನಲ್ಲಿ ಸಿಗುತ್ತಿದ್ದಂತೆ ಶಾಕ್ ಆದ ಸ್ಥಳೀಯರು ಕೂಡಲೇ ಬೈಲಹೊಂಗಲ ಠಾಣೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಬೈಕ್ ಹೊರ ತೆಗೆದು ಠಾಣೆಗೆ ತೆಗೆದುಕೊಂಡು ಹೋಗಿ ಅವುಗಳ ನಂಬರ್ ಆಧಾರದ ಮೇಲೆ ಮಾಲೀಕನ ಪತ್ತೆ ಹಚ್ಚಿ ಕೇಳಿದಾಗ ಗೊತ್ತಾಗಿದ್ದು ತಮ್ಮ ಬೈಕ್​ಗಳು ಒಂದೂವರೆ ತಿಂಗಳ ಹಿಂದೆ ಕಳ್ಳತನವಾಗಿರುವ ವಿಚಾರ.

ಇದನ್ನೂ ಓದಿ: ಚಡ್ಡಿ ಹೋಗಿ ಲುಂಗಿ ಗ್ಯಾಂಗ್ ಬಂತು: ಕಳ್ಳರ ಹಾವಳಿಗೆ ಆತಂಕಗೊಂಡ ಬಾಗಲಕೋಟೆ ಜನ

ಇಲ್ಲಿ ನದಿಯಲ್ಲಿ ಸಿಕ್ಕ ಬೈಕ್​ಗಳು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಿಂದ ಒಂದೂವರೆ ತಿಂಗಳ ಹಿಂದೆ ಬೈಕ್ ಕಳ್ಳತನವಾಗಿದ್ದವು. ಬೈಕ್ ಕಳ್ಳತನವಾಗಿರುವ ಕುರಿತು ಠಾಣೆಯಲ್ಲಿ ಮಾಲೀಕರು ಕೇಸ್ ಕೂಡ ನೀಡಿದ್ದರು. ಈ ವಿಚಾರ ತಿಳಿದು ಪೊಲೀಸರು ಮತ್ತಷ್ಟು ತನಿಖೆ ಚುರುಕುಗೊಳಿಸಿದಾಗ ಗೊತ್ತಾಗಿದ್ದು, ಸಿಕ್ಕ ಬೈಕ್ ಬಳಕೆಯಾಗಿದ್ದು ಖದೀಮರಿಗೆ.

ಕಳ್ಳತನಕ್ಕೂ ಮೊದಲು ಮೂರು ಬೈಕ್​​​ಗಳನ್ನ ಕದ್ದಿದ್ದ ಕಳ್ಳರು

ಡಿಸೆಂಬರ್ 22ರಂದು ಸವದತ್ತಿ ಪಟ್ಟಣದ ಅದೊಂದು ಚಿನ್ನದ ಅಂಗಡಿಯಲ್ಲಿ ಚಡ್ಡಿ ಗ್ಯಾಂಗ್ ಕಳ್ಳತನ ಮಾಡುತ್ತೆ. 09 ಜನ ಮೂರು ಬೈಕ್ ಮೇಲೆ ಬಂದು ಚಿನ್ನದಂಗಡಿ ಬಾಗಿಲು ಮುರಿದು 12 ಲಕ್ಷ ರೂ ಮೌಲ್ಯದ ಚಿನ್ನ ಕದ್ದು ಪರಾರಿಯಾಗಿರುತ್ತಾರೆ. ಈ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತೆ. ಚಿನ್ನದಂಗಡಿ ಕಳ್ಳತನಕ್ಕೂ ಮೊದಲು ಮೂರು ಬೈಕ್​ಗಳನ್ನ ಕದ್ದು ಕಳ್ಳರು ಬಳಿಕ ಚಿನ್ನದಂಗಡಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಹೀಗೆ ಕದ್ದು 25 ಕಿಮೀ ದೂರದಲ್ಲಿರುವ ಮಲಪ್ರಭಾ ನದಿಯಲ್ಲಿ ಮೂರು ಬೈಕ್ ಎಸೆದು ಯಾರಿಗೂ ಗೊತ್ತಾಗದ ಹಾಗೆ ಪರಾರಿಯಾಗಿದ್ದರು.

ಕಳ್ಳತನವಾದ ಬೈಕ್​ಗಳು ಕಳ್ಳತನಕ್ಕೆ ಬಳಕೆ ಮಾಡಿಕೊಂಡು ಬಳಿಕ ನದಿಗೆ ಎಸೆದಿದ್ದು ಒಂದೂವರೆ ತಿಂಗಳ ಬಳಿಕ ಬೈಕ್ ಪತ್ತೆಯಾಗಿವೆ. ಇದರಿಂದ ಕಳ್ಳರು ಪೊಲೀಸರ ದಿಕ್ಕು ತಪ್ಪಿಸಲು ಹೇಗೆಲ್ಲಾ ಪ್ಲ್ಯಾನ್ ಮಾಡ್ತಾರೆ ಅನ್ನೋದಕ್ಕೆ ಈ ಕೇಸ್ ಉದಾಹರಣೆಯಾಗಿದೆ. ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆದಷ್ಟು ಬೇಗ ಕಳ್ಳರನ್ನು ಬಂಧಿಸುವುದಾಗಿ ಎಸ್​​ಪಿ ಕೆ.ರಾಮರಾಜನ್​ ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಚಡ್ಡಿ ಗ್ಯಾಂಗ್ ಹಾವಳಿಗೆ ಜನರು ತಲ್ಲಣ: ಬಂಧಿಸುವಲ್ಲಿ ಖಾಕಿ ವಿಫಲ?

ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸರು ಕೂಡ ಖದೀಮರ ಹಿಡಿಯಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಖದೀಮರು ಪೊಲೀಸರ ದಿಕ್ಕು ತಪ್ಪಿಸಲು ಹೊಸ ಹೊಸ ಟೆಕ್ನಿಕ್ ಅಳವಡಿಸಿಕೊಂಡು ಕಳ್ಳತನ ಮಾಡುತ್ತಿರುವುದು ಪೊಲೀಸರಿಗೂ ಸವಾಲ್ ಆಗಿ ಪರಿಣಮಿಸಿದೆ. ಒಟ್ಟಿನಲ್ಲಿ ಕಳ್ಳತನವಾಗಿದ್ದ ಬೈಕ್ ನೀರಲ್ಲಿ ಪತ್ತೆಯಾಗಿದ್ದು, ಬೈಕ್ ಕಳೆದುಕೊಂಡವರು ನಿಟ್ಟುಸಿರು ಬಿಟ್ಟಿದ್ದಾರೆ. ಅತ್ತ ಚಿನ್ನದಂಗಡಿ ಮಾಲೀಕ ಮಾತ್ರ ಕಳ್ಳರು ಸಿಗಲಿ ಅಂತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಔಪಚಾರಿಕವಾಗಿ ಮೂರ್ನಾಲ್ಕು ಬಾರಿ ಎಪ್ಸ್ಟೀನ್ ಭೇಟಿಯಾಗಿದ್ದೆ; ರಾಹುಲ್ ಗಾಂಧಿ ಆರೋಪಕ್ಕೆ ಸಚಿವ ಹರ್ದೀಪ್ ಪುರಿ ಸ್ಪಷ್ಟನೆ – Kannada News | Union Minister Hardeep Puri slams Rahul Gandhis charge says Epstein meetings were part of IPI delegation protocol

ನವದೆಹಲಿ, ಫೆಬ್ರವರಿ 11: ಲೋಕಸಭೆ ಅಧಿವೇಶನದಲ್ಲಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗಿನ ಸಂಬಂಧಗಳನ್ನು ಉಲ್ಲೇಖಿಸಿದ್ದ ಕಾಂಗ್ರೆಸ್ ರಾಹುಲ್ ಗಾಂಧಿಯ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಮತ್ತು ಉತ್ತರಗಳನ್ನು ಕೇಳದೆ ಸದನದಿಂದ ಹೊರನಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಸತ್ತಿನ ರಾಹುಲ್ ಗಾಂಧಿಯವರ ಭಾಷಣವನ್ನು ಉಲ್ಲೇಖಿಸಿದ ಹರ್ದೀಪ್ ಪುರಿ, “ನಮ್ಮಲ್ಲಿ ಯುವ ನಾಯಕರೊಬ್ಬರು ಇಂದು ಸಂಸತ್ತಿನ ಮುಂದೆ ಕೆಲವು ವಿಷಯಗಳನ್ನು ಮಂಡಿಸಿದರು. ಅವರಿಗೆ ಆಧಾರರಹಿತ ಆರೋಪಗಳನ್ನು ಮಾಡುವ ಅಭ್ಯಾಸವಿದೆ. ಅಪರೂಪಕ್ಕೆ ನಮ್ಮ ದೇಶಕ್ಕೆ ಬರುವ ನಾಯಕ ಸಂಸತ್ತಿಗೆ ಬಂದಾಗ ಮನಬಂದಂತೆ ಆರೋಪ ಮಾಡುತ್ತಾರೆ. ಯಾರೂ ಅವರ ಮಾತನ್ನು ಕೇಳದಿದ್ದಾಗ ಸದನದಿಂದ ಹೊರನಡೆಯುತ್ತಾರೆ. ಅವರು ಇಂದು ತಮ್ಮ ಭಾಷಣದ ನಂತರ ಹೊರಟುಹೋದರು” ಎಂದು ರಾಹುಲ್ ಗಾಂಧಿಯ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ, ಅಂತಾರಾಷ್ಟ್ರೀಯ ಶಾಂತಿ ಸಂಸ್ಥೆ (ಐಪಿಐ)ಗೆ ಸಂಬಂಧಿಸಿದ ಅಧಿಕೃತ ನಿಯೋಗದ ಭಾಗವಾಗಿ ಮಾತ್ರ ಜೆಫ್ರಿ ಎಪ್ಸ್ಟೀನ್ ಅವರನ್ನು ಭೇಟಿಯಾಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ಎಪ್ಸ್ಟೀನ್ ಅವರೊಂದಿಗಿನ ಅವರ ಸಭೆಗಳು ಅಧಿಕೃತ ಭೇಟಿಗೆ ಸೀಮಿತವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಭಾರತ ಮಾತೆಯನ್ನು ಮಾರಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಸಚಿವ ಹರ್ದೀಪ್ ಪುರಿ ಅವರ ಹೆಸರನ್ನು ಎಪ್ಸ್ಟೀನ್ ಫೈಲ್ಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ ನಂತರ ಈ ಸ್ಪಷ್ಟೀಕರಣ ಬಂದಿದೆ. ಇದು ಲೈಂಗಿಕ ಅಪರಾಧಿಯ ಅಪರಾಧ ಚಟುವಟಿಕೆಗಳನ್ನು ವಿವರಿಸುತ್ತದೆ. ಇದರಲ್ಲಿ ಸಾರ್ವಜನಿಕ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಸಾಮಾಜಿಕ ವಲಯವೂ ಸೇರಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಿಲ್ ಕ್ಲಿಂಟನ್ ಸೇರಿದಂತೆ ಪ್ರಪಂಚದಾದ್ಯಂತದ ಹಲವಾರು ಉನ್ನತ ವ್ಯಕ್ತಿಗಳನ್ನು ಈ ಫೈಲ್‌ಗಳಲ್ಲಿ ಹೆಸರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಗ್ರೇನ್ ಬಿಪಿಯನ್ನು ಹೆಚ್ಚಿಸುತ್ತದೆಯೇ? ಮಹಿಳೆಯರೇ… ಈ ವಿಷಯಗಳ ಬಗ್ಗೆ ಗಮನ ಕೊಡಿ – Kannada News | Women and Migraine: BP Concerns and Precautions

ಇತ್ತೀಚಿನ ದಿನಗಳಲ್ಲಿ, ಮೈಗ್ರೇನ್ (Migraine) ಮತ್ತು ಅಧಿಕ ರಕ್ತದೊತ್ತಡದ (High BP) ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿರುವುದನ್ನು ಗಮನಿಸಿರಬಹುದು. ಮೈಗ್ರೇನ್ ಒಂದು ನರವೈಜ್ಞಾನಿಕ ಸಮಸ್ಯೆಯಾಗಿದ್ದು, ತಲೆಯ ಒಂದು ಭಾಗದಲ್ಲಿ ನೋವು ಕಂಡುಬರುತ್ತದೆ. ಇದರ ಜೊತೆಗೆ, ವಾಕರಿಕೆ, ವಾಂತಿ, ತಲೆತಿರುಗುವಿಕೆ ಮತ್ತು ಬೆಳಕು ಮತ್ತು ಶಬ್ದಕ್ಕೆ ಸೂಕ್ಷ್ಮತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾರ್ಮೋನುಗಳ ಬದಲಾವಣೆಯಿಂದಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ರೀತಿ ಪದೇ ಪದೇ ಬರುವ ಮೈಗ್ರೇನ್ ದೇಹದಲ್ಲಿ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತವೆ, ರಕ್ತದೊತ್ತಡವನ್ನು ಅಡ್ಡಿಪಡಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಹೃದಯ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಅಪಾಯವನ್ನು ಕೂಡ ಹೆಚ್ಚಿಸಬಹುದು. ಮಾತ್ರವಲ್ಲ, ದೀರ್ಘಕಾಲದ ವರೆಗೆ ಮೈಗ್ರೇನ್‌ಗಳನ್ನು ನಿರ್ಲಕ್ಷಿಸುವುದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸಮಯೋಚಿತ ಎಚ್ಚರಿಕೆ ಮತ್ತು ಸರಿಯಾದ ಆರೈಕೆ ಬಹಳ ಮುಖ್ಯವಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೈಗ್ರೇನ್ ಹೈಬಿಪಿ ಗೆ ಕಾರಣವಾಗುತ್ತದೆಯೇ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಮಹಿಳೆಯರಲ್ಲಿ ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡದ ನಡುವಿನ ನೇರ ಸಂಬಂಧವು ಹಾರ್ಮೋನುಗಳ ಬದಲಾವಣೆಗಳಿಗೆ ಸಂಬಂಧಿಸಿದೆ. ಮುಟ್ಟಿನ ಸಮಯ, ಗರ್ಭಾವಸ್ಥೆಯಲ್ಲಿ ಮತ್ತು ಋತುಬಂಧದ ಸಮಯದಲ್ಲಿ, ಈಸ್ಟ್ರೊಜೆನ್ ಹಾರ್ಮೋನ್‌ನಲ್ಲಿನ ಏರಿಳಿತಗಳು ಮೈಗ್ರೇನ್‌ಗೆ ಕಾರಣವಾಗಬಹುದು. ಮೈಗ್ರೇನ್ ಸಮಯದಲ್ಲಿ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ಹಿಗ್ಗುತ್ತವೆ, ಇದು ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಗಬಹುದು. ಮೈಗ್ರೇನ್ ಬಹಳ ಸಮಯದವರೆಗೆ ಕಂಡುಬಂದರೆ, ಅದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇಅಲ್ಲ, ಮೈಗ್ರೇನ್ ನಿದ್ರೆಯ ಕೊರತೆ, ಮಾನಸಿಕ ಒತ್ತಡ ಮತ್ತು ಚಡಪಡಿಕೆಗೆ ಕಾರಣವಾಗಬಹುದು, ಇವು ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ನೋವು ನಿವಾರಣೆಗೆ ತೆಗೆದುಕೊಳ್ಳುವ ಕೆಲವು ಔಷಧಿಗಳು ಕೂಡ ರಕ್ತದೊತ್ತಡವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗಿರುವ ವ್ಯತ್ಯಾಸವೇನು? ಇದನ್ನು ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

ದೀರ್ಘಕಾಲದವರೆಗೆ ಮೈಗ್ರೇನ್‌ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಬೊಜ್ಜು, ಒತ್ತಡದ ಜೀವನಶೈಲಿ ಮತ್ತು ಅನಿಯಮಿತ ನಿದ್ರೆ ಕೂಡ ಈ ರೀತಿಯ ಅಪಾಯವನ್ನು ಹೆಚ್ಚಿಸುತ್ತದೆ. ಧೂಮಪಾನ ಮಾಡುವ ಅಥವಾ ಬಹಳಷ್ಟು ಕೆಫೀನ್ ಸೇವಿಸುವ ಮಹಿಳೆಯರೂ ಸಹ ಅಪಾಯದಲ್ಲಿದ್ದಾರೆ. ಜೊತೆಗೆ ಕುಟುಂಬದ ಇತಿಹಾಸದಲ್ಲಿ ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗದವಿದ್ದರೆ ಅಂತವರು ಬಹಳ ಎಚ್ಚರಿಕೆವಹಿಸುವುದು ಅಗತ್ಯ. ಅಷ್ಟೇಅಲ್ಲ, ಋತುಬಂಧ ಸಮೀಪಿಸುತ್ತಿರುವ ಮಹಿಳೆಯರಿಗೆ ಮೈಗ್ರೇನ್ ಜೊತೆಗೆ ಅಧಿಕ ರಕ್ತದೊತ್ತಡ ಬರುವ ಅಪಾಯ ಹೆಚ್ಚಾಗಿರಬಹುದು.

ತಡೆಗಟ್ಟುವುದು ಹೇಗೆ?

ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡವನ್ನು ತಡೆಗಟ್ಟಲು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ 7- 8 ಗಂಟೆ ನಿದ್ರೆ ಮಾಡಿ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಉಪ್ಪು ಮತ್ತು ಕೆಫೀನ್ ಸೇವನೆಯನ್ನು ಸೀಮಿತಗೊಳಿಸಿ. ನಿಯಮಿತ ಯೋಗ, ನಡಿಗೆ ಮತ್ತು ಲಘು ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಮೈಗ್ರೇನ್‌ಗೆ ಕಾರಣವಾಗುವ ಆಹಾರಗಳನ್ನು ತಪ್ಪಿಸಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ನಿಮ್ಮ ರಕ್ತದೊತ್ತಡವನ್ನು ಕಾಲಕಾಲಕ್ಕೆ ಪರೀಕ್ಷಿಸಿಕೊಳ್ಳಿ. ವೈದ್ಯರ ಸಲಹೆಯ ಮೇರೆಗೆ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link